Tag: Cabinet Minister

  • ಜೀವನದ ಅತಿದೊಡ್ಡ ಸವಾಲು, ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೆಲಸ ಮಾಡ್ತೀನಿ: ಹೆಚ್‌ಡಿಕೆ

    ಜೀವನದ ಅತಿದೊಡ್ಡ ಸವಾಲು, ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೆಲಸ ಮಾಡ್ತೀನಿ: ಹೆಚ್‌ಡಿಕೆ

    – ಕುಮಾರಸ್ವಾಮಿ ಮುಗಿದೇ ಹೋದ ಅನ್ನುವಾಗಲೇ ಒಂದು ಶಕ್ತಿ ಕಾಪಾಡಿದೆ ಎಂದ ಸಚಿವ

    ನವದೆಹಲಿ: ನನ್ನ ವಿಚಾರದಲ್ಲಿ ವಿಶೇಷವಾದ ನಂಬಿಕೆ ಇಟ್ಟು ಖಾತೆ ನೀಡಿದ್ದಾರೆ. ನನ್ನ ಮೇಲೆ ಸವಾಲಿದೆ. ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವತ್ತ ಕೆಲಸ ಮಾಡುತ್ತೇನೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಸಂಪುಟ ಸಭೆಯಲ್ಲಿ ಖಾತೆ ಹಂಚಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಖಾತೆ ಹಂಚಿಕೆ ಮಾಡಿದ್ದಾರೆ. ವಿಶ್ವಾಸ ಇಟ್ಟು ಖಾತೆ ಹಂಚಿಕೆ ಮಾಡಿದ್ದಾರೆ. ಪ್ರಹ್ಲಾದ್ ಜೋಶಿಯವರಿಗೆ ಆಹಾರ ಖಾತೆ ಕೊಟ್ಟಿದ್ದಾರೆ. ನನಗೆ ದೊಡ್ಡ, ಪ್ರಮುಖವಾದ ಇಲಾಖೆ ನೀಡಿದ್ದಾರೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ನಿರೀಕ್ಷೆ ಮಾಡಿ ಖಾತೆ ನೀಡಿದ್ದಾರೆ. ಕನ್ನಡಿಗರ ಪರವಾಗಿ ಪ್ರಧಾನಿಯವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮೋದಿಗೆ ಬಾಹ್ಯಾಕಾಶ, ಅಮಿತ್‌ ಶಾಗೆ ಗೃಹ ಖಾತೆ – ಜೆ.ಪಿ ನಡ್ಡಾಗೆ ಆರೋಗ್ಯ ಖಾತೆ ಗಿಫ್ಟ್

    ಕರ್ನಾಟಕಕ್ಕೆ ಅಂತ ಮಾತ್ರ ಹೇಳಲ್ಲ. ದೇಶಾದ್ಯಂತ ಸುತ್ತಾಡಿ, ಬದಲಾವಣೆ ತರಬೇಕು ಎಂದು ಬಯಸಿದ್ದೇನೆ. ನನ್ನ ಜೀವನದಲ್ಲಿ ಅತಿ ದೊಡ್ಡ ಸವಾಲು ಇದು. ಕರ್ನಾಟಕದಲ್ಲಿ ಹಲವಾರು ಸಮಸ್ಯೆಗಳು ಇವೆ. ಅವುಗಳನ್ನು ಈಗ ಚರ್ಚೆ ಮಾಡುವುದಿಲ್ಲ. ದೇಶದ ಪ್ರಗತಿಗೆ ಕೆಲಸ ಮಾಡಬೇಕಿದೆ. ಎಲ್ಲವನ್ನು ಗಮನಿಸಿ ಇಲಾಖೆಯನ್ನು ಮೋದಿ (Narendra Modi) ಕೊಟ್ಟಿದ್ದಾರೆ. ಪ್ರಾಮಾಣಿಕವಾಗಿ ಕ್ಷಣ ವ್ಯರ್ಥ ಮಾಡದೇ ಕೆಲಸ ಮಾಡುತ್ತೇನೆ. ರೂಟ್‌ಮ್ಯಾಪ್ ಸಿದ್ಧಮಾಡಿ ಕೆಲಸ ಮಾಡುತ್ತೇನೆ. ನನ್ನದೇ ಕಲ್ಪನೆಯಲ್ಲಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಜೈಲಿನಲ್ಲಿರೋ ಹೇಮಂತ್ ಸೊರೆನ್ ಪತ್ನಿ ಜಾರ್ಖಂಡ್ MLA ಆಗಿ ಪ್ರಮಾಣವಚನ ಸ್ವೀಕಾರ!

    ಶೋಭಾ ಅವರಿಗೂ ಉತ್ತಮ ಖಾತೆ ಸಿಕ್ಕಿದೆ. ದೇಶದ ಪ್ರಗತಿಗೆ ನಾವು ಕೆಲಸ ಮಾಡುತ್ತೇವೆ. ಹೊಸ ಇತಿಹಾಸ ಕರ್ನಾಟಕದಲ್ಲಿ ತರುವುದು ಮಾತ್ರವಲ್ಲ, ದೇಶದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತೇವೆ. ಕೃಷಿ ಖಾತೆ ನಿರೀಕ್ಷೆ ಇತ್ತು, ಆದರೆ ಮೋದಿ ತೀರ್ಮಾನ ಮಾಡಿದ್ದಾರೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಕೆಲಸ ಮಾಡಬೇಕಿದೆ. ಎಲ್ಲದರ ಬಗ್ಗೆ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಇದನ್ನೂ ಓದಿ: Modi Cabinet: ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ – ಬಲಿಷ್ಠ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಲಿಸ್ಟ್

    ಜೆಡಿಎಸ್ ಪಕ್ಷ ಏಳು-ಬೀಳುಗಳನ್ನು ಕಂಡಿದೆ. ದೇವೇಗೌಡರನ್ನು ಇಂದು ಸ್ಮರಿಸುತ್ತೇನೆ. ದೇವೇಗೌಡರ ರಾಜಕೀಯ ಮುಗಿದೇ ಹೋಯಿತು ಎನ್ನುವಾಗ ಮತ್ತೆ ಪುಟಿದೆದ್ದಿದ್ದಾರೆ. ಕುಮಾರಸ್ವಾಮಿ ಮುಗಿದು ಹೋದ ಎನ್ನುವಾಗಲೇ ಯಾವುದೋ ಶಕ್ತಿ ಕಾಪಾಡಿದೆ. ಈ ಪಕ್ಷವನ್ನು ಯಾವುದೋ ಶಕ್ತಿ ಮೇಲೆತ್ತಿದೆ. ಪಕ್ಷದ ಸಂಘಟನೆ ಮಾಡುವ ಸಮರ್ಥ ನಾಯಕರು ರಾಜ್ಯದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Modi cabinet: ಕರ್ನಾಟಕದ ನಾಲ್ವರು ಸಚಿವರಿಗೆ ಬಂಪರ್‌ – ಯಾರಿಗೆ ಯಾವ ಖಾತೆ?

  • ಕೊರೊನಾಗೆ ಕ್ಯಾಬಿನೆಟ್ ಸಚಿವೆ ಕಮಲ್ ರಾಣಿ ವರುಣ್ ಬಲಿ

    ಕೊರೊನಾಗೆ ಕ್ಯಾಬಿನೆಟ್ ಸಚಿವೆ ಕಮಲ್ ರಾಣಿ ವರುಣ್ ಬಲಿ

    ಲಕ್ನೋ: ಕೊರೊನಾದಿಂದ ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವೆ ಕಮಲ್ ರಾಣಿ ವರುಣ್ ( 62) ಇಂದು ನಿಧನರಾಗಿದ್ದಾರೆ.

    ಕಮಲ್ ರಾಣಿ ವರುಣ್ ಅವರು ಜುಲೈ 18 ರಂದು ಕೊರೊನಾ ಟೆಸ್ಟ್ ಮಾಡಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿತ್ತು. ಲಕ್ನೋದ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕಮಲ್ ರಾಣಿ ವರುಣ್ ಅವರು ನಿಧನರಾಗಿದ್ದಾರೆ.

    ಕಮಲ್ ರಾಣಿ ವರುಣ್ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಮಲ್ ರಾಣಿ ವರುಣ್ ಅವರ ಪಾರ್ಥಿವ ಶರೀರವನ್ನು ಲಕ್ನೋದಿಂದ ಕಾನ್ಪುರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲದೇ ಕೊರೊನಾ ನಿಯಮದ ಪ್ರಕಾರ ಅಂತ್ಯಕ್ರಿಯೆ ಮಾಡಲಾಗುತ್ತದೆ.

    ಸಚಿವೆಯ ನಿಧನಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. “ಕ್ಯಾಬಿನೆಟ್ ಸಚಿವೆ ಕಮಲಾ ರಾಣಿ ವರುಣ್ ಕೋವಿಡ್ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ನಿಧನರಾಗಿದ್ದಾರೆ. ಅವರು ಸಮಾಜ ಸೇವಕಿಯಾಗಿದ್ದು, ಕ್ಯಾಬಿನೆಟ್‍ನಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದರು. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ” ಎಂದಿದ್ದಾರೆ.

    ಕಮಲ್ ರಾಣಿ ವರುಣ್ ಅವರು 11 ಮತ್ತು 12ನೇ ಅವಧಿಯಲ್ಲಿ ಲೋಕಸಭೆಯ ಸದಸ್ಯರಾಗಿದ್ದರು. ಅವರು 1996-97ರವರೆಗೆ ಕಾರ್ಮಿಕ ಮತ್ತು ಕಲ್ಯಾಣ ಸಮಿತಿ ಮತ್ತು ಕೈಗಾರಿಕಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ 1997 ರಲ್ಲಿ ಮಹಿಳಾ ಸಬಲೀಕರಣ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 1998 ರಲ್ಲಿ ಅವರು ಎರಡನೇ ಬಾರಿಗೆ ಸಂಸತ್ತಿಗೆ ಮರು ಆಯ್ಕೆಯಾಗಿದ್ದರು. 1998 ರಿಂದ 1999 ರವರೆಗೆ ವರುಣ್ಅ ವರು ಕಾರ್ಮಿಕ ಮತ್ತು ಕಲ್ಯಾಣ ಸಮಿತಿ ಹಾಗೂ ಪ್ರವಾಸೋದ್ಯಮ ಸಚಿವಾಲಯದ ಸಮಾಲೋಚನಾ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

  • ರಾಜ್ಯಾದ್ಯಂತ ಬೆಳೆಯುತ್ತಿದೆ ಸಚಿವಾಕಾಂಕ್ಷಿಗಳ ಪಟ್ಟಿ-  ಯಾರ‍್ಯಾರು ಸೇರುತ್ತಾರೆ ಬಿಜೆಪಿ ಸಂಪುಟ?

    ರಾಜ್ಯಾದ್ಯಂತ ಬೆಳೆಯುತ್ತಿದೆ ಸಚಿವಾಕಾಂಕ್ಷಿಗಳ ಪಟ್ಟಿ- ಯಾರ‍್ಯಾರು ಸೇರುತ್ತಾರೆ ಬಿಜೆಪಿ ಸಂಪುಟ?

    ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈಗ ಬಹುಮತ ಸಾಬೀತು ಪಡಿಸಿ, ಸಂಪುಟ ರಚನೆಯಾದರೆ ರಾಜ್ಯದಲ್ಲಿ ಬಿಎಸ್‍ವೈ ಸರ್ಕಾರ ಸಂಪೂರ್ಣವಾಗಲಿದೆ.

    ದೋಸ್ತಿ ಸರ್ಕಾರ ಪತನದ ಬಳಿಕ ಬಿಜೆಪಿಯಲ್ಲಿ ಪವರ್ ಸೆಂಟರ್ ಬಾರಿ ಸದ್ದು ಮಾಡಿತ್ತು. ಆದರೆ ಹೈಕಮಾಂಡ್ ಇದಕ್ಕೆಲ್ಲ ಫುಲ್‍ಸ್ಟಾಪ್ ಇಟ್ಟಂತಿದೆ. ಯಡಿಯೂರಪ್ಪ ಒನ್‍ಮ್ಯಾನ್ ಪವರ್ ಸೆಂಟರ್ ಅಂತೆ. ಅಂದರೆ ಬಿಎಸ್‍ವೈ ಒಬ್ಬರೇ ಸಿಎಂ ಆಗಿರ್ತಾರೆ. ಡಿಸಿಎಂ ಹುದ್ದೆ ಇರಲ್ಲ ಎಂದು ಹೈಕಮಾಂಡ್ ಹೇಳಿದೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಹೈಕಮಾಂಡ್ ಅಣತಿಯಂತೆ ಸಂಪುಟ ರಚನೆ ಕೂಡ ನಡೆಯಲಿದೆ. ಜಾತಿ, ಹಿರಿತನ, ಪಕ್ಷನಿಷ್ಠೆ, ಜಿಲ್ಲಾ ಪ್ರಾತಿನಿಧ್ಯ ಲೆಕ್ಕಹಾಕಿ ಸಂಪುಟ ರಚನೆ ಮಾಡಲಾಗುತ್ತಿದೆ. ಅತೃಪ್ತರಲ್ಲಿ ಬಹುತೇಕರಿಗೆ ಮಂತ್ರಿಗಿರಿ ಪಕ್ಕಾ ಆಗಿದ್ದು, ಬಿಎಸ್‍ವೈ ಸಂಪುಟದ ಸಂಭಾವ್ಯ ಪಟ್ಟಿ ಇಲ್ಲಿದೆ.

    * ಯಾರಾಗ್ತಾರೆ ಮಿನಿಸ್ಟರ್..?
    * ಬೆಂಗಳೂರು ಕೋಟಾದಿಂದ ಯಾರಿಗೆ ಅದೃಷ್ಠ..?
    > ಆರ್.ಅಶೋಕ್, ಪದ್ಮನಾಭನಗರ
    > ಸುರೇಶ್‍ಕುಮಾರ್, ರಾಜಾಜಿನಗರ
    > ಅಶ್ವಥ್‍ನಾರಾಯಣ, ಮಲ್ಲೇಶ್ವರ
    > ಅರವಿಂದ ಲಿಂಬಾವಳಿ, ಮಹದೇವಪುರ
    > ಭೈರತಿ ಬಸವರಾಜು, ಕೆ.ಆರ್.ಪುರಂ
    > ಎಸ್.ಟಿ. ಸೋಮಶೇಖರ್, ಯಶವಂತಪುರ
    > ಮುನಿರತ್ನ, ಆರ್.ಆರ್.ನಗರ

    * ಮೈಸೂರು
    > ಎಸ್.ಎ. ರಾಮದಾಸ್, ಕೃಷ್ಣರಾಜ
    > ಹೆಚ್. ವಿಶ್ವನಾಥ್, ಹುಣಸೂರು

    * ಕೊಡಗು
    > ಕೆ.ಜಿ. ಬೋಪಯ್ಯ ವೀರಾಜಪೇಟೆ
    > ಅಪ್ಪಚ್ಚು ರಂಜನ್, ಮಡಿಕೇರಿ

    * ಚಿಕ್ಕಮಗಳೂರು
    > ಸಿ.ಟಿ.ರವಿ, ಚಿಕ್ಕಮಗಳೂರು
    > ಎಂ.ಪಿ.ಕುಮಾರಸ್ವಾಮಿ, ಮೂಡಿಗೆರೆ

    * ಶಿವಮೊಗ್ಗ
    > ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ
    > ಅರಗ ಜ್ಞಾನೇಂದ್ರ, ತೀರ್ಥಹಳ್ಳಿ

    * ಉಡುಪಿ
    > ಸುನೀಲ್ ಕುಮಾರ್, ಕಾರ್ಕಳ
    > ಹಾಲಾಡಿ ಶ್ರೀನಿವಾಸಶೆಟ್ಟಿ, ಕುಂದಾಪುರ

    * ಉತ್ತರ ಕನ್ನಡ
    > ವಿಶ್ವೇಶ್ವರಹೆಗಡೆ ಕಾಗೇರಿ, ಶಿರಸಿ
    > ಶಿವರಾಮ್ ಹೆಬ್ಬಾರ್, ಯಲ್ಲಾಪುರ

    * ಚಿತ್ರದುರ್ಗ
    > ಶ್ರೀರಾಮುಲು, ಮೊಳಕಾಳ್ಮೂರು
    > ತಿಪ್ಪಾರೆಡ್ಡಿ, ಚಿತ್ರದುರ್ಗ

    * ದಾವಣಗೆರೆ
    > ರೇಣುಕಾಚಾರ್ಯ, ಹೊನ್ನಾಳಿ

    * ತುಮಕೂರು
    > ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿ

    * ಚಿಕ್ಕಬಳ್ಳಾಪುರ
    > ಡಾ.ಸುಧಾಕರ್, ಚಿಕ್ಕಬಳ್ಳಾಪುರ

    * ಕೋಲಾರ
    > ನಾಗೇಶ್, ಮುಳಬಾಗಿಲು

    * ಹಾವೇರಿ
    > ಶಂಕರ್, ರಾಣೆಬೆನ್ನೂರು
    > ಬಿ.ಸಿ. ಪಾಟೀಲ್, ಹಿರೇಕೆರೂರು
    > ಬಸವರಾಜ ಬೊಮ್ಮಾಯಿ, ಶಿಗ್ಗಾಂವಿ
    > ಸಿ.ಎಂ.ಉದಾಸಿ, ಹಾನಗಲ್

