Tag: california

  • ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಗುಂಡಿನ ದಾಳಿ – 7 ಮಂದಿ ಸಾವು

    ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಗುಂಡಿನ ದಾಳಿ – 7 ಮಂದಿ ಸಾವು

    ವಾಷಿಂಗ್ಟನ್: ಅಮೆರಿಕದಲ್ಲಿ (America) ಗುಂಡಿನ ದಾಳಿಯ ಪ್ರಕರಣಗಳು ಒಂದಾದಮೇಲೊಂದರಂತೆ ವರದಿಯಾಗುತ್ತಲೇ ಇವೆ. ಮಂಗಳವಾರ ಕ್ಯಾಲಿಫೋರ್ನಿಯಾದಲ್ಲಿ (California) ಮತ್ತೆ ಗುಂಡಿನ ದಾಳಿಗಳು (Shooting) ನಡೆದಿವೆ. ಹಾಫ್ ಮೂನ್ ಬೇ (Half Moon Bay) ನಗರದಲ್ಲಿ ನಡೆದ 2 ಪ್ರತ್ಯೇಕ ದಾಳಿಗಳಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಗುಂಡಿನ ದಾಳಿ ನಡೆದಿರುವ ನಿಖರವಾದ ಸ್ಥಳಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ. ಪೊಲೀಸರು ಈಗಾಗಲೇ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆತನನ್ನು ಝಾವೋ ಚುನ್ಲಿ (67) ಎಂದು ಗುರುತಿಸಲಾಗಿದೆ. ಆತ ಗುಂಡಿನ ದಾಳಿ ನಡೆಸಿ, ಪರಾರಿಯಾಗಲು ಪ್ರಯತ್ನಿಸುತ್ತಿದ್ದ ವೇಳೆ ಅಧಿಕಾರಿಗಳು ಆತನನ್ನು ಹಿಡಿದು ಬಂಧಿಸಿದ್ದಾರೆ. ಇದನ್ನೂ ಓದಿ: ಆವರಣದಲ್ಲೇ ವಿದ್ಯಾರ್ಥಿನಿ ಕೊಲೆ ಪ್ರಕರಣ- ಬೆಂಗಳೂರು ಗ್ರಾಮಾಂತರ ಕಾಲೇಜುಗಳಿಗೆ ಹೊಸ ಗೈಡ್‍ಲೈನ್ಸ್

    ಆರೋಪಿಯನ್ನು ಅಧಿಕಾರಿಗಳು ಬಂಧಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಸದ್ಯ ಸಮುದಾಯದಲ್ಲಿ ಯಾವುದೇ ದಾಳಿಯ ಬೆದರಿಕೆಯಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

    ಕೇವಲ 2 ದಿನಗಳ ಹಿಂದೆ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್‌ನಲ್ಲಿ ಚೀನೀಯರ ಹೊಸ ವರ್ಷದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ 10 ಜನರನ್ನು ಕೊಂದಿದ್ದ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಆತ ತನ್ನ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಪೊಲೀಸರ ವಾಹನಗಳು ಆತನ ವಾನಕ್ಕೆ ಸುತ್ತುವರಿದಿದ್ದವು. ಈ ವೇಳೆ ದಾಳಿಕೋರ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನೂ ಓದಿ: ನಗರ ಭಾಗದಲ್ಲೂ ಕಂಬಳ ಕಹಳೆ- ಕಾಂತಾರದಿಂದ ಮತ್ತಷ್ಟು ರಂಗೇರಿದ ಹವಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ಯಾಲಿಫೋರ್ನಿಯಾ ಶೂಟೌಟ್ ಪ್ರಕರಣ- ದಾಳಿ ನಡೆಸಿದ ವ್ಯಕ್ತಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    ಕ್ಯಾಲಿಫೋರ್ನಿಯಾ ಶೂಟೌಟ್ ಪ್ರಕರಣ- ದಾಳಿ ನಡೆಸಿದ ವ್ಯಕ್ತಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    ವಾಷಿಂಗ್ಟನ್: ಕ್ಯಾಲಿಫೋರ್ನಿಯಾದಲ್ಲಿ (California) ಭಾನುವಾರ ಚೀನೀಯರ ಹೊಸ ವರ್ಷದ (Chinese New Year) ಆಚರಣೆ ವೇಳೆ ಕ್ಲಬ್ ಒಂದರಲ್ಲಿ ಗುಂಡಿನ ದಾಳಿ (Shooting) ನಡೆದಿತ್ತು. ಘನೆಯಲ್ಲಿ 10 ಜನರು ಸಾವನ್ನಪ್ಪಿದ್ದರು. ಆದರೆ ಶಂಕಿತ ಆರೋಪಿ ದಾಳಿಯ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶಂಕಿತನನನ್ನು ಅಧಿಕಾರಿಗಳು ಹುಯು ಕ್ಯಾನ್ ಟ್ರಾನ್ (72) ಎಂದು ಗುರುತಿಸಿದ್ದಾರೆ. ಆತನೂ ಕೂಡಾ ಚೀನಾ ಮೂಲದ ವ್ಯಕ್ತಿಯಾಗಿದ್ದು, ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾಗೆ ಬಂದಿದ್ದ. ಆತ ಕ್ಲಬ್‌ನಲ್ಲಿ ಚೀನೀ ಜನರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

    ಘಟನೆಯಲ್ಲಿ 10 ಜನರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ದಾಳಿ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಹಂತಕನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಆತ ಕಾರೊಂದರಲ್ಲಿ ಅವಿತುಕೊಂಡು ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಗೂ ಕ್ಯಾರೆ ಅನ್ನದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ಬೈಕ್ ರೈಡ್

    ಘಟನೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಅವರ ಪತ್ನಿ ಜಿಲ್ ಬೈಡನ್ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಅಮೆರಿಕದಲ್ಲಿ ಗನ್ ಹಿಂಸಾಚಾರ ದೊಡ್ಡ ಸಮಸ್ಯೆಯಾಗಿದೆ. ಕಳೆದ ವರ್ಷ 647 ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ. ಇದನ್ನೂ ಓದಿ: ಬಿಹಾರದಲ್ಲಿ ಮತ್ತೆ ಕಳ್ಳಭಟ್ಟಿ ಸೇವಿಸಿ 3 ಸಾವು, 6 ಮಂದಿ ಆಸ್ಪತ್ರೆ ದಾಖಲು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ಯಾಲಿಫೋರ್ನಿಯಾದಲ್ಲಿ ಚೀನೀಯರ ನ್ಯೂ ಇಯರ್‌ ಪಾರ್ಟಿ ವೇಳೆ ಶೂಟೌಟ್‌ – 10 ಮಂದಿ ಸಾವು

    ಕ್ಯಾಲಿಫೋರ್ನಿಯಾದಲ್ಲಿ ಚೀನೀಯರ ನ್ಯೂ ಇಯರ್‌ ಪಾರ್ಟಿ ವೇಳೆ ಶೂಟೌಟ್‌ – 10 ಮಂದಿ ಸಾವು

    ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದ (California) ಏಷ್ಯಾದ ನಗರದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ (Shooting) ಹತ್ತು ಜನರು ಮೃತಪಟ್ಟಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.

    ಮಾಂಟೆರಿ ಪಾರ್ಕ್‌ನಲ್ಲಿ ಚೀನೀಯರು ಹೊಸ ವರ್ಷದ ಪಾರ್ಟಿಯಲ್ಲಿ ಸಂಭ್ರಮಿಸುತ್ತಿದ್ದಾಗ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಂತರದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಶೂಟೌಟ್‌ನಲ್ಲಿ ಗಾಯಗೊಂಡವರನ್ನು ತುರ್ತು ಸಿಬ್ಬಂದಿ ಸ್ಟ್ರೆಚರ್‌ಗಳ ಮೂಲಕ ಅಂಬುಲೆನ್ಸ್‌ಗೆ ಹಾಕಿಕೊಂಡು ಕರೆದೊಯ್ಯುತ್ತಿರುವ ದೃಶ್ಯಗಳು ವೀಡಿಯೋಗಳಲ್ಲಿವೆ. ಇದನ್ನೂ ಓದಿ: ಅಮೆರಿಕ ಮಿಲಿಟರಿ ಪಡೆಯಿಂದ ವೈಮಾನಿಕ ದಾಳಿ – 30 ಉಗ್ರರ ಹತ್ಯೆ

    ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ಎರಡು ದಿನಗಳ ʼಚಂದ್ರನ ಹೊಸ ವರ್ಷʼದ ಹಬ್ಬಕ್ಕಾಗಿ ಹತ್ತಾರು ಸಾವಿರ ಜನರು ಮುಂಜಾನೆಯೇ ಜಮಾಯಿಸಿದ್ದರು. ರಾತ್ರಿ ಪಾರ್ಟಿ ವೇಳೆ ಬಂದೂಕುಧಾರಿ ಗುಂಡು ಹಾರಿಸಿದ್ದು, ಹಲವರು ಸಾವಿಗೀಡಾಗಿದ್ದಾರೆ.

