Tag: cabinet

  • ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ – 8ನೇ ವೇತನ ಆಯೋಗ ರಚನೆಗೆ ಸಂಪುಟ ಅನುಮೋದನೆ

    ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ – 8ನೇ ವೇತನ ಆಯೋಗ ರಚನೆಗೆ ಸಂಪುಟ ಅನುಮೋದನೆ

    ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ನೌಕರರ ವೇತನ ಮತ್ತು ಪಿಂಚಣಿದಾರರ ಭತ್ಯೆಗಳನ್ನು ಪರಿಷ್ಕರಿಸಲು 8 ನೇ ವೇತನ ಆಯೋಗವನ್ನು (8th Pay Commission) ರಚಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 8 ನೇ ವೇತನ ಆಯೋಗವನ್ನು ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ.

    ಆಯೋಗಕ್ಕೆ ಶೀಘ್ರದಲ್ಲೇ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಕೇಂದ್ರ ಸರ್ಕಾರವು ಪ್ರತಿ 10 ವರ್ಷಕ್ಕೊಮ್ಮೆ ತನ್ನ ಉದ್ಯೋಗಿಗಳ ವೇತನವನ್ನು ಪರಿಷ್ಕರಿಸಲು ವೇತನ ಆಯೋಗವನ್ನು ರಚಿಸುತ್ತದೆ. ವೇತನ ಪರಿಷ್ಕರಿಸುವುದರ ಜೊತೆಗೆ, ಪ್ರತಿ ವೇತನ ಆಯೋಗವು ಒಂದು ಉಲ್ಲೇಖ ಅವಧಿಯನ್ನು (ToR) ಹೊಂದಿದೆ. ವೇತನ ಆಯೋಗಗಳು ಪಿಂಚಣಿ ಪಾವತಿಗಳನ್ನು ಸಹ ನಿರ್ಧರಿಸುತ್ತವೆ.

    7ನೇ ವೇತನ ಆಯೋಗವನ್ನು 2016 ರಲ್ಲಿ ರಚಿಸಲಾಗಿತ್ತು. ಅದರ ಅವಧಿ 2026 ರಲ್ಲಿ ಕೊನೆಗೊಳ್ಳಲಿದೆ.

  • ಭ್ರಷ್ಟಾಚಾರ ಕೇಸ್‌ – ರಾಜ್ಯಪಾಲರ ಅಂಗಳದಲ್ಲಿ ಬಿಎಸ್‌ವೈ ಭವಿಷ್ಯ

    ಭ್ರಷ್ಟಾಚಾರ ಕೇಸ್‌ – ರಾಜ್ಯಪಾಲರ ಅಂಗಳದಲ್ಲಿ ಬಿಎಸ್‌ವೈ ಭವಿಷ್ಯ

    ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪಗೆ (Yediyurappa) ಮತ್ತೊಂದು ಸಂಕಷ್ಟ ಎದುರಾಗಿದೆ. ಯಡಿಯೂರಪ್ಪ ವಿರುದ್ದದ ಭ್ರಷ್ಟಾಚಾರ (Corruption) ಆರೋಪ ಪ್ರಕರಣದ ತನಿಖೆಗೆ ಪೂರ್ವಾನುಮತಿ ನೀಡಬೇಕು ಎಂದು ಕೋರಿ ರಾಜ್ಯಪಾಲರಿಗೆ ಸರ್ಕಾರ ನಿರ್ಣಯ ರವಾನಿಸಿದೆ.

    ಸಾಮಾಜಿಕ ಕಾರ್ಯಕರ್ತ ಟಿಜಿ ಅಬ್ರಾಹಂ ದೂರಿನ ಮೇಲೆ ಕ್ರಮಕ್ಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಲು ಕಳೆದ ವಾರ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಲಾಗಿತ್ತು. ಇಂದು (ನ.03) ರಾಜ್ಯಪಾಲರ ಅನುಮತಿಗಾಗಿ ಸರ್ಕಾರ ನಿರ್ಣಯವನ್ನು ಶಿಫಾರಸು ಮಾಡಿದೆ.

    2020 ನವೆಂಬರ್ 19 ರಂದು ಟಿಜೆ ಅಬ್ರಹಾಂ (TJ Abraham) ಎಸಿಬಿಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಯಡಿಯೂರಪ್ಪ- ವಿಜಯೇಂದ್ರ (BY Vijayendra) ವಿರುದ್ದ ದೂರು ನೀಡಿದ್ದರು. ಬಿಡಿಎ ಫ್ಲಾಟ್ ಕಟ್ಟುವ ವಿಚಾರಕ್ಕೆ ರಾಮಲಿಂಗಂ ಕಂಪನಿಯಿಂದ 12 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು.

    ತನಿಖೆ – ವಿಚಾರಣೆ ನಡೆಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆದರೆ ರಾಜ್ಯಪಾಲರು ಅನುಮತಿಯನ್ನು ನಿರಾಕರಿಸಿದ್ದರು. ಈ ವಿಷಯ ಕ್ಯಾಬಿನೆಟ್ ಮುಂದೆ ಪ್ರಸ್ತಾಪ ಆಗಿತ್ತು. ರಾಜ್ಯಪಾಲರ ನಿರ್ಣಯ ಪುನಃ ಪರಿಶೀಲನೆಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಇದನ್ನೂ ಓದಿ: MUDA Scam Exclusive | ಸಿದ್ದರಾಮಯ್ಯಗೆ ಇಡಿ ಶಾಕ್ – ಸಿಎಂ ಪತ್ನಿಗೆ ಸೈಟ್ ಹಂಚಿಕೆಯೇ ಅಕ್ರಮ


    ಅಬ್ರಹಾಂ ನೀಡಿದ ದೂರಿನಲ್ಲಿ ಏನಿತ್ತು?
    ಕೋಲ್ಕತ್ತಾ ಮೂಲದ ಶೆಲ್ ಕಂಪನಿಗಳಲ್ಲಿ ಬಿಎಸ್‍ವೈ ಕುಟುಂಬಸ್ಥರು ಹೂಡಿಕೆ ಮಾಡಿದ್ದಾರೆ. ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಜೊತೆ ವಿಜಯೇಂದ್ರ, ಶಶಿಧರ ಮರಡಿ ಲಿಂಕ್ ಇದೆ. ಸರ್ಕಾರದ ವಿವಿಧ ಕಾಮಗಾರಿಗಳಿಗೆ ಫಂಡ್ ರಿಲೀಸ್ ಮಾಡಲು ಸಿಎಂ ಆಪ್ತರು ಒತ್ತಡ ಹಾಕಿದ್ದಾರೆ. ಸರ್ಕಾರ ವಿವಿಧ ಇಲಾಖೆ ಯೋಜನೆಗಳಲ್ಲಿ ಒತ್ತಡ ಹಾಕಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

    ದೂರಿಗೆ ಪೂರಕವಾಗಿ ವಾಟ್ಸಪ್ ಚಾಟ್ ಸಲ್ಲಿಕೆಯಾಗಿದ್ದು, 2020ರ ಅಕ್ಟೋಬರ್ 19 ರಂದು ಶಶಿಧರ್, ಚಂದ್ರಕಾಂತ್ ಅವರಲ್ಲಿ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಯಾವಾಗ ತಮ್ಮ ಬ್ಯಾಲೆನ್ಸ್ ಕ್ಲೀಯರ್ ಮಾಡ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ.  ಮಧ್ಯಾಹ್ನ 2:36ಕ್ಕೆ ಮೆಸೇಜ್ ಮಾಡಿ ಕೇಳಿರುವ ಸಾಕ್ಷಿಗಳಿದೆ. ಅದಕ್ಕೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಹಣ ನೀಡುತ್ತೇನೆ ಎಂದು ಚಂದ್ರಕಾಂತ್ ಹೇಳಿದ್ದಾರೆ. ಈ ಚಾಟ್‍ನಲ್ಲಿ ಶಶಿಧರ್ ಅವರಿಗೆ 3 ಕೋಟಿ ನೀಡುವ ಬಗ್ಗೆ ಮಾತುಕತೆ ನಡೆಸಿದ ಬಗ್ಗೆ ದಾಖಲೆ ಪತ್ತೆಯಾಗಿದೆ ಎಂದು ದೂರು ನೀಡಿದ್ದರು.

    ಆರೋಪಿಗಳು ಯಾರು?
    ಎ1 – ಸಿಎಂ ಬಿ.ಎಸ್ ಯಡಿಯೂರಪ್ಪ, ಎ2 – ಬಿ.ವೈ ವಿಜಯೇಂದ್ರ, ಎ3 – ಶಶಿಧರ್ ಮರಡಿ, ಎ4 – ಸಂಜಯ್ ಶ್ರೀ, ಎ5 – ಚಂದ್ರಕಾಂತ್ ರಾಮಲಿಂಗಂ, ಎ6 – ಎಸ್.ಟಿ ಸೋಮಶೇಖರ್, ಎ7 – ಡಾ. ಜಿಸಿ ಪ್ರಕಾಶ್ ಐಎಎಸ್, ಎ8 – ಕೆ ರವಿ, ಎ9 – ವಿರೂಪಾಕ್ಷಪ್ಪ ಯಮಕನಮರಡಿ.

     

  • ನಾವು ಜೆಡಿಎಸ್ ಶಾಸಕರನ್ನ ಕೊಂಡುಕೊಳ್ಳಲು ಹೋಗಿಲ್ಲ – ಪರಮೇಶ್ವರ್

    ನಾವು ಜೆಡಿಎಸ್ ಶಾಸಕರನ್ನ ಕೊಂಡುಕೊಳ್ಳಲು ಹೋಗಿಲ್ಲ – ಪರಮೇಶ್ವರ್

    – ಅಂಗಡಿಗೆ ಹೋದಾಗ ಪದಾರ್ಥಗಳ ಬೆಲೆ ಹೇಳ್ತಾರೆ ಎಂದಿದ್ದೇಕೆ?

    ಬೆಂಗಳೂರು: ಅಂಗಡಿಗೆ ಹೋಗಿ ಯಾವುದೋ ಪದಾರ್ಥದ ಬೆಲೆ ಎಷ್ಟು ಅಂತ ಕೇಳಿದಾಗ ಅವರು ಬೆಲೆ ಹೇಳುತ್ತಾರೆ. ಆದರೆ ಆ ರೀತಿ ನಾವೇನೂ ಜೆಡಿಎಸ್‌ನವರ ಬಳಿ ಹೋಗಿ ಕೇಳಿಲಿಲ್ಲ. ನಾವು ಯಾರನ್ನೂ ಕೊಂಡುಕೊಳ್ಳಲು ಹೋಗಿಲ್ಲ ಎಂದು ಸಚಿವ ಜಿ. ಪರಮೇಶ್ವರ್ (G Paramshewara) ಹೇಳಿದ್ದಾರೆ.

