Tag: Calcutta

  • ಬಂಗಾಳಿ ವಲಸೆಗಾರರ ಮೇಲೆ ಹಲ್ಲೆ, ದೌರ್ಜನ್ಯ ಹೆಚ್ಚಳ; ದೀದಿ ನೇತೃತ್ವದಲ್ಲಿ ಪ್ರತಿಭಟನೆ

    ಬಂಗಾಳಿ ವಲಸೆಗಾರರ ಮೇಲೆ ಹಲ್ಲೆ, ದೌರ್ಜನ್ಯ ಹೆಚ್ಚಳ; ದೀದಿ ನೇತೃತ್ವದಲ್ಲಿ ಪ್ರತಿಭಟನೆ

    – ನನ್ನನ್ನೂ ಬಂಧನ ಕೇಂದ್ರಕ್ಕೆ ಹಾಕಿ, ಬಿಜೆಪಿಗರ ಮನೋಭಾವಕ್ಕೆ ನನಗೆ ನಾಚಿಕೆಯಾಗ್ತಿದೆ ಎಂದ ಮಮತಾ

    ಕೋಲ್ಕತ್ತಾ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ವಲಸೆಗಾರರ ಮೇಲೆ ಹಲ್ಲೆ, ದೌರ್ಜನ್ಯ ಹೆಚ್ಚಳ ಹಿನ್ನೆಲೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಕೋಲ್ಕತ್ತಾದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

    ಕೋಲ್ಕತ್ತಾದ ಕಾಲೇಜು ಚೌಕದಿಂದ ಧರ್ಮತಾಲಾದ ಡೊರಿನಾ ಕ್ರಾಸಿಂಗ್‌ನಲ್ಲಿ ಮೆರವಣಿಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿ ಪಕ್ಷದ ಹಿರಿಯ ನಾಯಕರು ದೀದಿಗೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಸಿರಿಯಾ ಮಿಲಿಟರಿ ಹೆಡ್‌ಕ್ವಾಟ್ರಸ್‌ ಮೇಲೆ ಇಸ್ರೇಲ್ ದಾಳಿ – ಲೈವ್‌ನಿಂದಲೇ ಎದ್ದು ಓಡಿದ ಟಿವಿ ಆಂಕರ್

    ಈ ವೇಳೆ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಬಿಜೆಪಿಯು ಬಂಗಾಳಿ ವಲಸೆಗಾರರ (Bengali migrants) ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮೂಲಕ ಚುನಾವಣೆಯಲ್ಲಿ ಅಕ್ರಮವೆಸಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತಷ್ಟು ಬಲ – ವಾಯುಪಡೆಗೆ 3 ಅಪಾಚೆ ಹೆಲಿಕಾಪ್ಟರ್‌, ಪಾಕ್ ಗಡಿಯಲ್ಲಿ ನಿಯೋಜನೆಗೆ ನಿರ್ಧಾರ

    ಬಂಗಾಳಿ ಜನರ ಮೇಲೆ ದೌರ್ಜನ್ಯ ಮಾಡಲು ಬಿಜೆಪಿಗೆ ಯಾವ ಅಧಿಕಾರವಿದೆ. ತಕ್ಷಣವೇ ಈ ಹಿಂಸಾತ್ಮಕ ನೀತಿಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಇದನ್ನು ಹೇಗೆ ನಿಲ್ಲಿಸಬೇಕೆಂದು ನಮಗೆ ಗೊತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಸುಮಾರು 3 ಕಿ.ಮೀವರೆಗೆ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದರು. ಈ ವೇಳೆ ಭದ್ರತೆಗೆ ಸುಮಾರು 1,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ನಟಿಗೆ ಒಂದು ವರ್ಷ ಜೈಲೇ ಗತಿ!

    ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಅವರ ಭೇಟಿಗೆ ಒಂದು ದಿನ ಮುಂಚಿತವಾಗಿ ರಾಜ್ಯದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಸಾವಿರಾರು ಟಿಎಂಸಿ ಕಾರ್ಯಕರ್ತರು ಭಾಗಿಯಾಗಿದ್ದರು.

  • ಮುರ್ಷಿದಾಬಾದ್ ಹಿಂಸಾಚಾರ| ಬಿಜೆಪಿ, ಬಿಎಸ್‌ಎಫ್ ಕೈವಾಡವಿದೆ: ಮಮತಾ ಬ್ಯಾನರ್ಜಿ

    ಮುರ್ಷಿದಾಬಾದ್ ಹಿಂಸಾಚಾರ| ಬಿಜೆಪಿ, ಬಿಎಸ್‌ಎಫ್ ಕೈವಾಡವಿದೆ: ಮಮತಾ ಬ್ಯಾನರ್ಜಿ

    -ಮೃತ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

    ಕೋಲ್ಕತ್ತಾ: ಮುರ್ಷಿದಾಬಾದ್ (Murshidabad) ಹಿಂಸಾಚಾರವು ಪೂರ್ವ ಯೋಚಿತವಾಗಿದ್ದು, ಇದರಲ್ಲಿ ಬಿಜೆಪಿ ಹಾಗೂ ಬಿಎಸ್‌ಎಫ್‌ನ ಕೈವಾಡವಿದೆ ಎಂದು ಪಶ್ಚಿಮ ಬಂಗಾಳ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಗಂಭೀರ ಆರೋಪಿಸಿದ್ದಾರೆ.

    ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂಸಾಚಾರದಲ್ಲಿ ಬಾಂಗ್ಲಾದೇಶ (Bangladesh) ಭಾಗಿಯಾಗಿದೆ ಎಂಬ ಗೃಹ ಸಚಿವಾಲಯದ ಟ್ವೀಟ್ ಅನ್ನು ಗಮನಿಸಿದೆ. ಗಡಿಯನ್ನು ಕಾಪಾಡುವ ಜವಾಬ್ದಾರಿಯು ಬಿಎಸ್‌ಎಫ್ (BSF) ಮತ್ತು ಕೇಂದ್ರ ಸರ್ಕಾರದ್ದಾಗಿದೆ. ಇದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲ ಎಂದು ದೂರಿದರು. ಇದನ್ನೂ ಓದಿ: ಕ್ಯಾಬಿನೆಟ್ ಸಭೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಆಗೋ ಸಮಸ್ಯೆ ಬಗ್ಗೆ ಚರ್ಚೆ: ಎಂ.ಬಿ ಪಾಟೀಲ್

    ಬಾಂಗ್ಲಾದೇಶದಿಂದ ಗಡಿ ನುಸುಳುವಿಕೆಗೆ ಅವಕಾಶ ನೀಡುವ ಮೂಲಕ ಬಿಎಸ್‌ಎಫ್, ಕೇಂದ್ರ ಸಂಸ್ಥೆಗಳು ಹಾಗೂ ಬಿಜೆಪಿಯ ಕೆಲವರು ಶಾಂತಿಯನ್ನು ಕದಡಲು ನೆರವು ನೀಡುತ್ತಿದ್ದಾರೆ. ಬಿಎಸ್‌ಎಫ್‌ನ ಕೆಲವರು ಈ ಘಟನೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಕೆಲವು ಮೂಲಗಳು ನನಗೆ ಮಾಹಿತಿ ನೀಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: Don 3: ಕಿಯಾರಾ ಬದಲು ರಣವೀರ್ ಸಿಂಗ್‌ಗೆ ನಾಯಕಿಯಾಗಲಿದ್ದಾರೆ ಶಾರ್ವರಿ

    ವಕ್ಫ್ ತಿದ್ದುಪಡಿ ಕಾಯ್ದೆಯು ದೇಶವನ್ನು ವಿಭಜಿಸುತ್ತದೆ. ಹೀಗಾಗಿ ಇದನ್ನು ಜಾರಿಗೊಳಿಸದಂತೆ ನಾನು ಪ್ರಧಾನಿ ನರೇಂದ್ರ ಮೋದಿಯವರಲ್ಲಿ (Narendra Modi) ಮನವಿ ಮಾಡಿಕೊಳ್ಳುತ್ತಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಎಲ್ಲಾ ಕೇಂದ್ರ ಸಂಸ್ಥೆಗಳನ್ನು ನಿಯಂತ್ರಿಸುತ್ತಿದ್ದಾರೆ. ಅಮಿತ್ ಶಾ ಅವರು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ರಾಷ್ಟ್ರಕ್ಕೆ ಹಾನಿ ಮಾಡಿದ್ದಾರೆ. ಅವರನ್ನು ನಿಯಂತ್ರಿಸಿ, ನಿಗಾ ಇಡುವಂತೆ ಪ್ರಧಾನಿ ಅವರಿಗೆ ಒತ್ತಾಯಿಸಿದರು. ಇದನ್ನೂ ಓದಿ: ಮುಸ್ಲಿಮರು ಹಿಂದೂ ಮಂಡಳಿಗಳ ಭಾಗವಾಗಲು ಅವಕಾಶ ನೀಡುತ್ತೀರಾ – ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

    ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದರು. ಅಲ್ಲದೇ ಹಿಂಸಾಚಾರದಲ್ಲಿ ಬಿಎಸ್‌ಎಫ್‌ನ ಕೈವಾಡದ ಬಗ್ಗೆ ತನಿಖೆ ಆರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

  • ಕೋಲ್ಕತ್ತಾ ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ: ಸಿಬಿಐ ವರದಿ

    ಕೋಲ್ಕತ್ತಾ ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ: ಸಿಬಿಐ ವರದಿ

    ಕೋಲ್ಕತ್ತಾ: ಇಲ್ಲಿನ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು (RG Kar Medical College) ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಕೇಂದ್ರ ತನಿಖಾ ದಳವು (CBI) ಕೋಲ್ಕತ್ತಾ ಹೈಕೋರ್ಟ್‌ಗೆ (Calcutta High Court) ವರದಿ ಸಲ್ಲಿಸಿದೆ.

    ಕೋಲ್ಕತ್ತಾದ ಹೈಕೋರ್ಟ್‌ನ ಏಕಸದಸ್ಯ ಪೀಠವು ಹಿಂದಿನ ವಿಚಾರಣೆಯ ಸಮಯದಲ್ಲಿ ಟ್ರೈನಿ ವೈದ್ಯೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆಯೇ ಎಂದು ಸ್ಪಷ್ಟಪಡಿಸಲು ಸಿಬಿಐಗೆ ತಿಳಿಸಿತ್ತು. ಈ ಪ್ರಕರಣದ ಆರೋಪಿ ಸಂಜಯ್ ರಾಯ್‌ಗೆ ಕೋರ್ಟ್ ಈ ಹಿಂದೆಯೇ ಜೀವಾವಧಿ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: Myanmar Earthquake: ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ 60 ಸಾವು, 250 ಮಂದಿಗೆ ಗಾಯ

    ನ್ಯಾ. ತೀರ್ಥಂಕರ ಘೋಷ್ ಅವರು, ಅತ್ಯಾಚಾರ ಪ್ರಕರಣದಲ್ಲಿ ಒಬ್ಬರು ಅಥವಾ ಹೆಚ್ಚಿನವರು ಭಾಗಿಯಾಗಿದ್ದಾರೆಯೇ ಎಂದು ತನಿಖೆ ಮಾಡಲು ಸಿಬಿಐಗೆ ಸೂಚಿಸಿದ್ದರು. ಇದೀಗ ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಸಿಬಿಐಯು, ಟ್ರೈನಿ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: Photo Gallary: ಮ್ಯಾನ್ಮಾರ್‌, ಥೈಲ್ಯಾಂಡ್‌ನಲ್ಲಿ ಡೆಡ್ಲಿ ಭೂಕಂಪ – ಭೀಕರ ದೃಶ್ಯಗಳನ್ನು ಫೋಟೊಗಳಲ್ಲಿ ನೋಡಿ..

    ಮೃತ ವೈದ್ಯೆಯ ಪೋಷಕರು, ಸಿಬಿಐಯು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ. ಸರಿಯಾಗಿ ತನಿಖೆ ಮಾಡಿದ್ದರೆ, ಇನ್ನೂ ಹಲವರ ಬಂಧನವಾಗಿ ಶಿಕ್ಷೆಯಾಗುತ್ತಿತ್ತು ಎಂದು ಆರೋಪಿಸಿದ್ದರು. ಇದನ್ನೂ ಓದಿ: ವಿಜಯಲಕ್ಷ್ಮಿ ಅಕ್ಕ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು: ದರ್ಶನ್‌ ಕೇಸ್‌ ಬಗ್ಗೆ ಧನ್ವೀರ್ ಮಾತು

    2024 ಆಗಸ್ಟ್ 9ರಂದು ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನ ನಾಲ್ಕನೇ ಮಹಡಿಯಲ್ಲಿ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆ ಅರೆಬೆತ್ತಲೆ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಸಂತ್ರಸ್ತೆ ಲೈಂಗಿಕ ದೌರ್ಜನ್ಯದಿಂದಾಗಿ ಬಾಹ್ಯ ಮತ್ತು ಆಂತರಿಕ ಗಾಯ ಮಾಡಿ ಕೊಲೆ ಮಾಡಲಾಗಿದೆ ಎಂದು ತಿಳಿದಿತ್ತು.

  • ಪರೀಕ್ಷೆ ಬರೆಯಲು ಬಾರದ ವಿದ್ಯಾರ್ಥಿಗಳು – ಕೊನೇ ಕ್ಷಣದಲ್ಲಿ ಎಂಬಿಬಿಎಸ್ ಎಕ್ಸಾಮ್ ಕ್ಯಾನ್ಸಲ್

    ಪರೀಕ್ಷೆ ಬರೆಯಲು ಬಾರದ ವಿದ್ಯಾರ್ಥಿಗಳು – ಕೊನೇ ಕ್ಷಣದಲ್ಲಿ ಎಂಬಿಬಿಎಸ್ ಎಕ್ಸಾಮ್ ಕ್ಯಾನ್ಸಲ್

    ಕೋಲ್ಕತ್ತಾ: ಕೊರೊನಾ ಕೇಸ್‌ಗಳ ಹೆಚ್ಚಳದಿಂದಾಗಿ ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.

    ಪರೀಕ್ಷಾ ಸಿಬ್ಬಂದಿ ಸೋಮವಾರ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನಾಪತ್ರಿಕೆಯೊಂದಿಗೆ ಹಾಜರಿದ್ದರೂ ವೈದ್ಯಕೀಯ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ಬಂದಿರಲಿಲ್ಲ. ಪರೀಕ್ಷಾರ್ಥಿಗಳು ಅರ್ಧಗಂಟೆ ಕಾದ ಬಳಿಕ ಇಂದಿನ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇದನ್ನೂ ಓದಿ: ಹಿಮಾಲಯಕ್ಕೆ ಚಾರಣ ಹೋದ ಬೆಂಗ್ಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ನಾಪತ್ತೆ

    ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಕಾರಣ ವಿದ್ಯಾರ್ಥಿಗಳು ಪರೀಕ್ಷೆಯನ್ನು ಮುಂದೂಡಬೇಕು ಇಲ್ಲವೇ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಸ್ತುತ ಕೋಲ್ಕತ್ತಾ ವೈದ್ಯಕೀಯ ಕಾಲೇಜಿನ 14 ವಿದ್ಯಾರ್ಥಿಗಳು ಕೋವಿಡ್‌ಗೆ ಒಳಗಾಗಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಸರ್ಕಾರ ಬಹುತೇಕ ಪತನ – ಸುಪ್ರೀಂ ಕೋರ್ಟ್‍ನಲ್ಲಿ ಬಹುಮತ ಕಳೆದುಕೊಂಡಿದೆ ಎಂದ ಬಂಡಾಯ ಶಾಸಕರು

    ಮಂಗಳವಾರ 3ನೇ ಸೆಮಿಸ್ಟರ್‌ನ ಎಂಬಿಬಿಎಸ್ ಪರೀಕ್ಷೆ ನಡೆಯಲಿದ್ದು, ಕೊರೊನಾ ಪಾಸಿಟಿವ್ ಇರುವವರಿಗೆ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಾಕಿ ವಿದ್ಯಾರ್ಥಿಗಳಿಗೆ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಬಳಿಕವೇ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ.

    Live Tv

  • ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ವೇಳೆ ಬಾಂಬ್ ಸ್ಫೋಟ

    ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ವೇಳೆ ಬಾಂಬ್ ಸ್ಫೋಟ

    ಕೋಲ್ಕತ್ತಾ: ಮುನ್ಸಿಪಲ್ ಕಾರ್ಪೋರೇಷನ್‍ಗೆ ಚುನಾವಣೆ ನಡೆಯ ವೇಳೆ ಕೋಲ್ಕತ್ತಾದ ಸೀಲ್ದಾಹ್ ಪ್ರದೇಶದ ಮತಗಟ್ಟೆಯ ಹೊರಗೆ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ.

