Tag: C.M Ibrahim

  • ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದು ಮತ ಖರೀದಿಯಿಂದ: ಸಿ.ಎಂ.ಇಬ್ರಾಹಿಂ ಆರೋಪ

    ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದು ಮತ ಖರೀದಿಯಿಂದ: ಸಿ.ಎಂ.ಇಬ್ರಾಹಿಂ ಆರೋಪ

    – ಸಿದ್ದರಾಮಯ್ಯ ಗೆಲುವಿಗಾಗಿ ಸಾಲದ ಹಣದಲ್ಲಿ 3,000 ವೋಟ್‌ ಖರೀದಿ ಮಾಡಿದ್ದೆವು ಎಂದ ಇಬ್ರಾಹಿಂ

    ಮೈಸೂರು: ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಚುನಾವಣೆಯಲ್ಲಿ ಮತಗಳ್ಳತನ ಗಂಭೀರ ಆರೋಪ ಮಾಡಿದ ಕಾಂಗ್ರೆಸ್‌ಗೆ ಸಿ.ಎಂ.ಇಬ್ರಾಹಿಂ ತಿರುಗೇಟು ನೀಡಿದ್ದಾರೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದು ಮತ ಖರೀದಿಯಿಂದ ಎಂದು ಆರೋಪಿಸಿದರು.

    ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಿ.ಎಂ.ಇಬ್ರಾಹಿಂ, ದಲಿತರು ರಾಜಕೀಯಕ್ಕೆ ಹೆಚ್ಚು ಬರಬೇಕು. ದಲಿತರನ್ನು ಸಿಎಂ ಮಾಡುವುದಾದರೆ ನನ್ನ ಬೆಂಬಲ ಇದೆ. ಸಿದ್ದರಾಮಯ್ಯ ಎರಡು ಸಾರಿ ಮುಖ್ಯಮಂತ್ರಿ ಆಗಿದ್ದು ಆಯಿತು. ಇನ್ನೆಷ್ಟು ಬಾರಿ ಆಗಬೇಕು. ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಆಗ್ರಹಿಸಿದರು.

    ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದು ದಲಿತರ ವೋಟ್‌ನಿಂದ. ಕಳೆದ ಬಾರಿ ಬಾದಾಮಿಗೆ ನಾನೇ ಸಿದ್ದರಾಮಯ್ಯನನ್ನ ಸೇರಿಸಿದ್ದು. ಚಿಮ್ಮನಕಟ್ಟಿ ಒಪ್ಪದಿದ್ದಾಗ ಪತ್ನಿ ಕಡೆಯಿಂದ ಒಪ್ಪಿಸಿದೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ 30 ಸಾವಿರದಿಂದ ಗೆಲ್ತೀನಿ ಅಂತಿದ್ದರು. ಪಕ್ಕದಲ್ಲಿದ್ದ ಮಹದೇವಪ್ಪ 40 ಸಾವಿರದಿಂದ ಗೆಲ್ತೀವಿ ಅಂತಿದ್ದ. ನೀನೆ ಮೊದಲು ಸೋಲ್ತಿಯ ಅಂತ ಹೇಳಿದ್ದೆ. ಕೊನೆಗೆ ಫಲಿತಾಂಶ ಹಾಗೆಯೇ ಬಂತು. ಕೌಂಟಿಂಗ್ ದಿನ ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದರು. ಭಯ ಬೇಡ ನಾನು ಮ್ಯಾನೇಜ್ ಮಾಡಿದ್ದೀನಿ ಅಂತ ಹೇಳಿದ್ದೆ. 800-1000 ವೋಟಿಂದ ಗೆಲ್ತೀರ ಅಂತ ಹೇಳಿದ್ದೆ ಎಂದು ನೆನಪಿಸಿಕೊಂಡರು.

    ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲುವ ಹಂತದಲ್ಲಿ ಇದ್ದರು. ನಾವು‌ ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3000 ವೋಟ್‌ ಖರೀದಿ ಮಾಡಿದ್ದೆವು. ಕಡಿಮೆ ಅಂತರದಲ್ಲಿ ಗೆದ್ದೇ ಗೆಲ್ತೀರಾ ಅಂತ ಸಿದ್ದರಾಮಯ್ಯಗೆ ಹೇಳಿದ್ದೆ. ಅದೇ ರೀತಿ ಫಲಿತಾಂಶ ಬಂತು. ಕೊನೆಗೆ ಸಿದ್ದರಾಮಯ್ಯ 6 ತಿಂಗಳ ನಂತರ ಆ ಸಾಲ ವಾಪಸ್ ಕೊಟ್ಟಿದ್ದಾರೆ. ಈ ವಿಚಾರ ಹೇಳೋಕೆ ನನಗೆ ಯಾವುದೇ ಭಯ ಇಲ್ಲ ಎಂದರು.

  • ಹೆಚ್‍ಡಿಕೆ ಸ್ವಾಮಿಯೇ ಅಯ್ಯಪ್ಪ ಅಂತಿಲ್ಲ, ಅಮಿತ್ ಅಯ್ಯಪ್ಪ ಅಂತಿದ್ದಾರೆ: ಸಿಎಂ ಇಬ್ರಾಹಿಂ ವ್ಯಂಗ್ಯ

    ಹೆಚ್‍ಡಿಕೆ ಸ್ವಾಮಿಯೇ ಅಯ್ಯಪ್ಪ ಅಂತಿಲ್ಲ, ಅಮಿತ್ ಅಯ್ಯಪ್ಪ ಅಂತಿದ್ದಾರೆ: ಸಿಎಂ ಇಬ್ರಾಹಿಂ ವ್ಯಂಗ್ಯ

    ಬೆಂಗಳೂರು: ಕುಮಾರಸ್ವಾಮಿಯವರು (H.D Kumaraswamy) ಸ್ವಾಮೀಯೇ ಅಯ್ಯಪ್ಪ ಎನ್ನುತ್ತಿಲ್ಲ. ಬದಲಿಗೆ ಸ್ವಾಮಿಯೇ ಅಮಿತ್ ಅಯ್ಯಪ್ಪ ಎಂದು ಮಾಲೆ ಹಾಕಿದ್ದಾರೆ ಎಂದು ಜೆಡಿಎಸ್‍ನಿಂದ (JDS) ಅಮಾನತುಗೊಂಡ ಮಾಜಿ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿ (C.M Ibrahim) ವ್ಯಂಗ್ಯವಾಡಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಮಾಲೆ ಹಾಕುತ್ತೇನೆ ಎಂಬ ಮಾಜಿ ಸಿಎಂ ಹೆಚ್‍ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮೊದಲು ಆತ್ಮ ಶುದ್ಧವಾಗಿ ಇಟ್ಟುಕೊಳ್ಳಿ. ನಿಮಗೆ ಮತ ಕೊಟ್ಟ ಚನ್ನಪಟ್ಟಣದ ಜನರಿಗೆ ನೀವು ಧನ್ಯವಾದವನ್ನೂ ಹೇಳಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ತೆಲಂಗಾಣ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕದ ಜನರ ಹಣ ಲೂಟಿ – ಕೇಂದ್ರ ಸಚಿವ ಕಿಶನ್ ರೆಡ್ಡಿ ಕಿಡಿ

    ದತ್ತಮಾಲೆ ಹಾಕಲು ಸಿಟಿ ರವಿ ಖಾಲಿ ಇದ್ದಾರೆ ಇಬ್ಬರು ಸೇರಿ ಹಾಕಿಕೊಳ್ಳಲಿ. ಬೇಕಾದರೆ ದೇವೇಗೌಡರನ್ನು ಕರೆದುಕೊಂಡು ಹೋಗಿ ದತ್ತಾತ್ರೇಯ ಪೂಜೆ ಮಾಡಿ. ನೀವು ಮಾಲೆ ಹಾಕುತ್ತಿರುವುದು ಅಮಿತ್ ಶಾ ಖುಷಿಗೋಸ್ಕರ. ಅವರಿಗೆ ನಾನು ಹಿಂದೂ ಎಂದು ತೋರಿಸಲು ಹೋಗುತ್ತಿದ್ದೀರಿ. ಇದು ತಮಾಷೆಯ ವಿಚಾರವಾಗಿ ಕಾಣುತ್ತಿದೆ. ಕರ್ನಾಟಕದ ರಾಜಕೀಯ ಈ ಹಂತಕ್ಕೆ ಬಂದಿರುವುದು ನೋವಿನ ಸಂಗತಿಯಾಗಿದೆ ಎಂದಿದ್ದಾರೆ.

    ಇವರಿಗೆ ಧೈರ್ಯ ಇದ್ದರೆ 19 ಜನರ ಕೈಯಲ್ಲಿ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಮಾಡಲಿ. ಕುಮಾರಸ್ವಾಮಿ ಒಬ್ಬರೇ ರಾಜೀನಾಮೆ ಕೊಟ್ಟು ಮತ್ತೆ ಗೆದ್ದು ಬರಲಿ. ಆಗ ಬೇಕಾದರೆ ಬಿಜೆಪಿ ಹಾಗೂ ದತ್ತಪೀಠಕ್ಕೆ ಹೋಗಲಿ. ಚುನಾವಣೆ ವೇಳೆ ನನಗೆ ಒಂದು ಕಪ್ ಟೀ ಕೊಡಲಿಲ್ಲ. ನನ್ನ ಕಾರಿಗೆ ಪೆಟ್ರೋಲ್ ಹಾಕಿಸಿಲ್ಲ. ನನ್ನ ಸಹಾಯ ಪಡೆದು ಚುನಾವಣೆ ಗೆದ್ದಿದ್ದಿರಿ, ಈಗ ನನ್ನನ್ನ ಅಮಾನತು ಮಾಡಿದ್ದೀರಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜಾಮೀನು ಪಡೆದ ನಾಲ್ಕೇ ದಿನದಲ್ಲಿ ಮುರುಘಾ ಶ್ರೀ ಮತ್ತೆ ಅರೆಸ್ಟ್

  • ಬಿಜೆಪಿ ಜೊತೆ ಜೆಡಿಎಸ್ ಹೋಗಲ್ಲ.. ನನ್ನದು ಒರಿಜಿನಲ್ ಜೆಡಿಎಸ್: ಸಿಎಂ ಇಬ್ರಾಹಿಂ

    ಬಿಜೆಪಿ ಜೊತೆ ಜೆಡಿಎಸ್ ಹೋಗಲ್ಲ.. ನನ್ನದು ಒರಿಜಿನಲ್ ಜೆಡಿಎಸ್: ಸಿಎಂ ಇಬ್ರಾಹಿಂ

    – ನಮ್ಮ ಬೆಂಬಲ ಇಂಡಿಯಾ ಒಕ್ಕೂಟಕ್ಕೆ; ದೇವೇಗೌಡರು ಮೈತ್ರಿ ನಿರ್ಧಾರ ಮಾಡಿಲ್ಲ

    ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ಹೋಗಲ್ಲ. ಇದು ನಮ್ಮ ಮೊದಲ ನಿರ್ಧಾರ. ಬಿಜೆಪಿ ಜೊತೆ ಹೋಗಬೇಡಿ ಅಂತ ಹೆಚ್.ಡಿ.ದೇವೇಗೌಡರಿಗೆ ಹೇಳುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M.Ibrahim) ತಿಳಿಸಿದರು.

    ಬಿಜೆಪಿ ಜೊತೆ ಮೈತ್ರಿ (BJP-JDS Alliance) ವಿರೋಧಿಸಿ ಇಂದು (ಭಾನುವಾರ) ಬೆಂಬಲಿಗರ ಚಿಂಥನ-ಮಂಥನ ಸಭೆಯನ್ನ ಸಿ.ಎಂ ಇಬ್ರಾಹಿಂ ಕರೆದಿದ್ದರು. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿ ಮೈತ್ರಿಗೆ ವಿರೋಧ ಘೋಷಣೆ ಮಾಡಿದರು. ಇದನ್ನೂ ಓದಿ: ಮದ್ಯದಂಗಡಿ ಲೈಸೆನ್ಸ್ ವಿವಾದ- ವೇದಿಕೆ ಮೇಲೆಯೇ ಶಿವಲಿಂಗೇಗೌಡ, ಸುರೇಶ್ ಕಿತ್ತಾಟ

    ಈ ಕುರಿತು ಮಾತನಾಡಿರುವ ಅವರು, ಜೆಡಿಎಸ್ ಬಿಜೆಪಿ ಜೊತೆ ಹೋಗುವುದಿಲ್ಲ. ಇದು ನಮ್ಮ ಮೊದಲ ನಿರ್ಧಾರ. ದೇವೇಗೌಡರಿಗೆ ಸಭೆ ನಿರ್ಧಾರ ತಿಳಿಸುತ್ತೇವೆ. ನೀವು ಮೈತ್ರಿಗೆ ಒಪ್ಪಿಗೆ ಕೊಡಬಾರದು ಎಂದು ಮನವಿ ಮಾಡುತ್ತೇವೆ. ಬಿಜೆಪಿ ಜೊತೆ ಹೋಗಬೇಡಿ ಅಂತ ಹೇಳುತ್ತೇವೆ ಎಂದರು.

    ನನ್ನದು ಒರಿಜಿನಲ್ ಜೆಡಿಎಸ್. ನಮ್ಮದು ಜಾತ್ಯತೀತ ಜೆಡಿಎಸ್. ನಮ್ಮ ಪಕ್ಷದ ನಿರ್ಧಾರ ಮೈತ್ರಿಗೆ ಒಪ್ಪಿಗೆ ಇಲ್ಲ. ಶಾಸಕರ ಜೊತೆ ಒನ್ ಟು ಮಾತಾಡ್ತೀನಿ. ಶಾಸಕರು ನನ್ನ ಜೊತೆ ಮಾತಾಡಿದ್ದಾರೆ. ಯಾರ್ ಯಾರು ಅಂತ ಹೇಳೋದಿಲ್ಲ. ಸಮಯ ಬಂದಾಗ ಯಾರು ಯಾರು ಬರ್ತಾರೆ ಅಂತ ಗೊತ್ತಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಐಟಿ ದಾಳಿಯಲ್ಲಿ SST ಟ್ಯಾಕ್ಸ್, ಸಂತೋಷ್ ಮನೆಯಲ್ಲಿ ಸಿಕ್ಕಿದ್ದು YST ಕಲೆಕ್ಷನ್: ಹೆಚ್‍ಡಿಕೆ ಹೊಸ ಬಾಂಬ್

    ನಿಮ್ಮ ನಿಲುವು ಒಪ್ಪದೇ ಹೋದರೆ ಕುಮಾರಸ್ವಾಮಿರನ್ನ ಉಚ್ಚಾಟನೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉಚ್ಚಾಟನೆಗೆ ಕಾಲ ಪಕ್ವ ಆಗಿಲ್ಲ. ನಾನೇ ಜೆಡಿಎಸ್ ಬಿಟ್ಟು ಹೋಗ್ತೀನಿ ಅಂತಾರೆ, ಏನ್ ಮಾಡಲಿ. ನಾನು ಜೆಡಿಎಸ್ ಬಿಟ್ಟು ಹೋಗೊಲ್ಲ. ನಮ್ಮ ಮನೆ ಬಿಟ್ಟು ನಾನು ಯಾಕೆ ಹೋಗಲಿ. ನಮ್ಮ ನಿಲುವು ದೇವೇಗೌಡರಿಗೆ ತಿಳಿಸ್ತೀವಿ. ಅವರು ಒಪ್ಪದೇ ಹೋದರೆ ಏನ್ ಮಾಡ್ತೀವಿ ಅಂತ ಕಾದುನೋಡಿ. ಕುಮಾರಸ್ವಾಮಿ ಉಚ್ಚಾಟನೆ ಮಾಡ್ತೀರಾ ಅನ್ನೋ ಪ್ರಶ್ನೆಗೆ ವೇಯ್ಟ್ ಅಂಡ್ ಸಿ ಎಂದು ಪ್ರತಿಕ್ರಿಯಿಸಿದರು.

    ಎನ್‌ಡಿಎ ಸೋಲಿಸಬೇಕು. ಹೀಗಾಗಿ ಐಎನ್‌ಡಿಐಎಗೆ ಬೆಂಬಲ ಕೊಡಬೇಕು ಅಂತ ನಿರ್ಣಯ ಆಗಿದೆ. ಮೈತ್ರಿ ಬಗ್ಗೆ ನಿಲುವು ತಿಳಿಸೋಕೆ ಕೋರ್ ಕಮಿಟಿ ಮಾಡ್ತೀನಿ. ಅದು ಮುಂದಿನ ತೀರ್ಮಾನ ಮಾಡುತ್ತೆ. ನಾನು ದೇವೇಗೌಡರನ್ನ ಭೇಟಿ ಆಗ್ತೀನಿ. ಯಾವಾಗ ಅಂತ ಹೇಳಿ ಹೋಗ್ತೀನಿ. ಸದ್ಯ ಒರಿಜಿನಲ್ ಜೆಡಿಎಸ್ ಇಂಡಿಯಾಗೆ ಬೆಂಬಲ ಕೊಡುತ್ತೆ ಎಂದು ತಮ್ಮ ನಿಲುವು ತಿಳಿಸಿದರು. ಇದನ್ನೂ ಓದಿ: ಐಟಿ, ಇಡಿ, ಸಿಬಿಐ ಎಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿವೆ; ಅವರು ಆಡಿದ್ದೇ ಆಟ: ಸಂತೋಷ್ ಲಾಡ್

    ಸಭೆಯಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಾಟೇಲ್, ಜೆಡಿಎಸ್‌ಗೆ ರಾಜೀನಾಮೆ ನೀಡಿರುವ ಸೈಯದ್ ಶಫಿಉಲ್ಲಾ, ಹಾವೇರಿ ಜಿಲ್ಲೆಯ ಜೆಡಿಎಸ್ ಮುಖಂಡ ಮನೋಹರ್ ತಹಶಿಲ್ದಾರ್ ಸೇರಿ ಹಲವು ಮುಸ್ಲಿಂ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್ ಗ್ಯಾರಂಟಿ ಅತ್ತೆ-ಸೊಸೆ ಮಧ್ಯೆ ಜಗಳ ತಂದಿಡುತ್ತಿದೆ- ಸಿ.ಎಂ ಇಬ್ರಾಹಿಂ

    ಕಾಂಗ್ರೆಸ್ ಗ್ಯಾರಂಟಿ ಅತ್ತೆ-ಸೊಸೆ ಮಧ್ಯೆ ಜಗಳ ತಂದಿಡುತ್ತಿದೆ- ಸಿ.ಎಂ ಇಬ್ರಾಹಿಂ

    ಬೆಂಗಳೂರು: ಕಾಂಗ್ರೆಸ್ (Congress) ಗ್ಯಾರಂಟಿ ಅತ್ತೆ-ಸೊಸೆ ಮಧ್ಯೆ ಜಗಳ ತಂದಿಡುತ್ತಿದೆ. ಕಾಂಗ್ರೆಸ್ ಮನೆ ಮನೆಗೂ ಜಗಳ ಹಚ್ಚಲು ಹೊರಟಿದೆ. ಕಾಂಗ್ರೆಸ್ ಗ್ಯಾರಂಟಿಯನ್ನು ನಂಬಬೇಡಿ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M.Ibrahim) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮನೆ ಒಡತಿಗೆ 2 ಸಾವಿರ ಕೊಡುತ್ತೇವೆ ಎಂದು ಹೇಳಿದ್ದಾರೆ. ಅತ್ತೆ-ಸೊಸೆ ಇರೋ ಮನೆ ಕಥೆ ಏನು? ಸೊಸೆಗೆ 2 ಸಾವಿರ ಕೊಟ್ಟರೆ ಅತ್ತೆಗೆ ಏನು ಕೊಡುತ್ತೀರಾ? ಅವರು ಹೊಡೆದಾಡಬೇಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾರ್ಮಿಕ ಇಲಾಖೆಯ ಎಡವಟ್ಟು; ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಕಾರ್ಮಿಕರು

    ಕಾಂಗ್ರೆಸ್ ಮತ್ತು ಬಿಜೆಪಿಯವರು (BJP) ಅತಂತ್ರ ಎಂದು ಹೇಳುತ್ತಿದ್ದಾರೆ. ಮುಂಡೇವು ಚೆನ್ನಾಗಿ ಕಾಣಲಿ ಅಂತ ಮೇಕಪ್ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ಗೂ ಪೂರ್ಣ ಬಹುಮತ ಬರೋದು ಇಷ್ಟ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ. ಜೆಡಿಎಸ್ ಜನರ ಮನಸ್ಸಿನಲ್ಲಿದೆ. ಈ ಬಾರಿ ಅತಂತ್ರ ಸರ್ಕಾರ ಬರುವುದಿಲ್ಲ. ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ಮಾಡುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: JDS ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ, HDK ಸಿಎಂ ಆಗ್ತಾರೆ: ಇಬ್ರಾಹಿಂ