    ಸಿಪಿವೈ ಹೇಳಿಕೆಯಿಂದ ಜೆಡಿಎಸ್ (JDS) ಶಾಸಕರಿಂದ ಒಗ್ಗಟ್ಟು ಪ್ರದರ್ಶನ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾವೇನೂ ಅವರನ್ನು ಕೊಂಡುಕೊಳ್ಳಲು ಹೋಗಿಲ್ಲ. ಅಂಗಡಿಗೆ ಹೋಗಿ ಯಾವುದೋ ಪದಾರ್ಥದ ಬೆಲೆ ಎಷ್ಟು ಅಂತ ಕೇಳಿದಾಗ ಅವರು ಬೆಲೆ ಹೇಳುತ್ತಾರೆ. ಆದರೆ ಆ ರೀತಿ ನಾವೇನೂ ಜೆಡಿಎಸ್‌ನವರ ಬಳಿ ಹೋಗಿ ಕೇಳಿಲಿಲ್ಲ. ಯೋಗೇಶ್ವರ್ ಅವರು ಹಾಗೇ ಏನೋ ಹೇಳಿಕೆ ಕೊಟ್ಟಿದ್ದಾರೆ ಅಷ್ಟೇ. ಅದನ್ನೇ ಜೆಡಿಎಸ್‌ನವರು ಅಷ್ಟೊಂದು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ ಎಂದರು.ಇದನ್ನೂ ಓದಿ: ನಾನು, ನನ್ನ ಮಗ ಜೈಲಿಗೆ ಹೋಗುವಂತಹ ತಪ್ಪು ಮಾಡಿಲ್ಲ: ಹೆಚ್.ಡಿ.ರೇವಣ್ಣಗೆ ಜಿಟಿಡಿ ತಿರುಗೇಟು

    ಸಂಪುಟ ಪುನಾರಚನೆ ಬಗ್ಗೆ ಮಾತನಾಡಿ, ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ. ಡಿಸಿಎಂ ಅವರು ದೆಹಲಿಗೆ ಹೋಗಿದ್ದಾರೆ. ಖಾತೆ ಬದಲಾವಣೆ ಬಗ್ಗೆ ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ಇಷ್ಟು ಕಾಲ ವರಿಷ್ಠರು ಏನು ಜವಾಬ್ದಾರಿ ಕೊಟ್ಟಿದ್ದಾರೋ ಅದನ್ನು ಮಾಡಿಕೊಂಡು ಬಂದಿದ್ದೇನೆ. ಈಗಲೂ ಅವರು ಏನೇ ಜವಾಬ್ದಾರಿ ಕೊಟ್ಟರೂ ಮಾಡುವುದಿಕ್ಕೆ ನಾನು ತಯಾರಾಗಿರುತ್ತೀನಿ. ಪಕ್ಷದ ಸೂಚನೆಯನ್ನು 35 ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದೇನೆ. ಸರ್ಕಾರ, ಪಕ್ಷದಲ್ಲಿ ಕೊಟ್ಟ ಜವಾಬ್ದಾರಿ ಮಾಡಿಕೊಂಡು ಬಂದಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಕೇಳಿದ್ದೇನೆ. ಒಂದೊಮ್ಮೆ ಆ ವಿಚಾರ ವರಿಷ್ಠರ ಮುಂದೆ ಇದ್ದರೆ ಬದಲಾವಣೆ ಮಾಡುತ್ತಾರೆ ಎಂದರು.

    ವರ್ಕಿಂಗ್ ಕಮಿಟಿಗಳ ಸಭೆ ನಾಳೆ ಇದ್ದು, ಸಾಮಾನ್ಯವಾಗಿ ಈ ಸಭೆಗೆ ಸಿಎಂ, ಕೆಪಿಸಿಸಿ (KPCC) ಅಧ್ಯಕ್ಷರನ್ನು ಕರೆಯುತ್ತಾರೆ. ಅದಕ್ಕಾಗಿ ಇಂದು (ನ.28) ಸಿಎಂ ದೆಹಲಿಗೆ ಹೋಗುತ್ತಿದ್ದಾರೆ. ಇದಾದ ನಂತರ ಹೈಕಮಾಂಡ್ ಜೊತೆ ಸಂಪುಟ ಪುನಾರಚನೆ ಬಗ್ಗೆ ಅವರಿಬ್ಬರೂ ಚರ್ಚೆ ಮಾಡಬಹುದೇನೋ? ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗೂ ಇದ್ದು, ಅಲ್ಲಲ್ಲೇ ಮಾತುಗಳು ಕೇಳಿಬರುತ್ತಿವೆ. ಈ ಎರಡೂ ವಿಚಾರಗಳ ಬಗ್ಗೆ ಸಿಎಂ, ಡಿಸಿಎಂ ಚರ್ಚೆ ಮಾಡಿ ಏನು ತೀರ್ಮಾನ ಮಾಡಿಕೊಂಡು ಬರುತ್ತಾರೆ ಗೊತ್ತಿಲ್ಲ ಎಂದು ಹೇಳಿದರು.

    ಮುಡಾ ಪ್ರಕರಣದಲ್ಲಿ (MUDA Scam)  ಸಿಎಂ ಕುಟುಂಬಕ್ಕೆ ಜಮೀನು ಮಾರಿದ ಮೂಲ ಮಾಲೀಕರ ಮಕ್ಕಳಿಂದ ದೂರು ವಿಚಾರವಾಗಿ ಮಾತನಾಡಿ, ಈಗಾಗಲೇ ಲೋಕಾಯುಕ್ತದಲ್ಲಿ ಮುಡಾ ತನಿಖೆ ನಡೆಯುತ್ತಿದೆ. ಬಹುಶ: ಲೋಕಾಯುಕ್ತದವರು ಇದನ್ನು ಗಮನಿಸಬಹುದು. ತನಿಖೆ ಮಾಡುವವರು ಇದನ್ನು ಗಮಿಸಿಯೇ ತನಿಖೆ ಮಾಡುತ್ತಾರೆ ಎಂದು ತಿಳಿಸಿದರು.

    ಮಂಡ್ಯದಲ್ಲಿ ಅಬಕಾರಿ ಲಂಚದ ವಿರುದ್ಧ ಕಾಂಗ್ರೆಸ್ (Congress) ಕಾರ್ಯಕರ್ತನಿಂದ ಲೋಕಾಯುಕ್ತ ದೂರು ವಿಚಾರವಾಗಿ ಮಾತನಾಡಿ, ಪೊಲೀಸ್ ಇಲಾಖೆಗೆ ದೂರು ಬಂದರೆ ತಕ್ಷಣ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಅವರು ಲೋಕಾಯುಕ್ತಕ್ಕೆ ಕೊಟ್ಟಿರುವ ಕಾರಣ ಲೋಕಾಯುಕ್ತದವರೇ ಅದನ್ನು ನೋಡುತ್ತಾರೆ. ಆದರೆ ನಮ್ಮ ಇಲಾಖೆಗೆ ದೂರು ಬಂದಿಲ್ಲ. ನಮ್ಮ ಇಲಾಖೆಗೆ ದೂರು ಬಂದರೆ ತನಿಖೆ ಮಾಡುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯಿಂದ ನರ್ಸ್ ಮೇಲೆ ಮಚ್ಚಿನಿಂದ ಹಲ್ಲೆ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

  • ಬಿಜೆಪಿ ಹಗರಣ ಚರ್ಚೆ, ಮಹದಾಯಿಗಾಗಿ ಸುಪ್ರೀಂ ಮೊರೆ: ಇಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಏನಾಯ್ತು?

    ಬಿಜೆಪಿ ಹಗರಣ ಚರ್ಚೆ, ಮಹದಾಯಿಗಾಗಿ ಸುಪ್ರೀಂ ಮೊರೆ: ಇಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಏನಾಯ್ತು?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ (Cabinet Meeting) ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ (BJP Scam) ಬಗ್ಗೆ ಚರ್ಚೆ ನಡೆದಿದೆ.

    ಕೋವಿಡ್ (Covid) ಮಧ್ಯಂತರ ವರದಿ ಬಗ್ಗೆ ಸಿದ್ದರಾಮಯ್ಯ ಅವರೇ ಪ್ರಸ್ತಾಪಿಸಿದ್ದು ಗಂಭೀರ ಚರ್ಚೆಯಾಗಿದೆ. ವರದಿ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

    ಸಂಸದೀಯ ವ್ಯವಹಾರಗಳ ಸಚಿ ಎಚ್.ಕೆ.ಪಾಟೀಲ್ (HK Patil) ಮಾತನಾಡಿ, ಕೆಲವು ಫೈಲ್ ಮಿಸ್ ಆಗಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪ ಆಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೊಟ್ಟ ವಿವರ ಸಹ ವರದಿಯಲ್ಲಿ ಬಂದಿದೆ. ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅಧಿಕಾರಿಗಳು ಈ ವರದಿ ಬಗ್ಗೆ ತಿಂಗಳ ಒಳಗಾಗಿ ವಿವರ ಕೊಡುತ್ತಾರೆ. ವಿವರವಾದ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

     

    ಮಹದಾಯಿ ಯೋಜನೆಗೆ (Mahadayi Project) ಅನುಮತಿಗೆ ವನ್ಯಜೀವಿಮಂಡಳಿ ಅನುಮೋದನೆ ನೀಡಿಲ್ಲ. ಆದರೆ ಗೋವಾದ ವಿದ್ಯುತ್ ಯೋಜನೆಗೆ ಅನುಮತಿ ನೀಡಲಾಗಿದೆ. ಈ ವಿಚಾರವನ್ನು ನಾವು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. ಸರ್ವಪಕ್ಷ ಸಭೆ ನಡೆಸಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ಅನ್ನಭಾಗ್ಯ ಯೋಜನೆಯಲ್ಲಿ ಅರ್ಧ ಕೆಜಿ ತೊಗರಿ, ಎಣ್ಣೆ, ಸಕ್ಕರೆ ಕೊಡುವ ಫುಡ್‌ಕಿಟ್ ಪ್ರಸ್ತಾವನೆ ಕೈಬಿಟ್ಟಿದ್ದು, ಯಥಾಸ್ಥಿತಿ ಮುಂದುವರಿಯಲಿದೆ. ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ಸಭೆ ನಡೆಸಿ ನ್ಯಾಯಾಂಗ ಉಲ್ಲಂಘನೆ ಮಾಡಿಲ್ಲ ಅಂತ ಎಚ್.ಕೆ ಪಾಟೀಲ್ ವಿವರಿಸಿದರು.

  • ಕರ್ನಾಟಕದಲ್ಲಿ 53 ಎಫ್‌ಎಂ ಸ್ಥಾಪನೆಗೆ ಅನುಮತಿ – ಯಾವ ನಗರಗಳಲ್ಲಿ ಬರಲಿದೆ?

    ಕರ್ನಾಟಕದಲ್ಲಿ 53 ಎಫ್‌ಎಂ ಸ್ಥಾಪನೆಗೆ ಅನುಮತಿ – ಯಾವ ನಗರಗಳಲ್ಲಿ ಬರಲಿದೆ?

    ನವದೆಹಲಿ: ಕರ್ನಾಟಕ (Karnataka) 53 ಸೇರಿದಂತೆ ದೇಶಾದ್ಯಂತ 234 ನಗರಗಳಲ್ಲಿ 730 ಹೊಸ ಎಫ್‌ಎಂ (FM) ಚಾನೆಲ್‌ ತೆರೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಸೂಚನೆ ತಿಳಿಸಿದೆ.

    ಇ-ಹರಾಜು ಮೂಲಕ ಖಾಸಗಿ ಸಂಸ್ಥೆಗಳಿಗೆ ಎಫ್‌ಎಂ ಚಾನೆಲ್ ಅವಕಾಶ ಸಿಗಲಿದ್ದು 730 ಚಾನೆಲ್‌ಗಳಿಗೆ 784.87 ಕೋಟಿ ರೂ ಮೂಲ ಬಿಡ್ಡಿಂಗ್ ಮೊತ್ತ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.78 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

    ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ ಬೆಟಗೇರಿ, ಹಾಸನ, ಹೊಸಪೇಟೆ, ಉಡುಪಿ ಸೇರಿದಂತೆ 16 ನಗರಗಳಲ್ಲಿ 53 ಎಫ್‌ಎಂ ಕೇಂದ್ರ ತೆರೆಯಲು ಅನುಮತಿ ಸಿಕ್ಕಿದೆ.

    ಇದರಿಂದ ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ. ಸ್ಥಳೀಯ ಉಪಭಾಷೆ ಮತ್ತು ಸಂಸ್ಕೃತಿಗೆ ಉತ್ತೇಜನ ಸಿಗಲಿದೆ ಎಂದು ಸರ್ಕಾರ ಹೇಳಿದೆ.

     

  • ನಾನ್ಯಾಕೆ ರಾಜೀನಾಮೆ ನೀಡಲಿ? ರಾಜ್ಯಪಾಲರೇ ರಾಜೀನಾಮೆ ನೀಡಬೇಕು: ಸಿಎಂ

    ನಾನ್ಯಾಕೆ ರಾಜೀನಾಮೆ ನೀಡಲಿ? ರಾಜ್ಯಪಾಲರೇ ರಾಜೀನಾಮೆ ನೀಡಬೇಕು: ಸಿಎಂ

    ಬೆಂಗಳೂರು: ನಾನು ಯಾಕೆ ರಾಜೀನಾಮೆ ನೀಡಲಿ? ನಡೆದುಕೊಂಡ ನಿರ್ಧಾರಕ್ಕೆ ರಾಜ್ಯಪಾಲರೇ ರಾಜೀನಾಮೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ತುರ್ತು ಕ್ಯಾಬಿನೆಟ್‌ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಹೀಗೆ ಮಾಡುತ್ತಾರೆ ಎನ್ನುವುದು ನಮಗೆ ಮೊದಲೇ ಗೊತ್ತಿತ್ತು. ರಾಜಕೀಯವಾಗಿ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ರಾಜಕೀಯವಾಗಿ ನಮಗೆ ಯಾಕೆ ಹಿನ್ನಡೆ ಆಗುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: MUDA Scam| ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿಗೆ `ಸುಪ್ರೀಂ ತೀರ್ಪು’ ಆಧಾರ – ರಾಜ್ಯಪಾಲರ ಆದೇಶದಲ್ಲಿ ಏನಿದೆ?

    ಜನರ ಮುಂದೆ ಅವರೇ ಎಕ್ಸ್‌ಪೋಸ್‌ ಆಗಿದ್ದಾರೆ. ರಾಜ್ಯಪಾಲರ ವಿರುದ್ದ ರಾಷ್ಟ್ರಪತಿಗಳಿಗೆ ದೂರು ಕೊಡುವ ಬಗ್ಗೆ ನಾವು ಇಂದು ಚರ್ಚೆ ಮಾಡಿಲ್ಲ. INDIA ಒಕ್ಕೂಟದ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್‌ – ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಬೆಳಕಿಗೆ ಬಂದಿದ್ದು ಹೇಗೆ?

    ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ನಿರಾಣಿ ಹಾಗೂ ಜನಾರ್ದನ ರೆಡ್ಡಿ ವಿರುದ್ದ ಇಲ್ಲಿಯವರೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ. ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ಲೂಟಿಯಲ್ಲಿ ಇವರ ಪಾತ್ರ ಇದೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

    ದೂರುದಾರ ಪ್ರದೀಪ್ ಕುಮಾರ್ ಜೆಡಿಎಸ್ ಲೀಗಲ್ ಸೆಲ್‌ ಅಧ್ಯಕ್ಷರು. ಕಾನೂನು ಸ್ವರೂಪ ಈಗ ಹೇಳುವುದಿಲ್ಲ, ಮಾಡುವಾಗ ಹೇಳುತ್ತೇನೆ. 7 ಕೋಟಿ ಜನರ ಬೆಂಬಲದಿಂದ ಸರ್ಕಾರ ರಚನೆಯಾಗಿದೆ. 135+1 ಸ್ಥಾನ ಗೆದ್ದಿದ್ದು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.

     

  • ಸಿದ್ದರಾಮಯ್ಯ ರಕ್ಷಣೆ ಮಾಡಲು ರಾಜ್ಯಪಾಲರ ವಿರುದ್ದ ಕ್ಯಾಬಿನೆಟ್ ನಿರ್ಣಯ : ಅಶೋಕ್‌ ಕಿಡಿ

    ಸಿದ್ದರಾಮಯ್ಯ ರಕ್ಷಣೆ ಮಾಡಲು ರಾಜ್ಯಪಾಲರ ವಿರುದ್ದ ಕ್ಯಾಬಿನೆಟ್ ನಿರ್ಣಯ : ಅಶೋಕ್‌ ಕಿಡಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯರನ್ನು (CM Siddaramaiah) ರಕ್ಷಣೆ ಮಾಡಲು ಇಂದಿನ ಕ್ಯಾಬಿನೆಟ್‌ನಲ್ಲಿ (Cabinet) ರಾಜ್ಯಪಾಲರ ವಿರುದ್ದ ನಿರ್ಣಯ ಅಂಗೀಕಾರ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಅಶೋಕ್ (R Ashok) ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು,ಕ್ಯಾಬಿನೆಟ್ ಮಂತ್ರಿಗಳು ಸಿದ್ದರಾಮಯ್ಯ ರಕ್ಷಣೆ ನಿಂತಿದ್ದಾರೆ‌. ದೂರು ಕೊಟ್ಟಾಗ ಅದಕ್ಕೆ ವಿವರಣೆ ಕೇಳುವುದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ಹೀಗೆ ಕೇಳಬೇಕು ಅಂದರೆ ಆಗುತ್ತಾ? ರಾಜ್ಯಪಾಲರು ನೋಟಿಸ್‌ ಕೊಡುವಾಗ ಕಾನೂನು ನೋಡಿ ಕೊಟ್ಟಿರುತ್ತಾರೆ. ಅದನ್ನ ‌ಪ್ರಶ್ನೆ ಮಾಡಿದ್ರೆ ಕಾನೂನುಗಿಂತ ನೀವು ದೊಡ್ಡವರಾ? ಕ್ಯಾಬಿನೆಟ್ ಕರೆದು ರಾಜ್ಯಪಾಲರ ಮೇಲೆ ಒತ್ತಡ ಹಾಕುವುದು ಸರಿಯಲ್ಲ ಅಂತ ಕಿಡಿಕಾರಿದರು.  ಇದನ್ನೂ ಓದಿ: ಮುಡಾ ಹಗರಣ; ಸಿಎಂ ಪರವಾಗಿ ಸಂಪುಟ ನಿರ್ಣಯ

     

    ಸಂವಿಧಾನದ ಪ್ರಕಾರ ರಾಜ್ಯಕ್ಕೆ ಸುಪ್ರೀಂ ರಾಜ್ಯಪಾಲರು. ಅವರಿಗೆ ಕಾನೂನು ಹೇಳಿಕೊಡಲು ಹೋಗ್ತೀರಾ? ಇದರಿಂದ ನೀವು ತಪ್ಪು ಮಾಡಿದ್ದೀರಾ ಅಂತ ಅಗುತ್ತದೆ. ಏನು ತಪ್ಪು ಮಾಡಿಲ್ಲ ಅಂದರೆ ಯಾಕೆ ಅಧಿವೇಶನದಲ್ಲಿ ಚರ್ಚೆ ಮಾಡಲಿಲ್ಲ. ಸಿಎಂ ಅವರು ದಾಖಲೆ ಸಮೇತ ಅಲ್ಲೇ ಎಲ್ಲವನ್ನು ಹೇಳಬಹುದಿತ್ತು. ಆದರೆ ಸಿದ್ದರಾಮಯ್ಯ ಅಂದು ಹೇಡಿ ತರಹ ಓಡಿ ಹೋಗಿದ್ದಾರೆ. ಇವರು ತಪ್ಪು ಮಾಡಿಲ್ಲ ಅಂದರೆ ಸರ್ಕಾರ ಅಸ್ಥಿರ ಆಗುತ್ತೆ ಅಂತ ಯಾಕೆ ಭಯ ಬೀಳ್ತಾರೆ ಅಂತ ವಾಗ್ದಾಳಿ ನಡೆಸಿದರು.

     

    ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರ ಮೇಲು ದೂರು ದಾಖಲಾಗಿತ್ತು. ಅಂದು ಅವರು ಹೋರಾಟ ಮಾಡಿದ್ದರು. ಯಡಿಯೂರಪ್ಪ ವಿರುದ್ದ ಅಂದು ಅನುಮತಿ ಕೊಟ್ಟಿದ್ದು ಯಾರು? ಅವತ್ತು ಕೇಂದ್ರದಲ್ಲಿ ಯಾವ ಸರ್ಕಾರ ಇತ್ತು. ಅವತ್ತು ರಾಜ್ಯಪಾಲರು ಯಾರು? ನಾವು ಅವತ್ತು ಕ್ಯಾಬಿನೆಟ್‌ನಲ್ಲಿ ಹೀಗೆ ಏನಾದ್ರು ನಿರ್ಣಯ ಮಾಡಿದ್ದೀವಾ? ಇಷ್ಟೆಲ್ಲ ಇವರು ಮಾಡುತ್ತಿರುವುದು ನೋಡಿದರೆ ಇವರು ತಪ್ಪು ಮಾಡಿರುವುದು ನಿಜ ಅಂತ ಅನ್ನಿಸುತ್ತಿದೆ ಎಂದು ಆರೋಪಿಸಿದರು. ಯಡಿಯೂರಪ್ಪ ಮೇಲೂ ಅಂದು ಯಾರೋ ಒಬ್ಬರು ಖಾಸಗಿ ದೂರು ನೀಡಿದ್ದರು. ಯಡಿಯೂರಪ್ಪ ಅಂದು ಕಾನೂನು ಹೋರಾಟ ಮಾಡಿದ್ದರು. ಈಗ ನೀವು ತಪ್ಪಿಲ್ಲ ಅಂದರೆ ಕಾನೂನು ಹೋರಾಟ ಮಾಡಿ ಅಂತ ಸಿಎಂ ಸಿದ್ದರಾಮಯ್ಯಗೆ ಸವಾಲ್ ಹಾಕಿದರು.

  • ಮುಡಾ ಹಗರಣ; ಸಿಎಂ ಪರವಾಗಿ ಸಂಪುಟ ನಿರ್ಣಯ

    ಮುಡಾ ಹಗರಣ; ಸಿಎಂ ಪರವಾಗಿ ಸಂಪುಟ ನಿರ್ಣಯ

    ಬೆಂಗಳೂರು: ಮುಡಾ ಹಗರಣ (MUDA) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪರವಾಗಿ ಸಂಪುಟ (Cabinet) ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

    ಮುಡಾ ಪ್ರಕರಣಕ್ಕೆ ಸಂಬಂಧಿಸಿ ಸಿಎಂಗೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ನೋಟಿಸ್ ನೀಡಿದ್ದರು. ಆದರೆ ರಾಜ್ಯಪಾಲರ ನೋಟಿಸ್ ವಿರುದ್ಧ ಸುದೀರ್ಘ ನಿರ್ಣಯ ಮಾಡಿ ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದೆ. ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ರೆ ಮುಂದೇನು?

    ಸಿಎಂ ಅನುಪಸ್ಥಿತಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆಸಲಾಯಿತು. ಮೂಡ ದಾಖಲೆಗಳನ್ನು ಸಚಿವ ಸಂಪುಟ ಸಭೆಗೆ ತರಿಸಿಕೊಳ್ಳಲಾಗಿತ್ತು. ಯಾರಿಗೆ ಸೈಟುಗಳ ಹಂಚಿಕೆಯಾಗಿದೆ ಎಂಬ ಸಂಪೂರ್ಣ ವಿವರ ತರಿಸಿಕೊಂಡು ಚರ್ಚಿಸಲಾಯಿತು.

    ಕ್ಯಾಬಿನೆಟ್‌ನಲ್ಲಿ, ರಾಜ್ಯಪಾಲರು ನೋಟಿಸ್‌ನಲ್ಲಿ ಎತ್ತಿರುವ ಪ್ರಶ್ನೆಗಳನ್ನು ವಿರೋಧಿಸಿ ಸುದೀರ್ಘ ನಿರ್ಣಯ ತೆಗೆದುಕೊಳ್ಳಲಾಯಿತು. ಸಾಮಾಜಿಕ ಕಾರ್ಯಕರ್ತರ ಟಿ.ಜೆ.ಅಬ್ರಹಾಂ ಎತ್ತಿರುವ ಆರೋಪಗಳಿಗೂ ದಾಖಲೆ ಸಮೇತ ಉತ್ತರ ಕೊಟ್ಟು ನಿರ್ಣಯಿಸಲಾಯಿತು. ಇದನ್ನೂ ಓದಿ: ಬಿಡಿಎ ಬಡಾವಣೆ ಮಾಡಲು ಜಮೀನು ಕೊಟ್ಟವರ ಕುಂದುಕೊರತೆ ನಿವಾರಿಸಿ – ಡಿಕೆಶಿಗೆ ಸುರೇಶ್‌ ಕುಮಾರ್‌ ಪತ್ರ

    ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ನಿರ್ಣಯ ಪಾಸ್ ಮಾಡಲಾಯಿತು. ರಾಜ್ಯಪಾಲರು ನೀಡಿರುವ ನೋಟಿಸ್ ಸರಿಯಿಲ್ಲ. ನೀಡಿರುವ ನೋಟಿಸ್ ಅನ್ನು ವಾಪಸ್ ಪಡೆಯಬೇಕು. ಟಿ.ಜೆ.ಅಬ್ರಹಾಂ ಮಾಡಿರುವ ಎಲ್ಲ ದೂರುಗಳಿಗೂ ದಾಖಲೆಗಳ ಸಮೇತ ಉತ್ತರ ಕೊಡಲು ಸಂಪುಟ ತೀರ್ಮಾನಿಸಿದೆ.

    ರಾಜ್ಯಪಾಲರ ನೋಟಿಸ್‌ಗೆ ಸಂಪುಟ ಸಭೆ ತೀವ್ರ ಅಸಮಾಧಾನ ಹೊರಹಾಕಿದೆ. ನೋಟಿಸ್‌ನಲ್ಲಿ ಬಳಸಿದ ಪದ ಮತ್ತು ಒಕ್ಕಣಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯಪಾಲರ ಸ್ಥಾನ ರಾಜಕೀಯ ದುರುಪಯೋಗದ ಹಾದಿಯಲ್ಲಿರುವ ಬಗ್ಗೆ ಅನುಮಾನ ಮೂಡಿದೆ. ಪದ ಮತ್ತು ಒಕ್ಕಣಿಕೆ ಸಹಿತ ನೋಟಿಸ್ ವಾಪಸ್ ಪಡೆಯಬೇಕು. ಇಲ್ಲವೇ ಕಾನೂನು ಹೋರಾಟ ನಡೆಸಲು ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ.

  • ಬೆಂಗಳೂರನ್ನು 5 ವಲಯಗಳನ್ನಾಗಿ ವಿಭಜಿಸುವ ಮಸೂದೆಗೆ ಕ್ಯಾಬಿನೆಟ್‌ ಒಪ್ಪಿಗೆ

    ಬೆಂಗಳೂರನ್ನು 5 ವಲಯಗಳನ್ನಾಗಿ ವಿಭಜಿಸುವ ಮಸೂದೆಗೆ ಕ್ಯಾಬಿನೆಟ್‌ ಒಪ್ಪಿಗೆ

    ಬೆಂಗಳೂರು: ರಾಜ್ಯ ಸಚಿವ ಸಂಪುಟ ಬೆಂಗಳೂರು (Bengaluru) ವಿಭಜಿಸುವ ಮಸೂದೆಗೆ ಅನುಮೋದನೆ ನೀಡಿದೆ.

    ವಿಧಾನಸೌಧದಲ್ಲಿ ನಡೆದ ಕ್ಯಾಬಿನೆಟ್‌ ಸಭೆ (Cabinet Meeting) ಬೆಂಗಳೂರನ್ನ 5 ವಿಭಾಗಗಳಾಗಿ ವಿಭಜಿಸುವ ಮಸೂದೆಗೆ ಒಪ್ಪಿಗೆ ನೀಡಿದೆ. ಇದನ್ನೂ ಓದಿ: ಗಂಗಾರತಿ ಮಾದರಿಯಲ್ಲೇ ಕಾವೇರಿ ಆರತಿ – ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚನೆ

     

    ಬಿ ಎಸ್ ಪಾಟೀಲ್ ನೇತೃತ್ವದಲ್ಲಿ ನಡೆದ ಗ್ರೇಟರ್ ಬೆಂಗಳೂರು ಅಥಾರಿಟಿ (Greater Bengaluru Authority) ಮಾಡುವ ಸಲಹೆಗೆ ಅನುಮೋದನೆ ಸಿಕ್ಕಿದೆ. ಸಮಿತಿಯ ಶಿಫಾರಸುಗಳನ್ನು ಒಪ್ಪಲು ಸಂಪುಟ ಸಭೆ ನಿರ್ಧಾರ ಕೈಗೊಂಡಿದ್ದು ಮಂಗಳವಾರ ವಿಧಾನಸಭೆಯಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಸರ್ಕಾರಿ ನೌಕರರು ಆರ್‌ಎಸ್‌ಎಸ್ ಸೇರಬಹುದು – ಇಂದಿರಾ ಗಾಂಧಿ ಅಂದು ನಿಷೇಧ ಹೇರಿದ್ದು ಯಾಕೆ?

    ಈ ವೇಳೆ ಕೇಂದ್ರ ಸರ್ಕಾರದ ಮೂರು ಪ್ರಮುಖ ವಿಚಾರಗಳ ಬಗ್ಗೆ ವಿಧಾನಸಭೆಯಲ್ಲಿ (Vidhan Sabha) ನಿರ್ಣಯ ಕೈಗೊಳ್ಳಲು ಕ್ಯಾಬಿನೆಟ್‌ ಒಪ್ಪಿಗೆ ನೀಡಿದೆ. ನೀಟ್ ಪರೀಕ್ಷೆಗೆ ವಿರೋಧ, ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆ ಖಂಡನೆ, ಒಂದು ದೇಶ, ಒಂದು ಚುನಾವಣೆ ವಿರೋಧಿಸಿ ಮಂಗಳವಾರ ನಿರ್ಣಯ ಮಂಡನೆಯಾಗಲಿದೆ.

     

  • ಈ ರೀತಿಯ ಕ್ರೂರತನ ನಾನು ನೋಡಿಯೇ ಇಲ್ಲ, ಅನಗತ್ಯವಾಗಿ ತುಟಿ ಬಿಚ್ಚಬೇಡಿ – ಮಂತ್ರಿಗಳಿಗೆ ಸಿಎಂ ವಾರ್ನಿಂಗ್‌

    ಈ ರೀತಿಯ ಕ್ರೂರತನ ನಾನು ನೋಡಿಯೇ ಇಲ್ಲ, ಅನಗತ್ಯವಾಗಿ ತುಟಿ ಬಿಚ್ಚಬೇಡಿ – ಮಂತ್ರಿಗಳಿಗೆ ಸಿಎಂ ವಾರ್ನಿಂಗ್‌

    ಬೆಂಗಳೂರು: ದರ್ಶನ್‌ (Darshan) ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ (Renukaswamy Murder Case) ಇಂದು ನಡೆದ ಸಂಪುಟ ಸಭೆಯಲ್ಲೂ (Cabinet Meeting) ಪ್ರಸ್ತಾಪವಾಗಿದೆ. ಪ್ರಕರಣದ ಕುರಿತು ಯಾರು ಮಾತಾಡಬೇಡಿ. ಅನಗತ್ಯವಾಗಿ ತುಟಿ ಬಿಚ್ಚಬೇಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಖಡಕ್‌ ಎಚ್ಚರಿಕೆ ನೀಡಿದ್ದಾರೆ.

    ಇಂದು ನಡೆದ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಪೊಲೀಸರು ನೀಡಿದ ಹತ್ಯೆಯ ದೃಶ್ಯಾವಳಿ ಪ್ರಸ್ತಾಪಿಸಿ ಈ ರೀತಿಯ ಕ್ರೂರತನ ನಾನು ನೋಡಿಯೇ ಇಲ್ಲ ಎಂದು ಹೇಳಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಜನಸ್ಪಂದನಾ ಕಾರ್ಯಕ್ರಮದಲ್ಲಿ ತನ್ವೀರ್ ಸೇಠ್ ಬಳಿ ಮೈಕ್ ಕಿತ್ತುಕೊಂಡು ಜಿಟಿಡಿ ಗರಂ!


    ಪ್ರಕರಣದ ಬಗ್ಗೆ ಪರ – ವಿರೋಧ ಯಾವ ಚರ್ಚೆ ಬೇಡ. ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಸಂಪುಟ ಸಭೆಯ ಆರಂಭದಲ್ಲೇ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ಕೊಟ್ಟಿದ್ದಾರೆ. ‌

    ಸಿಎಂ ಸೂಚನೆಗೆ ಕ್ಯಾಬಿನೆಟ್‌ನಲ್ಲಿರುವ ಹೆವಿವೇಟ್ ಸಚಿವರು ತುಟಿಕ್ ಪಿಟಿಕ್ ಮಾತನಾಡದೇ ಸುಮ್ಮನಾದರು ಎಂಬ ವಿಚಾರವನ್ನು ಮೂಲಗಳು ತಿಳಿಸಿವೆ.