ಬೆಂಗಳೂರು: ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಗುರುವಾರ (ಜ.30) ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಬನಶಂಕರಿ 2ನೇ ಹಂತ ಬಡಾವಣೆಯಲ್ಲಿ ನಾಗರಿಕ ಸೌಲಭ್ಯ ನಿವೇಶನವನ್ನು (CA Site) ವಶಪಡಿಸಿಕೊಂಡಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಕತ್ರಿಗುಪ್ಪೆ ಗ್ರಾಮದ (ಬನಶಂಕರಿ 2ನೇ ಹಂತ) ಸರ್ವೆ ನಂ. 15/1ರಲ್ಲಿನ 18513 ಚದರ ಅಡಿಯ ಪ್ರದೇಶದಲ್ಲಿ ಅನಧಿಕೃವಾಗಿ ನಿರ್ಮಾಣವಾಗಿದ್ದ ಶೆಡ್, ಹಳೇ ಗುಜರಿ ವಾಹನಗಳನ್ನು ತೆರವುಗೊಳಿಸಿ, ಸುಮಾರು 35 ಕೋಟಿ ರೂ. ಮೌಲ್ಯದ ಸಿಎ ನಿವೇಶನಗಳನ್ನು ಪ್ರಾಧಿಕಾರವು ವಶಪಡಿಸಿಕೊಂಡಿದೆ. ಇದನ್ನೂ ಓದಿ: 1 ಲಕ್ಷ ಸಾಲಕ್ಕೆ ತಿಂಗಳಿಗೆ 30 ಸಾವಿರ ಬಡ್ಡಿ – ಹಣ ಕಟ್ಟಲಾಗದೇ ಫೈನಾನ್ಸರ್‌ನನ್ನೇ ಕಿಡ್ನ್ಯಾಪ್ ಮಾಡಿದ್ರು!
ಬೆಂಗಳೂರು: ಕಾಂಗ್ರೆಸ್ (Congress) ಅವರು ರಾಜ್ಯಪಾಲರಿಗೆ ಕೊಟ್ಟಿರುವ ದೂರನ್ನು ನಾನು ಸ್ವಾಗತ ಮಾಡುತ್ತೇನೆ. ನಾನು ಛಲವಾದಿ. ಯಾವುದಕ್ಕೂ ಹೆದರಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸವಾಲ್ ಹಾಕಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಸಿಎ ಸೈಟ್ ಅಕ್ರಮವಾಗಿ ಖರೀದಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ನನ್ನ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ಅವರು ದೂರು ಕೊಟ್ಟಿರೋದನ್ನು ನಾನು ಸ್ವಾಗತ ಮಾಡುತ್ತೇನೆ. 20 ವರ್ಷಗಳ ಹಿಂದಿನ ಪ್ರಕರಣ ಇದು. ಇದು ಪೊಲಿಟಿಕಲ್ ಗೇಮ್. ಇದಕ್ಕೆ ನಾನು ಹೆದರಲ್ಲ. ಕಾಂಗ್ರೆಸ್ ಅವರು ಬಹಳ ಕಷ್ಟ ಪಟ್ಟಿದ್ದಾರೆ. ನಾನು ಕೆಲಸ ಕೊಟ್ಟ ಮೇಲೆ ಅವರು ನನ್ನ ವಿರುದ್ಧ ಕೆಲಸ ಶುರು ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸಲು ಕೋರ್ಟ್‌ನಲ್ಲಿ ಹೋರಾಟ: ಜಿ.ಪರಮೇಶ್ವರ್
ಯಾರೋ ಒಬ್ಬರು ಟ್ರಸ್ಟ್ ಮಾಡಿ ನನ್ನನ್ನು ಟ್ರಸ್ಟ್ ಮೆಂಬರ್ ಮಾಡಿದ್ದರು. ನಾನು ಟ್ರಸ್ಟ್ ಬಿಟ್ಟು 10 ವರ್ಷ ಆಗಿತ್ತು. ಅದಕ್ಕೂ ನನಗೂ ಸಂಬಂಧವಿಲ್ಲ. ಯಾಕೆ ದೂರು ಕೊಟ್ಟರು ಅಂತ ನಾನು ಪ್ರಶ್ನೆ ಕೇಳಲ್ಲ. ಆದರೆ ನಮ್ಮ ಆರೋಪಕ್ಕೆ ಇದೇ ಕಾಂಗ್ರೆಸ್ ಉತ್ತರನಾ? ಮೊದಲು ನನ್ನ ಆರೋಪಕ್ಕೆ ಕಾಂಗ್ರೆಸ್ ನಾಯಕರು ಉತ್ತರ ಕೊಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಹಾವೇರಿ ವಿವಿಯ ಕುಲಸಚಿವರಾಗಿದ್ದ ದಿನೇಶ್ ಕುಮಾರ್ ನೇಮಕಾತಿ ರದ್ದು
ದೂರು ಕೊಟ್ಟ ಯಾರೂ ನನ್ನನ್ನು ಎಂಎಲ್‌ಸಿ ಮಾಡಿಲ್ಲ. ಬಿಜೆಪಿ (BJP) ನನ್ನನ್ನು ವಿಪಕ್ಷ ನಾಯಕ ಮಾಡಿದ್ದು. ನಾನು ತಪ್ಪು ಮಾಡಿದರೆ ಪಕ್ಷ ಕ್ರಮ ತೆಗೆದುಕೊಳ್ಳುತ್ತದೆ. ನಾನು ಛಲವಾದಿ. ನಾನು ಇರೋದು ಹೀಗೆ. ನಾನು ಯಾರನ್ನೂ ಸುಮ್ಮನೆ ಬಿಡಲ್ಲ. KIADB ಅವರು ಜಮೀನು ನೀಡಿದ್ದಾರೆ. ನಿಯಮದ ಪ್ರಕಾರವೇ ಎಲ್ಲವೂ ಆಗಿದೆ. ಕಾಂಗ್ರೆಸ್‌ನಲ್ಲಿ ಇದ್ದಾಗ ಆ ಸೈಟ್ ವಾಪಸ್ ಪಡೆದರು. ಕೋರ್ಟ್‌ಗೆ ಹೋಗಿ ನಾನು ಆ ಸೈಟ್ ಪಡೆದಿದ್ದೇನೆ ಎಂದು ವಿವರಣೆ ನೀಡಿದರು. ಇದನ್ನೂ ಓದಿ: ಬಂಗಾಳ ವಿಧಾನಸಭೆಯಲ್ಲಿ ಅತ್ಯಾಚಾರ ವಿರೋಧಿ ಮಸೂದೆ ಮಂಡನೆ
ಆದರ್ಶ ಸ್ಕೂಲ್ ಜಾಗಕ್ಕೆ ನಾನು ಮಾಲೀಕ ಅಲ್ಲ. ಅದೊಂದು ಟ್ರಸ್ಟ್. ಕಾಂಗ್ರೆಸ್ ಅವರು ಧಂ ಬಿರಿಯಾನಿ ಮಾಡಿಕೊಳ್ಳಲಿ ಏನಾದ್ರು ಮಾಡಿಕೊಳ್ಳಲಿ. ನಾನು ಆ ಟ್ರಸ್ಟ್ ಮೆಂಬರ್ ಆಗಿದ್ದೆ ಅಷ್ಟೆ. ಟ್ರಸ್ಟ್ ಜಾಗ ನನ್ನ ಹೆಸರಿಗೆ ಮಾಡಿಕೊಳ್ಳಲು ಆಗಲ್ಲ. 10 ವರ್ಷಗಳ ಹಿಂದೆಯೇ ನಾನು ಮೆಂಬರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆ ಟ್ರಸ್ಟ್ ಜಾಗ ನಾನು ಖರೀದಿ ಮಾಡಿಲ್ಲ. ಅದು ಟ್ರಸ್ಟ್ ಜಾಗ. ಅದನ್ನು ಖರೀದಿ ಮಾಡಲು ಆಗಲ್ಲ. ಪಾಪ ಕಾಂಗ್ರೆಸ್ ಅವರಿಗೆ ಇದೆಲ್ಲ ಏನು ಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಂಧ್ರ, ತೆಲಂಗಾಣದಲ್ಲಿ ಭಾರಿ ಮಳೆ ಪ್ರವಾಹ; 35 ಮಂದಿ ಸಾವು
ನಾನು ಎಲ್ಲೂ ಮಲ್ಲಿಕಾರ್ಜುನ ಖರ್ಗೆ ಹೆಸರು ಹೇಳೇ ಇಲ್ಲ. ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಅದಕ್ಕೆ ನಾವು ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದೆವು. ಖರ್ಗೆ ಮೇಲೆ ಸಂಪೂರ್ಣ ಗೌರವ ಇದೆ. ನಮ್ಮ ಸಮುದಾಯದ ದೊಡ್ಡ ನಾಯಕರು ಅವರು. ಸಮುದಾಯದ ವಿಷಯ ಬೇರೆ. ಪಕ್ಷದ ವಿಷಯ ಬೇರೆ. ಸರ್ಕಾರ ಮಾಡುವ ತಪ್ಪು ನಾನು ಹೇಳಬೇಕು. ದಾಖಲಾತಿ ಬಿಡುಗಡೆ ಮಾಡಿದ್ದೇನೆ. ನಾನು ಎರಡು ಕೇಸ್ ಹೇಳಿದ ಕೂಡಲೇ KIADB ಕಚೇರಿ ಬಾಗಿಲು ಹಾಕಿದ್ದಾರೆ. ಯಾವುದೇ ಡಾಕ್ಯುಮೆಂಟ್ ಪಡೆಯಲು ಬಿಡುತ್ತಿಲ್ಲ. ಅನುಮತಿ ಪಡೆದು ಒಳಗೆ ಹೋಗಬೇಕು ಎಂದು ಮಾಡಿದ್ದಾರೆ. ನಿಮ್ಮ ತಪ್ಪು ಇಲ್ಲ ಅಂದರೆ ಯಾಕೆ KIADB ಕ್ಲೋಸ್ ಮಾಡಿ ಕೆಲಸ ಮಾಡಿಸುತ್ತಿದ್ದೀರಾ. ನೀವು ಬಾಗಿಲು ಹಾಕಿದರೆ ನಮಗೆ ಡಾಕ್ಯುಮೆಂಟ್ ಸಿಗೋದಿಲ್ಲ. ನಿಯಮದ ಪ್ರಕಾರ 100 ಸೈಟ್ ಬೇಕಾದರೂ ಪಡೆಯಲಿ. ಆದರೆ ಇಲ್ಲಿ ನಿಯಮ ಉಲ್ಲಂಘನೆ ಆಗಿದೆ ಅಂತ ದೂರು ಕೊಟ್ಟಿದ್ದಾರೆ. ಅದನ್ನು ತನಿಖೆ ಮಾಡಿ ಅಂತ ನಾನು ಕೇಳಿದ್ದೇನೆ ಅಷ್ಟೆ. ಇದರಲ್ಲಿ ತಪ್ಪೇನಿದೆ. ಇದಕ್ಕೆ ನನ್ನ ಮೇಲೆ ದೂರು ಕೊಟ್ಟರೆ ಅದನ್ನು ನಾನು ಎದುರಿಸುತ್ತೇನೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಫಿಲಿಪೈನ್ಸ್‌ನಲ್ಲಿ ಭಾರೀ ಮಳೆಯಿಂದ ಭೂಕುಸಿತ – 14 ಮಂದಿ ದುರ್ಮರಣ
ಬೆಂಗಳೂರು: ವಿಪಕ್ಷ ನಾಯಕನಾಗಿ ನನ್ನ ಸ್ಥಾನದ ಗೌರವ ಉಳಿಸುವ ಕೆಲಸ ಮಾಡುತ್ತೇನೆ. ನೀವು ನಿಮ್ಮ ಸಚಿವ ಸ್ಥಾನಕ್ಕೆ ಅನುಗುಣವಾಗಿ ಮಾತನಾಡಬೇಕಿತ್ತು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಸಚಿವ ಎಂ.ಬಿ ಪಾಟೀಲರಿಗೆ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಯವ, ನನಗ್ಯಾರೂ ಕೇಳೋರಿಲ್ಲ ಅಂತ ಲಜ್ಜೆಗೆಟ್ಟವ ಎಂದಿದ್ದೀರಲ್ಲವೇ? ನೀವು ಹರಿಶ್ಚಂದ್ರರೇ? ಎಂದು ಎಂ.ಬಿ ಪಾಟೀಲ್ (MB Patil) ಅವರಿಗೆ ಪ್ರಶ್ನಿಸಿದರಲ್ಲದೇ, ಈ ಪ್ರಪಂಚದಲ್ಲಿ ಯಾರೂ ಹರಿಶ್ಚಂದ್ರರಲ್ಲ ಎಂದು ನುಡಿದರು. ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ – ಎಂ.ಬಿ ಪಾಟೀಲ್ ಲೇವಡಿ
302 ಡೆಫಾಡೆಲ್ ಅಪಾರ್ಟ್‍ಮೆಂಟ್ ಯಾರದ್ದು? ನಿಮ್ಮದೇ ಅಲ್ಲವೇ? ಎಂದು ಎಂ.ಬಿ.ಪಾಟೀಲರನ್ನು ಕೇಳಿದ ಅವರು, ನಿಮ್ಮದ್ದಕ್ಕೇ ನೀವು 2 ಸೈಟ್ ಬರೆದುಕೊಂಡಿದ್ದೀರಿ. ಇನ್ನು ಮೂರು ವಿಜಯಪುರದಲ್ಲಿ ಬರೆದುಕೊಂಡಿದ್ದೀರಿ. ಸೋಲಾಪುರ ರಸ್ತೆ, ಕೆಎಚ್‍ಬಿ ಕಾಲೊನಿಯಲ್ಲಿ ಅವು ಇವೆ. ಈಗ ಹೇಳಿ ಲೂಟಿ ಮಾಡುತ್ತಿರುವುದು ನಾನಾ ನೀವಾ? ಅಂತ ಪ್ರಶ್ನೆ ಮಾಡಿದರು.
ಪತ್ರಕರ್ತರನ್ನು ಕೂರಿಸಿ 2 ಗಂಟೆ ಅವರ ತಲೆ ತಿನ್ನಲು ನನ್ನ ಅಪರಾಧವಾದರೂ ಏನು? ನೀವು ನನ್ನ ಬಡತನವನ್ನು ಇಷ್ಟು ಹೀಯಾಳಿಸಿ ಬಿಟ್ಟಿರಲ್ಲವೇ? ಲಜ್ಜೆಗೆಟ್ಟ ವ್ಯಕ್ತಿ ಎಂದಿರಲ್ಲವೇ? ನಾನು ಯಾವುದರಲ್ಲಿ ಲಜ್ಜೆಗೆಟ್ಟವ? ಹೇಳಿ ಎಂದು ಮರುಪ್ರಶ್ನೆ ಮಾಡಿದರು.
ದುಡ್ಡು ಪೂರ್ತಿ ಕಟ್ಟಿದ್ದೇನೆ:
ನಾನು ಮಾಡಿದ ಲೋಪ ಏನು? ಅಪರಾಧವಾದರೂ ಏನು? ಹೇಳಿ ನೋಡೋಣ. ಸೇಲ್ ಡೀಡ್‍ಗೆ ಲೆಟರ್ (Sale Deed Letter) ಬರೆದಿದ್ದಾರೆ ಎಂದಿದ್ದೀರಿ. ಸೇಲ್ ಡೀಡ್‍ಗೆ ಅಲ್ಲದೇ ಇನ್ನೇನಕ್ಕೆ ಲೆಟರ್ ಕೊಡಬೇಕು? ಅದು ನನ್ನ ನಿವೇಶನ. ದುಡ್ಡು ಪೂರ್ತಿ ಕಟ್ಟಿದ್ದೇನೆ. ಶೆಡ್ ಗಿರಾಕಿ ಎಂದಿದ್ದೀರಲ್ಲವೇ? ಶೆಡ್ ಕಟ್ಟಿದೀನಿ. ನ್ಯಾಯವಾಗಿಯೇ ಕಟ್ಟಿದ್ದೇನೆ. ಸಾಕಾಗದಿದ್ದರೆ ನೋಟಿಸ್ ಕೊಡಿ. ಇದುವರೆಗೆ ಸಾಲಗಾರನಲ್ಲದ ನಾನು ಸಾಲ ಮಾಡಿಯಾದರೂ ನಿಮಗೆ ತೃಪ್ತಿ ಆಗುವಂತೆ ಶೆಡ್ ಕಟ್ಟಿಸುವೆ. ನನ್ನ ದುಡಿಮೆಯಲ್ಲಿ ಏನು ಸಾಧ್ಯವೋ ಅದನ್ನು ಮಾಡಿದ್ದೇನೆ. ಕಾನೂನು ಬಿಟ್ಟು ಆಚೆ ಈಚೆ ಹೋಗುವವನಲ್ಲ. ನಾನೇನಾದರೂ ನಿಮ್ಮ ಬಗ್ಗೆ ವಿಷಯ ಹೊರಗಡೆ ತಂದರೆ ನಿಮಗೆ ನಿದ್ದೆ ಬರೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ಖರ್ಗೆ ಕುಟುಂಬವನ್ನು ರಕ್ಷಣೆ ಮಾಡಿ. ನನಗೇನೂ ತೊಂದರೆ ಇಲ್ಲ. ಅಲ್ಲಿ ಆಗಿರುವುದೇನು ಎಂದು ನನಗೆ ಗೊತ್ತಿದೆ. ಈಗಾಗಲೇ ಅವರು ನಿದ್ದೆ ಬಿಟ್ಟಿದ್ದಾರೆ. ಅವರು ನಿಮ್ಮನ್ನು ಎತ್ತಿಕಟ್ಟಿ ನನ್ನ ಮೇಲೆ ಏನೋ ಮಾಡಿಸಲು ಹೊರಟಿದ್ದಾರೆ. ನಾನು ಯಾರಿಗೂ ಭಯ ಪಡಬೇಕಿಲ್ಲ, ನನ್ನನ್ನು ಏನೂ ಮಾಡಲಾಗೋದಿಲ್ಲ. ನೀವೇನೂ ಮಾಡಲಾಗುವುದಿಲ್ಲ ಎಂದು ತಿರುಗೇಟು ನೀಡಿದರು.
