Tag: Call Girl

  • ಕಾಲ್‍ಗರ್ಲ್ ಬುಕ್ ಮಾಡಿ ಬರೋಬ್ಬರಿ 97 ಸಾವಿರ ಕಳೆದುಕೊಂಡ ಯುವಕ!

    ಕಾಲ್‍ಗರ್ಲ್ ಬುಕ್ ಮಾಡಿ ಬರೋಬ್ಬರಿ 97 ಸಾವಿರ ಕಳೆದುಕೊಂಡ ಯುವಕ!

    – ಕಾಲ್‍ಗರ್ಲ್ ಆಗಿ ಹೋಗಿ ಎನ್‍ಜಿಓ ಅಧಿಕಾರಿಯಾದ್ಳು

    ಬೆಂಗಳೂರು: ಮಹಿಳೆಯೊಬ್ಬಳು ಕಾಲ್‍ಗರ್ಲ್ ಆಗಿ ಹೋಗಿ ಎನ್‍ಜಿಒ ಅಧಿಕಾರಿಯಾಗಿ ನಟಿಸಿ ಯುವಕನಿಗೆ ಬರೋಬ್ಬರಿ 97 ಸಾವಿರ ವಂಚನೆ ಮಾಡಿದ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ಸುಂದರೇಶನ್ ಎಂಬ ಯುವಕ ಆನ್‍ಲೈನ್ ಆ್ಯಪ್ ಮೂಲಕ ಕಾಲ್ ಗರ್ಲ್ ಬೇಕೆಂದು ಬುಕ್ ಮಾಡಿದ್ದಾನೆ. ಹೀಗಾಗಿ ಮಹಿಳೆಯೊಬ್ಬಳು ಕಾಲ್ ಗರ್ಲ್ ಆಗಿ ಯುವಕನ ಮನೆಗೆ ಬಂದಿದ್ದಾಳೆ. ಅಲ್ಲದೆ ಯುವಕನಿಂದ 10 ಸಾವಿರ ಗೂಗಲ್ ಪೇ ಮಾಡಿಸಿಕೊಂಡಿದ್ದಾಳೆ.

    ಇತ್ತ ಸಮಯ ಕಳೆಯುತ್ತಿದ್ದಂತೆ ನಾನು ಎನ್‍ಜಿಒ ಅಧಿಕಾರಿಯಾಗಿದ್ದು, ಅತ್ಯಾಚಾರ ಕೇಸ್ ಹಾಕೋದಾಗಿ ಯುವಕನಿಗೆ ಬ್ಲಾಕ್ ಮೇಲ್ ಮಾಡಿದ್ದಾಳೆ. ಇದರಿಂದ ಆತಂಕಗೊಂಡ ಯುವಕ ಕೂಡಲೇ ಆ್ಯಪ್ ಮ್ಯಾನೇಜರ್ ಗೆ ಕರೆ ಮಾಡಿದ್ದಾನೆ. ಆಗ ಆತ ಕೂಡ ಬೆದರಿಕೆ ಹಾಕಲು ಆರಂಭಿಸಿದ್ದಾನೆ.

    ಮ್ಯಾನೇಜರ್ ಬೆದರಿಕೆ ಏನು?
    ಮನೆಯಲ್ಲೆ ಸೆಟಲ್ ಮಾಡಿಕೊಂಡ್ರೆ 2 ಲಕ್ಷ ಆಗುತ್ತೆ. ಪೊಲೀಸ್ ಠಾಣೆ ಮೆಟ್ಟಿಲೇರಿದರೆ 5 ಲಕ್ಷ ಕೊಡಬೇಕಾಗುತ್ತೆ ಎಂದು ಯುವಕನನ್ನು ಬೆದರಿಸಿದ್ದಾನೆ. ಮ್ಯಾನೇಜರ್ ಮಾತಿನಿಂದ ಮತ್ತಷ್ಟು ಆತಂಕಗೊಂಡ ಯುವಕ, 50 ಸಾವಿರ, 20 ಸಾವಿರ, 17 ಸಾವಿರ ಹೀಗೆ ಮ್ಯಾನೇಜರ್ ನಂಬರ್ ಗೆ ಗೂಗಲ್ ಪೇ ಮಾಡಿದ್ದಾನೆ.

    ತನ್ನ ಕೈಯಿಂದ ಹೀಗೆ ಹಣ ಹೋಗುತ್ತಿರುವುದರಿಂದ ದಿಕ್ಕು ತೊಚದಂತಾದ ಯುವಕ ಕೊನೆಗೆ ಪೊಲೀಸ್ ಠಾಣೆ ಮೇಟ್ಟಿಲೇರಿಯೇ ಬಿಟ್ಟಿದ್ದಾನೆ. ಘಟನೆ ಸಂಬಂಧ ನೊಂದ ಯುವಕ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಸದ್ಯ ಯುವಕನ ದೂರು ದಾಖಲಿಸಿಕೊಂಡಿರೋ ಪೊಲೀಸರು ಕಾಲ್ ಗರ್ಲ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ತವರು ಮನೆಗೆ ಹೋದ ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಎಡವಟ್ಟು ಮಾಡ್ಕೊಂಡ ಪತಿರಾಯ!

    ತವರು ಮನೆಗೆ ಹೋದ ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಎಡವಟ್ಟು ಮಾಡ್ಕೊಂಡ ಪತಿರಾಯ!

    ಲಕ್ನೋ: ಅಳಿಯನೊಬ್ಬ ವೇಶ್ಯೆಯನ್ನು ತನ್ನ ಜೊತೆ ಪತ್ನಿಯ ತವರು ಮನೆಗೆ ಕರೆದುಕೊಂಡ ಹೋಗಿ ಒದೆ ತಿಂದ ಘಟನೆ ಬುಧವಾರ ಉತ್ತರ ಪ್ರದೇಶದ ಫಿಲ್‍ಖುವಾದ ಮೊಹಲ್ಲಾ ಸಿದ್ದಿಕಪೂರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೋತ್‍ವಾಲಿದಲ್ಲಿರುವ ಮೊಹೆಲ್ಲಾ ಸಿದ್ದಿಪುರಿ ನಿವಾಸಿಯ ಯುವತಿಗೆ ಮಸೂರಿಯ ಯುವಕನ ಜೊತೆ ಮದುವೆಯಾಗಿತ್ತು. ಇಬ್ಬರ ನಡುವೆ ಒಂದು ಚಿಕ್ಕ ಜಗಳ ನಡೆದಿದೆ. ಇಬ್ಬರ ನಡುವೆ ಆದ ಜಗಳದಿಂದ ಪತ್ನಿ 15 ದಿನಗಳ ಹಿಂದೆ ತನ್ನ ತವರು ಮನೆ ಸೇರಿದ್ದಳು. ಆದರಿಂದ ಪತಿ ತನ್ನ ಪತ್ನಿಯ ತವರು ಮನೆಗೆ ವೇಶ್ಯೆಯನ್ನು ಕರೆದುಕೊಂಡು ಹೋಗಿದ್ದನು ಎಂದು ಹೇಳಲಾಗಿದೆ.

    ತವರು ಮನೆಗೆ ಬಂದಿದ್ದ ಪತ್ನಿಗೆ ಬುದ್ಧಿ ಕಲಿಸಲು ಪತಿ ತನ್ನ ಜೊತೆ ವೇಶ್ಯೆಯನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ ಪತ್ನಿ ತನ್ನ ಪತಿಯ ಜೊತೆ ವೇಶ್ಯೆಯನ್ನು ನೋಡುತ್ತಿದ್ದಂತೆ ಆತನ ಮೇಲೆ ರೇಗಾಡಿದ್ದಾಳೆ. ಅಲ್ಲದೇ ಆಕೆಯ ತವರು ಮನೆಯವರು ಆತನನ್ನು ಸರಿಯಾಗಿ ಥಳಿಸಿದ್ದಾರೆ. ಥಳಿತಕ್ಕೊಳಕ್ಕಾಗುತ್ತಿದ್ದಂತೆಯೇ ಪತ್ನಿ ಮನೆಯ ನೆರೆಮನೆಯವರು ಬಂದು ಪತಿಯನ್ನು ರಕ್ಷಿಸಿದ್ದಾರೆ.

    ಅಳಿಯ ಕುಡಿದ ನಶೆಯಲ್ಲಿ ತನ್ನ ಮಾವನ ಮನೆಗೆ ವೇಶ್ಯೆಯನ್ನು ಕರೆದುಕೊಂಡು ಹೋಗಿದ್ದನು. ನಶೆಯಲ್ಲಿ ಇದ್ದ ಅಳಿಯನಿಗೆ ತನ್ನ ಪತ್ನಿ ಅಲ್ಲಿ ಇರುವುದನ್ನು ಮರೆತು ಹೋಗಿದ್ದನು. ಪತಿಯ ಜೊತೆ ವೇಶ್ಯೆಯನ್ನು ನೋಡಿ ಪತ್ನಿ ರೇಗಾಡಿ, ಆಕೆಯ ಮನೆಯವರು ಆತನನ್ನು ಕೋಲಿನಿಂದ ಹೊಡೆದಿದ್ದಾರೆ. ಜೊತೆಗೆ ಆ ವೇಶ್ಯೆಗೂ ಕಪಾಳಮೋಕ್ಷ ಮಾಡಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಘಟನೆಯ ಬಳಿಕ ಗ್ರಾಮಸ್ಥರು ಆತನನ್ನು ರಕ್ಷಿಸಿ ಮಸೂರಿಗೆ ಕಳುಹಿಸಿದ್ದರು. ವೇಶ್ಯೆ ಕೂಡ ಸಮಯ ಸಿಕ್ಕದ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾಳೆ. ಪತಿಯ ಈ ವರ್ತನೆಯಿಂದ ಪತ್ನಿ ತನ್ನ ತವರು ಮನೆಯಲ್ಲೇ ಉಳಿದುಕೊಂಡಿದ್ದಾಳೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.