ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಒಳಗೆ ಒಳಮೀಸಲಾತಿ ಕಲ್ಪಿಸಬೇಕು ಎಂಬ ಎಡಗೈ ಸಮುದಾಯದವರ 35 ವರ್ಷಗಳ ಹೋರಾಟಕ್ಕೆ ಕಡೆಗೂ ಜಯ ಸಿಕ್ಕಿದ್ದು, ಮಂತ್ರಿಮಂಡಲ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು (Mukhyamantri Chandru) ಹೇಳಿದರು.
ಈ ಮೂಲಕ ಎಲ್ಲಾ ಹೋರಾಟಗಾರರಿಗೂ ಪಕ್ಷದ ವತಿಯಿಂದ ಅಭಿನಂದನೆ. ನ್ಯಾ. ಸದಾಶಿವ ವರದಿ ಆಯೋಗವನ್ನು ಯಥಾವತ್ತಾಗಿ ಅಳವಡಿಸದ ಕಾರಣದಿಂದ ಅಲೆಮಾರಿ ಹಾಗೂ ಇನ್ನಿತರ ಧ್ವನಿ ಇಲ್ಲದ ಸಣ್ಣ ಸಣ್ಣ ಜಾತಿಗಳಿಗೆ ಒಳಮೀಸಲಾತಿಯ ಲಾಭ ದಕ್ಕುವುದಿಲ್ಲವೆಂಬ ಭಾವನೆಯೂ ಸಹ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ದಲಿತ ಸಮುದಾಯ 3 ಗುಂಪಾಗಿ ವರ್ಗೀಕರಿಸಿ ಮೀಸಲಾತಿ ಹಂಚಿಕೆ ಜಾರಿಗೆ ಸಂಪುಟ ನಿರ್ಧಾರ
ಮುಂಬರುವ ದಿನಗಳಲ್ಲಿ ಬಾಕಿ ಇರುವ ಎಲ್ಲ ನೇಮಕಾತಿಗಳು, ಮುಂಬಡ್ತಿಗಳು ವೇಗದಲ್ಲಿ ಆಗಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಬಲೀಕರಣಗೊಳ್ಳಲು ಸರ್ಕಾರವು ಪರಿಶಿಷ್ಟರಿಗೆ ಮೀಸಲಿಟ್ಟಿರುವ ಹಣವನ್ನು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರವಾಗಿ ಬದಲಾವಣೆಗಳನ್ನು ತರಲು ಬಳಸಬೇಕಿದೆ ಎಂದು ಒತ್ತಾಯಿಸಿದರು.
ಬೆಂಗಳೂರು: ದಲಿತ ಸಮುದಾಯವನ್ನು 3 ಗುಂಪಾಗಿ ವರ್ಗೀಕರಿಸಿ ಮೀಸಲಾತಿ ಹಂಚಿಕೆ ಜಾರಿಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಎಡಗೈ ಸಮುದಾಯಕ್ಕೆ ಶೇ.6, ಬಲಗೈ ಸಮುದಾಯ ಶೇ.6 (5% + 1% ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸೇರಿ), ಸ್ಪೃಶ್ಯ ಸಮುದಾಯ ಶೇ.5 (ಸ್ಪೃಶ್ಯ 4% + 1% ಇತರೆ ಸೇರಿ) ಕಲ್ಪಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಬಲಿಗರ ಜೊತೆ ವಿಧಾನಸೌಧಕ್ಕೆ ಬೃಹತ್ ಹಾರ ಹಾಗೂ ಸ್ವೀಟ್ ಬಾಕ್ಸ್ ಹಿಡಿದುಕೊಂಡು ಮಾಜಿ ಸಚಿವ ಆಂಜನೇಯ ಆಗಮಿಸಿದ್ದರು. ಸಿಎಂಗೆ ಹಾರ ಹಾಕಿ ಸಿಹಿ ತಿನ್ನಿಸಿ ದಲಿತ ನಾಯಕರು ಸಂಭ್ರಮಿಸಿದರು.
ಅಲೆಮಾರಿ ಸಮುದಾಯದ ಕೆಲವರಿಂದ ಅಸಮಾಧಾನ ವ್ಯಕ್ತವಾಗಿದೆ. ಕೆಂಗಲ್ ಗೇಟ್ ಬಳಿ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲೆಮಾರಿ ಸಮುದಾಯವನ್ನ ಇತರೆ ಸಮುದಾಯದ ಜೊತೆ ಸೇರಿಸಿ ಶೇ.5% ಮೀಸಲಾತಿ ವ್ಯಾಪ್ತಿಗೆ ಸೇರಿಸಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಪುಟ ಸಭೆ ನಿರ್ಣಯದ ಬಗ್ಗೆ ಶಿವರಾಜ್ ತಂಗಡಗಿ ಮಾತನಾಡಿ, ಇಂದು ಐತಿಹಾಸಿಕ ನಿರ್ಧಾರವನ್ನ ಮಾಡಲಾಗಿದೆ. 3 ಗುಂಪಾಗಿ ವರ್ಗಿಕರಿಸಿ ಮೀಸಲಾತಿ ನೀಡಲಾಗಿದೆ. ಎಡಗೈ, ಬಲಗೈ ಹಾಗೂ ಇತರೆ ಅಂತಾ ವರ್ಗೀಕರಿಸಲಾಗಿದೆ. ಎಲ್ಲರ ಒಪ್ಪಿಗೆ ಪಡೆದು ಸಂಪುಟದಲ್ಲಿ ನಿರ್ಧರಿಸಲಾಗಿದೆ. ಎಲ್ಲರಿಗೂ ತೃಪ್ತಿ ಕೊಡುವ ರೀತಿ ಆಗಿದೆ ಎಂದು ತಿಳಿಸಿದ್ದಾರೆ.
ಹೆಚ್‌ಕೆ ಪಾಟೀಲ್ ಪ್ರತಿಕ್ರಿಯಿಸಿ, ಎಲ್ಲರೂ ಸಂತೋಷ, ಸಮಾಧಾನದಿಂದ ಬಂದಿದ್ದೇವೆ. ನಾಳೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಸರ್ಕಾರ ನಿರ್ಧಾವರನ್ನ ಹೇಳ್ತಾರೆ. ಮುನಿಯಪ್ಪ, ಮಹದೇವಪ್ಪ, ತಂಗಡಗಿ, ಪರಮೇಶ್ವರ್ ಸಂತೋಷದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಆಹಾರ ಸಚಿವ ಕೆಹೆಚ್. ಮುನಿಯಪ್ಪ ಮಾತನಾಡಿ, ಅಧಿವೇಶನದ ಸಂದರ್ಭದಲ್ಲಿ ನಾವು ಯಾವುದೇ ಪತ್ರಿಕಾ ಹೇಳಿಕೆಗಳನ್ನು ಕೊಡುವ ಹಾಗಿಲ್ಲ. ನಾಳೆ ಮುಖ್ಯಮಂತ್ರಿಗಳೇ ಇದರ ಕುರಿತು ಹೇಳಿಕೆ ನೀಡಲಿದ್ದಾರೆ. ಪರಿಶಿಷ್ಟ ಜಾತಿಯ ನೂರೊಂದು ಜಾತಿಗಳಿಗೂ ಸಾಮಾಜಿಕ ನ್ಯಾಯ ಸಿಕ್ಕಿದ್ದು, ಯಾವ ಜಾತಿಗೂ ಅನ್ಯಾಯವಾಗದ ರೀತಿಯಲ್ಲಿ ತೀರ್ಮಾನವಾಗಿದೆ.
ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಮತ್ತೊಂದು ಹೊಸ ಸುರಂಗ ರಸ್ತೆ(Tunnel Road) ಘೋಷಣೆಯಾಗಿದೆ. ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ (Hebbal Esteem Mall) ಗಾಂಧಿ ಕೃಷಿ ವಿಜ್ಞಾನ ಕೇಂದ್ರದವರೆಗೆ (GKVK) 1.5 ಕಿ.ಲೋ ಮೀಟರ್ ಉದ್ದದ ಹೊಸ ಟನಲ್ ರಸ್ತೆ ನಿರ್ಮಾಣವಾಗಲಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಘೋಷಣೆ ಮಾಡಿದ್ದಾರೆ.
ಮುಂದಿನ ಕ್ಯಾಬಿನೆಟ್‌ನಲ್ಲಿ (Cabinet) ಯೋಜನೆಗೆ ಅನುಮತಿ ಪಡೆದು, 2 ವರ್ಷದಲ್ಲಿ ಕಾಮಗಾರಿ ಮುಗಿಸುತ್ತೇವೆ. ವಿಶೇಷ ಹೊಸ ತಂತ್ರಜ್ಞಾನದ ಮೂಲಕ ಈ ಸುರಂಗ ಮಾರ್ಗ ನಿರ್ಮಿಸಲಾಗುವುದು ಎಂದಿದ್ದಾರೆ.
ಈ ಮೊದಲು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗೆ ಸುರಂಗ ಮಾರ್ಗ ಘೋಷಣೆಯಾಗಿತ್ತು. 16.75 ಕಿಲೋಮೀಟರ್ ಉದ್ದದ ಸುರಂಗ ರಸ್ತೆಯನ್ನು ನಿರ್ಮಿಸಲು ದೇಶದ ಹತ್ತು ಪ್ರಮುಖ ಕಂಪನಿಗಳು ಆಸಕ್ತಿಯನ್ನು ತೋರಿಸಿವೆ.
ಸುಮಾರು 17,698 ಕೋಟಿ ರೂ. ವೆಚ್ಚದ ಈ ಯೋಜನೆಯ ಗುತ್ತಿಗೆ ಪಡೆಯುವ ಕಂಪನಿಗಳು ನಿರ್ಮಾಣ ವೆಚ್ಚದ 60 % ರಷ್ಟು(10,619 ಕೋಟಿ ರೂ.) ಹೂಡಿಕೆ ಮಾಡಬೇಕಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿದೆ. ಬಿಡ್‌ಗಳನ್ನು ಸಲ್ಲಿಸುವ ಸಮಯದಲ್ಲಿ 44 ಕೋಟಿ ಠೇವಣಿ ರೂ. ಠೇವಣಿ ಇಡಬೇಕು. ಪ್ರತಿಯಾಗಿ ಸರ್ಕಾರವು 30 ವರ್ಷಗಳವರೆಗೆ ಟೋಲ್ ಸಂಗ್ರಹಿಸಲು ಹಕ್ಕು ನೀಡಲಿದೆ.
ಬೆಂಗಳೂರು: ನಗರದ ಬಿ ಖಾತಾದಾರರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಬಿ ಖಾತಾಗಳಿಗೂ (B Khata) ಎ ಖಾತಾದಂತೆ (A Khata) ಮಾನ್ಯತೆ ನೀಡುವ ಬಗ್ಗೆ ಕ್ಯಾಬಿನೆಟ್ ನಿರ್ಧರಿಸಿದ್ದು, ಈ ಪರಿವರ್ತನೆಯಾಗಬೇಕು ಅಂದರೆ ಒಂದಷ್ಟು ಮಾನದಂಡಗಳನ್ನ ಅನುಸರಿಸಬೇಕಾಗುತ್ತದೆ.
ಹಾಗಾದ್ರೆ ಬಿ ಖಾತಾದಾರರು ಅನುಸರಿಸಬೇಕಾದ ಮಾನದಂಡಗಳೇನು?
1. ಬಿ ಖಾತದಾರರು ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳನ್ನಾಗಿ ಘೋಷಣೆ ಮಾಡಬೇಕು.
2. ಬಿ ಖಾತಾದಾರರು ಎ ಖಾತಾ ಮಾದರಿಯಲ್ಲಿ ಸಕಲ ಸೌಲಭ್ಯ ಪಡೆಯಲು ಮಾರ್ಗಸೂಚಿ ದರ ಶೇ.5ರಷ್ಟು ಪಾವತಿ ಮಾಡಬೇಕು.
3. ಸಾವಿರ ಮಾರ್ಗಸೂಚಿ ದರವಿರುವ 30*40 ಅಡಿ ನಿವೇಶನಕ್ಕೆ ಸುಮಾರು 3 ಲಕ್ಷ ರೂ. ಶುಲ್ಕ ಆಗಬಹುದು
4. ಬಿ ಖಾತಾ ನಿವೇಶನ ಅಥವಾ ಸೈಟ್ ಇದ್ದರೆ ಅದರ ಮುಂದಿನ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆಗಾಗಿ ಕನಿಷ್ಟ 30 ಅಡಿ ಅಗಲ ಬಿಡಬೇಕು
5. 25 ಅಡಿ ರಸ್ತೆಯಲ್ಲಿ ಬಿ ಖಾತಾ ನಿವೇಶನಗಳಿದ್ದರೆ ಕಡಿಮೆ ಇರುವ ಐದು ಅಡಿಯನ್ನು ಎರಡು ಬದಿಯ ನಿವೇಶನಗಳಿಂದ ತಲಾ ಎರಡೂವರೆ ಅಡಿ ಸಾರ್ವಜನಿಕ ರಸ್ತೆಗೆ ಜಾಗ ಬಿಡಬೇಕು
6. 30 ಅಡಿ ರಸ್ತೆ ನಿಗದಿಯಾದ ಮೇಲೆ ಬಿಬಿಎಂಪಿ ಕಾಯ್ದೆಯ ಪ್ರಕಾರ ಸಾರ್ವಜನಿಕ ರಸ್ತೆ ಎಂದು ಘೋಷಣೆ ಮಾಡಬೇಕು
7. ಈಗಾಗಲೇ ಬಿ ಖಾತಾ ಸೈಟ್‌ಗಳಲ್ಲಿ ಕಟ್ಟಡ ಕಟ್ಟಿದ್ದರೆ ಅಂತಹವರು ಸಾರ್ವಜನಿಕ ರಸ್ತೆಯನ್ನ ಘೋಷಣೆ ಮಾಡಿಕೊಳ್ಳಿ ಎಂದು ಬಿಬಿಎಂಪಿಗೆ ಪತ್ರ ಬರೆಯಬೇಕು
8. ಸಾರ್ವಜನಿಕ ರಸ್ತೆ ಜಾಗದಲ್ಲಿ ಕಟ್ಟಡ ಕಟ್ಟಿದ್ದರೆ ಅದಕ್ಕೆ ಅಳತೆ ಪ್ರಕಾರವಾಗಿ ಎಷ್ಟು ಒತ್ತುವರಿ ಮಾಡಿದೆ ಅಷ್ಟಕ್ಕೆ ಹಣ ಪಾವತಿ ಮಾಡಬೇಕು ಎಂದು ತಿಳಿಸಿದೆ.ಇದನ್ನೂ ಓದಿ: ಉತ್ತರ ಪ್ರದೇಶ| 8ರ ಬಾಲಕಿಯ ರೇಪ್ & ಕೊಲೆ ಕೇಸ್ – ಆರೋಪಿ ಎನ್‌ಕೌಂಟರ್‌ಗೆ ಬಲಿ
ಬೆಂಗಳೂರು: ಬಿ ಖಾತಾ ಹೊಂದಿರುವ ಬೆಂಗಳೂರಿಗರಿಗೆ (Bengaluru) ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಎ ಖಾತಾ (A Khata), ಬಿ ಖಾತಾ (B Khata) ಗೊಂದಲಕ್ಕೆ ತೆರೆ ಎಳೆಯಲು ಸಂಪುಟ ಒಪ್ಪಿಗೆ ನೀಡಿದೆ.
ಎ ಖಾತಾದಂತೆ ಬಿ ಖಾತಾಗೂ ಅಧಿಕೃತ ಮಾನ್ಯತೆ ನೀಡಲು ಸಂಪುಟ ತೀರ್ಮಾನಿಸಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬೀಳಲಿದೆ. 2020ರ ಮೇ 22 ರಿಂದ ಅನ್ವಯ ಆಗಲಿದ್ದು, 2024 ಸೆ.30 ರ ವರೆಗೆ ಮಾತ್ರ ಹಾಲಿ ಇರುವ ಬಿ ಖಾತಾಗಳನ್ನು ಎಲ್ಲಾ ಕಾನೂನು ಉದ್ದೇಶಕ್ಕೆ ಅಧಿಕೃತ ಖಾತಾ ಎಂದು ಪರಿಗಣಿಸುವುದಾಗಿ ಸಂಪುಟ ತೀರ್ಮಾನಿಸಿದೆ. ಈ ಮೂಲಕ ಬಿ ಖಾತಾಗಳಿಗಿದ್ದ ಬಿಬಿಎಂಪಿ ಪ್ಲಾನಿಂಗ್, ಓಸಿ, ಬ್ಯಾಂಕ್ ಲೋನ್ ಸಮಸ್ಯೆಗೆ ಮುಕ್ತಿ ಸಿಗಲಿದ್ದು, ಸರ್ಕಾರದ ಮಾನದಂಡಗಳು ಮುಂದಿನ ದಿನಗಗಳಲ್ಲಿ ಸ್ಪಷ್ಟವಾಗಲಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್ – ಆರ್‌ಸಿಬಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕ್ಯಾಬಿನೆಟ್‌ನಲ್ಲಿ ತೀರ್ಮಾನ
ಇದೇ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ 5 ಪಾಲಿಕಗಳ ರಚನೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಆದರೆ, 5 ಪಾಲಿಕೆಗಳ ವ್ಯಾಪ್ತಿ ಪ್ರದೇಶ, ಗಡಿಗಳ ವಿಚಾರದಲ್ಲಿ ಗೊಂದಲ ಇದ್ದು, ಶಾಸಕರ ಸಭೆ ಕರೆದು ಅಂತಿಮಗೊಳಿಸುತ್ತೇವೆ ಎಂದು ಕ್ಯಾಬಿನೆಟ್ ಸಲಹೆ ನೀಡಿದೆ.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕ್ಯಾಬಿನೆಟ್ ತಾತ್ವಿಕ ಅನುಮೋದನೆ ನೀಡಿದ್ದು, ಎನ್‌ಟಿಪಿಸಿ ಗುರುತಿಸಿರುವ ಸಂಭಾವ್ಯ ಸ್ಥಳಗಳ ಪರಿಶೀಲನೆಗೆ ನಿರ್ಧಾರ ಮಾಡಿದೆ. ಇಡೀ ಕರ್ನಾಟಕದಲ್ಲಿ ಎಲ್ಲೆಲ್ಲಿ ಸಾಧ್ಯವೋ ಆ ಸ್ಥಳಗಳ ಅಧ್ಯಯನ ಮಾಡಲು ಕ್ಯಾಬಿನೆಟ್ ನಿರ್ಧರಿಸಿದೆ. ಅಂದಹಾಗೆ 3 ಸ್ಥಳಗಳ ಪರಿಶೀಲನೆಗೆ ಎನ್ಟಿಪಿಸಿ ಸಲಹೆ ನೀಡಿದ್ದರೂ, ಇಡೀ ಕರ್ನಾಟಕದಲ್ಲಿ ಒಟ್ಟಾರೆ ಸ್ಥಳ ಪರಿಶೀಲನೆ ಅಧ್ಯಯನ ನಡೆಸಲು ಕ್ಯಾಬಿನೆಟ್ ತೀರ್ಮಾನಿಸಿದೆ. ಇದನ್ನೂ ಓದಿ: ಸಿಗಂದೂರು ಸೇತುವೆ ಉದ್ಘಾಟನೆಗೆ ಸಿಎಂಗೆ ಬರಬೇಡ ಅಂದಿದ್ದೇ ಬಿಎಸ್‍ವೈ: ಯತ್ನಾಳ್ ಬಾಂಬ್
ಬೆಂಗಳೂರು: ನಂದಿಬೆಟ್ಟದಲ್ಲಿ ನಡೆದ ಸಂಪುಟ ಸಭೆ (Nandi Hills Cabinet) ಸುದ್ದಿಯಾಗುವ ಬದಲು ಸಿಎಂ, ಡಿಸಿಎಂ ಸುದ್ದಿ ಆಗಿದ್ದಾರೆ. 5 ವರ್ಷ ನಾನೇ ಸಿಎಂ ಎಂಬ ಸಂದೇಶವನ್ನು ಸಿದ್ದರಾಮಯ್ಯ (Siddaramaiah) ಪಾಸ್ ಮಾಡಿದ್ರೆ, ನೋ ಆದರ್ ಆಪ್ಶನ್ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ (DK Shivakumar) ರಿವರ್ಸ್ ಗೇಮ್ ಆಡಲು ಶುರು ಮಾಡಿದ್ದಾರೆ.
ಹೌದು. ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಬಿರುಗಾಳಿ ಜೋರಾಗಿ ಬೀಸುತ್ತಿದೆ. ನಾಯಕತ್ವ ಬದಲಾವಣೆ ಬಗ್ಗೆ ಡಿಕೆಶಿ ಬೆಂಬಲಿಗರು ಹೇಳಿಕೆ ಕೊಡುತ್ತಿರುವ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ರಾಜ್ಯದಲ್ಲಿರುವಾಗಲೇ ಮುಂದಿನ ಐದು ವರ್ಷ ನಾನೇ ಸಿಎಂ ಎಂಬ ಸಂದೇಶ ರವಾನಿಸಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದು, ಕಲ್ಲು ಬಂಡೆ ತರಹ 5 ವರ್ಷ ಸರ್ಕಾರ ಸುಭದ್ರವಾಗಿರಲಿದೆ ಎಂದಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ ಡಿಕೆಶಿ ಕೈ ಎತ್ತಿ ಒಗ್ಗಟ್ಟು ಪ್ರದರ್ಶಿಸಿದ ಸಿಎಂ, ಇವತ್ತು 5 ವರ್ಷ ನಾನೇ ಸಿಎಂ ಎಂದಿರೋದು ಅಚ್ಚರಿಗೆ ಕಾರಣವಾಗಿದೆ. ಇದನ್ನೂಓದಿ: 11ನೇ ಕ್ಲಾಸ್ ವಿದ್ಯಾರ್ಥಿಯ ಜೊತೆ 5 ಸ್ಟಾರ್ ಹೋಟೆಲಿನಲ್ಲಿ ಸೆಕ್ಸ್- ಮುಂಬೈ ಶಿಕ್ಷಕಿ ಅರೆಸ್ಟ್
ಗದ್ದುಗೆ ಏರುವ ಕನಸು ಕಾಣುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್, ಐ ಹ್ಯಾವ್ ನೋ ಆಪ್ಷನ್ ಎನ್ನುವ ಮೂಲಕ ಸಿಎಂ ಆಸೆ ಕೈಬಿಟ್ಟಂತೆ ಕಾಣುತ್ತಿದೆ. ನನಗೆ ಬೇರೆ ಆಯ್ಕೆ ಇಲ್ಲ. ಹೈಕಮಾಂಡ್ ಏನ್ ಹೇಳುತ್ತದೋ ಅದನ್ನು ಕೇಳುತ್ತೇನೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಹೇಳಿಕೆ ಬೆನ್ನಲ್ಲೇ ಮತ್ತೆ ಟ್ವೀಟ್ ಮಾಡಿದ ಸಿದ್ದರಾಮಯ್ಯ, 5 ವರ್ಷವೂ ನಾನೇ ಸಿಎಂ. ಅನುಮಾನ ಬೇಡ. ಬಿಜೆಪಿ ಹೇಳಿದಂತೆ ಸರ್ಕಾರ ನಡೆಯುವುದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಗೇಮ್ ಪ್ಲ್ಯಾನ್ ಏನು?
ನಾವಿಬ್ಬರು ಚೆನ್ನಾಗಿದ್ದೇವೆ ಡಿಕೆಶಿ ಕೈ ಎತ್ತಿ ಹೈಕಮಾಂಡ್‌ಗೆ ಸಂದೇಶ
5 ವರ್ಷ ನಾನೇ ಸಿಎಂ ಎನ್ನುವ ಮೂಲಕ ಹೊಸ ದಾಳ
ನಾಯಕತ್ವ ಬದಲಾಗಬೇಕೆಂಬ ಡಿಕೆ ಆಪ್ತರ ಬೇಡಿಕೆಗೆ ಠಕ್ಕರ್
ಪವರ್ ಶೇರಿಂಗ್ ಅಷ್ಟು ಸುಲಭವಲ್ಲ ಎಂಬ ಸಂದೇಶ ರವಾನೆ ಇದನ್ನೂಓದಿ: ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು –ಸಂಪುಟ ಸಭೆಯಲ್ಲಿ ಹಲವು ಐತಿಹಾಸಿಕ ನಿರ್ಣಯ
ಡಿಕೆಶಿ ಗೇಮ್ ಪ್ಲ್ಯಾನ್ ಏನು?
ತೆರೆ ಮುಂದೆ ಅಸಹಾಯಕತೆ; ಒಳಗೊಳಗೆ ತಂತ್ರಗಾರಿಕೆ
ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂಬ ಸಂದೇಶ ರವಾನೆ
ಮತ್ತೊಮ್ಮೆ ನಾನು ಪಕ್ಷ ನಿಷ್ಠ ಅಂತ ಡಿಕೆ ಗೇಮ್
ನಾಯಕತ್ವ ಬದಲಾವಣೆ ಸಾಧ್ಯವೇ?
50-50 ಫಾರ್ಮುಲಾ ರೂಪಿಸಿದ್ದರೆ ಅದಕ್ಕೆ ಈಗಿನಿಂದಲೇ ಸಿದ್ಧತೆ
ಶಾಸಕರುಗಳ ಅಭಿಪ್ರಾಯ ಸಂಗ್ರಹಿಸಬಹುದು
ಬಿಹಾರ ಅಸೆಂಬ್ಲಿ ಎಲೆಕ್ಷನ್ ಬಳಿಕ ಕಾರ್ಯರೂಪಕ್ಕೆ ತರಬಹುದು
ಮುಂದಿನ ನವೆಂಬರ್ ನಂತರ ಜಾರಿಗೊಳಿಸಬಹುದು
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ (Chinnaswamy Stampede) ಪ್ರಕರಣದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಹೊಸ ಕಾನೂನು ತರಲು ಹೊರಟಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜನಸಂದಣಿ ನಿಯಂತ್ರಣ ಮಸೂದೆ (Crowd Control Bill) ಮಂಡಿಸಿದ್ದು ಮುಂದಿನ ಕ್ಯಾಬಿನೆಟ್‌ನಲ್ಲಿ (Cabinet) ವಿಸ್ತಾರವಾಗಿ ಚರ್ಚೆ ನಡೆಸಲಿದೆ.
ಕ್ರೀಡೆ, ಸರ್ಕಸ್ ಇತರೇ ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳಿಗೆ ಸರ್ಕಾರ ಬಿಗಿ ನಿಯಮ ಜಾರಿಗೆ ಮುಂದಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಅಥವಾ ಕಾರ್ಯಕ್ರಮ ನಡೆಯುವಾಗ ಜನರನ್ನು ನಿಯಂತ್ರಿಸಲಾಗದಿದ್ದರೆ ಆಯೋಜಕರಿಗೆ 3 ವರ್ಷದ ತನಕ ಜೈಲು, 5 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ.
ಜಾತ್ರೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ತೆಪ್ಪದ ತೇರು, ಉರುಸ್ ಅಥವಾ ಯಾವುದೇ ಧರ್ಮ, ಜಾತಿ ಅಥವಾ ಪಂಥಕ್ಕೆ ಸಂಬಂಧಿಸಿದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಕಾನೂನು ಅನ್ವಯ ಆಗುವುದಿಲ್ಲ.
ಮಸೂದೆಯಲ್ಲಿ ಏನಿದೆ?
ಕ್ರೀಡೆ, ಸರ್ಕಸ್, ಪ್ರಾಯೋಜಿತ ಕಾರ್ಯಕ್ರಮಗಳು, ರಾಜಕೀಯ ರ್‍ಯಾಲಿ ಸೇರಿದಂತೆ ಇತರೇ ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳು ಈ ಮಸೂದೆ ವ್ಯಾಪ್ತಿಯಲ್ಲಿ ಬರುತ್ತದೆ. ಕಾರ್ಯಕ್ರಮಗಳಲ್ಲಿ ಗಲಾಟೆ, ಅಹಿತಕರ ಘಟನೆ, ದೇಹ ಹಾನಿ, ಸಾವು ನೋವಿಗೆ ಕಾರ್ಯಕ್ರಮ ಆಯೋಜಕರೇ ಜವಾಬ್ದಾರಿಯಾಗುತ್ತಾರೆ.
ಗಾಯಾಳುಗಳಿಗೆ, ಮೃತ ಕುಟುಂಬಗಳಿಗೆ ಪರಿಹಾರ ನೀಡದಿದ್ದರೆ ಕಾರ್ಯಕ್ರಮ ಆಯೋಜಕರ ಆಸ್ತಿ ಹರಾಜು ಮೂಲಕ ಪರಿಹಾರ ವಸೂಲಿ ಮಾಡಲಾಗುತ್ತದೆ.
ಶಾಂತಿ ಭಂಗ ತರುವ ಮುನ್ಸೂಚನೆ ಇದ್ದರೆ, ಗಲಾಟೆ, ಅಹಿತಕರ ಘಟನೆ ನಡೆದರೆ ಅನುಮತಿ ಇದ್ದರೂ ಅಹಿತಕರ ಘಟನೆ ನಡೆದರೆ ಕಾರ್ಯಕ್ರಮ ನಿಷೇಧಿಸುವ ಅಧಿಕಾರವನ್ನು ನೀಡಲಾಗಿದೆ.
ಬೆಂಗಳೂರು: ಪರ, ವಿರೋಧದ ಚರ್ಚೆ ನಡುವೆಯೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ನಡೆಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿವಾರು ಜನಗಣತಿ) ವರದಿ ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಮಂಡನೆಯಾಗುವ ಸಾಧ್ಯತೆಯಿದೆ.
ತಳ ಸಮುದಾಯಗಳು ಸೇರಿದಂತೆ ಹಿಂದುಳಿದ ವರ್ಗಗಳ ಸಮಾಜದವರು ಜಾತಿ ಗಣತಿ ವರದಿ ಸ್ವೀಕಾರ ಮತ್ತು ಜಾರಿ ಮಾಡುವಂತೆ ಆಗ್ರಹಿಸುತ್ತಿದ್ದರೆ ಮೇಲ್ವರ್ಗದ ಲಿಂಗಾಯತ, ಒಕ್ಕಲಿಗ ಸಮುದಾಯಗಳು ಸಮೀಕ್ಷೆ ಅವೈಜ್ಞಾನಿಕವಾಗಿದ್ದು ವರದಿ ಸ್ವೀಕರಿಸದಂತೆ ಒತ್ತಾಯಿಸುತ್ತಿವೆ. ಹಾಗಾಗಿ ಜಾತಿ ಗಣತಿ ವರದಿ ಬಗ್ಗೆ ಸರ್ಕಾರಗಳು ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಮುಂದೂಡುತ್ತಲೇ ಬಂದಿದ್ದವು.
ಸಿದ್ದರಾಮಯ್ಯ (Siddaramaiah) ಸರ್ಕಾರ ರಚನೆಯಾದ ನಂತರ ಹಲವು ಬಾರಿ ಕ್ಯಾಬಿನೆಟ್ ಸಭೆಯಲ್ಲಿ ಈ ವರದಿ ಮಂಡನೆಯಾಗಲಿದೆ ಎಂಬ ವಿಚಾರ ಮುನ್ನೆಲೆಗೆ ಬಂದಿತ್ತು. ಆದರೆ ಈಗ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಈ ವರದಿ ಮಂಡನೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಮಂಡನೆಯಾದರೆ ಕರ್ನಾಟಕ ರಾಜಕಾರಣದಲ್ಲಿ (Karnataka Politics) ಅಲ್ಲೋಲ್ಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಕಾನೂನು ಸ್ವರೂಪ ಪಡೆದ ʻವಕ್ಫ್ ಬಿಲ್ʼ – ಕೇಂದ್ರ ಅಧಿಸೂಚನೆ
ಈಗಾಗಲೇ ಹಿಂದುಳಿದ ವರ್ಗಗಳ ಇಲಾಖೆ ಅಡಿ ಕ್ಯಾಬಿನೆಟ್ ಅಜೆಂಡಾದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ವರದಿಯನ್ನು ಮಂಡಿಸಿ ಚರ್ಚೆ ನಡೆಸಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಸಿದ್ಧತೆ ಮಾಡಿದ್ದಾರೆ. ಮಂಡನೆಯಾದ ಬಳಿಕ ಜಾತಿಗಣತಿ ವರದಿ ಅಂಗೀಕಾರವೋ? ಅಥವಾ ಸಂಪುಟ ಉಪಸಮಿತಿ ರಚನೆಯೋ ಎಂಬ ಪ್ರಶ್ನೆಗೆ ಶುಕ್ರವಾರ ಉತ್ತರ ಸಿಗಲಿದ್ದು ಸಿದ್ದರಾಮಯ್ಯನವರ ಕ್ಯಾಬಿನೆಟ್ ನಡೆ ಕುತೂಹಲ ಮೂಡಿಸಿದೆ.
ಕಳೆದ ವರ್ಷದ ಫೆಬ್ರವರಿ 14ರಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು. ಒಂದು ವರ್ಷದಿಂದಲೂ ವರದಿಯನ್ನು ಮುಟ್ಟದೇ ರಾಜ್ಯ ಸರ್ಕಾರ ಸುಮ್ಮನಿತ್ತು. ಕಳೆದ ವರ್ಷ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್‌ಗೆ ವರದಿ ತರಲು ಹಿಂದೇಟು ಹಾಕಿತ್ತು. ಆದರೆ ಈಗ ಕ್ಯಾಬಿನೆಟ್ ಮುಂದೆ ವರದಿ ಇಡಲು ಸರ್ಕಾರ ಸಿದ್ಧತೆ ನಡೆಸಿದೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!
ಜಾತಿ ಗಣತಿ ಉದ್ದೇಶ ಏನು?
1931ರ ಜನಗಣತಿಯ ನಂತರ ಯಾವುದೇ ಜನಗಣತಿ ದಾಖಲೆಗಳಿಂದ ಜಾತಿ / ಸಮುದಾಯವಾರು ಜನಸಂಖ್ಯೆಯ ಅಂಕಿ-ಅಂಶಗಳು ಖಚಿತವಾಗಿ ದೊರೆಯುತ್ತಿಲ್ಲ. ಜಾತಿವಾರು ಜನಗಣತಿ ಅಂಕಿ-ಅಂಶಗಳು ಲಭ್ಯವಿಲ್ಲದೇ ಇರುವುದರಿಂದ ಕಾರ್ಯಕ್ರಮಗಳ ಮುಖಾಂತರ ಸೌಲಭ್ಯಗಳನ್ನು ಸಾಮಾಜಿಕ ನ್ಯಾಯ ತತ್ವದ ಆಧಾರದ ಮೇಲೆ ಒದಗಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತಿತ್ತು.
ಸಮುದಾಯಗಳ ಈಗಿರುವ ಸ್ಥಿತಿಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ನಡೆಸುವುದು, ಜನಸಂಖ್ಯೆಯ ಪ್ರಮಾಣವನ್ನು ತಿಳಿಯುವುದು ಅಗತ್ಯವಾಗಿದೆ ಎಂಬ ಉದ್ದೇಶಕ್ಕಾಗಿ ಆಗಿನ ಸಿದ್ದರಾಮಯ್ಯ ಸರ್ಕಾರ ಸಮೀಕ್ಷೆಗೆ ಆದೇಶಿಸಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು ಹಾಗೂ ಇತರ ಜಾತಿಗಳನ್ನೊಳಗೊಂಡಂತೆ ರಾಜ್ಯದ ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಜವಾಬ್ದಾರಿಯನ್ನು ಆಯೋಗಕ್ಕೆ ನೀಡಲಾಗಿತ್ತು. ರಾಜ್ಯದ ಎಲ್ಲ ವರ್ಗಗಳ / ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಣೆಗೆ ಸೂಚಿಸಲಾಗಿತ್ತು.
ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರಿಯಲು 158.47 ಕೋಟಿ ರೂ. ವೆಚ್ಚದಲ್ಲಿ ಹೆಚ್. ಕಾಂತರಾಜ (Kantharaju) ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ಸಮೀಕ್ಷೆ (Socio-Economic Survey) ನಡೆಸಿತ್ತು. ಈ ಆಯೋಗದ ಅವಧಿ ಮುಕ್ತಾಯದ ಸಂದರ್ಭದಲ್ಲಿ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಕಳೆದ ವರ್ಷ ಕೆ. ಜಯಪ್ರಕಾಶ್ ಹೆಗ್ಡೆ (Jayaprakash Hegde) ಅಧ್ಯಕ್ಷತೆಯ ಈಗಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ವಿಷಯಕ್ಕೆ ಸಂಬಂಧಿಸಿದ ಟಿಪ್ಪಣಿಗಳೊಂದಿಗೆ 2015ರ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿತ್ತು.
ಬೆಂಗಳೂರು: ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನಾಗಮೋಹನ್ ದಾಸ್ (Nagamohan Das) ಅವರ ಏಕಸದಸ್ಯ ಆಯೋಗ ನೇಮಕ ಮಾಡಲಾಗಿತ್ತು. ಒಳಮೀಸಲಾತಿ ವರ್ಗೀಕರಣ ವಿಚಾರದಲ್ಲಿ ಮಧ್ಯಂತರ ವರದಿ ನೀಡಿದ್ದಾರೆ ಎಂದು ಸಚಿವ ಹೆಚ್.ಕೆ.ಪಾಟೀಲ್ (H K Patil) ಹೇಳಿದರು.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಧ್ಯಂತರ ವರದಿಯಲ್ಲಿ 4 ಶಿಫಾರಸು ಮಾಡಿದ್ದಾರೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣವನ್ನು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕು. ನೂತನ ವಿಜ್ಞಾನ ತಂತ್ರಜ್ಞಾನದ ಸಾಧನೆಗಳನ್ನು ಬಳಸಿ 30 ರಿಂದ 40 ದಿವಸಗಳ ಒಳಗೆ ಹೊಸದಾದ ಸಮೀಕ್ಷೆಯನ್ನು ನಡೆಸಬಹುದು. ಹೊಸ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿ ಸಿದ್ಧಪಡಿಸಬೇಕು. ಇದಕ್ಕೆ ಉನ್ನತ ಮಟ್ಟದ ಸಮಿತಿ ರಚನೆ ಸೂಕ್ತ ಎಂದರು. ಇದನ್ನೂ ಓದಿ: ನಂದಿನಿ ಹಾಲಿನ ದರ 4 ರೂ. ಹೆಚ್ಚಳ – ರೈತರಿಗೆ ಪೂರ್ಣ ಹಣ ವರ್ಗಾವಣೆಗೆ ಕ್ಯಾಬಿನೆಟ್ ತೀರ್ಮಾನ
ಹೊಸ ಸಮೀಕ್ಷೆಯ ದತ್ತಾಂಶದ ಆಧಾರದ ಮೇಲೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಬೇಕು ಅಂತಾ ಶಿಫಾರಸು ಮಾಡಿದ್ದಾರೆ. ಅಲ್ಲದೇ ನಾಗಮೋಹನ್ ದಾಸ್ ಸಮಿತಿಯನ್ನೇ ಮುಂದುವರಿಸಲು ಕ್ಯಾಬಿನೆಟ್ ತೀರ್ಮಾನ ಮಾಡಿದ್ದು, 60 ದಿವಸಗಳ ಒಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಹತ್ಯೆಗೆ ಸುಪಾರಿ – ಹೊಸ ಬಾಂಬ್ ಸಿಡಿಸಿದ ಸಚಿವ ರಾಜಣ್ಣ ಪುತ್ರ
ಬೆಂಗಳೂರು: ಮೈಕ್ರೋ ಫೈನಾನ್ಸ್ (Micro Finance) ಕಿರುಕುಳ ತಡೆಗೆ ಹೊಸ ಕಾನೂನು ನಾಳೆಯ ಕ್ಯಾಬಿನೆಟ್‌ನಲ್ಲಿ (Cabinet) ತರಲಿದ್ದು, ಸುಗ್ರೀವಾಜ್ಞೆ (Ordinance) ಮೂಲಕ ಕಾನೂನು ಜಾರಿಗೆ ತರುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ತಿಳಿಸಿದ್ದಾರೆ.
ಸಿಎಂ ಸಭೆ ಮಾಡಿದ ಮೇಲೂ ಮೈಕ್ರೋ ಫೈನಾನ್ಸ್ ಕಂಪನಿಗಳು ಕಿರುಕುಳ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಿರುಕುಳ ಆದರೆ ಪೊಲೀಸರಿಗೆ ದೂರು ಕೊಡಬೇಕು. ಆಗ ಪೊಲೀಸರು ತಕ್ಷಣ ಕ್ರಮ ತೆಗೆದುಕೊಳ್ಳುತ್ತಾರೆ. ಮೊನ್ನೆ ಸಿಎಂ ಸಭೆಯಲ್ಲಿ ಪೊಲೀಸರು ಇಂತಹ ಕೇಸ್ ಬಗ್ಗೆ ಸುಮೋಟೋ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದೇವೆ. ಇವತ್ತು ಮೈಕ್ರೋ ಫೈನಾನ್ಸ್ ಕಾನೂನು ಮಾಡುವ ಬಗ್ಗೆ ಸಭೆ ಕರೆದಿದ್ದೇವೆ. ಇವತ್ತು ಬಿಲ್ ಬಗ್ಗೆ ನಾನು, ಕಾನೂನು ಸಚಿವರು, ಕಂದಾಯ ಸಚಿವರು ಸಭೆ ಮಾಡಿ ಬಿಲ್ ಅಂತಿಮ ಮಾಡುತ್ತೇವೆ. ನಾಳೆಯ ಕ್ಯಾಬಿನೆಟ್ ನಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಕ್ರಮ ತೆಗೆದುಕೊಂಡು ರಾಜ್ಯಪಾಲರಿಗೆ ಕಳಿಸ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: ಮೆಟ್ರೋ ಪ್ರಯಾಣ ದರ ಏರಿಕೆಯನ್ನು ತಡೆಹಿಡಿದ ಮೋದಿ ಸರ್ಕಾರ
ಈಗಾಗಲೇ SP-DCಗಳ ಸಭೆ ಮಾಡಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದೇವೆ. ಸಹಾಯವಾಣಿ ಕೂಡಾ ಪ್ರಾರಂಭ ಮಾಡಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಡುವುದು ಮತ್ತು ಇದಕ್ಕಾಗಿ ಒಂದು ಪ್ರತ್ಯೇಕ ವಿಂಗ್ ಪ್ರಾರಂಭ ಮಾಡೋದು ಬಿಲ್ ನಲ್ಲಿ ಅಂಶಗಳನ್ನ ಸೇರಿಸಿದ್ದೇವೆ ಎಂದರು.
ಕೆಲವು ಮೈಕ್ರೋ ಫೈನಾನ್ಸ್ ಅವರು ಹಣ ವಸೂಲಿಗೆ ಔಟ್ ಸೋರ್ಸ್ ಕೊಟ್ಟಿರುತ್ತಾರೆ. ಅವರು ಬಂದು ಗುಂಡಾ ವರ್ತನೆ ಮಾಡೋ ಕೆಲಸ ಮಾಡ್ತಿದ್ದಾರೆ. ಆದರೆ ಅದನ್ನ ಮಾಡಿದ್ರೆ ಕ್ರಮ ತೆಗೆದುಕೊಳ್ಳುತ್ತೀವಿ. ಕಂಪನಿ ಅವರಿಗೂ ಈಗಾಗಲೇ ಸೂಚನೆ ಕೊಟ್ಟಿದ್ದೇವೆ. ಇವತ್ತು ಸುಗ್ರಿವಾಜ್ಞೆ ಹೊರಡಿಸೋ ಕಾನೂನು ಬಗ್ಗೆ ಸಭೆ ಮಾಡಿ ಇವತ್ತೇ ಕಾನೂನು ಅಂತಿಮ ಮಾಡುತ್ತೇವೆ ಎಂದು ತಿಳಿಸಿದರು.