ನೀವು ಇನ್ನೂ ಒಂದು ವರ್ಷ ಹುಡುಕಿದರೂ ನನ್ನ ಒಂದೇ ಒಂದು ತಪ್ಪನ್ನು ತರಲಾಗದು. ಈ ಶೆಡ್ ಖರ್ಗೆ, ದೇಶಪಾಂಡೆಯವರಿಗೂ ಗೊತ್ತಿತ್ತು. ನಾನೇ ಹೇಳಿಕೊಂಡಿದ್ದೆ. ಕಾಂಗ್ರೆಸ್‌ನಲ್ಲಿರುವ ನನಗ್ಯಾಕೆ ಅನ್ಯಾಯ ಮಾಡುತ್ತೀರಿ ಎಂದಿದ್ದೆ. ಕಾಂಗ್ರೆಸ್ಸಿಗರಿಗೆ ನನ್ನ ಬಗ್ಗೆ ಮುಂದೆ ಪ್ರೀತಿ, ಹಿಂದಿನಿಂದ ದ್ವೇಷ ಇದ್ದುದು ಈಗ ಗೊತ್ತಾಗಿದೆ ಎಂದು ವಿಶ್ಲೇಷಿಸಿದರು.
ಸೈಟ್ ಪುಕ್ಕಟೆ ಕೊಟ್ಟದ್ದಲ್ಲ:
ಸಚಿವ ಎಂ.ಬಿ ಪಾಟೀಲ್ ಅವರು 2 ಗಂಟೆಗಳ ಕಾಲ ಪತ್ರಿಕಾಗೋಷ್ಠಿ ನಡೆಸಿ ನಾನು ಏನೋ ಮಾಡಬಾರದ ತಪ್ಪು ಮಾಡಿದ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು. ಕೆಐಎಡಿಬಿ ಸೈಟ್ ಮಾಡುವುದು ಯಾಕಾಗಿ? ಅದರಲ್ಲಿ ನಾನು 2006-07ರಲ್ಲಿ ಸೈಟ್ ಪಡೆದುದು ನಿಜ. ಅದೇನೂ ಪುಕ್ಕಟೆ ಕೊಟ್ಟಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.
ಎಲ್ಲರಂತೆ ನಾನು ವೇರ್‍ಹೌಸ್ ಇನ್ನೇನೋ ಉದ್ದೇಶದಿಂದ ನಿವೇಶನ ಪಡೆದಿದ್ದೇನೆ. ನಾವು ಬಡತನದಲ್ಲಿ ಬಂದವರು. ನಮ್ಮಲ್ಲಿ ಹಣ ಇರಲಿಲ್ಲ. ಅದಾದ ನಂತರ ಕಂತು ಕಟ್ಟಲು ಕಷ್ಟವಾದುದೂ ನಿಜ. ನಿಮ್ಮಲ್ಲಿ ನಾನು ಹಣ ಕೊಡಿ; ವಿನಾಯಿತಿ ಕೊಡಿ ಎಂದು ಕೇಳಿದ್ದೇನಾ? ಆದರೆ, ಕಾಂಗ್ರೆಸ್ ಕಾಲದಲ್ಲಿ ನನಗೆ ಅನ್ಯಾಯ ಆಗಿದೆ. ಆಗ ಅದನ್ನು ಕ್ಯಾನ್ಸಲ್ ಮಾಡಿದರು. ನಾನು ಆಗ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಜನರಲ್ ಸೆಕ್ರೆಟರಿ ಆಗಿದ್ದೆ. ಆದರೂ ನೀವು ನಿವೇಶನ ರದ್ದು ಮಾಡಿದ್ರಿ, ಯಾಕೆ ಮಾಡಿದ್ದೀರಿ ಅಂತ ಹೇಳಿ? ಅದಾದ ಬಳಿಕ ನಾನು ಕೋರ್ಟ್‌ಗೆ ಹೋದೆ. ಇವತ್ತು ಶೆಡ್ ಕಟ್ಟಿದ್ದೇನೆ ಎಂದು ಛಲವಾದಿ ವಿವರಿಸಿದರು.
ಬೆಂಗಳೂರು: ಖರ್ಗೆ ಅವರಷ್ಟೇ ಅಲ್ಲಾ ಕಳೆದ 10 ವರ್ಷದಲ್ಲಿ ಯಾರ‍್ಯಾರು ಸಿಎ ಸೈಟ್ ಪಡೆದಿದ್ದಾರೆ, ಎಲ್ಲಾ ತನಿಖೆ ಆಗಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ನೀಡಿರುವ ವಿಚಾರ ರಾಜ್ಯಪಾಲರ ಅಂಗಳದಿಂದ ಅದಕ್ಕೂ ಸೂಚನೆ ಬಂದರೆ ಮತ್ತೆ ಹೋರಾಟ ಮಾಡಲಾಗುವುದು. ಏನು ಮಾಡುವುದಕ್ಕೆ ಆಗುವುದಿಲ್ಲ. ಹೋರಾಟ ನಡೆಯುತ್ತದೆ. ಏನು ಬರುತ್ತದೆ, ಏನು ಕೊಟ್ಟಿದ್ದಾರೆ ನೋಡೋಣ. ಲೀಗಲ್ ಬ್ಯಾಟಲ್ ಅನಿವಾರ್ಯವಾದರೆ ಮಾಡಲೇಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ – ಎಂ.ಬಿ ಪಾಟೀಲ್ ಲೇವಡಿ
ಹಿಂದಿನ ಇತಿಹಾಸವನ್ನು ನೋಡಬೇಕಾಗುತ್ತದೆ. ಹಿಂದಿನ ಸರ್ಕಾರಗಳು ಬೆಂಗಳೂರು ಸುತ್ತಮುತ್ತ ಅವರ ಸಂಸ್ಥೆಗಳಿಗೆ ಜಮೀನು ನೀಡಿದ್ದಾರೆ. ರಾಜ್ಯಾದ್ಯಂತ ಜಮೀನು ನೀಡಿದ್ದಾರೆ. ಚರ್ಚೆ ಆಗೋದಾದ್ರೆ, ತನಿಖೆ ಆಗೋದಾದ್ರೆ ಎಲ್ಲರದ್ದೂ ಆಗಲಿ. ಕೇವಲ ಖರ್ಗೆಯವರ ವಿಚಾರ ಮಾತ್ರ ಯಾಕೆ ಚರ್ಚೆ? ಎಲ್ಲರದೂ ಚರ್ಚೆ ಆಗಲಿ. ಕಳೆದ ಹತ್ತು ವರ್ಷಗಳಲ್ಲಿ ಯಾರ‍್ಯಾರಿಗೆ ಸಿಎ ಸೈಟುಗಳನ್ನು ಕೊಟ್ಟಿದ್ದಾರೆ? ಎಲ್ಲವೂ ಚರ್ಚೆಯಾಗಲಿ. ಒಬ್ಬರಿಗೆ ಮಾತ್ರ ಮಹತ್ವ ಕೊಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಿ ಜಮೀನನ್ನ ಸಾವಿರಾರು ಎಕರೆ ಕೊಟ್ಟಿದ್ದಾರೆ ಇತಿಹಾಸದಲ್ಲಿ. ಹಿಂದಿನದ್ದು ಬಿಟ್ಟು ಬಿಡುವುದು, ಈಗಿನದ್ದು ಮಾತ್ರ ಚರ್ಚೆ ಮಾಡುವುದು ಸರಿಯಾಗುವುದಿಲ್ಲ. ಚರ್ಚೆ ಆಗೋದಾದರೆ ಎಲ್ಲವೂ ಚರ್ಚೆಯಾಗಲಿ. ಹತ್ತು ವರ್ಷಗಳಲ್ಲಿ ಹಲವಾರು ಮಂದಿ ಸೈಟುಗಳನ್ನು ಪಡೆದುಕೊಂಡಿದ್ದಾರೆ. ಅವರವರ ಸರ್ಕಾರ ಇದ್ದಾಗ ಅವರ ಕುಟುಂಬಸ್ಥರೇ ಹಲವಾರು ಮಂದಿ ಪಡೆದುಕೊಂಡಿದ್ದಾರೆ. ಆ ಬಗ್ಗೆಯೂ ತನಿಖೆಯಾಗಲಿ, ಚರ್ಚೆಯಾಗಲಿ. ಎಲ್ಲ ಪಕ್ಷದ ಎಲ್ಲ ರಾಜಕಾರಣಿಗಳು ತೆಗೆದುಕೊಂಡಿದ್ದಾರೆ. ಯಾರಿಗೆ ಸೈಟ್ ನೀಡಬೇಕು ಎಂಬುದು, ಹಂಚಿಕೆ ಮಾಡುವ ಅಧಿಕಾರ ಸಂಬಂಧಪಟ್ಟ ಅಥಾರಿಟಿಯದ್ದು. ಮೂಡಾ ಆದ್ರೆ ಮೂಡಾ, ಬಿಡಿಎ ಆದ್ರೆ ಬಿಡಿಎ. ಸ್ಥಳೀಯ ಸಂಸ್ಥೆಯವರಿಗೆ ಅಧಿಕಾರ ಇರುತ್ತೆ, ಅಧಿಕಾರ ಚಲಾಯಿಸಿರಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ವಕ್ಫ್ ಬೋರ್ಡ್ ವಿರೋಧ – ಖಂಡನಾ ನಿರ್ಣಯ ಅಂಗೀಕರಿಸುವಂತೆ ಸಿಎಂಗೆ ಮನವಿ
ರಾಜ್ಯಪಾಲರ ಬಳಿಗೆ ಖರ್ಗೆ ವಿಚಾರ ಹೋಗಿದೆ. ರಾಜ್ಯಪಾಲರು ಏನ್ ಮಾಡ್ತಾರೆ ಕಾದು ನೋಡೋಣ. ಗವರ್ನರ್ ಏನು ಆದೇಶ ಕೊಡ್ತಾರೆ ನಂತರ ನಿರ್ಧಾರ ಮಾಡೋಣ. ವಿಶೇಷ ಅಧಿವೇಶನ ಕರೆಯೋ ಅವಶ್ಯಕತೆ ಏನಿದೆ? ಮೊನ್ನೆ ಅಧಿವೇಶನ ಕರೆದಾಗ ಬರಿ ಗದ್ದಲ ಗದ್ದಲಾಗಿ ಕೊನೆಗೊಂಡಿತು. ರಾಜ್ಯಪಾಲರನ್ನು ವಾಪಸ್ ಕಳಿಸಿ ಎಂಬ ಯಾವ ಉದ್ದೇಶ ಸರ್ಕಾರಕ್ಕೆ ಇಲ್ಲ. ಡಿಸೆಂಬರ್‌ನಲ್ಲಿ ಅಧಿವೇಶನ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ವೈಯಕ್ತಿಕವಾಗಿ ನಾಯಕರು ಹೈಕಮಾಂಡ್ ಅನ್ನು ಭೇಟಿಯಾಗಿರಬಹುದು. ಸಿಎಂ ಹುದ್ದೆ ಕೇಳೋದಕ್ಕೆ ಅಂತ ಹೇಗೆ ಹೇಳ್ತೀರಾ? ಬೇರೆ ಬೇರೆ ಸಣ್ಣ ಪುಟ್ಟ ಕೆಲಸ ಇರುತ್ತದೆ. ಸಿಎಂ ಹುದ್ದೆಯನ್ನೇ ಕೇಳುತ್ತಾರೆ ಎಂದು ಹೇಗೆ ಹೇಳೋದು? ಹೈಕಮಾಂಡ್ ಸಿದ್ದರಾಮಯ್ಯ ಬೆನ್ನಿಗೆ ಗಟ್ಟಿಯಾಗಿ ನಿಂತಿದೆ. ಎಫ್‌ಐಆರ್ ಆಗುವಂತಹ ಪರಿಸ್ಥಿತಿ ಬರುವುದಿಲ್ಲ ಎಂಬ ವಿಶ್ವಾಸವಿದೆ ಎಂದಿದ್ದಾರೆ.
– ಚಾಣಕ್ಯ ವಿವಿಗೆ 50 ಕೋಟಿಗೆ ಜಮೀನು ನೀಡಿ, 137 ಕೋಟಿ ರೂ. ನಷ್ಟ ಆಗಿದೆ
– ಕೆಐಎಡಿಬಿ ನಷ್ಟದ ಬಗ್ಗೆ ರಾಜ್ಯಪಾಲರಿಗೆ ದೂರು ಏಕಿಲ್ಲ? ಅಂತ ಪ್ರಶ್ನೆ
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆ ಸಿ.ಎ. ನಿವೇಶನ ಕೊಟ್ಟಿದ್ದಕ್ಕೆ ಎಗರಾಡುತ್ತಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸತ್ಯ ಹರಿಶ್ಚಂದ್ರರೇನಲ್ಲ. 2006ರಲ್ಲಿ ಮೈಸೂರಿನ ಹೆಬ್ಬಾಳದಲ್ಲಿ 2 ಎಕರೆ ಜಾಗ ಪಡೆದುಕೊಂಡಿರುವ ಅವರು 18 ವರ್ಷಗಳಾದರೂ ಅಲ್ಲಿ ಏನೂ ಮಾಡದೇ ಕಾಟಾಚಾರಕ್ಕೆ ಒಂದು ಶೆಡ್ ಹಾಕಿಕೊಂಡು ಕೂತಿರುವ ಆಸಾಮಿ. ಅವರೊಬ್ಬ ಶೆಡ್ ಗಿರಾಕಿಯೇ ವಿನಾ ರಾಹುಲ್ ಖರ್ಗೆ ಅವರಂತೆ ಉದ್ಯಮಶೀಲರಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಆಕ್ರೋಶ ವ್ಯಕ್ತಪಡಿಸಿದರು.
ಚಾಣಕ್ಯ ವಿವಿ ಗೂ ಜಮೀನು ನೀಡಿಲ್ಲವೇ?
* ಚಾಣಕ್ಯ ಯೂನಿವರ್ಸಿಟಿಯ ವಿಚಾರಕ್ಕೆ ಬರೋಣ. ಬಿಜೆಪಿ ಸರಕಾರದಲ್ಲಂತೂ ತರಾತುರಿಯಲ್ಲಿ, ದೇವನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಇದಕ್ಕೆಂದು 116 ಎಕರೆ ಜಮೀನನ್ನು ಕೊಡಲಾಯಿತು. ಇದರ ಮಾರುಕಟ್ಟೆ ಬೆಲೆ 187 ಕೋಟಿ ರೂ. ಇತ್ತು. ಆದರೆ ಬಿಜೆಪಿ ಸರಕಾರ ಇದಕ್ಕೆ ಕೇವಲ 50 ಕೋಟಿ ರೂ. ನಿಗದಿಪಡಿಸಿತು. ಅಂದರೆ,… pic.twitter.com/fK8DxSY4Ue
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ 2 ಗಂಟೆ ಕಾಲ ದಾಖಲೆ ಸಮೇತ ಮಾತನಾಡಿದ ಅವರು, `ರಾಹುಲ್ ಖರ್ಗೆ (Rahul Kharge) ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿದ್ದಾರೆ. ಎಂಜಿನಿಯರಿಂಗ್ ಪದವೀಧರರು, ಡಿಆರ್‌ಡಿಓ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇಂಥ ಅರ್ಹರಿಗೆ ಸಿ.ಎ. ನಿವೇಶನ ಕೊಡದೇ ಬಿಜೆಪಿಯವರಂತೆ ನಿಯಮಗಳನ್ನು ಗಾಳಿಗೆ ತೂರಿ ಯಾರಿಗೆ ಬೇಕೋ ಅವರಿಗೆ ಕೊಡಬೇಕಾಗಿತ್ತೇನು? ನಾರಾಯಣಸ್ವಾಮಿ ಈಗ ತಮಗೆ ಮಂಜೂರಾಗಿರುವ ಕೈಗಾರಿಕಾ ನಿವೇಶನದ ಸಮರ್ಪಕ ಬಳಕೆಗೆ ಮತ್ತೊಮ್ಮೆ 6 ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ. ಇಲ್ಲೂ ಅವರು ವಿಫಲರಾದರೆ, ನಿಯಮಗಳ ಪ್ರಕಾರ ಆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುರುಗೇಶ ನಿರಾಣಿ
* ಬಿಜೆಪಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರು 2008ರಲ್ಲಿ ಬಂದ ಮೊದಲ ಅವಧಿಯ ಬಿಜೆಪಿ ಸರಕಾರದಲ್ಲಿ ಸ್ವತಃ ಕೈಗಾರಿಕಾ ಸಚಿವರಾಗಿದ್ದರು. ಅವರ ಸಾಹಸವೇನೆಂದರೆ, ಬಾಗಲಕೋಟೆ ನವನಗರದ ಕೈಗಾರಿಕಾ ಪ್ರದೇಶದ, ಅದರಲ್ಲೂ ಅಗ್ರಿಟೆಕ್ ಪಾರ್ಕ್ನ 25 ಎಕರೆ ಜಮೀನನನ್ನು ತಾವೇ ಹಂಚ್ಚಿಕೊಂಡು (12-3-2012), ಅಲ್ಲಿ ತೇಜಸ್ ಇಂಟರ್ ನ್ಯಾಷನಲ್… pic.twitter.com/oDVtsErGsU