    “ಮಾಂಟೆರಿ ಪಾರ್ಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಮ್ಮ ಸಂತಾಪಗಳು” ಎಂದು ಲಾಸ್ ಏಂಜಲೀಸ್ ಸಿಟಿ ಕಂಟ್ರೋಲರ್ ಕೆನ್ನೆತ್ ಮೆಜಿಯಾ ಟ್ವೀಟ್‌ನಲ್ಲಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಸೀಟ್‌ಬೆಲ್ಟ್ ಹಾಕದ ರಿಷಿ ಸುನಾಕ್‌ಗೆ ದಂಡ

    ಅಮೆರಿಕದಲ್ಲಿ ಗನ್‌ ಹಿಂಸಾಚಾರವು ದೊಡ್ಡ ಸಮಸ್ಯೆಯಾಗಿದೆ. ಕಳೆದ ವರ್ಷ 647 ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಧು ಹತ್ಯೆಯ ಮಾಸ್ಟರ್ ಮೈಂಡ್ ಕ್ಯಾಲಿಫೋರ್ನಿಯಾದಲ್ಲಿ ಬಂಧನ

    ಸಿಧು ಹತ್ಯೆಯ ಮಾಸ್ಟರ್ ಮೈಂಡ್ ಕ್ಯಾಲಿಫೋರ್ನಿಯಾದಲ್ಲಿ ಬಂಧನ

    ನವದೆಹಲಿ: ಪಂಜಾಬಿ ಖ್ಯಾತ ಗಾಯಕ (Punjabi Singer) ಹಾಗೂ ರಾಜಕಾರಣಿ ಸಿಧು ಮೂಸೆವಾಲಾ (Sidhu Moose Wala) ಹತ್ಯೆಯ ಮಾಸ್ಟರ್ ಮೈಂಡ್ (Mastermind) ಗೋಲ್ಡಿ ಬ್ರಾರ್‌ನನ್ನು (Goldy Brar) ಕ್ಯಾಲಿಫೋರ್ನಿಯಾದಲ್ಲಿ (California) ಬಂಧಿಸಲಾಗಿದೆ. ಸಿಧು ಹತ್ಯೆಯ ಜವಾಬ್ದಾರಿ ಹೊತ್ತಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ಭಾರತದ ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ.

    ಭಾರತದ ಗುಪ್ತಚರ ಸಂಸ್ಥೆಗಳು ಅಂತಾರಾಷ್ಟ್ರೀಯ ಮೂಲಗಳಿಂದ ಈ ಮಾಹಿತಿಯನ್ನು ಪಡೆದಿವೆ. ಆದರೆ ಗೋಲ್ಡಿ ಬ್ರಾರ್ ಬಂಧನದ ಬಗ್ಗೆ ಕ್ಯಾಲಿಫೋರ್ನಿಯಾ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    ಆದರೆ ಭಾರತದ ಗುಪ್ತಚರ ಇಲಾಖೆಗಳಾದ ಆರ್‌ಎಡಬ್ಲ್ಯೂ, ಐಬಿ, ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಮತ್ತು ಪಂಜಾಬ್ ಗುಪ್ತಚರ ಸಂಸ್ಥೆ ಈ ಮಾಹಿತಿಯನ್ನು ಪಡೆದಿರುವುದಾಗಿ ತಿಳಿಸಿವೆ. ಗೋಲ್ಡಿ ಬ್ರಾರ್‌ನನ್ನು ಕ್ಯಾಲಿಫೋರ್ನಿಯಾದಲ್ಲಿ ಪತ್ತೆಹಚ್ಚಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿವೆ. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಮಕ್ಕಳಿಬ್ಬರಿಗೆ ಕರೆಂಟ್ ಶಾಕ್ – ಸ್ಥಿತಿ ಚಿಂತಾಜನಕ

    ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಕೆನಡಾ ಮೂಲದವನಾಗಿದ್ದಾನೆ. ಸಿಧು ಮೂಸೆವಾಲಾ ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಈ ಹತ್ಯೆಯ ಮಾಸ್ಟರ್ ಮೈಂಡ್ ಇದೇ ಬ್ರಾರ್ ಎನ್ನಲಾಗಿದೆ.

    ಸಿಧು ಸಾವಿನ ಕೆಲ ದಿನಗಳ ಬಳಿಕ ಬ್ರಾರ್ ಸಿಧು ಹತ್ಯೆಗೆ ತಾನೇ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿದ್ದ. ಸಿಧು ಬ್ರಾರ್‌ನ ವಿರೋಧಿ ಗ್ಯಾಂಗ್‌ನೊಂದಿಗೆ ಭಾಗಿಯಾಗಿದ್ದರು ಎನ್ನಲಾಗಿದ್ದು, ಈ ಕಾರಣಕ್ಕೆ ಮೂಸೆವಾಲಾ ವಿರುದ್ಧ ಸೇಡು ತೀರಿಸಿಕೊಳ್ಳಲು ಕೊಲೆಯ ಯೋಜನೆ ಹಾಕಿದ್ದಾಗಿ ತಿಳಿಸಿದ್ದ. ಇದನ್ನೂ ಓದಿ: ಪಾಕಿಸ್ತಾನಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಕೊಡಲ್ಲ – ರಷ್ಯಾ

    Live Tv
    [brid partner=56869869 player=32851 video=960834 autoplay=true]

  • ಕ್ಯಾಲಿಫೋರ್ನಿಯಾ – ಕಿಡ್ನ್ಯಾಪ್‌ ಆಗಿದ್ದ ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

    ಕ್ಯಾಲಿಫೋರ್ನಿಯಾ – ಕಿಡ್ನ್ಯಾಪ್‌ ಆಗಿದ್ದ ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

    ವಾಷಿಂಗ್ಟನ್‌: ಕ್ಯಾಲಿಫೋರ್ನಿಯಾದಲ್ಲಿ (California) ಕಿಡ್ನ್ಯಾಪ್‌ ಆಗಿದ್ದ ಭಾರತ ಮೂಲದ 8 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.

    8 ತಿಂಗಳ ಮಗು ಅರೂಹಿ ಧೇರಿ ಮತ್ತು ಪೋಷಕರಾದ ಜಸ್ಲೀನ್ ಕೌರ್ (27), ಜಸ್ದೀಪ್ ಸಿಂಗ್ (36) ಹಾಗೂ ಚಿಕ್ಕಪ್ಪ ಅಮನದೀಪ್ ಸಿಂಗ್ (39) ಅವರನ್ನು ಕೆಲ ದಿನಗಳ ಹಿಂದೆ ಅಪಹರಿಸಲಾಗಿತ್ತು. ಈಗ ಹಣ್ಣಿನ ತೋಟವೊಂದರಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತ ಮೂಲದ 8 ತಿಂಗಳ ಮಗು ಸೇರಿ ನಾಲ್ವರು ಕಿಡ್ನ್ಯಾಪ್‌

    ನಾಲ್ವರ ಶವಗಳು ಇಂಡಿಯಾನಾ ರಸ್ತೆ ಮತ್ತು ಹಚಿನ್ಸನ್ ರಸ್ತೆ ಬಳಿಯ ಹಣ್ಣಿನ ತೋಟದಲ್ಲಿ ಬುಧವಾರ ಸಂಜೆ ಪತ್ತೆಯಾಗಿವೆ. ತೋಟದ ರೈತ ಶವಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕುಟುಂಬದವರನ್ನು ಅಪಹರಿಸಿದ ಒಂದು ದಿನದ ನಂತರ ಪೊಲೀಸರು, ಜೀಸಸ್ ಮ್ಯಾನುಯೆಲ್ ಸಲ್ಗಾಡೊ ಹೆಸರಿನ ಶಂಕಿತನನ್ನು ಬಂಧಿಸಿದ್ದರು. ಈ ವೇಳೆ ಬಂಧಿತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಪ್ರಾಣಾಪಾಯದಿಂದ ಉಳಿಸಿದ ಪೊಲೀಸರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದನ್ನೂ ಓದಿ: ಹಿಜಬ್‌ ಧರಿಸದ್ದಕ್ಕೆ ಡಿಬಾರ್‌ – ಇರಾನ್‌ನಲ್ಲಿ ಪ್ರತಿಭಟನೆಗೆ ಧುಮುಕಿದ ಶಾಲಾ ಮಕ್ಕಳು

    2019 ರಲ್ಲೂ ಭಾರತೀಯ ಮೂಲದ ಟೆಕ್ಕಿ ತುಷಾರ್ ಅಟ್ರೆ ಅವರು ಯುಎಸ್‌ನಲ್ಲಿ ಕಿಡ್ನ್ಯಾಪ್‌ ಆಗಿದ್ದರು. ನಂತರ ಗೆಳತಿಯ ಕಾರಿನಲ್ಲಿ ಟೆಕ್ಕಿ ಶವ ಪತ್ತೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • 2 ವಿಮಾನಗಳು ಪರಸ್ಪರ ಡಿಕ್ಕಿ – ಹಲವರು ಸಾವು