    ಜನರಿಗಾಗಿ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ರೈತರ ಹೆಣ್ಣುಮಕ್ಕಳನ್ನು ಮದುವೆ ಆದರೆ 2 ಲಕ್ಷ ಕೊಡುತ್ತೇವೆ. ಎಕರೆಗೆ 10 ಸಾವಿರ ಬಿತ್ತನೆಗೆ ಕೊಡುತ್ತೇವೆ. 5 ವರ್ಷಗಳಲ್ಲಿ ನೀರಾವರಿ ಯೋಜನೆ ಮುಕ್ತಾಯ ಮಾಡುತ್ತೇವೆ. ಇದು ನಮಗೆ ರೈತರ ಬಗ್ಗೆ ಇರುವ ಕಾಳಜಿ ಎಂದರು. ಇದನ್ನೂ ಓದಿ: ನನಗೆ ವಯಸ್ಸಾಗಿದೆ, ಟಿಕೆಟ್ ಬೇಡ: ಶಾಸಕ ಎಂ.ವೈ ಪಾಟೀಲ್

    200 ಯುನಿಟ್ ವಿದ್ಯುತ್ ಎನ್ನುತ್ತಾರೆ. ಆದರೆ ನಾವು 3 ಫೇಸ್ ವಿದ್ಯುತ್ 24 ಗಂಟೆ ರೈತರಿಗೆ ಕೊಡುತ್ತೇವೆ. ರೈತರ ಪಂಪ್ ಸೆಟ್‌ಗೆ ಮೀಟರ್ ಇಲ್ಲ. ಇದು ಜೆಡಿಎಸ್ ಬದ್ಧತೆ. ಕಾಂಗ್ರೆಸ್ ಗ್ಯಾರಂಟಿ ನಂಬಬೇಡಿ ಎಂದು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ (Guarantee Card) ಬಗ್ಗೆ ಟೀಕಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತೀಯ ಬ್ರಾಹ್ಮಣ ಮಾಹಾಸಂಘ ವಾಗ್ದಾಳಿ

  • ಸಿಎಂ ಇಬ್ರಾಹಿಂಗೆ ದೃಷ್ಠಿ ತೆಗೆದು ನೋಟಿನ ಸುರಿಮಳೆ ಸುರಿಸಿದ ಯುವಕ!

    ಸಿಎಂ ಇಬ್ರಾಹಿಂಗೆ ದೃಷ್ಠಿ ತೆಗೆದು ನೋಟಿನ ಸುರಿಮಳೆ ಸುರಿಸಿದ ಯುವಕ!

    ಕೋಲಾರ: ಕಾರ್ಯಕರ್ತನೊಬ್ಬ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M Ibrahim) ಅವರ ದೃಷ್ಠಿ ತೆಗೆದು ನೋಟಿನ ಸುರಿಮಳೆಗೈದ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಮುಳಬಾಗಿಲಿನಲ್ಲಿ (Mulabagilu) ಸೋಮವಾರ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶವನ್ನು ಆಯೋಜಿಸಿತ್ತು. ಸಮಾವೇಶಕ್ಕೂ ಮುನ್ನ ರೋಡ್ ಶೋ (Roadshow) ವೇಳೆ ಕಾರ್ಯಕರ್ತ ವಾಹನದ ಮೇಲೇರಿ ಇಬ್ರಾಹಿಂ ಹಾಗೂ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ದೃಷ್ಠಿ ತೆಗೆದು ನೋಟನ್ನು ಗಾಳಿಗೆ ತೂರಿದ್ದಾನೆ. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಹರಕೆ ಕುರಿ ಮಾಡ್ಬೇಡಿ: ನಿಖಿಲ್ ಸಲಹೆ

    10, 20, 50 ಮುಖ ಬೆಲೆಯ ಎರಡು ಕಂತೆಗಳನ್ನ ನಾಯಕರಿಗೆ ದೃಷ್ಠಿ ತೆಗೆದು ಎಸೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ನೋಟಿಗಾಗಿ ಅಲ್ಲಿದ್ದ ಜನ ಮುಗಿಬಿದ್ದ ಸನ್ನಿವೇಶ ಕೂಡ ನಡೆದಿದೆ. ಇದನ್ನೂ ಓದಿ: ಕುಡಿದು ಗಲಾಟೆ ಮಾಡುತ್ತಿದ್ದವನ ಪ್ರಶ್ನೆ ಮಾಡಿದ ಸಂಬಂಧಿಯನ್ನೇ ಕೊಂದ- ಮತ್ತೋರ್ವನಿಗೆ ಗಾಯ

  • ಗುಬ್ಬಿ ಶ್ರೀನಿವಾಸ್‌ಗೆ ಆಹ್ವಾನ – ಇಬ್ರಾಹಿಂ ವಿರುದ್ಧ ಹೆಚ್‌ಡಿಕೆ ಗರಂ

    ಗುಬ್ಬಿ ಶ್ರೀನಿವಾಸ್‌ಗೆ ಆಹ್ವಾನ – ಇಬ್ರಾಹಿಂ ವಿರುದ್ಧ ಹೆಚ್‌ಡಿಕೆ ಗರಂ

    ಹಾಸನ: ಗುಬ್ಬಿ ಶ್ರೀನಿವಾಸ್ ಅವರನ್ನು ಮತ್ತೆ ಜೆಡಿಎಸ್‌ಗೆ (JDS) ಆಹ್ವಾನ ಮಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (C.M.Ibrahim) ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D.Kumaraswamy) ಗರಂ ಆಗಿದ್ದಾರೆ.

    ಹಾಸನ (Hassan) ಜಿಲ್ಲೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ವಡ್ಡರಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಗುಬ್ಬಿ (Gubbi) ಕ್ಷೇತ್ರದಲ್ಲಿ ಕುಮಾರಸ್ವಾಮಿನೇ ಅಲ್ಟಿಮೇಟ್ ಎಂದು ಯಾರಾದರೂ ಹೇಳಿದ್ದರೆ ಬಾಯಿತಪ್ಪಿ ಹೇಳಿರಬೇಕು. ನನ್ನ ಅರಿವಿಲ್ಲದೆ ಯಾರಿಗೂ ನಾನು ಪವರ್ ಕೊಡಲಿಲ್ಲ. ಈಗಾಗಲೇ ನಮ್ಮ ಅಭ್ಯರ್ಥಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ನಾಗರಾಜ್ ಅಭ್ಯರ್ಥಿ ಎಂದು ಘೋಷಣೆ ಆಗಿದೆ. ಇಲ್ಲಿ ಯಾರೂ ಇಂತಹ ಹೇಳಿಕೆಗಳನ್ನು ಕೊಟ್ಟು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಬಾರದು. ಈ ತರಹದ ಹೇಳಿಕೆ ಕೊಟ್ಟಿದ್ದರೆ ಅದು ತಪ್ಪು. ಈ ರೀತಿಯ ಹುಡುಗಾಟದ ಹೇಳಿಕೆ ಕೊಡುವುದಲ್ಲ ಎಂದು ವಾರ್ನಿಂಗ್ ಮಾಡಿದರು. ಇದನ್ನೂ ಓದಿ: Jaggesh@60- ಮೋದಿ ಭೇಟಿ ಮಾಡಿ, ನನ್ನ ಬದುಕಿನ ಶ್ರೇಷ್ಠ ದಿನ ಎಂದ ನಟ ಜಗ್ಗೇಶ್ 

    ಆ ವ್ಯಕ್ತಿ ಪಕ್ಷದಿಂದ ದೂರ ಹೋಗಿ 2 ವರ್ಷಗಳಾಗಿವೆ. ಆ ವ್ಯಕ್ತಿಯನ್ನು ಬಾರಪ್ಪ ಎಂದು ಕರೆಯಲು ನಾವೇನು ಇಲ್ಲಿ ಅರ್ಜಿ ಹಾಕಿದ್ದೇವಾ? ಇಲ್ಲಿ ಯಾವುದೇ ಗೊಂದಲವಿಲ್ಲ. ಗುಬ್ಬಿದಾಗಲಿ, ಮತ್ತೊಂದಾಗಲಿ ತೀರ್ಮಾನ ಆಗಿಹೋಗಿದೆ. ನಮ್ಮ ನಾಯಕರಿಗೆ ಯಾರೂ ಗೊಂದಲ ಮಾಡಬಾರದು. ಈಗಾಗಲೇ ಒಂದು ಬಾರಿ ಮೈಸೂರು (Mysuru) ಜಿಲ್ಲೆ ನಾಯಕರು, ಮಂಡ್ಯ (Mandya) ಜಿಲ್ಲೆಗೆ ಹೋಗಿ ಅದೊಂದು ನಗೆಪಾಟಲಾಯಿತು. ಆ ರೀತಿಯಾದ ನಗೆಪಾಟಲು ಯಾಕೆ ಮಾಡಿಕೊಳ್ಳಬೇಕು? ನಮ್ಮಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾರೆ ಹಾಗೂ ಕೆಲಸ ಮಾಡುತ್ತಿದ್ದಾರೆ. ಎಲ್ಲಿಯೂ ಅಷ್ಟೇ, ಯಾವುದೇ ಕ್ಷೇತ್ರದಲ್ಲಿಯೂ ಗೊಂದಲಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದರು. ಇದನ್ನೂ ಓದಿ: ಬಡವರಿಗೆ ಮನೆ, ಅನಾಥಾಶ್ರಮಗಳಿಗೆ ಮಧ್ಯಾಹ್ನದ ಭೋಜನ – ಇದು ದಿನಗೂಲಿ ನೌಕರರಿಂದಲೇ ರಚನೆಯಾದ ಟ್ರಸ್ಟ್‌

  • ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು: ಸಿ.ಎಂ ಇಬ್ರಾಹಿಂ

    ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು: ಸಿ.ಎಂ ಇಬ್ರಾಹಿಂ

    ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ (Bengaluru-Mysuru Expressway) ಹೆದ್ದಾರಿಯ ಕ್ರೆಡಿಟ್ ರೇವಣ್ಣ (H.D.Revanna) ಅವರಿಗೆ ಸಲ್ಲಬೇಕು. ಅವರ ಚಿಂತನೆಯಿಂದಲೇ ಈ ಹೆದ್ದಾರಿ ನಿರ್ಮಾಣವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M.Ibrahim) ಹೇಳಿದ್ದಾರೆ.

    ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಕ್ರೆಡಿಟ್ ವಾರ್ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು. ಇದರ ಉದ್ಘಾಟನೆಯನ್ನು ಮೋದಿಯವರು (Narendra Modi) ಮಾಡುತ್ತಿದ್ದಾರೆ. ಇದು ಸಂತೋಷದ ವಿಷಯ. ಆದರೆ ಇದನ್ನು ಚುನಾವಣೆಗೆ ಬಳಸುತ್ತೇವೆ ಎಂದರೆ ಆ ರೋಡಿನಲ್ಲಿ ಬಿಜೆಪಿ ಪಕ್ಷಕ್ಕೆ ಒಂದು ಸೀಟೂ ಬರುವುದಿಲ್ಲ. ಎಷ್ಟೇ ಶೋಗಳನ್ನು ಮಾಡಿದರೂ ಆಗುವುದಿಲ್ಲ. ಸುಮಲತಾ (Sumalatha Ambareesh) ಬಿಜೆಪಿಗೆ (BJP) ಸೇರಬೇಕು ಎನ್ನುತ್ತಿದ್ದಾರೆ. ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾರಾಯಣ ಗೌಡ (Narayana Gowda) ಕಾಂಗ್ರೆಸ್‌ಗೆ (Congress) ಹೋಗುತ್ತಾರೆ ಎನ್ನುತ್ತಾರೆ. ಹೀಗಾದರೆ ರಾಜಕೀಯದಲ್ಲಿ ನೈತಿಕತೆ ಎಲ್ಲಿ ಉಳಿಯಿತು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಕಾಂಗ್ರೆಸ್‌ ಸೇರ್ಪಡೆ

    ಜನತಾ ದಳದ (JDS) ವಿಷನ್ ಕ್ಲಿಯರ್ ಆಗಿದೆ. ಜೈಲು, ಬೇಲ್ ಇಲ್ಲದವರಿಗೆ ಮಾತ್ರ ಜೆಡಿಎಸ್ ಟಿಕೆಟ್ ನೀಡುತ್ತಿದೆ. 17ರಲ್ಲಿ ಎಷ್ಟು ಜನ ಕಾಂಗ್ರೆಸ್ ಗೆ ಹೋಗುತ್ತಿದ್ದಾರೆ. ಇವರಲ್ಲಿ ನಾವು ಯಾರನ್ನೂ ಸೇರಿಸಿಕೊಳ್ಳುವುದಿಲ್ಲ. ಅವರೇ ಬಂದರೂ ನಾವು ಕರೆದುಕೊಳ್ಳುವುದಿಲ್ಲ ಎಂದು ಸ್ಪಷ್ಟ ತೀರ್ಮಾನ ಮಾಡಿದ್ದೇವೆ. ಇವತ್ತು ನಾವು ಒಬ್ಬೊಬ್ಬರನ್ನು ತೂಕ ಮಾಡಿ, ