Tag: C.P.Yogeeshwara

  • ಯೋಗೇಶ್ವರ್‌ಗೆ ಬಂಡಾಯ ಸ್ಪರ್ಧೆಯೇ ಗಟ್ಟಿ; ಕಾಂಗ್ರೆಸ್ ಸೇರ್ಪಡೆ ಹಾದಿ ಮತ್ತಷ್ಟು ಕಠಿಣ

    ಯೋಗೇಶ್ವರ್‌ಗೆ ಬಂಡಾಯ ಸ್ಪರ್ಧೆಯೇ ಗಟ್ಟಿ; ಕಾಂಗ್ರೆಸ್ ಸೇರ್ಪಡೆ ಹಾದಿ ಮತ್ತಷ್ಟು ಕಠಿಣ

    – ಡಿಕೆಶಿ ಮುನಿಸೇ ಸೈನಿಕನಿಗೆ ಮುಳ್ಳಾಗುತ್ತಾ?

    ರಾಮನಗರ: ಚನ್ನಪಟ್ಟಣ ಟಿಕೆಟ್ ಗೊಂದಲ ಸದ್ಯಕ್ಕೆ ಬಗೆಹರಿಯುವುದು ಅನುಮಾನ. ‘ದೋಸ್ತಿ’ ಪಾಳಯದಲ್ಲಿನ ರಾಜಕೀಯ ಚಟುವಟಿಕೆ ಗಮನಿಸಿದರೆ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ (C.P.Yogeshwar) ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಗಟ್ಟಿಯಾಗಿದೆ. ಡಿ.ಕೆ.ಶಿವಕುಮಾರ್ ಜೊತೆಗಿನ ಮುನಿಸಿನಿಂದ ಕಾಂಗ್ರೆಸ್ ಸೇರ್ಪಡೆ ಹಾದಿ ಮತ್ತಷ್ಟು ಕಠಿಣವಾದಂತೆ ಭಾಸವಾಗುತ್ತಿದೆ.

    ಮುಹೂರ್ತಕ್ಕೂ ಮುನ್ನ ಚನ್ನಪಟ್ಟಣ (Channapatna) ಉಪಚುನಾವಣಾ ಕಣ ರಂಗೇರಿದ್ದು, ದೋಸ್ತಿ ಪಾಳಯದಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಒಂದು ಕಡೆ ಹೆಚ್.ಡಿ.ಕುಮಾರಸ್ವಾಮಿ ವರ್ಸಸ್ ಸಿ.ಪಿ.ಯೋಗೇಶ್ವರ್ ಮಧ್ಯೆ ಜಟಾಪಟಿ ನಡೆಯುತ್ತಿದೆ. ಇನ್ನೊಂದು ಕಡೆ ಬಿಜೆಪಿಯಲ್ಲಿ ಯೋಗೇಶ್ವರ್ ಪರ-ವಿರೋಧಿ ಬಣ ಸೃಷ್ಟಿಯಾಗಿದೆ. ಇತ್ತ ಬಿಜೆಪಿ ಹೈಕಮಾಂಡ್ ಅಂಗಳದಲ್ಲಿ ಟಿಕೆಟ್ ಇತ್ಯರ್ಥ ಪೆಂಡಿಂಗ್ ಉಳಿದಿದೆ. ಟಿಕೆಟ್ ಕಾದಾಟಕ್ಕೆ ದೋಸ್ತಿ ಪಾಳಯ 3 ದಿಕ್ಕು 3 ಬಾಗಿಲು ಎಂಬಂತಾಗಿದೆ.‌ ಇದನ್ನೂ ಓದಿ: ಚನ್ನಪಟ್ಟಣ ಕೈವಶಕ್ಕೆ ಡಿಸಿಎಂ ರಣತಂತ್ರ; ಒಂದೇ ವೇದಿಕೆಯಲ್ಲಿ ಡಿಕೆಶಿ-ಸಿಪಿವೈ ಸಮಾಗಮ

    ಹೆಚ್ಡಿಕೆ ವಿಶ್ವಾಸಗಳಿಸಿ ಟಿಕೆಟ್ ಪಡೆಯಲು ಯೋಗೇಶ್ವರ್ ವಿಫಲರಾದರಾ ಎಂಬ ಮಾತು ಕೇಳಿಬರುತ್ತಿದೆ. ವರಿಷ್ಠರ ಮಟ್ಟದಲ್ಲಿ ಟಿಕೆಟ್ ಗಿಟ್ಟಿಸಲು ಸಿಪಿವೈ ಸಮರ ಶುರು ಮಾಡಿದ್ದಾರೆ. ಟಿಕೆಟ್ ಸಿಗದಿದ್ದರೆ ಬಂಡಾಯ ಸ್ಪರ್ಧೆಗೂ ಸೈ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಎನ್‌ಡಿಎ ಅಭ್ಯರ್ಥಿ ಮಾಡಿ, ಇಲ್ಲ ಪಕ್ಷೇತರ ಅಭ್ಯರ್ಥಿಯಾಗ್ತೇನೆ ಎಂದಿದ್ದಾರೆ. ದೆಹಲಿಗೆ ಹೋಗಿ ಬಂದ ನಂತರ ನಿನ್ನೆ ಡಿಕೆಶಿ ಜತೆ ವೇದಿಕೆ ಹಂಚಿಕೊಂಡಿದ್ದರು. ಆ ಮೂಲಕ ಯಾವುದೇ ನಡೆಗೂ ರೆಡಿ ಎನ್ನುವ ಸಂದೇಶ ಕೊಟ್ಟಿದ್ದರು.

    ಚನ್ನಪಟ್ಟಣ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ನಡೆ ಕುತೂಹಲ ಮೂಡಿಸಿದೆ. ಮೈತ್ರಿ ಧರ್ಮ ಪಾಲನೆ ಮಾಡುತ್ತಾ ಎಂಬ ಪ್ರಶ್ನೆ ಮೂಡಿದೆ. ಬಿಜೆಪಿಯಲ್ಲಿ ಸಿಪಿವೈ ಪರ ಒಂದು ಬಣದಿಂದ ಟಿಕೆಟ್‌ಗೆ ಒತ್ತಾಯ ಕೇಳಿಬರುತ್ತಿದೆ. ಸಿಪಿವೈಗೆ ಟಿಕೆಟ್ ಕೊಡುವಂತೆ ಬಿಜೆಪಿ ಉಪಚುನಾವಣೆ ಸಮಿತಿ ಶಿಫಾರಸು ಮಾಡಿದೆ. ಬಿ.ವೈ ವಿಜಯೇಂದ್ರ ಮಾತ್ರ ಸಿಪಿವೈಗೆ ಟಿಕೆಟ್ ವಿಚಾರದಲ್ಲಿ ಮೌನವಹಿಸಿದ್ದಾರೆ. ಹೆಚ್ಡಿಕೆ ಕಾರಣಕ್ಕೆ ಟಿಕೆಟ್ ವಿಚಾರದಲ್ಲಿ ಮೌನವಾಗಿದ್ದಾರೆ. ಮೈತ್ರಿ ಪಾಲನೆ ಹಿನ್ನೆಲೆ ಹೈಕಮಾಂಡ್ ತೀರ್ಮಾನಿಸಲಿ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ: ಯೋಗೇಶ್ವರ್‌

    ಚನ್ನಪಟ್ಟಣ ಟಿಕೆಟ್ ಪಡೆಯಬೇಕು ಎಂದು ಜೆಡಿಎಸ್ ನಾಯಕರು ಹಠ ಹಿಡಿದಿದ್ದಾರೆ. ಮುಖಂಡರ ಮಾತು ಧಿಕ್ಕರಿಸಿ ಕೇಂದ್ರ ಸಚಿವ ಹೆಚ್‌ಡಿಕೆ ಮೈತ್ರಿ ಪಾಲನೆ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.

    ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಡಿಕೆ ಶಿವಕುಮಾರ್ ಮತ್ತು ಸಿಪಿ ಯೋಗೇಶ್ವರ್ ಅಕ್ಕಪಕ್ಕ ಕುಳಿತಿದ್ದರೂ ಪರಸ್ಪರರು ಮಾತನಾಡಲಿಲ್ಲ. ತಮ್ಮನ ಸೋಲನ್ನು ಡಿಕೆಶಿ ಇನ್ನೂ ಮರೆತಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಈ ಹಿನ್ನೆಲೆಯಲ್ಲಿ ಯೋಗೇಶ್ವರ್‌ಗೆ ಬಂಡಾಯ ಸ್ಪರ್ಧೆಯೇ ಗಟ್ಟಿ ಎಂಬಂತಾಗಿದೆ. ಕಾಂಗ್ರೆಸ್ ಸೇರ್ಪಡೆ ಹಾದಿ ಮತ್ತಷ್ಟು ಕಠಿಣವಾಗಿದೆ.

  • ಪುಂಡನ ಜೊತೆ ಸಿದ್ದು ಹಜ್ಜೆ, ಮೇಕೆದಾಟು ಪಾದಯಾತ್ರೆ ಅಲ್ಲ ಇದು ದಂಡಯಾತ್ರೆ: ಯೋಗೇಶ್ವರ್

    ಪುಂಡನ ಜೊತೆ ಸಿದ್ದು ಹಜ್ಜೆ, ಮೇಕೆದಾಟು ಪಾದಯಾತ್ರೆ ಅಲ್ಲ ಇದು ದಂಡಯಾತ್ರೆ: ಯೋಗೇಶ್ವರ್

    ರಾಮನಗರ: ಹಣ ನೀಡಿ ಬೇರೆ ಬೇರೆ ಜಿಲ್ಲೆಯಿಂದ ಜನರನ್ನು ಕರೆತಂದು ಅವರಿಗೆ ಕೊರೊನಾ ಅಂಟಿಸಿ ಕಳುಹಿಸುವ ಕೆಲಸವನ್ನು ಡಿಕೆಶಿ ಬ್ರದರ್ಸ್ ಮಾಡುತ್ತಿದ್ದಾರೆ. ಇದರಿಂದಾಗಿ ಶಿವಕುಮಾರ್ ಹಾಗೂ ಅವರ ತಂಡವನ್ನು ಅರೆಸ್ಟ್ ಮಾಡಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡುತ್ತೇನೆ ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಯಂತ ಭ್ರಷ್ಟನನ್ನು, ಲೂಟಿಕೋರನನ್ನು ಒಂದು ವರ್ಷ ಸಿದ್ದರಾಮಯ್ಯ ಕ್ಯಾಬಿನೆಟ್‍ಗೆ ತಗೆದುಕೊಂಡಿರಲಿಲ್ಲ. ಆದರೆ ಆನಂತರ ಹೈಕಮಾಂಡ್ ಒತ್ತಡಕ್ಕೆ ತಗೆದುಕೊಂಡರು. ಸಿದ್ದರಾಮಯ್ಯ ಈಗ ವೀಕ್ ಆಗಿದ್ದಾರೆ ಎನ್ನಿಸುತ್ತದೆ. ಈ ಪುಂಡರ ಜೊತೆ ಅವರು ನಡೆಯುತ್ತಿದ್ದಾರೆ. ಆಗಾಗ ಬರ್ತಾರೆ ವಾಪಾಸ್ ಹೋಗ್ತಾರೆ ಎಂದು ವ್ಯಂಗ್ಯವಾಡಿದರು.

    ಕೊರೊನಾ ದಿನೇ ದಿನೇ ಹೆಚ್ಚಳವಾಗುತ್ತಿದೆ. ಆದರೂ ಕಳೆದ 4 ದಿನದಿಂದ ಮೇಕೆದಾಟು ಹೆಸರಿನಲ್ಲಿ ಶಿವಕುಮಾರ್ ಹಾಗೂ ಅವರ ಪಟಾಲಂ ದಂಡಯಾತ್ರೆ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಹೈ ಕೋರ್ಟ್ ಸೂಚನೆ ನೀಡಿದೆ. ಆದರೂ ಇದರ ತೀವ್ರ ಉದ್ದೇಶವನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು

    ಸರ್ಕಾರ ಕೊರೊನಾ ಸರಿಯಾಗಿ ನಿರ್ವಹಿಸಲಿಲ್ಲ ಎಂದು ಇದೇ ಡಿ.ಕೆ.ಶಿವಕುಮಾರ್ ಮತ್ತು ಪಟಾಲಂ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಬಹಳಷ್ಟು ದಾಂಧಲೆಯನ್ನು ಮಾಡಿತ್ತು. ಆದರೂ ಕೊರೊನಾ ಹೆಚ್ಚಳವನ್ನು ಅರ್ಥ ಮಾಡಿಕೊಳ್ಳದೇ ಮೇಕೆದಾಟುವನ್ನು ಮಾಡುತ್ತಿದ್ದಾರೆ ಎಂದ ಅವರು, ಕಾವೇರಿ ನಮ್ಮ ನರನಾಡಿಯಲ್ಲಿದೆ. ನಾವೆಲ್ಲಾ ಅದನ್ನೆ ಕುಡಿದು ಬೆಳೆದೆವು. ಹಳೆ ಮೈಸೂರು ಭಾಗದ ಜೀವನಾಡಿ ಆಗಿದೆ ಎಂದರು. ಇದನ್ನೂ ಓದಿ: ಸರ್ಕಾರ ಯಾವುದೇ ಆದೇಶ ನೀಡಲಿ ಪಾದಯಾತ್ರೆ ನಿಲ್ಲಲ್ಲ: ಡಿ.ಕೆ ಸುರೇಶ್

    ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗಲೇ ಅವರ ಕಾವೇರಿ ನೀರಿನ ಕುರಿತಾಗಿ ಕೋರ್ಟ್ ಆದೇಶ ಬಂದಿತ್ತು. ಆದರೂ ಸಿದ್ದರಾಮಯ್ಯ ಡಿಕೆಶಿ ಅಧಿಕಾರದಲ್ಲಿದ್ದಾಗ ಸುಧೀರ್ಘ ಅಧಿಕಾರದಲ್ಲಿದ್ದಾಗಲೂ ಏನನ್ನು ಮಾತನಾಡಲಿಲ್ಲ. ಡಿಕೆಶಿ ಪ್ರತಿ ಮಾತಿಗೂ ಸಾಕ್ಷಿ ಗುಡ್ಡೆ ಎನ್ನುತ್ತಾರೆ. ಅವರು ಏನು ಸಾಕ್ಷಿಯನ್ನು ಇಟ್ಟಿದ್ದಾರೆ ಎಂದ ಅವರು, ಇದು ಡೋಂಗಿ ಪಾದಯಾತ್ರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಡೊಂಬರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

  • ಮತ್ತೆ ಕಾಂಗ್ರೆಸ್ ಸೇರಿದ್ರೆ ಆತ್ಮಹತ್ಯೆ ಮಾಡಿಕೊಂಡಂತೆ: ಸಿಪಿವೈ

    ಮತ್ತೆ ಕಾಂಗ್ರೆಸ್ ಸೇರಿದ್ರೆ ಆತ್ಮಹತ್ಯೆ ಮಾಡಿಕೊಂಡಂತೆ: ಸಿಪಿವೈ

    ರಾಮನಗರ: ನಾನು ಮತ್ತೆ ಡಿಕೆಶಿಯವರ ಜೊತೆ ಕಾಂಗ್ರೆಸ್ ಸೇರಿದರೆ ಆತ್ಮಹತ್ಯೆ ಮಾಡಿಕೊಂಡಂತೆ ಮಾಜಿ ಸಚಿವ ಸಿಪಿ ಯೋಗೇಶ್ವರ್ ಹೇಳಿದ್ದಾರೆ.

    ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಕಾಂಗ್ರೆಸ್ ಸೇರುವ ಸುದ್ದಿ ಕಪೋಲಕಲ್ಪಿತವಾದದ್ದು, ನನಗೆ ಶಿವಕುಮಾರ್ ರಿಂದ ಕಾಂಗ್ರೆಸ್‍ನಲ್ಲಿ ಕಿರುಕುಳವಾಗಿದೆ. ಎರಡು ಬಾರಿ ನನಗೆ ಕಾಂಗ್ರೆಸ್‍ನಲ್ಲಿ ಟಿಕೆಟ್ ತಪ್ಪಿಸಿದ್ದರು ಎಂದು ದೂರಿದರು. ಇದನ್ನೂ ಓದಿ: ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

    ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದರ ನಡುವೆ ನಡೆದ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಸುರೇಶ್ ಕಾರ್ಯಕರ್ತರು ಕಾರ್ಯಕ್ರಮವನ್ನ ಹಾಳು ಮಾಡಿದ್ದಾರೆ. ಅವರಿಗೆ ಕಾರ್ಯಕ್ರಮ ನಡೆಯುವುದು ಇಷ್ಟವಿರಲಿಲ್ಲ. ಅವರ ನಡವಳಿಕೆ ಅವರ ಹಿನ್ನೆಲೆ ತೋರಿಸುತ್ತದೆ. ಅವರ ಈ ಗುಂಡಾಗಿರಿ ವರ್ತನೆ ನಿಲ್ಲಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ಸಹ ಅವರಿಗೆ ಸಹಕಾರ ಕೊಡುತ್ತಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್‌ ಸಿಎಂ

    ಹಿಂದೆ ನಾನು ಅರಣ್ಯ ಸಚಿವನಾಗಿದ್ದಾಗ, ಅವರ ಅಕ್ರಮ ಕಲ್ಲಿನ ಕ್ವಾರಿಗಳನ್ನ ಬಂದ್ ಮಾಡಿಸಿದ್ದೆ. ನಂತರ ಯುಪಿಎನಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ನನ್ನ ವಿರುದ್ಧ 25 ಕೇಸ್ ಹಾಕಿಸಿದ್ದರು. ವೀರಪ್ಪ ಮೋಯ್ಲಿ ರವರ ಬಳಿ ಹೋಗಿ ಕೇಸ್ ಹಾಕಿಸಿದ್ದರು. ಆಗ ನಾನು ಮೋಯ್ಲಿಯವರನ್ನ ಭೇಟಿ ಮಾಡಿದ್ದು, ಅವರು ಶಿವಕುಮಾರ್ ಈ ರೀತಿ ಹೇಳಿದ್ದಾರೆ ಅಂದಿದ್ದರು. ಡಿಕೆಶಿಯವರು 7 ಬಾರಿ ಶಾಸಕರಾಗಿದ್ದಾರೆ. ಅವರಿಗೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಸಿ.ಪಿ ಯೋಗೀಶ್ವರನನ್ನು ಮಂತ್ರಿ ಮಾಡಬೇಕು: ಅಶ್ವಥ್ ನಾರಾಯಣ್

    ಸಿ.ಪಿ ಯೋಗೀಶ್ವರನನ್ನು ಮಂತ್ರಿ ಮಾಡಬೇಕು: ಅಶ್ವಥ್ ನಾರಾಯಣ್

    ಉಡುಪಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಸಿ.ಪಿ. ಯೋಗೀಶ್ವರ್ ಬಹಳಷ್ಟು ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಲಿ ಎಂಬುದು ನಮ್ಮ ಅಭಿಪ್ರಾಯವೂ ಆಗಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.

    ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಶುಕ್ರವಾರ ಉಡುಪಿಗೆ ಆಗಮಿಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಶಾಸಕ ಯೋಗೀಶ್ವರ್ ಪರ ಬ್ಯಾಟ್ ಮಾಡಿದರು. ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಒತ್ತಾಯವಿದೆ. ಅವರಿಗೂ ಸಚಿವ ಸ್ಥಾನದ ಅಪೇಕ್ಷೆ ಇದೆ. ಅಲ್ಲದೇ ನಮ್ಮ ಅಭಿಪ್ರಾಯವೂ ಅದೇ ಆಗಿದೆ ಎಂದರು.

    ಈ ಬಗ್ಗೆ ಕೇಂದ್ರದ ವರಿಷ್ಠರು ಮತ್ತು ಮುಖ್ಯಮಂತ್ರಿ ಅವರು ಸಮಾಲೋಚನೆ ಮಾಡುತ್ತಾರೆ. ರಾಜ್ಯದಲ್ಲಿ ಸಂಪುಟ ವಿಸ್ತರಣೆ ಸಾಕಷ್ಟು ಗಮನಸೆಳೆದಿದೆ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಒಂದು ಜಟಿಲ ವಿಚಾರವಾಗಿದೆ. ಅಲ್ಪಾವಧಿಯಲ್ಲಿ ಎಲ್ಲವೂ ಗೊತ್ತಾಗಲಿದೆ. ಬೇರೆ ಪಕ್ಷದಿಂದ ಬಿಜೆಪಿಗೆ ಬಂದವರಿಗೆ ಸ್ಥಾನ ನೀಡುವುದು ಮೂಲ ಬಿಜೆಪಿಗರಿಗೆ ಬೇಸರ ವಿಚಾರವಾದರೂ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ವಲಸೆ ಬಂದವರೂ ಸರ್ಕಾರ ರಚನೆಗೆ ಕಾರಣೀಕರ್ತರಾಗಿದ್ದಾರೆ ಎಂದು ತಿಳಿಸಿದರು.

    ಬಿಜೆಪಿಯಲ್ಲಿದ್ದಾಗ ಎಲ್ಲರೂ ಒಂದೇ. ಒಳಗೆ ಹೊರಗೆ ಅನ್ನೋ ಭಾವನೆ ಸರಿಯಲ್ಲ, ತಾರತಮ್ಯಕ್ಕೆ ಅವಕಾಶ ಇಲ್ಲ. ಎಲ್ಲರನ್ನೂ ಕುಟುಂಬದ ರೀತಿ ಜೋಡಿಸಿಕೊಂಡು ಹೋಗಬೇಕಾಗುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

  • ಮಂತ್ರಿಗಿರಿಗಾಗಿ ಹೊಸ ವೇಷ ಹಾಕಿದ್ರಾ ಸಿ.ಪಿ.ಯೋಗೇಶ್ವರ್?

    ಮಂತ್ರಿಗಿರಿಗಾಗಿ ಹೊಸ ವೇಷ ಹಾಕಿದ್ರಾ ಸಿ.ಪಿ.ಯೋಗೇಶ್ವರ್?

    – ಆರ್‌ಎಸ್‌ಎಸ್ ಪ್ರಮುಖರನ್ನ ಮೆಚ್ಚಿಸಲು ಮುಂದಾದ್ರಾ ಸೈನಿಕ

    ರಾಮನಗರ: ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆರ್‌ಎಸ್‌ಎಸ್ ಸಮವಸ್ತ್ರದಲ್ಲಿ ಮಿಂಚಿದ್ದಾರೆ. ಈ ಮೂಲಕ ಯೋಗೇಶ್ವರ್ ಅವರು ಆರ್‌ಎಸ್‌ಎಸ್‍ನ ಪ್ರಮುಖರನ್ನು ಮೆಚ್ಚಿಸುವುದಕ್ಕೆ ಮುಂದಾದ್ರಾ ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕವಾಗಿ ಕೇಳಿಬಂದಿದೆ.

    ಅಂದಹಾಗೇ ಸಿ.ಪಿ.ಯೋಗೇಶ್ವರ್ ಅವರು ತಮ್ಮ ಮಕ್ಕಳಾದ ಸಾಯಿಧ್ಯಾನ್ ಹಾಗೂ ಶ್ರವಣ್ ಜೊತೆ ಪಕ್ಕಾ ಆರ್‌ಎಸ್‌ಎಸ್‍ನ ವ್ಯಕ್ತಿಯಂತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದು ಮಂತ್ರಿಗಿರಿಗಾಗಿ ಸಿಪಿ ಯೋಗೇಶ್ವರ್ ನಡೆಸಿರುವ ಹೊಸ ಕಸರತ್ತು ಎನ್ನಲಾಗುತ್ತಿದೆ.

    ಬಿಜೆಪಿ ಸೇರಿದಾಗಿನಿಂದ ಸಿ.ಪಿ.ಯೋಗೇಶ್ವರ್ ಅವರು ಆರ್‌ಎಸ್‌ಎಸ್ ಬೈಟಕ್, ಪಥಸಂಚಲನದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದೇ ಗೈರಾಗಿದ್ದ ಅವರು ಇದೀಗ ಆರ್‌ಎಸ್‌ಎಸ್ ಸಮವಸ್ತ್ರ ಹಾಕಿ ಲಾಠಿ ಹಿಡಿದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಹಿನ್ನೆಲೆಯಲ್ಲಿ ಯೋಗೇಶ್ವರ್ ಅವರ ಪರ ಆರ್‌ಎಸ್‌ಎಸ್ ಪ್ರಮುಖ, ಬಿಜೆಪಿಯ ಸಂಘಟನಾ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬ್ಯಾಟಿಂಗ್ ನಡೆಸಿದ್ದರು. ಆದ್ರೆ ಮೂಲ ಬಿಜೆಪಿಗರ ಹಾಗೂ ಹೆಚ್.ವಿಶ್ವನಾಥ್ ಅವರ ವಿರೋಧದಿಂದ ಸಚಿವ ಸ್ಥಾನ ಕೈತಪ್ಪುವಂತಾಗಿತ್ತು. ಹೀಗಾಗಿ ಮುಂದೆ ಜೂನ್ ತಿಂಗಳಿನಲ್ಲಿ ಮತ್ತೆ ಸಂಪುಟ ವಿಸ್ತರಣೆ ನಡೆಯಲಿದ್ದು, ಅಂದು ಸಚಿವ ಸಂಪುಟದಲ್ಲಿ ಸೇರಲು ಆರ್‍ಎಸ್‍ಎಸ್ ಪ್ರಮುಖರ ಮೆಚ್ಚುಗೆ ಗಳಿಸಲು ಸಿ.ಪಿ.ಯೋಗೇಶ್ವರ್ ಮುಂದಾಗಿದ್ದಾರೆ ಎನ್ನಲಾಗಿದೆ.

    ರಾಮನಗರದಲ್ಲಿ ಇದೇ ತಿಂಗಳ 9ರಂದು ಆರ್‌ಎಸ್‌ಎಸ್ ಪಥ ಸಂಚಲನ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ದಿಕ್ಸೂಚಿಯಾಗಿ ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣ ಮಾಡಲಿದ್ದಾರೆ. ಅಲ್ಲದೇ ಹಲವು ನಾಯಕರು ಹಾಗೂ ಸಿ.ಪಿ. ಯೋಗೇಶ್ವರ್ ಕೂಡ ಭಾಗಿಯಾಗಲಿದ್ದಾರೆ. ಈ ನಿಟ್ಟಿನಲ್ಲಿ ಯೋಗೇಶ್ವರ್ ಅವರು ಆರ್‍ಎಸ್‍ಎಸ್ ಸಮವಸ್ತ್ರ ತೊಟ್ಟು ಫೋಟೋಶೂಟ್ ಮಾಡಿಸಿದ್ದಾರೆ.

  • 10+3 ಫಾರ್ಮುಲಾಗೆ ಬ್ರೇಕ್ ಹಾಕ್ತಾ ವಿಶ್ವನಾಥ್ ಚಾರ್ಜ್ ಶೀಟ್

    10+3 ಫಾರ್ಮುಲಾಗೆ ಬ್ರೇಕ್ ಹಾಕ್ತಾ ವಿಶ್ವನಾಥ್ ಚಾರ್ಜ್ ಶೀಟ್

    – ರೇಣುಕಾಚಾರ್ಯ, ರಾಜುಗೌಡ ಫುಲ್ ರೆಬೆಲ್
    – ಮಂತ್ರಿ ಸ್ಥಾನ ಕೈತಪ್ಪಿ ಉಮೇಶ್ ಕತ್ತಿ ಬೇಸರ

    ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಮಂತ್ರಿಗಿರಿ ನೀಡುವ ವಿಚಾರ ಸಿಎಂ ಯಡಿಯೂರಪ್ಪ ಅವರ ಸರ್ಕಾರಕ್ಕೆ ತಲೆ ನೋವಾಗಿದೆ. ಯಾವ ಸದನದ ಸದಸ್ಯರು ಅಲ್ಲದ ಯೋಗೇಶ್ವರ್ ಅವರಿಗೆ ಆಪರೇಷನ್ ಕಮಲದ ಯಶಸ್ಸಿಗೆ ದುಡಿದ್ದರು ಎಂಬ ಏಕೈಕ ಕಾರಣಕ್ಕಾಗಿ ಮಂತ್ರಿಗಿರಿ ದಯಪಾಲಿಸಲು ಸಿದ್ಧತೆ ನಡೆದಿತ್ತು. ಆದರೆ ಇದಕ್ಕೆ ಹೈಕಮಾಂಡ್ ಮೂಲಕ ಬ್ರೇಕ್ ಹಾಕಿಸಿದ್ದು ಮಾಜಿ ಸಚಿವ ಹೆಚ್.ವಿಶ್ವನಾಥ್ ಎನ್ನಲಾಗಿದೆ. ಇದನ್ನೂ ಓದಿ: ಒಂದು ಫೋನ್ ಕಾಲ್ ಸಿಎಂ ‘ಶಾ’ಕ್- ಕೊನೆ ಕ್ಷಣದಲ್ಲಿ ಪ್ಲೇಟ್ ಚೇಂಜ್

    ಹೆಚ್.ವಿಶ್ವನಾಥ್ ಅವರು ರಾಜ್ಯದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ರವಾನಿಸಿದ್ದರು. ನನ್ನ ಸೋಲಿಗೆ ಸಿ.ಪಿ.ಯೋಗೇಶ್ವರ್ ಮೋಸ ಕಾರಣ. ಎಲೆಕ್ಷನ್ ಖರ್ಚಿಗೆ ಹಣ ಪಡೆದು ಅದನ್ನು ಹಂಚದೇ ಮೋಸ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬರಲು ನಮ್ಮ ತ್ಯಾಗ ದೊಡ್ಡದು. ಆದರೆ ನಮಗೆ ಯೋಗೇಶ್ವರ್ ಮೋಸ ಮಾಡಿಬಿಟ್ಟರು. ಇಂಥವರಿಗೆ ಮಂತ್ರಿ ಸ್ಥಾನ ನೀಡಿದ್ರೆ ಹೇಗೆ? ನಮಗೆ ಹೇಗೆ ಅನ್ನಿಸಬೇಕು ಹೇಳಿ ಎಂದು ಪತ್ರದಲ್ಲಿ ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ನಾನು ಹೈಕಮಾಂಡ್ ಬುಕ್ ಮಾಡ್ಕೊಂಡಿದ್ದೇನೆ ಎಂದು ಆಪ್ತರ ಬಳಿ ಸಿ.ಪಿ.ಯೋಗೇಶ್ವರ್ ಹೇಳಿಕೊಂಡಿದ್ದಾರೆ. ಇದು ಸತ್ಯನಾ ಎಂದು ವಿಶ್ವನಾಥ್ ಹೈಕಮಾಂಡ್‍ಗೆ ಪ್ರಶ್ನೆ ಮಾಡಿದ್ದರು. ಈ ಪತ್ರ ನೋಡಿದ ಕೂಡಲೇ ಅಮಿತ್ ಶಾ, ಪಕ್ಷದ ಮೂಲ ನಿವಾಸಿಗಳ ಸೇರ್ಪಡೆಗೆ ರೆಡ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

    ಇತ್ತ ಯೋಗೇಶ್ವರ್ ವಿಚಾರ ಮಿಂತ್ರಮಂಡಳಿಯಲ್ಲಿಯೂ ಬಿರುಕಿಗೆ ಕಾರಣವಾಗಿದೆ. ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಏಕೆ ಕೊಡ್ತೀರಿ ಎಂದು ವಿಶ್ವನಾಥ್ ಬಹಿರಂಗವಾಗಿ ಪ್ರಶ್ನೆ ಮಾಡಿದ್ದಾರೆ. ಆದ್ರೆ, ಕುಮಟಳ್ಳಿ ಮಾತ್ರ, ಯೋಗೇಶ್ವರ್ ಪರ ಬ್ಯಾಟ್ ಬೀಸಿದ್ದಾರೆ. ಶಾಸಕ ಎಂ.ಪಿ.ರೇಣುಕಾಚಾರ್ಯ, ರಾಜುಗೌಡ ಫುಲ್ ರೆಬೆಲ್ ಆಗಿದ್ದಾರೆ. ಟ್ವೀಟ್ ಮೂಲಕ, ಹೇಳಿಕೆ ಮೂಲಕ ಯೋಗೇಶ್ವರ್ ವಿರುದ್ಧ ಕೆಂಡಕಾರಿದ್ದಾರೆ. ಇದು ಬಂಡಾಯ ಅಲ್ಲ ಎನ್ನುತ್ತಲೇ, ಸೋತವರಿಗೆ ಮಂತ್ರಿಗಿರಿ ನೀಡುತ್ತಾ ಹೋದ್ರೆ ಪಕ್ಷಕ್ಕೆ ಮುಜುಗರ ಆಗುತ್ತೆ ಎಂದಿದ್ದಾರೆ.

    ಯೋಗೇಶ್ವರ್ ಬೆಂಬಲಕ್ಕೆ ನಿಂತ ಡಿಸಿಎಂ ಅಶ್ವಥ್‍ನಾರಾಯಣ್ ಅವರಿಗೂ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಯೋಗೇಶ್ವರ್ ಮೇಲೆ ಪ್ರೀತಿ ಇದ್ದವರು ತಮ್ಮ ಸ್ಥಾನವನ್ನೇ ಅವರಿಗೆ ಬಿಟ್ಟುಕೊಡಲಿ ಎಂದು ಸವಾಲು ಹಾಕಿದ್ದಾರೆ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ನಾಳೆಯ ಪದಗ್ರಹಣ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ.

    ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಉಮೇಶ್ ಕತ್ತಿ, ಹೈಕಮಾಂಡ್ ನಡೆಯಿಂದ ಬೇಸರಗೊಂಡಿದ್ದಾರೆ. ಇದೇ ಬೇಸರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೊಟ್ರೆ ಕೊಡ್ಲಿ ಬಿಟ್ರೆ ಬಿಡ್ಲಿ ಅಂತ ಹೇಳಿದರು. ಸಂಜೆ ಸಿಎಂ ಕರೆದು ಮಾತನಾಡಿದ್ದರು. ಆದರೆ ಕೋಪ ಕರಗಿರಲಿಲ್ಲ. ಸಚಿವ ಸ್ಥಾನ ಕೈತಪ್ಪಿದ ಬೇಸರದಲ್ಲಿರುವ ಸಿಪಿ ಯೋಗೇಶ್ವರ್ ಅವರನ್ನು ಸಿಎಂ ಪುತ್ರ ವಿಜಯೇಂದ್ರ ಸಮಾಧಾನ ಮಾಡುವ ಯತ್ನ ಮಾಡಿದ್ದರು. ಮಾಧ್ಯಮಗಳಲ್ಲಿ ಮಾತ್ರ 10+3 ಅಂತ ಬಂತು. ಈಗ ಕೇವಲ ಹತ್ತು ಜನರಿಗೆ ಅವಕಾಶ ಅಂತ ಬರುತ್ತಿದೆ. ನಾಳೆ ಬೆಳಗ್ಗೆ ಎಲ್ಲದಕ್ಕೂ ಉತ್ತರ ಸಿಗುತ್ತೆ ಅಂತ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಆದ್ರೆ ಪಕ್ಷದ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಮಾತ್ರ, ವಿಜಯೇಂದ್ರ ಅವರನ್ನು ಹಲವರು ಭೇಟಿ ಮಾಡಿದ ತಕ್ಷಣ, ಲಾಬಿ ಅಂತಾ ಅರ್ಥ ಅಲ್ಲ. ನಾಳೆಯವರೆಗೂ ಕುತೂಹಲ ಉಳಿಯಲಿ ಎಂದರು.

  • ರಾಮನಗರ ಜಿಲ್ಲಾ ರಾಜಕೀಯಕ್ಕೆ ಸಿಪಿ ಯೋಗೇಶ್ವರ್ ರೀ ಎಂಟ್ರಿ

    ರಾಮನಗರ ಜಿಲ್ಲಾ ರಾಜಕೀಯಕ್ಕೆ ಸಿಪಿ ಯೋಗೇಶ್ವರ್ ರೀ ಎಂಟ್ರಿ

    – ಸ್ವಗೃಹದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ

    ರಾಮನಗರ: ಉಪ ಚುನಾವಣೆಯ ವೇಳೆ ಹುಣಸೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಇದೀಗ ಮತ್ತೆ ರಾಮನಗರ ಜಿಲ್ಲಾ ರಾಜಕೀಯಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ವರ್ಷದ ಎರಡನೇ ದಿನ ಚನ್ನಪಟ್ಟಣದ ತಮ್ಮ ಸ್ವಗೃಹಕ್ಕೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ.

    2018ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ವಿರುದ್ಧ ಸೋಲು ಅನುಭವಿಸಿದ ಬಳಿಕ ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಸಿ.ಪಿ ಯೋಗೇಶ್ವರ್ ಪ್ರಮುಖ ಪಾತ್ರ ವಹಿಸಿದ್ದರು. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನ ಕರೆದೊಯ್ದು ತೆರೆ ಮರೆಯಲ್ಲಿದ್ದುಕೊಂಡೇ ಸರ್ಕಾರವನ್ನ ಕೆಡವಿದ್ದರು.

    ರಾಜೀನಾಮೆ ನೀಡಿದ್ದ 15 ಶಾಸಕರ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಸಿ.ಪಿ.ಯೋಗೇಶ್ವರ್ ಹೊಂದಿದ್ದರು. ಅದಕ್ಕೆ ಸಂಬಂಧಪಟ್ಟಂತೆ ಸಮೀಕ್ಷೆ, ತಮ್ಮ ಬೆಂಬಲಿಗರ ಜೊತೆಗೆ ಕ್ಷೇತ್ರದ ಸಂಪೂರ್ಣ ಅಧ್ಯಯನದ ವರದಿ ಪಡೆದುಕೊಂಡಿದ್ದರೂ ಸಹ ಟಿಕೆಟ್ ಸಿಗದೇ ನಿರಾಶರಾಗಿದ್ದರು. ಚುನಾವಣೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಸಿಪಿ ಯೇಗೇಶ್ವರ್ ಅವರು ಕ್ಷೇತ್ರದತ್ತ ಮುಖ ಮಾಡುವುದನ್ನು ಕಡಿಮೆ ಮಾಡಿದ್ದರು. ಇದೀಗ ಹೊಸ ವರ್ಷದಲ್ಲಿ ಹೊಸ ಹುರುಪಿನೊಂದಿಗೆ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದಾರೆ.

    ಈಗಾಗಲೇ ದೇಶದಾದ್ಯಂತ ಸಿಎಎ, ಸಿಎಬಿ, ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದು, ಈಗಲೂ ಸಹ ನಡೆಯುತ್ತಿವೆ. ಹೀಗಾಗಿ ಪೌರತ್ವ ಕಾಯ್ದೆ ಪರವಾಗಿ ಇದೇ ಶನಿವಾರ ರಾಮನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ವಿಚಾರವಾಗಿ ಸಿಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿನ ತಮ್ಮ ನಿವಾಸದ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ಪೌರತ್ವ ಕಾಯ್ದೆ ವಿಚಾರವಾಗಿ ಎಲ್ಲೆಡೆ ತಪ್ಪು ತಿಳುವಳಿಕೆ ಮೂಡಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲೆಯ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಪಕ್ಷ ಕಾರ್ಯಕರ್ತರು, ಬೆಂಬಲಿಗರಿಗೆ ಕರೆ ನೀಡಿದರು.

    ಚನ್ನಪಟ್ಟಣದಲ್ಲಿನ ಕೆರೆಗಳಿಗೆ ಸರಿಯಾಗಿ ನೀರು ಹರಿಸುತ್ತಿಲ್ಲ. ಶಾಸಕರು ಸಹ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಅಮವಾಸ್ಯೆ, ಹುಣ್ಣಿಮೆ ಬಂದ ಹಾಗೇ ಬರುತ್ತಾರೆ, ಹೋಗುತ್ತಾರೆ. ಸ್ವಲ್ಪ ದಿನಗಳಲ್ಲೇ ಎಲ್ಲವನ್ನೂ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.