Tag: C Patil

  • ನನಗೆ ಸಚಿವ ಸ್ಥಾನ ಕೊಟ್ರು, ಕೊಡದೇ ಇದ್ದರು, ಕಾಂಗ್ರೆಸ್ಸಿನಲ್ಲೇ ಇರ್ತಿನಿ: ಬಿ.ಸಿ ಪಾಟೀಲ್

    ನನಗೆ ಸಚಿವ ಸ್ಥಾನ ಕೊಟ್ರು, ಕೊಡದೇ ಇದ್ದರು, ಕಾಂಗ್ರೆಸ್ಸಿನಲ್ಲೇ ಇರ್ತಿನಿ: ಬಿ.ಸಿ ಪಾಟೀಲ್

    ಬೆಂಗಳೂರು: ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಅಂತ ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ.

    ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನವೆಂಬರ್ 15 ನಂತರ ಉಪ ಚುನಾವಣೆ ಆದ ಮೇಲೆ ಸಂಪುಟ ವಿಸ್ತರಣೆ ಮಾಡುವುದಾಗಿ ವರಿಷ್ಠರು ಹೇಳಿದ್ದಾರೆ. ನನಗೆ ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಟ್ವಿಟ್ಟರ್ ನಲ್ಲಿ ನನ್ನ ಮನಸಿನ ಭಾವನೆಗಳನ್ನು ವ್ಯಕ್ತಪಡಿಸಿದ್ದೆ ಅಷ್ಟೇ. ನನಗೆ ಸಚಿವ ಸ್ಥಾನ ಕೊಟ್ಟರೂ ಕೊಡದೇ ಇದ್ದರು ಕಾಂಗ್ರೆಸ್ಸಿನಲ್ಲೇ ಇರುತ್ತೇನೆ. ನಾನು ಪಕ್ಷ ಬಿಟ್ಟು ಎಲ್ಲು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಸಚಿವ ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ದೊಡ್ಡವರ ವಿಚಾರವಾಗಿದೆ. ಇದರ ಬಗ್ಗೆ ನಾನು ಮಾತನಾಡುವಷ್ಟು ದೊಡ್ಡವನಲ್ಲ. ಗುರುವಾರ ಬೆಳಗ್ಗೆ ಕ್ಷೇತ್ರದ ಬಗ್ಗೆ ಮಾತನಾಡಲು ಅವರನ್ನು ಭೇಟಿ ಮಾಡಿ ಮಾತನಾಡಿದ್ದೆ. ಆದರೆ ಸಂಜೆ ಅವರು ರಾಜೀನಾಮೆ ನೀಡಿದ್ದಾರೆ. ಅದನ್ನ ಕೇಳಿ ನನಗೆ ಶಾಕ್ ಆಯಿತು. ಅದು ಅವರ ಪಕ್ಷದ ವಿಚಾರ, ದೊಡ್ಡವರು ಕುಳಿತು ಅದನ್ನ ಮಾತಾಡುತ್ತಾರೆ ಅಂತ ಹೇಳಿದರು.

    ವಿಧಾನಸೌಧಕ್ಕೆ ಮಾಧ್ಯಮ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಧಾನ ಸೌಧದಲ್ಲಿ ಮೀಡಿಯಾ ಟಾರ್ಗೆಟ್ ವಿಷಯ ನನಗೆ ಗೊತ್ತಿಲ್ಲ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಅವರನ್ನು ಕೇಳಬೇಕು. ಆದರೂ ಮಾಧ್ಯಮ ಪ್ರಭುತ್ವದ ನಾಲ್ಕನೇ ಅಂಗವಾಗಿದೆ. ಮಾಧ್ಯಮವನ್ನು ಬಿಟ್ಟು ನಾವು ಇರುವುದಕ್ಕೆ ಸಾಧ್ಯವಿಲ್ಲ, ನಮ್ಮನ್ನ ಬಿಟ್ಟು ನೀವು ಇರಲು ಸಾಧ್ಯವಿಲ್ಲ. ಹಾಗಾಗಿ ಮಾಧ್ಯಮಗಳ ನಿರ್ಬಂಧ ಮಾಡಬಾರದು ಎಂದು ಶಾಸಕ ಬಿಸಿ ಪಾಟೀಲ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv