Tag: Cable Cut

  • ಮಂಡ್ಯದಲ್ಲಿ ಇಂದು ಕೂಡ ಕೇಬಲ್ ಕಟ್

    ಮಂಡ್ಯದಲ್ಲಿ ಇಂದು ಕೂಡ ಕೇಬಲ್ ಕಟ್

    ಮಂಡ್ಯ: ಲೋಕಸಭಾ ಚುನಾವಣೆಯ ಫಲಿತಾಂಶ ದಿನವೂ ಹಲವೆಡೆ ಕೇಬಲ್ ಕಟ್ ಮಾಡಲಾಗಿದೆ.

    ದುಷ್ಕರ್ಮಿಗಳು ರಾತ್ರೋರಾತ್ರಿ ಕೇಬಲ್ ವಯರ್ ಗಳನ್ನು ಕಟ್ ಮಾಡಿದ್ದಾರೆ. ಆದರೆ ಯಾವ ಉದ್ದೇಶಕ್ಕೆ ದುಷ್ಕರ್ಮಿಗಳು ಕೇಬಲ್ ಕಟ್ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಸದ್ಯ ಕೇಬಲ್ ನೆಟ್‍ವರ್ಕ್ ಸಿಬ್ಬಂದಿ ಈಗ ಸರಿಪಡಿಸಲು ಮುಂದಾಗಿದ್ದಾರೆ.

    ಮತ ಎಣಿಕೆಯ ಆರಂಭದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಮುನ್ನಡೆ ಸಾಧಿಸಿದ್ದರೆ ನಂತರ ನಿಖಿಲ್ ಕುಮಾರಸ್ವಾಮಿ ಮುನ್ನಡೆಯಲ್ಲಿದ್ದಾರೆ.

    ಈ ಹಿಂದೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಬೃಹತ್ ರ‍್ಯಾಲಿ ಆಯೋಜಿಸಿದ್ದಾಗ ಮಂಡ್ಯದಲ್ಲಿ ಕೇಬಲ್ ಕಟ್ ಮಾಡಲಾಗಿತ್ತು.