Tag: C. Puttarangashetty

  • ಜೂನ್ ಒಳಗೆ ಸಚಿವ ಸ್ಥಾನ ಕೊಡ್ತೀನಯ್ಯ ಅಂತ ಸಿಎಂ ಹೇಳಿದ್ದಾರೆ: ಶಾಸಕ ಪುಟ್ಟರಂಗಶೆಟ್ಟಿ

    ಜೂನ್ ಒಳಗೆ ಸಚಿವ ಸ್ಥಾನ ಕೊಡ್ತೀನಯ್ಯ ಅಂತ ಸಿಎಂ ಹೇಳಿದ್ದಾರೆ: ಶಾಸಕ ಪುಟ್ಟರಂಗಶೆಟ್ಟಿ

    ಚಾಮರಾಜನಗರ: ಜೂನ್ ಒಳಗೆ ನನಗೆ ಮಂತ್ರಿ ಸ್ಥಾನ ಕೊಡ್ತೀನಿ ಅಂತ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ (Puttarangashetty) ಮಾತಾನಾಡಿದ್ದಾರೆ.

    ಜೂನ್‌‌ಗೆ ನಿನಗೆ ಮಂತ್ರಿ ಸ್ಥಾನ ಕೊಡ್ತೀನಯ್ಯ ಅಂತ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟವಾಗಿ ಹೇಳಿದ್ದಾರೆ. ನನಗೆ ಮಂತ್ರಿ ಸ್ಥಾನ ಕೊಡೋದು ಬಿಡೋದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಬಿಟ್ಟ ವಿಚಾರವಾಗಿದೆ. ನನಗೆ ಉಪಸಭಾಪತಿ ಸ್ಥಾನ ಕೊಟ್ಟಿದ್ದರು. ಅದರೆ ನಾನೇ ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಧ್ಯಕ್ಷ ಸ್ಥಾನವೇನು ಕೋಳಿ ಮೊಟ್ಟೆನಾ.. ಒಡೆದು ಆಮ್ಲೆಟ್ ಮಾಡೋಕೆ: ಸಿಎಂ ಇಬ್ರಾಹಿಂ

    ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗೆ, ಉಪಮುಖ್ಯಮಂತ್ರಿಗೆ ಹಾಗೂ ಹೈಕಮಾಂಡ್‌ಗೆ ಗೊತ್ತಿದೆ. ಸಚಿವ ಸ್ಥಾನ ಕೊಡೋದು ಬಿಡೋದು ಅವರಿಗೆ ಸೇರಿದ್ದು. ಬಲವಂತ ಮಾಡಲು ನಾನ್ಯಾರು ಎಂದು ಹೇಳಿದ್ದಾರೆ.

    ಸಿದ್ದರಾಮಯ್ಯ, ಡಿಕೆಶಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಒಗ್ಗಟ್ಟಾಗಿಯೇ ಹೋಗುತ್ತಿದ್ದಾರೆ. ಎಲ್ಲ ಕಾರ್ಯಕ್ರಮಗಳಲ್ಲಿ ಒಟ್ಟಾಗಿಯೇ ಭಾಗವಹಿಸುತ್ತಿದ್ದಾರೆ. ಭಿನ್ನಾಭಿಪ್ರಾಯ ಎಂಬುದು ವಿರೋಧ ಪಕ್ಷಗಳ ಆರೋಪವಷ್ಟೇ ಎಂದಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಾಮರಾಜನಗರದಲ್ಲಿ ಹೈವೋಲ್ಟೇಜ್‌ ಫೈಟ್‌ – ಅಖಾಡದಲ್ಲಿ ಸಚಿವ ಸೋಮಣ್ಣ vs ಸಿದ್ದು ಶಿಷ್ಯ; ಯಾರಾಗ್ತಾರೆ ಪೈಲ್ವಾನ್?

    ಚಾಮರಾಜನಗರದಲ್ಲಿ ಹೈವೋಲ್ಟೇಜ್‌ ಫೈಟ್‌ – ಅಖಾಡದಲ್ಲಿ ಸಚಿವ ಸೋಮಣ್ಣ vs ಸಿದ್ದು ಶಿಷ್ಯ; ಯಾರಾಗ್ತಾರೆ ಪೈಲ್ವಾನ್?

    ಚಾಮರಾಜನಗರ: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ (Chamarajanagara) ಹೈವೋಲ್ಟೇಜ್ ಕ್ಷೇತ್ರವಾಗಿ ಕಾಣಿಸಿಕೊಂಡಿದೆ. ಬಿಜೆಪಿ (BJP) ಅಭ್ಯರ್ಥಿ ವಿ.ಸೋಮಣ್ಣ (Somanna) ವರುಣಾ, ಚಾಮರಾಜನಗರ ಎರಡು ಕಡೆಯೂ ಸ್ಪರ್ಧೆ ಮಾಡಿರುವುದರಿಂದ ರಣಕಣವಾಗಿ ಚಾಮರಾಜನಗರ ಕ್ಷೇತ್ರ ಬದಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್‌ನಿಂದ (Congress) ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯ ಪುಟ್ಟರಂಗಶೆಟ್ಟಿ (Puttarangashetty) ಅಖಾಡದಲ್ಲಿದ್ದು, ಸತತ ನಾಲ್ಕನೇ ಬಾರಿಯೂ ಗೆಲುವಿನ ಪತಾಕೆ ಹಾರಿಸಲು ಕೆಲಸ ಮಾಡುತ್ತಿದ್ದಾರೆ.

    ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟಿ ಮತ್ತು ಬಿಜೆಪಿಯ ವಿ.ಸೋಮಣ್ಣ ನಡುವೆ ನೇರ ಹಣಾಹಣಿ ಇದ್ದು, ಇಬ್ಬರ ನಡುವೆ ಪ್ರಬಲ ಪೈಪೋಟಿ ಇದೆ. ವಿಜಯಮಾಲೆ ಯಾರಿಗೆ ಒಲಿದರೂ ಕೂಡ ಕಡಿಮೆ ಅಂತರದಲ್ಲಿ ಅನ್ನೋ ಚರ್ಚೆ ಜೋರಾಗಿದೆ. ಇದನ್ನೂ ಓದಿ: ಇದು ಮುಸ್ಲಿಂ ಲೀಗ್ ಪ್ರಣಾಳಿಕೆ – ವೇದಿಕೆಯಲ್ಲೇ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟ ಈಶ್ವರಪ್ಪ

    ಚಾಮರಾಜನಗರ ಕ್ಷೇತ್ರದಲ್ಲಿ ಗೆದ್ದವರ ವಿವರ:
    1952ರಲ್ಲಿ ಕಿಸಾನ್ ಮಜ್ದೂರ್ ಪಾರ್ಟಿಯಿಂದ ಯು.ಎಂ.ಮಾದಪ್ಪ, 1957 (ದ್ವಿಸದಸ್ಯ) ಪ್ರಜಾ ಸೋಷಿಯಲಿಸ್ಟ್ ಪಾರ್ಟಿ- ಯು.ಎಂ.ಮಾದಪ್ಪ ಹಾಗೂ ಕಾಂಗ್ರೆಸ್‌ ರಾಚಯ್ಯ. 1962- ಕಾಂಗ್ರೆಸ್‌ನಿಂದ ಎಂ.ಸಿ.ಬಸಪ್ಪ, 1967- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1972- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1978- ಜನತಾ ಪಕ್ಷದಿಂದ ಎಂ.ಸಿ.ಬಸಪ್ಪ, 1983- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1985- ಕಾಂಗ್ರೆಸ್‌ನಿಂದ ಎಸ್.ಪುಟ್ಟಸ್ವಾಮಿ, 1989- ವಾಟಾಳ್‌ ಪಕ್ಷದಿಂದ ವಾಟಾಳ್ ನಾಗರಾಜ್, 1994- ವಾಟಾಳ್ ನಾಗರಾಜ್, 1999- ಬಿಜೆಪಿಯಿಂದ ಸಿ.ಗುರುಸ್ವಾಮಿ, 2004- ವಾಟಾಳ್ ನಾಗರಾಜ್, 2008- ಕಾಂಗ್ರೆಸ್‌ನಿಂದ ಪುಟ್ಟರಂಗಶೆಟ್ಟಿ, 2013- ಪುಟ್ಟರಂಗಶೆಟ್ಟಿ, 2018- ಪುಟ್ಟರಂಗಶೆಟ್ಟಿ.

