Tag: calendar

  • ದೇಶ, ವಿದೇಶಿ ಕನ್ನಡಿಗರ ಮನ ಗೆದ್ದಿದೆ ಗದಗ ಕ್ಯಾಲೆಂಡರ್‌, ಪಂಚಾಂಗಗಳು!

    ದೇಶ, ವಿದೇಶಿ ಕನ್ನಡಿಗರ ಮನ ಗೆದ್ದಿದೆ ಗದಗ ಕ್ಯಾಲೆಂಡರ್‌, ಪಂಚಾಂಗಗಳು!

    ಗದಗ: ವರ್ಷ ಬರುತ್ತಿದ್ದಂತೆ ಮುದ್ರಣ ಕಾಶಿಯಲ್ಲಿ ತಯಾರಾಗುವ ಕ್ಯಾಲೆಂಡರ್, ಮಿನಿಡೈರಿ ಹಾಗೂ ತೂಗು ಪಂಚಾಂಗಗಳಿಗೆ ಎಲ್ಲಿಲ್ಲದ ಬೇಡಿಕೆ. ರಾಜ್ಯದಲ್ಲೇ ಅತಿ ಹೆಚ್ಚು ಮುದ್ರಣಾಲಯಗಳನ್ನು ಹೊಂದಿದ ಮುದ್ರಣ ಕಾಶಿ (Mudrana Kashi) ಎಂದೇ ಹೆಗ್ಗಳಿಕೆ ಗದಗ ಜಿಲ್ಲೆ ಪಡೆದುಕೊಂಡಿದೆ.

    ಜಿಲ್ಲೆಯಲ್ಲಿ ಸುಮಾರು ನೂರಾರು ಮುದ್ರಣಾಲಯಗಳು ಹಾಗೂ ಪ್ರಕಾಶನಗಳಿವೆ. ಸ್ವಾತಂತ್ರ್ಯ ಪೂರ್ವದಿಂದಲೂ ಅನೇಕ ಪ್ರಿಂಟಿಂಗ್ ಪ್ರೆಸ್‌ಗಳು (Printing Press) ಇಲ್ಲಿ ಸ್ಥಾಪನೆಯಾಗಿದ್ದವು. ಈ ಪರಂಪರೆ ಈಗಲೂ ಮುಂದುವರಿದಿದ್ದು ನೂರಾರು ಪ್ರಿಂಟಿಂಗ್‌ ಪ್ರೆಸ್‌ಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಂಕೇಶ್ವರ ಪ್ರಿಂಟಿಂಗ್‌ ಪ್ರೆಸ್ (Sankeshwar Printing Press) ಮಾಲಿಕ ಬಿ.ಎಂ ಸಂಕೇಶ್ವರ್‌, ಕ್ಯಾಲೆಂಡರ್, ಮಿನಿಡೈರಿ, ತೂಗು ಪಂಚಾಂಗಗಳಿಗೆ ಗದಗ ಜಿಲ್ಲೆ ಪ್ರಸಿದ್ಧಿ ಪಡೆದಿದೆ. ಹೊಸವರ್ಷ ಬರುವ ಮೂರು ತಿಂಗಳ ಮೊದಲೇ ಇಲ್ಲಿ ಕ್ಯಾಲೆಂಡರ್‌ ಹಾಗೂ ಪಂಚಾಂಗಗಳು ಪ್ರಿಂಟ್ ಆಗುತ್ತವೆ. ರಾಜ್ಯದ ನಾನಾ ಜಿಲ್ಲೆಗಳಿಗೆ ಅಷ್ಟೇ ಅಲ್ಲದೇ ದೇಶ ವಿದೇಶಿ ಕನ್ನಡಿಗರ ಮನೆಗಳಲ್ಲಿ ಗದಗ ಜಿಲ್ಲೆ ಕ್ಯಾಲೆಂಡರ್‌ಗಳು (Calendar) ಮನೆಮಾತಾಗಿವೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್‌ ಸೇನಾ ಕಾರ್ಯಾಚರಣೆ – ಎರಡು ದಿನದಲ್ಲಿ 22 ಉಗ್ರರ ಹತ್ಯೆ, 6 ಯೋಧರ ಸಾವು

    ದಿನಾಂಕ, ತಿಥಿ, ನಕ್ಷತ್ರ, ವಾರ, ರಾಶಿ ಭವಿಷ್ಯ, ಗ್ರಹಣ, ಶುಭ, ಅಶುಭ ಫಲಗಳು, ಮಳೆ, ಜಾತ್ರೆ, ಉತ್ಸವಗಳು, ಜಯಂತಿಗಳು ಸೇರಿದಂತೆ ಇತರೇ ದಿನಚರಿಗಳ ಬಗ್ಗೆ ಅನುಭವಿ ಜೋತಿಷ್ಯರಿಂದ ಮಾಹಿತಿ ಪಡೆದು ಪ್ರಿಂಟ್ ಮಾಡಿಸುತ್ತಾರೆ. ಗದಗ ನಗರದಲ್ಲಿ ಹೆಚ್ಚು ಕಾರ್ಮಿಕರು ಕೆಲಸ ಮಾಡುವುದು ಪ್ರಿಂಟಿಂಗ್‌ ಪ್ರೆಸ್‌ಗಳಲ್ಲಿ ಮಾತ್ರ. ಸಾವಿರಾರು ಕುಟುಂಬಗಳು ಇಲ್ಲಿಯ ಪ್ರಿಂಟಿಂಗ್ ಪ್ರೆಸ್ ಕೆಲಸದಿಂದಲೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲೇ ಮೊದಲ ಬಾರಿಗೆ ಪಂಚಾಂಗ ಮತ್ತು ತೂಗು ಪಂಚಾಂಗ ತಯಾರಾಗಿದ್ದು ಗದಗ ಜಿಲ್ಲೆಯಲ್ಲಿ. ಎಲ್ಲಾ ಜಾತಿ, ಧರ್ಮ, ವರ್ಗದವರಿಗೂ ಪೂರಕವಾಗುವಂತಹ ಪಂಚಾಂಗಗಳು ತಯಾರಾಗುತ್ತವೆ. ದೇಶ ವಿದೇಶಗಳಲ್ಲೂ ಗದಗ ಜಿಲ್ಲೆಯ ಪಂಚಾಂಗಗಳು ಮನೆಮಾತಾಗಿರುವುದು ಹೆಮ್ಮೆಯ ವಿಷಯ ಎನ್ನುತ್ತಿದ್ದಾರೆ ಕೆಲಸಗಾರರು.

    ಗದಗ ಜಿಲ್ಲೆಯಿಂದ ಪ್ರತಿಹೊಸ ವರ್ಷದ ವೇಳೆ ಸುಮಾರು 45 ರಿಂದ 50 ಲಕ್ಷ ರೂ.ವರೆಗೆ ಕ್ಯಾಲೆಂಡರ್ ಹಾಗೂ ಪಂಚಾಂಗ ಮಾರಾಟವಾಗುತ್ತವೆ. ಇಲ್ಲಿಯ ಮುದ್ರಣಾಲಯಗಳಲ್ಲಿ ಕ್ಯಾಲೆಂಡರ್ ಹಾಗೂ ಪಂಚಾಂಗವಷ್ಟೇ ಅಲ್ಲ ಶಾಲಾ-ಕಾಲೇಜುಗಳ ಪಠ್ಯ ಪುಸ್ತಕಗಳು ತಯಾರಾಗುತ್ತವೆ. ಒಟ್ಟಿನಲ್ಲಿ ಗದಗ ಜಿಲ್ಲೆಯಿಂದ ತಯಾರದ ಕ್ಯಾಲೆಂಡರ್, ಪಂಚಾಂಗಗಳು ದೇಶ, ವಿದೇಶಿ ಕನ್ನಡಿಗರ ಮನೆಗಳಲ್ಲಿ ರಾರಾಜಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

  • ಏಕೆ ಬಾಸ್-ಬಾಸ್ ಅಂತಾ ಒದ್ದಾಡ್ತಿರಾ? – ಅಭಿಮಾನಿಗಳಿಗೆ ಬುದ್ಧಿ ಹೇಳಿದ ಶಿವಣ್ಣ

    ಏಕೆ ಬಾಸ್-ಬಾಸ್ ಅಂತಾ ಒದ್ದಾಡ್ತಿರಾ? – ಅಭಿಮಾನಿಗಳಿಗೆ ಬುದ್ಧಿ ಹೇಳಿದ ಶಿವಣ್ಣ

    ಮೈಸೂರು: ನಗರದಲ್ಲಿ ಜ್ವಾಲಾಮುಖಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ (Rajkumar Fans Association) ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ನಟ ಡಾ.ಶಿವರಾಜ್ ಕುಮಾರ್ (Shivarajkumar) 2023ರ ನೂತನ ವರ್ಷದ ಕ್ಯಾಲೆಂಡರ್ (Calendar 2023) ಬಿಡುಗಡೆಗೊಳಿಸಿದರು.

    ಬಳಿಕ ಮಾತನಾಡಿದ ಅವರು, ಎಲ್ಲರಿಗೂ ಬಾಸ್ ಒಬ್ಬರೇ ಅದು ದೇವರು. ಏಕೆ ಬಾಸ್-ಬಾಸ್ ಅಂತಾ ಒದ್ದಾಡ್ತೀರಾ? ಎಂದು ಹೇಳಿದ್ದಾರೆ. ಇದನ್ನೂ ಓದಿ: `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್

    ಎಲ್ಲರ ಮನೆಯಲ್ಲೂ ಒಬ್ಬೊಬ್ಬ ಬಾಸ್ ಇರುತ್ತಾನೆ. ಎಲ್ಲರ ಹೃದಯದಲ್ಲೂ ಒಬ್ಬ ಬಾಸ್ ಇರ್ತಾನೆ. ಅಲ್ಲಿಗೆ ಅವನೇ ಬಾಸ್ ಆಗಿರ್ತಾನೆ. ಅದು ಬಿಟ್ಟು ನಾನೊಬ್ಬ ಬಾಸ್, ಇನ್ನೊಬ್ಬ ಬಾಸ್ ಅನ್ನೋದಲ್ಲ ಎಂದು ಅಭಿಮಾನಿಗಳಿಗೆ ತಿಳುವಳಿಕೆ ನೀಡಿದ್ದಾರೆ. ಇದನ್ನೂ ಓದಿ: `ಕಾಂತಾರ’ ನಮ್ಮ ಕನ್ನಡದ ಹೆಮ್ಮೆ ಎಂದ ಭರಾಟೆ ಬ್ಯೂಟಿ ಶ್ರೀಲೀಲಾ

    ಕಾರ್ಯಕ್ರಮ ಆಯೋಜಕರಾಗಿದ್ದ ಮೈಸೂರು ರಿಫ್ರೆಶ್‌ಮೆಂಟ್ ಮಾಲೀಕ ವಿಶ್ವ ಅವರನ್ನು ನಮ್ಮ ಬಾಸ್ ಅಂದ ಯುವಕನಿಗೆ ಸಲಹೆ ನೀಡುತ್ತಾ, ಅಭಿಮಾನಿಗಳಿಗೂ ಬುದ್ದಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 11-06-2022

    ದಿನ ಭವಿಷ್ಯ: 11-06-2022

    ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಶುಕ್ಲ ಪಕ್ಷ,
    ದ್ವಾದಶಿ,
    ವಾರ: ಶನಿವಾರ,
    ನಕ್ಷತ್ರ: ಸ್ವಾತಿ,
    ರಾಹುಕಾಲ 09:11 ರಿಂದ 10:47
    ಗುಳಿಕಕಾಲ 05:58 ರಿಂದ 07:35
    ಯಮಗಂಡಕಾಲ 01:59 ರಿಂದ 03:35

    ಮೇಷ: ಅಧಿಕ ಧನಾಗಮನ, ಪ್ರೀತಿ-ಪ್ರೇಮ ವಿಶ್ವಾಸಕ್ಕೆ ದ್ರೋಹ, ಮಕ್ಕಳ ನಡತೆಯಿಂದ ಆತಂಕ

    ವೃಷಭ: ವ್ಯವಹಾರದಲ್ಲಿ ಅನುಕೂಲ, ಶತ್ರುಗಳಿಂದ ಮನೋವೇದನೆ, ಸಾಲ ಮಾಡುವ ಸನ್ನಿವೇಶ, ಆರೋಗ್ಯದಲ್ಲಿ ವ್ಯತ್ಯಾಸ

    ಮಿಥುನ: ಪ್ರೀತಿ-ಪ್ರೇಮ ವಿಷಯದಲ್ಲಿ ಆತಂಕ, ಅಧಿಕ ಖರ್ಚು, ಅತಿಯಾದ ವಿಷಯಾಸಕ್ತಿ, ಪರಿಹಾರ ತುಪ್ಪವನ್ನು ದಾನ ಮಾಡಿ

    ಕಟಕ: ಸ್ನೇಹಿತರಿಂದ ಆರ್ಥಿಕ ನಷ್ಟ, ಗುಪ್ತ ವಿಷಯಗಳಿಂದ ಸಮಸ್ಯೆ, ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ

    ಸಿಂಹ: ಉದ್ಯೋಗ ಸ್ಥಳದಲ್ಲಿ ನೋವು, ಬಂಧು ಬಾಂಧವರಿಂದ ಸಮಸ್ಯೆ, ವಿಲಾಸಿ ಜೀವನಕ್ಕೆ ಬಲಿಯಾಗುವಿರಿ

    ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಂತ ಉದ್ಯೋಗದವರಿಗೆ ಅನುಕೂಲ

    ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿ, ಭಾವನೆ ಆಸೆ-ಆಕಾಂಕ್ಷೆಗಳಲ್ಲಿ ವಿಹರಿಸುವವರು, ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ

    ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ಅವಘಡ, ಪ್ರಯಾಣದಿಂದ ನಷ್ಟ, ಉದ್ಯೋಗ ಸ್ಥಳದಲ್ಲಿ ಸಂಶಯ

    ಧನಸ್ಸು: ಅನಾರೋಗ್ಯ ಸಮಸ್ಯೆ, ಸಾಲಭಾದೆ ಮತ್ತು ಶತ್ರು ಕಾಟ, ಭವಿಷ್ಯದ ಚಿಂತೆ ಕಾಡುವುದು, ಬಂಧುಗಳಿಂದ ಲಾಭ

    ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು,ಅಧಿಕ ಖರ್ಚು

    ಕುಂಭ: ಮಕ್ಕಳ ವಾಹನ ಅಭಿಲಾಷೆ, ಪ್ರಯಾಣದಲ್ಲಿ ಶತ್ರು ಕಾಟ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾ ಯೋಗ

    ಮೀನ: ಮಕ್ಕಳಿಂದ ನೋವು, ಬಂಧು ಬಾಂಧವರೊಂದಿಗೆ ಉತ್ತಮ ಬಾಂಧವ್ಯ, ವಿನಾಕಾರಣ ಕಲಹಗಳು, ವೇದಾಂತ ಜ್ಞಾನದ ಬಗ್ಗೆ ಚಿಂತೆ

  • ದಿನ ಭವಿಷ್ಯ: 20-05-2022

    ದಿನ ಭವಿಷ್ಯ: 20-05-2022

    ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ,
    ವಸಂತ ಋತು, ವೈಶಾಖ ಮಾಸ,
    ಕೃಷ್ಣಪಕ್ಷ, ಪಂಚಮಿ,
    ರಾಹುಕಾಲ: 10:44 ರಿಂದ 12:20
    ಗುಳಿಕಕಾಲ: 07:32 ರಿಂದ 09:08
    ಯಮಗಂಡಕಾಲ: 03:31 ರಿಂದ 05:07
    ವಾರ: ಶುಕ್ರವಾರ
    ನಕ್ಷತ್ರ: ಉತ್ತರಾಷಾಡ

    ಮೇಷ: ಮಕ್ಕಳಿಂದ ಅನುಕೂಲ, ಉದ್ಯೋಗದಲ್ಲಿ ನಿರಾಸಕ್ತಿ, ಜೀವನದ ಬಗ್ಗೆ ದೂರದೃಷ್ಟಿ, ಮಾಟ ಮಂತ್ರ ತಂತ್ರದ ಭೀತಿ, ಬಾಲಗ್ರಹ ದೋಷಗಳು, ಅನಾರೋಗ್ಯ, ರಾಜಕೀಯ ವ್ಯಕ್ತಿಗಳಿಂದ ಸಹಾಯ.

    ವೃಷಭ: ತಾಯಿಂದ ಸಹಕಾರ, ವೈರಾಗ್ಯದ ಭಾವ, ವೃತ್ತಿಪರರಿಗೆ ಅನುಕೂಲ, ಸ್ಥಿರಾಸ್ತಿ, ವಾಹನ ಯೋಗ, ದೈವಕಾರ್ಯಗಳು, ಸರ್ಕಾರದಿಂದ ಅನುಕೂಲ, ವಯೋವೃದ್ಧರಿಂದ ಸಹಾಯ, ಕೃಷಿಕರಿಗೆ ಅನುಕೂಲ.

    ಮಿಥುನ: ಅನಗತ್ಯ ಪ್ರಯಾಣ, ಧೈರ್ಯದಿಂದ ಕಾರ್ಯ ಜಯ, ಅನಾರೋಗ್ಯ, ಮನಸ್ತಾಪ, ಉದ್ಯೋಗ ಬದಲಾವಣೆ ಆಲೋಚನೆ, ಆಯುಷ್ಯದ ಭೀತಿ.

    ಕಟಕ: ಆರ್ಥಿಕ ಅನುಕೂಲ, ಸ್ವಯಂಕೃತ ಅಪರಾಧಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಆತುರ ಅಧಿಕ ಕೋಪ ದುಡುಕಿನ ಮಾತು, ಕಣ್ಣಿನಲ್ಲಿ ಸಮಸ್ಯೆ, ವ್ಯಾಪಾರ ವೃದ್ಧಿ, ಅಧಿಕ ಆಹಾರ ಸೇವನೆ.

    ಸಿಂಹ: ಸೋಮಾರಿತನದಿಂದ ಅವಕಾಶ ವಂಚಿತರಾಗುವಿರಿ, ದೀರ್ಘಕಾಲದ ಅನಾರೋಗ್ಯದ ಚಿಂತೆ, ವೃತ್ತಿ ಪ್ರವೃತ್ತಿಯಲ್ಲಿ ಏರಿಳಿತ, ಸ್ವಾಭಿಮಾನದ ದಿನ,
    ಸ್ವತಂತ್ರ ನಿರ್ಧಾರಗಳಿಂದ ಪ್ರಗತಿ, ಕಣ್ಣಿನಲ್ಲಿ ತೊಂದರೆ, ಅಲರ್ಜಿ ಸಮಸ್ಯೆಗಳು, ಹವಾಮಾನ ವ್ಯತ್ಯಾಸ.

    ಕನ್ಯಾ: ದೇವತಾಕಾರ್ಯಗಳಿಗೆ ಖರ್ಚುಗಳು, ಗುಪ್ತ ಮಾರ್ಗದಿಂದ ಕಾರ್ಯಾ ಜಯ, ದೂರ ಪ್ರಯಾಣದ ಯೋಚನೆ, ಪರಸ್ಥಳ ವಾಸ, ಅಧ್ಯಾತ್ಮದ ಆಲೋಚನೆಗಳು, ಜೈಲುವಾಸ ಅಥವಾ ಆಸ್ಪತ್ರೆವಾಸ, ದುಸ್ವಪ್ನಗಳು ನಿದ್ರಾಭಂಗ.

    ತುಲಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಲಾಭದ ಪ್ರಮಾಣ ಅಧಿಕ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆತ್ಮಗೌರವಕ್ಕೆ ಧಕ್ಕೆ, ಅವಕಾಶವಿದ್ದರೂ ಉಪಯೋಗಿಸಿಕೊಳ್ಳುವುದಿಲ್ಲ.

    ವೃಶ್ಚಿಕ: ವ್ಯವಹಾರದಲ್ಲಿ ನಿರಾಸಕ್ತಿ, ಅಧಿಕಾರ ವರ್ಗದವರ ಭೇಟಿ, ಗೌರವ ಮತ್ತು ಅಂತಸ್ತಿನ ಚಿಂತೆ, ಪವಿತ್ರ ಯಾತ್ರಾಸ್ಥಳ ಭೇಟಿಯ ಮನಸ್ಸು, ಸಾಮಾಜಿಕ ಸೇವೆಯಲ್ಲಿ ತೊಡಗುವಿರಿ, ಹಿರಿಯರ ಆಶೀರ್ವಾದ ಪಡೆಯುವಿರಿ.

    ಧನಸ್ಸು: ದೂರ ಪ್ರಯಾಣ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಆಧ್ಯಾತ್ಮಿಕ ಚಿಂತನೆಗಳು, ಮೋಕ್ಷದ ಭಾವ, ಗುಪ್ತ ಮಾರ್ಗಗಳಿಂದ ಆಪತ್ತು, ಪೂಜೆಗಳಲ್ಲಿ ಅಪಚಾರ,ಭವಿಷ್ಯದ ಚಿಂತೆ.

    ಮಕರ: ಗುಪ್ತ ಮಾರ್ಗಗಳಿಂದ ಆಪತ್ತು, ಆಲಸ್ಯತನದಿಂದ ಸಮಸ್ಯೆ, ಗುಪ್ತ ಸಂಪತ್ತಿನ ಆಲೋಚನೆ, ದುರ್ಘಟನೆಗಳ ನೆನಪು, ಸೋಲು ನಷ್ಟ ನಿರಾಸೆ, ಅನಿರೀಕ್ಷಿತ ಧನಾಗಮನ.

    ಕುಂಭ: ದಾಂಪತ್ಯದಲ್ಲಿ ಬೇಸರ, ಪಾಲುದಾರಿಕೆಯ ಮನಸ್ತಾಪ, ವೈವಾಹಿಕ ಜೀವನದ ಚಿಂತೆ, ಪ್ರೀತಿ-ಪ್ರೇಮದಲ್ಲಿ ಸೋಲು, ಅಗೋಚರ ವಿಷಯದ ಚಿಂತೆ.

    ಮೀನ: ಹಿತ ಶತ್ರುಗಳ ಕಾಟ, ದಾಂಪತ್ಯ ಸೌಖ್ಯದಿಂದ ಅಂತರ, ಕೈ ಕಾಲು ನೋವು, ತಾಯಿಯ ಬಂಧುಗಳಿಂದ ಸಮಸ್ಯೆಗಳು, ಅನಾರೋಗ್ಯ,ಸಾಲದ ಚಿಂತೆ, ರಾಜಕೀಯ ವ್ಯಕ್ತಿಗಳ ಭೇಟಿ, ಶತ್ರು ದಮನ.

  • ದಿನ ಭವಿಷ್ಯ: 19-05-2022

    ದಿನ ಭವಿಷ್ಯ: 19-05-2022

    ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ
    ಉತ್ತರಾಯಣ, ವಸಂತ ಋತು
    ವೈಶಾಖ ಮಾಸ
    ರಾಹುಕಾಲ: 01:51 ರಿಂದ 03:27
    ಗುಳಿಕಕಾಲ: 09:04 ರಿಂದ 10:40
    ಯಮಗಂಡಕಾಲ: 05:53 ರಿಂದ 07:29
    ವಾರ: ಗುರುವಾರ
    ತಿಥಿ: ಚೌತಿ
    ನಕ್ಷತ್ರ: ಪೂರ್ವಾಷಾಡ, ಕೃಷ್ಣ ಪಕ್ಷ

    ಮೇಷ: ಆರೋಗ್ಯದಲ್ಲಿ ವ್ಯತ್ಯಯ, ಮಾತಿನಲ್ಲಿ ಎಚ್ಚರಿಕೆ ಇರಲಿ, ಕಾರ್ಮಿಕರಿಗೆ ಶುಭ

    ವೃಷಭ: ಆಭರಣ ವ್ಯಾಪಾರಸ್ಥರಿಗೆ ಲಾಭ, ತಾಂತ್ರಿಕ ಪರಿಣಿತರಿಗೆ ಶುಭ, ಉದ್ಯೋಗಾಕಾಂಕ್ಷಿಗಳಿಗೆ ಅಭಿವೃದ್ಧಿ

    ಮಿಥುನ: ಸೌಹಾರ್ದಯುತ ಮಾತಿರಲಿ, ಕೆಲಸಗಳಲ್ಲಿ ಸಕಾರಾತ್ಮಕತೆ, ಖರ್ಚಿಗೆ ಕಡಿವಾಣ ಹಾಕಿ

    ಕಟಕ: ಅನಾರೋಗ್ಯದ ಸಮಸ್ಯೆ, ವಿದೇಶಿ ಉದ್ಯೋಗಸ್ಥರಿಗೆ ಶುಭ, ಹಿರಿಯರಿಂದ ಸಹಾಯ

    ಸಿಂಹ: ಸರ್ಕಾರದಿಂದ ಧನಸಹಾಯ, ಉತ್ತಮ ಆರ್ಥಿಕ ಸ್ಥಿತಿ, ಅಧಿಕ ಖರ್ಚು

    ಕನ್ಯಾ: ವೈದ್ಯರಿಗೆ ಕಾರ್ಯದೊತ್ತಡ, ಸ್ತ್ರೀಯರಿಗೆ ಶುಭ, ವ್ಯವಹಾರ ನಡೆಸುವಾಗ ಎಚ್ಚರವಿರಲಿ

    ತುಲಾ: ದಾಂಪತ್ಯದಲ್ಲಿ ವಿರಸ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ, ವಕೀಲಿ ವೃತ್ತಿಯಲ್ಲಿ ಶುಭ

    ವೃಶ್ಚಿಕ: ಸಾಧು ಸಂತರ ದರ್ಶನ, ಆಸ್ತಿ ಖರೀದಿಯ ಆಲೋಚನೆ, ಪತ್ರಿಕೋದ್ಯಮದವರಿಗೆ ಶುಭ

    ಧನಸ್ಸು: ಸಲಹೆಗಳನ್ನು ಸ್ವೀಕರಿಸಿ, ಜಮೀನು ಮಾರಾಟದಲ್ಲಿ ಹಿನ್ನಡೆ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ

    ಮಕರ: ಮಾನಸಿಕ ವೇದನೆ, ವಿವಾಹ ಯೋಗ, ವ್ಯಾಸಂಗದಲ್ಲಿ ತೊಂದರೆ

    ಕುಂಭ: ಹಣಕಾಸಿನಲ್ಲಿ ವ್ಯತ್ಯಯ, ತಾಮ್ರದ ವ್ಯಾಪಾರಸ್ಥರಿಗೆ ಬೇಡಿಕೆ, ರೇಷ್ಮೆ ಬೆಳೆಗಾರರಿಗೆ ಲಾಭ

    ಮೀನ: ಸಮಸ್ಯೆಗಳಿಂದ ಮುಕ್ತಿ, ಯೋಜನೆಗೆ ಗಮನ ಹರಿಸಬೇಕು, ಆರ್ಥಿಕತೆಯಲ್ಲಿ ಅಭಿವೃದ್ಧಿ

  • ದಿನ ಭವಿಷ್ಯ: 18-05-2022

    ದಿನ ಭವಿಷ್ಯ: 18-05-2022

    ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ
    ಉತ್ತರಾಯಣ,ವಸಂತ ಋತು
    ವೈಶಾಖ ಮಾಸ,ಕೃಷ್ಣಪಕ್ಷ
    ರಾಹುಕಾಲ : 12.19 ರಿಂದ 1:55
    ಗುಳಿಕಕಾಲ : 10:44 ರಿಂದ 12.19
    ಯಮಗಂಡಕಾಲ : 7.34 ರಿಂದ 9.09
    ವಾರ : ಬುಧವಾರ,
    ತಿಥಿ : ತೃತಿಯ
    ನಕ್ಷತ್ರ : ಜೇಷ್ಠ

    ಮೇಷ: ವ್ಯಾಪಾರದಲ್ಲಿ ಲಾಭ, ಯತ್ನ ಕಾರ್ಯಗಳಲ್ಲಿ ಭಾಗಿ, ದಾನ ಧರ್ಮದಲ್ಲಿ ಆಸಕ್ತಿ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ.

    ವೃಷಭ: ಚಂಚಲ ಮನಸ್ಸು, ಅನಾರೋಗ್ಯ, ಮಾನಸಿಕ ಅಶಾಂತಿ, ಚಿಂತೆಗೆ ಒಳಪಡುವಿರಿ, ಪ್ರವಾಸದಿಂದ ತೊಂದರೆ, ನೌಕರಿಯಲ್ಲಿ ಬಡ್ತಿ.

    ಮಿಥುನ: ಸ್ಥಿರಾಸ್ತಿ ಮಾರಾಟ, ಆದಾಯ ಕಡಿಮೆ ಖರ್ಚು ಜಾಸ್ತಿ, ಮಿತ್ರರಿಂದ ಮನಸ್ತಾಪ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

    ಕಟಕ: ಯಾರನ್ನು ಹೆಚ್ಚಾಗಿ ನಂಬಬೇಡಿ, ವಿವಾಹ ಮಂಗಲಕಾರ್ಯಗಳಲ್ಲಿ ಭಾಗಿ, ಇಷ್ಟಾರ್ಥಸಿದ್ಧಿ, ಆರೋಗ್ಯ ಅಭಿವೃದ್ಧಿ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ.

    ಸಿಂಹ: ಸ್ತ್ರೀ ಲಾಭ, ಅಧಿಕಾರ-ಪ್ರಾಪ್ತಿ, ವಿವಾಹ ಯೋಗ, ವಸ್ತ್ರಾಭರಣ ಖರೀದಿ, ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ.

    ಕನ್ಯಾ: ಅನೇಕ ಜನರಿಗೆ ವಿವಾಹಯೋಗ, ಸುಖ ಭೋಜನ, ಸಮಾಜದಲ್ಲಿ ಗೌರವ, ಯತ್ನ ಕಾರ್ಯಗಳಲ್ಲಿ ಜಯ.

    ತುಲಾ: ಕೈ ಕಾಲಿಗೆ ಪೆಟ್ಟು ಎಚ್ಚರದಿಂದಿರಿ, ಮನಸ್ಸಿಗೆ ಚಿಂತೆ, ವಿಪರೀತ ವ್ಯಸನಗಳು, ಕುಟುಂಬ ಸೌಖ್ಯ, ಆಲಸ್ಯ ಮನೋಭಾವ.

    ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ, ಪೂಜಾ ಕೈಂಕರ್ಯಗಳಲ್ಲಿ ಭಾಗಿ, ದೂರ ಪ್ರಯಾಣ, ಋಣ ಬಾಧೆಯಿಂದ ಮುಕ್ತಿ, ಮಿತ್ರರಲ್ಲಿ ಮನಸ್ತಾಪ, ಸಾಧಾರಣ ಫಲ.

    ಧನಸ್ಸು: ಅಲ್ಪ ಲಾಭ ಅಧಿಕ ಖರ್ಚು, ನಂಬಿದ ಜನರಿಂದ ಅಶಾಂತಿ, ಅಧಿಕಾರ-ಪ್ರಾಪ್ತಿ, ಕೈಹಾಕಿದ ಕೆಲಸ ಕಾರ್ಯಗಳಲ್ಲಿ ವಿಳಂಬ, ಮಿಶ್ರ ಫಲ.

    ಮಕರ: ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ, ಶತ್ರುಗಳನ್ನ ಸದೆಬಡೆಯುವಿರಿ, ಇಲ್ಲಸಲ್ಲದ ತಕರಾರು, ಆಕಸ್ಮಿಕ ಖರ್ಚು.

    ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಮನಸ್ತಾಪ, ಮಕ್ಕಳ ವಿದ್ಯಾಭ್ಯಾಸಕ್ಕೆ ಅಧಿಕ ಖರ್ಚು, ಪರಸ್ಥಳ ವಾಸ, ಮಾತಾಪಿತರಲ್ಲಿ ವಾತ್ಸಲ್ಯ.

    ಮೀನ: ಭೂಲಾಭ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಮಾನಸಿಕ ಅಶಾಂತಿ, ಅಕಾಲ ಭೋಜನ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ರೋಗಬಾಧೆ.