Tag: C. N. Ashwath Narayan

  • ಎಲ್ಲ ಭಾಗ್ಯಗಳನ್ನು ಹಿಂಪಡೆದು ಮೂರು ನಾಮ ಹಾಕಲು ಸಿದ್ಧತೆ – ಗೊಂದಲ, ಘರ್ಷಣೆ ತಪ್ಪಿಸಿ: ಅಶ್ವತ್ಥ ನಾರಾಯಣ್

    ಎಲ್ಲ ಭಾಗ್ಯಗಳನ್ನು ಹಿಂಪಡೆದು ಮೂರು ನಾಮ ಹಾಕಲು ಸಿದ್ಧತೆ – ಗೊಂದಲ, ಘರ್ಷಣೆ ತಪ್ಪಿಸಿ: ಅಶ್ವತ್ಥ ನಾರಾಯಣ್

    ಬೆಂಗಳೂರು: ಕಾಂಗ್ರೆಸ್ ನಾಯಕರು ಅಭಿವೃದ್ಧಿ ಮರೆತು, ಮತಗಳವು, ಸಮಾಜದಲ್ಲಿ ಗೊಂದಲ ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ ಎಂದು ಶಾಸಕ ಡಾ‌. ಸಿ.ಎನ್.ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದರು.

    ಬೆಂಗಳೂರಿನಲ್ಲಿ ಮಾತಾಡಿದ ಅಶ್ವಥ್‌ ನಾರಾಯಣ್, ರಣದೀಪ್ ಸುರ್ಜೇವಾಲಾ ಅವರು ಮತಗಳ್ಳತನದ ವಿಷಯ ಬಿಟ್ಟು ‌’ಐ ಲವ್ ಮೊಹಮ್ಮದ್’ ಆಗುವುದನ್ನು ಹೋಗಿ ನೋಡಬೇಕು. ಐ ಲವ್ ಮೊಹಮ್ಮದ್‌ ನಡೆಸುವ ವ್ಯಕ್ತಿಗಳ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

    ಸಮಾಜ ಉರಿದು ಹೋಗುತ್ತಿದೆ. ಇದರ ಬಗ್ಗೆ ಗಮನಿಸುವ ಬದಲು ಸರ್ಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಮಂತ್ರಿಗಳು ಏನು ಮಾಡಲು ಹೊರಟಿದ್ದೀರಿ? ಒಳ್ಳೆಯದಂತೂ ಮಾಡುತ್ತಿಲ್ಲ, ಅಭಿವೃದ್ಧಿ ಮಾಡುವುದಿಲ್ಲ, ಆಡಳಿತ ಮಾಡುತ್ತಿಲ್ಲ, ಗುಣಮಟ್ಟದ ಶಿಕ್ಷಣ ಕೊಡುವುದಿಲ್ಲ, ಮನೆ – ನೀರು ಕೊಡುವುದಿಲ್ಲ ಎಂದು ದೂರಿದರು. ನೀವು ಬಾಯಿಗೆ ಮಣ್ಣು ಹಾಕುತ್ತೀರಿ ಎಂದು ಟೀಕಿಸಿದರು. ಗೃಹ ಸಚಿವರೇ ನೀವೇನಾದರೂ ಎಚ್ಚರವಿದ್ದರೆ ಕ್ರಮ ಕೈಗೊಳ್ಳಿ. ನೀವು ಮುಖ್ಯಮಂತ್ರಿ ಲೋಕದಲ್ಲಿದ್ದೀರಿ. ಜನರು ಇಂಥ ಗೊಂದಲಗಳ ನಡುವೆ ಘರ್ಷಣೆಗಳಲ್ಲಿ ಸಿಲುಕುವುದು ಬೇಡ ಎಂದು ತಿಳಿಸಿದರು.

    ಐ ಲವ್ ಮೊಹಮ್ಮದ್ ಎಂಬ ಮೆರವಣಿಗೆಯನ್ನು ಯಾಕೆ ಮಾಡುತ್ತಿದ್ದಾರೆ? ಇದರ ಹಿಂದೆ ಇರುವವರು ಯಾರು ಎಂದು ಪ್ರಶ್ನಿಸಿದರು. ಸಮಾಜದಲ್ಲಿ ಈ ರೀತಿ ಕೋಮುಗಲಭೆ ಮಾಡಲು, ಪ್ರಚೋದಿಸಲು, ಸಮಾಜದಲ್ಲಿ ಶಾಂತಿ ಇರಬಾರದು, ಗಲಭೆ ಹುಟ್ಟುಹಾಕಬೇಕೆಂಬ ದುರುದ್ದೇಶದಿಂದ ಮಾಡುತ್ತಿರುವ ಪ್ರಯತ್ನ ಇದು. ಈ ಮುಂಚೆಯೂ ಮೆರವಣಿಗೆ ಪ್ರಾರಂಭ ಆಗುವ ಮೊದಲು ಐ ಲವ್ ಮೊಹಮ್ಮದ್ ಪೋಸ್ಟರ್‌ಗಳಿಂದ ಪ್ರಾರಂಭವಾಗಿದೆ ಎಂದು ತಿಳಿಸಿದರು.

    ಸರ್ಕಾರವಂತೂ ನಿಷ್ಕ್ರಿಯವಾಗಿದೆ. ಇದರ ಬಗ್ಗೆ ಕ್ರಮ ವಹಿಸುತ್ತಿಲ್ಲ. ಬೇಹುಗಾರಿಕೆ ನಿಷ್ಕ್ರಿಯವಾಗಿದ್ದು, ಇದಕ್ಕೆ ಕುಮ್ಮಕ್ಕು ಕೊಡುವ ಕೆಲಸ ಸರ್ಕಾರದಿಂದ ನಡೆಯುತ್ತಿದೆ ಎಂದರಲ್ಲದೇ, ಇದಕ್ಕೆ ಪ್ರತಿಕ್ರಿಯೆ ಕೊಡದಿರಿ ಎಂದು ಸಮಾಜಕ್ಕೆ ಮನವಿ ಮಾಡಿದರು.

    ರಾಜ್ಯಕ್ಕೆ ಜಾತಿಗಣತಿ ಅಧಿಕಾರ ಇದೆಯೇ?
    ಇವರಿಗೆ ಏನು ಕೊಟ್ಟರೂ ತೃಪ್ತಿ ಇಲ್ಲ. ಯಾರೂ ಸಮಾಧಾನದಿಂದ ನೆಮ್ಮದಿಯಿಂದ ಬಾಳಬಾರದು ಎಂಬುದೇ ಸ್ಪಷ್ಟ ಉದ್ದೇಶ. ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತದೆಯಲ್ಲವೇ? ಜಾತಿಗಣತಿ ಮಾಡಲು ಯಾರಿಗೆ ಅಧಿಕಾರ ಇದೆ? ರಾಜ್ಯಕ್ಕೆ ಅಧಿಕಾರ ಇದೆಯೇ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ್ ಪ್ರಶ್ನಿಸಿದರು. ಇದು ಕಡ್ಡಾಯವಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಇದು ಪರಿಪೂರ್ಣ ಗಣತಿ ಆಗಲು ಸಾಧ್ಯವೇ ಎಂದು ಕೇಳಿದರು. ಜನರು ಇದರಲ್ಲಿ ಭಾಗವಹಿಸಬೇಕೆಂದು ತಿಳಿಸುವುದಾಗಿ ಹೇಳಿದರು.

    ಬಿಪಿಎಲ್ ಕಾರ್ಡ್ ರದ್ದು ಮಾಡುವ ಮಹಾನುಭಾವರು ಯಾರು? ಮಾಡಿಸಿದ ಆದಾಯ ದೃಢಪತ್ರ ಪಡೆಯುವ ಸರ್ಕಾರದಲ್ಲಿ ಇರುವವರು ಯಾರು? ಸರ್ಕಾರ ಎಲ್ಲ ಭಾಗ್ಯಗಳನ್ನು ಹಿಂಪಡೆದು ಮೂರು ನಾಮ ಹಾಕಲು ಸಿದ್ಧವಾಗಿದೆ. ಈ ಗಣತಿ, ಈ ಸರ್ವೇ ನಮ್ಮ ದೌರ್ಭಾಗ್ಯ ಆಗಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಜನಕಲ್ಯಾಣ ಯೋಜನೆಗಳನ್ನು ಹಿಂಪಡೆಯುವ ಹುನ್ನಾರ ಇದರ ಹಿಂದಿದೆ ಎಂದು ಆರೋಪಿಸಿದರು.

    ಸಮಾಜ ಒಡೆಯುವವರು, ದೇಶ ಒಡೆಯುವ ಕೆಲಸವನ್ನು ಅಥವಾ ತುಷ್ಟೀಕರಣ ರಾಜಕೀಯ, ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟುವ ಕೆಲಸ, ಭಾಷೆಗಳ ಮೇಲೆ ಎತ್ತಿ ಕಟ್ಟುವವರು ಇದ್ದಾರೆ. ಒಂದೆಡೆ ವಿವಿಧತೆಯಲ್ಲಿ ಏಕತೆ ಎನ್ನುತ್ತಾರೆ. ಇನ್ನೊಂದೆಡೆ ವಿವಿಧತೆಯಲ್ಲಿ ವಿವಿಧತೆ ಮಾಡುವವರಿದ್ದಾರೆ ಎಂದು ಆಕ್ಷೇಪಿಸಿದರು. ಅಂಥ ಮಹಾನುಭಾವರೇ ಕಾಂಗ್ರೆಸ್ಸಿಗರು ಎಂದು ದೂರಿದರು.

  • ಕಾಲ್ತುಳಿತ ದುರಂತವಾದ್ರೂ ಹೋಟೆಲ್‍ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ರು ಸಿಎಂ: ಅಶ್ವತ್ಥನಾರಾಯಣ್ ಟೀಕೆ

    ಕಾಲ್ತುಳಿತ ದುರಂತವಾದ್ರೂ ಹೋಟೆಲ್‍ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ರು ಸಿಎಂ: ಅಶ್ವತ್ಥನಾರಾಯಣ್ ಟೀಕೆ

    ಬೆಂಗಳೂರು: ಕಾಲ್ತುಳಿತವಾಗಿ ಜನರು ಸಾಯುವುದು ಗೊತ್ತಿದ್ದರೂ ಮುಖ್ಯಮಂತ್ರಿಗಳು ಹೋಟೆಲ್‌ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದರು ಎಂದು ಮಾಜಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ್‌ ಟೀಕಿಸಿದರು.

    ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ದುರಾಡಳಿತದ ಸಾಧನೆ ಮಾಡಿದೆ. ಜನರನ್ನು ನಂಬಿಸಿ ಗರಿಷ್ಠ ಬಹುಮತ ಪಡೆದು ಆಡಳಿತಕ್ಕೆ ಬಂದ ಕಾಂಗ್ರೆಸ್ ಪಕ್ಷ ಜನರಿಗೆ ದ್ರೋಹ, ಅನ್ಯಾಯ, ಭ್ರಷ್ಟಾಚಾರವನ್ನೇ ಮಾಡುತ್ತ ಬಂದಿದೆ. ಪ್ರಾರಂಭದ ದಿನದಿಂದ ನೂರಾರು ಹಗರಣ ಮಾಡಿದೆ. ಒಂದೇ ಒಂದು ಒಳ್ಳೆಯ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಹಿರಿಯರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಲೆಗೆ ಹೊಡೆದಂತೆ ಸುಳ್ಳು ಹೇಳಲು ಸಮಾವೇಶ ಮಾಡುತ್ತಿದ್ದಾರೆ. ಇವರಿಗೆ ಏನಾದರೂ ಆತ್ಮಸಾಕ್ಷಿ ಬೇಕಲ್ಲವೇ? ಸುಳ್ಳನ್ನೇ ಸತ್ಯವೆಂದು ಹೇಳಿಕೊಂಡು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ನಿವೇಶನ ವಾಪಸ್ ಮಾಡಿದ ಮುಡಾ ಹಗರಣ, ಹಣ ಅವ್ಯವಹಾರ ಆದುದನ್ನು ಸ್ವತಃ ಸಿಎಂ ಒಪ್ಪಿಕೊಂಡ ವಾಲ್ಮೀಕಿ ನಿಗಮದ ಹಗರಣ ಸಂಬಂಧ ಏನು ಹೇಳುತ್ತಾರೆ? ಅಧಿಕಾರಿಗಳ ಆತ್ಮಹತ್ಯೆ ಬಗ್ಗೆ ಹೇಳುತ್ತಾರಾ? ಪ್ರತಿಯೊಂದರಲ್ಲೂ ಕಮಿಷನ್, ಹಗಲುದರೋಡೆ ವಿಚಾರ ತಿಳಿಸುತ್ತಾರಾ ಎಂದು ಪ್ರಶ್ನಿಸಿದರು.

    ಕೆಲವೆಡೆ ಕಮಿಷನ್ ಶೇ.100ಕ್ಕೆ ಏರಿದೆ. ಇನ್ನೂ ಕೆಲವು ಕಡೆ ಶೇ.80, ಶೇ.60 ಭ್ರಷ್ಟಾಚಾರ ಇವರದು. ದುಡ್ಡಿಲ್ಲದೇ ವರ್ಗಾವಣೆ ಇಲ್ಲ. ಈ ಸಂಬಂಧ ಎಷ್ಟೋ ಜನರು ದಲಿತ ವರ್ಗಕ್ಕೆ ಸೇರಿದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕೊಲೆಗಡುಕರ, ಸಾವಿನ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡರು.

    ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತವಾಗಿ 11 ಜನರ ಸಾವು ಕುರಿತು ಮಾತನಾಡಿದ ಅವರು, ಕಾನೂನು-ಸುವ್ಯವಸ್ಥೆ ಕಾಪಾಡುವುದು ಯಾರ ಜವಾಬ್ದಾರಿ? ಅನುಮತಿ ಇಲ್ಲದೇ ಇದ್ದಲ್ಲಿ ಡಿಸಿಎಂ ಸ್ಟೇಡಿಯಂಗೆ ಹೋದದ್ದು ಯಾಕೆ? ಜನರು ಸಾಯುತ್ತಿದ್ದರೂ ಅವರು ಕಪ್‍ಗೆ ಮುತ್ತು ಕೊಡುತ್ತ ಇದ್ದರಲ್ಲವೇ? ಜನರು ಸಾಯುವುದು ಗೊತ್ತಿದ್ದರೂ ಮುಖ್ಯಮಂತ್ರಿಗಳು ಹೋಟೆಲ್‍ನಲ್ಲಿ ಮಸಾಲೆ ದೋಸೆ ತಿನ್ನುತ್ತಿದ್ದರು ಎಂದು ಆಕ್ಷೇಪಿಸಿದರು.

    ಕಾರ್ಯಕ್ರಮಕ್ಕೆ ಅನುಮತಿ ಇಲ್ಲದಿದ್ದರೂ ವಿಧಾನಸೌಧದ ಬಳಿ ವಿಜಯೋತ್ಸವ ನಡೆಸಿದ್ದೇಕೆ? ಈ ಸರ್ಕಾರವನ್ನೂ ಆರ್‌ಸಿಬಿ, ಕೆಸಿಎ, ಡಿಎನ್‍ಎ ನಡೆಸುತ್ತಿದೆಯೇ? ಇವರಿಗೆ ನಾಚಿಕೆ ಆಗಬೇಕು. ಜನರ ಜೀವ ತೆಗೆಯುವುದೇ ಇವರ ಸಾಧನೆ. ಇವರು ಅಧಿಕಾರದಲ್ಲಿ ಇರುವ ಯಮದೂತರು. ವರದಿ ಕೊಟ್ಟಿರುವುದು ನಿಜಕ್ಕೂ ಖಂಡನೀಯ. ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮ ಬೇಡ ಎಂಬ ಸ್ಪಷ್ಟ ನಿಲುವು ತೆಗೆದುಕೊಂಡಿದ್ದರು. ವಿರಾಟ್ ಕೊಯ್ಲಿ ಮೇಲೆ ಜವಾಬ್ದಾರಿ ಹೊರಿಸಿದ್ದಾರೆ. ಈಗ ಇಂಡಸ್ತ್ರಿಗಳು ಓಡಿ ಹೋಗುತ್ತಿವೆ. ಇನ್ನು ಯಾವುದೇ ಕ್ರೀಡೆಗಳು ನಡೆಯದಂತೆ ಆಗಲಿದೆ ಎಂದು ತಿಳಿಸಿದರು.

    ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಉಪಸ್ಥಿತರಿದ್ದರು.

  • ಜನಹಿತಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟು ತೊಲಗಲಿ: ಅಶ್ವತ್ಥನಾರಾಯಣ್

    ಜನಹಿತಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟು ತೊಲಗಲಿ: ಅಶ್ವತ್ಥನಾರಾಯಣ್

    ಬೆಂಗಳೂರು: ಜನಹಿತಕ್ಕಾಗಿ ಕಾಂಗ್ರೆಸ್ (Congress) ಪಕ್ಷದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ (C N Ashwath Narayan)ಆಗ್ರಹಿಸಿದ್ದಾರೆ.

    ಲೂಟಿ ಹೊಡೆಯುವುದೇ ಕಾಂಗ್ರೆಸ್ ಸರಕಾರದ ನೀತಿಯಾಗಿದೆ. ಸಾಕ್ಷಿ ಸಮೇತ ಹಿಡಿದರೂ ಸಿಎಂ ಸಿದ್ದರಾಮಯ್ಯನವರು (CM Siddaramaiah) ರಾಜೀನಾಮೆ ಕೊಡುವುದಿಲ್ಲ. ಜನರ ಭಾವನೆಯನ್ನು ಇವರು ಗೌರವಿಸುವುದಿಲ್ಲ. ಕುರ್ಚಿಗೆ ಅಂಟಿಕೊಂಡೇ ಇರುವ ಭಂಡತನ ಇವರದು ಎಂದು ಟೀಕಿಸಿದ್ದಾರೆ.ಇದನ್ನೂ ಓದಿ: ಧರ್ಮಗುರುಗಳ ಮೂಲಕ ಮುಸ್ಲಿಮರ ವಿವಾಹ ನೋಂದಣಿಗೆ ತಡೆ – ಹೊಸ ಮಸೂದೆಗೆ ಅಸ್ಸಾಂ ಕ್ಯಾಬಿನೆಟ್ ಅನುಮೋದನೆ

    ರಾಜ್ಯದ ಹಿತ ರಕ್ಷಣೆಗಾಗಿ ನಾವು ಭ್ರಷ್ಟ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸಬೇಕು. ಪ್ರತಿನಿತ್ಯ ಹೋರಾಟ ಮಾಡುವುದೇ ನಮ್ಮ ಕರ್ತವ್ಯವಾಗಿದೆ. ಇವರು ಸಂವಿಧಾನ ಕೈಯಲ್ಲಿ ಹಿಡಿದು ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ತಮ್ಮ ಕರ್ತವ್ಯ, ಜವಾಬ್ದಾರಿಗಳ ಕುರಿತು ಮಾತನಾಡುವುದಿಲ್ಲ. ಸಂವಿಧಾನದ ಆಶಯಗಳನ್ನು ಗೌರವಿಸುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇವರಿಗೆ ಮದ ಬಂದಿದೆ, ದುರಹಂಕಾರ ಹೆಚ್ಚಾಗಿದೆ. ಬಾಂಗ್ಲಾದೇಶದ ಪರಿಸ್ಥಿತಿ ನಿರ್ಮಿಸುವುದಾಗಿ ಹೇಳುತ್ತಾರೆ. ನಾಲಾಯಕ್ ಗವರ್ನರ್ ಎನ್ನುತ್ತಾರೆ. ರಾಜಭವನಕ್ಕೆ ನುಗ್ಗಿ ಹಲ್ಲೆ ಮಾಡುವುದಾಗಿ ಹೇಳುತ್ತಾರೆ ಎಂದು ಖಂಡಿಸಿದ್ದಾರೆ.ಇದನ್ನೂ ಓದಿ: J&K Assembly Polls | ಎನ್‌ಸಿ-ಕಾಂಗ್ರೆಸ್ ಮೈತ್ರಿ ಬಹುತೇಕ ಖಚಿತ; ಮುಂದುವರಿದ ಸೀಟು ಹಂಚಿಕೆ ಮಾತುಕತೆ

  • ಸ್ವಲ್ಪವಾದರೂ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ಕೊಡಿ: ಸಿಎಂಗೆ ಡಾ.ಅಶ್ವತ್ಥ್ ನಾರಾಯಣ್ ಸವಾಲ್

    ಸ್ವಲ್ಪವಾದರೂ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ಕೊಡಿ: ಸಿಎಂಗೆ ಡಾ.ಅಶ್ವತ್ಥ್ ನಾರಾಯಣ್ ಸವಾಲ್

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಸ್ವಲ್ಪವಾದರೂ ಆತ್ಮಸಾಕ್ಷಿ, ನೈತಿಕತೆ, ಮೌಲ್ಯ, ಸಂವಿಧಾನಕ್ಕೆ ನಿಷ್ಠೆ ಇದ್ದರೆ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ (C.N. Ashwath Naraya) ಅವರು ಆಗ್ರಹಿದ್ದಾರೆ.

    ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ವಾಲ್ಮೀಕಿ ನಿಗಮ, ಮುಡಾ ಹಗರಣ (MUDA Scam) ಸೇರಿ ಎರಡು ಹಗರಣಗಳಲ್ಲಿ ಅಧಿಕಾರ ದುರ್ಬಳಕೆ ಆಗಿರುವುದು ಸ್ಪಷ್ಟವಾಗಿ ಗೋಚರಿಸಿದೆ. ನಾಡಿನ ಕೊನೆಯ ಮನುಷ್ಯರೂ ನಿಮ್ಮ ಕಡೆ ಬೆರಳು ತೋರಿಸುವಂತಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

    ಮುಖ್ಯಮಂತ್ರಿಗಳು ತಪ್ಪು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಭ್ರಷ್ಟ ಮುಖ್ಯಮಂತ್ರಿಯಾಗಿ ನೀವು ನಾಡಿನ ಜನತೆಗೆ ನ್ಯಾಯ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಇದರಲ್ಲಿ ವೈಯಕ್ತಿಕ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ನಾಡಿನ ಹಿತ, ಜನರ ಹಿತಕ್ಕಾಗಿ ಜನಪರ, ಭ್ರಷ್ಟಾಚಾರ ರಹಿತ ಆಡಳಿತ ಕೊಡಬೇಕಿತ್ತು. ಆದ್ದರಿಂದ ಭ್ರಷ್ಟ ಮುಖ್ಯಮಂತ್ರಿ ಯಾವುದೇ ಕಾರಣಕ್ಕೂ ಅಧಿಕಾರದಲ್ಲಿ ಮುಂದುವರಿಯಬಾರದು. ಮೇಲ್ನೋಟಕ್ಕೇ ಆರೋಪ ಇರುವ ಕಾರಣ, ತಜ್ಞರ ಸಲಹೆ ಪಡೆದು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಆದರೂ, ಅಧಿಕಾರದಲ್ಲಿ ಮುಂದುವರೆಯಲು ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

  • ಸಿದ್ದರಾಮಯ್ಯ ಬರೀ ಸೌಂಡ್ ಬಾಕ್ಸ್, ಅಬ್ಬರ ಮಾಡುತ್ತೆ ಅಷ್ಟೇ: ಅಶ್ವಥ್ ನಾರಾಯಣ್

    ಸಿದ್ದರಾಮಯ್ಯ ಬರೀ ಸೌಂಡ್ ಬಾಕ್ಸ್, ಅಬ್ಬರ ಮಾಡುತ್ತೆ ಅಷ್ಟೇ: ಅಶ್ವಥ್ ನಾರಾಯಣ್

    ಮಡಿಕೇರಿ: ಒಬ್ಬ ವ್ಯಕ್ತಿಯಾಗಿ ಮೋದಿ (Narendra Modi) ನಮಗೆ ಎದುರಾಳಿಯೇ ಅಲ್ಲ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರವಾಗಿ, ಸಿದ್ದರಾಮಯ್ಯ ಅವರು ಬರೀ ಸೌಂಡ್ ಬಾಕ್ಸ್. ಸೌಂಡ್ ಬಾಕ್ಸ್ (Sound Box) ಬರೀ ಅಬ್ಬರ ಮಾಡುತ್ತೇ ಅಷ್ಟೇ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ವಾಗ್ದಾಳಿ ನಡೆಸಿದ್ದಾರೆ.

    ಕೊಡಗಿನ (Kodagu) ಸೋಮವಾರಪೇಟೆಯಲ್ಲಿ ಮಾತಾನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಅನುಕರಿಸಿ, ಹೂಂಕರಿಸಿ ವ್ಯಂಗ್ಯ ಮಾಡಿದರು. ಸಿದ್ದರಾಮಯ್ಯ ಅವರು ಬರೀ ಸೌಂಡ್ ಬಾಕ್ಸ್. ಸೌಂಡ್ ಬಾಕ್ಸ್ ಬರೀ ಅಬ್ಬರ ಮಾಡುತ್ತೆ ಅಷ್ಟೇ. ಆದರೆ ಕೆಲಸ ಮಾಡುವ ಅನುಭವ, ಕಾಳಜಿ ಸಿದ್ದರಾಮಯ್ಯನವರಿಗೆ ಇಲ್ಲ. ಬರೀ ದ್ವೇಷ, ಅಧಿಕಾರ ದುರ್ಬಳಕೆ ಮಾಡುವುದಷ್ಟೇ ಇವರ ಕೆಲಸ. ಈಗ ಲೂಟಿ ಮಾಡಿರುವ ಹಣವನ್ನು ಚುನಾವಣೆಯಲ್ಲಿ ದುರ್ಬಳಕೆ ಮಾಡಲು ಹೊರಟಿದ್ದಾರೆ. ಹಣ ಬಲದ ಮೇಲೆ ಗೆಲ್ಲುತ್ತೇವೆ ಎನ್ನುವ ಹುಚ್ಚು ವಿಶ್ವಾಸದಲ್ಲಿ ಇದ್ದಾರೆ. ಆದರೆ ಸಂಪೂರ್ಣ ಸೋಲುತ್ತಾರೆ ಎಂದರು. ಇದನ್ನೂ ಓದಿ: ಮೈತ್ರಿಗೆ ಬಿಗ್ ಶಾಕ್ – ಪ್ರೀತಂಗೌಡ ಆಪ್ತರಿಂದ `ಕೈ’ ಅಭ್ಯರ್ಥಿಗೆ ಬೆಂಬಲ

    ಕಳೆದ ಬಾರಿ ಒಂದೇ ಒಂದು ಸ್ಥಾನ ಗೆದ್ದಿದ್ದರು. ಆದರೆ ಈ ಬಾರಿ ಅದನ್ನು ಕಳೆದುಕೊಳ್ಳುತ್ತಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೃದಯವಂತ ಡಾ. ಮಂಜುನಾಥ್ ಗೆಲ್ಲುತ್ತಾರೆ. ಆ ಮೂಲಕ ಸಿದ್ದರಾಮಯ್ಯ, ಡಿಕೆಶಿ ಟೀಂಗೆ ಬುದ್ಧಿ ಕಲಿಸಲಿದ್ದಾರೆ. ಅಲ್ಲದೇ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮುಕ್ತ ದೇಶವಾಗಬೇಕಿತ್ತು. ಕಾಂಗ್ರೆಸ್ ರಾಜ್ಯಕ್ಕೆ ಒಂದು ಶಾಪವಿದ್ದಂತೆ. ಈ ಶಾಪ ಮುಕ್ತ ಮಾಡಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜನ ಸೋಲಿಸಲಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದು ಬಿದ್ದವನ ಮೇಲೆ ಬಸ್ ಹರಿದಿದೆ: ಶೋಭಾ ಕರಂದ್ಲಾಜೆ

  • ಕಾಡಿಗೆ ಸಫಾರಿ ಹೋದಾಗ ಸಫಾರಿ ಡ್ರೆಸ್‌ನಲ್ಲಿ ಇರಬೇಕು – ಹೆಚ್‌ಡಿಕೆಗೆ ಅಶ್ವಥ್ ನಾರಾಯಣ್ ತಿರುಗೇಟು

    ಕಾಡಿಗೆ ಸಫಾರಿ ಹೋದಾಗ ಸಫಾರಿ ಡ್ರೆಸ್‌ನಲ್ಲಿ ಇರಬೇಕು – ಹೆಚ್‌ಡಿಕೆಗೆ ಅಶ್ವಥ್ ನಾರಾಯಣ್ ತಿರುಗೇಟು

    ಬೆಂಗಳೂರು: ಕಾಡಿಗೆ ಸಫಾರಿಗೆಂದು (Safari) ಹೋದಾಗ ಸಫಾರಿ ಡ್ರೆಸ್‌ನಲ್ಲಿ ಇರಬೇಕು. ನಾಡಿಗೆ ಬಂದಾಗ ನಾಡಿನ ಡ್ರೆಸ್‌ನಲ್ಲಿ ಇರಬೇಕು. ಆದರೆ ಕುಮಾರಸ್ವಾಮಿ (H.D.Kumaraswamy) ಅವರಿಗೆ ಅದು ಎರಡೂ ಹಾಕಲು ಬರುವುದಿಲ್ಲವಲ್ಲ, ಏನುಮಾಡುವುದು ಎಂದು ಮೋದಿ (Narendra Modi) ಬಂಡೀಪುರ (Bandipur) ಅರಣ್ಯ ಭೇಟಿಗೆ ಕುಮಾರಸ್ವಾಮಿ ವ್ಯಂಗ್ಯ ವಿಚಾರವಾಗಿ ಸಚಿವ ಅಶ್ವಥ್ ನಾರಾಯಣ್ (C.N.Ashwath Narayan) ತಿರುಗೇಟು ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಯಾವ ಯಾವ ಜಾಗಕ್ಕೆ ಯಾವ ಯಾವ ವೇಷಗಳನ್ನು ಹಾಕಬೇಕೋ ಅದಕ್ಕೆ ಸೂಕ್ತವಾದ ಬಟ್ಟೆಗಳನ್ನು ಹಾಕುತ್ತಾರೆ. ಇಡೀ ವಿಶ್ವವನ್ನೇ ನಾವು ಪ್ರತಿನಿಧಿಸುತ್ತಿದ್ದೇವೆ. 140 ಕೋಟಿ ಜನರಿಗೆ ನಾಯಕ ಅವರು. ಅಂತಹ ರೋಲ್ ಮಾಡೆಲ್‌ಗೆ (Roll Model) ರೋಲ್ ಮಾಡೆಲ್ ತರಹ ಇರಬೇಡಿ ಸ್ವಾಮಿ ಎಂದು ಹೇಳಲಾಗುವುದಿಲ್ಲ ಎಂದರು. ಇದನ್ನು ಓದಿ: ಮೋದಿ ಕಾಡು ಪ್ರಾಣಿಗಳನ್ನು ನೋಡಿದರೆ ಜನ ವೋಟು ಒತ್ತುತ್ತಾರಾ: ಹೆಚ್ಡಿಕೆ ವ್ಯಂಗ್ಯ 

    ಕೋವಿಡ್ (Covid) ಸಮಯದಲ್ಲಿ ಕುಮಾರಸ್ವಾಮಿ ಎಲ್ಲಿದ್ದರು? ಕಾಂಗ್ರೆಸ್‌ನವರು (Congress) ಲಸಿಕೆ ತೆಗೆದುಕೊಳ್ಳಬೇಡಿ ಎಂದಿದ್ದರು. ಇಡೀ ವಿಶ್ವದಲ್ಲಿ ಭಾರತ ಮಾದರಿಯಾಗಿ ಕೋವಿಡ್ ನಿರ್ವಹಣೆ ಮಾಡಿದೆ. ಸುಮ್ಮನೆ ಪಾಪ ಏನೋ ಹೇಳಬೇಕು ಎಂದು ಹೇಳುತ್ತಿದ್ದಾರೆ ಅಷ್ಟೇ. ಆದರೆ ಜನರು ಬುದ್ದಿವಂತರಿದ್ದಾರೆ ಎಂಬುದು ಗೊತ್ತಿರಲಿ. ಇಂತಹ ಹೇಳಿಕೆಗಳಿಂದ ಅವರು ಸೆಲ್ಫ್ ವಿಕೆಟ್ ಹೊಡೆದುಕೊಳ್ಳುತ್ತಿದ್ದಾರೆ. ಮೋದಿಯವರ ಬಗ್ಗೆ ಕಿಡಿಕಾರಿದರೆ ಅದು ಇವರಿಗೆ ರಿವರ್ಸ್ ಗೇರ್ ಆಗುತ್ತದೆ ಎಂದು ಹರಿಹಾಯ್ದರು. ಇದನ್ನು ಓದಿ: ಬಂಡೀಪುರದಲ್ಲಿ ಮೋದಿ ಸಫಾರಿ – ಪ್ರಕೃತಿ ಸೌಂದರ್ಯ ಸವಿದ ಪ್ರಧಾನಿ 

     

    ನಂದಿನಿ (Nandini) ಉಳಿಸಿ ಅಭಿಯಾನ ವಿಚಾರದ ಕುರಿತು ಮಾತನಾಡಿದ ಅವರು, ನಮ್ಮ ನಂದಿನಿಗೆ ಯಾರೂ ಸರಿಸಾಟಿಯಲ್ಲ. ನಂದಿನಿಯ ಗುಣಮಟ್ಟಕ್ಕಾಗಲಿ, ಬೆಲೆಯಲ್ಲಾಗಲಿ, ವ್ಯವಸ್ಥೆಯಲ್ಲಾಗಲಿ ಯಾವುದೂ ಸರಿಸಾಟಿಯಲ್ಲ. ಇದನ್ನು ರಾಜ್ಯಸರ್ಕಾರವೇ ಸಂಪೂರ್ಣವಾಗಿ ಕೈಗೆತ್ತಿಕೊಂಡು ನಂದಿನಿಗೆ ಎಲ್ಲಾ ರೀತಿಯಾದ ಸಹಕಾರವನ್ನು ನೀಡುತ್ತಿದೆ. ನಂದಿನಿಗೆ ಜಮೀನು ಹಾಗೂ ಹಣ ನೀಡುವ ವಿಚಾರದಲ್ಲಿ ರಾಜ್ಯಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೇ ಒಂದು ಲೀಟರ್ ಹಾಲಿಗೆ 5 ರೂ. ಸಬ್ಸಿಡಿಯನ್ನೂ ಕೊಟ್ಟಿದೆ. ಈ ರೀತಿಯಾಗಿ ನಮ್ಮ ರಾಜ್ಯದ ಹಾಲು ಉತ್ಪಾದಕರು ಮತ್ತು ರೈತರಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದೇವೆ. ನಮ್ಮ ಅಭಿಮಾನದ ಸಂಕೇತ ನಂದಿನಿ. ಆದ್ದರಿಂದ ನಂದಿನಿಗೆ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಹೀಗಾಗಿ ಎಂತಹ ಸ್ಪರ್ಧೆ ಬಂದರೂ ನಮ್ಮ ಹತ್ತಿರ ಯಾರೂ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಗದಗ ಜಿಲ್ಲೆಯಲ್ಲಿ ಮಾಜಿ, ಹಾಲಿ ಶಾಸಕರ ಕೊನೆಯ ಕಸರತ್ತು  

    ಬಿಜೆಪಿ (BJP) ಪಟ್ಟಿ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಅವರು, ನಾಳೆ ಬಿಜೆಪಿಯ ಟಿಕೆಟ್ ಪ್ರಕಟವಾಗುವ ಸಾಧ್ಯತೆಯಿದೆ. ನಾಳೆ ಮೊದಲ ಲಿಸ್ಟ್ ಬಿಡುಗಡೆಯಾಗಲಿದ್ದು, ಎರಡನೇ ಲಿಸ್ಟ್ 13ನೇ ದಿನಾಂಕದಂದು ಬಿಡುಗಡೆಯಾಗಲಿದೆ ಎಂದರು.

    ಹೊಸಬರಿಗೆ ಟಿಕೆಟ್ ಸಿಗಲಿದೆಯಾ ಎಂಬ ಪ್ರಶ್ನೆಗೆ ಕಾದು ನೋಡಿ ಎಂದು ಉತ್ತರಿಸಿದರು. ಇದನ್ನು ಓದಿ: ವಿಕಲಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮೋದಿ

  • ಬಿಜೆಪಿಯ ವಾಟ್ಸಪ್ ಯುನಿವರ್ಸಿಟಿ ಹೊಸ ಇತಿಹಾಸ ಬರೆಯಲು ಯತ್ನಿಸುತ್ತಿದೆ- ಡಿಕೆಶಿ

    ಬಿಜೆಪಿಯ ವಾಟ್ಸಪ್ ಯುನಿವರ್ಸಿಟಿ ಹೊಸ ಇತಿಹಾಸ ಬರೆಯಲು ಯತ್ನಿಸುತ್ತಿದೆ- ಡಿಕೆಶಿ

    ಬೆಳಗಾವಿ: ಬಿಜೆಪಿಯ (BJP) ವಾಟ್ಸಪ್ ಯುನಿವರ್ಸಿಟಿ ಹೊಸ ಇತಿಹಾಸ ಬರೆಯಲು ಯತ್ನಿಸುತ್ತಿದೆ. ಮಹನೀಯರ ಜೀವನ ಚರಿತ್ರೆ ಬಗ್ಗೆ ಸುಳ್ಳು ಹೇಳಲು ಹೊರಟಿದೆ. ಕಾಲ್ಪನಿಕ ಕಥೆಗಳ ಮೂಲಕ ತಪ್ಪು ಸಂದೇಶವನ್ನು ರವಾನಿಸಲಾಗುತ್ತಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

    ನಗರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶ್ವಥ್ ನಾರಾಯಣ್ (C.N.Ashwath Narayan) ಹಾಗೂ ಶೋಭಾ ಕರಂದ್ಲಾಜೆ (Shobha karandlaje) ಟಿಪ್ಪು ಬಗ್ಗೆ ತಪ್ಪು ಮಾಹಿತಿ ನೀಡಲು ಹೊರಟಿದ್ದಾರೆ. ಟಿಪ್ಪು ಸಾಧನೆ ಬಗ್ಗೆ ಇತಿಹಾಸವೇ ಇದೆ. ಇದರ ಕುರಿತು ಸಾಕಷ್ಟು ಗ್ರಂಥಗಳಿವೆ. ಈಗ ಉರಿಗೌಡ, ನಂಜೇಗೌಡ ಬಗ್ಗೆ ಚಿತ್ರ ಮಾಡುತ್ತಿದ್ದಾರೆ. ಒಕ್ಕಲಿಗರ ಮತ ಸೆಳೆಯಲು ಮತ್ತು ಅವರ ಭಾವನೆಗಳಿಗೆ ಧಕ್ಕೆ ತರಲು ಬಿಜೆಪಿಯವರು ಮುಂದಾಗಿದ್ದಾರೆ. ನಿರ್ಮಲಾನಂದ ಸ್ವಾಮೀಜಿ (Nirmalanandanatha Swamiji) ಇದರ ಬಗ್ಗೆ ಹೋರಾಟ ಮಾಡಬೇಕು. ಸಾಹಿತಿಗಳು, ಹೋರಾಟಗಾರರು ಹಾಗೂ ಎಲ್ಲಾ ಸಮಾಜಗಳ ಮಠಾಧೀಶರು ಇದಕ್ಕೆ ಕೈಜೋಡಿಸಬೇಕು ಎಂದರು. ಇದನ್ನೂ ಓದಿ: ಶೋಭಾ ಡೆವಲಪರ್ಸ್ ಕಚೇರಿಗೆ ಐಟಿ ಶಾಕ್

    ಹೆಸರುಗಳನ್ನು ಬದಲಾವಣೆ ಮಾಡಲು ಸಾಧ್ಯವೇ? ಬಿಜೆಪಿಯ ವಾಟ್ಸಪ್ ಯುನಿವರ್ಸಿಟಿ ಹೊಸ ಇತಿಹಾಸ ಬರೆಯಲು ಯತ್ನಿಸುತ್ತಿದೆ. ಇದನ್ನು ಖಂಡಿಸಲು ನಿರ್ಮಲಾನಂದ ಸ್ವಾಮೀಜಿ ಸಭೆ ನಡೆಸಬೇಕು. ಯಾವ ನಿರ್ದೇಶಕ ಬೇಕಾದರೂ ಬರಲಿ, ಅವರನ್ನು ಎದುರಿಸಲು, ಉತ್ತರ ಕೊಡಲು ನಾವು ಸಿದ್ಧರಾಗಿದ್ದೇವೆ. ಒಕ್ಕಲಿಗ ಸಮಾಜಕ್ಕೆ ಅಗೌರವ ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದಕ್ಕೆ ನಾವು ಹೋರಾಟ ಮಾಡುತ್ತೇವೆ, ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಖಲಿಸ್ತಾನಿ ನಾಯಕರು ಮಾನವ ಬಾಂಬರ್‌ಗಳನ್ನ ರೂಪಿಸುತ್ತಿದ್ದಾರೆ – ಗುಪ್ತಚರ ಇಲಾಖೆ ಮಾಹಿತಿ

    ಬಿಜೆಪಿ ಕಾಲ್ಪನಿಕ ಕಥೆ ಮೂಲಕ ತಪ್ಪು ಸಂದೇಶ ರವಾನಿಸುತ್ತಿದೆ. ಯಾವುದೋ ಒಂದು ಪುಸ್ತಕದಲ್ಲಿ ಈ ಬಗ್ಗೆ ಸಣ್ಣ ಉಲ್ಲೇಖ ಇದೆ. ಸಂಶೋಧನೆ ಮೂಲಕ ಇತಿಹಾಸ ಬರೆದಿರುತ್ತಾರೆ, ಸಂಶೋಧನೆ ಮೂಲಕವೇ ಇತಿಹಾಸ ಇರಬೇಕು. ಉರಿಗೌಡ-ನಂಜೇಗೌಡ ಹೆಸರನ್ನು ಇಷ್ಟು ದಿನ ಎಲ್ಲಿ ಕೇಳಿದ್ದೀರಿ? ಬಿಜೆಪಿ ನಾಯಕರ ಮೇಲೆ ಮೊದಲು ಕೇಸ್ ಹಾಕಬೇಕು. ಯಾರು ಪ್ರಚೋದನೆ ಮಾಡುತ್ತಿದ್ದಾರೆ ಅವರ ಮೇಲೆ ಕೇಸ್ ಹಾಕಬೇಕು. ಪೇ ಸಿಎಂ ಅಭಿಯಾನ ಆದಾಗ ನನ್ನ ಮತ್ತು ಸಿದ್ದರಾಮಯ್ಯ (Siddaramaiah) ಮೇಲೆ ಕೇಸ್ ಹಾಕಿದ್ದರು. ಈಗೇಕೆ ಸೈಲೆಂಟ್ ಆಗಿದ್ದೀರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಬಂತು ಮೊದಲ ಎಫ್‌ಡಿಐ – ಶಾಪಿಂಗ್‌ ಮಾಲ್‌ ನಿರ್ಮಾಣಕ್ಕೆ ಭೂಮಿ ಪೂಜೆ

    ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಶೋಭಾ ಕರಂದ್ಲಾಜೆ, ಅಶ್ವಥ್ ನಾರಾಯಣ್ ಮತ್ತು ಸಿಟಿ ರವಿಯವರು (C.T.Ravi) ಒಕ್ಕಲಿಗ ಹಾಗೂ ಹಿಂದೂ ವಿರೋಧಿಗಳು. ನಿರ್ಮಲಾನಂದ ಸ್ವಾಮೀಜಿ ಯಾವ ಡೈರೆಕ್ಟರನ್ನು ಕರೆದು ಮಾತನಾಡಬೇಡಿ. ಕರೆದರೆ ಒಕ್ಕಲಿಗ ಸಮಾಜ ತಲೆ ತಗ್ಗಿಸಿದಂತೆ ಆಗುತ್ತದೆ. ನಾನೂ ಕೂಡ ಸ್ವಾಮೀಜಿಗೆ ಪತ್ರಬರೆದು ಮನವಿ ಮಾಡುತ್ತೇನೆ. ಈ ಹೋರಾಟದ ನಾಯಕತ್ವ ನಿರ್ಮಲಾನಂದ ಸ್ವಾಮೀಜಿಯವರು ವಹಿಸಿಕೊಳ್ಳಬೇಕು. ಎಲ್ಲಾ ಸಮಾಜದ ಸ್ವಾಮೀಜಿಗಳು ಇದಕ್ಕೆ ಕೈಜೋಡಿಸಬೇಕು. ಒಕ್ಕಲಿಗ ಸ್ವಾಮೀಜಿ ಮೊದಲು ಹೋರಾಟ ಮಾಡಲಿ. ಬಳಿಕ ಪಕ್ಷದ ಕಡೆಯಿಂದ ಹೋರಾಟ ಮಾಡಲು ಯೋಚಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ಫೋಟೋ ಸ್ಟೇಟಸ್ ಹಾಕಿದ್ದ ಯವಕನಿಗೆ ಹಲ್ಲೆ – ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್‌

    ನಿರ್ಮಲಾನಂದ ಸ್ವಾಮೀಜಿಯವರನ್ನು ಮುನಿರತ್ನ (Munirathna) ಭೇಟಿ ಮಾಡಿ ಮಾತುಕತೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿ ಹಾಗೂ ಮುನಿರತ್ನ ಸಭೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಈ ಚಿತ್ರ ಆಗಬಾರದೆಂದು ಸ್ವಾಮೀಜಿಗೆ ನಾನು ಮನವಿ ಮಾಡುತ್ತೇನೆ ಎಂದರು. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಬ್ರೇಕ್‌ – ಸಿನಿಮಾ ಮಾಡಲ್ಲ ಎಂದ ಮುನಿರತ್ನ

    ಬೆಳಗಾವಿಯಲ್ಲಿ (Belagavi) ರಾಹುಲ್ ಗಾಂಧಿ (Rahul Gandhi) ಸಮಾವೇಶದ ಕುರಿತು ಮಾತನಾಡಿದ ಅವರು, ಭಾರತ ಜೋಡೋ ಯಾತ್ರೆ ಬಳಿಕ ಬೆಳಗಾವಿಯಲ್ಲಿ ರಾಹುಲ್ ಗಾಂಧಿ ಯುವ ಕ್ರಾಂತಿ ಸಮಾವೇಶ ನಡೆಸುತ್ತಿದ್ದಾರೆ. ಇಂದು ಕಾಂಗ್ರೆಸ್ಸಿಗೆ (Congress) ಐತಿಹಾಸಿಕ ಕ್ಷಣ. ದೇಶ ಹಾಗೂ ರಾಜ್ಯದ ಬದಲಾವಣೆಗೆ ಯುವಕರು ಎಚ್ಚರಿಕೆ ವಹಿಸಬೇಕು. ಮಹಿಳೆಯರು, ಯುವಕರು ಒಗ್ಗಟ್ಟಾದಾಗ ಬದಲಾವಣೆ ಸಾಧ್ಯವಾಗುತ್ತದೆ. ಮಹಿಳೆಯರು, ಯುವಕರಿಗೆ ಜಾಗೃತಿಯ ಅಗತ್ಯವಿದೆ. ಅದಕ್ಕಾಗಿ ರಾಹುಲ್ ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಂದು ಕಿತ್ತೂರು ಕರ್ನಾಟಕ ಬೆಳಗಾವಿಯಲ್ಲಿ ರಾಹುಲ್ ಗಾಂಧಿ ಹವಾ

    ಪ್ರಿಯಾಂಕಾ ಗಾಂಧಿ (Priyanka Gandhi Vadra) ಬೆಂಗಳೂರಿಗೆ (Bengaluru) ಬಂದು ಗೃಹಲಕ್ಷ್ಮಿ ಯೋಜನೆ ಘೋಷಿಸಿದರು. ಅದಕ್ಕಾಗಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಸರ್ಕಾರ ಕೂಡ ಬಿಪಿಎಲ್ ಕಾರ್ಡುದಾರರಿಗೆ ನೀಡುವ ಯೋಜನೆಗೆ ಮುಂದಾಗಿದೆ. ನಮ್ಮ ಗ್ಯಾರಂಟಿ ಕಾರ್ಡ್ ಬಗ್ಗೆ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ, ಮಾಡಲಿ. ಚುನಾವಣೆಯಲ್ಲಿ 500ಕ್ಕೂ ಅಧಿಕ ಭರವಸೆಯನ್ನು ಪ್ರಣಾಳಿಕೆಯಲ್ಲಿ ಹಾಕಿದ್ದಾರೆ. ನಾಲ್ಕು ಬಜೆಟ್ ಮಂಡಿಸುವ ಅವಕಾಶ ಇದ್ದರೂ ಬಹುತೇಕ ಯೋಜನೆ ಜಾರಿಯಾಗಲಿಲ್ಲ. ಕಾಂಗ್ರೆಸ್ ಯೋಜನೆ ನೋಡಿ ಬಿಜೆಪಿ ಸರ್ಕಾರ ನಮ್ಮನ್ನು ಫಾಲೋ ಮಾಡುತ್ತಿದೆ. ಗೃಹಲಕ್ಷ್ಮಿಗೆ ಪರ್ಯಾಯವಾಗಿ ಸ್ತ್ರಿಶಕ್ತಿ ಯೋಜನೆ, ಯುವಶಕ್ತಿ ಯೋಜನೆಗೆ ಬಿಜೆಪಿ ಮುಂದಾಗಿದೆ ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳ್ಕರ್‌ಗೆ ಮತ್ತೊಂದು ಶಾಕ್

    ನಾವು ಜನಪರ ಯೋಜನೆ ಬಗ್ಗೆ ವಿಚಾರ ಮಾಡುತ್ತಿದ್ದೇವೆ. ಬಿಜೆಪಿ ಭ್ರಷ್ಟಾಚಾರದ (Corruption) ಬಗ್ಗೆ ಚಿಂತೆ ಮಾಡುತ್ತದೆ. ಬಿಜೆಪಿ ದೇಶದಲ್ಲೇ ಅತಿ ಭ್ರಷ್ಟ ಸರ್ಕಾರವಾಗಿದೆ. ಮಂತ್ರಿಗಳು, ಶಾಸಕರು ನೇರವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನೇಮಕಾತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದ್ದು, ಯುವಕರು ರೋಸಿ ಹೋಗಿದ್ದಾರೆ. ಅಧಿಕಾರ ಇದ್ದಾಗ ಮಾಡದ ಬಿಜೆಪಿಯವರು ಈಗ ಪ್ರಣಾಳಿಕೆಯಲ್ಲಿ ಹಾಕುತ್ತಿದ್ದಾರೆ. ಯುವಕರು, ಮಹಿಳೆಯರನ್ನು ಸೆಳೆಯಲು ಭರವಸೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು. ಇದೇ ವೇಳೆ ಕನಕಪುರಕ್ಕೆ (Kanakapura) ಬರುತ್ತೇನೆ ಎಂಬ ರಮೇಶ್ ಜಾರಕಿಹೊಳಿ (Ramesh Jarakiholi) ವಿಚಾರಕ್ಕೆ ಐ ವಿಶ್ ಹಿಮ್ ಎಂದು ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರುವುದು ಸುಳ್ಳು ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ – ರೇವಣ್ಣ ಸವಾಲು

  • 10 ಕ್ಷೇತ್ರಗಳಿಂದ ನನಗೆ ಆಹ್ವಾನ, ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ: ಡಿ.ಕೆ.ಸುರೇಶ್

    10 ಕ್ಷೇತ್ರಗಳಿಂದ ನನಗೆ ಆಹ್ವಾನ, ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ: ಡಿ.ಕೆ.ಸುರೇಶ್

    ಬೆಂಗಳೂರು: ನನಗೆ ರಾಜ್ಯ ರಾಜಕಾರಣ (Politics) ಮಾಡುವ ಆಸಕ್ತಿಯಿಲ್ಲ. ನಾನು ಚುನಾವಣೆಗೆ (Election) ಸ್ಪರ್ಧೆ ಮಾಡುವ ಆಸಕ್ತಿಯನ್ನೂ ಹೊಂದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ (D.K.Suresh) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಬೇರೆ ಬೇರೆ ಕ್ಷೇತ್ರಗಳಿಂದ ಚುನಾವಣೆ ಸ್ಪರ್ಧೆಗೆ ಆಹ್ವಾನ ನೀಡುತ್ತಿದ್ದಾರೆ. ಚನ್ನಪಟ್ಟಣ, ರಾಜರಾಜೇಶ್ವರಿ ನಗರ ಸೇರಿದಂತೆ ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6 ಕ್ಷೇತ್ರಗಳು, ಹೊರಗಿನ 4 ಕ್ಷೇತ್ರಗಳು ಸೇರಿದಂತೆ ಒಟ್ಟು 10 ಕ್ಷೇತ್ರಗಳಿಂದ ನನ್ನ ಸ್ಪರ್ಧೆಗೆ ಆಹ್ವಾನವಿದೆ. ಆದರೆ ನನಗೆ ರಾಜ್ಯ ರಾಜಕಾರಣದಲ್ಲಿ ಆಸಕ್ತಿಯಿಲ್ಲ. ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಆಸಕ್ತಿಯನ್ನು ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಸ್ತೆ ಕಿತ್ತುಬಂದಿಲ್ಲ, ನ್ಯೂನತೆ ಸರಿ ಮಾಡಲಾಗುತ್ತಿದೆ: ಪ್ರತಾಪ್‌ ಸಿಂಹ 

    ರಾಮನಗರದಲ್ಲಿ (Ramnagar) ನಮ್ಮ ಅಭ್ಯರ್ಥಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ನಾಯಕರು ಹೇಳಿದ ಕೂಡಲೇ ಸ್ಪರ್ಧೆ ಮಾಡುವುದಲ್ಲ. ಸ್ಥಳೀಯವಾಗಿ ಕಾರ್ಯಕರ್ತರ ಜೊತೆ ಚರ್ಚೆ ಮಾಡಬೇಕು. ಅವರ ಜೊತೆ ಮಾತನಾಡಿ ತೀರ್ಮಾನ ಮಾಡಬೇಕಾಗುತ್ತದೆ. ನಾನು ಏಕೈಕ ಸಂಸದನಾಗಿದ್ದೇನೆ. ಕಳೆದ 20 ವರ್ಷಗಳಲ್ಲಿ ಉಪಚುನಾವಣೆಗಳನ್ನು ಮಾಡಿ ರೋಸಿ ಹೋಗಿದ್ದೇನೆ. ಎಲ್ಲಾ ಉಪಚುನಾವಣೆಗಳನ್ನು ನಾವು ಮಾಡಿದ್ದೇವೆ. ಈಗ ಉಪಚುನಾವಣೆ (By Election) ಬಗ್ಗೆ ನನಗೆ ಆಸಕ್ತಿಯಿಲ್ಲ ಎಂದರು. ಇದನ್ನೂ ಓದಿ: ಕಮಲ ಹುಟ್ಟುವುದು ಕೆಸರಲ್ಲಿ, ಅರಳಿದ ಮೇಲೆ ಮುದುಡಲೇ ಬೇಕು – ಸುರೇಶ್‌ಗೌಡ 

    ಉರಿಗೌಡ ನಂಜೇಗೌಡರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಉರಿಗೌಡ ನಂಜೇಗೌಡ ಅವರು ಅಶ್ವಥ್ ನಾರಾಯಣ್ (C.N.Ashwath Narayan) ಅಸ್ವಸ್ಥರಾಗಿದ್ದಾಗ ಸಿಕ್ಕಿರಬೇಕು. ಅಲ್ಲದೇ ಉರಿಗೌಡ ನಂಜೇಗೌಡರ ವಿಚಾರದಲ್ಲಿ ಒಕ್ಕಲಿಗರು ಜಾಗೃತರಾಗಬೇಕು ಎಂಬ ಕುಮಾರಸ್ವಾಮಿ (H.D.Kumaraswamy) ಹೇಳಿಕೆ ಬಗ್ಗೆ, ಈ ಚುನಾವಣಾ ಸಂದರ್ಭದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಗರ್ಭದಲ್ಲಿರುವ ಮಗು ಹೃದಯಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ – ಏಮ್ಸ್ ವೈದ್ಯರ ಸಾಧನೆ

  • ಬಿಟಿಎಸ್ ರಜತೋತ್ಸವ – ಕೇಂದ್ರ ಐಟಿ ಸಚಿವ ವೈಷ್ಣವ್‍ಗೆ ಆಹ್ವಾನ

    ಬಿಟಿಎಸ್ ರಜತೋತ್ಸವ – ಕೇಂದ್ರ ಐಟಿ ಸಚಿವ ವೈಷ್ಣವ್‍ಗೆ ಆಹ್ವಾನ

    ನವದೆಹಲಿ: ನವೆಂಬರ್ 16ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಸಮಾವೇಶದ (ಬಿಟಿಎಸ್) ರಜತೋತ್ಸವ (BTS Rajathotsava) ವರ್ಷದ ಸಮಾವೇಶವನ್ನು ಉದ್ಘಾಟಿಸುವಂತೆ ಕೋರಿ ಕೇಂದ್ರ ಐಟಿ-ಬಿಟಿ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಅವರಿಗೆ ರಾಜ್ಯದ ಐಟಿ-ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ (C.N. Ashwath Narayan) ಅವರು ಆಹ್ವಾನಿಸಿದ್ದಾರೆ.

    ಮಂಗಳವಾರ ದೆಹಲಿಗೆ (New Delhi) ಬಂದಿಳಿದ ಅವರು, ಕೇಂದ್ರ ಸಚಿವರನ್ನು ಭೇಟಿ ಮಾಡಿ, ರಾಜ್ಯ ಸರ್ಕಾರದ ಪರವಾಗಿ ಈ ಆಮಂತ್ರಣ ನೀಡಿದರು. ಈ ಸಂದರ್ಭದಲ್ಲಿ ಬಿಟಿಎಸ್‍ನ ವೈಶಿಷ್ಟ್ಯಗಳನ್ನು ವಿವರಿಸಿದರು. ಇದೇ ವೇಳೆ ರಾಜ್ಯ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು. ಇದನ್ನೂ ಓದಿ: ಅಯೋಧ್ಯೆಯಿಂದ ಶ್ರೀಲಂಕಾಗೆ ಶ್ರೀರಾಮ ನಡೆದದ್ದಕ್ಕಿಂತ ಹೆಚ್ಚು ರಾಹುಲ್‌ ಗಾಂಧಿ ಪಾದಯಾತ್ರೆ ಮಾಡ್ತಿದ್ದಾರೆ – ಕಾಂಗ್ರೆಸ್‌ ನಾಯಕ

    ಅರುಣ್ ಸಿಂಗ್‍ಗೂ ಆಹ್ವಾನ
    ನ.11ರಂದು ಪ್ರಧಾನಿ ನರೇಂದ್ರ ಮೋದಿ (Narendra Modi)  ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru International Airport) ನೆರವೇರಿಸಲಿರುವ ನಾಡಪ್ರಭು ಕೆಂಪೇಗೌಡರ (Kempegowda) 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ ಸಮಾರಂಭ ಮತ್ತು ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ (ಬಿಟಿಎಸ್) ಬರುವಂತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ಅವರಿಗೂ ಅಶ್ವತ್ಥ ನಾರಾಯಣ ಆಹ್ವಾನ ನೀಡಿದ್ದಾರೆ.

    ಕೆಂಪೇಗೌಡರ ಪ್ರತಿಮೆ ಅನಾವರಣದ ಅಂಗವಾಗಿ ಮೋದಿ ಅಧ್ಯಕ್ಷತೆಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಇದರಲ್ಲಿ ಭಾಗವಹಿಸುವಂತೆ ಸಚಿವರು ಸಿಂಗ್ ಅವರಿಗೆ ತಿಳಿಸಿದರು. ಇದನ್ನೂ ಓದಿ: ನನ್ನನ್ನು ಪ್ಯಾಕೇಜ್ ಸ್ಟಾರ್ ಅನ್ನೋರಿಗೆ ಚಪ್ಪಲೀಲಿ ಹೊಡೀತೀನಿ: ಪವನ್ ಕಲ್ಯಾಣ್ ಆನ್ ಫೈಯರ್

    ಯುದ್ಧ ಸ್ಮಾರಕಕ್ಕೆ ಭೇಟಿ
    ನಂತ ಅಶ್ವತ್ಥನಾರಾಯಣ ಅವರು ರಾಷ್ಟ್ರ ರಾಜಧಾನಿಯಲ್ಲಿ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು. ಸ್ಮಾರಕವನ್ನು ಸಾಮಾನ್ಯ ಪ್ರವಾಸಿಗರಂತೆ ಸುತ್ತು ಹಾಕಿದ ಅವರು, ಅಲ್ಲಿಯ ಸ್ಮಾರಕಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಅಲ್ಲಿಯ ವಿವರಗಳನ್ನು ಕುತೂಹಲದಿಂದ ವೀಕ್ಷಿಸಿದರು.

    Live Tv
    [brid partner=56869869 player=32851 video=960834 autoplay=true]

  • ಒಂದೇ ವೇದಿಕೆಯಲ್ಲಿ ಮತ್ತೆ ಮುಖಾಮುಖಿಯಾದ ಡಿ.ಕೆ.ಸುರೇಶ್, ಅಶ್ವಥ್ ನಾರಾಯಣ

    ಒಂದೇ ವೇದಿಕೆಯಲ್ಲಿ ಮತ್ತೆ ಮುಖಾಮುಖಿಯಾದ ಡಿ.ಕೆ.ಸುರೇಶ್, ಅಶ್ವಥ್ ನಾರಾಯಣ

    ಬೆಂಗಳೂರು: ಇತ್ತೀಚೆಗಷ್ಟೇ ರಾಮನಗರದಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಸಿಎಂ ಎದುರೇ ಕಿತ್ತಾಡಿಕೊಂಡಿದ್ದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ಬಿಜೆಪಿ ಸಚಿವ ಅಶ್ವಥ್ ನಾರಾಯಣ ಇಂದು ಮತ್ತೇ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾದರು.

    ಇತ್ತೀಚೆಗೆ ನಡೆದಿದ್ದ ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಡಿ.ಕೆ.ಸುರೇಶ್ ವೇದಿಕೆಯಲ್ಲೇ ಗಲಾಟೆ ಮಾಡಿದ್ದರು. ಸ್ಥಳೀಯ ಪ್ರತಿನಿಧಿಗಳು ಬರುವ ಮೊದಲೇ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ ಸಿಎಂ ನಡೆಯನ್ನು ಸಂಸದ ಡಿ.ಕೆ.ಸುರೇಶ್ ತೀವ್ರವಾಗಿ ವಿರೋಧಿಸಿದ್ದರು. ಸಚಿವ ಅಶ್ವಥ್ ನಾರಾಯಣ ಅವರು ಮಾತನಾಡುತ್ತಿದ್ದಂತೆ ಮೈಕ್ ಕಸಿದುಕೊಂಡು ಗದ್ದಲ ಸೃಷ್ಟಿಸಿದ್ದರು. ಇದೀಗ ಮತ್ತೆ ಒಂದೇ ವೇದಿಕೆ ಹಂಚಿಕೊಂಡಿರುವುದು ರಾಜಕೀಯ ರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಸಚಿವ ಮುನಿರತ್ನ ಅವರ ನೇತೃತ್ವದಲ್ಲಿ ನಿರ್ಮಿಸಲಾಗುತ್ತಿರುವ ಜಿ-ಪ್ಲಸ್ ಮನೆಗಳ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಜೊತೆಗೆ ಡಿ.ಕೆ.ಸುರೇಶ್ ಕೆಲ ಸಮಯ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಮಾತುಕತೆ ನಡೆಸಿದರು. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್‌, ಅಶ್ವಥ್‌ ನಾರಾಯಣ ನಡುವೆ ಜಟಾಪಟಿ

    ಕಾರ್ಯಕ್ರಮದಲ್ಲಿ ಸಚಿವ ಮುನಿರತ್ನ ಸಿಎಂಗೆ ಬೃಹತ್ ಗುಲಾಬಿ ಹೂವಿನ ಹಾರ ಹಾಕಿ ಸನ್ಮಾನಿಸಿದರು. ಇದೇ ವೇದಿಕೆಯಲ್ಲಿ ಅಶ್ವಥ್ ನಾರಾಯಣ ಅವರಿಗೆ ಬೃಹತ್ ಹಾರ ಹಾಕಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಈ ವೇಳೆ ಅಶ್ವಥ್ ನಾರಾಯಣರ ಕಡೆಯೇ ಡಿ.ಕೆ.ಸುರೇಶ್ ದಿಟ್ಟಿಸಿ ನೋಡುತ್ತಿರುವ ದೃಶ್ಯ ಕಂಡುಬಂತು. ನಂತರ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರಿಗೂ ಶಾಲು ಹೊದಿಸಿ ಹೂಗುಚ್ಛ ನೀಡಿ ಸನ್ಮಾನಿಸಿದ್ದಾರೆ.

    1,588 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ:
    ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಇಲ್ಲಿನ ಲಕ್ಷ್ಮಿದೇವಿನಗರ ಬಸ್‌ನಿಲ್ದಾಣದ ಎದುರು ಸಚಿವ ಮುನಿರತ್ನ ಅವರ ನೇತೃತ್ವದಲ್ಲಿ ನಿರ್ಮಿಸಲಾಗುತ್ತಿರುವ 1,588 ಜಿ+4 ಮನೆಗಳ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬಳಿಕ ಸಿಎಂ, ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರಗಳ ವಿತರಣೆ ಮಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಸಚಿವರಾದ ಮುನಿರತ್ನ, ವಿ.ಸೋಮಣ್ಣ, ಸಂಸದ ಡಿ.ಕೆ.ಸುರೇಶ್, ಸಿ.ಎನ್.ಅಶ್ವಥ್ ನಾರಾಯಣ ಸಹ ಭಾಗಿಯಾಗಿದ್ದರು. ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ನಮ್ಮ ಶಾಲೆಗಳು ಪೈಪೋಟಿ ಕೊಡುವಂತೆ ಕೆಲಸ ಮಾಡುತ್ತೇವೆ: ಶ್ರೀರಾಮುಲು

    ಶಂಕುಸ್ಥಾಪನೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ಇನ್ನೊಂದೇ ವರ್ಷದಲ್ಲಿ ಇಲ್ಲಿನ ಮನೆಗಳ ಕಾಮಗಾರಿ ಮುಗಿಸುತ್ತೇವೆ. ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿರುವ 4 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಬೊಮ್ಮಾಯಿ ಅವರು ಸಿಎಂ ಆದ್ಮೇಲೆ 40 ಸಾವಿರ ಮನೆಗಳನ್ನು ವಿತರಣೆ ಮಾಡಿದ್ದು, ಜೊತೆಗೆ ಬೆಂಗಳೂರಿನಲ್ಲಿ 52 ಸಾವಿರ ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಪೈಕಿ ಮುಂದಿನ ತಿಂಗಳಲ್ಲೇ 5 ಸಾವಿರ ಮನೆಗಳನ್ನು ವಿತರಣೆ ಮಾಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

    ಮುನಿರತ್ನಗೆ ಹಾಸ್ಯ ಚಟಾಕಿ: ಸಚಿವ ವಿ.ಸೋಮಣ್ಣ ವೇದಿಕೆಯಲ್ಲಿ ಮಾತನಾಡುತ್ತಿದ್ದ ವೇಳೆ ಸಿಎಂ ಹಾಗೂ ಮುನಿರತ್ನ ನಡುವೆ ಮಾತುಕತೆ ನಡೆಯುತ್ತಿತ್ತು. ಆಗ `ಲೋ ಮುನಿ ಸುಮ್ನಿರಪ್ಪ. ಸಿಎಂ ನಿನ್ ಮಾತು ಕೇಳ್ಬೇಕೋ ನನ್ ಮಾತು ಕೇಳ್ಬೇಕೋ?’ ಎಂದು ಸಚಿವ ವಿ ಸೋಮಣ್ಣ ಹಾಸ್ಯ ಮಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯರ ದಲಿತ ಪರ ಕಾಳಜಿಯ ಪೊರೆ ಕಳಚುತ್ತಿದೆ: ಬಿಜೆಪಿ ಟೀಕೆ

    ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಚಿವ ಮುನಿರತ್ನ, ಸೋಮಣ್ಣ ಮತ್ತು ನನ್ನ ಸಂಬಂಧ ಒಬ್ಬ ಗುತ್ತಿಗೆದಾರ ಮತ್ತು ಒಬ್ಬ ಪಾಲಿಕೆ ಸದಸ್ಯನ ಸಂಬಂಧ. ಅವರು ನಾನೆಲ್ಲೇ ಇದ್ರೂ ಚೆನ್ನಾಗಿರು ಅನ್ನೋರು. ತಾಯಿ ರಾಜೇಶ್ವರಿ ಆಶೀರ್ವಾದದಿಂದ ಬೊಮ್ಮಾಯಿಯವರ ಸಂಪುಟದಲ್ಲಿ ಅವರ ಜತೆ ಸಚಿವನಾಗಿ ಕೂತಿದೀನಿ ಎಂದು ನೆನೆದಿದ್ದಾರೆ.

    ವೇದಿಕೆಯಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ಸೋಮಣ್ಣ ಅವರು ಹೊಸ ಮನೆ ಕಟ್ಟಿಸಿಕೊಡ್ತೀವಿ ಅಂತಿದ್ದಾರೆ. ಇಲ್ಲಿದ್ದವರನ್ನು ಖಾಲಿ ಮಾಡಿಸಿದ್ದಾರೆ. ಅವರು ಇಲ್ಲಿ ಹೇಗೋ ಬದುಕುತ್ತಿದ್ರು. ಆದರೀಗ ಅವರಿಗೆ ಎಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ? ಯಾರು ಬಾಡಿಗೆ ಕೊಡ್ತಾರೆ ಎಂದು ಪ್ರಶ್ನಿಸಿದ್ದಾರೆ.