Tag: cabinet expansion

  • ದೆಹಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್- 18 ಸಂಭಾವ್ಯ ಸಚಿವರ ಪಟ್ಟಿ ಬಹುತೇಕ ಫೈನಲ್

    ದೆಹಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್- 18 ಸಂಭಾವ್ಯ ಸಚಿವರ ಪಟ್ಟಿ ಬಹುತೇಕ ಫೈನಲ್

    ನವದೆಹಲಿ: ಸಂಪುಟ ವಿಸ್ತರಣೆ (Cabinet Expansion) ಕಸರತ್ತು ಕೊನೆಗೊಂಡಿಲ್ಲ. ಬುಧವಾರ ರಾತ್ರಿಯಿಂದ ದೆಹಲಿಯಲ್ಲಿ ಸಭೆ ಮೇಲೆ ಸಭೆಗಳು ನಡೆದ್ರೂ ಒಮ್ಮತಾಭಿಪ್ರಾಯ ಮೂಡಿಲ್ಲ.

    18 ಶಾಸಕರ ಹೆಸರು ಹೆಚ್ಚುಕಡಿಮೆ ಫೈನಲ್ ಆಗಿದ್ದು, ಇನ್ನುಳಿದವರ ಆಯ್ಕೆಗೆ ಕಸರತ್ತು ನಡೆದಿದೆ. ಇತರೆ ಪ್ರಮುಖ ಸಮುದಾಯಗಳಿಗೂ ಡಿಸಿಎಂ ಹುದ್ದೆ ಕೊಡಬೇಕು ಎನ್ನುವ ಮೂಲಕ ಹಾಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಗೆ ಸಿಎಂ ಸಿದ್ದರಾಮಯ್ಯ (Siddaramaiah) ಇಕ್ಕಟ್ಟಿಗೆ ಸಿಲುಕಿಸಲು ನೋಡಿದ್ದಾರೆ. ಈ ಬಾರಿ ಪ್ರಮುಖ ಸಮುದಾಯಗಳೆಲ್ಲಾ ಪಕ್ಷವನ್ನು ಬೆಂಬಲಿಸಿವೆ. ಹೀಗಾಗಿ ಎಸ್‍ಸಿ, ಎಸ್‍ಟಿ ಹಾಗೂ ಲಿಂಗಾಯತ ಸಮುದಾಯಗಳು ಕೂಡ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿವೆ ಎಂಬ ದಾಳವನ್ನು ಸಿಎಂ ಉರುಳಿಸಿದ್ದಾರೆ. ಅಲ್ಲದೇ ಡಿಕೆ ಶಿವಕುಮಾರ್ ಬಯಸಿದ್ದ ಬೆಂಗಳೂರು ಅಭಿವೃದ್ಧಿ ಖಾತೆ ಬಿಬಿಎಂಪಿ ಚುನಾವಣೆ ಆಗೋವರೆಗೆ ತನ್ನ ಬಳಿಯೇ ಇರಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.

    ಬೆಳಗಾವಿಯ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) , ಲಕ್ಷ್ಮಣ ಸವದಿ (Laxman Savadi) ಯನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ಡಿಸಿಎಂ ಬೇಡಿಕೆಗೆ ಆಗಲ್ಲ, ಇಬ್ಬರಲ್ಲಿ ಒಬ್ಬರ ಹೆಸರನ್ನು ಹೇಳಿ ಎಂದು ಸಿಎಂ ನೇರವಾಗಿ ಹೇಳಿದ್ದಾರೆ. ಮಂತ್ರಿ ಸ್ಥಾನ ಬಯಸಿ 30ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಲಾಬಿ ನಡೆಸಿದ್ದಾರೆ. ಬಿಕೆ ಹರಿಪ್ರಸಾದ್, ಟಿಬಿ ಜಯಚಂದ್ರ, ಆರ್ ಬಿ ತಿಮ್ಮಾಪುರ, ಪುಟ್ಟರಂಗಶೆಟ್ಟಿ, ನಾಗೇಂದ್ರ ಸೇರಿ ಹಲವರು ಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದು ಕುಳಿತಿದ್ದಾರೆ. ಕೊಡಗು ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡಲೇಬೇಕು ಎಂದು ಶಾಸಕ ಪೊನ್ನಣ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನ್ನ ಅಸ್ತಿತ್ವವೇ ಹೊರಟೋಗಿದೆ, ನಾನೇನು ಕಡುಬು ತಿನ್ನೋಕೆ ರಾಜಕೀಯ ಮಾಡ್ತಿದ್ದೀನಾ – HDK ಪ್ರಶ್ನೆ

    ಇವರು ಸಿದ್ದರಾಮಯ್ಯ ಸಂಪುಟ ಸೇರ್ತಾರಾ?
    * ಈಶ್ವರ ಖಂಡ್ರೆ – ಭಾಲ್ಕಿ – ಲಿಂಗಾಯತ
    * ಲಕ್ಷ್ಮಿ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮೀಣ – ಲಿಂಗಾಯತ
    * ಶರಣಬಸಪ್ಪ ದರ್ಶನಾಪುರ – ಶಹಾಪುರ – ಲಿಂಗಾಯತ
    * ಎಸ್.ಎಸ್.ಮಲ್ಲಿಕಾರ್ಜುನ – ದಾವಣಗೆರೆ ಉತ್ತರ – ಲಿಂಗಾಯತ
    * ಚೆಲುವರಾಯಸ್ವಾಮಿ – ನಾಗಮಂಗಲ – ಒಕ್ಕಲಿಗ
    * ಕೃಷ್ಣ ಬೈರೇಗೌಡ – ಬ್ಯಾಟರಾಯನಪುರ – ಒಕ್ಕಲಿಗ


    * ವೆಂಕಟೇಶ್ – ಪಿರಿಯಾಪಟ್ಟಣ – ಒಕ್ಕಲಿಗ
    * ಎಂ ಸಿ ಸುಧಾಕರ್ – ಚಿಂತಾಮಣಿ – ಒಕ್ಕಲಿಗ
    * ಶಿವಲಿಂಗೇಗೌಡ – ಅರಸೀಕೆರೆ – ಒಕ್ಕಲಿಗ
    * ಬೈರತಿ ಸುರೇಶ್ – ಹೆಬ್ಬಾಳ – ಕುರುಬ
    * ನರೇಂದ್ರ ಸ್ವಾಮಿ – ಮಳವಳ್ಳಿ – ಎಸ್‍ಸಿ
    * ರಹೀಂ ಖಾನ್ – ಬೀದರ್ ಉತ್ತರ – ಮುಸ್ಲಿಂ
    * ಪುಟ್ಟರಂಗ ಶೆಟ್ಟಿ – ಚಾಮರಾಜನಗರ – ಉಪ್ಪಾರ
    * ಮಧು ಬಂಗಾರಪ್ಪ – ಸೊರಬ – ಈಡಿಗ
    * ಸುಧಾಕರ್ – ಹಿರಿಯೂರು – ಜೈನ್
    * ಮಂಕಾಳ ವೈದ್ಯ – ಭಟ್ಕಳ – ಮೊಗೆರಾ

  • ಗ್ರಾಮ ವಾಸ್ತವ್ಯದಿಂದ 17 ಸಾವಿರ ಜನರಿಗೆ ಅನುಕೂಲವಾಗಿದೆ: ಆರ್.ಅಶೋಕ್

    ಗ್ರಾಮ ವಾಸ್ತವ್ಯದಿಂದ 17 ಸಾವಿರ ಜನರಿಗೆ ಅನುಕೂಲವಾಗಿದೆ: ಆರ್.ಅಶೋಕ್

    ರಾಯಚೂರು: ಗ್ರಾಮ ವಾಸ್ತವ್ಯದಿಂದ ನಮಗೆ ನ್ಯಾಯ ಸಿಗುತ್ತದೆ ಅನ್ನೋ ನಂಬಿಕೆ ಗ್ರಾಮೀಣ ಭಾಗದ ಜನರಲ್ಲಿ ಮೂಡುತ್ತಿದೆ. ಅಧಿಕಾರಿಗಳು ಇನ್ನಷ್ಟು ಶ್ರಮಪಟ್ಟರೆ ಜನರಿಗೆ ಇನ್ನೂ ಅನುಕೂಲವಾಗುತ್ತದೆ ಅಂತ ಕಂದಾಯ ಸಚಿವ ಆರ್.ಅಶೋಕ್ (Revenue Minister R. Ashok) ಹೇಳಿದ್ದಾರೆ.

    ಜಿಲ್ಲೆಯ ದೇವದುರ್ಗದ (Devadurga) ಅರಕೇರಾದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಿನ್ನೆಲೆ ಗ್ರಾಮವಾಸ್ತವ್ಯ ಮುಗಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್ ಅವರು, ಗ್ರಾಮ ವಾಸ್ತವ್ಯ ವೇಳೆಯೇ ಸೈನಿಕರಿಗೆ ಆರೂವರೆ ಎಕರೆ ಜಮೀನು ಮಂಜೂರು ಮಾಡಲಾಗಿದೆ. ಈ ಗ್ರಾಮ ವಾಸ್ತವ್ಯದಿಂದ 17 ಸಾವಿರ ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

    ಅರಕೇರಾ ನೂತನ ತಾಲೂಕಿಗೆ ಅಧಿಕಾರಿಗಳನ್ನು ಶೀಘ್ರದಲ್ಲಿಯೇ ನೇಮಕ ಮಾಡುತ್ತೇವೆ. ಇಲ್ಲಿನ ಜನ ಮನೆಗಳನ್ನು ಕೇಳುತ್ತಿದ್ದಾರೆ. ವಸತಿ ಸೌಲಭ್ಯ ಕಲ್ಪಿಸಬೇಕಿದೆ. ಈಗ 300 ಮನೆಗಳನ್ನು ನೀಡುತ್ತಿದ್ದೇವೆ. 2 ಸಾವಿರ ಅರ್ಜಿಗಳು ಬಂದಿವೆ ಅವುಗಳನ್ನು ಶೀಘ್ರ ವಿಲೇವಾರಿ ಮಾಡುತ್ತೇವೆ ಎಂದರು.

    ಇದೇ ವೇಳೆ ಸಚಿವ ಸಂಪುಟದ ವಿಸ್ತರಣೆ, ಈ ಭಾಗಕ್ಕೆ ಸಚಿವ ಸ್ಥಾನ ಕೊಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ನಾನು ಅದರ ಬಗ್ಗೆ ಪ್ರತಿಕ್ರಿಯೆ ಕೊಡುವುದು ಏನೂ ಇಲ್ಲ ಅಂತ ಅಶೋಕ್ ಹೇಳಿದರು. ಇದನ್ನೂ ಓದಿ: ಹಾಸನದಲ್ಲಿ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

    ರಾಯಚೂರಿಗೆ ಏಮ್ಸ್ ನೀಡುವ ಬಗ್ಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ರಾಯಚೂರನ್ನು ಮಹಾನಗರ ಪಾಲಿಕೆ ಮಾಡಬೇಕಿದೆ. ವಿಮಾನ ನಿಲ್ದಾಣ ಸೇರಿದಂತೆ ಅಗತ್ಯ ಸೌಲಭ್ಯಗಳನ್ನ ಮೊದಲು ಕಲ್ಪಿಸಬೇಕಿದೆ. ಎಲ್ಲಾ ಅಗತ್ಯ ಸೌಲಭ್ಯಗಳನ್ನ ನೀಡಿದ ಮೇಲೆ ಏಮ್ಸ್‌ಗೆ ಒತ್ತಾಯ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಹಾಸನ ಭೀಕರ ಅಪಘಾತ ಪ್ರಕರಣ – ಎಸ್ಕೇಪ್ ಆಗಿದ್ದ ಹಾಲಿನ ಟ್ಯಾಂಕರ್ ಚಾಲಕ ಪೊಲೀಸರ ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • 2-3 ದಿನದಲ್ಲಿ ಸಂಪುಟ ವಿಸ್ತರಣೆ : ಸಿಎಂ ಬೊಮ್ಮಾಯಿ

    2-3 ದಿನದಲ್ಲಿ ಸಂಪುಟ ವಿಸ್ತರಣೆ : ಸಿಎಂ ಬೊಮ್ಮಾಯಿ

    ನವದೆಹಲಿ: ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಗೃಹ ಸಚಿವ ಅಮಿತ್‌ ಶಾ ಭೇಟಿಯ ನಂತರ ಮಧ್ಯಮಗಳ ಜೊತೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆಯೂ ಚರ್ಚೆಯಾಗಿದೆ. ಸಂಪುಟ ವಿಸ್ತರಣೆ  ಬಗ್ಗೆಯೂ ಚರ್ಚೆ ಮಾಡಿದ್ದು, ಜೆಪಿ ನಡ್ಡಾ ಅವರ ಜೊತೆಗೂ ಮಾತನಾಡುತ್ತೇನೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ಸರ್ಕಾರಿ ನೌಕರ


    ನಾನು ಯಾವುದೇ ಹೆಸರುಗಳನ್ನು ಅಮಿತ್ ಶಾ ಅವರಿಗೆ ಹೇಳಿಲ್ಲ. ಮುಂದಿನ ವಾರ ಬಹಳ ಮುಖ್ಯವಾಗಿದೆ. ಯಾಕೆಂದರೆ ಸ್ಥಳೀಯ ಚುನಾವಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ರಾಜ್ಯದ ರಾಜಕೀಯ ಸ್ಥಿತಿಗತಿ ಆಧಾರ ಬಗ್ಗೆ ಬದಲಾವಣೆ ಆಗಬಹುದು. ಬರುವ ಮೂರು ನಾಲ್ಕು ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ಮಾಹಿತಿ ನೀಡಿದರು.

  • ಮರಾಠಾ ಸಮುದಾಯದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ಬೇಕು: ಅನಿಲ್ ಬೆನಕೆ

    ಮರಾಠಾ ಸಮುದಾಯದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ಬೇಕು: ಅನಿಲ್ ಬೆನಕೆ

    ಬೆಳಗಾವಿ: ರಾಜ್ಯದಲ್ಲಿ ಮರಾಠಾ ದೊಡ್ಡ ಪ್ರಮಾಣದಲ್ಲಿ ಇದೆ. ಹೀಗಾಗಿ ಅದನ್ನು ಪ್ರತಿನಿಧಿಸುವ ಸಲುವಾಗಿ ಸಮಾಜದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ನೀಡಬೇಕು ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಆಗ್ರಹಿಸಿದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮರಾಠಾ ಸಮುದಾಯಕ್ಕೆ ಸಚಿವ ಸ್ಥಾನ ಕೊಡಬೇಕೆಂದು ಬೇಡಿಕೆ ಇದೆ. ಆದರೆ, ಹೈಕಮಾಂಡ್ ಏನು ನಿರ್ಣಯ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

    ರಾಜ್ಯದಲ್ಲಿ ಮರಾಠ ದೊಡ್ಡ ಸಮುದಾಯವಿದ್ದು ಅದನ್ನ ಪ್ರತಿನಿಧಿಸುವುದಕ್ಕೆ ನಮ್ಮ ಸಮಾಜದವರಿಗೆ ಸಚಿವ ಸ್ಥಾನ ಬೇಕು ಎಂಬುವುದು ಸಮಾಜದ ಬೇಡಿಕೆ ಆಗಿದೆ. ಪಕ್ಷ ನಮ್ಮ ಸಮಾಜದ ಬೇಡಿಕೆ ಈಡೇರಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಹೀಗಾಗಿ ಸಮಾಜದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ನೀಡಬೇಕು. ಯಾರಿಗೆ ಕೊಟ್ಟರು ತೊಂದರೆ ಇಲ್ಲ. ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು.

  • ಸಚಿವ ಸಂಪುಟ ವಿಸ್ತರಣೆ ‘ನಾಳೆ ಬಾ’ ಎಂಬಂತಿದೆ: ಅಭಯ್ ಪಾಟೀಲ್ ವ್ಯಂಗ್ಯ

    ಸಚಿವ ಸಂಪುಟ ವಿಸ್ತರಣೆ ‘ನಾಳೆ ಬಾ’ ಎಂಬಂತಿದೆ: ಅಭಯ್ ಪಾಟೀಲ್ ವ್ಯಂಗ್ಯ

    ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಮ್ಮದೇ ಸರ್ಕಾರದ ವಿರುದ್ಧ ನಗರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಸಚಿವ ಸಂಪುಟ ವಿಸ್ತರಣೆ ‘ನಾಳೆ ಬಾ’ ಎಂಬಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಅದು ಆಗೋದಲ್ಲ, ಹೋಗೋದಲ್ಲ. ನನಗೆ ಮಂತ್ರಿ ಸ್ಥಾನ ಕೊಡೋದು, ಬಿಡೋದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದರು.

    ನನಗೆ ಸಿಎಂ ಬುಲಾವ್ ಅನ್ನೋದು ತಪ್ಪು. ಎಲ್ಲ ಶಾಸಕರಿಗೂ ಊಟಕ್ಕೆ ಕರೆದಿದ್ದರು. ಹೀಗಾಗಿ ಊಟ ಮಾಡಿ ಬಂದಿದ್ದೇವೆ. ಮೂರು ಸ್ವೀಟ್, ರೊಟ್ಟಿ ಜೊತೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಊಟ ಇತ್ತು ಎಂದು ತಿಳಿಸಿದರು.

    ನಮ್ಮ ಸರ್ಕಾರ ಬೆಳಗಾವಿ ಜಿಲ್ಲಾ ಕೇಂದ್ರಕ್ಕೆ ಅಭಿವೃದ್ಧಿ ವಿಷಯದಲ್ಲಿ ಪ್ರಾಮುಖ್ಯತೆ ನೀಡಿದೆ. ಇನ್ನು, ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಮ್ಮ ಗಮನಕ್ಕೆ ಬಂದಿಲ್ಲ. ಸಭೆಯಲ್ಲಿ ಆ ರೀತಿಯ ಯಾವುದೇ ಚರ್ಚೆ ನಡೆದಿಲ್ಲ ಎಂದರು.

  • ಫೆ.7ರಂದು ಸಿಎಂ ದೆಹಲಿ ಪ್ರವಾಸ

    ಫೆ.7ರಂದು ಸಿಎಂ ದೆಹಲಿ ಪ್ರವಾಸ

    ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಮಾಡಲಿದ್ದಾರೆ.

    ಮೂರು ದಿನಗಳ ದೆಹಲಿ ಪ್ರವಾಸಕ್ಕೆ ಯೋಜಿಸಿರುವ ಸಿಎಂ, ದೆಹಲಿಯಲ್ಲಿ ವರಿಷ್ಠರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ. ಸಂಸದರ ಸಭೆ ಬಳಿಕ ವರಿಷ್ಠರನ್ನು ಸಿಎಂ ಭೇಟಿಯಾಗಬಹುದು ಎನ್ನಲಾಗಿದೆ. ಇದನ್ನೂ ಓದಿ: ಬೊಮ್ಮಾಯಿನೇ ಹಿಜಬ್ ಹಾಕಿದ್ದಾರೆ: ಸಿಎಂ ಇಬ್ರಾಹಿಂ

    ದೆಹಲಿಗೆ ತೆರಳಲು ಸಿಎಂ ಬೊಮ್ಮಾಯಿ ಸಜ್ಜಾಗಿದ್ದಾರೆ. ಆದರೆ ಈವರೆಗೂ ಭೇಟಿಗೆ ಹೈಕಮಾಂಡ್‌ ಸಮಯ ನೀಡಿಲ್ಲ. ಹಲವು ಬಾರಿ ಪ್ರಯತ್ನಿಸಿದರೂ ಈವರೆಗೂ ವರಿಷ್ಠರು ಸಮಯ ನಿಗದಿ ಮಾಡಿಲ್ಲ. ಗೊಂದಲದ ನಡುವೆಯೂ ಸಿಎಂ ದೆಹಲಿಗೆ ತೆರಳುತ್ತಿದ್ದಾರೆ.

    ಪಂಚರಾಜ್ಯಗಳ ಚುನಾವಣೆ ಸಮೀಪಿಸಿದ್ದು, ಮೊದಲೆರಡು ಹಂತಗಳ ಚುನಾವಣೆಯಲ್ಲಿ ವರಿಷ್ಠರು ಬ್ಯುಸಿಯಾಗಿದ್ದಾರೆ. ವರಿಷ್ಠರು ಉತ್ತರ ಪ್ರದೇಶ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಭೇಟಿಗೆ ಇನ್ನೂ ಸಮಯ ನಿಗದಿ ಮಾಡಿಲ್ಲ. ಒಂದು ವೇಳೆ ಸಮಯ ಸಿಕ್ಕರೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡುವುದು ಅನುಮಾನ. ಚುನಾವಣೆ ಫಲಿತಾಂಶದ ಬಳಿಕ ಈ ಬಗ್ಗೆ ವಿಸ್ತೃತ ಚರ್ಚೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಷರಿಯತ್ತೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಪ್ರತಾಪ್ ಸಿಂಹ

  • ಸಚಿವ ಸ್ಥಾನಕ್ಕೆ ಲಾಬಿ ಆರಂಭಿಸಿದ ವಲಸಿಗ ಶಾಸಕರು

    ಸಚಿವ ಸ್ಥಾನಕ್ಕೆ ಲಾಬಿ ಆರಂಭಿಸಿದ ವಲಸಿಗ ಶಾಸಕರು

    ಚಿಕ್ಕೋಡಿ: ಇನ್ನೇನೂ ಕೆಲವೇ ದಿನಗಳಲ್ಲಿ ರಾಜ್ಯ ಸಂಪುಟ ವಿಸ್ತರಣೆ ಆಗುತ್ತದೆ ಎನ್ನುವ ಸುದ್ದಿಗಳ ಮಧ್ಯೆಯೇ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳು ಲಾಬಿ ನಡೆಸಲು ಮುಂದಾಗಿದ್ದಾರೆ.

    ಅದರಲ್ಲೂ ಕಾಂಗ್ರೆಸ್ ತೊರೆದು ಸರ್ಕಾರ ರಚಿಸಲು ಪ್ರಮುಖ ಪಾತ್ರ ವಹಿಸಿ ಬಿಜೆಪಿ ಸೇರಿರುವ ಸಚಿವ ಸ್ಥಾನ ವಂಚಿತ ವಲಸಿಗ ಶಾಸಕರು ಈಗಿನಿಂದಲೇ ಫೀಲ್ಡಿಗಿಳಿದು ನಮಗೂ ಸಚಿವ ಸ್ಥಾನ ನೀಡಿ ಎಂದು ಹಠಕ್ಕೆ ಬಿದ್ದಿದ್ದಾರೆ. ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತೆ ಎನ್ನುವ ಊಹಾಪೋಹಗಳ ನಡುವೆಯೇ ಬೆಳಗಾವಿ ಜಿಲ್ಲೆಯ ವಲಸಿಗ ಶಾಸಕರು ಫುಲ್ ಆ್ಯಕ್ಟಿವ್ ಆಗಿದ್ದು ಸಚಿವ ಸ್ಥಾನಕ್ಕೆ ತೆರೆ ಮರೆಯ ಕಸರತ್ತು ಆರಂಭಿಸಿದ್ದಾರೆ. ಇದನ್ನೂ ಓದಿ: 15 ದುರಂಹಕಾರಿ ಸಚಿವರನ್ನ ವಜಾ ಮಾಡಿ: ರೇಣುಕಾಚಾರ್ಯ ಗುಡುಗು

    ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನಮಗೆ ಸಚಿವ ಸ್ಥಾನ ಸಿಗಬೇಕು ಎನ್ನುವ ಇಂಗಿತವನ್ನು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮಗೆ ಈ ಬಾರಿಯ ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ಸಿಕ್ಕೆ ಸಿಗುತ್ತದೆ ಎನ್ನುವ ಭರವಸೆಯನ್ನು ಶ್ರೀಮಂತ ಪಾಟೀಲ್ ಮಾಧ್ಯಮಗಳ ಮೂಲಕ ಹೈ ಕಮಾಂಡ್‍ಗೆ ತಮ್ಮ ವರ್ಚಸ್ಸಿನ ಬಗ್ಗೆ ಉತ್ತಮ ಅಭಿಪ್ರಾಯ ರವಾನಿಸುವ ಪ್ರಯತ್ನ ನಡೆಸುತ್ತಿದ್ದಾರೆ.

    ಒಂದು ಕಡೆ ಮಾಧ್ಯಮಗಳ ಮೂಲಕ ಸಚಿವ ಸ್ಥಾನದ ಲಾಬಿ ಮಾಡುತ್ತಿರುವ ಶಾಸಕರ ನಡುವೆ ಸಿಡಿ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಆರ್‌ಎಸ್‌ಎಸ್‌ ಮೂಲಕ ಲಾಬಿ ನಡೆಸಿದ್ದಾರೆ. ಸಚಿವ ಸ್ಥಾನಕ್ಕೆ ಆರ್‌ಎಸ್‌ಎಸ್‌ ಪ್ರಮುಖರ ಮನೆ ಕದ ತಟ್ಟುತ್ತಿದ್ದು, ತಿಂಗಳಿಗೆ ಎರಡೇರಡು ಬಾರಿ ಅಥಣಿ ಪಟ್ಟಣಕ್ಕೆ ತೆರಳಿ ಆರ್‌ಎಸ್‌ಎಸ್‌ ಉತ್ತರ ವಲಯ ಪ್ರಾಂತ ಪ್ರಮುಖ ಅರವಿಂದ ದೇಶಪಾಂಡೆ ಅವರ ಮನೆಗೆ ಭೇಟಿ ನೀಡಿ ಪ್ರಮುಖ ಸ್ಥಾನ ದೊರಕಿಸುವಂತೆ ದುಂಬಾಲು ಬಿದ್ದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಿಂದ ಹೊರಬಂದಿದ್ದೇನೆ ಮತ್ತೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಶಾಪ ಹಾಕಿದ: ಇಬ್ರಾಹಿಂ

    ಜಾರಕಿಹೊಳಿ ಅಲ್ಲದೇ ತಮ್ಮ ಸಹಚರ ಮಹೇಶ್ ಕುಮಟಳ್ಳಿ ಅವರಿಗೂ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ವಲಸಿಗ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್ ಈ ಮೂವರು ತೆರೆಮರೆಯಲ್ಲಿ ಸಚಿವ ಸ್ಥಾನಕ್ಕೆ ಕಸರತ್ತು ನಡೆಸಿದ್ದು, ಮುಂದಿನ ಸಂಪುಟ ವಿಸ್ತರಣೆಯಲ್ಲಿ ಈ ಮೂವರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಕಾದು ನೋಡಬೇಕಿದೆ.

  • ಸಿಎಂ ಬೊಮ್ಮಾಯಿ ಸಂಪುಟದ 6 ಸಚಿವರಿಗೆ ಕೊಕ್‌?

    ಸಿಎಂ ಬೊಮ್ಮಾಯಿ ಸಂಪುಟದ 6 ಸಚಿವರಿಗೆ ಕೊಕ್‌?

    ಬೆಂಗಳೂರು: ಸಂಕ್ರಾಂತಿ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ. ಮೂಲ ಮತ್ತು ವಲಸಿಗ ಸಚಿವರಿಗೆ ಕೊಕ್‌ ನೀಡಲು ಹೈಕಮಾಂಡ್‌ ನಿರ್ಧರಿಸಿದೆ ಎನ್ನಲಾಗಿದೆ.

    ಸಚಿವರ ಕಾರ್ಯವೈಖರಿ, ಕ್ರಿಯಾಶೀಲತೆಯನ್ನು ಮಾನದಂಡವಾಗಿ ಇಟ್ಟುಕೊಂಡು ಸಚಿವರಿಗೆ ಗೇಟ್‌ ಪಾಸ್‌ ನೀಡುವ ಬಗ್ಗೆ ಚರ್ಚೆಯಾಗುತ್ತದೆ. ಜನವರಿ 8, 9 ರಂದು ಹೈಕಮಾಂಡ್‌ ಸಭೆ ನಡೆಸಲಿದ್ದು, ಸಭೆ ಬಳಿಕ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ: ಶ್ರೀರಾಮುಲು

    6+4 ಸೂತ್ರದಡಿಯಲ್ಲಿ ಸಂಪುಟ ಪುನಾರಚನೆಯ ಯೋಜನೆ ಇದೆ. ವಲಸಿಗರಲ್ಲಿ ಮೂರು, ಮೂಲದಲ್ಲಿ ಮೂರು ಸಚಿವರು ಸಂಪುಟದಿಂದ ಹೊರ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಸಂಪುಟದಿಂದ 6 ಸಚಿವರನ್ನು ಹೊರ ಹಾಕಿದರೆ ಒಟ್ಟು 10 ಸ್ಥಾನ ಖಾಲಿ ಉಳಿಯಲಿವೆ. ಆಗ ಎಲೆಕ್ಷನ್ ಕ್ಯಾಬಿನೆಟ್ ರಚಿಸಲು ಹೈಕಮಾಂಡ್ ಉತ್ಸುಕವಾಗಿದ್ದು, 10 ಸ್ಥಾನಗಳನ್ನು ತುಂಬಲು ಹೈಕಮಾಂಡ್ ಪ್ಲ್ಯಾನ್ ಮಾಡಿದೆ.

    ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಿಎಂ ಬದಲಾಗಲಿದ್ದಾರೆ ಎಂದು ಹೇಳಿ ಸುದ್ದಿಯಾಗಿದ್ದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಈಗ ಮತ್ತೊಂದು ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ. ಸಂಕ್ರಾಂತಿ ನಂತರ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: PM ಕಿಸಾನ್ ಯೋಜನೆ 10ನೇ ಕಂತಿನಡಿ ಕರ್ನಾಟಕಕ್ಕೆ 685 ಕೋಟಿ ರೂ.ಗೂ ಹೆಚ್ಚಿನ ಹಣ ಬಿಡುಗಡೆ

    ಸಂಪುಟ ಪುನಾರಚನೆ ವದಂತಿ ಬಗ್ಗೆ ಅನೇಕ ಸಚಿವರು ಪ್ರತಿಕ್ರಿಯಿಸಿದ್ದಾರೆ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ಬಿಜೆಪಿ ಹೈಕಮಾಂಡ್‌ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಶಿಸ್ತಿನ ಸಿಪಾಯಿಗಳಂತೆ ಪಕ್ಷಕ್ಕಾಗಿ ದುಡಿಯುತ್ತೇವೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

  • 7 ಜನರ ಖಾತೆ ಬದಲಾವಣೆ – ಹಠ ಬಿಡದೆ ಖಾತೆ ಬದಲಿಸಿಕೊಂಡ ಸಚಿವರು

    7 ಜನರ ಖಾತೆ ಬದಲಾವಣೆ – ಹಠ ಬಿಡದೆ ಖಾತೆ ಬದಲಿಸಿಕೊಂಡ ಸಚಿವರು

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಲೆನೋವಾಗಿ ಪರಿಣಮಿಸಿತ್ತು. ಕಸರತ್ತು ಮಾಡಿ ಹಂಚಿಕೆಯನ್ನು ಸಹ ಮಾಡಿದ್ದರು. ಆದರೆ ಬಳಿಕ ಕೆಲ ಸಚಿವರು ಅಸಮಾಧಾನ ಹೊರ ಹಾಕಿ ಸಚಿವ ಸಂಪುಟ ಸಭೆಯನ್ನೇ ಬಹಿಷ್ಕರಿಸಿದ್ದರು. ಹೀಗಾಗಿ ಇದೀಗ 7 ಜನರ ಖಾತೆ ಬದಲಾವಣೆ ಮಾಡಲಾಗಿದೆ.

    ಪರಿಷ್ಕೃತ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ. ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣದ ಜೊತೆ ಹಜ್ ಮತ್ತು ವಕ್ಫ್ ನೀಡಲಾಗಿದೆ. ಅರವಿಂದ ಲಿಂಬಾವಳಿಯವರಿಗೆ ಅರಣ್ಯ ಖಾತೆ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಂಟಿಬಿ ನಾಗರಾಜ್ ಅವರಿಗೆ ಪೌರಾಡಳಿತ, ಸಕ್ಕರೆ, ಆರ್.ಶಂಕರ್‍ಗೆ ತೋಟಗಾರಿಕೆ, ರೇಷ್ಮೆ, ಗೋಪಾಲಯ್ಯನವರಿಗೆ ಅಬಕಾರಿ ಹಾಗೂ ನಾರಾಯಣಗೌಡ ಅವರಿಗೆ ಯುವಜನ ಸೇವೆ ಮತ್ತು ಕ್ರೀಡೆ, ಯೋಜನೆ ಮತ್ತು ಸಾಂಖಿಕ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ.

    ಸಚಿವರ ಒತ್ತಡಕ್ಕೆ ಮಣಿದು ಸಿಎಂ ಯಡಿಯೂರಪ್ಪ ಮತ್ತೆ ಖಾತೆ ಬದಲಾವಣೆ ಮಾಡಿದ್ದಾರೆ. ಆದರೆ ಡಾ.ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಸಿಕ್ಕೇ ಇಲ್ಲ. ಅರವಿಂದ ಲಿಂಬಾವಳಿಯವರಿಗೆ ಸಹ ಪರಿಸರ ಸಿಗಲಿಲ್ಲ. ಅಲ್ಲದೆ ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣವನ್ನೇ ಉಳಿಸಲಾಗಿದೆ.

    ಹಿಂದೆ ಯಾವ ಖಾತೆ ನೀಡಲಾಗಿತ್ತು?
    ಬಸವರಾಜ ಬೊಮ್ಮಾಯಿಯವರಿಗೆ ಗೃಹ ಜೊತೆಗೆ ಕಾನೂನು ಸಂಸದೀಯ, ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಮುರುಗೇಶ ನಿರಾಣಿಗೆ ಗಣಿಗಾರಿಕೆ, ಉಮೇಶ್ ಕತ್ತಿಗೆ ಆಹಾರ ಖಾತೆ, ಡಾ.ಕೆ ಸುಧಾಕರ್‍ಗೆ ಆರೋಗ್ಯ ಇಲಾಖೆ, ಎಂಟಿಬಿ ನಾಗರಾಜ್‍ಗೆ ಅಬಕಾರಿ, ಗೋಪಾಲಯ್ಯಗೆ ತೋಟಗಾರಿಕೆ ಮತ್ತು ಸಕ್ಕರೆ, ನಾರಾಯಣ ಗೌಡಗೆ ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್, ಸಿ.ಪಿ.ಯೋಗೇಶ್ವರ್‍ಗೆ ಸಣ್ಣ ನೀರಾವರಿ, ಅರವಿಂದ ಲಿಂಬಾವಳಿಗೆ ಅರಣ್ಯ, ಆನಂದ್ ಸಿಂಗ್‍ಗೆ ಪ್ರವಾಸೋದ್ಯಮ, ಪರಿಸರ, ಸಿ.ಸಿ.ಪಾಟೀಲ್‍ಗೆ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ, ಕೋಟ ಶ್ರೀನಿವಾಸ ಪೂಜಾರಿಗೆ ಮುಜರಾಯಿ ಜೊತೆಗೆ ಹಿಂದುಳಿದ ವರ್ಗ, ಎಸ್.ಅಂಗಾರಗೆ ಮೀನುಗಾರಿಕೆ, ಬಂದರು, ಆರ್.ಶಂಕರ್‍ಗೆ ಪೌರಾಡಳಿತ, ರೇಷ್ಮೆ, ಪ್ರಭು ಚೌಹಾಣ್‍ಗೆ ಪಶುಸಂಗೋಪನೆ ಖಾತೆಯನ್ನು ನೀಡಲಾಗಿತ್ತು.

  • ಸಿಎಂ ಬಿಎಸ್‌ವೈ ಪರ ಶಾಸಕ ಕುಮಾರಸ್ವಾಮಿ ಬ್ಯಾಟಿಂಗ್‌

    ಸಿಎಂ ಬಿಎಸ್‌ವೈ ಪರ ಶಾಸಕ ಕುಮಾರಸ್ವಾಮಿ ಬ್ಯಾಟಿಂಗ್‌

    ಚಿಕ್ಕಮಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ಹೋರಾಟ, ಹುದ್ದೆ, ವಯಸ್ಸು, ನಡೆದು ಬಂದ ದಾರಿಗೆ ಬೆಲೆ ಕೊಡಬೇಕು ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ. ಪಿ.ಕುಮಾರಸ್ವಾಮಿ ಬಿಎಸ್‌ವೈ ಪರ ಬ್ಯಾಟ್ ಬೀಸಿದ್ದಾರೆ.

    ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಸಾಮಾಜಿಕ ನ್ಯಾಯ ಕಡಿಮೆಯಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಸರಿಪಡಿಸಿದರೆ ಪಕ್ಷ ಸೇರಿದಂತೆ ಎಲ್ಲರಿಗೂ ಒಳ್ಳೆಯದು. ಸರಿಪಡಿಸುವಂತೆ ಅವರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

    ಬಹಳ ಜನ ಮಂತ್ರಿ ಆಗಿಲ್ಲ. ಅವಕಾಶ ಸಿಕ್ಕಿಲ್ಲ. ಆ ನೋವು ಎಲ್ಲರಿಗೂ ಇದೆ. ಹಾಗಂತ ಖಾಸಗಿ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಾಯಕರ ಬಗ್ಗೆ ಮಾತನಾಡಿದರೆ ಪಕ್ಷದ ಬಗ್ಗೆ ಮಾತನಾಡಿದಂತೆ ಅದು ಕಾರ್ಯಕರ್ತರಿಂದ ಹಿಡಿದು ಶಾಸಕರು, ಸಂಸದರು, ಮಂತ್ರಿಗಳು ಎಲ್ಲರಿಗೂ ಡ್ಯಾಮೇಜ್ ಆಗುತ್ತೆ ಅದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.

    ನಮ್ಮ ಪಕ್ಷದ ನಾಯಕರೇ ಸಿಡಿ ಬಗ್ಗೆ ಮಾತನಾಡುತ್ತಿದ್ದಾರೆ. ನಾಯಕರು ಸಿಡಿ ವಿಚಾರ ಮಾತನಾಡುವುದನ್ನ ಕೂಡಲೇ ನಿಲ್ಲಿಸಬೇಕು. ಖಾಸಗಿ ವಿಚಾರದಲ್ಲಿ ಹಿರಿಯ ನಾಯಕರು ಸಿಡಿ ಅದು-ಇದು ಅಂತ ಮಾತನಾಡುತ್ತಾರೆ ಕೂಡಲೇ ಅದನ್ನ ನಿಲ್ಲಿಸಬೇಕು. ಈ ರೀತಿ ಖಾಸಗಿ ವಿಚಾರದಲ್ಲಿ ರಾಜಕೀಯ ಮಾಡುವುದು ಯಾರಿಗೂ ಸರಿಯಲ್ಲ. ಪಕ್ಷದ ವರಿಷ್ಠರು ಅದಕ್ಕೆ ನಿರ್ಬಂಧ ಹೇರಬೇಕು ಎಂದಿದ್ದಾರೆ.

    ಶಾಸಕ ಕುಮಾರಸ್ವಾಮಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಸರ್ಕಾರ ರಚನೆಯಾದಾಗಿನಿಂದ ಮೂರು ಬಾರಿಯೂ ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಸಚಿವ ಸ್ಥಾನ ಸಿಕ್ಕಿರಲಿಲ್ಲ. ಮೊದಲ ಬಾರಿ ಸಚಿವರ ಪ್ರಮಾಣ ವಚನಕ್ಕೂ ಗೈರಾಗಿದ್ದರು. ಮೂರನೇ ಬಾರಿಯೂ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಮಧ್ಯೆಯೂ ಸಿಎಂ ಪರ ಬ್ಯಾಟ್ ಬೀಸಿರೋದು ಕುತೂಹಲ ಮೂಡಿಸಿದೆ.