ಸ್ಯಾಕ್ರಮೆಂಟೊ: ಮೆಕ್ಡೊನಾಲ್ಡ್ಸ್ ನಲ್ಲಿ ತೆಗೆದುಕೊಂಡಿದ್ದ ತಿಂಡಿಗೆ ಕೆಚೆಪ್ ಕಡಿಮೆಯಾಯ್ತು ಎಂದು ಮಹಿಳೆಯೊಬ್ಬಳು ಮೆಕ್ಡೊನಾಲ್ಡ್ಸ್ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿರುವ ಘಟನೆ ಬುಧವಾರದಂದು ಕ್ಯಾಲಿರ್ಫೋನಿಯದಲ್ಲಿ ನಡೆದಿದೆ.
ಕ್ಯಾಲಿರ್ಫೋನಿಯದ ಮೈರಾ (24) ಹಲ್ಲೆ ನಡೆಸಿದ ಮಹಿಳೆ. ಬುಧವಾರದಂದು ಸೇಂಟ್ ಆನಾ ಪ್ರದೇಶದ ಮೆಕ್ಡೊನಾಲ್ಡ್ಸ್ ಗೆ ಮೈರಾ ಬಂದಿದ್ದಳು. ಅಲ್ಲಿ ತಿಂಡಿ ತಿನ್ನುವಾಗ ಆಕೆ ಆರ್ಡರ್ ಮಾಡಿದ್ದ ತಿಂಡಿಗೆ ಕೆಚೆಪ್ ಸಾಲಲಿಲ್ಲ. ಈ ವೇಳೆ ನೇರವಾಗಿ ಕೆಚೆಪ್ ತರಲು ಮೈರಾ ಮೆಕ್ಡೊನಾಲ್ಡ್ಸ್ ನ ಸಿಬ್ಬಂದಿ ಇರುವಲ್ಲಿ ತೆರೆಳಿದ್ದಾಳೆ. ಆಗ ಮೆಕ್ಡೊನಾಲ್ಡ್ಸ್ ಸಿಬ್ಬಂದಿ ಗ್ರಾಹಕರಿಗೆ ಇಲ್ಲಿ ಪ್ರವೇಶವಿಲ್ಲ, ನೀವು ಹೀಗೆ ಏಕಾಏಕಿ ಒಳಗೆ ಬರಬಾರದು ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಮೈರಾ ಮೆಕ್ಡೊನಾಲ್ಡ್ಸ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಾಳೆ.
ಮಹಿಳೆ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೆಕ್ಡೊನಾಲ್ಡ್ಸ್ ಮ್ಯಾನೇಜರ್ ಮೈರಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಮಹಿಳೆಯನ್ನು ಕ್ಯಾಲಿರ್ಫೋನಿಯಾ ಪೊಲೀಸರು ಬಂಧಿಸಿದ್ದಾರೆ.
ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.
ಕ್ಯಾಲಿಫೋರ್ನಿಯಾ: ಆ್ಯಪಲ್ ಪಾರ್ಕ್ ನ ಸ್ಟೀವ್ ಜಾಬ್ಸ್ ಸಭಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅತಿ ವಿನೂತನ ಹಾಗೂ ಬಹು ನಿರೀಕ್ಷಿತ ಡ್ಯುಯಲ್ ಸಿಮ್ ಅವತರಣೆಯ ಸ್ಮಾರ್ಟ್ ಫೋನ್ ಗಳನ್ನು ಆ್ಯಪಲ್ ಬಿಡುಗಡೆಗೊಳಿಸಿದೆ.
ಜಗತ್ತಿನ ಅತಿ ಬೇಡಿಕೆಯ ಹಾಗೂ ಪ್ರತಿಷ್ಟಿತ ಸ್ಮಾರ್ಟ್ ಫೋನ್‍ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಆ್ಯಪಲ್ ತನ್ನ ನೂತನ ಡ್ಯುಯಲ್ ಸಿಮ್ ವಿಭಾಗದಲ್ಲಿ ಐಫೋನ್ ಎಕ್ಸ್ಎಸ್, ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಹಾಗೂ ಎಕ್ಸ್ಆರ್ ಸ್ಮಾರ್ಟ್‍ಫೋನ್‍ಗಳನ್ನು ಬುಧವಾರ ಅನಾವರಣಗೊಳಿಸಿದೆ.
ನೂತನವಾಗಿ ಡ್ಯುಯಲ್ ಸಿಮ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಹಾಗೂ ಸ್ಮಾರ್ಟ್ ಫೋನ್‍ಗಳಲ್ಲಿ ಅತ್ಯಾಧುನಿಕ ಸುಧಾರಿತ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ಸದ್ಯ ಡ್ಯುಯಲ್ ಸಿಮ್ ಚೀನಾ ಹಾಗೂ ಇತರೆ ದೇಶಗಳಲ್ಲಿ ಲಭ್ಯವಿರಲಿದ್ದು, ಸೆಪ್ಟೆಂಬರ್ 28 ರಿಂದ ಭಾರತದ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿದೆ.
ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಫೋನಿನ ಗುಣ ವೈಶಿಷ್ಟ್ಯಗಳೇನು? ಬೆಲೆ ಎಷ್ಟು?
4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಫೋನಿಗೆ 1,09,900 ರೂಪಾಯಿ, 4 ಜಿಬಿ ರ‍್ಯಾಮ್/ 256 ಜಿಬಿ ಆಂತರಿಕ ಮೆಮೊರಿಗೆ 1,24,900 ರೂಪಾಯಿ ಹಾಗೂ 4 ಜಿಬಿ ರ‍್ಯಾಮ್/512 ಜಿಬಿ ಆಂತರಿಕ ಮೆಮೊರಿಗೆ 1,44,900 ರೂಪಾಯಿಗಳನ್ನು ನಿಗದಿಪಡಿಸಿದೆ. ಈ ಐಫೋನ್ ಸ್ಪೇಸ್ ಗ್ರೇ, ಸಿಲ್ವರ್ ಹಾಗೂ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಬಾಡಿ ಮತ್ತು ಡಿಸ್ಪ್ಲೇ:
157.5 x 77.4 x 7.7 ಮಿ.ಮೀ., 208 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್ – ಡ್ಯುಯಲ್ ಸ್ಟ್ಯಾಂಡ್ ಬೈ), 6.5 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1242×2688 ಪಿಕ್ಸೆಲ್, 19.5:9 ಅನುಪಾತ 458ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಐಓಎಸ್ 12 ಅಪ್‍ಡೇಟೆಡ್, ಆ್ಯಪಲ್ ಎ12 ಬಯೋನಿಕ್, ಹೆಕ್ಸಾ ಕೋರ್ ಪ್ರೊಸೆಸರ್, ಆ್ಯಪಲ್ 4 ಕೋರ್ ಗ್ರಾಫಿಕ್ ಪ್ರೊಸೆಸರ್, 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರ‍್ಯಾಮ್/ 256 ಜಿಬಿ ಆಂತರಿಕ ಮೆಮೊರಿ ಹಾಗೂ 4 ಜಿಬಿ ರ‍್ಯಾಮ್/512 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 7 ಎಂಪಿ, ಕ್ವಾಡ್ ಎಲ್‍ಇಡಿ, ಡ್ಯುಯಲ್ ಟೋನ್ ಫ್ಲಾಶ್ ಹೊಂದಿದ್ದು, ಹಿಂಭಾಗ 12+12 ಎಂಪಿ ಡ್ಯುಯಲ್ ಕ್ಯಾಮೆರಾ, ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫೇಸ್ ಡಿಟೆಕ್ಷನ್, ಧೂಳು ಹಾಗೂ ನೀರು ನಿರೋಧಕ, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಜೊತೆ ವೈರ್‍ಲೆಸ್ ಚಾರ್ಜಿಂಗ್ ಇದೆ.
ಐಫೋನ್ ಎಕ್ಸ್ಎಸ್ ಫೋನಿನ ಗುಣ ವೈಶಿಷ್ಟ್ಯಗಳೇನು? ಬೆಲೆ ಎಷ್ಟು?
4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಫೋನಿಗೆ 99,900 ರೂಪಾಯಿ, 4 ಜಿಬಿ ರ‍್ಯಾಮ್/ 256 ಜಿಬಿ ಆಂತರಿಕ ಮೆಮೊರಿಗೆ 1,14,900 ರೂಪಾಯಿ ಹಾಗೂ 4 ಜಿಬಿ ರ‍್ಯಾಮ್/512 ಜಿಬಿ ಆಂತರಿಕ ಮೆಮೊರಿಗೆ 1,34,900 ರೂಪಾಯಿಗಳನ್ನು ನಿಗದಿಪಡಿಸಿದೆ. ಈ ಐಫೋನ್ ಸ್ಪೇಸ್ ಗ್ರೇ, ಸಿಲ್ವರ್ ಹಾಗೂ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಬಾಡಿ ಮತ್ತು ಡಿಸ್ಪ್ಲೇ:
143.6 x 70.9 x 7.7 ಮಿ.ಮೀ., 177 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್ ಮತ್ತು ಇ-ಸಿಮ್), 5.8 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1125×2436 ಪಿಕ್ಸೆಲ್, 19.5:9 ಅನುಪಾತ 458ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಐಓಎಸ್ 12 ಅಪ್‍ಡೇಟೆಡ್, ಆ್ಯಪಲ್ ಎ12 ಬಯೋನಿಕ್, ಹೆಕ್ಸಾ ಕೋರ್ ಪ್ರೊಸೆಸರ್, ಆ್ಯಪಲ್ 4 ಕೋರ್ ಗ್ರಾಫಿಕ್ ಪ್ರೊಸೆಸರ್, 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರ‍್ಯಾಮ್/ 256 ಜಿಬಿ ಆಂತರಿಕ ಮೆಮೊರಿ ಹಾಗೂ 4 ಜಿಬಿ ರ‍್ಯಾಮ್/512 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 7 ಎಂಪಿ ಕ್ವಾಡ್ ಎಲ್‍ಇಡಿ, ಡ್ಯುಯಲ್ ಟೋನ್ ಫ್ಲಾಶ್ ಹೊಂದಿದ್ದು, ಹಿಂಭಾಗ 12+12 ಎಂಪಿ ಡ್ಯುಯಲ್ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫೇಸ್ ಡಿಟೆಕ್ಷನ್, ಧೂಳು ಹಾಗೂ ನೀರು ನಿರೋಧಕ, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಜೊತೆ ವೈರ್‍ಲೆಸ್ ಚಾರ್ಜಿಂಗ್ ಇದೆ.
ಐಫೋನ್ ಎಕ್ಸ್ಆರ್ ಫೋನಿನ ಗುಣ ವೈಶಿಷ್ಟ್ಯಗಳೇನು? ಬೆಲೆ ಎಷ್ಟು?
3 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಫೋನಿಗೆ ಅಂದಾಜು 76,900 ರೂಪಾಯಿ, 3 ಜಿಬಿ ರ‍್ಯಾಮ್/ 256 ಜಿಬಿ ಆಂತರಿಕ ಮೆಮೊರಿಗೆ ಅಂದಾಜು 81,900 ರೂಪಾಯಿ ಹಾಗೂ 3 ಜಿಬಿ ರ‍್ಯಾಮ್/512 ಜಿಬಿ ಆಂತರಿಕ ಮೆಮೊರಿಗೆ ಅಂದಾಜು 91,900 ರೂಪಾಯಿಗಳನ್ನು ನಿಗದಿಪಡಿಸಿದೆ. ಈ ಐಫೋನ್ ಬ್ಲಾಕ್, ರೆಡ್, ಎಲ್ಲೊ, ಬ್ಲೂ ಹಾಗೂ ಕೋರಲ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಬಾಡಿ ಮತ್ತು ಡಿಸ್ಪ್ಲೇ:
150.9 x 75.7 x 8.3 ಮಿ.ಮೀ., 194 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್ ಮತ್ತು ಇ-ಸಿಮ್), 6.1 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(828×1792 ಪಿಕ್ಸೆಲ್, 19.5:9 ಅನುಪಾತ 326ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಐಓಎಸ್ 12 ಅಪ್‍ಡೇಟೆಡ್, ಆ್ಯಪಲ್ ಎ12 ಬಯೋನಿಕ್, ಹೆಕ್ಸಾ ಕೋರ್ ಪ್ರೊಸೆಸರ್, ಆ್ಯಪಲ್ 4 ಕೋರ್ ಗ್ರಾಫಿಕ್ ಪ್ರೊಸೆಸರ್, 3 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ, 3 ಜಿಬಿ ರ‍್ಯಾಮ್/256 ಜಿಬಿ ಆಂತರಿಕ ಮೆಮೊರಿ ಹಾಗೂ 3 ಜಿಬಿ ರ‍್ಯಾಮ್/512 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 12 ಎಂಪಿ, ಕ್ವಾಡ್ ಎಲ್‍ಇಡಿ, ಡ್ಯುಯಲ್ ಟೋನ್ ಫ್ಲಾಶ್ ಹೊಂದಿದ್ದು, ಹಿಂಭಾಗ 12 ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫೇಸ್ ಡಿಟೆಕ್ಷನ್, ಧೂಳು ಹಾಗೂ ನೀರು ನಿರೋಧಕ, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಜೊತೆ ವೈರ್‍ಲೆಸ್ ಚಾರ್ಜಿಂಗ್ ಇದೆ.
ಸ್ಯಾಕ್ರಮೆಂಟೊ: ಉದ್ಯೋಗಕ್ಕಾಗಿ ಟ್ರಾಫಿಕ್ ಸಿಗ್ನಲ್ ನಲ್ಲಿ ಕುತ್ತಿಗೆಗೆ ಫಲಕ ಹಾಕಿಕೊಂಡು ನಿಂತಿದ್ದ ವ್ಯಕ್ತಿಗೆ ಬರೋಬ್ಬರಿ 200 ಸಂಸ್ಥೆಗಳಿಂದ ಉದ್ಯೋಗದ ಅವಕಾಶಗಳು ಬಂದಿದೆ.
ಕ್ಯಾಲಿಫೋರ್ನಿಯಾದ 26 ವರ್ಷದ ಡೇವಿಡ್ ಕ್ಯಾಸೆರೆಜ್ ಈ ರೀತಿ ಫಲಕವನ್ನು ಹಿಡಿದುಕೊಂಡು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದವರು. ಇವರು ಟೆಕ್ಸಾಸ್ ಎ&ಎಂ ವಿಶ್ವವಿದ್ಯಾಲಯದಲ್ಲಿ ಪದವೀಧರಾಗಿದ್ದಾರೆ. ಜೊತೆಗೆ ವೆಬ್ ಡೆವಲಪರ್ ಕೂಡ ಆಗಿದ್ದಾರೆ. ಆದರೆ ಎಲ್ಲೂ ಕೆಲಸ ಸಿಗದೇ ಹುಡುಕಿ ಹುಡುಕಿ ಬೇಸರವಾಗಿ, ನೆಲಸಲು ಮನೆಯೂ ಇಲ್ಲದೇ ಕೊನೆಗೆ ನಾಮ ಘಲಕವೊಂದನ್ನು ಹಿಡಿದುಕೊಂಡು ಟ್ರಾಫಿಕ್ ಸಿಗ್ನಲಿನಲ್ಲಿ ನಿಂತಿದ್ದಾರೆ.
ನಾಮಫಲಕದಲ್ಲಿ “Homeless, hungry 4 success, take a resume.” (ಮನೆ ಇಲ್ಲದೇ ಇದ್ದರೂ ಯಶಸ್ಸಿನ ಹಸಿವು ಇದೆ. ರೆಸ್ಯೂಮ್ ನೋಡಿ) ಎಂಬುದಾಗಿ ಬರೆದು ಕುತ್ತಿಗೆಗೆ ಹಾಕಿಕೊಂಡು ನಿಂತಿದ್ದರು. ಕ್ಯಾಸೆರೆಜ್ ನಿಂತಿದ್ದ ಫೋಟೋವನ್ನು ಒಬ್ಬರು ತೆಗೆದುಕೊಂಡು ತಮ್ಮ ಟ್ವಿಟ್ಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ. ಜೊತೆಗೆ “ಈ ಯುವಕ ಮನೆ ಇಲ್ಲದಿದ್ದರೂ ಹಣದ ಬದಲು ನನ್ನ ರೆಸ್ಯೂಮ್ ನೋಡಿ ಎಂದು ಬರೆದುಕೊಂಡಿದ್ದಾರೆ. ಆದ್ದರಿಂದ ಸಿಲಿಕಾನ್ ವ್ಯಾಲಿಯಲ್ಲಿರುವ ಯಾರದರೂ ಅವರಿಗೆ ಸಹಾಯ ಮಾಡಿದರೆ ಅದು ನಿಜಕ್ಕೂ ಅದ್ಭುತವಾಗಿರುತ್ತದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡಿದ ತಕ್ಷಣ ಟ್ವಿಟ್ಟಿಗರು ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ. ತಮಗೆ ಗೊತ್ತಿರುವ ಕಡೆಗಳಲ್ಲಿ ವಿಚಾರಿಸುವುದಾಗಿ ಹೇಳಿದ್ದಾರೆ. ಕೊನೆಗೆ ಇದರಿಂದ ಅವರಿಗೆ ಸುಮಾರು 200 ಸಂಸ್ಥೆಗಳಿಂದ ಕೆಲಸದ ಆಫರ್ ಗಳು ಬಂದಿದೆ. ಗೂಗಲ್ ಸೇರಿದಂತೆ ಅನೇಕ ಸಂಸ್ಥೆಗಳು ಕ್ಯಾಸೆರೆಜ್ ಅವರನ್ನು ಕೆಲಸಕ್ಕಾಗಿ ಆಹ್ವಾನಿಸಿವೆ.
ಜುಲೈ 27 ರಂದು ಈ ಪೋಸ್ಟ್ ಮಾಡಿದ್ದು, ಈವರೆಗೆ ಸುಮಾರು 2 ಲಕ್ಷಕ್ಕಿಂತ ಅಧಿಕ ಜನರು ಲೈಕ್ಸ್ ಮಾಡಿದ್ದಾರೆ. ಜೊತೆಗೆ ಒಂದು ಲಕ್ಷಕ್ಕಿಂತ ಜನರು ಈ ಪೋಸ್ಟಿಗೆ ರೀಟ್ವೀಟ್ ಮಾಡಿದ್ದಾರೆ.
ನಾನು ಈ ಮೊದಲು ಆಸ್ಟಿನ್ ನಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ಉತ್ತಮ ಉದ್ಯೋಗಕ್ಕಾಗಿ ಕ್ಯಾಲಿಫೋರ್ನಿಯಾಗೆ ಬಂದು ಅವಕಾಶಕ್ಕಾಗಿ ಹುಡುಕುತ್ತಿದ್ದೆ. ನಾನು ಯಾವುದೇ ರೀತಿಯ ಹಣವನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಆದರೆ ನಾನು ಕೆಲಸವನ್ನು ಮಾತ್ರ ಬಯಸುತ್ತಿದ್ದೆ. ಈಗ ಕೆಲಸ ಸಿಕ್ಕಿದೆ. ನನ್ನ ಬಗ್ಗೆ ಪೋಸ್ಟ್ ಮಾಡಿದವರಿಗೆ ಧನ್ಯವಾದಗಳು ಎಂದು ಕ್ಯಾಸೆರೆಜ್ ಹೇಳಿದ್ದಾರೆ.
ಕ್ಯಾಲಿಫೋರ್ನಿಯಾ: ಬೇಲಿಯೇ ಹೊಲ ಮೇಯಿತು ಎಂಬಂತೆ ಸೇನಾ ವಾಹನವನ್ನು ಸೈನಿಕನೇ ಕದ್ದ ಘಟನೆ ಅಮೆರಿಕದ ವರ್ಜೀನಿಯಾ ಪ್ರಾಂತ್ಯದಲ್ಲಿ ನಡೆದಿದೆ.
ವರ್ಜೀನಿಯಾದ ನ್ಯಾಷನಲ್ ಗಾರ್ಡ್ ನೆಲೆ ಇರುವ ಫೋರ್ಡ್ ಪಿಕೆಟ್ ನಿಂದ ಸೇನಾ ವಾಹನವನ್ನು ರಿಚ್ಮಂಡ್ ವರೆಗೆ ಓಡಿಸಿಕೊಂಡು ಹೋಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸೇನಾ ವಾಹನವನ್ನು ಬೆನ್ನತ್ತಿದ 12 ಪೊಲೀಸ್ ವಾಹನಗಳು 2 ಗಂಟೆಗಳ ಕಾಲ ಚೇಸಿಂಗ್ ಮಾಡಿ ಸೈನಿಕನನ್ನು ಬಂಧಿಸಿದ್ದಾರೆ.
ಅದೃಷ್ಟವಶಾತ್ ಸೇನಾ ವಾಹನದಲ್ಲಿ ಯಾವುದೇ ಆಯುಧಗಳಿರದಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಸೈನಿಕನೇ ಸೇನಾ ವಾಹನವನ್ನು ಕದ್ದು ರಸ್ತೆಯಲ್ಲಿ ಓಡಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ಯಾಲಿಫೋರ್ನಿಯಾ: ಜಗತ್ತಿನ ಶ್ರೀಮಂತ ಉದ್ಯಮಿ, ಅಮೆಜಾನ್ ಸಿಇಒ ಜೆಫ್ ಬೆಜೊಸ್ ತಮ್ಮ ಕಂಪೆನಿಯ ವಾರ್ಷಿಕ ಹೂಡಿಕೆದಾರರಿಗೆ ಕಳುಹಿಸಿದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವುದಾಗಿ ತಿಳಿಸಿದ್ದಾರೆ.
ವಿಶ್ವದ ನಂ. 1 ಇ-ಮಾರಾಟ ಸೇವಾ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಅಮೆಜಾನ್ ಭಾರತದಲ್ಲಿ ಕಂಪೆನಿಯ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ. ಲ್ಲದೇ ಅಮೆಜಾನ್ ನೀಡುತ್ತಿರುವ ಅಲೆಕ್ಸಾ ವಾಯ್ಸ್ ಸೇವೆಯಲ್ಲಿ ಹಿಂದಿ ಭಾಷೆಯನ್ನು ಸೇರಿಸುವ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಇದರಿಂದ ಭಾರತದಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಾಧ್ಯ ಎಂದು ಜೆಫ್ ಬೆಜೊಸ್ ಹೇಳಿದ್ದಾರೆ.
ಅಮೆಜಾನ್ ಪ್ರೈಂ ವಿಡಿಯೋಗೆಂದೇ ಅಮೆರಿಕ, ಇಂಗ್ಲೆಂಡ್ ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದಂತೆ ಭಾರತದಲ್ಲೂ ಮುಂದಿನ ದಿನಗಳಲ್ಲಿ ಭಾರತದ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಮೊದಲ ಬಾರಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಪಡೆಯಲು ಅವಕಾಶ ನೀಡಿದ ಒಂದು ವರ್ಷದಲ್ಲೇ ಕಂಪೆನಿಯ ಇತಿಹಾಸದಲ್ಲಿ ಅತೀ ಹೆಚ್ಚು ಸದಸ್ಯರಾಗಿದ್ದಾರೆ. ಬೇರೆ ದೇಶಗಳ ಮಾರುಕಟ್ಟೆಗೆ ಹೋಲಿಸಿದರೆ ಇದೊಂದು ದಾಖಲೆ ಎಂದು ಉಲ್ಲೇಖಿಸಿದ್ದಾರೆ.
ವೆಬ್‍ಸೈಟ್ ಟ್ರಾಫಿಕ್ ಲೆಕ್ಕ ಹಾಕುವ ಸಂಸ್ಥೆಗಳು ನೀಡಿದ ವರದಿಯನ್ನು ಉಲ್ಲೇಖಿಸಿ, ಅಮೆಜಾನ್ ಭಾರತದಲ್ಲಿ ಅತ್ಯಂತ ಹೆಚ್ಚು ವೇಗವಾಗಿ ಬೆಳೆಯುತ್ತಿದ್ದು, 2017 ರಲ್ಲಿ ಭಾರತದಲ್ಲಿ ಮೊಬೈಲ್ ಹಾಗೂ ಡೆಸ್ಕ್ ಟಾಪ್ ಮೂಲಕ ಅಮೆಜಾನ್ ತಾಣಕ್ಕೆ ಭೇಟಿ ನೀಡಿರುವುದು ಸಂತಸದ ಸಂಗತಿ. 2007ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಡೌನ್ ಲೋಡ್ ಆಗಿರುವ ಅಪ್ಲಿಕೇಶನ್‍ಗಳ ಪೈಕಿ ಅಮೆಜಾನ್.ಇನ್ ಅಪ್ಲಿಕೇಶನ್ ಒಂದಾಗಿದೆ ಎಂದು ಜೆಫ್ ಬೆಜೊಸ್ ತಿಳಿಸಿದ್ದಾರೆ.
ಏನಿದು ಅಮೆಜಾನ್ ಪ್ರೈಂ?
ಹಣವನ್ನು ಪಾವತಿಸಿ ಪಡೆಯುವ ಸೇವೆಯೇ ಅಮೆಜಾನ್ ಪ್ರೈಂ. ಪ್ರೈಂ ಸದಸ್ಯರಾದರೆ ಡೆಲಿವರಿಗಾಗಿ (ಒಂದು ದಿನ, ಎರಡು ದಿನ) ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಅಷ್ಟೇ ಅಲ್ಲದೇ ಪ್ರೈಂ ವಿಡಿಯೋ, ಮ್ಯೂಸಿಕ್ ಗಳನ್ನು ಸಹ ಉಚಿತವಾಗಿ ನೋಡಬಹುದಾಗಿದೆ. ಹೊಸದಾಗಿ ರಿಲೀಸ್ ಆಗಿರುವ ಸಿನಿಮಾ ಗಳನ್ನು ಸಹ ಪ್ರೈಮ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ನೋಡಬಹುದಾಗಿದೆ. ಈ ಸೇವೆಯನ್ನು ಮೊದಲ ಬಾರಿಗೆ 13 ವರ್ಷಗಳ ಹಿಂದೆ ಅಂದರೆ 2005 ರ ಜನವರಿ 2 ರಂದು ಆರಂಭಿಸಲಾಯಿತು. ಏಪ್ರಿಲ್ 2018ರ ವೇಳೆಗೆ ವಿಶ್ವದೆಲ್ಲೆಡೆ 10 ಕೋಟಿ ಪ್ರೈಂ ಸದಸ್ಯರು ಇದ್ದಾರೆ ಎಂದು ಅಮೆಜಾನ್ ತಿಳಿಸಿದೆ. ಭಾರತದಲ್ಲಿ ಈ ಸೇವೆಯನ್ನು 2016 ಜುಲೈ ತಿಂಗಳಿನಲ್ಲಿ ಆರಂಭಿಸಿತ್ತು. 999 ರೂ. ನೀಡಿದ್ದಲ್ಲಿ ವರ್ಷ ಕಾಲ ಪ್ರೈಂ ಸದಸ್ಯರಾಗಬಹುದು.
ಕ್ಯಾಲಿಫೋರ್ನಿಯಾ: ಹೆತ್ತ ತಂದೆ-ತಾಯಿಯೇ ತಮ್ಮ ಮೂರು ಮಕ್ಕಳನ್ನು ಪ್ಲೈವುಡ್ ಬಾಕ್ಸ್ ನಲ್ಲಿ ನಾಲ್ಕು ವರ್ಷಗಳ ಕಾಲ ಇರಿಸಿದ್ದ ಅಮಾನವೀಯ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಮೋನಾ ಕಿರ್ಕ್(51) ಮತ್ತು ಡೇನಿಯಲ್ ಪಾನಿಕೋ(73) ದಂಪತಿ ತಮ್ಮ ಮೂರು ಮಕ್ಕಳನ್ನು ಬಯಲಿನಲ್ಲಿ 20 ಅಡಿ, 4 ಇಂಚು ಎತ್ತರ ಮತ್ತು 10 ಅಡಿ ಅಗಲವಿರುವ ಪ್ಲೈವುಡ್ ಬಾಕ್ಸ್ ನಲ್ಲಿ ಇರಿಸಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಅದೇ ಬಾಕ್ಸ್ ನಲ್ಲಿ ಜೀವನ ಸಾಗಿಸಿರುವ ಈ ಮಕ್ಕಳು, ಬೆಕ್ಕುಗಳು, ಇಲಿಗಳು ರಂಧ್ರ ತೋಡಿರುವ ಬಿಲಗಳು ಮತ್ತು ಕಸದ ರಾಶಿಯ ನಡುವೆ ಬದುಕಿದ್ದರು.
11, 13 ಮತ್ತು 14 ವರ್ಷ ವಯಸ್ಸಿನ ಮಕ್ಕಳನ್ನು ಇಂತಹ ಸ್ಥಿತಿಯಲ್ಲಿ ಕಂಡ ಸ್ಥಳೀಯ ಪೊಲೀಸರು ಅವರನ್ನು ರಕ್ಷಿಸಿದ್ದಾರೆ. ಮಕ್ಕಳನ್ನ ಈ ರೀತಿ ಅಮಾನವೀಯವಾಗಿ ಬಾಕ್ಸ್ ನಲ್ಲಿ ಇರಿಸಿದ್ದ ತಂದೆ-ತಾಯಿಯನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಮಕ್ಕಳ ಜೊತೆ ಸುಮಾರು 30-40 ಬೆಕ್ಕುಗಳು ಕಾಣಿಸಿದ್ದು, ಬೆಕ್ಕುಗಳ ಮತ್ತು ಮನುಷ್ಯರ ಮಲ-ಮೂತ್ರದಿಂದ ತುಂಬಿಹೋಗಿತ್ತು. ಇದರಿಂದ ಮಕ್ಕಳು ಅನಾರೋಗ್ಯದಿಂದ ಬಳಲಿ ಹೋಗಿದ್ದು, ಮಕ್ಕಳ ಮತ್ತು ಕುಟುಂಬ ಸೇವೆಯ ಅಧಿಕಾರಿಗಳು ಮಕ್ಕಳನ್ನ ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಸಂಗ್ರಹಿಸಿರುವ ವಿಡಿಯೋ ಮತ್ತು ಫೋಟೋಗಳ ಪಕ್ರಾರ, ಮಕ್ಕಳು ವಾಸಿಸುತ್ತಿದ್ದ ಮನೆಯ ಸುತ್ತ-ಮುತ್ತ ಕಸದ ರಾಶಿ, ಪ್ಲಾಸ್ಟಿಕ್ ಬ್ಯಾಗ್‍ಗಳು, ಮಕ್ಕಳ ಆಟಿಕೆ ಸಾಮಾಗ್ರಿಗಳು, ಹಾಸಿಗೆ ಮತ್ತು ಟೈಯರ್ ಗಳಿಂದ ತುಂಬ ಹೋಗಿದ್ದವು. ಇಂತಹ ಕೊಳಕು ಪ್ರದೇಶದಲ್ಲಿ ವಾಸಿಸುತಿದ್ದ ಮಕ್ಕಳು, ತಿನ್ನಲು ಆಹಾರವಿಲ್ಲದೆ ಬಳಲುತ್ತಿದರು. ಇಲ್ಲಿ ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಕೂಡ ಇಲ್ಲದೆ ನಾಲ್ಕು ವರ್ಷಗಳ ಕಾಲ ಅಲ್ಲಿ ಬದುಕಿದ್ದರು ಎಂದು ವರದಿಯಾಗಿದೆ.
ಕ್ಯಾಲಿಫೋರ್ನಿಯಾ: ಟಿವಿ ವಾಹಿನಿಯ ನೇರ ಪ್ರಸಾರದಲ್ಲಿ ತಮಾಷೆಯ ಸಂಗತಿಯೊಂದು ನಡೆದಿದ್ದು, ಪಕ್ಷಿಯೊಂದು ನೇರಪ್ರಸಾರದ ವೇಳೆ ನಿರೂಪಕಿಯ ತಲೆಯ ಮೇಲೆ ಬಂದು ಕುಳಿತುಕೊಂಡಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಮೃಗಾಲಯದ ಪಕ್ಷಿ ಇದಾಗಿದೆ. ಕಾರ್ಯಕ್ರಮಕ್ಕಾಗಿ ಪಕ್ಷಿಯನ್ನ ಸೆಟ್‍ಗೆ ತರಲಾಗಿತ್ತು. ಇಲ್ಲಿನ ಕೆಎಫ್‍ಎಂಬಿ ಟಿವಿಯಲ್ಲಿ ಬೆಳಗಿನ ಸುದ್ದಿ ಪ್ರಸಾರವಾಗುತ್ತಿತ್ತು. ಅಂದು “ಝೂ ಡೇ” ಎಂಬ ಕಾರ್ಯಕ್ರಮ ನಡೆಯುತ್ತಿತ್ತು. ನಿರೂಪಕರಾದ ನಿಚೆಲ್ ಮೆಡೆನಾ ಹಾಗೂ ಎರಿಕ್ ಕಹ್ನೆಟ್ ಸುದ್ದಿ ಓದುತ್ತಿದ್ದರು.
ಇಬ್ಬರು ನಿರೂಪಕರು ಕಾರ್ಯಕ್ರಮದ ಮಧ್ಯೆ ಬ್ರೇಕ್ ತೆಗೆದುಳ್ಳಲು ಮುಂದಾಗುತ್ತಿದ್ದರು. ಈ ಸಂದರ್ಭದಲ್ಲಿ ಸ್ಕಾರ್ಲೆಟ್ ಹಕ್ಕಿ ಬಂದು ನಿರೂಪಕಿ ನಿಚೆಲ್ ತಲೆ ಮೇಲೆ ಕುಳಿತುಕೊಂಡಿದೆ. ಹಕ್ಕಿಯ ಅನಿರೀಕ್ಷಿತ ಪ್ರವೇಶದಿಂದ ಅಚ್ಚರಿಯಾದರೂ ಅವರು ಭಯಪಡಲಿಲ್ಲ. ಆದರೆ ಪಕ್ಕದಲ್ಲಿ ಕುಳಿತಿದ್ದ ಸಹ ನಿರೂಪಕ ಎರಿಕ್ ಕಹ್ನೆಟ್ ನಗು ತಡೆಯಲು ಸಾಧ್ಯವಾಗದೆ ಜೋರಾಗಿ ನಕ್ಕಿದ್ದಾರೆ. ಬಳಿಕ ಕೆಲವು ಸೆಂಕೆಡ್ ಆದ ನಂತರ ಆ ಪಕ್ಷಿ ಎರಿಕ್ ಕಹ್ನೆಟ್ ತಲೆ ಮೇಲೂ ಹಾರಿದೆ.
ಈ ವಿಡಿಯೋವನ್ನು ಎರಿಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.
ಕ್ಯಾಲಿಪೋರ್ನಿಯಾ: ಅಮ್ಮನಂತೆ ನಾಟಕವಾಡಿ ಮಹಿಳೆಯೊಬ್ಬರು ಬಾಲಕಿಯ ಅಪಹರಣವನ್ನು ತಪ್ಪಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಕ್ಯಾಲಿಫೋರ್ನಿಯಾದ ಬಾಲಕಿ ಮಾರ್ಟಿನೆಜ್ ಸಾಂತಾ ಅನಾ ಸ್ಕೂಲ್ ಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಯೊಬ್ಬ ಬಂದು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲೆ ಇದ್ದ ಕ್ಲೌಡಿಯಾ ಎಂಬ ಮಹಿಳೆ ಇದನ್ನು ಗಮನಿಸಿದ್ದಾರೆ. ನಂತರ ಮಹಿಳೆ ಬಾಲಕಿಯ ಬಳಿ ಬಂದು ಅಮ್ಮನಂತೆ ಪೋಸು ಕೊಟ್ಟಿದ್ದಾರೆ.
ಮಹಿಳೆ ಬಾಲಕಿಯ ಹೆಗಲ ಮೇಲೆ ಕೈಹಾಕಿಕೊಂಡು ಸುಮ್ಮನೇ ನಡೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ ಅಪರಿಚಿತ ಮಹಿಳೆ ತನ್ನನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿ ಗಾಬರಿಯಿಂದ ಅಳಲಾರಂಭಿಸಿದ್ದಾಳೆ. ಬಾಲಕಿ ಅಳುತ್ತಿದ್ದರಿಂದ ಮಹಿಳೆ ಸ್ಪ್ಯಾನಿಶ್ ಭಾಷೆ ಮಾತನಾಡುತ್ತಿದ್ದರೂ ಬಾಲಕಿಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ನಂತರ ಅವಳನ್ನು ಶಾಲೆಯವರೆಗೂ ಬಿಟ್ಟಿದ್ದಾರೆ.
ಮಹಿಳೆ ಶಾಲಾ ಅಧಿಕಾರಿಗಳಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಸಮಯ ಪ್ರಜ್ಞೆಯಿಂದಾಗಿ ಬಾಲಕಿ ಅಪಹರಣದಿಂದ ಪಾರಾಗಿದ್ದಾಳೆ. ಅಪಹರಣಕಾರರಿಂದ ತನ್ನನ್ನು ಕಾಪಾಡಿದ ಮಹಿಳೆ ನಿಜಕ್ಕೂ ಧೈರ್ಯವಂತೆ ಎಂದು ಬಾಲಕಿ ಹೇಳಿದ್ದಾಳೆ.
ವಾಷಿಂಗ್ಟನ್: ಅಪಘಾತಗಳು ನಡೆದಾಗ ವಾಹನಗಳು ನಜ್ಜುಗುಜ್ಜಾಗಿರೋದನ್ನ, ತಲೆಕೆಳಗಾಗಿ ಬಿದ್ದಿರೋದನ್ನ ನೋಡಿರ್ತೀರ. ಆದ್ರೆ ಇಲ್ಲೊಂದು ಕಾರ್ ಅಪಘಾತಕ್ಕೀಡಾದ ನಂತರ ಗಾಳಿಯಲ್ಲಿ ಹಾರಿ ಕಟ್ಟಡದ 2ನೇ ಮಹಡಿಯ ಗೋಡೆಯಲ್ಲಿ ಸಿಲುಕಿದೆ.
ಭಾನುವಾರದಂದು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದೆ. ಡಿವೈಡರ್‍ಗೆ ಡಿಕ್ಕಿ ಹೊಡೆದ ಕಾರು ಮೇಲೆ ಗಾಳಿಯಲ್ಲಿ ಹಾರಿ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಡೆಂಟಿಸ್ಟ್ ಕಚೇರಿಯ ಗೋಡೆಯಲ್ಲಿ ಸಿಲುಕಿದೆ. ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಇದರ ಫೋಟೋಗಳನ್ನ ಕ್ಲಿಕ್ಕಿಸಿದ್ದು, ಬಿಳಿ ಬಣ್ಣದ ಕಾರು ಗೋಡೆಯಲ್ಲಿ ಸಿಲುಕಿ, ಹಿಂದಿನ ಭಾಗ ಹೊರಚಾಚಿಕೊಂಡಿರೋದನ್ನ ಕಾಣಬಹುದು.
ಕ್ಯಾಲಿಫೋರ್ನಿಯಾದ ಸಾಂಟಾ ಅನಾದಲ್ಲಿ ಕಾರು ಅಪಘಾತಕ್ಕೀಡಾಗಿರುವ ಬಗ್ಗೆ ಬೆಳಗ್ಗೆ ಸುಮಾರು 5.30ರ ವೇಳೆಯಲ್ಲಿ ಕರೆ ಬಂತು. ಕಾರು ತುಂಬಾ ವೇಗವಾಗಿ ಚಲಿಸುತ್ತಿದ್ದು, ಡಿವೈಡರ್‍ಗೆ ಡಿಕ್ಕಿಯಾಗಿದೆ. ಕಾರ್ ಚಾಲಕ ಡಿವೈಡರ್ ಪಕ್ಕದ ರಸ್ತೆಯಲ್ಲಿ ಬರುತ್ತಿರಲಿಲ್ಲ. ಬದಲಿಗೆ ಮತ್ತೊಂದು ರಸ್ತೆಯಿಂದ ಬಂದು, ಟಿ- ಬೋನ್ ಕ್ರಾಶ್ ರೀತಿಯಲ್ಲಿ ಅಪಘಾತಕ್ಕೀಡಾಗಿದೆ ಎಂದು ಆರೇಂಜ್ ಕೌಂಟಿ ಫೈರ್ ಅಥಾರಿಟಿಯ ಅಧಿಕಾರಿ ಸ್ಟೀಫನ್ ಹಾರ್ನರ್ ಹೇಳಿದ್ದಾರೆ.
ಡಿವೈಡರ್‍ಗೆ ಡಿಕ್ಕಿಯಾದ ರಭಸಕ್ಕೆ ಕಾರ್ ಮೇಲೆ ಗಾಳಿಯಲ್ಲಿ ಹಾರಿದ್ದು, ಕಟ್ಟಡದ ಸಣ್ಣ ಕಚೇರಿಯ ಗೋಡೆಯಲ್ಲಿ ತೂರಿಕೊಂಡಿದೆ. ಘಟನೆಯಿಂದ ಸಣ್ಣ ಪ್ರಮಾಣದ ಬೆಂಕಿ ಹೊತ್ತಿಕೊಂಡಿತ್ತು. ಅದನ್ನ ಕೂಡಲೇ ಆರಿಸಲಾಯ್ತು ಎಂದು ಹಾರ್ನರ್ ತಿಳಿಸಿದ್ದಾರೆ.
ಕಾರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಒಬ್ಬರು ಹೊರಗೆ ಬರುವಲ್ಲಿ ಯಶಸ್ವಿಯಾಗಿದ್ದರು. ಮತ್ತೊಬ್ಬರು ಸುಮಾರು 1 ಗಂಟೆ ಕಾಲ ಕಾರಿನೊಳಗೆ ಸಿಲುಕಿದ್ದರು. ಭಾರೀ ಗಾತ್ರದ ಸಾಧನವನ್ನ ಬಳಸಿ ವಾಹನವನ್ನ ಸಮತೋಲನಕ್ಕೆ ತರಲಾಯಿತು. ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು ಎಂದು ಅವರು ಹೇಳಿದ್ದಾರೆ.
ನನಗೆ ಕಾರಿನಲ್ಲಿದ್ದವರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಹಾರ್ನರ್ ಹೇಳಿದ್ದಾರೆ. ಆದ್ರೆ ಸಾಂಟಾ ಆನಾ ಪೊಲೀಸರು ಪ್ರತಿಕ್ರಿಯಿಸಿ, ಚಾಲಕ ಮಾದಕದ್ರವ್ಯ ಸೇವನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆಂದು ತಿಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಬಳಸಿ ಕಾರನ್ನ ಕಡ್ಡಡದಿಂದ ಎಳೆದು ಕೆಳಗೆ ತಂದಿದ್ದಾರೆ. ಫೈಲ್‍ಗಳನ್ನ ಇಡಲು ಬಳಸಾಗ್ತಿದ್ದ ಕಟ್ಟಡದ ಎರಡನೇ ಮಹಡಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಹಾರ್ನರ್ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾ: ತನ್ನ ಪ್ರಾಣವನ್ನು ಲೆಕ್ಕಿಸದೇ ವ್ಯಕ್ತಿಯೊಬ್ಬ ಧಗಧಗನೆ ಉರಿಯುತ್ತಿದ್ದ ಕಾಳ್ಗಿಚ್ಚಿನಿಂದ ಮೊಲವನ್ನು ರಕ್ಷಿಸಿದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡಿರೋ ಕಾಳ್ಗಿಚ್ಚಿನಿಂದಾಗಿ ಮೊಲವೊಂದು ದಾರಿ ತಪ್ಪಿದ್ದು, ಬೆಂಕಿಯ ಕಡೆಗೆ ಓಡಿ ಹೋಗುತ್ತಿತ್ತು. ಆಗ ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿ ಮೊಲವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ನ್ಯಾಷನಲ್ ಜಿಯೋಗ್ರಫಿ ಟ್ವಿಟ್ಟರ್ ಖಾತೆಯಲ್ಲಿ ಗುರುವಾರದಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ 35 ಸೆಕೆಂಡ್ ವಿಡಿಯೋದಲ್ಲಿ ವ್ಯಕ್ತಿ ಆ ಚಿಕ್ಕ ಪ್ರಾಣಿಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂಬುದು ಸೆರೆಯಾಗಿದೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋ ಸುಮಾರು 6,000 ಬಾರಿ ರೀಟ್ವೀಟ್ ಆಗಿದ್ದು, 13,000ಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 4 ದಿನಗಳಿಂದ ಕಾಳ್ಗಿಚ್ಚು ಆವರಿಸಿದೆ. ಈ ಬೆಂಕಿಯಿಂದ ನೂರಾರು ಮನೆಗಳಿಗೆ ಹಾನಿಯಾಗಿದೆ. ಅಷ್ಟೇ ಅಲ್ಲದೇ ಲಾಸ್-ಏಂಜಲೀಸ್ ನಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. 2 ಲಕ್ಷಗಿಂತ ಹೆಚ್ಚು ನಿವಾಸಿಗಳನ್ನ ಸ್ಥಳಾಂತರಿಸಲಾಗಿದೆ.
This man jumped into action when he noticed a small rabbit near the fast-spreading flames pic.twitter.com/9lKPbMKE3P