    * ಗದಗ
    > ಸಿ.ಸಿ.ಪಾಟೀಲ್, ನರಗುಂದ

    * ಧಾರವಾಡ
    > ಶಂಕರ ಪಾಟೀಲ್ ಮುನೇನಕೊಪ್ಪ, ನವಲಗುಂದ

    * ವಿಜಯಪುರ
    > ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರ

    * ಬಾಗಲಕೋಟೆ
    > ಗೋವಿಂದ ಕಾರಜೋಳ, ಮುಧೋಳ
    > ಮುರುಗೇಶ್ ನಿರಾಣಿ, ಬೀಳಗಿ

    * ಬೆಳಗಾವಿ
    > ರಮೇಶ್ ಜಾರಕಿಹೊಳಿ, ಗೋಕಾಕ್
    > ಬಾಲಚಂದ್ರ ಜಾರಕಿಹೊಳಿ, ಅರಭಾವಿ
    > ಉಮೇಶ್ ಕತ್ತಿ, ಹುಕ್ಕೇರಿ

    * ಕಲಬುರಗಿ
    > ದತ್ತಾತ್ರೇಯಪಾಟೀಲ್ ರೇವೂರ್, ಕಲಬುರಗಿ ದಕ್ಷಿಣ

    * ರಾಯಚೂರು
    > ಶಿವನಗೌಡನಾಯಕ್, ದೇವದುರ್ಗ
    > ಪ್ರತಾಪ್‍ಗೌಡ ಪಾಟೀಲ್, ಮಸ್ಕಿ

    * ಬೀದರ್
    > ಪ್ರಭು ಚವ್ಹಾಣ್, ಔರಾದ್

    * ದಕ್ಷಿಣ ಕನ್ನಡ
    > ಅಂಗಾರ, ಸುಳ್ಯ

    ಸಚಿವ ಸ್ಥಾನ ನೀಡುವಂತೆ ಇವರೆಲ್ಲರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. ಆದರೆ ಬಿಎಸ್‍ವೈ ಅವರ ಸಚಿವ ಸಂಪುಟದಲ್ಲಿ ಯಾರೆಲ್ಲ ಸಚಿವರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  • ಪಂಜಾಬಿನಲ್ಲಿ ಕೈ ಬಂಡಾಯ – ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ

    ಪಂಜಾಬಿನಲ್ಲಿ ಕೈ ಬಂಡಾಯ – ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ

    ನವದೆಹಲಿ: ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ.

    ಸಿಧು ತಮ್ಮ ರಾಜೀನಾಮೆ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2019 ರ ಜೂನ್ 10 ರಂದು ಸಲ್ಲಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಪತ್ರವನ್ನು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರಿಗೂ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಆರಂಭದಿಂದಲೂ ಸಿಧು ಮತ್ತು ಅಮರೀಂದರ್ ಸಿಂಗ್ ನಡುವೆ ಒಳ ಜಗಳಗಳು ಇದ್ದವು. ಜೂನ್ 6 ರಂದು ಅಮರೀಂದರ್ ಸಿಂಗ್ ತಮ್ಮ ಸಂಪುಟ ಪುನರ್ ರಚನೆ ಮಾಡಿದ್ದು, ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರದಂತಹ ಪ್ರಮುಖ ಖಾತೆಗಳನ್ನು ಸಿಧು ಅವರಿಂದ ಹಿಂಪಡೆದು ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಖಾತೆ ಅವರಿಗೆ ನೀಡಿದ್ದರು.

    ಇದಾದ ನಂತರ ಸರ್ಕಾರದ ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನದ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಜೂನ್ 8 ರಂದು ಮುಖ್ಯಮಂತ್ರಿ ರಚಿಸಿದ ಸಮಾಲೋಚನಾ ಗುಂಪುಗಳಿಂದ ಸಿಧು ಅವರು ಹೊರಗುಳಿದಾಗ ಅವರು ರಾಜೀನಾಮೆ ನೀಡಬಹುದು ಎಂದು ಹೇಳಲಾಗಿತ್ತು.

    ಈ ಹಿಂದೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮತ್ತು ರಾಜ್ಯದ ಪಕ್ಷದ ನಾಯಕತ್ವದ ವಿರುದ್ಧ ಟೀಕೆ ಮಾಡಿದ್ದ ಸಿಧು ಅವರಿಂದ ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ಹಾಳಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ನಂತರ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಿಂದ ಲೋಕಸಭಾ ಚುನಾವಣೆಯಲ್ಲಿ ಸೋತರೆ ರಾಜಕೀಯ ತೊರೆಯುವುದಾಗಿ ಈ ಹಿಂದೆ ಪ್ರತಿಜ್ಞೆಯನ್ನು ಕೂಡ ಮಾಡಿದ್ದರು.

    ಕಳೆದ ಜೂನ್ 10 ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ನವದೆಹಲಿಯಲ್ಲಿ ಭೇಟಿಯಾಗಿ ರಾಜ್ಯದಲ್ಲಿ ಇರುವ ಪರಿಸ್ಥಿತಿಯ ಬಗ್ಗೆ ತಿಳಿಸಿದರು. ಆ ದಿನವೇ ರಾಜೀನಾಮೆ ಪತ್ರವನ್ನು ನೀಡಿದ್ದರು.

  • ಸಚಿವ ಸ್ಥಾನ ವಂಚಿತರಿಗೆ ಡಿಕೆ ಶಿವಕುಮಾರ್ ಸಲಹೆ!

    ಸಚಿವ ಸ್ಥಾನ ವಂಚಿತರಿಗೆ ಡಿಕೆ ಶಿವಕುಮಾರ್ ಸಲಹೆ!

    ಬೆಂಗಳೂರು: ಸಂಪುಟ ರಚನೆಯ ಬಳಿಕ ಸಚಿವ ಸ್ಥಾನದ ಆಕಾಂಕ್ಷಿಗಳು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಸಂಬಂಧ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಎಲ್ಲರಿಗೂ ಅವಕಾಶಗಳಿವೆ. ಡೋರ್‍ಗಳು ಕ್ಲೋಸ್ ಆಗಿಲ್ಲ ಅಂತಾ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಭರವಸೆಯನ್ನು ನೀಡಿದ್ದಾರೆ.

    ಸಚಿವ ಸ್ಥಾನ ಸಿಗದ ನಾಯಕರನ್ನು ಸಮಾಧಾನಪಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ ನಿರಾಸಕ್ತಿ ತೋರಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿದ್ದರಾಮಯ್ಯ ವಿಚಾರ ನನಗೆ ಗೊತ್ತಿಲ್ಲ. ಸದ್ಯ ಅವರು ಗೆಲ್ಲಿಸಿರುವ ತಮ್ಮ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲು ತೆರಳಿದ್ದಾರೆ. ಹೈಕಮಾಂಡ್ ಒಬ್ಬೊಬ್ಬರಿಗೂ ಒಂದೊಂದು ಜವಾಬ್ದಾರಿಯನ್ನು ನೀಡಿದ್ದು, ನನಗೆ ನೀಡಿರುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಬೇರೆ ನಾಯಕರು ಏನು ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ ಅಂತಾ ತಿಳಿಸಿದರು.

    ಎಲ್ಲ ನಾಯಕರಿಗೂ ಅವಕಾಶಗಳಿವೆ. ಡೋರ್‍ಗಳು ಕ್ಲೋಸ್ ಆಗಿಲ್ಲ. ಮಾಜಿ ಸಿಎಂ ಧರಂಸಿಂಗ್ ಅವರ ಕಾಲದಲ್ಲಿ ನನ್ನನ್ನು ಆರು ತಿಂಗಳು ಸುಮ್ಮನೆ ಕೂರಿಸಿದ್ದರು. ಈ ಹಿಂದೆ ಪರಮೇಶ್ವರ್ ಸಹ ಕೆಲವು ದಿನ ಸುಮ್ಮನೆ ಕುಳಿತಿದ್ದರು. ಅಂದು ನಾವು ತಾಳ್ಮೆಯಿಂದ ಇರಲಿಲ್ವಾ..? ಹಾಗೆ ಇಂದು ಸಹ ಸಚಿವ ಸ್ಥಾನ ವಂಚಿತ ನಾಯಕರು ತಾಳ್ಮೆಯಿಂದ ಇರಬೇಕು ಅಂತಾ ಸಲಹೆ ನೀಡಿದ್ರು.