Tag: cabinet

  • ಅನಗತ್ಯ ಹೇಳಿಕೆಗಳನ್ನು ನೀಡಬೇಡಿ, ಸರಿಯಾಗಿ ಸಮಯ ಪಾಲನೆ ಮಾಡಿ: ಸಚಿವರಿಗೆ ಮೋದಿ ಪಾಠ

    ಅನಗತ್ಯ ಹೇಳಿಕೆಗಳನ್ನು ನೀಡಬೇಡಿ, ಸರಿಯಾಗಿ ಸಮಯ ಪಾಲನೆ ಮಾಡಿ: ಸಚಿವರಿಗೆ ಮೋದಿ ಪಾಠ

    ನವದೆಹಲಿ: ಯಾವುದೇ ಅನಗತ್ಯ ಹೇಳಿಕೆಗಳನ್ನು ನೀಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕ್ಯಾಬಿನೆಟ್‌ ಸಭೆಯಲ್ಲಿ (Cabinet Meeting) ಸಚಿವರಿಗೆ ಸೂಚಿಸಿದ್ದಾರೆ.

    ಪ್ರಮಾಣವಚನ ಸ್ವೀಕರಿಸಿದ ಮರುದಿನವಾದ ಸೋಮವಾರ ಮೋದಿ ಅವರು ತನ್ನ ಸಂಪುಟದ ಸದಸ್ಯರ ಮೊದಲ ಸಭೆ ನಡೆಸಿದರು.

    ಈ ವೇಳೆ, ಯಾವುದೇ ಅನಗತ್ಯ ಸಾರ್ವಜನಿಕ ಹೇಳಿಕೆಗಳನ್ನು ನೀಡಬೇಡಿ. ಅಗತ್ಯವಿರುವಾಗ ಆಯಾ ಸಚಿವಾಲಯಗಳಿಗೆ ನೇರವಾಗಿ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತ್ರ ಮಾತನಾಡಿ ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜೀವನದ ಅತಿದೊಡ್ಡ ಸವಾಲು, ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೆಲಸ ಮಾಡ್ತೀನಿ: ಹೆಚ್‌ಡಿಕೆ

    ಮಂತ್ರಿಗಳು ಸರಿಯಾಗಿ ಸಮಯಪಾಲನೆ ಮಾಡಬೇಕು. ಇದರಿಂದ ಸಚಿವಾಲಯದ ಸಿಬ್ಬಂದಿಗೆ ಸಕಾರಾತ್ಮಕ ಸಂದೇಶವನ್ನು ರವಾನಿಸಿದಂತಾಗುತ್ತದೆ. ಸಚಿವಾಲಯದ ನಿರ್ಧಾರಗಳನ್ನು, ಸಂಬಂಧಿಸಿದ ಕಡತಗಳನ್ನು ರಾಜ್ಯ ಮಂತ್ರಿ ಜೊತೆ ಹಂಚಿಕೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.

    ಸಚಿವ ಸಂಪುಟ ಸಭೆ ಮುಗಿದ ಕೂಡಲೇ ಖಾತೆಗಳನ್ನು ಪ್ರಕಟಿಸಲಾಗಿದೆ. ಪ್ರಮುಖ 5 ಸಚಿವಾಲಯಗಳನ್ನು ಬಿಜೆಪಿ ತನ್ನ ಬಳಿಯೇ ಇಟ್ಟುಕೊಂಡಿದೆ ಮತ್ತು ಈ ಹಿಂದೆ ನಿರ್ವಹಣೆ ಮಾಡಿದವರಿಗೆ ನೀಡಲಾಗಿದೆ. ಇದನ್ನೂ ಓದಿ: ಜೈಲಿನಲ್ಲಿರೋ ಹೇಮಂತ್ ಸೊರೆನ್ ಪತ್ನಿ ಜಾರ್ಖಂಡ್ MLA ಆಗಿ ಪ್ರಮಾಣವಚನ ಸ್ವೀಕಾರ!

     

    ಅಮಿತ್ ಶಾ ಅವರಿಗೆ ಗೃಹ ಖಾತೆ, ರಾಜನಾಥ್ ಸಿಂಗ್ ಅವರು ರಕ್ಷಣಾ ಸಚಿವರಾಗಿ ಮುಂದುವರೆದಿದ್ದಾರೆ. ನಿರ್ಮಲಾ ಸೀತಾರಾಮನ್ ಹಣಕಾಸು, ಎಸ್‌ ಜೈಶಂಕರ್‌ ವಿದೇಶಾಂಗ, ನಿತಿನ್‌ ಗಡ್ಕರಿ ಅವರಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯನ್ನು ನೀಡಲಾಗಿದೆ.

  • ಸಂಪುಟ ಪುನಾರಚನೆ ಇಲ್ಲ, ಕರ್ನಾಟಕದಿಂದ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲ: ಸಿಎಂ

    ಸಂಪುಟ ಪುನಾರಚನೆ ಇಲ್ಲ, ಕರ್ನಾಟಕದಿಂದ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲ: ಸಿಎಂ

    ಬೆಂಗಳೂರು: ಸಂಪುಟ ಪುನಾರಚನೆ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಸದ್ಯಕ್ಕೆ ಸಂಪುಟ ಪುನಾರಚನೆ ಇಲ್ಲ. ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ ಅಂತಾ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರು ಪ್ರೆಸ್ ಕ್ಲಬ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಮಿನಿಮಮ್ 15, ಮ್ಯಾಕ್ಸಿಮಮ್ 20 ಗೆಲ್ತೀವಿ. ಬಿಜೆಪಿ ಅವರ ರೀತಿ, ಯಡಿಯೂರಪ್ಪ ರೀತಿ 28ಕ್ಕೆ 28 ಗೆಲ್ತೀವಿ ಅಂತೇಳಲ್ಲ ಎಂದು ಬಿಎಸ್ ವೈ ರೀತಿ ಮಿಮಿಕ್ರಿ ಮಾಡಿದ್ರು.

    ಇದೇ ವೇಳೆ ನೀವು ಪ್ರಧಾನ ಮಂತ್ರಿ ರೇಸ್ ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರಧಾನಿ ಅಭ್ಯರ್ಥಿ ಅಂತಾ ಕರ್ನಾಟಕದಿಂದ ಯಾರೂ ಇಲ್ಲ. ಕೇಂದ್ರದಲ್ಲಿ INDIA ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ನಮ್ಮ ಕಾರ್ಯಕ್ರಮಗಳ ಜಾರಿ ಆಧಾರದಲ್ಲಿ ಚರ್ಚಿಸಿ ಪ್ರಧಾನಮಂತ್ರಿ ಯಾರಾಗಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ ಅಂತಾ ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ಪ್ರಜ್ವಲ್‌ ತಪ್ಪು ಮಾಡದೇ ಇದ್ದರೆ ಜೆಡಿಎಸ್‌ನಿಂದ ಅಮಾನತು ಮಾಡಿದ್ದು ಯಾಕೆ : ಸಿಎಂ ಪ್ರಶ್ನೆ

    ಜಾತಿ ಗಣತಿಯನ್ನ‌ (Caste Census) ಸ್ವೀಕಾರ ಮಾಡಿದ್ದೇವೆ. ನಾನು ವರದಿಯನ್ನು ನೋಡಿಯೂ ಇಲ್ಲ. ಕ್ಯಾಬಿನೆಟ್ ‌ಮುಂದೆ ಇಟ್ಟು ಚರ್ಚೆ ಆಗಬೇಕು. ಆ ಬಳಿಕ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ ಅಂತೇಳಿದ್ರು. ಅಲ್ಲದೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನ ಮುಸ್ಲಿಮರಿಗೆ ಕಿತ್ತು ಕೊಟ್ಟಿದ್ದಾರೆ ಎಂಬುದು 100ಕ್ಕೆ 100 ಸುಳ್ಳು. ಭಾವನಾತ್ಮಕವಾಗಿ ಜನರನ್ನ ಕೆರಳಿಸಿ ವೋಟ್ ತೆಗೆದುಕೊಳ್ಳುವುದಲ್ಲ. ಹೀಗಿರುವ ಮೀಸಲಾತಿ ವ್ಯವಸ್ಥೆ ಯಥಾಸ್ಥಿತಿ ಮುಂದುವರಿಯಲಿದೆ ಅಂತಾ ಸಿಎಂ ಹೇಳಿದ್ರು.

  • ಹರಿಯಾಣದಲ್ಲಿ ನೂತನ ಸಚಿವರಾಗಿ 8 ಮಂದಿ ಪ್ರಮಾಣ ವಚನ ಸ್ವೀಕಾರ

    ಹರಿಯಾಣದಲ್ಲಿ ನೂತನ ಸಚಿವರಾಗಿ 8 ಮಂದಿ ಪ್ರಮಾಣ ವಚನ ಸ್ವೀಕಾರ

    ಚಂಡೀಗಢ: ಇಂದು ಹರಿಯಾಣದಲ್ಲಿ ನಯಾಬ್ ಸಿಂಗ್ (Nayab Singh) ಅವರ ಸಚಿವ ಸಂಪುಟ ವಿಸ್ತರಣೆಯಾಗಿದೆ. ಒಟ್ಟು 8 ಹೊಸ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಸದ್ಯ ನಯಾಬ್‌ ಅವರ ಸಂಪುಟದಲ್ಲಿ ಒಟ್ಟು 13 ಮಂದಿ ಸಚಿವರಿದ್ದಾರೆ.

    ಇತ್ತೀಚೆಗಷ್ಟೇ ಹರಿಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿಯು ನಯಾಬ್ ಸಿಂಗ್ ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಬಹುಮತ ಸಾಬೀತುಪಡಿಸಿದ ನಂತರ ನಯಾಬ್ ಸಿಂಗ್ ಹರಿಯಾಣದ ಹೊಸ ಮುಖ್ಯಮಂತ್ರಿಯಾದರು.

    ನಯಾಬ್ ಸಿಂಗ್ ಸಿಎಂ ಆದ ಬಳಿಕ ಇಂದು ರಾಜಭವನದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ.‌ ಒಟ್ಟು 8 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಳೆದ ಬಾರಿ 5 ಮಂದಿಗೆ ಸಚಿವ ಸ್ಥಾನ ನೀಡಲಾಗಿತ್ತು. ಈ ಮೂಲಕ ಈಗ ಉಪ ಸಚಿವ ಸಂಪುಟದಲ್ಲಿ ಒಟ್ಟು 13 ಮಂದಿ ಸಚಿವ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಸಿಎಎಗೆ ತಡೆ ಇಲ್ಲ: ಅರ್ಜಿಗಳಿಗೆ 3 ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

    ಪ್ರಮಾಣ ವಚನ ಸ್ವೀಕರಿಸಿದವರು ಯಾರು?: ಕಮಲ್ ಗುಪ್ತಾ, ಸೀಮಾ ತ್ರಿಖಾ, ಮಹಿಪಾಲ್ ಧಂಡಾ, ಅಸೀಮ್ ಗೋಯಲ್, ಅಭಯ್ ಸಿಂಗ್ ಯಾದವ್, ಸುಭಾಷ್ ಸುಧಾ ಹಾಗೂ ವಿಶಂಭರ್ ಸಿಂಗ್ ವಾಲ್ಮೀಕಿ ಹಾಗೂ ಸಂಜಯ್ ಸಿಂಗ್ ನೂತನ ಸಚವರುಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

  • ಮೂರನೇ ಹಂತದ ಮೆಟ್ರೋ ಯೋಜನೆ ಕೈಗೆತ್ತಿಕೊಳ್ಳಲು ಸಂಪುಟ ತೀರ್ಮಾನ

    ಮೂರನೇ ಹಂತದ ಮೆಟ್ರೋ ಯೋಜನೆ ಕೈಗೆತ್ತಿಕೊಳ್ಳಲು ಸಂಪುಟ ತೀರ್ಮಾನ

    ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮೂರನೇ ಹಂತದ ಮೆಟ್ರೋ (Metro) ಕಾಮಗಾರಿ ಕೈಗೆತ್ತಿಕೊಳ್ಳಲು ಇಂದಿನ ಸಚಿವ ಸಂಪುಟ (Cabinet of Ministers) ಒಪ್ಪಿಗೆ ನೀಡಿದೆ.

    ಒಟ್ಟು 15,611 ಕೋಟಿ ವೆಚ್ಚದಲ್ಲಿ ಮೂರನೇ ಹಂತದ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. 2028 ರೊಳಗೆ ಮೂರನೆ ಹಂತದ ಕಾಮಗಾರಿ ಮುಗಿಸುವ ಲೆಕ್ಕಾಚಾರದಲ್ಲಿ ಸಂಪುಟ ಒಪ್ಪಿಗೆ ನೀಡಿದೆ. 80-85% ರಾಜ್ಯ ಸರ್ಕಾರ ಹಾಗೂ 15% ಅಂದಾಜು ಕೇಂದ್ರ ಸರ್ಕಾರ ವೆಚ್ಚ ಭರಿಸಲಿದೆ. ಒಟ್ಟು 44.65 ಕಿ.ಮೀನ ಮೂರನೇ ಹಂತದ ಮೆಟ್ರೋ ಕಾಮಗಾರಿ ಇದಾಗಿದೆ. ಇದನ್ನೂ ಓದಿ: ರಾಜಕೀಯಕ್ಕೆ ಬಂದಾಗ ಜಾಸ್ತಿ ಟೀಕೆ ಎದುರಿಸಬೇಕು: ಯದುವೀರ್ ಒಡೆಯರ್

    ಹೆಬ್ಬಾಳದಿಂದ (Hebbala) ಶುರುವಾಗಿ ತುಮಕೂರು ರಸ್ತೆ ರಾಜ್‌ಕುಮಾರ್ ಸಮಾಧಿ ಆಸುಪಾಸು ಹಾಗೂ ಅಲ್ಲಿಂದ ಮೈಸೂರು ರಸ್ತೆ, ಕನಕಪುರ ರಸ್ತೆ, ಮಾಗಡಿ ರಸ್ತೆ ಮೂಲಕ ಜೆಪಿ ನಗರ (JP Nagar) ತಲುಪುವ ಮೆಟ್ರೋ ಕಾಮಗಾರಿ ಇದಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಚುನಾವಣಾ ಬಾಂಡ್‌ ವಿವರವನ್ನು ಬಹಿರಂಗಪಡಿಸಿದ ಚುನಾವಣಾ ಆಯೋಗ

  • ರಾಜ್ಯದಲ್ಲಿ ಸಿಎಎ ಜಾರಿ ಆಗುತ್ತಾ? – ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡ್ತೀವಿ ಎಂದ ಪರಮೇಶ್ವರ್‌

    ರಾಜ್ಯದಲ್ಲಿ ಸಿಎಎ ಜಾರಿ ಆಗುತ್ತಾ? – ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡ್ತೀವಿ ಎಂದ ಪರಮೇಶ್ವರ್‌

    ಬೆಂಗಳೂರು: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿ ಮಾಡಬೇಕೇ? ಬೇಡ್ವೇ ಎಂಬುದರ ಬಗ್ಗೆ ಕ್ಯಾಬಿನೆಟ್‌ನಲ್ಲಿ (Cabinet) ತೀರ್ಮಾನ ಮಾಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ (Dr G Parmeshwaar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅದರ ಬಗ್ಗೆ ಇನ್ನು ಚರ್ಚೆ ಮಾಡಿಲ್ಲ. ಸಿಎಂ ಸಚಿವ ಸಂಪುಟ ಸಭೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಅವೆಲ್ಲವನ್ನೂ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.  ಇದನ್ನೂ ಓದಿ: ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಕ್ಕೆ ಟಿಕೆಟ್ ಕೊಡ್ತಿಲ್ಲ: ಸಿದ್ದರಾಮಯ್ಯ

     

    ಸಿಎಎಯಿಂದ ಕಾಂಗ್ರೆಸ್ (Congress) ಹಿನ್ನಡೆ ಭೀತಿ ಇದೆ ಅಂತ ಬಿಜೆಪಿಯವರು ಹೇಳುತ್ತಾರೆ. ಬಿಜೆಪಿಯವರು ತಂದಿದ್ದಾರೆ. ನಮ್ಮ ಮೇಲೆ ಎನಾದರೂ ಆರೋಪ ಮಾಡಬೇಕು ಅಲ್ವಾ? ನಾವು ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಬೇಕು ಎಂಬುದು ನಮ್ಮ ವಾದ. ಇಷ್ಟು ದಿನ ಸುಮ್ಮನೆ ಇದ್ದು ಈಗ ರಾಜಕೀಯಕ್ಕೆ ಬಳಸ್ತಾರೆ. ಚುನಾವಣಾ ಸಂದರ್ಭದಲ್ಲಿ ಯಾಕೆ ತರಬೇಕಿತ್ತು ಎಂದು ಪ್ರಶ್ನೆ ಮಾಡಿದರು.

    ಚುನಾವಣಾ ದೃಷ್ಟಿಯಿಂದ ಸಿಎಎ ಜಾರಿ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದಕ್ಕೆ ಯಾವುದೇ ರಾಕೆಟ್ ಸೈನ್ಸ್ ಬೇಕಿಲ್ಲ. ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ : ಪ್ರತಾಪ್‌ ಸಿಂಹ

    ಸರ್ಕಾರದ ಮಟ್ಟದಲ್ಲಿ ಇನ್ನೂ ಜಾರಿ ಬಗ್ಗೆ ಚರ್ಚೆ ಮಾಡಿಲ್ಲ‌. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರವಾಸದಲ್ಲಿದ್ದು, ನಾಳೆ ಕ್ಯಾಬಿನೆಟ್‌ ಸಭೆಯಿದೆ. ಬಾಂಗ್ಲಾದೇಶ, ಬೇರೆ ದೇಶದಿಂದ ಬಂದವರನ್ನ ಗುರುತಿಸಿ ವಾಪಸ್ ಕಳಿಸುತ್ತಿದ್ದೇವೆ. ಪಾಸ್‌ಪೋರ್ಟ್ ಇಲ್ಲದಿದ್ದರೆ ಅವರನ್ನು ವಾಪಸ್ ಕಳುಹಿಸುತ್ತಿದ್ದೇವೆ ಎಂದರು.

     

  • ಕರ್ನಾಟಕದ ಜನರಿಗೆ ವಾಟರ್ ಶಾಕ್ – ಕುಡಿಯುವ ನೀರಿನ ತೆರಿಗೆ ಹೆಚ್ಚಳ

    ಕರ್ನಾಟಕದ ಜನರಿಗೆ ವಾಟರ್ ಶಾಕ್ – ಕುಡಿಯುವ ನೀರಿನ ತೆರಿಗೆ ಹೆಚ್ಚಳ

    – ಗ್ಯಾರಂಟಿ ಯೋಜನೆಯ ಅನುದಾನಕ್ಕೆ ತೆರಿಗೆ ಹೆಚ್ಚಳ?

    ಬೆಂಗಳೂರು: ಬರಗಾಲದಲ್ಲೂ ರಾಜ್ಯದ ಜನರಿಗೆ ಸರ್ಕಾರ (Karnataka Govt) ಕುಡಿಯುವ ನೀರಿನ (Drinking Water) ತೆರಿಗೆ ಹೆಚ್ಚಿಸುವ ಮೂಲಕ ಶಾಕ್ ನೀಡಿದೆ. ಗೃಹ ಉಪಯೋಗ ಬಳಕೆ ನೀರಿನ ಮೇಲಿನ ತೆರಿಗೆ ಹೆಚ್ಚಳಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಒಪ್ಪಿಗೆ ನೀಡಲಾಗಿದ್ದು, ಜನರಿಗೆ ಕುಡಿಯುವ ನೀರು ದುಬಾರಿಯಾಗಲಿದೆ. ಇದನ್ನೂ ಓದಿ: ಅನುದಾನ ಖಾಲಿ – 3 ವರ್ಷ ಜಾರಿಯಿದ್ದ ಮಹಿಳಾ ಪರ ಯೋಜನೆ ಸ್ಥಗಿತ

    ಕೈಗಾರಿಕೆಗಳಿಗೆ ನೀಡುವ ನೀರಿನ ಜೊತೆಗೆ ಗೃಹ ಬಳಕೆ ನೀರಿಗೂ ಟ್ಯಾಕ್ಸ್ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ‌ ನೀಡಿದೆ. ಈ ಸಂಬಂಧ ಕರ್ನಾಟಕ ನೀರಾವರಿ (ನೀರಿನ ಕರ ವಿಧಿಸುವಿಕೆ) ನಿಯಮಗಳು 1965 ಕ್ಕೆ ತಿದ್ದುಪಡಿಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಹೊಸ ತೆರಿಗೆ ಪ್ರಕಾರ ಗೃಹ ಬಳಕೆ ನೀರಿಗೆ ಪ್ರತಿ MCFTಗೆ (Million Cubic Feet) 320 ರೂ. ಟ್ಯಾಕ್ಸ್ ಹೆಚ್ಚಳವಾಗಲಿದೆ. ಅದರಂತೆ ಕೈಗಾರಿಕೆಗಳಿಗೆ ಪ್ರತಿ MCFT ಗೆ 3 ಲಕ್ಷ ರೂ. ಟ್ಯಾಕ್ಸ್ ಹೆಚ್ಚಳವಾಗಲಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಎಣ್ಣೆ ಶಾಕ್ ಫಿಕ್ಸ್ – ಜನವರಿಯಿಂದ ಮದ್ಯದ ಬೆಲೆಯಲ್ಲಿ ಭಾರೀ ಏರಿಕೆ – ಕೆಳ ವರ್ಗದ ಜನ ಅತೀ ಹೆಚ್ಚು ಸೇವಿಸುವ ಮದ್ಯದ ದರ ಹೆಚ್ಚಳ

    ರಾಜ್ಯದಲ್ಲಿ ಬರ ತಾಂಡವವಾಡುವ ಸಮಯದಲ್ಲಿ ಗೃಹ ಉಪಯೋಗಿ ನೀರು ಬಳಕೆಗೆ ಟ್ಯಾಕ್ಸ್ ಹೆಚ್ಚಳ ಬೇಕಿತ್ತಾ ಎಂಬ ಆಕ್ರೋಶ ಶುರುವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಕುಡಿಯುವ ನೀರಿಗೂ ಟ್ಯಾಕ್ಸ್ ಹೆಚ್ಚಳ ಮಾಡುವ ಅವಶ್ಯಕತೆ ಇತ್ತಾ ಎಂಬ ಚರ್ಚೆ ಆರಂಭವಾಗಿದೆ.

     

  • ಕರ್ನಾಟಕದಿಂದ ಪಾಠ ಕಲಿತ ಬಿಜೆಪಿ ಹೈಕಮಾಂಡ್ – ಮಧ್ಯಪ್ರದೇಶದಲ್ಲಿ ಮಾಡಿದ ಬದಲಾವಣೆ ಏನು?

    ಕರ್ನಾಟಕದಿಂದ ಪಾಠ ಕಲಿತ ಬಿಜೆಪಿ ಹೈಕಮಾಂಡ್ – ಮಧ್ಯಪ್ರದೇಶದಲ್ಲಿ ಮಾಡಿದ ಬದಲಾವಣೆ ಏನು?

    ಭೋಪಾಲ್: ಕರ್ನಾಟಕ ವಿಧಾನಸಭೆ ಚುನಾವಣೆ ಮುನ್ನ ಖಾಲಿ ಸಚಿವ ಸ್ಥಾನಗಳನ್ನು ಭರ್ತಿ ಮಾಡದೆ ನಿರ್ಲಕ್ಷ್ಯ ಮಾಡಿ ಪೆಟ್ಟು ತಿಂದಿದ್ದ ಬಿಜೆಪಿ (BJP) ಹೈಕಮಾಂಡ್ ಅಂತಹದೇ ತಪ್ಪನ್ನು ಮಧ್ಯಪ್ರದೇಶದಲ್ಲಿ (Madhyapradesh) ಮಾಡದಿರಲು ನಿರ್ಧರಿಸಿದೆ. ಈ ಹಿನ್ನೆಲೆ ಚುನಾವಣೆಗೂ ಎರಡು ತಿಂಗಳು ಮುನ್ನ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡಿದೆ.

    ಹೈಕಮಾಂಡ್ ಅನುಮತಿ ಹಿನ್ನೆಲೆ ಮುಖ್ಯಮಂತ್ರಿ ಶಿವರಾಜ್ ಚವ್ಹಾಣ್ (Shivraj Singh Chouhan) ತಮ್ಮ ಸಚಿವ ಸಂಪುಟ (Cabinet of Ministers) ವಿಸ್ತರಣೆ ಮಾಡಿದ್ದಾರೆ. ಮೂವರು ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಶನಿವಾರ ನಡೆದ ಪ್ರಮಾಣ ವಚನ (Oath) ಸ್ವೀಕಾರ ಕಾರ್ಯಕ್ರಮದಲ್ಲಿ ಮೂವರು ಶಾಸಕರು ಮಂತ್ರಿಗಳಾಗಿ ಬಡ್ತಿ ಹೊಂದಿದ್ದರು. ಇದನ್ನೂ ಓದಿ: ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಭಾರತ ವಿಶ್ವಕ್ಕೇ ತನ್ನ ಸಾಮರ್ಥ್ಯ ತೋರಿಸಿದೆ- ಮೋದಿ

    ಮಾಜಿ ಸಚಿವ ಮತ್ತು ರೇವಾದಿಂದ ನಾಲ್ಕು ಬಾರಿ ಶಾಸಕರಾದ ರಾಜೇಂದ್ರ ಶುಕ್ಲಾ, ಬ್ರಾಹ್ಮಣ ನಾಯಕ ಗೌರಿಶಂಕರ್ ಬಿಸೆನ್, ಮಧ್ಯಪ್ರದೇಶ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ, ಮಹಾಕೋಶಲ್ ಪ್ರದೇಶದ ಬಾಲಘಾಟ್‌ನಿಂದ ಏಳು ಬಾರಿ ಶಾಸಕರಾಗಿರುವ ರಾಹುಲ್ ಲೋಧಿ ಅವರಿಗೆ ಪ್ರದೇಶ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರು ಪ್ರಮಾಣ ವಚನ ಬೋಧಿಸಿದರು. ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: ತಮಿಳುನಾಡು ಮನವಿಗೆ ಆದೇಶ ನೀಡಲು ಸುಪ್ರೀಂ ನಕಾರ

    ಮೂವರು ಶಾಸಕರ ಸೇರ್ಪಡೆಯಿಂದ ಶಿವರಾಜ್ ಸಿಂಗ್ ಚವ್ಹಾಣ್ ಸಂಪುಟದಲ್ಲಿನ ಸಚಿವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ರಾಜೇಂದ್ರ ಶುಕ್ಲಾ ಸೇರ್ಪಡೆಯಿಂದ ವಿಂಧ್ ಪ್ರದೇಶದ ಮಂತ್ರಿಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಗೌರಿಶಂಕರ್ ಬಿಸೆನ್ ಸೇರ್ಪಡೆಯಿಂದ ಮಹಾಕೋಶಲ್ ಪ್ರದೇಶದಲ್ಲಿ ಸಚಿವರ ಸಂಖ್ಯೆ ಎರಡಕ್ಕೆ ಏರಿದ್ದು, ರಾಹುಲ್ ಲೋಧಿ ಸೇರ್ಪಡೆಯಿಂದ ಬಡ ಬುಂದೇಲ್‌ಖಂಡ್ ಪ್ರದೇಶದ ಮಂತ್ರಿಗಳ ಸಂಖ್ಯೆ ಐದಕ್ಕೆ ಏರಿದಂತಾಗಿದೆ. ಇದನ್ನೂ ಓದಿ: Chandrayaan-3 ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ರೋವರ್ – ವೀಡಿಯೋ ರಿಲೀಸ್ ಮಾಡಿದ ಇಸ್ರೋ

    ರಾಹುಲ್ ಲೋಧಿ ಹಿರಿಯ ಭಾರತೀಯ ಜನತಾ ಪಕ್ಷದ ನಾಯಕಿ ಉಮಾಭಾರತಿ ಅವರ ಸೋದರಳಿಯ, ಬಿಸೆನ್ ಮತ್ತು ಲೋಧಿ ಮಧ್ಯಪ್ರದೇಶದ ಜನಸಂಖ್ಯೆಯ 45 ಪ್ರತಿಶತಕ್ಕಿಂತ ಹೆಚ್ಚಿರುವ ಇತರ ಹಿಂದುಳಿದ ವರ್ಗ ಸಮುದಾಯಕ್ಕೆ ಸೇರಿದ್ದು, ಇದು ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎನ್ನುವ ಲೆಕ್ಕಚಾರ ಹೊಂದಿದೆ. ಇದನ್ನೂ ಓದಿ: ತಮಿಳುನಾಡಿಗೆ ಕೆಆರ್‌ಎಸ್ ನೀರು ಬಂದ್ – ಇಂದು ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ವಿಚಾರಣೆ

    ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸಚಿವ ಸಂಪುಟ ವಿಸ್ತರಣೆ ಮೂಲಕ ರಾಜ್ಯದಲ್ಲಿ ಜಾತಿ ಮತ್ತು ಪ್ರಾದೇಶಿಕ ಸಮೀಕರಣವನ್ನು ಸರಿದೂಗಿಸಲು ಯತ್ನಿಸುತ್ತಿದ್ದು, ನವಂಬರ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ (Assembly Election) ಮೇಲೆ ಕೇಂದ್ರೀಕರಿಸಿದೆ. ಇದನ್ನೂ ಓದಿ: ನಿಮ್ಮ ಸಾಮರ್ಥ್ಯ, ಅಸಾಧಾರಣ ಕೌಶಲ್ಯವನ್ನ ಜಗತ್ತಿಗೆ ತೋರಿಸಿದ್ದೀರಿ – ಪ್ರಜ್ಞಾನಂದಗೆ ಮೋದಿ ಅಭಿನಂದನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೂನ್‌ 1ಕ್ಕೆ ನಡೆಯಬೇಕಿದ್ದ ಕ್ಯಾಬಿನೆಟ್‌ ಸಭೆ ಶುಕ್ರವಾರಕ್ಕೆ ಹೋಗಿದ್ದು ಯಾಕೆ?

    ಜೂನ್‌ 1ಕ್ಕೆ ನಡೆಯಬೇಕಿದ್ದ ಕ್ಯಾಬಿನೆಟ್‌ ಸಭೆ ಶುಕ್ರವಾರಕ್ಕೆ ಹೋಗಿದ್ದು ಯಾಕೆ?

    ಬೆಂಗಳೂರು: ಗುರುವಾರ ನಡೆಯಬೇಕಿದ್ದ ಕ್ಯಾಬಿನೆಟ್‌ ಸಭೆ (Cabinet Meeting) ಶುಕ್ರವಾರಕ್ಕೆ ಹೋಗಿದ್ದು ಯಾಕೆ ಎನ್ನುವುದು ಈಗ ಗೊತ್ತಾಗಿದೆ.

    ಕಾಂಗ್ರೆಸ್‌ ನೀಡಿದ ಗ್ಯಾರಂಟಿ (Congress Guarantee) ಜಾರಿ ಸಂಬಂಧ ಸಚಿವರ ಸಭೆಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು (Finance Department Officers) ವಿರೋಧ ವ್ಯಕ್ತಪಡಿಸಿದ್ದಾರೆ.

    ಎಲ್ಲಾ ಐದೂ ಗ್ಯಾರಂಟಿಗಳ ಜಾರಿ‌ ಸದ್ಯಕ್ಕೆ ಕಷ್ಟ. ಬಜೆಟ್ ನಲ್ಲಿ ಅನುದಾನ ಹಂಚಿಕೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಉತ್ತರಕ್ಕೆ ಸಚಿವರುಗಳು, ನಾವು ಗ್ಯಾರಂಟಿ ಜಾರಿ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಯಾರಿಗೆ ಅಂತ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ: ಹೆಬ್ಬಾಳ್ಕರ್ ಹೇಳಿಕೆ ಒಪ್ಪದ ಡಿಕೆಶಿ

     

    ಸಚಿವರು ಜಾರಿಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ಒಂದು ದಿನ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಗುರುವಾರ ನಡೆಯಬೇಕಿದ್ದ ಸಂಪುಟ ಸಭೆ ಶುಕ್ರವಾರಕ್ಕೆ ಮುಂದೂಡಿಕೆಯಾಗಿದೆ.

    ಕಾಂಗ್ರೆಸ್‌ ನಾಯಕರು ಚುನಾವಣಾ ಪ್ರಚಾರದಲ್ಲಿ ಐದು ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್‌ನಲ್ಲೇ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಮೊದಲ ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿ ಜಾರಿ ಸಂಬಂಧ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.

    5 ಗ್ಯಾರಂಟಿ ಯೋಜನೆಗಳು ಯಾವುದು?
    ಗೃಹಜ್ಯೋತಿ : ಎಲ್ಲಾ ಮನೆಗಳಿಗೂ 200 ಯೂನಿಟ್‌ ಉಚಿತ ವಿದ್ಯುತ್‌
    ಗೃಹಲಕ್ಷ್ಮಿ : ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ರೂ.
    ಅನ್ನಭಾಗ್ಯ : ಬಿಪಿಎಲ್‌ ಕುಟುಂಬಗಳಿಗೆ 10 ಕೆಜಿ ಆಹಾರ ಧಾನ್ಯ
    ಯುವನಿಧಿ : ಎರಡು ವರ್ಷಗಳ ಕಾಲಕ್ಕೆ ನಿರುದ್ಯೋಗಿ ಭತ್ಯೆ – ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ಡಿಪ್ಲೋಮಾ ಮಾಡಿದವರಿಗೆ ತಿಂಗಳಿಗೆ 1,500 ರೂ.
    ಉಚಿತ ಪ್ರಯಾಣ: ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ

  • 34 ಮಂದಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

    34 ಮಂದಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಸಂಪುಟದ 34 ಮಂದಿಗೆ ಖಾತೆ ಹಂಚಿಕೆ ಮಾಡಲಾಗಿದೆ.

    ಹಣಕಾಸು, ಗುಪ್ತಚರ, ಡಿಪಿಎಆರ್‌ ಸೇರಿದಂತೆ ಹಂಚಿಕೆಯಾಗದ ಎಲ್ಲಾ ಖಾತೆಗಳನ್ನು ಸಿಎಂ ಸಿದ್ದರಾಮಯ್ಯ ತಮ್ಮ ಬಳಿಯೇ ಉಳಿಸಿಕೊಂಡಿದ್ದರೆ ಉಪ ಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್‌ಗೆ (DK Shivakumar) ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ ಖಾತೆ ಸಿಕ್ಕಿದೆ.

    ಯಾರಿಗೆ ಯಾವ ಖಾತೆ?
    ಸಿದ್ದರಾಮಯ್ಯ – ಹಣಕಾಸು, ಗುಪ್ತಚರ, ಡಿಪಿಎಆರ್, ಹಂಚಿಕೆಯಾಗದ ಎಲ್ಲಾ ಖಾತೆಗಳು
    ಡಿಕೆಶಿ – ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ
    ಪರಮೇಶ್ವರ್ – ಗೃಹ
    ಕೆ.ಜೆ.ಜಾರ್ಜ್ – ಇಂಧನ
    ಕೆ.ಎಚ್.ಮುನಿಯಪ್ಪ – ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ
    ಎಂ.ಬಿ.ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ
    ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಐಟಿ-ಬಿಟಿ

    ರಾಮಲಿಂಗಾರೆಡ್ಡಿ – ಸಾರಿಗೆ
    ಹೆಚ್.ಕೆ.ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ, ಪ್ರವಾಸೋದ್ಯಮ
    ಕೃಷ್ಣಬೈರೇಗೌಡ – ಕಂದಾಯ
    ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
    ಸತೀಶ್ ಜಾರಕಿಹೊಳಿ – ಸಮಾಜ ಕಲ್ಯಾಣ

    ಬೈರತಿ ಸುರೇಶ್ – ನಗರ ಅಭಿವೃದ್ಧಿ
    ಡಾ.ಶರಣಪ್ರಕಾಶ್ – ಉನ್ನತ ಶಿಕ್ಷಣ
    ರಾಜಣ್ಣ – ಸಹಕಾರ
    ಆರ್ ಬಿ ತಿಮ್ಮಾಪುರ್ – ಅಬಕಾರಿ, ಮುಜುರಾಯಿ
    ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ
    ಚಲುವರಾಯಸ್ವಾಮಿ – ಕೃಷಿ
    ವೆಂಕಟೇಶ್ – ಪಶುಸಂಗೋಪನೆ, ರೇಷ್ಮೆ

    ಈಶ್ವರ್ ಖಂಡ್ರೆ – ಅರಣ್ಯ, ಪರಿಸರ
    ಶರಣ ಬಸಪ್ಪ ದರ್ಶನಾಪುರ್ – ಮಧ್ಯಮ ಕೈಗಾರಿಕೆ, ಸಾರ್ವಜನಿಕಾ ಕೈಗಾರಿಕೆ
    ಶಿವಾನಂದ ಪಾಟೀಲ್ – ಜವುಳಿ,
    ಎಸ್‍ಎಸ್ ಮಲ್ಲಿಕಾರ್ಜುನ್ – ಗಣಿ, ತೋಟಾಗರಿಕೆ
    ಶಿವರಾಜ್ ತಂಗಡಗಿ – ಹಿಂದೂಳಿದ ವರ್ಗಗಳು ಮತ್ತು ಎಸ್‍ಟಿ ಕಲ್ಯಾಣ
    ಮಂಕಾಳ ಸುಬ್ಬವೈದ್ಯ – ಮೀನುಗಾರಿಕೆ ಮತ್ತು ಬಂದರು
    ರಹೀಂ ಖಾನ್ – ಪೌರಾಡಳಿತ, ಹಜ್
    ಡಿ ಸುಧಾಕರ್ – ಮುಜರಾಯಿ

     

    ಸಂತೋಷ್ ಲಾಡ್ – ಕಾರ್ಮಿಕ, ಕೌಶಲ್ಯಭಿವೃದ್ಧಿ
    ಎನ್‍ಎಸ್ ಬೋಸರಾಜು – ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
    ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
    ಎಂಸಿ ಸುಧಾಕರ್ – ವೈದ್ಯಕೀಯ ಶಿಕ್ಷಣ
    ಬಿ ಸುಧಾಕರ್- ಮೂಲಸೌಕರ್ಯ ಅಭಿವೃದ್ಧಿ
    ಬಿ ನಾಗೇಂದ್ರ – ಯುವ ಸಬಲೀಕರಣ ಮತ್ತು ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ

  • ಅಸಮಾಧಾನ ಮಾಡಿಕೊಂಡರೆ ನಾನೇನು ಮಾಡಲು ಆಗುತ್ತೆ: ಡಿಕೆ ಶಿವಕುಮಾರ್‌

    ಅಸಮಾಧಾನ ಮಾಡಿಕೊಂಡರೆ ನಾನೇನು ಮಾಡಲು ಆಗುತ್ತೆ: ಡಿಕೆ ಶಿವಕುಮಾರ್‌

    ಬೆಂಗಳೂರು: ಅಸಮಾಧಾನ ಮಾಡಿಕೊಂಡರೆ ನಾನೇನು ಮಾಡಲು ಆಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (Dk Shivakumar) ಪ್ರತಿಕ್ರಿಯಿಸಿದ್ದಾರೆ.

    ಹಲವು ಶಾಸಕರಿಗೆ ಮಂತ್ರಿ ಸ್ಥಾನ (Minister Post) ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನಾನು ಸಾಕಷ್ಟು ಬಾರಿ ಅವಕಾಶ ವಂಚಿತನಾಗಿದ್ದೆ. ಧರಂ ಸಿಂಗ್‌, ಸಿದ್ದರಾಮಯ್ಯ ಸಂಪುಟದಲ್ಲಿ ನನಗೂ ಸಿಕ್ಕಿರಲಿಲ್ಲ. ನಾನು ತಾಳ್ಮೆಯಿಂದ ಕಾದಿದ್ದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಮೋದಿ ಕನಸಿನ ಸೆಂಟ್ರಲ್ ವಿಸ್ಟಾ ಯೋಜನೆಯಿಂದ ಉಳಿತಾಯವಾಗಲಿದೆ 1,000 ಕೋಟಿ ವಾರ್ಷಿಕ ಬಾಡಿಗೆ

     

    ಮಂತ್ರಿ ಸ್ಥಾನ ಸಿಗದ್ದಕ್ಕೆ ಅಸಮಾಧಾನ ಮಾಡಿಕೊಂಡರೆ ನಾನು ಏನು ಮಾಡಲು ಆಗುತ್ತೆ? ಮಾತನಾಡುವವರು ಮಾತನಾಡಲಿ. ನಾನೇನು ಮಾತನಾಡುವುದಿಲ್ಲ ಎಂದರು.

    ಕಳೆದ ಶನಿವಾರ ಕಂಠೀರವ ಸ್ಟೇಡಿಯಂನಲ್ಲಿ 10 ಮಂದಿ ಪ್ರಮಾಣ ವಚನ ಸ್ವೀಕರಿಸಿದರೆ ಇಂದು ರಾಜಭವನದಲ್ಲಿ ಗಾಜಿನ ಮನೆಯಲ್ಲಿ 24 ಮಂದಿ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.