    ಈ ಘಟನೆಯಲ್ಲಿ ಮೂವರು ಮತದಾರರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ ಒಬ್ಬರು ಕಾಲು ಕಳೆದುಕೊಂಡಿದ್ದು, ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಗಾಯಗೊಂಡ ಮೂವರು ಇದೇ ಕ್ಷೇತ್ರದದ ಮತದಾರರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಘಟನೆಯ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

    ಮತದಾನದ ಹಿನ್ನೆಲೆಯಲ್ಲಿ ಕೋಲ್ಕತ್ತಾ ನಗರದಲ್ಲಿ 23,000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸುಮಾರು ಸಂಜೆ 5 ಗಂಟೆಯವರೆಗೆ ಮತದಾನ ನಡೆದಿತ್ತು

  • ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಆದೇಶ

    ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಆದೇಶ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ ನಡೆದ ಹಿಂಸೆಯ ಕುರಿತು ಸಿಬಿಐ ತನಿಖೆ ನಡೆಸಲು ಕೋಲ್ಕತ್ತಾ ಹೈಕೋರ್ಟ್ ಆದೇಶ ನೀಡಿದೆ.

    ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆ ಸಿಬಿಐ ನಡೆಸಲಿದ್ದು, ಇನ್ನುಳಿದ ಪ್ರಕರಣಗಳ ತನಿಖೆಯನ್ನು ಎಸ್‍ಐಟಿ ನಡೆಸಬೇಕು. ಇದರ ಜೊತೆಗೆ ಪ್ರಕರಣದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕೆಂದು ಆದೇಶಿಸಿದೆ.

    ರಾಜ್ಯ ಸರ್ಕಾರಕ್ಕೆ ‘ಹೈ’ ಚಾಟಿ:
    ನ್ಯಾಯಾಲಯ ಸಿಬಿಐ ಮತ್ತು ಎಸ್‍ಐಟಿ ಆರು ವಾರಗಳಲ್ಲಿ ತನಿಖೆಯ ವರದಿ ನೀಡುವಂತೆ ಹೇಳಿದೆ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಲು ವಿಫಲವಾಗಿದ್ದು, ಚುನಾವಣಾ ಆಯೋಗ ಉತ್ತಮವಾಗಿ ಕೆಲಸ ಮಾಡಬಹುದಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕೋಲ್ಕತ್ತಾದ ಪೊಲೀಸ್ ಕಮೀಷನರ್ ಸೋಮೆನ್ ಮಿತ್ರಾ ತನಿಖೆಯ ಭಾಗವಾಗಲಿದ್ದಾರೆ.

    ಪೊಲೀಸರು ಹೇಳಿದ್ದು 17 ಸಾವು:
    ರಾಜಕೀಯ ಹಿಂಸಾಚಾರದಲ್ಲಿ ಒಟ್ಟು 17 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದರು. ಆದ್ರೆ 17ಕ್ಕಿಂತ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದಾದ ಬಳಿಕ ಹಿಂಸಾಚಾರದ ಕುರಿತು ಸಮೀಕ್ಷೆ ನಡೆಸಿ ಬಿಜೆಪಿ ವರದಿ ಸಿದ್ಧಪಡಿಸಿತ್ತು. ಈ ವರದಿಯಲ್ಲಿ ಹಿಂಸೆ, ಕೊಲೆ, ದರೋಡೆ ಮತ್ತು ಬೆಂಕಿ ಹಾಕಿದ ಒಟ್ಟು 273 ಘಟನೆಗಳು ನಡೆದಿವೆ ಎಂದ ಆರೋಪಿಸಿತ್ತು. ಇದನ್ನೂ ಓದಿ: ಮೂರನೇ ಬಾರಿ ಬಂಗಾಳದ ಗದ್ದುಗೆ ಏರಿದ ಮಮತಾ ಬ್ಯಾನರ್ಜಿ

    ಏಪ್ರಿಲ್-ಮೇನಲ್ಲಿ ಚುನಾವಣೆ ನಡೆದ ಬಳಿಕ ಅಂದ್ರೆ ಫಲಿತಾಂಶದ ದಿನ ಕೋಲ್ಕತ್ತಾದ ಬಿಜೆಪಿ ಕಚೇರಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಾಕಲಾಗಿತ್ತು. ಈ ಘಟನೆ ನಡೆದ ಮರುದಿನವೇ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ ಸಾವು-ನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿತ್ತು. ತಮ್ಮ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು ಆರೋಪಿಸಿದ್ದ ವಿಪಕ್ಷ, ಗೃಹ ಸಚಿವಾಲಯದಿಂದ ಪ್ರಕರಣದ ವರದಿಯನ್ನು ಕೇಳಿತ್ತು. ಇದನ್ನೂ ಓದಿ:  ಪಶ್ಚಿಮ ಬಂಗಾಳದಲ್ಲಿ ಮತ್ತಷ್ಟು ಹಿಂಸಾಚಾರ – ಕೇಂದ್ರ ಸಚಿವರ ಕಾರಿನ ಗಾಜು ಪುಡಿಪುಡಿ

    NHRC ಹೇಳಿದ್ದೇನು?:
    ಜುಲೈ 13ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೋಲ್ಕತ್ತಾ ಹೈಕೋರ್ಟಿಗೆ ತನ್ನ ವರದಿಯನ್ನು ಸಲ್ಲಿಸಿತ್ತು. ಬಂಗಾಳದಲ್ಲಿ ಕಾನೂನುಗಳ ಪಾಲನೆ ಆಗುತ್ತಿಲ್ಲ. ಆದ್ರೆ ನಾಯಕ ಕಾನೂನು ಚಲಾಯಿಸುತ್ತಾನೆ. ಬಂಗಾಳದಲ್ಲಿ ನಡೆದ ಹಿಂಸೆಯ ಪ್ರಕರಣಗಳ ತನಿಖೆ ರಾಜ್ಯದ ಹೊರಗಿನವರಿಂದ ನಡೆಯಬೇಕಿದೆ ಎಂದು ಹೇಳಿತ್ತು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: ಕಚ್ಚಾ ಬಾಂಬ್, ಗುಂಡಿನ ದಾಳಿಗೆ ಇಬ್ಬರ ಸಾವು

    ಮಾನವ ಹಕ್ಕುಗಳ ಆಯೋಗ ವರದಿಯಲ್ಲಿನ ಪ್ರಮುಖ ಅಂಶಗಳು:
    1. ಚುನಾವಣೆ ನಂತರ ಬಂಗಾಳದಲ್ಲಿ ನಡೆದ ಹಿಂಸಾಚಾರದ ಕುರಿತು ಸಿಬಿಐ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಕೊಲೆ, ಅತ್ಯಾಚಾರದಂತೆ ಗಂಭೀರ ಪ್ರಮಾಣದ ಕೃತ್ಯಗಳ ಕುರಿತ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ.
    2. ಬಂಗಾಳದ ಬಡೇ ಪೈಮಾನ್ ನಲ್ಲಿ ನಡೆದ ಹಿಂಸೆ ಕಾಣುತ್ತಿದೆ. ಆದ್ರೆ ರಾಜ್ಯ ಸರ್ಕಾರ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ಹೊಂದಿದೆ.
    3. ಅಧಿಕಾರಕ್ಕೆ ಬಂದ ಪಕ್ಷದ ಬೆಂಬಲದಿಂದಲೇ ಈ ಕೃತ್ಯಗಳು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಚುನಾವಣೆಯಲ್ಲಿ ಬೇರೆ ಪಕ್ಷ ಬೆಂಬಲಿಸಿದವರ ಮೇಲೆಯೇ ದೌರ್ಜನ್ಯಗಳು ನಡೆದಿವೆ.
    4. ರಾಜ್ಯ ಸರ್ಕಾರ ಕೆಲ ಇಲಾಖೆಗಳು ಮತ್ತು ಅಧಿಕಾರಿಗಳು ಹಿಂಸಾಚಾರಕ್ಕೆ ಮೂಕ ಪ್ರೇಕ್ಷಕರಾಗಿದ್ದರು. ಇನ್ನೂ ಕೆಲ ಅಧಿಕಾರಿಗಳೇ ಈ ಹಿಂಸಾಚಾರದಲ್ಲಿ ಭಾಗಿಯಾಗಿರುವ ಅನುಮಾನಗಳು ವ್ಯಕ್ತವಾಗಿವೆ.