    2 ವಿಮಾನಗಳು ಪರಸ್ಪರ ಡಿಕ್ಕಿ – ಹಲವರು ಸಾವು

    ವಾಷಿಂಗ್ಟನ್: 2 ಸಣ್ಣ ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಹಲವರು ಸಾವನ್ನಪ್ಪಿರುವ ಘಟನೆ ಗುರುವಾರ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

    ವ್ಯಾಟ್ಸನ್‌ವಿಲ್ಲೆ ನಗರದ ಸ್ಥಳೀಯ ವಿಮಾನ ನಿಲ್ದಾಣದಲ್ಲಿ 2 ವಿಮಾನಗಳು ಇಳಿಯಲು ಪ್ರಯತ್ನಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ನೆಲೆಸಲು ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಗೊತಬಯ ರಾಜಪಕ್ಸೆ

    ಸಣ್ಣ ವಿಮಾನಗಳಾದ ಡುವಲ್ ಎಂಜಿನ್ ಸೆಸ್ನಾ 340 ಹಾಗೂ ಸಿಂಗಲ್ ಎಂಜಿನ್‌ನ ಸೆಸ್ನಾ 150 ವಿಮಾನಗಳ ನಡುವೆ ಡಿಕ್ಕಿ ನಡೆದಿದೆ. ಒಂದು ವಿಮಾನದಲ್ಲಿ ಇಬ್ಬರು ಇದ್ದು, ಇನ್ನೊಂದು ವಿಮಾನದಲ್ಲಿ ಪೈಲಟ್ ಮಾತ್ರ ಇದ್ದ ಎನ್ನಲಾಗಿದೆ. ಆದರೆ ಘಟನೆಯಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: ಕೊರೋನಾ ಬಳಿಕ ಶಾಲೆಗೆ ಬರುತ್ತಿಲ್ಲ 5 ಸಾವಿರ ಮಕ್ಕಳು!

    ಅಪಘಾತದ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಯುಎಸ್ ಮಿಲಿಟರಿ ವಿಮಾನ ಪತನ- ನಾಲ್ವರ ದುರ್ಮರಣ

    ಯುಎಸ್ ಮಿಲಿಟರಿ ವಿಮಾನ ಪತನ- ನಾಲ್ವರ ದುರ್ಮರಣ

    ಕ್ಯಾಲಿಫೋರ್ನಿಯಾ: ಸೇನಾ ವಿಮಾನವೊಂದು ಪತನಗೊಂಡು ನಾಲ್ವರು ಮೃತಪಟ್ಟ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದ ಇಂಪೀರಿಯಲ್ ಕೌಂಟಿಯಲ್ಲಿ ನಡೆದಿದೆ.

    3ಡಿ ಮೆರೈನ್ ಏರ್‌ಕ್ರಾಫ್ಟ್ ವಿಂಗ್‍ಗೆ ಸೇರಿದ ವಿಮಾನವು ಗ್ಲಾಮಿಸ್ ಬಳಿ ಪತನಗೊಂಡಿದೆ. ಈ ವಿಮಾನದಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಅದರಲ್ಲಿ ನಾಲ್ವರು ಮೃತಪಟ್ಟಿದ್ದು, ಮತ್ತೊಬ್ಬರಿಗಾಗಿ ಹುಡುಕಾಡುತ್ತಿದ್ದಾರೆ. ಮೆಕ್ಸಿಕನ್ ಗಡಿಯಿಂದ ಕೇವಲ 35 ಕಿ.ಮೀ ದೂರದಲ್ಲಿರುವ ಗ್ಲಾಮಿಸ್ ಬಳಿ ವಿಮಾನವು ಪತನಕ್ಕಿಡಾಗಿದ್ದು, ಅದರಲ್ಲಿ ಯಾವುದೇ ಹಾನಿಕಾರಕ ವಸ್ತುಗಳಿರಲಿಲ್ಲ ಎಂದು ಮಿಲಿಟರಿ ಸ್ಪಷ್ಟಪಡಿಸಿದೆ.

    ವಿಮಾನ ಪತನಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಮಾನದಲ್ಲಿ ಪರಮಾಣುವಿನಂತಹ ವಸ್ತಗಳನ್ನು ಹೊಂದಿದ್ದವು ಎಂಬ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಮೆರೈನ್ ಕಾರ್ಪ್ಸ್ ಏರ್ ಸ್ಟೇಷನ್ ಯುಮಾದ ಕ್ಯಾಪ್ಟನ್ ಬ್ರೆಟ್ ವ್ಯಾನಿಯರ್ ಸ್ಪಷ್ಟನೆ ನೀಡಿದ್ದು, ವದಂತಿಗಳನ್ನು ನಿರಾಕರಿಸಿದ್ದಾರೆ. ಇದರ ಜೊತೆಗೆ ಪತನದ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 105 ಗಂಟೆಯಲ್ಲಿ 75 ಕಿ.ಮೀ ಹೆದ್ದಾರಿ ನಿರ್ಮಿಸಿ ಗಿನ್ನಿಸ್ ದಾಖಲೆ ಬರೆದ NHAI

    ಕಳೆದ ವಾರ ಕ್ಯಾಲಿಫೋರ್ನಿಯಾದ ಟ್ರೋನಾದಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿ ನೌಕಾಪಡೆಯ ಪೈಲಟ್ ಸಾವನ್ನಪ್ಪಿದರು. ಇದಾದ ಬಳಿಕ ಇಂದು ಈ ಎರಡನೇ ಮಿಲಿಟರಿ ವಿಮಾನ ಪತನಗೊಂಡಿದೆ. ಇದನ್ನೂ ಓದಿ: ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕರ ಸಮಸ್ಯೆ ಆಲಿಸದ ಸಿಎಂ

  • ಪಾರ್ಟಿ ವೇಳೆ ಗುಂಡಿನ ದಾಳಿ – ಓರ್ವ ಸಾವು, 17 ಮಂದಿಗೆ ಗಾಯ

    ಪಾರ್ಟಿ ವೇಳೆ ಗುಂಡಿನ ದಾಳಿ – ಓರ್ವ ಸಾವು, 17 ಮಂದಿಗೆ ಗಾಯ

    ವಾಷಿಂಗ್ಟನ್: ಪಾರ್ಟಿ ವೇಳೆ ಗುಂಡಿನ ದಾಳಿಯಿಂದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು ಮತ್ತು 17 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದ ಹುಕ್ಕಾ ಲಾಂಜ್‍ನಲ್ಲಿ ನಡೆದಿದೆ.

    ಗುಂಡಿನ ದಾಳಿಯಿಂದ ಅಲೆನ್ ಗ್ರೆಶಮ್ (20) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾಸ್ ಏಂಜಲೀಸ್, ಸಾರ್ಜೆಂಟ್‍ನ ಪೂರ್ವದ ನಗರದಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಶುಕ್ರವಾರ ತಡರಾತ್ರಿ ಸ್ಟ್ರಿಪ್ ಮಾಲ್ ಲಾಂಜ್‍ನ ಹೊರಗಿನ ಪಾರ್ಕಿಂಗ್ ಸ್ಥಳದಲ್ಲಿ ವ್ಯಕ್ತಿಯೊರ್ವ ಗುಂಡು ಹಾರಿಸಿರುವುದು ತಿಳಿದು ಬಂದಿರುವುದಾಗಿ ಸ್ಯಾನ್ ಬರ್ನಾರ್ಡಿನೊ ಪೊಲೀಸ್ ಅಧಿಕಾರಿ ಎಕ್ವಿನೋ ಥಾಮಸ್ ಹೇಳಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಇಳಿಕೆ – ಹೀಗಿದೆ ಇಂದಿನ ದರ

    ಘಟನೆಯಲ್ಲಿ ಗಾಯಗೊಂಡ 8 ಮಂದಿಯನ್ನು ಅಂಬುಲೆನ್ಸ್ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರು ತಮ್ಮ ವಾಹನಲ್ಲಿಯೇ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದೃಷ್ಟವಶಾತ್ ಆಸ್ಪತ್ರೆಯಲ್ಲಿರುವವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ಇದೀಗ ಅಕ್ರಮವಾಗಿ ಬಂದೂಕು ಹೊಂದಿದ್ದ ಶಂಕೆಯ ಮೇಲೆ ಇಬ್ಬರನ್ನು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    100ಕ್ಕೂ ಹೆಚ್ಚು ಮಂದಿ ಸೇರಿದ್ದ ಪಾರ್ಟಿಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಇದರಿಂದ ಬೆಚ್ಚಿಬಿದ್ದ ಜನರು ಪಾರ್ಕಿಂಗ್ ಪ್ರದೇಶಕ್ಕೆ ಬಂದಿದ್ದಾರೆ. ಆದರೂ ಬೆಂಬಿಡದೇ ಆರೋಪಿಗಳು ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಗೆ ರೊಬೋಟಿಕ್ ಅಗ್ನಿಶಾಮಕ ವಾಹನ ಎಂಟ್ರಿ – ಏನೆಲ್ಲಾ ಇದೆ ವಿಶೇಷ?