    ಕಳೆದ ಚುನಾವಣೆಯಲ್ಲಿ ಯಾರಿಗೆ ಎಷ್ಟು ಮತ?
    ಕಾಂಗ್ರೆಸ್ ಸಿ.ಪುಟ್ಟರಂಗಶೆಟ್ಟಿ: ಪಡೆದ ಮತ 75,963
    ಬಿಜೆಪಿ ಮಲ್ಲಿಕಾರ್ಜುನಪ್ಪ: ಪಡೆದ ಮತ 71,050

    ಜಾತಿ ಲೆಕ್ಕಾಚಾರ ಏನು?
    ಕ್ಷೇತ್ರದಲ್ಲಿ ಒಟ್ಟು 2,09,494 ಜನಸಂಖ್ಯೆ ಇದೆ. ಅವರ ಪೈಕಿ 1,02,588 ಪುರುಷರು ಹಾಗೂ 1,06,891 ಮಹಿಳೆಯರಿದ್ದಾರೆ.
    ವೀರಶೈವ- 49,000
    ದಲಿತ- 40,500
    ನಾಯಕ- 24,250
    ಉಪ್ಪಾರ- 28,350
    ಕುರುಬ- 18,000
    ಮುಸ್ಲಿಂ- 15,000
    ಕ್ರಿಶ್ಚಿಯನ್- 6,000
    ಇತರೆ- 25,000

    ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳು
    ಕಾಂಗ್ರೆಸ್- ಪುಟ್ಟರಂಗಶೆಟ್ಟಿ, ಬಿಜೆಪಿ- ವಿ.ಸೋಮಣ್ಣ, ಜೆಡಿಎಸ್- ಆಲೂರು ಮಲ್ಲು, ಬಿಎಸ್‌ಪಿ – ಹ.ರಾ.ಮಹೇಶ್, ಆಪ್- ಡಾ.ಗುರುಪ್ರಸಾದ್. ಇದನ್ನೂ ಓದಿ: ಬಜರಂಗದಳ ಅಲ್-ಖೈದಾ ಅಲ್ಲ: ಸಿದ್ದರಾಮಯ್ಯ ವಿರುದ್ಧ ಅಪ್ಪಚ್ಚು ರಂಜನ್ ಕಿಡಿ

    ಅಭ್ಯರ್ಥಿಗಳ ಪ್ಲಸ್‌, ಮೈನಸ್‌ ಏನು?
    ಪುಟ್ಟರಂಗಶೆಟ್ಟಿ: ಚುನಾವಣೆಯಲ್ಲಿ ಬಿಜೆಪಿ ಕೊಡುವ ಒಳೇಟಿನಿಂದಾಗಿ ಕಾಂಗ್ರೆಸ್‌ಗೆ ಹೆಚ್ಚು ವರವಾಗುತ್ತಿದೆ. ಈಗಾಗಲೇ ಹ್ಯಾಟ್ರಿಕ್ ಜಯಭೇರಿ ಗಳಿಸಿರುವ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ, ಕ್ಷೇತ್ರದಲ್ಲಿನ ಮತ ಬ್ಯಾಂಕ್ ಮೇಲೆ ಹಿಡಿತ ಹೊಂದಿದ್ದಾರೆ. ಉಪ್ಪಾರ ಸಮುದಾಯ, ದಲಿತ, ಅಲ್ಪಸಂಖ್ಯಾತ, ಮುಸ್ಲಿಂ, ಹಿಂದುಳಿದ ಮತ ಕಾಂಗ್ರೆಸ್ ಕೈ ಹಿಡಿದಿದ್ದು, ಈ ಬಾರಿಯೂ ಮತ ಸಿಗುವ ಭರವಸೆ ಇದೆ. ಮೈನಸ್‌ ಅಂಶ ಹೇಳುವುದಾದರೆ, ಮೂರು ಬಾರಿ ಆಯ್ಕೆಯಾದರೂ ಮೂಲ ಸೌಕರ್ಯ ಕೊರತೆ. ಅಭಿವೃದ್ಧಿ ದೃಷ್ಟಿಕೋನ ಇಲ್ಲದಿರುವ ಶಾಸಕ ಎಂಬ ಮೂದಲಿಕೆ. ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಎಂಬ ಅರೋಪವಿದೆ.

