Tag: C.N. Manjunath

  • ಮುನಿರತ್ನರ ಕೂದಲು ಸ್ವಲ್ಪ ಸುಟ್ಟಿದೆ: ಮೊಟ್ಟೆ ದಾಳಿಗೆ ಖಂಡನೆ ವ್ಯಕ್ತಪಡಿಸಿದ ಸಂಸದ ಡಾ.ಮಂಜುನಾಥ್‌

    ಮುನಿರತ್ನರ ಕೂದಲು ಸ್ವಲ್ಪ ಸುಟ್ಟಿದೆ: ಮೊಟ್ಟೆ ದಾಳಿಗೆ ಖಂಡನೆ ವ್ಯಕ್ತಪಡಿಸಿದ ಸಂಸದ ಡಾ.ಮಂಜುನಾಥ್‌

    – ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ರೀತಿಯ ಘಟನೆ ಖಂಡನೀಯ

    ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ (Muniratna) ಅವರ ಮೇಲೆ ಮೊಟ್ಟೆ ಎಸೆತ ಪ್ರಕರಣವನ್ನು ಸಂಸದ ಡಾ. ಸಿ.ಎನ್.ಮಂಜುನಾಥ್‌ (C.N.Manjunath) ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.

    ಮುನಿರತ್ನ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್‌ ಅವರು, ಇದ್ದಕ್ಕಿದ್ದಂತೆ ನನ್ನ ತಲೆ ಮೇಲೆ ಜೋರಾದ ಪೆಟ್ಟು ಬಿತ್ತು. ತಲೆಯಲ್ಲಿ ಉರಿ ಆಯ್ತು, ಕೂದಲು ಕೂಡ ಕಿತ್ತು ಬಂತು. ತಲೆ ಸುತ್ತು ಮತ್ತು ವಾಂತಿ ಬಂದಂತೆ ಆಗ್ತಿದೆ ಎಂದು ಶಾಸಕ ಮುನಿರತ್ನ ಅವರು ಹೇಳಿದ್ದಾರೆಂದು ತಿಳಿಸಿದರು. ಇದನ್ನೂ ಓದಿ: ಗೂಂಡಾಗಳಿಂದ ಗಲಾಟೆ ಮಾಡಿಸಿ ನನ್ನ ಮೇಲೆ ಆರೋಪ: ಮುನಿರತ್ನಗೆ ಡಿಕೆಸು ತಿರುಗೇಟು

    ಯಾವಾಗ್ಲು ಅಷ್ಟೆ, ತಲೆಗೆ ಪೆಟ್ಟು ಬಿದ್ದಂತಹ ಸಂದರ್ಭದಲ್ಲಿ ವಾಂತಿ ಬಂದಂತಾದರೆ ಸಿ.ಟಿ ಸ್ಕ್ಯಾನ್‌ ಮಾಡಿಸಬೇಕಾಗುತ್ತದೆ. ಅಕಸ್ಮಾತ್‌ ಮಿದುಳು ಒಳಗಡೆ ಏನಾದರು ತೊಂದರೆ ಆಗಿದ್ಯಾ ಅನ್ನೋದನ್ನು ತಿಳಿದುಕೊಳ್ಳಬೇಕಾಗುತ್ತದೆ. ವೈದ್ಯರ ಜೊತೆ ಮಾತನಾಡಿದ್ದೇನೆ. ಅವರು ವೈದ್ಯಕೀಯ ಪರೀಕ್ಷೆ ಮಾಡ್ತಾರೆ. ತಲೆಗೆ ಪೆಟ್ಟು ಬಿದ್ದ ಜಾಗದಲ್ಲಿ ಸ್ವಲ್ಪ ಕೂದಲು ಬರ್ನಿಂಗ್‌ ಆಗಿದೆ ಎಂದು ತಿಳಿಸಿದರು.

    ತಾವು ಸಂಸದರಾದ ಮೇಲೆ ಮುನಿರತ್ನ ಅವರು ಟಾರ್ಗೆಟ್‌ ಆಗ್ತಿದ್ದಾರೆ ಎನಿಸುತ್ತಾ ಎಂಬ ಪ್ರಶ್ನೆ ಕುರಿತು ಮಾತನಾಡಿ, ಕಳೆದ 6 ತಿಂಗಳಿಂದ ಆಗುತ್ತಿರುವ ಘಟನೆಗಳನ್ನು ಗಮನಿಸಿದರೆ ನನಗೂ ಹಾಗೆ ಅನಿಸುತ್ತಿದೆ ಎಂದರು. ಇದನ್ನೂ ಓದಿ: ಕುಸುಮಾರನ್ನು ಶಾಸಕಿಯನ್ನಾಗಿ ಮಾಡಲು ನನ್ನ ಕೊಲೆಗೆ ಸಂಚು, ಆಸೀಡ್‌ ದಾಳಿ : ಮುನಿರತ್ನ

    ಈ ರೀತಿಯ ವ್ಯವಸ್ಥೆ ಆಗಬಾರದು. ಈ ಬಾರಿ 75ನೇ ವರ್ಷದ ಸಂವಿಧಾನ ದಿನಾಚರಣೆ ಮಾಡಿದ್ದೇವೆ. ಸಂವಿಧಾನಕ್ಕೆ ನಾವು ಬೆಲೆ ಕೊಡಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಚುನಾವಣೆಯಲ್ಲಿ ಒಬ್ಬರು ಗೆಲ್ಲೋದು ಅಥವಾ ಸೋಲುವುದು ಸ್ವಾಭಾವಿಕ. ಆದರೆ, ನಿರಂತರವಾಗಿ ಹೀಗೆ ಮಾಡುವುದು ಖಂಡನೀಯ ಎಂದು ಮುನಿರತ್ನ ಅವರ ಮೇಲಿನ ದಾಳಿಗೆ ಅಸಮಾಧಾನ ವ್ಯಕ್ತಪಡಿಸಿದರು.

  • ಡಿಕೆ ಬ್ರದರ್ಸ್ ಕೋಟೆಗೆ ಅಮಿತ್ ಶಾ ಎಂಟ್ರಿ – ಚನ್ನಪಟ್ಟಣದಲ್ಲಿ ರೋಡ್ ಶೋ

    ಡಿಕೆ ಬ್ರದರ್ಸ್ ಕೋಟೆಗೆ ಅಮಿತ್ ಶಾ ಎಂಟ್ರಿ – ಚನ್ನಪಟ್ಟಣದಲ್ಲಿ ರೋಡ್ ಶೋ

    ರಾಮನಗರ: ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್‌ (Dr Manjunath) ಅವರನ್ನು ಗೆಲ್ಲಿಸಲು ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ಖುದ್ದು ಅಖಾಡಕ್ಕಿಳಿಯುತ್ತಿದ್ದಾರೆ. ಡಿ.ಕೆ.ಬ್ರದರ್ಸ್‌ಗೆ ಠಕ್ಕರ್ ನೀಡಲು ಬಿಜೆಪಿ (BJP) ರಣತಂತ್ರ ಹಣೆದಿದ್ದು, ಮೈತ್ರಿ ನಾಯಕರು ಬೃಹತ್ ರೋಡ್ ಶೋ (Road Show) ಮೂಲಕ ಶಕ್ತಿಪ್ರದರ್ಶನಕ್ಕೆ ಸಿದ್ಧತೆ ಆರಂಭಿಸಿದ್ದಾರೆ.

    ಹೌದು. ಬೆಂಗಳೂರು ಗ್ರಾಮಾಂತರ (Bengaluru Rural) ಹೈವೋಲ್ಟೇಜ್ ಕ್ಷೇತ್ರದಲ್ಲಿ ಲೋಕಸಮರ (Lok Sabha Election) ತೀವ್ರಗೊಳ್ಳುತ್ತಿದೆ. ಮೊನ್ನೆಯಷ್ಟೇ ನಾಮಪತ್ರ ಸಲ್ಲಿಕೆ ಮೂಲಕ ಬೃಹತ್ ರ‍್ಯಾಲಿ ಮಾಡಿ ಶಕ್ತಿ ಪ್ರದರ್ಶನ ಮಾಡಿದ್ದ ಕಾಂಗ್ರೆಸ್‌ಗೆ (Congress) ಠಕ್ಕರ್ ಕೊಡಲು ಮೈತ್ರಿ ಪಕ್ಷ ಸಿದ್ಧತೆ ಆರಂಭಿಸಿದೆ. ಖುದ್ದು ಬೆಂಗಳೂರು ಗ್ರಾಮಾಂತರ ಅಖಾಡಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಎಂಟ್ರಿ ನೀಡುತ್ತಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ.  ಇದನ್ನೂ ಓದಿ: ಜ್ಯೂಸ್ ಜಾಕಿಂಗ್ ಎಂದರೇನು? – ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ ಚಾರ್ಜಿಂಗ್‌ ಮಾಡದಂತೆ ಕೇಂದ್ರ ಎಚ್ಚರಿಕೆ ನೀಡಿದ್ದು ಏಕೆ?

    ಏಪ್ರಿಲ್ 1ರ ರಾತ್ರಿ ಅಮಿತ್ ಶಾ ಬೆಂಗಳೂರಿಗೆ ಅಗಮಿಸಲಿದ್ದಾರೆ. ಏ.2 ರಂದು ಬೆಳಗ್ಗೆ 9 ಗಂಟೆಗೆ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ನಾಯಕರೊಂದಿಗೆ ಸಭೆ ಮಾಡಲಿದ್ದಾರೆ. ಬಳಿಕ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ, ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಒಳಗೊಂಡು ಸಮಾವೇಶ ಮಾಡಲಿದ್ದಾರೆ. ಮಧ್ಯಾಹ್ನ 2 ರಿಂದ 4ಗಂಟೆವರೆಗೂ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರಮುಖರ ಸಭೆ ನಡೆಸುವ ಮೂಲಕ ಚುನಾವಣೆ ಗೆಲುವಿಗೆ ರಣತಂತ್ರ ಮಾಡಲಿದ್ದಾರೆ.

    ಬೆಂಗಳೂರಿನಲ್ಲಿ ಸಮಾವೇಶದ ಬಳಿಕ ಸಂಜೆ 6ಗಂಟೆಗೆ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿ ಬಹಿರಂಗ ಸಮಾವೇಶ ನಡೆಸಲಿದ್ದಾರೆ. ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ ಪರವಾಗಿ ಮತಯಾಚನೆ ಮಾಡಲಿರುವ ಅಮಿತ್ ಶಾಗೆ ಹೆಚ್‌ಡಿ ಕುಮಾರಸ್ವಾಮಿ, ಬಿಎಸ್‌ ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ ಸೇರಿದಂತೆ ಬಿಜೆಪಿ, ಜೆಡಿಎಸ್ ಸ್ಥಳೀಯ ನಾಯಕರು ಸಾಥ್ ನೀಡಲಿದ್ದಾರೆ. ಇದನ್ನೂ ಓದಿ: ನಾರಿಶಕ್ತಿ ಅಪಮಾನಗೊಳಿಸುವ ʻಸ್ತ್ರೀ ದ್ವೇಷಿʼಗಳಿರುವುದು ಬೇಸರ – ಶಾಮನೂರು ಶಿವಶಂಕರಪ್ಪ ವಿರುದ್ಧ ಸೈನಾ ನೆಹ್ವಾಲ್‌ ಕಿಡಿ

     

  • ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ, ಡಾ. ಮಂಜುನಾಥ್‌ ರಾಜಕಾರಣಕ್ಕೆ ಬರಬೇಕು: ಹೆಚ್‌ಆರ್‌ ರಂಗನಾಥ್‌

    ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ, ಡಾ. ಮಂಜುನಾಥ್‌ ರಾಜಕಾರಣಕ್ಕೆ ಬರಬೇಕು: ಹೆಚ್‌ಆರ್‌ ರಂಗನಾಥ್‌

    ಮೈಸೂರು: ಪ್ರಜಾಪ್ರಭುತ್ವ (Democracy) ಒಳ್ಳೆಯವರನ್ನು ಬಯಸುತ್ತದೆ. ಮಂಜುನಾಥ್‌ (Dr. C.N. Manjunath) ಅವರಂತಹವರು ರಾಜಕಾರಣಕ್ಕೆ ಬರಬೇಕು ಎಂದು ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌ (HR Ranganath) ಹೇಳಿದರು.

    ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಮುನ್ನಡೆಸಿ ಈಗ ನಿವೃತ್ತರಾಗಿರುವ ಡಾ.ಸಿ.ಎನ್‌ ಮಂಜುನಾಥ್‌ ಅವರಿಗಾಗಿ ಮೈಸೂರಿನ ನಾಗರಿಕರ ಪರವಾಗಿ ಆಯೋಜನೆಗೊಂಡಿದ್ದ ʼಧನ್ಯವಾದ ಧನ್ವಂತರಿʼ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ. ಸುಸಂಸ್ಕೃತರು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕಾರ್ಯಕ್ಕೆ ಬರಬೇಕು. ವೈದ್ಯ ವೃತ್ತಿಯಲ್ಲಿದ್ದಾಗ ಒಂದು ಕ್ಷಣವೂ ರಾಜಕೀಯ ಸುಳಿಗೆ ಸಿಲುಕದೇ ಇದ್ದದ್ದು ಒಂದು ಅಚ್ಚರಿ. ರಾಜಕಾರಣ ಕೆಟ್ಟದಲ್ಲ. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ. ಜನರ ಒತ್ತಾಸೆಯನ್ನು ನಮ್ರತೆಯಿಂದ ಸ್ವೀಕರಿಸಿ ಎಂದು ಮನವಿ ಮಾಡಿದರು.

     

    ಜನರ ಬಯಕೆ ಪ್ರಕಾರ ಒಂದು ಸವಾಲು ಸ್ವೀಕರಿಸಿ. 35 ವರ್ಷ ಸರ್ಕಾರಿ ಸೇವೆ ಮುಗಿಸಿದ ಮೇಲೆ ಈ ರೀತಿಯ ಜನಾಭಿಪ್ರಾಯ ಮೂಡುವುದು ಕಷ್ಟ. ಆದರೆ ಡಾ. ಮಂಜುನಾಥ್ ಅವರಿಗೆ ಅದು ಸಿಕ್ಕಿದೆ. ಆಗ ಪ್ರಜಾಪ್ರಭುತ್ವಕ್ಕೆ ಒಬ್ಬ ಒಳ್ಳೆಯವರು ಸಿಕ್ಕಂತೆ ಆಗುತ್ತದೆ ಎಂದು ಹೇಳಿದರು.  ಇದನ್ನೂ ಓದಿ: ದುಬೈನಲ್ಲಿ ಗೌಡರ ಗೌಜಿ ಗಮ್ಮತ್ತು-2024 – ಒಕ್ಕಲಿಗ ಸಮುದಾಯಗಳ ಕುಟುಂಬ ಸಮಾಗಮ

    ಸರ್ಕಾರಿ ಸಂಸ್ಥೆಯನ್ನು ಮುನ್ನಡೆಸುವುದು ಇಂದು ಬಹಳ ಕಷ್ಟ. ಹಾಗಿರುವಾಗ ಜಯದೇವ ಆಸ್ಪತ್ರೆಯನ್ನು ಜನ ಮೆಚ್ಚುವಂತೆ ಮುನ್ನಡೆಸಿದ್ದಾರೆ. ಡಾ. ಮಂಜುನಾಥ್ ಅವರ ಈ ಸಾಧನೆ ಪಿಹೆಚ್‌ಡಿಗೆ ಯೋಗ್ಯವಾದ ಒಂದು ವಿಷಯ ಎಂದು ತಿಳಿಸಿದರು.

     

    ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ರಾಜಕಾರಣ ಕೆಟ್ಟದಲ್ಲ. ಎಸ್.ಎಂ. ಕೃಷ್ಣ ಅವರು ನಾನು ಪ್ರೀತಿಸುವ ರಾಜಕಾರಣಿ. ಅದೇ ರೀತಿಯ ವ್ಯಕ್ತಿತ್ವ ಮಂಜುನಾಥ್ ಅವರದ್ದು. ನಿಮ್ಮಂಥವರು ರಾಜಕಾರಣಕ್ಕೆ ಬರಬೇಕು. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಬ್ರಿಟನ್ ಲೇಖಕಿ ನಿತಾಶಾ ಕೌಲ್‌ಗೆ ನೋ ಎಂಟ್ರಿ – ಬೆಂಗಳೂರು ವಿಮಾನ ನಿಲ್ದಾಣದಿಂದಲೇ ವಾಪಸ್

  • ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಸಿ.ಎನ್.ಮಂಜುನಾಥ್‌ ಮುಂದುವರಿಕೆ – ಸೇವಾವಧಿ 1 ವರ್ಷ ವಿಸ್ತರಣೆ

    ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಸಿ.ಎನ್.ಮಂಜುನಾಥ್‌ ಮುಂದುವರಿಕೆ – ಸೇವಾವಧಿ 1 ವರ್ಷ ವಿಸ್ತರಣೆ

    ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್‌ ಅವರ ಸೇವಾವಧಿಯನ್ನು ಮತ್ತೆ ಒಂದು ವರ್ಷಗಳ ಕಾಲ ವಿಸ್ತರಿಸಲಾಗಿದೆ.

    ರಾಜ್ಯ ಸರ್ಕಾರ ಸಿ.ಎನ್.ಮಂಜುನಾಥ್‌ ಅವರ ಸೇವಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ. ನಿರ್ದೇಶಕರಾಗಿ ಅವಧಿ ಮುಕ್ತಾಯವಾದ ಹಿನ್ನೆಲೆ ಮುಂದುವರಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಅವರ ಸೇವಾವಧಿ ವಿಸ್ತರಿಸಲಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಮೊದಲ ಬಾರಿ ಸಾರ್ವಜನಿಕವಾಗಿ ವ್ಹೀಲ್ ಚೇರ್‌ನಲ್ಲಿ ಕಾಣಿಸಿಕೊಂಡ ಹೆಚ್‌ಡಿಡಿ

    ಡಾ. ಸಿ.ಎನ್.ಮಂಜುನಾಥ್‌ ಅವರ ಸಾಧನೆ ಮತ್ತು ಆಡಳಿತ ವೈಖರಿ ಪರಿಗಣಿಸಿ ಮುಖ್ಯಮಂತ್ರಿಗಳು ಮುಂದುವರಿಸಿದ್ದಾರೆ. ತಮ್ಮ ಸೇವಾವಧಿ ವಿಸ್ತರಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಅವರಿಗೆ ಮಂಜುನಾಥ್‌ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

    ಜಯದೇವ ಆಸ್ಪತ್ರೆ ನಿರ್ದೇಶಕ ಸಿ.ಎನ್.ಮಂಜುನಾಥ್‌ ಅವರ ಅವಧಿ ಮುಗಿದಿತ್ತು. ಅವರನ್ನೇ ಮುಂದುವರಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ವ್ಯಕ್ತವಾಗಿತ್ತು. ಮಂಜುನಾಥ್‌ ಅವರನ್ನು ಮುಂದುವರಿಸುವಂತೆ ಅನೇಕ ಕಡೆ ಪ್ರತಿಭಟನೆಗೂ ಕರೆ ನೀಡಲಾಗಿತ್ತು. ಅಷ್ಟರಲ್ಲೇ ಎಚ್ಚೆತ್ತ ಸರ್ಕಾರ ಸೇವಾವಧಿ ವಿಸ್ತರಿಸಿದೆ. ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ- ಸಾಲ ಮರುಪಾವತಿ ಮಾಡಲ್ಲ ಎಂದ ರೈತರು

    ಡಾ.ಮಂಜುನಾಥ್‌ ಅವರ ಸೇವಾವಧಿ 2021ರಲ್ಲೇ ಮುಗಿದಿತ್ತು. ಆಗ ಕೋವಿಡ್‌ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರಕ್ಕೆ ಸಾಕಷ್ಟು ಉಪಯುಕ್ತ ಸಲಹೆಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಸೇವಾವಧಿಯನ್ನು ಆಗಲೂ ವಿಸ್ತರಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ವಿಶ್ವದ ಶ್ರೇಷ್ಠ ಹೃದಯ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಜಯದೇವ ಆಸ್ಪತ್ರೆ

    ವಿಶ್ವದ ಶ್ರೇಷ್ಠ ಹೃದಯ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಜಯದೇವ ಆಸ್ಪತ್ರೆ

    ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ವಿಶ್ವದ ಶ್ರೇಷ್ಠ ಹೃದಯ ಕೇಂದ್ರ ಎಂಬ ಗೌರವಕ್ಕೆ ಭಾಜನವಾಗಿದೆ. ಸಂಸ್ಥೆಯ ಸಾಧನೆಯನ್ನು ಗುರುತಿಸಿರುವ ಯುರೋಪಿನ ಹಾರ್ಟ್ ಜರ್ನಲ್ ತನ್ನ ಸಂಚಿಕೆಯಲ್ಲಿ ಕಾರ್ಡಿಯಾಕ್ ಸೆಂಟರ್ ಆಫ್ ಎಕ್ಸಲೆನ್ಸ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

    ಸಂಸ್ಥೆಯಲ್ಲಿ ಜನರಿಗೆ ಕೈಗೆಟುಕುವ ವೆಚ್ಚದಲ್ಲಿ ಅತ್ಯಾಧುನಿಕ ಹೃದಯ ಆರೈಕೆ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಮಾತನಾಡಿದ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಈ ಗೌರವ ಸಿಕ್ಕಿರುವುದು ನಮ್ಮ ದೇಶಕ್ಕೆ ಒಂದು ಹೆಮ್ಮೆಯ ವಿಚಾರ ಎಂದಿದ್ದಾರೆ.

    ಈ ಮೂಲಕ ಇಡೀ ವಿಶ್ವಕ್ಕೆ ಗೊತ್ತಾಗುತ್ತೇ ಭಾರತ ದೇಶದಲ್ಲಿ ಅದರಲ್ಲೂ ಸರ್ಕಾರಿ ಸ್ವಾಮ್ಯದ ಹೃದ್ರೋಗ ಸಂಸ್ಥೆಯಲ್ಲಿ ವಿಶ್ವಗುಣಮಟ್ಟದ ಚಿಕಿತ್ಸೆ ಸಿಗುತ್ತೇ ಅನ್ನೋದು, ಇದು ರಾಜ್ಯ ಸರ್ಕಾರಕ್ಕೂ ಹೆಮ್ಮೆ ತರುವ ವಿಚಾರ. ಜಯದೇವ ಆಸ್ಪತ್ರೆಯಲ್ಲಿ ದಿನವೊಂದಕ್ಕೆ ಬೆಂಗಳೂರು, ಮೈಸೂರು, ಕಲಬುರಗಿ ಸೇರಿ ಸರಿಸುಮಾರು ಎರಡೂವರೆ ಸಾವಿರ ಹೊರಗೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತೆ. ಪ್ರತಿ ದಿನ 100 ರಿಂದ 120 ಆಯಜಿಯೋಗ್ರಾಮ್, ಆಯಜಿಯೋಗ್ರಫಿ, 15 ರಿಂದ 20 ಓಪನ್ ಹಾರ್ಟ್ ಸರ್ಜರಿ ಮಾಡಲಾಗುತ್ತಿದೆ. ಜಯದೇವ ಹೃದ್ರೋಗ ಸಂಸ್ಥೆಯೊಂದರಲ್ಲೇ 100 ಜನ ಕಾರ್ಡಿಯೋಲಜಿಸ್ಟ್‍ಗಳು ಇದ್ದಾರೆ ಎಂದು ಡಾ ಮಂಜುನಾಥ್ ತಿಳಿಸಿದ್ದಾರೆ.

    ನಮ್ಮ ಸಂಸ್ಥೆಯ ಸಿಬ್ಬಂದಿಗಳ ಪರಿಶ್ರಮ ಹಾಗೂ ದಾನಿಗಳ ನೆರವಿನಿಂದ ನಮ್ಮ ಸಂಸ್ಥೆ ಇವತ್ತು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಈ ಗೌರವ ಅವರಿಗೆ ಸಲ್ಲಬೇಕು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಡರೋಗಿಗಳಿಗೆ ಜಯದೇವ ಸಂಸ್ಥೆ ಚಿಕಿತ್ಸೆ ನೀಡುತ್ತದೆ. ಆಸ್ಪತ್ರೆಯಲ್ಲಿನ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ಪ್ರಗತಿಯಲ್ಲಿ ಇದೆ ಎಂದು ಹೇಳಿದ್ದಾರೆ.