Tag: cable bridge

  • 2017ರಲ್ಲಿ ಶಂಕುಸ್ಥಾಪನೆ ಈಗ ಲೋಕಾರ್ಪಣೆ – ಮೋದಿಯಿಂದ ದೇಶದ ಅತೀ ಉದ್ದದ ಕೇಬಲ್‌ ಸೇತುವೆ ಉದ್ಘಾಟನೆ

    2017ರಲ್ಲಿ ಶಂಕುಸ್ಥಾಪನೆ ಈಗ ಲೋಕಾರ್ಪಣೆ – ಮೋದಿಯಿಂದ ದೇಶದ ಅತೀ ಉದ್ದದ ಕೇಬಲ್‌ ಸೇತುವೆ ಉದ್ಘಾಟನೆ

    ಗಾಂಧಿನಗರ: ಗುಜರಾತ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ದೇಶದ ಅತೀ ಉದ್ದದ ಕೇಬಲ್‌ ತೂಗು ಸೇತುವೆ ʻಸುದರ್ಶನ ಸೇತುʼವನ್ನು (Sudarshan Setu) ಲೋಕಾರ್ಪಣೆ ಮಾಡಿದ್ದಾರೆ.

    ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಗುಜರಾತ್‌ನ ಓಖಾ ಮುಖ್ಯ ಭೂಭಾಗ ಮತ್ತು ಬೇಟ್‌ ದ್ವಾರಕಾ ದ್ವೀಪವನ್ನು ಸಂಪರ್ಕಿಸುವ ಅತೀ ಉದ್ದದ ಕೇಬಲ್‌ ತೂಗು ಸೇತುವೆಯನ್ನು (India’s longest Cable Bridge) ಉದ್ಘಾಟಿಸಿದರು. 2017ರಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

    ಸುದರ್ಶನ ಸೇತುವೆ ಉದ್ಘಾಟನೆಗೂ ಮೊದಲು ಪ್ರಧಾನಿ ಮೋದಿ ಬೇಟ್‌ ದ್ವಾರಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಮೊದಲ 100 ದಿನ ಏನು ಮಾಡಬೇಕು – ಹೊಸ ಸರ್ಕಾರದ ಕೆಲಸಕ್ಕೆ ಈಗಲೇ ತಯಾರಿ ಆರಂಭಿಸಿದ ಮೋದಿ

     

    ಸುದರ್ಶನ ಸೇತು ವಿಶೇಷತೆಗಳೇನು?
    ಚತುಷ್ಪಥ ರಸ್ತೆಯನ್ನು ಒಳಗೊಂಡಿರುವ ಸುದರ್ಶನ ಸೇತು 2.32 ಕಿಮೀ ಗಳಷ್ಟು ಉದ್ದವಿದೆ. ಸರಿಸುಮಾರು 980 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುದರ್ಶನ ಸೇತುವನ್ನು ಓಖಾ-ಬೇಟ್ ದ್ವಾರಕಾ ಸಿಗ್ನೇಚರ್ ಬ್ರಿಡ್ಜ್‌ ಅಂತಲೂ ಕರೆಯುತ್ತಾರೆ. ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿದ್ದು, ಇದು ಒಂದು ಮೆಗಾವ್ಯಾಟ್‌  ವಿದ್ಯುತ್‌ ಉತ್ಪಾದಿಸಲಿದೆ. ಇದನ್ನೂ ಓದಿ: ಜು.1 ರಿಂದ ದೇಶಾದ್ಯಂತ ಹೊಸ ಕ್ರಿಮಿನಲ್‌ ಕಾನೂನುಗಳು ಜಾರಿ

    ಪಾದಚಾರಿ ಮಾರ್ಗಗಳಲ್ಲಿ ಭಗವದ್ಗೀತೆ ಶ್ಲೋಕ:
    ಸೇತುವೆ ಮೇಲೆ ನಿರ್ಮಾಣಗೊಂಡಿರುವ ರಸ್ತೆಗಳು 27.2 ಮೀಟರ್‌ ಅಂದ್ರೆ ಸುಮಾರು 89 ಅಡಿಗಳಷ್ಟು ಅಗಲವಿದೆ. ಎರಡೂ ಬದಿಗಳಲ್ಲಿ 2.5 ಮೀಟರ್‌ (8 ಅಡಿ) ಗಳಷ್ಟು ಪಾದಚಾರಿ ಮಾರ್ಗಕ್ಕೆ ಸ್ಥಳಾವಕಾಶವಿದೆ. ಈ ಪಾದಚಾರಿ ಮಾರ್ಗಗಳಲ್ಲಿ ಭಗವದ್ಗೀತೆಯ ಶ್ಲೋಕಗಳನ್ನ ಹಾಕಲಾಗಿದೆ ಮತ್ತು ಶ್ರೀಕೃಷ್ಣನ ಚಿತ್ರಗಳನ್ನ ಅಲಂಕರಿಸಲಾಗಿದೆ.

    20 ಲಕ್ಷ ಯಾತ್ರಾರ್ಥಿಗಳಿಗೆ ಪ್ರಯೋಜನ:
    ಬೇಟ್ ದ್ವಾರಕಾ, ಓಖಾ ಬಂದರಿನ ಸಮೀಪವಿರುವ ಒಂದು ದ್ವೀಪವಾಗಿದೆ. ಇದು ದ್ವಾರಕಾ ಪಟ್ಟಣದಿಂದ ಸುಮಾರು 30 ಕಿಮೀ ದೂರದಲ್ಲಿದೆ. ಅಲ್ಲಿ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಾಲಯವೂ ಇದೆ. ಈ ಮಾರ್ಗವು ದೇವಸ್ಥಾನಗಳಿಗೆ ಪ್ರಯಾಣಿಸುವ ಭಕ್ತರಿಗೆ ಮತ್ತಷ್ಟು ಅನುಕೂಲಕರವಾಗಲಿದೆ. ಒಟ್ಟಿನಲ್ಲಿ ಈ ಸುದರ್ಶನ ಸೇತು ಸುಮಾರು 8,500ಕ್ಕೂ ಹೆಚ್ಚು ಸ್ಥಳೀಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಿದೆ. ಈ ಪ್ರದೇಶದಲ್ಲಿನ ದೇವಾಲಯಗಳಿಗೆ ಭೇಟಿ ನೀಡುವ 20 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳಿಗೆ ಪ್ರಯೋಜನವಾಗಲಿದೆ.

  • ಚಿಕ್ಕಮಗಳೂರು, ಉಡುಪಿಯಲ್ಲಿ ಡೇಂಜರ್ ಸೇತುವೆ – ನಿರ್ವಹಣೆ ಇಲ್ಲದೇ ಬೀಳುವ ಸ್ಥಿತಿ

    ಚಿಕ್ಕಮಗಳೂರು, ಉಡುಪಿಯಲ್ಲಿ ಡೇಂಜರ್ ಸೇತುವೆ – ನಿರ್ವಹಣೆ ಇಲ್ಲದೇ ಬೀಳುವ ಸ್ಥಿತಿ

    ಚಿಕ್ಕಮಗಳೂರು: ಗುಜರಾತ್‌ನಲ್ಲಿ (Gujarat) ನಡೆದ ಮೊರ್ಬಿ (Morbi) ದುರಂತ 141 ಜನರನ್ನು ಬಲಿಪಡೆದಿದೆ. ಕರ್ನಾಟಕದಲ್ಲಿ ಕೂಡ ಇಂತದ್ದೇ ಅಪಾಯಕಾರಿ ಸೇತುವೆಗಳು ಇವೆ. ಗುಜರಾತಿನ ಮೊರ್ಬಿ ಸೇತುವೆಯಷ್ಟೇ ನಮ್ಮಲ್ಲೂ ಡೇಂಜರ್ ಸೇತುವೆಗಳು ಇವೆ. ಪಬ್ಲಿಕ್ ರಿಯಾಲಿಟಿ ಚೆಕ್‌ನಲ್ಲಿ ಡೇಂಜರ್ ತೂಗು ಸೇತುವೆಗಳ ಬಣ್ಣ ಬಯಲಾಗಿದೆ.

    ಕಿತ್ತು ಬಂದಿರುವ ತಂತಿಗಳು. ಗ್ರಿಪ್ಪೇ ಇಲ್ಲದೆ ಸಾಮರ್ಥ್ಯ ಕಳೆದುಕೊಂಡಿರೋ ಸೇತುವೆಯ ತಡೆಗೋಡೆಗಳು. ಒಬ್ಬರ ಓಡಾಡಕ್ಕೆ ಜೋತಾಡೋ ಸೇತುವೆ. ಇದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿರುವ ಮೇಲ್ಸೇತುವೆ. ಅಪಾಯಕ್ಕೆ ಕಾದಿರುವ ತೂಗು ಸೇತುವೆಯ ಬಣ್ಣ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ. ಇದನ್ನೂ ಓದಿ: ದೊಡ್ಡಗಣೇಶ ದೇಗುಲದಲ್ಲಿ ಚಪ್ಪಲಿ ಸ್ಟ್ಯಾಂಡ್‍ಗೂ ಮೀಸಲಾತಿ!

    ಹೌದು, ಚಿಕ್ಕಮಗಳೂರು (Chikkamagaluru) ಜಿಲ್ಲೆ ಶೃಂಗೇರಿಯ ನೆಮ್ಮಾರು ಗ್ರಾಮದಲ್ಲಿ 20 ವರ್ಷಗಳ ಹಿಂದೆ ತುಂಗಾ ನದಿ ಮೇಲೆ ನಿರ್ಮಿಸಿದ ಸೇತುವೆ ಈಗ ಬೀಳುವ ಸ್ಥಿತಿಯಲ್ಲಿದೆ. ಇಲ್ಲಿನ ಸುಂಕದಮಕ್ಕಿ ಹಾಗೂ ಹೆಡದಾಳು ಗ್ರಾಮದ 150ಕ್ಕೂ ಹೆಚ್ಚು ಕುಟುಂಬಗಳಿಗೆ ಈ ಸೇತುವೆಯೇ ಆಧಾರ. ಇವರಿಗೆ ಬೇರೆ ಮಾರ್ಗ ಇದ್ರು 12 ಕಿ.ಮೀ. ಸುತ್ತಿ ಬರಬೇಕು. ಹಾಗಾಗಿ 20 ವರ್ಷಗಳ ಹಿಂದೆ ಸರ್ಕಾರವೇ ತೂಗುಸೇತುವೆ ನಿರ್ಮಿಸಿ ಕೊಟ್ಟಿತ್ತು. ಆದ್ರೆ ನಿರ್ವಹಣೆ ಇಲ್ಲದೆ ಸೇತುವೆ ತನ್ನ ಸಾಮರ್ಥ್ಯವನ್ನ ಕಳೆದುಕೊಂಡಿದೆ. ಸೇತುವೆಗೆ ಹಾಕಿರುವ ಗ್ರಿಲ್‌ಗಳು ಕಿತ್ತು ಬಂದಿವೆ. ಸೇತುವೆಯ ಫುಟ್‌ಪಾತ್ ಹಾಗೂ ತಡೆಗೋಡೆಗೆ ಹಾಕಿರೋ ಗ್ರಿಲ್‌ಗಳ ಜಾಯಿಂಟ್ ಕೂಡ ಬಿಟ್ಟಿದ್ದು ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟಬುತ್ತಿ.

    ಸೇತುವೆ ಸ್ಥಿತಿ ಬಗ್ಗೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಸ್ಥಳಕ್ಕೆ ಬಂದು ಹೋಗುವ ಅಧಿಕಾರಿಗಳ ಕಥೆ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ. ಒಂದು ವೇಳೆ ಈ ಸೇತುವೆ ಹಾಳಾದ್ರೆ, ಈ ಭಾಗದ ಜನ ಸಣ್ಣ ಕೆಲಸಕ್ಕೂ ಹೆದ್ದಾರಿಗೆ ಬರಬೇಕೆಂದ್ರೆ ಕನಿಷ್ಠ 12 ಕಿ.ಮೀ. ಸುತ್ತಿ ಬಳಸಿ ಬರಬೇಕು. ಈ ಸೇತುವೆ ನಿರ್ಮಾಣವಾದಗಿನಿಂದ ಒಂದೇ ಒಂದು ಬಾರಿ ಮಾತ್ರ ಬಣ್ಣ-ಗ್ರೀಸ್ ಕಂಡಿದೆ. ಮೊದಲೆಲ್ಲಾ 4-5 ಜನ ಓಡಾಡಿದ್ರು ಏನೂ ಆಗ್ತಿರಲ್ಲಿಲ್ಲ. ಈಗ ಒಬ್ಬಿಬ್ಬರು ಓಡಾಡುದ್ರೆ ತೂಗಾಡುತ್ತೆ, ಓಡಾಡೋಕೆ ಭಯವಾಗುತ್ತೆ ಅಂತಾರೆ ಸ್ಥಳೀಯರು. ಇದನ್ನೂ ಓದಿ: PSI ನೇಮಕಾತಿ ಅಕ್ರಮ – ಫಸ್ಟ್ ರ‍್ಯಾಂಕ್ ಪಡೆದಿದ್ದ ಸುಪ್ರಿಯಾ ಅರೆಸ್ಟ್

    ಒಟ್ಟಾರೆ, ಸರ್ಕಾರ ಜನರಿಗೆಂದು ತೂಗು ಸೇತುವೆಯನ್ನೇನೋ ನಿರ್ಮಿಸಿ ಕೊಡ್ತು. ಆದ್ರೆ, ಅದರ ನಿರ್ವಹಣೆ ಮರೆತಿದೆ. ಸರ್ಕಾರವೇ ಮರೆತ ಕಾರಣ ಇಂದು ಆ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಅನಾಹುತವಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • 5 ದಿನಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಗುಜರಾತ್‌ನ ಕೇಬಲ್‌ ಸೇತುವೆ ಕುಸಿತ – ಅಪಾಯದಲ್ಲಿ 100ಕ್ಕೂ ಹೆಚ್ಚು ಮಂದಿ

    5 ದಿನಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಗುಜರಾತ್‌ನ ಕೇಬಲ್‌ ಸೇತುವೆ ಕುಸಿತ – ಅಪಾಯದಲ್ಲಿ 100ಕ್ಕೂ ಹೆಚ್ಚು ಮಂದಿ

    ಗಾಂಧೀನಗರ: ಐದು ದಿನಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಕೇಬಲ್‌ ಸೇತುವೆ (Cable Bridge Collapse) ಕುಸಿದು, ಹಲವರು ಗಾಯಗೊಂಡಿರುವ ಘಟನೆ ಗುಜರಾತ್‌ನಲ್ಲಿ (Gujarat) ನಡೆದಿದೆ.

    ಗುಜರಾತ್‌ನ ಮೊರ್ಬಿ (Morbi) ಪ್ರದೇಶದ ಮಚ್ಚು ನದಿಗೆ ನಿರ್ಮಿಸಿದ್ದ ಕೇಬಲ್ ಸೇತುವೆ ಕುಸಿದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ತಕ್ಷಣ ಅಂಬುಲೆನ್ಸ್‌ಗಳು ಸ್ಥಳಕ್ಕೆ ಬಂದಿವೆ. ರಕ್ಷಣೆ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: 50ಕ್ಕೂ ಹೆಚ್ಚು ಜನರನ್ನು ಹೊತ್ತು ಹಳ್ಳದಾಟುತ್ತಿದ್ದಾಗ ಸಿಲುಕಿದ ಲಾರಿ

    ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದರ್ ಪಟೇಲ್ ಹೇಳಿದ್ದಾರೆ.

    ಮೋರ್ಬಿಯಲ್ಲಿ ತೂಗು ಸೇತುವೆ ಕುಸಿತದ ದುರಂತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ವ್ಯವಸ್ಥೆಯಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ನಾನು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ನಿಜವಾದ ಕಾಫಿಯಿದ್ದಂತೆ, ಬಿಜೆಪಿ ಕಾಫಿಯ ನೊರೆಯಷ್ಟೆ – ಪ್ರಶಾಂತ್‌ ಕಿಶೋರ್‌

    Live Tv
    [brid partner=56869869 player=32851 video=960834 autoplay=true]