Tag: Cable

  • ಜ.24 ರಂದು ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಕೇಬಲ್ ಬಂದ್

    ಜ.24 ರಂದು ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಕೇಬಲ್ ಬಂದ್

    ಬೆಂಗಳೂರು: ಭಾರತೀಯ ದೂರ ಸಂಪರ್ಕ  ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಹೊಸ ದರ ನಿಗದಿ ನಿಯಮವನ್ನು ಖಂಡಿಸಿ ಮತ್ತು ಕೇಬಲ್ ಆಪರೇಟರ್‌ಗಳ ಉಳಿವಿಗಾಗಿ ಜನವರಿ 24ರಂದು ರಾಜ್ಯಾದ್ಯಂತ ಕೇಬಲ್ ಪ್ರಸಾರ ಸ್ಥಗಿತಗೊಳ್ಳಲಿದೆ. ಜನವರಿ 24ರ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಕೇಬಲ್ ಬಂದ್ ಆಗಲಿದ್ದು, ರಾಜ್ಯ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್‍ನಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆ ಬಳಿಕ ರಾಜ್ಯ ಕೇಬಲ್ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಮಾತನಾಡಿ, ದಕ್ಷಿಣ ಭಾರತ ಆಪರೇಟರ್ಸ್ ಅಸೋಸಿಯೇಷನ್‍ನಿಂದ ಒಮ್ಮತದ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.

    ಟ್ರಾಯ್ ನ ಹೊಸ ನೀತಿಯಿಂದ ಗ್ರಾಹಕರಿಗೆ ಹೊರೆಯಾಗಲಿದೆ. ಕಡಿಮೆ ಚಾನೆಲ್ ನೋಡಿ ಸಾವಿರದ ತನಕ ಹಣ ಕಟ್ಟುವಂತೆ ಗ್ರಾಹಕರ ಮೇಲೆ ಹೊರೆ ಹೊರಿಸಲಾಗಿದೆ. ಅಲ್ಲದೇ ಶೇ.18 ಜಿಎಸ್ ಟಿ ಸಹ ಗ್ರಾಹಕರ ಮೇಲೆ ಹೇರಲಾಗಿದೆ. ಅವರ ಮನೆಯಲ್ಲಿ ಕುಳಿತು ಟಿವಿ ನೋಡುವುದಕ್ಕೆ ತೆರಿಗೆ ಕಟ್ಟಬೇಕು ಎಂದು ತಿಳಿಸಿದರು.

    300 ರೂ.ಗೆ 400 ಕ್ಕೂ ಹೆಚ್ಚಿನ ಚಾನೆಲ್ ಗಳನ್ನು ಕೇಬಲ್ ಆಪರೇಟರ್ ಗಳು ನೀಡುತ್ತಿದ್ದಾರೆ. ಟ್ರಾಯ್ ಹೊಸ ನೀತಿಯಿಂದ ಗ್ರಾಹಕರು ಕೇಬಲ್ ಗಾಗಿ 1 ಸಾವಿರ ರೂ.ಗಿಂತಲೂ ಹೆಚ್ಚಿನ ಹಣವನ್ನು ಕಟ್ಟಬೇಕು. ಟ್ರಾಯ್ ಗ್ರಾಹಕ ವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸುವ ಸಲುವಾಗಿ ವಾಹಿನಿಗಳ ಪ್ರಸಾರವನ್ನು ಸ್ಥಗಿತಗೊಳ್ಳಿಸುತ್ತೇವೆ ಎಂದು ತಿಳಿಸಿದರು.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಗ್ನೇಚರ್ ಸೇತುವೆಯ ನಟ್, ಬೋಲ್ಟ್ ಕದ್ದ ಕಳ್ಳರು!

    ಸಿಗ್ನೇಚರ್ ಸೇತುವೆಯ ನಟ್, ಬೋಲ್ಟ್ ಕದ್ದ ಕಳ್ಳರು!

    ನವದೆಹಲಿ: ಒಂದು ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಸಿಗ್ನೇಚರ್ ಸೇತುವೆಯ ಕೇಬಲ್ ಜೋಡಣೆಗೆ ಬಳಸಿದ್ದ ನಟ್ ಮತ್ತು ಬೋಲ್ಟ್ ಗಳನ್ನು ಕಳ್ಳತನ ಮಾಡಲಾಗಿದೆ.

    ನವೆಂಬರ್ 5ಕ್ಕೆ ಲೋಕಾರ್ಪಣೆಯಾದ ಬಳಿಕ ಸ್ಟಂಟ್, ಸೆಲ್ಫಿ ವಿಚಾರದಲ್ಲಿ ಸುದ್ದಿಯಾಗಿದ್ದ ಸಿಗ್ನೇಚರ್ ಸೇತುವೆಯ ನಟ್ ಮತ್ತು ಬೋಲ್ಟ್ ಗಳನ್ನೇ ಕಳ್ಳರು ಕದ್ದಿದ್ದು ಈಗ ಭದ್ರತೆಯ ವಿಚಾರದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

    ನಟ್, ಬೋಲ್ಟ್ ಗಳನ್ನು ಬಳಸಿ ಮೇಲ್ಮೈಯಿಂದ ಕಂಬಗಳನ್ನು ಸಂಪರ್ಕಿಸುವಂತೆ ಕೇಬಲ್‍ಗಳನ್ನು ಹಾಕಲಾಗಿದೆ. ಪ್ರತಿಯೊಂದು ಕೇಬಲ್ ತಲಾ 12 ನಟ್, ಬೋಲ್ಟ್‍ಗಳ ಮೇಲೆ ನಿಂತಿದ್ದು ಕಳ್ಳರು ಕದ್ದಿರುವ ವಿಚಾರ ಸೋಮವಾರ ಬೆಳಕಿಗೆ ಬಂದೆ. ಇದನ್ನೂ ಓದಿ: ಸಿಗ್ನೇಚರ್ ಬ್ರಿಡ್ಜ್ ಮೇಲೆ ಬಟ್ಟೆ ಬಿಚ್ಚಿ ಮಂಗಳಮುಖಿಯರ ಡ್ಯಾನ್ಸ್

    ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ (ಡಿಟಿಟಿಡಿಸಿ) ಎಂಜಿನಿಯರುಗಳು ನಡೆಸಿದ ಪರಿಶೀಲನೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಕಳ್ಳತನವಾಗದೇ ಇರಲು ವೆಲ್ಡಿಂಗ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿಸಿಟಿವಿ ಅಳವಡಿಸದ್ದು ಮತ್ತು ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಕಳ್ಳತನ ನಡೆದಿದ್ದು ಮುಂದೆ ಸಿಸಿಟಿವಿ ಅಳವಡಿಸಲಾಗುವುದು. ಸೇತುವೆ ಸಂಬಂಧಿಸಿದ ಕೆಲಸ ಇನ್ನೂ ಪೂರ್ಣಗೊಳ್ಳದ ಕಾರಣ ಡಿಟಿಡಿಸಿ ಇನ್ನೂ ದೆಹಲಿಯ ಲೋಕೋಪಯೋಗಿ ಇಲಾಖೆ ಸುಪರ್ದಿಗೆ ಸೇತುವೆಯನ್ನು ನೀಡಿಲ್ಲ. ಇದನ್ನೂ ಓದಿ:ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!

    1997ರಲ್ಲಿ ವಜೀರಾಬಾದ್ ಸೇತುವೆಯಿಂದ ಶಾಲಾ ಬಸ್ ಉರುಳಿ, 22 ಮಕ್ಕಳು ಯಮುನಾ ನದಿಯಲ್ಲಿ ಕೊನೆಯುಸಿರೆಳೆದಿದ್ದರು. ಈ ದುರಂತ ನಡೆದ ಬಳಿಕ ಸರ್ಕಾರ ಬೃಹತ್ ತೂಗು ಸೇತುವೆ ಕಾಮಗಾರಿಯನ್ನು ಪ್ರಾರಂಭಿಸಿತ್ತು. 2010ರಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಹಣಕಾಸು ತೊಂದರೆಯಿಂದ ನಿಂತು ಹೋಗಿತ್ತು. ಸುಮಾರು 1594 ಕೋಟಿ ರೂ. ವೆಚ್ಚದಲ್ಲಿ 154 ಮೀಟರ್ ಉದ್ದದ ನಿರ್ಮಾಣಗೊಂಡಿರುವ ಈ ಸೇತುವೆಯನ್ನು ನವೆಂಬರ್ ನಲ್ಲಿ ಉದ್ಘಾಟಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇಬಲ್ ಗುಂಡಿಗೆ ಬಿದ್ದು, ಒದ್ದಾಡಿ ಹಸು ಸಾವು

    ಕೇಬಲ್ ಗುಂಡಿಗೆ ಬಿದ್ದು, ಒದ್ದಾಡಿ ಹಸು ಸಾವು

    ಮಡಿಕೇರಿ: ಕೇಬಲ್ ಹಾಕಲು ತಗೆದಿದ್ದ ಗುಂಡಿಯಲ್ಲಿ ಹಸುವೊಂದು ಬಿದ್ದು, ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿ ನಡೆದಿದೆ.

    ಮೃತ ಪಟ್ಟ ಹಸು ಅಜಿತ್ ಅವರಿಗೆ ಸೇರಿದ್ದು. ಮಂಗಳವಾರ ರಾತ್ರಿ ಹಸು ರಸ್ತೆ ದಾಟುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ. ಸುಮಾರು ದಿನಗಳ ಹಿಂದೆಯೇ ಖಾಸಗಿ ಟೆಲಿಕಾಂ ಕಂಪನಿ ಕೇಬಲ್ ಅಳವಡಿಸಲು ರಸ್ತೆ ಪಕ್ಕದಲ್ಲಿ ಗುಂಡಿಯನ್ನು ತೆಗೆದಿತ್ತು.

    ಹಸು ರಾತ್ರಿ ಗುಂಡಿಗೆ ಬಿದ್ದು ಅಲ್ಲಿಯೇ ಉಸಿರುಗಟ್ಟಿ ಮೃತಪಟ್ಟಿದ್ದು, ಬೆಳಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದೆ. ಗುಂಡಿ ಅಗೆದು ತಿಂಗಳಾದರೂ ಗುಂಡಿಯನ್ನು ಮುಚ್ಚಿರದ ಟೆಲಿಕಾಂ ಕಂಪನಿ ಹಾಗೂ ಪಿಡಬ್ಲ್ಯುಡಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಇಂದಿನಿಂದ ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ಟೆಸ್ಟ್ ಸಿಗ್ನಲ್ ಆರಂಭ

    ಇಂದಿನಿಂದ ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ಟೆಸ್ಟ್ ಸಿಗ್ನಲ್ ಆರಂಭ

    ಬೆಂಗಳೂರು: ಪಬ್ಲಿಕ್ ಟಿವಿ ಸಮೂಹದ ಮೂರನೇ ಚಾನಲ್ ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ಫೆಬ್ರವರಿ 12ರಿಂದ ನಿಮ್ಮ ಮುಂದೆ ಬರಲಿದೆ. ಇಂದಿನಿಂದ ಪಬ್ಲಿಕ್ ಕಾಮಿಡಿ/ ಮೂವೀಸ್ ಟೆಸ್ಟ್ ಸಿಗ್ನಲ್ ಆರಂಭವಾಗಿದೆ.

    ಈ ಹಿನ್ನೆಲೆಯಲ್ಲಿಂದು ಪಬ್ಲಿಕ್ ಟಿವಿ ಕಚೇರಿಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಸಿಇಒ ಅರುಣ್ ಕುಮಾರ್, ಸಿಒಒ ಸಿ.ಕೆ.ಹರೀಶ್ ಕುಮಾರ್ ಸೇರಿದಂತೆ ಪಬ್ಲಿಕ್ ಟಿವಿಯ ಎಲ್ಲಾ ಸಿಬ್ಬಂದಿ ಪೂಜೆಯಲ್ಲಿ ಭಾಗಿಯಾಗಿದ್ದರು.

    ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಡಿ ಆರಂಭವಾದ ಪಬ್ಲಿಕ್ ಟಿವಿ ಕೂಡಾ ಫೆಬ್ರವರಿ 12ರಂದು 6ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. 2012ರ ಫೆಬ್ರವರಿ 12ರಂದು ಪಬ್ಲಿಕ್ ಟಿವಿ ಲೋಕಾರ್ಪಣೆಗೊಂಡಿತ್ತು. ಬಳಿಕ 2014ರ ಸೆಪ್ಟೆಂಬರ್ 28ರಂದು ಪಬ್ಲಿಕ್ ಮ್ಯೂಸಿಕ್ ವಾಹಿನಿ ಆರಂಭಗೊಂಡಿತ್ತು.

    2012ರಲ್ಲಿ ಆರಂಭಗೊಂಡ ಪಬ್ಲಿಕ್ ಟಿವಿ ಹಾಗೂ 2014ರಲ್ಲಿ ಆರಂಭಗೊಂಡ ಪಬ್ಲಿಕ್ ಮ್ಯೂಸಿಕ್ ವಾಹಿನಿ ರಾಜ್ಯದ ಮೂಲೆ ಮೂಲೆಯಲ್ಲೂ ಮನೆ ಮಾತಾಗಿದೆ. ಇದಕ್ಕೆ ಕಾರಣೀಕರ್ತರಾದ ಜನರಿಗೆ ನಾವು ಆಭಾರಿ. ಈ ಹಿಂದೆ ಎರಡು ಚಾನೆಲ್‍ಗಳನ್ನು ಕೈ ಹಿಡಿದಂತೆಯೇ ಪಬ್ಲಿಕ್ ಮೂವೀಸ್ ವಾಹಿನಿಯನ್ನು ಕೂಡಾ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನಮಗಿದೆ. ನಮ್ಮ ಮೇಲೆ ವಿಶ್ವಾಸವಿಟ್ಟ ಎಲ್ಲಾ ಕನ್ನಡಿಗರಿಗೂ ಧನ್ಯವಾದ ಎಂದು ಪಬ್ಲಿಕ್ ಟಿವಿ, ಮ್ಯೂಸಿಕ್ ಚಾನೆಲ್ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹೇಳಿದ್ದಾರೆ.

    ಈಗಾಗಲೇ ನಿಖರ ಸುದ್ದಿ, ಮನಸ್ಸಿಗೆ ಮುದ ನೀಡುವ ಸಂಗೀತದ ಮೂಲಕ ನಿಮ್ಮ ಮನಗೆದ್ದಿರುವ ಪಬ್ಲಿಕ್ ಟಿವಿ, ಈಗ ಸಿನಿಮಾದ ಮೂಲಕ ನಿಮ್ಮ ಮನರಂಜಿಸಲು ಆಗಮಿಸುತ್ತಿದೆ.

    ಪಬ್ಲಿಕ್ ಕಾಮಿಡಿ/ ಮೂವೀಸ್ ಚಾನೆಲ್ ನಲ್ಲಿ ನೀವು 24 ಗಂಟೆಗಳ ಕಾಲವೂ ಕನ್ನಡ ಸಿನೆಮಾಗಳನ್ನು ನೋಡಿ ಆನಂದಿಸಬಹುದು. ನಿಮ್ಮೂರಲ್ಲಿ ಚಾನೆಲ್ ವೀಕ್ಷಣೆಗೆ ಲಭ್ಯವಾಗದಿದ್ದರೆ ನೀವು ನಿಮ್ಮ ಕೇಬಲ್ ಆಪರೇಟರ್ ಗಳನ್ನು ಸಂಪರ್ಕಿಸಬಹುದು.