Tag: Cable operator

  • ಕೇಬಲ್ ಹಾಕಲು ಹೋದಾಗ ಲವ್ – ಪ್ರೇಯಸಿ ಭೇಟಿ ಆಗಲ್ಲ ಎಂದಿದ್ದಕ್ಕೆ 2 ಮಕ್ಳ ತಂದೆ ನೇಣಿಗೆ

    ಕೇಬಲ್ ಹಾಕಲು ಹೋದಾಗ ಲವ್ – ಪ್ರೇಯಸಿ ಭೇಟಿ ಆಗಲ್ಲ ಎಂದಿದ್ದಕ್ಕೆ 2 ಮಕ್ಳ ತಂದೆ ನೇಣಿಗೆ

    ನವದೆಹಲಿ: ವಿವಾಹಿತ ವ್ಯಕ್ತಿಯೊಬ್ಬ ತಾನು ಪ್ರೀತಿಸಿದ ಯುವತಿ ಭೇಟಿಯಾಗಲು ನಿರಾಕರಿಸಿದ್ದಕ್ಕೆ ನೇಣಿಗೆ ಶರಣಾಗಿರುವ ಘಟನೆ ದೆಹಲಿಯ ಟೈಗ್ರಿ ಪ್ರದೇಶದಲ್ಲಿ ನಡೆದಿದೆ.

    ದೆಹಲಿಯ ಟೈಗ್ರಿ ಪ್ರದೇಶದ ನಿವಾಸಿ ಲಕ್ಷ್ಮಿ ನಾರಾಯಣ್ (36) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಾರಾಯಣ್ ಸಂಗಮ್ ವಿಹಾರ್ ಆಫೀಸ್‍ನಲ್ಲಿ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು. 16 ವರ್ಷದ ಹಿಂದೆ ವಿವಾಹವಾಗಿದ್ದ ನಾರಾಯಣ್‍ಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಪತ್ನಿ ಇದ್ದರೂ ಬೇರೆ ಯುವತಿಯ ಸಹವಾಸ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕೆಲ ತಿಂಗಳ ಹಿಂದೆ ನಾರಾಯಣ್ ಯುವತಿಯ ಮನೆಗೆ ಕೇಬಲ್ ಹಾಕಲು ಹೋಗಿದ್ದನು. ಆಗ ಯುವತಿ ಜೊತೆ ನಾರಾಯಣ್‍ಗೆ ಸ್ನೇಹವಾಗಿದೆ. ಯುವತಿ ಜೊತೆ ತುಂಬ ಸಲುಗೆ ಬೆಳಸಿಕೊಂಡಿದ್ದ ನಾರಾಯಣ್ ದಿನಾ ವಾಟ್ಸಾಪ್‍ನಲ್ಲಿ ಆಕೆ ಬಳಿ ಮಾತನಾಡುತ್ತಿದ್ದ. ಹೀಗೆ ಮಾತನಾಡುತ್ತ ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಶನಿವಾರ ರಾತ್ರಿ ವೇಳೆ ನಾರಾಯಣ್ ಯುವತಿಯನ್ನು ಪ್ರೀತಿಸುತ್ತಿರುವ ವಿಷಯ ತಿಳಿಸಿ ಆಕೆಗೆ ಭೇಟಿ ಮಾಡಲು ಹೇಳಿದ್ದಾನೆ. ಆಗ ಯುವತಿ ಭೇಟಿಯಾಗಲು ನಿರಾಕರಿಸಿದ್ದಾಳೆ.

    ಯುವತಿಯ ಈ ನಿರ್ಧಾರದಿಂದ ಕೋಪಗೊಂಡ ನಾರಾಯಣ್ ತನ್ನ ಎದೆಯ ಮೇಲೆ ಚಾಕುವಿನಿಂದ ಕೆಲವು ಗಾಯವನ್ನು ಮಾಡಿಕೊಂಡು ಆಕೆಗೆ ಫೋಟೋ ಕಳುಹಿಸಿ ನೀನು ಭೇಟಿಯಾಗಿಲ್ಲ ಅಂದ್ರೆ ಸಾಯ್ತೀನಿ ಎಂದು ಹೆದರಿಸಿದ್ದಾನೆ. ಈ ವೇಳೆ ಅವರಿಬ್ಬರ ನಡುವೆ ಜಗಳ ಕೂಡ ನಡೆದಿದೆ. ಏನೇ ಮಾಡಿದರೂ ಯುವತಿ ಭೇಟಿಯಾಗಲು ಒಪ್ಪದ್ದಕ್ಕೆ ಮನನೊಂದ ನಾರಾಯಣ್ ತಾನು ಕೆಲಸ ಮಾಡುತ್ತಿದ್ದ ಆಫೀಸ್‍ನಲ್ಲಿ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಘಟನೆ ಕುರಿತು ಟೈಗ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv