Tag: cabinate

  • 35 ನಿಮಿಷ ನಡ್ಡಾ ಜತೆ ಸಿಎಂ ಮಹತ್ವದ ಮಾತುಕತೆ

    35 ನಿಮಿಷ ನಡ್ಡಾ ಜತೆ ಸಿಎಂ ಮಹತ್ವದ ಮಾತುಕತೆ

    ಹುಬ್ಬಳ್ಳಿ: ನಾಯಕತ್ವದ ಬದಲಾವಣೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಭಯ ನೀಡಿದ್ದಾರೆ.

    ಖಾಸಗಿ ಹೋಟೆಲ್‍ನಲ್ಲಿ ಸಂಪುಟ ವಿಸ್ತರಣೆ ಬಗ್ಗೆ ನಡ್ಡಾ ಸಿಎಂ ಮಧ್ಯೆ ಸುಮಾರು 35 ನಿಮಿಷಗಳ ಕಾಲ ಮಹತ್ವದ ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳಂಕರಹಿತ, ಜನಪರ ಆಡಳಿತ ಕೊಡಿ. ನಾಯಕತ್ವದ ಬದಲಾವಣೆ ಬಗ್ಗೆ ಚಿಂತಿಸದಿರಿ. ಮುಂದಿನ ಚುನಾವಣೆಯಲ್ಲಿ ಪಕ್ಷ ನಿಚ್ಚಳ ಬಹುಮತದೊಂದಿಗೆ ಗೆದ್ದು ಅಧಿಕಾರಕ್ಕೆ ಬರುವುದರ ಬಗ್ಗೆ ನಿಮ್ಮ ಲಕ್ಷ್ಯ ಆಗಿರಲಿ ಎಂದು ಸಲಹೆ ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ದೆಹಲಿಗೆ ಹೋದ ಬಳಿಕ ಸಂಪುಟ ಪುನಾರಚನೆಗೆ ಮುಹೂರ್ತ ತಿಳಿಸುತ್ತೇನೆ. ಈ ಬಾರಿ ಎಲೆಕ್ಷನ್ ಕ್ಯಾಬಿನೆಟ್ ರಚನೆ ಆಗುತ್ತದೆ. ಸಂಪುಟ ಪುನಾರಚನೆ ಬಗ್ಗೆ ಈಗಾಗಲೇ ಹೈಕಮಾಂಡ್ ಒಲವು ತೋರಿದ್ದು, ಬಹುತೇಕ ಈ ತಿಂಗಳ ಅಂತ್ಯಕ್ಕೆ ಸಂಪುಟ ವಿಸ್ತರಣೆ ಮಾಡುವುದು ಎಂದು ಸುಳಿವು ನೀಡಿದ್ದಾರೆ. ಮಂಗಳೂರಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ – ಮೂವರು ಕಾರ್ಮಿಕರ ಸಾವು

    ನಾಯಕತ್ವ ವಿರುದ್ಧ ಮಾತಾಡುವವರಿಗೆ ಎಚ್ಚರಿಕೆ ನೀಡಿದ ಅವರು, ನಾಯಕತ್ವದ ವಿರುದ್ಧ ಗುಸುಗುಸು ಮಾತನಾಡುವವರ ಬಗ್ಗೆ ಮಾ ಹಿತಿ ಕೊಡಿ. ಅಂತಹವರನ್ನು ಈಗಲೇ ಮಟ್ಟ ಹಾಕಬೇಕು. ಚುನಾವಣಾ ವರ್ಷದಲ್ಲಿ ಈ ಬೆಳವಣಿಗೆ ಸರಿಯಲ್ಲ ಸೂಚಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್‌ ಆಡಿಯೋ

  • ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸೋಮಣ್ಣ

    ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸೋಮಣ್ಣ

    ಬೆಂಗಳೂರು: ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆಯ ನಿರ್ಧಾರ ಮಾಡಲಾಗಿದೆ. ಈ ರೀತಿಯ ಪ್ರಯೋಗಗಳು ಬೇರೆ ಬೇರೆ ಜಿಲ್ಲೆಯಲ್ಲೂ ನಡೆಯುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೇರೆ ಬೇರೆ ಜಿಲ್ಲೆಯಲ್ಲಿ ಈ ರೀತಿಯ ಪ್ರಯೋಗಗಳನ್ನು ಮಾಡಿದ್ದಾರೆ. ಅದರಂತೆ ನಮ್ಮಲ್ಲೂ ಮಾಡಿದ್ದಾರೆ. ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ

    Somanna

    ನಾನೂ ಬೆಂಗಳೂರು ಉಸ್ತುವಾರಿ ಕೇಳಿದ್ದೆ. ಆದರೆ ಅದನ್ನು ಬೇರೆ ಯಾರಿಗೂ ಕೊಟ್ಟಿಲ್ಲ. ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಟ್ಟುಕೊಂಡಿದ್ದಾರೆ. ಅವರ ಬಳಿ ಇರುವುದೇ ಸೂಕ್ತ ಎಂದ ಅವರು, ವರಿಷ್ಠರು ಹಾಗೂ ಹೈಕಮಾಂಡ್ ತೀರ್ಮಾನ ಮಾಡಿ ಉಸ್ತುವಾರಿ ಖಾತೆಯನ್ನು ಹಂಚಿಕೆ ಮಾಡಿದ್ದಾರೆ. ಯಾವ ಲೆಕ್ಕಾಚಾರದಲ್ಲಿ ಬೇರೆ ಬೇರೆ ಜಿಲ್ಲೆ ಹಂಚಿಕೆ ಮಾಡಲಾಗಿದೆ ಗೊತ್ತಿಲ್ಲ. ಆದರೆ ತವರು ಜಿಲ್ಲೆ ಸಿಕ್ಕಿಲ್ಲ ಅಂದ ಮೇಲೆ ಬೆಂಗಳೂರು ನಗರ ಉಸ್ತುವಾರಿ ಸಿಎಂ ಬಳಿ ಇರುವುದೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: 2-3 ವಾರಗಳಲ್ಲಿ 3ನೇ ಅಲೆ ಕಡಿಮೆಯಾಗುತ್ತೆ: ಸುಧಾಕರ್

  • ರಾಜಕಾರಣದಲ್ಲಿ ಹೊಗೆ ಆಡೋದಕ್ಕೆ, ಸುದ್ದಿ ಬರೋದಕ್ಕೆ ಕಾರಣ ಇರಬೇಕು ಅಂತಿಲ್ಲ: ಸಿ.ಟಿ.ರವಿ

    ರಾಜಕಾರಣದಲ್ಲಿ ಹೊಗೆ ಆಡೋದಕ್ಕೆ, ಸುದ್ದಿ ಬರೋದಕ್ಕೆ ಕಾರಣ ಇರಬೇಕು ಅಂತಿಲ್ಲ: ಸಿ.ಟಿ.ರವಿ

    ಪಣಜಿ: ರಾಜಕಾರಣದಲ್ಲಿ ಹೊಗೆ ಆಡೋದಕ್ಕೆ, ಸುದ್ದಿ ಬರೋದಕ್ಕೆ ಕಾರಣ ಇರಬೇಕು ಅಂತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.

    ಗೋವಾದ ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಆಗಾಗ ಸುದ್ದಿ ಬರುತ್ತವೆ. ಕೆಲವು ಬಾರಿ ಬೆಂಕಿ ಇಲ್ಲದೇ ಹೊಗೆ ಆಡುತ್ತದೆ. ಈ ಬಗ್ಗೆ ನನಗೇನು ಮಾಹಿತಿ ಇಲ್ಲ. ಈಗ ನಾವು ಗೋವಾದಲ್ಲಿ ಮತ್ತೆ ಸರ್ಕಾರ ಬರಬೇಕು ಎನ್ನುವ ಪ್ರಯತ್ನದಲ್ಲಿ ತೊಡಗಿದ್ದೇವೆ ಎಂದು ಹೇಳಿದರು.

    ನೀವು ಸಿಎಂ ಕೇಳಿದರೆ ಸಂಪುಟ ವಿಸ್ತರಣೆ ಬಗ್ಗೆ ಉತ್ತರ ಕೊಡಬಲ್ಲರು. ಸಂಪುಟ ವಿಸ್ತರಣೆ, ಪುನಾರಚನೆ ಅದು ಮುಖ್ಯಮಂತ್ರಿಗೆ ಸಂಬಂಧಿಸಿದ ಅಧಿಕಾರವಾಗಿದೆ. ಯಾರನ್ನು ಮಂತ್ರಿ ಮಾಡಬೇಕು, ಯಾರನ್ನು ಕೈ ಬಿಡಬೇಕು ಎನ್ನುವುದರ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ವರಿಷ್ಠರ ಜೊತೆ ಸಮಾಲೋಚಿಸಿ ನಿರ್ಣಯ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪಂಜಾಬ್‍ನಲ್ಲಿ AAP ಅಧಿಕಾರಕ್ಕೆ ಬಂದ್ರೆ ಜನರ ಸಲಹೆ ಮೇರೆಗೆ ಬಜೆಟ್: ಅರವಿಂದ್ ಕೇಜ್ರಿವಾಲ್

    ನಮಗೆ ರಾಜ್ಯದಲ್ಲಿ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಗಮನ ಇಲ್ಲ. ನಾವು ಸದ್ಯಕ್ಕೆ ಗೋವಾ ಚುನಾವಣೆಯಲ್ಲಿ ಮಗ್ನರಾಗಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಗೂ ಗೊತ್ತು. ನಮಗಂತೂ ಅದರ ಬಗ್ಗೆ ಮಾಹಿತಿ ಇಲ್ಲ ಎಂದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