  • 30ನೇ ವಯಸ್ಸಿಗೆ 47 ಮಕ್ಕಳ ತಂದೆ, ಇನ್ನೂ ಹತ್ತು ಮಕ್ಕಳ ನಿರೀಕ್ಷೆಯಲ್ಲಿದ್ದಾನೆ – ಆದ್ರೆ ಸಿಗ್ತಿಲ್ಲ ಬಾಳ ಸಂಗಾತಿ!

    30ನೇ ವಯಸ್ಸಿಗೆ 47 ಮಕ್ಕಳ ತಂದೆ, ಇನ್ನೂ ಹತ್ತು ಮಕ್ಕಳ ನಿರೀಕ್ಷೆಯಲ್ಲಿದ್ದಾನೆ – ಆದ್ರೆ ಸಿಗ್ತಿಲ್ಲ ಬಾಳ ಸಂಗಾತಿ!

    ವಾಷಿಂಗ್ಟನ್: ಜಗತ್ತಿನಾದ್ಯಂತ 50 ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿರುವ ಯುಎಸ್‌ನ ಕ್ಯಾಲಿಫೋರ್ನಿಯಾದ 30 ವರ್ಷದ ವ್ಯಕ್ತಿಯೊಬ್ಬ ತನ್ನೊಟ್ಟಿಗೆ ಸಹಬಾಳ್ವೆ ನಡೆಸುವ ಸಂಗಾತಿ ಇಲ್ಲ ಎಂಬ ಕೊರಗಿನಲ್ಲಿದ್ದಾನೆ.

    ಹೌದು, ಕೈಲ್‌ ಕಾರ್ಡಿ ಎಂಬ ವ್ಯಕ್ತಿ ಜಗತ್ತಿನಾದ್ಯಂತ 50 ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ. ಆದರೆ ಆ ಮಕ್ಕಳಿಗೆ ಈತ ಜೈವಿಕ ತಂದೆ. ವೀರ್ಯ ದಾನ ಮಾಡಿ ಈ ಮಕ್ಕಳಿಗೆ ತಂದೆಯಾಗಿದ್ದಾನೆ. ಅಷ್ಟೇ ಅಲ್ಲ ಈತ ಇನ್ನೂ 10 ಮಕ್ಕಳ ನಿರೀಕ್ಷೆಯಲ್ಲಿದ್ದಾನೆ. ಆದರೆ ಯಾವುದೇ ಕಾರಣಕ್ಕೂ ತಾನು ವೀರ್ಯ ದಾನ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಭಾರತೀಯನಿಗೆ ಒಲಿಯಿತು ಸಿಐಎಯ ಮೊದಲ ಮುಖ್ಯ ತಂತ್ರಜ್ಞಾನ ಅಧಿಕಾರಿ ಪಟ್ಟ

    ಮಕ್ಕಳನ್ನು ಬಯಸುವ ಮಹಿಳೆಯರಿಗೆ ವೀರ್ಯ ದಾನ ಮಾಡಿ ಆಸರೆಯಾಗಿರುವ ಕೈಲ್‌ ಸ್ವತಃ ಬಾಳ ಸಂಗಾತಿ ಹೊಂದಲು ಈವರೆಗೂ ಸಾಧ್ಯವಾಗಿಲ್ಲ. ಈ ಬಗ್ಗೆ ಕೇಳಿದರೆ, ನನ್ನನ್ನು ಅರ್ಥ ಮಾಡಿಕೊಳ್ಳುವ ಮತ್ತು ನನ್ನನ್ನು ಒಪ್ಪಿ ನಡೆಯುವ ಸಂಗಾತಿ ಇನ್ನೂ ಸಿಕ್ಕಿಲ್ಲ ಎಂದು ಹೇಳುತ್ತಾನೆ.

    ನಾನು ಪ್ರಸ್ತುತ ವೀರ್ಯ ದಾನಕ್ಕಾಗಿ ವಿಶ್ವ ಪ್ರವಾಸದಲ್ಲಿದ್ದೇನೆ. ನನ್ನ ಮಕ್ಕಳನ್ನು ಭೇಟಿಯಾಗುತ್ತೇನೆ. ಇದರಿಂದ ತುಂಬಾ ಸಂತೋಷವಾಗುತ್ತದೆ. ಮಕ್ಕಳೊಂದಿಗೆ ಫೋಟೋ ತೆಗೆದುಕೊಳ್ಳುತ್ತೇನೆ. ಮಕ್ಕಳ ಸುಂದರ ಬದುಕು ನೋಡಿ ಖುಷಿಯೆನಿಸುತ್ತದೆ ಎಂದು ಕೈಲ್‌ ಅಭಿಪ್ರಾಯಪಡುತ್ತಾನೆ. ಇದನ್ನೂ ಓದಿ: ರಷ್ಯಾ ಮುತ್ತಿಗೆ – ಮರಿಯುಪೋಲ್‌ನಿಂದ ನೂರಾರು ಜನರ ಸ್ಥಳಾಂತರ

    ಕೈಲ್ ಎಂಟು ವರ್ಷಗಳ ಹಿಂದೆ ತನ್ನ ವೀರ್ಯವನ್ನು ದಾನ ಮಾಡಲು ಪ್ರಾರಂಭಿಸಿದರು. ಅಂದಿನಿಂದ 1,000 ಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯ ಮಾಡಿದ್ದಾನೆ ಎಂದು ವರದಿಗಳು ಹೇಳಿವೆ. ಇನ್ನೂ 10 ಮಕ್ಕಳ ನಿರೀಕ್ಷೆಯಲ್ಲಿರುವ ಕೈಲ್‌, ತನ್ನ ಸೇವೆಯ ಅಗತ್ಯವಿರುವ ಮಹಿಳೆಯರನ್ನು ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ಸಂಪರ್ಕಿಸುತ್ತಾನೆ.

  • ಚರ್ಚ್‍ನಲ್ಲಿ ತಂದೆಯಿಂದಲೇ ಮಕ್ಕಳ ಕೊಲೆ- ಐವರು ಸಾವು

    ಚರ್ಚ್‍ನಲ್ಲಿ ತಂದೆಯಿಂದಲೇ ಮಕ್ಕಳ ಕೊಲೆ- ಐವರು ಸಾವು

    ಕ್ಯಾಲಿಫೋರ್ನಿಯಾ: ಮೂರು ಮಕ್ಕಳನ್ನು ತಂದೆಯೇ ಗುಂಡಿಕ್ಕಿ ಹತ್ಯೆಗೈದು ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯುಎಸ್ ಚರ್ಚ್‍ನಲ್ಲಿ ನಡೆದಿದೆ.

    ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐದನೇ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ. ಆದರೆ ಆ ವ್ಯಕ್ತಿಯು ಆ ಮನೆಗೆ ಸಂಬಂಧಿಸಿದ ವ್ಯಕ್ತಿಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಮೂವರು ಮಕ್ಕಳು 15 ವರ್ಷದ ಕೆಳಗಿನವರಾಗಿದ್ದಾರೆ ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ ಸಾಜೆರ್ಂಟ್ ರಾಡ್ ಗ್ರಾಸ್‍ಮನ್ ತಿಳಿಸಿದರು. ಇದನ್ನೂ ಓದಿ:  ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ

    ಚರ್ಚ್‍ನಲ್ಲಿ ಈ ಕೃತ್ಯ ನಡೆದಿದ್ದು, ಈ ಬಗ್ಗೆ ಸ್ಥಳೀಯರಿಂದ ಕರೆಬಂದಿದೆ. ಮೂರು ಗಂಡು ಮಕ್ಕಳ ಮೃತದೇಹವನ್ನು ಈಗಾಗಲೇ ಪರಿಶೀಲಿಸಲಾಗಿದೆ. ನಗರದ ಆರ್ಡೆನ್ ಆರ್ಕೇಡ್ ಪ್ರದೇಶದ ಚರ್ಚ್ ಆಫ್ ಸ್ಯಾಕ್ರಮೆಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮತ್ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಕೌಟುಂಬಕ ಸಮಸ್ಯೆಯಿಂದಾಗಿ ಈ ಘಟನೆಯಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಟ್ವಿಟರ್ ಪೋಸ್ಟ್‌ನಲ್ಲಿ ಈ ಕೊಲೆಗಳನ್ನು ಪ್ರಜ್ಞಾಶೂನ್ಯ ಎಂದು ಕರೆದಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