    ವಿ.ಸೋಮಣ್ಣ: ಬಿಜೆಪಿಯ ಲಿಂಗಾಯತ ಪ್ರಬಲ ನಾಯಕ ಸ್ಪರ್ಧೆ ಮಾಡಿರುವುದು. ಲಿಂಗಾಯತ ಸಮುದಾಯದ ಹಿರಿಯ ಮುಖಂಡ. ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿ ಮಾಡುವ ಭರವಸೆ. ಸಾವಿರಾರು ಕೋಟಿ ಅನುದಾನ ತರುವ ಚಾಕಚಕ್ಯತೆ. ಕ್ಷೇತ್ರದ ಎಲ್ಲಾ ಸಮುದಾಯದ ಮುಖಂಡರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಮೈನಸ್‌ ಪಾಯಿಂಟ್‌, ಹೊರಗಿನ ಅಭ್ಯರ್ಥಿ ಅರ್ಥಾತ್ ದೂರದ ಬೆಂಗಳೂರಿನಿಂದ ಬಂದಿದ್ದು, ಕೈಗೆ ಸಿಗಲಾರರು ಎಂಬ ಆರೋಪ. ಪಕ್ಷದ ಒಳಗಿನ ಗುದ್ದಾಟ, ಇಷ್ಟು ಚುನಾವಣೆಯಲ್ಲೂ ಒಳೇಟು ಕೊಡುತ್ತಿರುವುದು ಈ ಬಾರಿಯೂ ಮುಂದುವರೆಯುವ ಸಾಧ್ಯತೆ. ಬಿಎಸ್‌ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ವರುಣದಲ್ಲಿ ಹೆಚ್ಚು ಗಮನ ಕೊಟ್ಟು ಚಾಮರಾಜನಗರದತ್ತ ಕಡಿಮೆ ಸಮಯ ಕೊಟ್ಟಿದ್ದಾರೆ. ಇದನ್ನೂ ಓದಿ: ಯತ್ನಾಳ್‌, ಪ್ರಿಯಾಂಕ್‌ ಖರ್ಗೆಗೆ ಶೋಕಾಸ್‌ ನೋಟಿಸ್‌ ಜಾರಿ

    ಇಲ್ಲಿಯವರೆಗೂ ಕೂಡ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿದೆ. 9 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ. ಅಲ್ಲದೇ ಒಂದು ಬಾರಿಯಷ್ಟೇ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಅಂತರದ ಗೆಲುವು ಸಿಕ್ಕಿಲ್ಲ. ಇದನ್ನೇ ಸ್ಟ್ರಾಟಜಿ ಮಾಡಿಕೊಂಡಿರುವ ಬಿಜೆಪಿ ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯ ಪುಟ್ಟರಂಗಶೆಟ್ಟಿ ವಿರುದ್ಧ ಲಿಂಗಾಯತ ಸಮುದಾಯದ ಪ್ರಬಲ ನಾಯಕನನ್ನು ಅಖಾಡಕ್ಕಿಳಿಸಿದ್ದು, ಯಾರೂ ವಿಜಯಭೇರಿ ಬಾರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

  • ವರುಣಾ, ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ: ಪುಟ್ಟರಂಗಶೆಟ್ಟಿ

    ವರುಣಾ, ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ: ಪುಟ್ಟರಂಗಶೆಟ್ಟಿ

    ಚಾಮರಾಜನಗರ: ವರುಣಾ (Varuna) ಹಾಗೂ ಚಾಮರಾಜನಗರ (Chamarajanagar) ಎರಡೂ ಕಡೆ ನಾವೇ ಗೆಲ್ಲುತ್ತೇವೆ. ಅವರು ಏನೇ ತಂತ್ರಗಾರಿಕೆ ಮಾಡಿದರೂ ನಾವು ತಕ್ಕ ಉತ್ತರ ಕೊಡುತ್ತೇವೆ ಎಂದು ಚಾಮರಾಜನಗರ ಕಾಂಗ್ರೆಸ್ (Congress) ಅಭ್ಯರ್ಥಿ, ಶಾಸಕ ಪುಟ್ಟರಂಗಶೆಟ್ಟಿ (C.Puttarangashetty) ಹೇಳಿದ್ದಾರೆ.