ದಲಿತರಾದ ನಾರಾಯಣಸ್ವಾಮಿ ಸ್ವತಃ ತಮ್ಮ ಸಮುದಾಯದ ಹಿರಿಯರೂ ಮುತ್ಸದ್ದಿಗಳೂ ಆದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಇದು ಬಿಜೆಪಿಯ ಕುತಂತ್ರ. ದಲಿತರು ಪರಸ್ಪರ ಹೊಡೆದಾಡುತ್ತಿದ್ದರೆ ಅವರಿಗೆ ಲಾಭವಿದೆ. ತಮಗೆ ನೀಡಿರುವ ಕೈಗಾರಿಕಾ ನಿವೇಶನದಲ್ಲಿ ನಾರಾಯಣಸ್ವಾಮಿ ಇಷ್ಟು ಹೊತ್ತಿಗೆ ಶೇ.51ರಷ್ಟು ಭೂಮಿಯ ಬಳಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಅವರು ಕೇವಲ ಶೇ.5ರಷ್ಟು ಭೂಮಿಯಲ್ಲಿ ಕಾಟಾಚಾರಕ್ಕೆ ಶೆಡ್ ಹಾಕಿ, `ಬಾಡಿಗೆಗೆ ಇದೆ’ ಎಂದು ಬೋರ್ಡ್ ನೇತು ಹಾಕಿದ್ದಾರೆ. ಇಂಥ ಲಜ್ಜೆಗೆಟ್ಟ ವ್ಯಕ್ತಿ ದೇಶದ ನೇತಾರರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾತನಾಡುವ ದುಸ್ಸಾಹಸ ಮಾಡುತ್ತಿದ್ದಾರೆ ಎಂದು ಅವರು ಹರಿಹಾಯ್ದರು.
ರಾಹುಲ್ ಖರ್ಗೆ ಅವರಿಗೆ ಸಿ.ಎ ನಿವೇಶನ ಹಂಚಿಕೆಯಲ್ಲಿನ ಪಾರದರ್ಶಕತೆಯೂ ಮತ್ತು ಬಿಜೆಪಿಗರ ಕಾಲದಲ್ಲಿ ನಡೆದ ಅಕ್ರಮಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಣೆ
* ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಸಕ್ರಿಯರಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ದೇವನಹಳ್ಳಿ ಸಮೀಪದ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆಯಷ್ಟು… pic.twitter.com/2Xt79DpA9h
ನಾರಾಯಣಸ್ವಾಮಿ 2006ರಲ್ಲಿ `ಬೃಂದಾವನ್ ಸಾಫ್ಟ್ವೇರ್’ (Brindavan Software) ಎನ್ನುವ ಕಂಪನಿ ಶುರು ಮಾಡುವುದಾಗಿ ಭೂಮಿ ಪಡೆದುಕೊಂಡರು. ಆ ಮೇಲೆ ಅಲ್ಲಿ ಅದೇ ಹೆಸರಿನ ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸುತ್ತೇನೆ ಎಂದರು. ಬಳಿಕ ಗೋದಾಮು ಮಾಡುತ್ತೇನೆಂದರು. ಅವರು ಕಾಲಕಾಲಕ್ಕೆ ಬೇರೆಬೇರೆ ಉದ್ದೇಶಕ್ಕೆ ಬದಲಿಸಿಕೊಂಡರೇ ವಿನಾ ಏನನ್ನೂ ದಡ ಮುಟ್ಟಿಸಲಿಲ್ಲ. ಇದಾದ ಮೇಲೆ ಸರ್ಕಾರವು ನಿಯಮದಂತೆ 2016ರ ನ.11ರಂದು ಜಮೀನನ್ನು ವಾಪಸ್ ಪಡೆಯಲು ಆದೇಶಿಸಿತು. ಇದರ ವಿರುದ್ಧ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದ ಈ ವ್ಯಕ್ತಿ ಈಗ ಪುಕ್ಕಟೆ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಅವರು ಕಿಡಿ ಕಾರಿದರು.
ನಾರಾಯಣಸ್ವಾಮಿ ರಾಜಕೀಯದಲ್ಲಿ ಮೇಲಕ್ಕೆ ಬರಲು ಖರ್ಗೆಯವರೇ ಕಾರಣ. ಅವರು ರೈಲ್ವೇ ಸಚಿವರಾಗಿದ್ದಾಗ ಈ ವ್ಯಕ್ತಿಯನ್ನು ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ರೈಲ್ವೆ ಭವನದಲ್ಲಿ ಕಚೇರಿ ಕೂಡ ಕೊಟ್ಟಿದ್ದರು. ಆದರೂ ನಾರಾಯಣಸ್ವಾಮಿ ಉಂಡ ಮನೆಗೆ ಎರಡು ಬಗೆಯುತ್ತಿದ್ದಾರೆ. ಹೀಗೆ ಮಾತನಾಡಿದರೆ ಬಿಜೆಪಿಯಲ್ಲಿ ಇನ್ನೂ ಮೇಲೇರಬಹುದು ಎನ್ನುವ ಭ್ರಮೆಯಲ್ಲಿ ಅವರಿರಬಹುದು ಎಂದು ಪಾಟೀಲ್ ಕುಟುಕಿದರು.
ಇವರು ಹೇಳುವ ಹಾಗೆ ಈ ನಿವೇಶಕ್ಕೆ 72 ಅರ್ಜಿ ಬಂದಿರಲಿಲ್ಲ. ಬಂದಿದ್ದು ಕೇವಲ 6 ಅರ್ಜಿ. ಅದರಲ್ಲಿ ಮೂರು ವಸತಿ ಉದ್ದೇಶದ್ದು. ಅಲ್ಲಿ ಈಗಾಗಲೇ ಅಂತಹ ಉದ್ದೇಶಕ್ಕೆ ಕೊಟ್ಟಿದ್ದರಿಂದ ಅವುಗಳನ್ನು ತಿರಸ್ಕರಿಸಲಾಗಿದೆ. ಉಳಿದಂತೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಅರ್ಜಿ ಬಂದಿದ್ದರೂ ಸಮಪರ್ಕ ದಾಖಲೆ ಸಲ್ಲಿಸಿರಲಿಲ್ಲ. ಇನ್ನು ಉಳಿದಿದ್ದು ರಾಹುಲ್ ಮಾತ್ರ. ಇವರು ಎಲ್ಲ ರೀತಿಯಲ್ಲೂ ಸಮರ್ಥರಿದ್ದು, ಸಾಮಾನ್ಯ ವರ್ಗದ ಕೋಟಾದಲ್ಲೂ ಅವರು ಅರ್ಹರಾಗಿದ್ದರು ಎಂದು ತಿರುಗೇಟು ನೀಡಿದರು.
ಆರ್‌ಎಸ್‌ಎಸ್ (RSS) ಅಂಗವಾಗಿರುವ ರಾಷ್ಟ್ರೋತ್ಥಾನ ಪರಿಷತ್ತಿಗೆ ಹೈಟೆಕ್ ಡಿಫೆನ್ಸ್ ಪಾರ್ಕಿನಲ್ಲಿ ವಿವಿಧೋದ್ದೇಶ ವಾಣಿಜ್ಯ ಸಂಕೀರ್ಣಕ್ಕೆಂದು 2013ರಲ್ಲಿ 5 ಎಕರೆ ಕೊಡಲಾಗಿದೆ. ಇದುವರೆಗೂ ಅವರು ಅಲ್ಲಿ ಏನೂ ಮಾಡಿಲ್ಲ. ಕೋವಿಡ್ ನೆಪ ಹೇಳಿಕೊಂಡು ಮತ್ತೆ ಮತ್ತೆ ಕಾಲಾವಕಾಶ ಕೇಳಿಕೊಂಡು ಬಂದಿದ್ದಾರೆ. ಇತ್ತೀಚೆಗೆ 2023ರ ಡಿ.26ರಂದು ಪುನಃ ಎರಡು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ. ಈ ಜಮೀನನ್ನು ವಾಪಸ್ ಪಡೆಯಬೇಕೋ ಬೇಡವೋ ಅನ್ನೋದನ್ನ ಲೆಹರ್ ಸಿಂಗ್ ಮತ್ತು ನಾರಾಯಣಸ್ವಾಮಿ ಹೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುರುಗೇಶ ನಿರಾಣಿ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಬಾಗಲಕೋಟೆಯ ನವನಗರ ಕೈಗಾರಿಕಾ ಪ್ರದೇಶದಲ್ಲಿ 2012ರ ಮಾರ್ಚ್ 12ರಂದು ತಮಗೆ ತಾವೇ 25 ಎಕರೆ ಕೊಟ್ಟುಕೊಂಡು, ಅಲ್ಲಿ ತೇಜಸ್ ಇಂಟರ್ನ್ಯಾಷನಲ್ ಸ್ಕೂಲ್ ಕಟ್ಟಿದ್ದಾರೆ. ಅದು ಆಗ್ರೋ ಟೆಕ್ ಪಾರ್ಕ್‌ಗೆ ಮೀಸಲಾಗಿದ್ದ ಜಾಗ. ಆಮೇಲೆ ಪುನಃ ಕೈಗಾರಿಕಾ ಸಚಿವರಾದಾಗ ಕೂಡ 2022ರ ಡಿ.19ರಂದು ಅಲ್ಲೇ ಮತ್ತೆ 6.17 ಎಕರೆ ತೆಗೆದುಕೊಂಡು, ತಮಗೆ ತಾವೇ ಅಭಿನಂದನಾ ಪತ್ರ ಬರೆದುಕೊಂಡಿದ್ದಾರೆ. ಇಂಟರ್ನೆಟ್ ಜಾಲಾಡಿದರೇ ಇವರೆಲ್ಲರ ಜಾತಕ ಬಯಲಾಗುತ್ತದೆ ಎಂದು ಅವರು ಅಂಕಿ-ಅಂಶಗಳ ಸಹಿತ ವಿವರಿಸಿದರು.
ಚಾಣಕ್ಯ ವಿಶ್ವವಿದ್ಯಾಲಯದ್ದು (Chanakya University) ಇದೇ ಕತೆಯಾಗಿದೆ. 2025ರ ಜೂನ್ ಒಳಗೆ ಅವರು 116 ಎಕರೆಯಲ್ಲಿ ಕನಿಷ್ಠ ಶೇ.51ರಷ್ಟು ಜಾಗವನ್ನು ಬಳಕೆ ಮಾಡದಿದ್ದರೆ ಉಳಿದ ಜಾಗವನ್ನು ವಾಪಸ್ ತೆಗೆದುಕೊಳ್ಳಲಾಗುವುದು. ಚಾಣಕ್ಯ ವಿವಿಗೂ ಕೇವಲ 50 ಕೋಟಿ ರೂ.ಗೆ ಈ ಜಮೀನು ನೀಡಲಾಯಿತು. ಇದರ ಮಾರುಕಟ್ಟೆ ಬೆಲೆ 187 ಕೋಟಿ ರೂ. ಇತ್ತು. ಆದರೆ ಬಿಜೆಪಿ ಸರಕಾರ ಇದಕ್ಕೆ ಕೇವಲ 50 ಕೋಟಿ ರೂ. ನಿಗದಿಪಡಿಸಿತು. ಇದರಿಂದ ಕೆಐಎಡಿಬಿಗೆ 137 ಕೋಟಿ ರೂ. ನಷ್ಟ ಆಗಿದೆ. ಇದರ ವಿರುದ್ಧ ಏಕೆ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿಲ್ಲ? ಎಂದು ಸಚಿವರು ಪ್ರಶ್ನಿಸಿದರು.