ಶಿವಮೊಗ್ಗ: ಸಿ.ಎಂ.ಇಬ್ರಾಹಿಂ ನನ್ನ ಗಂಡಸುತನದ ಬಗ್ಗೆ ಪ್ರಶ್ನಿಸಿದ್ದಾರೆ. ನನ್ನ ಗಂಡಸುತನ ಏನು ಎಂಬುದು ಯಾರಿಗೆ ಗೊತ್ತಿದೆಯೋ ಅವರಿಗೆ ತಿಳಿದಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ, ಸಿ.ಎಂ.ಇಬ್ರಾಹಿಂ ವಿರುದ್ದ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ನನ್ನನ್ನು ನಾಯಿಗೆ ಹೋಲಿಸಿದ್ದಾರೆ. ನಾಯಿಗೆ ಇರುವ ನಿಯತ್ತು, ನಿಷ್ಠೆ ನಿನಗೆ ಇಲ್ಲ. ನಿನಗೆ ಜನ್ಮ ಕೊಟ್ಟಿರುವ ಸಮುದಾಯದ ನಿಷ್ಠೆ ಸಹ ಇಲ್ಲ. ನಿನಗೆ ಪಕ್ಷಕ್ಕಾಗಲಿ, ಧರ್ಮಕ್ಕಾಗಲಿ ನಿಷ್ಠೆ ಇದೆಯಾ ಎಂದು ಉಗ್ರಪ್ಪ ಏಕವಚನದಲ್ಲಿಯೇ ಇಬ್ರಾಹಿಂ ಅವರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬುಧವಾರದಿಂದ ಪಿಯು, ಪದವಿ ಕಾಲೇಜು ಆರಂಭ
ನಿನ್ನ ಧರ್ಮದ ಆಸ್ತಿಯನ್ನೇ ನುಂಗಿ ಹಾಕಿದ್ದೀಯಾ. ಮಂತ್ರಿ ಆಗಿದ್ದಾಗ ಭ್ರಷ್ಟಾಚಾರ ಮಾಡಿಯೇ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದ. ಬ್ಲ್ಯಾಕ್ ಮೇಲ್ ರಾಜಕಾರಣಿ ಯಾರಾದರೂ ಇದ್ದರೆ ಅದು ಇಬ್ರಾಹಿಂ. ಈತ ಬೆಳಗ್ಗೆ ಸಿದ್ದರಾಮಯ್ಯ ಅಂತಾನೆ. ಮಧ್ಯಾಹ್ನ ಯಡಿಯೂರಪ್ಪ ಅಂತಾನೆ. ಸಂಜೆ ಆದರೆ ಮತ್ತೊಬ್ಬರ ಜೊತೆ ಇರುತ್ತಾನೆ. ಇಂತಹ ಮನುಷ್ಯನಿಂದ ಪಕ್ಷಕ್ಕಾಗಲಿ, ಮತ್ತೊಬ್ಬರಿಗಾಗಲಿ ಉಪಯೋಗ ಇಲ್ಲ ಎಂದರು.
ಬೆಂಗಳೂರು: ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ. ನಾನ್ಯಾಕೆ ಅವರ ಬಗ್ಗೆ ಮಾತನಾಡಲಿ. ನಾನು ಹಿಜಬ್ ವಿವಾದದ ಬಗ್ಗೆ ಮಾತನಾಡಿದ್ದು ನಿಜ ಎಂದು ಬೆಂಗಳೂರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಡಿಕೆಶಿ ಮತ್ತು ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಹುಚ್ಚು ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯು ಅವರು, ಆ ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಲ್ಲ. ನಾನು ಹಿಜಬ್ ಬಗ್ಗೆ ಮಾತನಾಡಿದ್ದು ನಿಜ. ಆದರೆ ಈಗ ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ. ಅವರು ಯಾರು ನನ್ನ ಬಗ್ಗೆ ಮಾತನಾಡೋಕೆ. ಅವರದ್ದು ಒಂದು ರಾಜಕೀಯ ಪಕ್ಷದ ನಾಯಕರು, ನಾನು ಅವರ ಬಗ್ಗೆ ಮಾತನಾಡಲ್ಲ, ನಾನ್ಯಾಕೆ ಅವರ ಬಗ್ಗೆ ಮಾತನಾಡಲಿ ಎಂದ ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ
ಸಿಎಂ ಇಬ್ರಾಹಿಂ ಅಸಮಾಧಾನ ವಿಚಾರವಾಗಿ, ಇಬ್ರಾಹಿಂ ಪಾರ್ಟಿ ಬಿಡಲ್ಲ, ಅವರು ಏನಾದ್ರು ಮಾಡ್ಲಿ ಸಂಬಂಧ ಇಲ್ಲ. ಅವರು ಪಕ್ಷ ಬಿಡಲ್ಲ, ಹೆಚ್.ಸಿ.ಮಹದೇವಪ್ಪ ಮಾತಾಡಿದ್ದಾರೆ. ಕೋಪ ಕಡಿಮೆ ಆಗ್ಲಿ, ಅಮೇಲೆ ಭೇಟಿ ಮಾಡುತ್ತೇನೆ. ವಿಪಕ್ಷ ನಾಯಕ ಸ್ಥಾನ ಸಿಕ್ಕಿಲ್ಲ ಅಂತ ಕೋಪ ಇರುತ್ತದೆ. ವೀರೇಂದ್ರ ಪಾಟೀಲ್ ಜೊತೆ ಕಾಂಗ್ರೆಸ್ ಜೊತೆ ಹೋಗಿದ್ದ, ಆಗ ನಾನು ಕಾಂಗ್ರೆಸ್‍ನಲ್ಲಿ ಇರಲಿಲ್ಲ. ನಾನು ಆಗ ಇಲ್ಲ ಅಂದ್ಮೇಲೆ ನಾನೇಕೆ ಆಗಿನ ಘಟನೆ ಬಗ್ಗೆ ಮಾತಾಡಲಿ ಎಂದಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್
ಸಿ.ಎಂ ಇಬ್ರಾಹಿಂ ನನ್ನ ಸ್ನೇಹಿತ. ಅವನು ಎಲ್ಲೂ ಹೋಗಲ್ಲ ಅನ್ನೋ ವಿಶ್ವಾಸವಿದೆ. ಕಾಂಗ್ರೆಸ್‍ಲ್ಲಿ ಸಿದ್ದು ನೆಮ್ಮದಿಯಾಗಿಲ್ಲ ಎಂಬ ಇಬ್ರಾಹಿಂ ಹೇಳಿಕೆ ವಿಚಾರ ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ ಬಿಡಿ. ನನ್ನ ಭಾಷಣ ಕೇಳಲು ಸಿದ್ದರಾಮಯ್ಯ ಮೋಟರ್ ಸೈಕಲ್‍ನಲ್ಲಿ ಬರ್ತಿದ್ದ ಎಂಬ ಇಬ್ರಾಹಿಂ ಹೇಳಿಕೆ ವಿಚಾರ, ನಾನು ಇಬ್ರಾಹಿಂ ಭಾಷಣ ಕೇಳಲು ಹೋಗಿದ್ದು ನಿಜ. ಟೌನ್ ಹಾಲ್‍ನಲ್ಲಿ ಭಾಷಣ ಕೇಳಲು ಹೋಗಿದ್ದೆ. ಇದನ್ನ ನಾನೇ ಇಬ್ರಾಹಿಂಗೆ ಹೇಳಿದ್ದೆ ಆಗ ವಿಧ್ಯಾರ್ಥಿ ನಾನು, ಆಗ ಸೈಕಲ್ಲೇ ಇರಲಿಲ್ಲ ಮೋಟರ್ ಸೈಕಲ್ ಎಲ್ಲಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ.
ಸಂಡೇ ಕೂಲ್ ಆಗಿಯೇ ಇರಬೇಕಲ್ಲವಾ? ನಾನು ಯಾವಾಗಲೂ ಕೂಲ್ ಆಗಿಯೇ ಇರುತ್ತೇನೆ. ನಾನು ತಲೆಕೆಡಿಸಿಕೊಳ್ಳೋದು ಯಾವಾಗ ಎಂದರೆ ಸಮಾಜದಲ್ಲಿ ಡಿಸ್ಟರ್ಬ್ ಆದಾಗ, ಇಲ್ಲ ಅಂದ್ರೆ ನಾನು ಯಾವಾಗಲೂ ಕೂಲ್ ಆಗಿರುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರು: ಜೆಡಿಎಸ್ ಸೇರುತ್ತೇನೆ, ದಿನಾಂಕ ಇನ್ನೂ ನಿಗದಿಯಾಗಿಲ್ಲ. ಶೀಘ್ರದಲ್ಲಿಯೇ ದಿನಾಂಕ ತಿಳಿಸುತ್ತೇನೆ. ಹಣೆಯಲ್ಲಿ ಬರೆದಿದ್ದರೆ ಕುಮಾರಸ್ವಾಮಿ ಸಿಎಂ ಆಗೋದನ್ನ ಯಾರು ತಪ್ಪಿಸೋಕೆ ಆಗುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಹಾಗೂ ಕುಮಾರಸ್ವಾಮಿ ಒಂದು ಗುಣ ಅಂದರೆ ಯಾವತ್ತೂ ಡ್ಯಾಮ್‍ಗೆ ಡ್ಯಾಮೇಜ್ ಮಾಡಲ್ಲ. ಅಲ್ಲಿ ನೀರು ಸೋರುತ್ತಿದ್ದರೆ ಬಕೆಟ್ ಹಿಡಿತಾರೆ. ಸೋರಿ ಹೋಗುವ ನೀರಿನಲ್ಲೆ ಬಕೆಟ್ ತುಂಬಿಸಿಕೊಳ್ತಾರೆ. ದಾವಣಗೆರೆಯಲ್ಲಿ ಜೆಡಿಎಸ್ ಸೇರುತ್ತೇನೆ. ಆದರೆ ದಿನಾಂಕ ಇನ್ನು ನಿಗದಿಯಾಗಿಲ್ಲ. ಹಣೆಯಲ್ಲಿ ಬರೆದಿದ್ದರೆ ಕುಮಾರಸ್ವಾಮಿ ಸಿಎಂ ಆಗೋದನ್ನ ಯಾರು ತಪ್ಪಿಸೋಕೆ ಆಗುತ್ತದೆ ಎಂದು ಕೇಳಿದ್ದಾರೆ. ಇದನ್ನೂ ಓದಿ:ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ
ಕರ್ನಾಟಕ ಸರ್ಕಾರ ವಿವಾದಗಳ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿ ಇದೆ. ಯಾವುದೆ ವಿವಾದ ಸೃಷ್ಟಿ ಮಾಡಿದರೂ ಸಕ್ಸಸ್ ಆಗುತ್ತಿಲ್ಲ. ಗೋಹತ್ಯೆ, ಧಾರ್ಮಿಕ ಬಿಲ್ ತಂದರು. ಅದು ಅಲ್ಲೇ ನಿಂತಿದೆ. ಈಗ ಹಿಜಬ್ ವಿವಾದ ತಂದಿದ್ದಾರೆ. ಹಿಜಬ್ ಅನಾದಿಕಾಲದಿಂದಲೂ ಇದೆ. ಮೈಸೂರು ಮಹಾರಾಜರು ಅಂದಿನ ಶಾಲಾ ಕಾಲೇಜಿಗೆ ಹೆಣ್ಣುಮಕ್ಕಳು ಹೋಗುವ ಗಾಡಿಗೆ ಪರದೆ ಹಾಕಿದ್ದರು. ಹೆಣ್ಣು ಮಕ್ಕಳಿಗೆ ಪರದೆ ಅಲ್ಲದೆ ಗಾಡಿಗೂ ಪರದೆ ಹಾಕಿದ್ದರು. ಉತ್ತರ ಕರ್ನಾಟಕದಲ್ಲಿ ತಲೆ ಮೇಲೆ ಸೆರಗು ಹಾಕದ ಹೆಣ್ಣು ಮಕ್ಕಳು ಸಿಗಲ್ಲ. ಅದು ಅವರ ಸಂಸ್ಕೃತಿಯಾಗಿದೆ. ತಲೆ ಮೇಲೆ ಬಟ್ಟೆ ಹಾಕೋದು ಹಿಜಬ್, ಅದು ಬುರ್ಕ ಅಲ್ಲಾ. ಅಯ್ಯೋ ಹುಚ್ಚಮುಂಡೇವ ಕೋವಿಡ್‍ಗೆ ಹಾಕುವುದನ್ನೆ ಇವರು ಹಾಕಿದ್ದಾರೆ. ಬೊಮ್ಮಾಯಿನೇ ಹಿಜಬ್ ಹಾಕಿದ್ದಾನೆ, ಸಚಿವರು ಹಾಕಿದ್ದಾರೆ, ನಾನು ಹಾಕಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.
ಹೆಣ್ಣು ಮಕ್ಕಳು ಮುಖಮುಚ್ಚಿಕೊಂಡರೆ ನಿಮಗೇನು ಸಮಸ್ಯೆ. ಮುಖ ನೋಡೋ ಆನಂದ ನಿಮಗ್ಯಾಕೆ. ಅವರು ಬ್ಯೂಟ್ ಕಂಟೆಸ್ಟ್‌ಗೆ ಬರುತ್ತಿಲ್ಲ. ಕೆಲವರು ಮುಸ್ಲಿಂ ಹೆಣ್ಣುಮಕ್ಕಳು ಹಿಜಬ್ ಹಾಕಲ್ಲ. ಅವರಿಗೆ ಹಾಕಿ ಅಂತ ಒತ್ತಾಯ ಮಾಡಲ್ಲ. ಹಾಕುವವರನ್ನ ಯಾಕೆ ತಡೆಯುತ್ತೀರಾ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಇಬ್ರಾಹಿಂಗೆ ಖಾದರ್ ಸರಿಸಮಾನ ಅನ್ನೋದಾದರೆ, ಸಿದ್ದರಾಮಯ್ಯಗೆ ವಿಶ್ವನಾಥ್ ಸಮ. ಅವರನ್ನ ಸಿಎಂ ಮಾಡ್ತಾರಾ? ಡಿಕೆ ಶಿವಕುಮಾರ್‍ಗೆ ಕೃಷ್ಣ ಬೈರೇಗೌಡ ಪರ್ಯಾಯ ಅಲ್ವಾ ಹಾಗಾದರೆ, ಅವರು ಒಕ್ಕಲಿಗರೇ ಅಲ್ವಾ? ಅವರಿಗೊಂದು ನಮಗೊಂದು ನ್ಯಾಯನಾ? ನಾನು ಸೆಂಟ್ರಲ್ ಮಿನಿಸ್ಟರ್ ಆದಾಗ ಕೇಂದ್ರದಲ್ಲಿ ಇದ್ದಾಗ ಟಿಕೆಟ್ ಕೇಳೋಕೆ ನನ್ನ ಹತ್ತಿರ ಬಂದಿದ್ದರು. ನಾನು ಭಾಷಣ ಮಾಡುತ್ತಿದ್ದರೆ ಮೋಟರ್ ಸೈಕಲ್‍ನಲ್ಲಿ ಬಂದು ನನ್ನ ಭಾಷಣ ಕೇಳಿ ಹೋಗ್ತಿದ್ದರು ಸಿದ್ದರಾಮಯ್ಯ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ
ನಾನು ಸಾಕಷ್ಟು ಕಡೆ ರಾಜಕೀಯ ಸಭೆ ಮಾಡುತ್ತಿದ್ದೇನೆ. ಜನತಾದಳ ಬಗ್ಗೆ ಜಾಸ್ತಿ ಒಲವು ಕಂಡು ಬರುತ್ತಿದೆ. ಧಾರ್ಮಿಕ ನಾಯಕರುಗಳು ಬೆಂಬಲಿಸಿದ್ದಾರೆ. ಕಾಂಗ್ರೆಸ್‍ಗೆ ಮುಸ್ಲಿಮರು ಓಟ್ ಬ್ಯಾಂಕ್ ಅಲ್ಲಾ. ನಮಗೂ ಬೇರೆ ಆಯ್ಕೆ ಇದೆ ಎಂದಿದ್ದಾರೆ. ಅಲಿಂಗ ಅಲ್ಪ ಸಂಖ್ಯಾತರು, ಲಿಂಗಾಯತರು, ದಲಿತರು, ಒಕ್ಕಲಿಗರು, ಬ್ರಾಹ್ಮಣರನ್ನ ತಬ್ಬಿಕೊಳ್ಳುವುದೇ ಅಲಿಂಗ ಚಳುವಳಿ. ಎಲ್ಲರನ್ನ ಒಟ್ಟಿಗೆ ತರುವುದೆ ಈ ಚಳುವಳಿಯಾಗಿದೆ.
ಪೊಸಿಶನ್ ಸಿದ್ದರಾಮಯ್ಯಗೆ ಸಿಕ್ತು, ನಮಗಲ್ಲ. ಯಡಿಯೂರಪ್ಪಗೆ ಕರೆ ಮಾಡಿದ್ದೆ, ಮಾತನಾಡಿದ್ದೇನೆ ಆದರೆ ಭೇಟಿಯಾಗಿಲ್ಲ. ಜೆಡಿಎಸ್ ಕಾಂಗ್ರೆಸ್ ನಾಯಕರು ಅಲಿಂಗ ಭಾಗವಾಗಿರುತ್ತಾರೆ. ಫೆಬ್ರವರಿ 14 ಹುಬ್ಬಳ್ಳಿ ಸಭೆ ನಂತರ ಜೆಡಿಎಸ್ ಸೇರ್ಪಡೆ ದಿನಾಂಕ ಘೋಷಣೆ ಮಾಡುತ್ತೇನೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಲು ತೀರ್ಮಾನಿಸಿದ್ದೇನೆ. ಧಾರ್ಮಿಕ ಬಿಲ್‍ಗೆ ನನ್ನಿಂದಾಗಿ ಹಿನ್ನಡೆ ಆಗಬಾರದು ಅಂತ ಸಧ್ಯಕ್ಕೆ ರಾಜೀನಾಮೆ ಕೊಟ್ಟಿಲ್ಲ. ನಾನು ಅಲ್ಲಾಡಿದ್ದಕ್ಕೆ ನಲಪಾಡ್‍ಗೆ ಅಧ್ಯಕ್ಷ ಸ್ಥಾನ ಖಾದರ್‍ಗೆ ಉಪ ನಾಯಕ ಸ್ಥಾನ ಸಿಕ್ಕಿದೆ. ನಾನು ಬಿಟ್ಟರೆ ಇನ್ನು ಕೆಲವರಿಗೆ ಅವಕಾಶ ಸಿಗುತ್ತೆ ಎಂದಿದ್ದಾರೆ.
ಮಾರ್ಚ್ 10ರ ನಂತರ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿರುತ್ತೆ. ಜೆಡಿಎಸ್ ಮೊದಲನೇ ಸ್ಥಾನಕ್ಕೆ ಬರುತ್ತದೆ. ಬಿಜೆಪಿ ಎರಡನೇ ಸ್ಥಾನಕ್ಕೆ ಬರುತ್ತೆ. 2023 ರವರೆಗೆ ಕಾದು ನೋಡಿ. ಕಾಂಗ್ರೆಸ್ ನವರು ನನ್ನ ಬಳಿ ಬರುತ್ತಾರೆ. ಸಮಾಜ ಒಡೆಯುವ ರಾಜಕಾರಣ ಮಾಡಿಲ್ಲ. ಮುಸ್ಲಿಂ ಸಮುದಾಯದ ಎರಡರಷ್ಟು ಬೇರೆ ಸಮಾಜವೂ ನನ್ನ ಮೇಲೆ ವಿಶ್ವಾಸ ಇರಿಸಿದೆ. ನಾಲ್ಕು ದಿನ ರೆಸ್ಟ್ ತೆಗೊಂಡು ಬಂದರು. ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿ ಸಂತೋಷವಾಗಿಲ್ಲ. ಜೊತೆಗೆ ಮಾತನಾಡಿದ ಪಟ್ಟಣ್‍ಗೆ ನೋಟಿಸ್ ಕೊಟ್ಟರು. ಉಗ್ರಪ್ಪ ಎಲ್ಲಿದ್ದಾರೆ ಎಂದು ಗೊತ್ತಿಲ್ಲ. ಅಲ್ಲೊಂದು ಕಾಲು ಇಲ್ಲೊಂದು ಕಾಲು ಆಗಿದೆ ಎಂದು ಹೇಳಿದ್ದಾರೆ.
– ದೇವೇಗೌಡರನ್ನು ಹಾಡಿ ಹೋಗಳಿದ ಇಬ್ರಾಹಿಂ -ಫೆ. 14 ರಿಂದ ನನ್ನ ಯಾತ್ರೆ ಶುರುವಾಗಲಿದೆ
ಮೈಸೂರು: ಫೆಬ್ರವರಿ 14 ಲವರ್ಸ್ ಡೇ, ಅಂದೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅದೇ ದಿನ ಯಾವ ಪಕ್ಷದ ಮೇಲೆ ಲವ್ ಆಗಿದೆ ಅಂತಾ ಹೇಳುತ್ತೇನೆ ಎಂದು ಎಂಎಲ್‌ಸಿ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ, 14 ಲವರ್ಸ್ ದಿನದಂದು ನಾನು ಎಂಎಲ್‍ಸಿ ಸ್ಥಾನಕ್ಕೆ ಹೂವಿನ ಹಾರವನ್ನು ಕೊಟ್ಟು ರಾಜೀನಾಮೆ ಕೋಡುತ್ತೇನೆ. ಅದೇ ದಿನ ಮುಂದಿನ ರಾಜಕೀಯ ನಿರ್ಧಾರವನ್ನು ನಾನು ಪ್ರಕಟಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಹೊಸ ಪಕ್ಷ ಕಟ್ಟುವುದಿಲ್ಲ. ಮೊದಲು ಜನರ ಅಭಿಪ್ರಾಯವನ್ನು ಕೇಳಿಕೊಂಡು ನಂತರ ಯಾವ ಪಕ್ಷಕ್ಕೆ ಹೋಗಬೇಕು ಎಂದು ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.
ನನ್ನ ಬಳಿ ಹಣ ಇಲ್ಲ ಅದಕ್ಕೆ ಪರಿಷತ್ ನಾಯಕನಾಗಿ ನನ್ನನ್ನು ನೇಮಿಸಲಿಲ್ಲ. ಅಲ್ಪಸಂಖ್ಯಾತರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುತ್ತಾರೆ ಎಂಬ ಭಾವನೆ ಕಾಂಗ್ರೆಸ್‍ಗೆ ಇದೆ. ನಾವು ಸಿದ್ದರಾಮಯ್ಯಗೆ ಹಿನ್ನೆಲೆ ಗಾಯಕರಾಗಿದ್ದೆವು. ಸಿದ್ದರಾಮಯ್ಯಗೆ ಒಳ್ಳೆಯದಾಗಬೇಕು ಎಂದು ದುಡಿದಿದ್ದೇವೆ. ಸಿದ್ದರಾಮಯ್ಯ ನಮ್ಮ ಕುತ್ತಿಗೆ ಕೊಯ್ದುರು ಎಂದು ಕಿಡಿಕಾರಿದ್ದಾರೆ.
ಬಾದಾಮಿಗೆ ಕರೆದುಕೊಂಡು ನಾಮಪತ್ರ ಹಾಕಿಸಿ ಗೆಲ್ಲಿಸಿದ್ದು ನಾನು. ಇದನ್ನು ಮರೆತು ಬಿಟ್ರಾ ಸಿದ್ದರಾಮಯ್ಯ ಅವರೇ? ನಿಮಗಾಗಿ ನಾನು ದೇವೇಗೌಡರ ಬಿಟ್ಟು ಬರಲಿಲ್ವಾ? ನನ್ನ ಮುಗಿಸಲು ಯು.ಟಿ.ಖಾದರ್‌ಗೆ ಸ್ಥಾನ ಕೊಟ್ರಾ? ಪ್ಯಾಂಟ್ ಬದಲು ಚಡ್ಡಿ ಕೊಟ್ಟಿದ್ದೀರಾ? ಯು.ಟಿ.ಖಾದರ್‌ಗೆ ಕೊಟ್ಟ ಸ್ಥಾನವನ್ನು ಸಿ.ಎಂ.ಇಬ್ರಾಹಿಂ ಚಡ್ಡಿಗೆ ಹೋಲಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಅಲ್ಪಸಂಖ್ಯಾತರು, ಲಿಂಗಾಯತರು, ಒಕ್ಕಲಿಗರು ಮೂರನ್ನು ಸೇರಿಸಿ ಸಮಾವೇಶ ಮಾಡುತ್ತೇನೆ. ಫೆ.14 ರಿಂದ ನನ್ನ ಯಾತ್ರೆ ಶುರುವಾಗಲಿದೆ. ನನಗೆ ಎಲ್ಲಾ ಪಕ್ಷದ ನಾಯಕರು ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಇದುವರೆಗೂ ಸೌಜನ್ಯಕ್ಕೂ ನನಗೆ ಒಂದು ಫೋನ್ ಕಾಲ್ ಕೂಡ ಮಾಡಿಲ್ಲ. ಫೆ.14 ರಂದು ನನ್ನ ರಾಜಕೀಯ ನಿರ್ಧಾರ ಹೇಳುತ್ತೇನೆ ಎಂದು ಸಿದ್ದರಾಮಯ್ಯ ಅವರ ವಿರುದ್ಧ ವಾಗ್ಧಾಳಿ ಮಾಡಿದ್ದಾರೆ.
ಸಿಎಂ ಇಬ್ರಾಹಿಂ, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಧಿಕ್ಕಾರ ಕೂಗಿ ಕಾಂಗ್ರೆಸ್‍ನಿಂದ ಉಚ್ಛಾಟಿತನಾಗಿದ್ದ ಶಾಯಿದ್ ಮನೆಗೆ ಬಂದಿದ್ದಾರೆ. ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.
ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿ.ಎಂ. ಇಬ್ರಾಹಿಂ ಇಬ್ಬರು ಅವಳಿ-ಜವಳಿ ಇದ್ದ ಹಾಗೆ. ಅವಕಾಶವಾದ ರಾಜಕಾರಣಕ್ಕೆ ಇನ್ನೊಂದು ಹೆಸರೇ ಸಿದ್ದರಾಮಯ್ಯ ಹಾಗೂ ಸಿ.ಎಂ. ಇಬ್ರಾಹಿಂ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಸಿ.ಎಂ.ಇಬ್ರಾಹಿಂ ಇಬ್ಬರು ಒಂದೇ ಆಗಿದ್ದಾರೆ. ಇಬ್ರಾಹಿಂ ಅವರು ಪರಿಷತ್‍ನಲ್ಲಿ ವಿರೋಧ ಪಕ್ಷ ಸ್ಥಾನ ಸಿಗಲಿಲ್ಲ ಎಂದು ಕಾಂಗ್ರೆಸ್ ತೊರೆದು ಜೆಡಿಎಸ್‍ಗೆ ಹೋಗುತ್ತಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರೂ ಅಷ್ಟೇ. ವಿಪಕ್ಷ ನಾಯಕನ ಸ್ಥಾನ, ಅಥವಾ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಅಂದರೆ ಅವರು ಸಹ ಪಕ್ಷದಲ್ಲಿ ಒಂದು ಕ್ಷಣವೂ ಇರುವುದಿಲ್ಲ. ಇಬ್ಬರೂ ಅವಕಾಶವಾದಿ ರಾಜಕಾರಣಿಗಳು ಎಂದು ವಾಗ್ಧಾಳಿ ಮಾಡಿದ್ದಾರೆ. ಇದನ್ನೂ ಓದಿ:165 ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ ಭಾರತ
ಇಬ್ಬರಿಗೂ ಆ ಪಕ್ಷ, ಈ ಪಕ್ಷ ಅಂತಾ ಇಲ್ಲ. ಯಾವ ಪಕ್ಷದಲ್ಲಿ ಅಧಿಕಾರ ಸಿಗುತ್ತದೋ ಆ ಪಕ್ಷದಲ್ಲಿ ಇರುವಂತಹವರಾಗಿದ್ದಾರೆ. ಇಬ್ರಾಹಿಂ ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬ ಬಗ್ಗೆ ಮಹತ್ವ ಇಲ್ಲ. ಹಾಗೆಯೇ ಸಿದ್ದರಾಮಯ್ಯ ಅವರು ಸಹ ಯಾವ ಪಕ್ಷಕ್ಕೆ ಹೋಗ್ತಾರೋ ಎನ್ನುವುದಕ್ಕೂ ಮಹತ್ವ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಇನ್‌ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಯ್ತು ಕಡಲೆಕಾಯಿ ಮಾರುವವನ ಹಾಡು
ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಚುನಾವಣೆಯನ್ನು ಆದಷ್ಟು ಬೇಗ ನಡೆಸಬೇಕು ಎಂದು ಸರ್ಕಾರ ಚಿಂತಿಸಿದೆ. ಚುನಾವಣೆ ನಡೆಸಿ ಅಂತಾ ಈ ಹಿಂದೆಯೇ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವು. ಆದರೆ 780 ತಕರಾರು ಅರ್ಜಿ ಬಂದಿತ್ತು. ಕ್ಷೇತ್ರ ಪುನವಿರ್ಂಗಡಣೆ ಹಾಗೂ ಮೀಸಲಾತಿಯ ಬಗ್ಗೆ ಅನೇಕರು ತಕರಾರು ಅರ್ಜಿ ಸಲ್ಲಿಸಿದ್ದರು. ಈಗಾಗಿಯೇ ಲಕ್ಷ್ಮಿ ನಾರಾಯಣ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ವರದಿ ನೀಡಿದ ನಂತರ ಕ್ರಮ ತೆಗೆದು ಕೊಳ್ಳುತ್ತೇವೆ. ನಂತರ ಚುನಾವಣೆ ನಡೆಸುತ್ತೇವೆ ಎಂದರು.
ಹುಬ್ಬಳ್ಳಿ: ಸಿ.ಎಂ.ಇಬ್ರಾಹಿಂ ಬೆನ್ನಿಗೆ ಸಿದ್ದರಾಮಯ್ಯ ಅವರು ಚೂರಿ ಹಾಕಿದ್ದಾರೆ ಎಂದು ಸಚಿವ ಶ್ರೀರಾಮುಲು ಟೀಕಿಸಿದ್ದಾರೆ.
ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ವಿಚಾರವಾಗಿ ಸಚಿವ ಶ್ರೀರಾಮುಲು ಕಾಂಗ್ರೆಸ್ ಪಕ್ಷದ ಮೇಲೆ ಗುಡುಗಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ. ವಿಪಕ್ಷ ನಾಯಕ ಸೇರಿದಂತೆ ಕಾಂಗ್ರೆಸ್ ಅಧ್ಯಕ್ಷ ಆಗುವ ಸಾಮರ್ಥ್ಯ ಅವರಿಗೆ ಇದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಗೋಕಾಕ್ ಅಭಿವೃದ್ಧಿ ಆಗಿಲ್ಲವೆಂದ್ರೆ ಸ್ಥಳದಲ್ಲೇ ರಾಜೀನಾಮೆ ಕೊಡುತ್ತೇನೆ: ಸವಾಲು ಹಾಕಿದ ರಮೇಶ್ ಜಾರಕಿಹೊಳಿ
ಕಾಂಗ್ರೆಸ್‌ನವರು ಮುಸ್ಲಿಮರ ಓಟು ಮಾತ್ರ ಗುದ್ದಿ ಗುದ್ದಿ ಹಾಕಿಸಿಕೊಂಡಿದ್ದಾರೆ. ಆದರೆ ಅವರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನ ಸಿದ್ದರಾಯಮ್ಯ ಮಾಡಿದರು. ಅವರ ಮತಗಳನ್ನು ಪಡೆದು ಅವರಿಗೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಐದು ಕ್ಷೇತ್ರಗಳ ಜನರು ಕರೆಯುತ್ತಿದ್ದಾರಂತೆ. 224 ಕ್ಷೇತ್ರಗಳಿಂದಲೂ ಜನರು ಅವರನ್ನು ಚುನಾವಣೆಯಲ್ಲಿ ನಿಲ್ಲುವಂತೆ ಕರೆದಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಬಳ್ಳಾರಿ: ಸಿಎಂ ಇಬ್ರಾಹಿಂ ಬಿಜೆಪಿಗೆ ಬರುವುದಾದರೇ ನಾನು ಸ್ವಾಗತ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಿಎಂ ಇಬ್ರಾಹಿಂ ಅವರನ್ನು ಕಳೆದುಕೊಂಡು ದೊಡ್ಡ ನಷ್ಟ ಹೊಂದಲಿದೆ. ಇಬ್ರಾಹಿಂ ಸೇರಿದಂತೆ ಮುಸ್ಲಿಂ ಜನರನ್ನು ಕಾಂಗ್ರೆಸ್ ಓಟದ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಸಿಎಂ ಇಬ್ರಾಹಿಂ ಬಿಜೆಪಿಗೆ ಬರುವುದಾದರೇ ನಾನು ಸ್ವಾಗತ ಮಾಡುತ್ತೇನೆ. ಪಕ್ಷಕ್ಕೆ ಸೇರಿಸಿಕೊಳ್ಳುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ. ಇದನ್ನೂ ಓದಿ: 2.18 ಕೋಟಿ ರೂ. ವಂಚಿಸಿ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿದ!
ಸಿಎಂ ಇಬ್ರಾಹಿಂ ಸರಸ್ವತಿ ಪುತ್ರ, ಕಾಂಗ್ರೆಸ್ ಪಕ್ಷದ ಸಿನಿಯರ್ ಮೋಸ್ಟ್ ಲೀಡರ್. ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಸ್ವಯಂ ಘೋಷಿತ ಹಿಂದುಳಿದ ವರ್ಗದ ನಾಯಕ ಇದಕ್ಕೆ ಉತ್ತರ ಕೊಡಬೇಕು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಕುಟುಕಿದರು. ಇದೇ ವೇಳೆ ದಲಿತ, ಹಿಂದುಳಿದ ವರ್ಗದವರು ಮುಸ್ಲಿಂ ಹೀಗೆ ಹಲವಾರು ವರ್ಗದ ನಾಯಕರನ್ನು ಬಳಸಿಕೊಂಡು ಕಾಂಗ್ರೆಸ್‍ನಲ್ಲಿ ಕೈ ಬಿಟ್ಟಿದ್ದಾರೆ. ದಲಿತ, ಹಿಂದುಳಿದ ವರ್ಗದವರು ಮುಸ್ಲಿಮರು ಇನ್ನೂ ಮೇಲೆ ಆದರೂ ಎಚ್ಚತ್ತುಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಗುಡಿಸಲಿನ ಮೇಲೆ ಬಿದ್ದ ಟ್ರಕ್ – ಮೂವರು ಅಪ್ರಾಪ್ತ ಸಹೋದರಿಯರು ಬಲಿ
ಬಿಜೆಪಿ ನಾಯಕರು ಕಾಂಗ್ರೆಸ್ ಬರುವ ವಿಚಾರ: ಡಿಕೆ ಶಿವಕುಮಾರ್ ಅವರು ಬಾಯಿ ಚಪಲಕ್ಕೆ ಹೀಗೆ ಮಾತನಾಡುತ್ತಾರೆ. ಕಾಂಗ್ರೆಸ್‍ನಲ್ಲಿ ಬಾಯಿ ಚಪಲ ಇರುವವರು ಬಹಳ ಜನರಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್‍ಗೆ ಯಾರೂ ಹೋಗುವುದಿಲ್ಲ. ಆಪರೇಷನ್ ಕಮಲ ಸುಳ್ಳು. ಹಾಗೆ ನೋಡಿದರೆ ಸ್ವಾತಂತ್ರ್ಯ ಬಂದ ಬಳಿಕ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಧಾನಿ ಆಗಬೇಕಿತ್ತು. ಪಟೇಲ್ ಅವರ ಬದಲಿಗೆ ಬೇರೆಯವರನ್ನು ಪ್ರಧಾನಿ ಮಾಡುವ ಮೂಲಕ ಕಾಂಗ್ರೆಸ್ ಆಪರೇಷನ್ ಮಾಡಿದೆ. ಆಪರೇಷನ್ ಎನ್ನುವ ಪದ ಕಾಂಗ್ರೆಸ್‍ಗೆ ಅನ್ವಯಸುತ್ತದೆ ಎಂದು ಟಾಂಗ್ ನೀಡಿದ್ದಾರೆ.
ಬೆಂಗಳೂರು: ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದರು ಆಗ ನಾವೇನಾದರೂ ಮಾತನಾಡಿದ್ವಾ ಎಂದು ಪ್ರಶ್ನಿಸುವ ಮೂಲಕ ಮತಾಂತರ ನಿಷೇಧ ಮಸೂದೆಗೆ ಕಾಂಗ್ರೆಸ್ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಸೆಂಬ್ಲಿಯಲ್ಲಿ ಮತಾಂತರ ನಿಷೇಧ ತಡೆ ಬಿಲ್ ಬರುತ್ತಿದೆ. ಬಲವಂತವಾಗಿ ಮತಾಂತರ ಮಾಡಬಾರದು ಅಂತ ಸಂವಿಧಾನದಲ್ಲೇ ಇದೆ. ಹಾಗಿದ್ದರೂ ಈ ಮಸೂದೆಯನ್ನು ಯಾಕೆ ತರುತ್ತಿದ್ದಾರೆ? ಇದರರ್ಥ ಸರ್ಕಾರ ಎಲ್ಲದರಲ್ಲೂ ವಿಫಲವಾಗುತ್ತಿದೆ. ಜನರ ಗಮನ ಬೇರೆ ಕಡೆ ಸೆಳೆಯಲು ಬೊಮ್ಮಾಯಿ ಮೂಲಕ ಮಸೂದೆ ಮಂಡನೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಬಡತನಕ್ಕೆ, ಆಸೆ ಆಮಿಷಕ್ಕೆ ಮತಾಂತರ ಆಗೋದು ತಪ್ಪು : ಬೊಮ್ಮಾಯಿ
ಮತಾಂತರವನ್ನು ಯಾರೂ ಬಲವಂತವಾಗಿ ಮಾಡಬಾರದು. ಸ್ವಯಿಚ್ಚೆಯಿಂದ ಬೇಕಾದರೆ ಮತಾಂತರವಾಗಲಿ. ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದರು. ಆಗ ನಾವೇನಾದರೂ ಮಾತಾಡಿದೆವಾ? ರಿಜ್ವಿ ಹಿಂದೂ ಆದ, ನಾವು ಏನಾದರೂ ಹೇಳಿದ್ವಾ? ಮತಾಂತರ ಅವರವರ ಇಚ್ಛೆ. ಅದಕ್ಕಾಗಿ ಒಂದು ಮಸೂದೆ ತರುವ ನಾಟಕ ಎಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಿಡ್ಡನ ಅಡ್ಡಾದಲ್ಲಿ ಕಾಣಿಸಿಕೊಂಡ ವಾರ್ನರ್: ನೀನು ಚೆನ್ನಾಗಿದ್ದೀಯಾ ತಾನೇ ಎಂದು ಕಾಲೆಳೆದ ಕೊಹ್ಲಿ
ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಸಾಮೂಹಿಕ ಪ್ರಾರ್ಥನೆ, ಸಭೆ, ಸಮಾರಂಭಗಳನ್ನು ನಡೆಸದಂತೆ ಆದೇಶ ಹೊರಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಸಾಮೂಹಿಕ ಪಾರ್ಥನೆಗೆ ಅವಕಾಶ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ರಂಜಾನ್ ಹಿನ್ನೆಲೆಯಲ್ಲಿ ಮೇ 24 ಮತ್ತು 25ರಂದು ವಿಶೇಷ ಪ್ರಾರ್ಥನೆ ಮಾಡಬೇಕಾಗುತ್ತದೆ. ಹೀಗಾಗಿ ಇಡೀ ಮುಸ್ಲಿಂ ಸಮುದಾಯದ ಪರವಾಗಿ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ರಂಜಾನ್ ದಿನ ಈದ್ಗಾ ಮೈದಾನದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಬೆಳಗ್ಗಿನಿಂದ ಮಧ್ಯಾಹ್ನ 1 ಗಂಟೆ ವರೆಗೆ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಸಿಎಂ ಇಬ್ರಾಹಿಂ ಪತ್ರದಲ್ಲಿ ತಿಳಿಸಿದ್ದಾರೆ.
ಸಿಎಂ ಇಬ್ರಾಹಿಂ ಅವರ ಪತ್ರಕ್ಕೆ ಕಾಂಗ್ರೆಸ್‍ನ ಮುಸ್ಲಿಂ ನಾಯಕರಿಂದಲೇ ಭಾರೀ ವಿರೋಧ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಪತ್ರ ಬರೆದಿದ್ದನ್ನ ವಾಪಸ್ ಪಡೆಯಲು ಸೂಚಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
“ಜನ ಪ್ರತಿನಿಧಿಗಳಾಗಿ ಜವಾಬ್ದಾರಿ ಸ್ಥಾನದಲ್ಲಿರುವವರೇ ನಿಯಮವನ್ನ ಮೀರಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡಿ ಎಂದು ಪತ್ರ ಬರೆದಿದ್ದು ಸರಿಯಲ್ಲ. ಮೊದಲೇ ತಬ್ಲಿಘಿ ಸಮಸ್ಯೆಯಿಂದ ಸಮುದಾಯದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿದೆ. ಈಗ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡಿ ಅಂತ ಪತ್ರ ಬರೆದು ಇನ್ನೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದು ಸರಿಯಲ್ಲ” ಎಂದು ಮುಸ್ಲಿಂ ನಾಯಕರು ಸಿಎಂ ಇಬ್ರಾಹಿಂ ವಿರುದ್ಧ ಕಿಡಿಕಾರಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
“ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳೆಲ್ಲಾ ಮುಚ್ಚಿರುವಾಗ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೊಡಿ ಎಂದು ಪತ್ರ ಬರೆದಿದ್ದು ಸರಿಯಲ್ಲ. ಧಾರ್ಮಿಕ ನಾಯಕರು ಯಾರಾದರು ಕೇಳಿದ್ದರೆ ಅಥವಾ ಪತ್ರ ಬರೆದಿದ್ದರೆ ಬೇರೆ ಮಾತು. ಒಬ್ಬ ರಾಜಕೀಯ ನಾಯಕನಾಗಿ ಹೀಗೆ ಪತ್ರ ಬರೆದು ವಿವಾದ ಮಾಡಿಕೊಂಡಿದ್ದಾರೆ. ಬಿಜೆಪಿಯವರ ಕೈಗೆ ಇವರೇ ವಿವಾದದ ಅಸ್ತ್ರ ಕೊಟ್ಟಿದ್ದಾರೆ” ಎಂದು ಮುಸ್ಲಿಂ ನಾಯಕರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
– ಪರೋಕ್ಷವಾಗಿ ಮೋದಿ, ಶಾ ವಿರುದ್ಧ ವಾಗ್ದಾಳಿ
– ಬಿಜೆಪಿಯನ್ನ ನಾವು ಸೋಲಿಸುತ್ತಿದ್ದೇವೆ, ಮೆಷಿನ್ ಗೆಲ್ಲಿಸುತ್ತಿದೆ
ಹಾವೇರಿ: ಕತ್ತೆ ಸಿಂಹಾಸನದ ಮೇಲೆ ಕುಳಿತಿದೆ, ಡಬ್ಬಿ ಸೌಂಡ್ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾನಗಲ್‍ನಲ್ಲಿ ಮಾತನಾಡಿದ ಅವರು, ನಮ್ಮ ಪರಿಸ್ಥಿತಿ ಹುಚ್ಚನ ಕೈಯಲ್ಲಿ ಕತ್ತಿ ಕೊಟ್ಟು ಸೇವಿಂಗ್‍ಗೆ ಕುಳಿತಂತಾಗಿದೆ. ಅವನು ಕುತಿಗೆಗೆ ಇಡುತ್ತಾನೋ, ಎಲ್ಲಿಡುತ್ತಾನೋ ಎನ್ನುವುದು ಗೊತ್ತಿಲ್ಲ. ಕುತ್ತಿ ಕೊಟ್ಟು ಬಿಟ್ಟಿದ್ದೇವೆ. ಏನೂ ಮಾತನಾಡುವಂತಿಲ್ಲ. ಒಂದು ವೇಳೆಗೆ ಮಾತನಾಡಿದರೆ ಕತ್ತಿಯನ್ನು ಎಲ್ಲಿ ಹಾಕುತ್ತಾನೋ ಎನ್ನುವುದು ಗೊತ್ತಾಗಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಕಿಡಿಕಾರಿದರು.
ಕರ್ನಾಟಕಕ್ಕೆ ರಾಷ್ಟ್ರೀಯ ಪೌರತ್ವ ನೋಂದಣಿ ಯಾಕೆ ಬೇಕಿತ್ತು? ಇಲ್ಲಿಗೆ ಹೊರಗಿನವರು ಯಾರಾದರೂ ಬಂದಿದ್ದಾರಾ? ಹಳ್ಳಿಗಳ ಮುಖ್ಯಸ್ಥರನ್ನು ಕೇಳಿದರ ಹೊರಗಿನವರು ಯಾರು ಬಂದಿದ್ದಾರೆ ಎನ್ನುವುದು ತಿಳಿಯುತ್ತದೆ. ಅವರಿಗೆ ಹೊರಗಿನಿಂದ ಬಂದವರ ಲಿಸ್ಟ್ ಬೇಕಾಗಿಲ್ಲ. ಇಲ್ಲಿನವರ ಲಿಸ್ಟ್ ಬೇಕಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನೋಟ್ ಬ್ಯಾನ್ ಆದಾಗ ಬಂದಿರುವ ಧರಿದ್ರ ಇನ್ನೂ ಹೋಗಿಲ್ಲ. ದಲಿತರ ಮೀಸಲಾತಿ ನೋಡಿ ಸಂಸದ ಅನಂತ್‍ಕುಮಾರ್ ಹೆಗ್ಡೆ ಅವರಿಗೆ ಹೊಟ್ಟೆ ನೋವು ಬಂದಿದೆ. ದಲಿತರ ಏಳಿಗೆಯನ್ನು ಅವರಿಂದ ಸಹಿಸಲು ಆಗುತ್ತಿಲ್ಲ. ಎಲ್ಲಿವರೆಗೆ ಇವಿಎಂ ಮೆಷಿನ್ ಇರುತ್ತವೋ ಅಲ್ಲಿಯವರೆಗೆ ಪ್ರಧಾನಿ ಮೋದಿ ಇರುತ್ತಾರೆ. ನಾವು ಸೋಲಿಸುತ್ತಿದ್ದೇವೆ, ಮೆಷಿನ್ ಗೆಲ್ಲಿಸುತ್ತಿದೆ. ಇದನ್ನು ನಾನು ಹಲವು ವರ್ಷಗಳ ಹಿಂದೆನೇ ಹೇಳಿದ್ದೆ ಎಂದರು.