Tag: Cactus

  • ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡ್ತಿದ್ದ ಒಂಟಿ ಕಳ್ಳಿ ಅರೆಸ್ಟ್

    ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡ್ತಿದ್ದ ಒಂಟಿ ಕಳ್ಳಿ ಅರೆಸ್ಟ್

    ಬೆಂಗಳೂರು: ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಒಂಟಿ ಕಳ್ಳಿಯೊಬ್ಬಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

    ಜಯಂತಿ ಅಲಿಯಾಸ್ ಕುಟ್ಟಿಯಮ್ಮ ಬಂಧಿತ ಕಳ್ಳಿ. ಈಕೆ ನಗರದಲ್ಲಿ ಒಟ್ಟು 23 ಕಡೆ ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದಾಳೆ. ಕಳ್ಳಿಯು ಮೊದಲಿಗೆ ಬೀಗ ಹಾಕಿದ್ದ ಮನೆಗಳನ್ನು ಗುರುತಿಸುತ್ತಿದ್ದಳು. ಬಳಿಕ ಒಂಟಿಯಾಗಿ ಮನೆಗಳಿಗೆ ಪ್ರವೇಶ ನೀಡಿ, ಮನೆ ಬಾಗಿಲಿನ ಬೀಗ ಒಡೆದು ಕಳ್ಳತನ ಮಾಡುತ್ತಿದ್ದಳು. ಇದನ್ನೂ ಓದಿ: ಬಹುಕಾಲದ ಗೆಳೆಯ ದೇವರಾಜ್ ಭೇಟಿಯಾಗಿ ಭಾವುಕರಾದ ಜಗ್ಗೇಶ್

    ಈಕೆ ಒಂದೇ ಏರಿಯಾದಲ್ಲಿ ಎರಡು ಕಳ್ಳತನ ಮಾಡಿದ್ದಳು. ಈ ವೇಳೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ವೇಳೆ ಇದು ಕಳ್ಳಿ ಜಯಂತಿ ಎಂಬುದು ಪತ್ತೆಯಾಗಿದೆ. ಜಯಂತಿಯನ್ನು ಬಂಧಿಸಿದ ನಂತರ ಮತ್ತೆ ಎರಡು ಹೊಸ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

    ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಸೆಮಿಸ್ಟರ್ ಪರೀಕ್ಷೆಗೆ ಗೈರು

  • 6 ಜೊತೆ ಬೆಳ್ಳಿ ಕಾಲುಂಗುರ ಕದ್ರು ಕಳ್ಳಿಯರು

    6 ಜೊತೆ ಬೆಳ್ಳಿ ಕಾಲುಂಗುರ ಕದ್ರು ಕಳ್ಳಿಯರು

    ಚಿಕ್ಕಬಳ್ಳಾಪುರ: ನಗರದ ಚಿನ್ನದಂಗಡಿಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ನಿನ್ನೆಯಷ್ಟೇ ಚೆಮ್ಮನೂರ್ ಜ್ಯುವೆಲ್ಲರ್ಸ್ ದರೋಡೆ ಮಾಡಿದ್ರೆ ರವಿವಾರ ನಗರದ ತಿರುಮಲ ಜ್ಯುವೆಲ್ಲರ್ಸ್‍ನಲ್ಲಿ ಕಳ್ಳಿಯರು ತಮ್ಮ ಕೈಚಳಕ ತೋರಿದ್ದಾರೆ.

    ಹೌದು ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿ ಬಜಾರ್‍ನಲ್ಲಿರುವ ತಿರುಮಲ ಜ್ಯುವೆಲ್ಲರ್ಸ್‍ಗೆ ಬಂದ ನಾಲ್ವರು ಕಳ್ಳಿಯರು 6 ಜೊತೆ ಬೆಳ್ಳಿ ಕಾಲುಂಗರಗಳನ್ನ ಕಳ್ಳತನ ಮಾಡಿದ್ದಾರೆ.

    ನಾಲ್ವರು ಮಹಿಳೆಯರಲ್ಲಿ ಇಬ್ಬರು ಮಹಿಳೆಯರು ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಉಳಿದ ಇಬ್ಬರು ಮಹಿಳೆಯರು ಕುಳಿತುಕೊಂಡಿದ್ದಾರೆ. ಈ ವೇಳೆ ಮಾಲೀಕನ ಗಮನ ಬೇರೆಡೆ ಸೆಳೆದಿದ್ದರಿಂದ ಇಬ್ಬರು ವ್ಯಾಪಾರದ ತರ ಮಾತು ಆಡುತ್ತಲೇ ಬೆಳ್ಳಿ ಕಾಲು ಚೈನುಗಳನ್ನ ಕೆಳಗೆ ಬಿಸಾಡಿದ್ದು, ಅವುಗಳನ್ನು ಅಂಗಡಿಯಲ್ಲಿ ಕೂತಿದ್ದ ಇಬ್ಬರು ಮಹಿಳೆಯರು ಎತ್ತಿಕೊಂಡು ಕಳವು ಮಾಡಿದ್ದಾರೆ.

    ಇನ್ನೂ ಕಳವು ಮಾಡಿದ ಬೆಳ್ಳಿ ಕಾಲು ಚೈನುಗಳನ್ನ ಎತ್ತಕೊಂಡು ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದ್ರೆ ಕಾಲು ಚೈನುಗಳು ಕಡಿಮೆ ಇದ್ದ ಕಾರಣ ಅನುಮಾಮಗೊಂಡ ಮಾಲೀಕ ಅಂಗಡಿಯಲ್ಲೇ ಉಳಿದ ಇಬ್ಬರನ್ನ ಪ್ರಶ್ನೆ ಮಾಡಿದಾಗ ಕಳ್ಳತನ ಮಾಡಿದ ಪ್ರಕರಣ ಬಯಲಾಗಿದೆ.

    ಹೀಗಾಗಿ ಇಬ್ಬರು ಕಳ್ಳಿಯರನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ. ಇನ್ನಿಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಅಂದ ಹಾಗೆ ಪೊಲೀಸರ ಬಳಿ ತಾವು ಗೌನಿಪಲ್ಲಿ ಮೂಲದವರು ತಮ್ಮ ಹೆಸರು ಶ್ವೇತಾ ಹಾಗೂ ಲಕ್ಷ್ಮೀದೇವಮ್ಮ ಅಂತ ತಿಳಿಸಿದ್ದು, ಪರಾರಿಯಾದ ಮತ್ತೊಬ್ಬರು ನಿರ್ಮಲಮ್ಮ ಹಾಗೂ ಶಾರದ ಅಂತ ತಿಳಿಸಿದ್ದಾರೆ. ಇನ್ನೂ ಈ ಕಳ್ಳಿಯರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    https://youtu.be/WM-UpC-IpOE