    ನಾಮಪತ್ರ ಸಲ್ಲಿಕೆಗೂ ಮುನ್ನವೇ ಪುಟ್ಟರಂಗಶೆಟ್ಟಿ ಬಿರುಸಿನ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಸೋಮಣ್ಣನವರಿಗೆ (V.Somanna) ಬಿಜೆಪಿ (BJP) ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ಪುಲ್ ಆ್ಯಕ್ಟಿವ್ ಆಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಅಭಿವೃದ್ಧಿ, ಸೋಮಣ್ಣನವರದ್ದು ಬರೀ ಮಾತು. ಅವರು ಸುಳ್ಳು ಹೇಳಿಕೊಂಡು ರಾಜಕಾರಣ (Politics) ಮಾಡುತ್ತಾರೆ. ಸೋಮಣ್ಣ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ? ಯಾವ ಮುಖ ಇಟ್ಟುಕೊಂಡು ವೋಟ್ ಕೇಳುತ್ತಾರೆ? ಎಂದು ಟೀಕಿಸಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಬಿಜೆಪಿ ವಿಕೆಟ್ ಪತನ 

    ಚಾಮರಾಜನಗರ ಜಿಲ್ಲೆಯಲ್ಲಿ ಅತಿವೃಷ್ಟಿಯಾಯಿತು. ಉಸ್ತುವಾರಿ ಸಚಿವರಾಗಿ ಎಷ್ಟು ಅನುದಾನ ತಂದಿದ್ದಾರೆ ಎಂದು ಸೋಮಣ್ಣ ಹೇಳಲಿ ಎಂದು ಸವಾಲು ಹಾಕಿದರು. ಅಷ್ಟೇ ಅಲ್ಲದೇ ನಾಲ್ಕನೇ ಬಾರಿಯೂ ನಾನೇ ಆಯ್ಕೆಯಾಗುತ್ತೇನೆ. ಸರ್ಕಾರವೂ ನಮ್ಮದೇ ಬರುತ್ತದೆ. ಅದರಲ್ಲಿ ಎರಡನೇ ಮಾತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಡಿಕೆಶಿ ಆಥಿತ್ಯ ಸ್ವೀಕರಿಸ್ತೀವಿ, ಮಿಲ್ಟ್ರಿ ಹೋಟೆಲ್ ಊಟಾನೂ ಮಾಡ್ತೀವಿ – ಅಶ್ವಥ್‌ ನಾರಾಯಣ್‌

  • ಪಬ್ಲಿಕ್ ಚಾಲೆಂಜ್ ಸ್ವೀಕರಿಸಿದ ಶಾಸಕ – 8 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    ಪಬ್ಲಿಕ್ ಚಾಲೆಂಜ್ ಸ್ವೀಕರಿಸಿದ ಶಾಸಕ – 8 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    ಚಾಮರಾಜನಗರ: ಲಾಕ್‍ಡೌನ್ ಸಂದರ್ಭದಲ್ಲಿ ಅನೇಕರು ಬಡವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ ಗಡಿ ಜಿಲ್ಲೆ ಚಾಮರಾಜನಗರ ಕ್ಷೇತ್ರದ ಶಾಸಕ, ಮಾಜಿ ಸಚಿವ ಪಬ್ಲಿಕ್ ಟಿವಿ ಚಾಲೆಂಜ್ ಸ್ವೀಕಾರ ಮಾಡಿದ್ದಾರೆ. ಈ ಮೂಲಕ ಲಾಕ್‍ಡೌನ್ ನಡುವೆ ಕ್ಷೇತ್ರದ ಜನತೆಗೆ ಸಹಾಯ ಹಸ್ತ ಚಾಚುವ ಕೆಲಸಕ್ಕೆ ಮುಂದಾಗಿದ್ದಾರೆ.

    ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಬಡವರು, ನಿರ್ಗತಿಕರಿಗೆ ಆಹಾರ ಸಮಸ್ಯೆ ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ಆಹಾರದ ಕಿಟ್ ವಿತರಿಸಿದ್ದಾರೆ. ಸುಮಾರು ಎಂಟು ಸಾವಿರ ಬಡ ಕುಟುಂಬಗಳಿಗೆ ವೈಯಕ್ತಿಕವಾಗಿ ಆಹಾರ ಧಾನ್ಯ ವಿತರಿಸಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಬಡವರಿಗೆ ಅಕ್ಕಿ ವಿತರಿಸುತ್ತಿದೆ. ಆದರೆ ಉಳಿದ ಪದಾರ್ಥಗಳಿಗೆ ಜನರು ಪರದಾಡುವಂತಾಗಿದೆ. ಇದನ್ನು ಮನಗಂಡ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಕ್ಕಿ, ಬೇಳೆ, ಅವರೆಕಾಳು, ಹುರುಳಿ ಕಾಳು, ಹಲಸಂದೆ, ಅಡುಗೆ ಎಣ್ಣೆ, ಸಕ್ಕರೆ, ಟೀ ಪುಡಿ, ಉಪ್ಪು ಸೇರಿದಂತೆ ಅತ್ಯಗತ್ಯ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಿ ಬಡವರಿಗೆ ಹಂಚುತ್ತಿದ್ದಾರೆ.

    ಒಂದೂವರೆ ಸಾವಿರಕ್ಕೂ ಹೆಚ್ಚು ಬುಡಕಟ್ಟು ಸೋಲಿಗರು ಸೇರಿದಂತೆ ಎಂಟು ಸಾವಿರ ಬಡ ಕೂಲಿಕಾರ್ಮಿಕ ಕುಟುಂಬಗಳಿಗೆ ಅವರು ಆಹಾರ ಧಾನ್ಯ ವಿತರಿಸಿದ್ದಾರೆ. ನನಗೆ ಪ್ರಚಾರ ಬೇಡ, ಕ್ಷೇತ್ರದ ಜನರ ಹಿತ ಕಾಯವುದು ನನ್ನ ಧರ್ಮ. ಜನರ ಕಷ್ಟಸುಖಗಳಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

  • ನೀವು ಹೀಗೆ ಮಾಡೋದ್ರಿಂದ ಜನ ನಮಗೆ ಬೈತಾರೆ: ಅಧಿಕಾರಿಗಳಿಗೆ ಪುಟ್ಟರಂಗಶೆಟ್ಟಿ ಕ್ಲಾಸ್

    ನೀವು ಹೀಗೆ ಮಾಡೋದ್ರಿಂದ ಜನ ನಮಗೆ ಬೈತಾರೆ: ಅಧಿಕಾರಿಗಳಿಗೆ ಪುಟ್ಟರಂಗಶೆಟ್ಟಿ ಕ್ಲಾಸ್

    ಚಾಮರಾಜನಗರ: ಹಾಸ್ಟೆಲ್‍ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಅಧಿಕಾರಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಚಳಿ ಬಿಡಿಸಿದ್ದಾರೆ.

    ನಗರದ ಪಾಲಿಟೆಕ್ನಿಕ್ ಕಾಲೇಜು ಹಾಸ್ಟೆಲ್‍ಗೆ ಸಚಿವ ಪುಟ್ಟರಂಗಶೆಟ್ಟಿ ಇಂದು ದಿಢೀರನೆ ಭೇಟಿ ನೀಡಿದ್ದಾರೆ. ಅಲ್ಲಿನ ಅವ್ಯವಸ್ಥೆ ಕಣ್ಣಾರೆ ಕಂಡ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸುವಂತೆ ಸೂಚನೆ ನೀಡಿದರು.

    ಅಧಿಕಾರಿಗಳ ಸಭೆಗೆ ಹಾಜರಾಗುತ್ತಿದ್ದಂತೆ ಒಬ್ಬೊರನ್ನೇ ಕರೆದು ಫುಲ್ ಕ್ಲಾಸ್ ತೆಗೆದುಕೊಂಡರು. ಹಾಸ್ಟೆಲ್‍ಗಳನ್ನು ಸರಿಯಾಗಿ ಯಾಕೆ ನಿರ್ವಹಿಸುತ್ತಿಲ್ಲ? ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಬಂದಿರುತ್ತಿದೆ ಅಲ್ಲವೇ? ನೀವು ಹೀಗೆ ಮಾಡುವುದರಿಂದ ಜನ ನಮಗೆ ಬೈತಾರೆ. ನಿಮ್ಮ ಒಳ ಜಗಳದಿಂದ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಕೂಡಲೇ ಸಮಸ್ಯೆಗಳನ್ನು ಸರಿಪಡಿಸಿ ಹಾಸ್ಟೆಲ್‍ಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಿಮಗೆ ಕೆಲಸ ನಿರ್ವಹಿಸಲು ಅಸಾಧ್ಯ ಎನ್ನುವುದಾದರೆ ನನಗೆ ಹೇಳಿ. ನಾವೇ ಜವಾಬ್ದಾರಿ ಹೊತ್ತುಕೊಳ್ಳುತ್ತೇವೆ. ಒಂದು ವೇಳೆ ಈ ಸಮಸ್ಯೆ ಹೀಗೆ ಮುಂದುವರಿದರೆ ನಿಮ್ಮ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

    ವಿವಿಧ ಹಾಸ್ಟೆಲ್‍ಗಳ ವಾರ್ಡನ್ ಗಳನ್ನು ಒಬ್ಬೊರನ್ನಾಗಿ ಕರೆದು ವಿಚಾರಿಸಿ ಕುಂದುಕೊರತೆ ಆಲಿಸಿದರು. ಇದೇ ವೇಳೆ ಅಧಿಕಾರಿಯೊಬ್ಬರಿಗೆ ತರಾಟೆ ತೆಗೆದುಕೊಂಡ ಸಚಿವರು, ನಿಮ್ಮಲ್ಲಿ ಇಂದಿಗೂ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡಿಲ್ಲ. ನೈಜ ಸಮಸ್ಯೆ ಏನು ಅಂತಾ ಪ್ರಶ್ನಿಸಿದರು. ಇದರಿಂದ ಎಚ್ಚೆತ್ತುಕೊಂಡ ಮಹಿಳೆ ಅಧಿಕಾರಿ, ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭಿಸುವುದಾಗಿ ತಿಳಿಸಿದರು. ಇದಕ್ಕೆ ಗುಡುಗಿದ ಪುಟ್ಟರಂಗಣಶೆಟ್ಟಿ ಅವರು, ಇನ್ನುಮುಂದೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿಡಿಯೋ: ಚಪ್ಪಲಿ ಹಾಕೋದ್ದಕ್ಕೂ ಪಿಎ ಇಟ್ಟುಕೊಂಡ ಸಚಿವ ಸಿ.ಪುಟ್ಟರಂಗಶೆಟ್ಟಿ!

    ವಿಡಿಯೋ: ಚಪ್ಪಲಿ ಹಾಕೋದ್ದಕ್ಕೂ ಪಿಎ ಇಟ್ಟುಕೊಂಡ ಸಚಿವ ಸಿ.ಪುಟ್ಟರಂಗಶೆಟ್ಟಿ!

    ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ತುಂಬಾ ಸರಳ ವ್ಯಕ್ತಿ ಎಂದೇ ಹೆಸರಾದವರು. ಆದರೆ ಯಾಕೋ ಸಚಿವರಾದ ನಂತರ ಅಧಿಕಾರದ ಮದದಿಂದ ವರ್ತಿಸುತ್ತಿದ್ದಾರಾ ಎನ್ನುವ ಅನುಮಾನ ಎದ್ದಿದೆ.

    ಇಂದು ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಸಿ. ಪುಟ್ಟರಂಗಶೆಟ್ಟಿಗೆ ಅವರು ತಮ್ಮ ಚಪ್ಪಲಿಯನ್ನು ಬಿಟ್ಟು ಎತ್ತಿನಗಾಡಿ ಏರಿದ್ದರು. ಎತ್ತಿನಗಾಡಿಯನ್ನು ಚಾಲನೆ ಮಾಡಿದ ನಂತರ ಅವರು ಕೆಳೆಗಿಳಿದು ನಡೆದು ಬರುತ್ತಿದ್ದಂತೆ ಅವರ ಆಪ್ತ ಸಹಾಯಕ ಪುಟ್ಟರಂಗಶೆಟ್ಟಿಗೆ ಚಪ್ಪಲಿ ತಂದು ತೊಡಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಸಚಿವ ಸಿ. ಪುಟ್ಟರಂಗಶೆಟ್ಟಿ ಸೌಜನ್ಯಕ್ಕಾದರೂ ಚಪ್ಪಲಿ ತೊಡಿಸುವ ತಮ್ಮ ಆಪ್ತ ಸಹಾಯಕನಿಗೆ ಬೇಡ ಎನ್ನದೇ ಸರ್ವಾಧಿಕಾರಿಯಂತೆ ಚಪ್ಪಲಿ ತೊಡಿಸಿಕೊಂಡು ಏನೂ ಆಗಿಲ್ಲವಂತೆ ನಡೆದು ಮುಂದೆ ಸಾಗಿದ್ದಾರೆ.

    ಈ ದೃಶ್ಯವನ್ನು ನೋಡಿದ ಜನ ಶಾಸಕರಾಗಿದ್ದಾಗ ತುಂಬ ಸರಳವಾಗಿದ್ದ ಪುಟ್ಟರಂಗ ಶೆಟ್ಟಿ ಇದೀಗ ಸಚಿವರಾದ ಬಳಿಕ ಅಲ್ಪನಿಗೆ ಐಶ್ವರ್ಯ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=lPjIVJAvrF8&feature=youtu.be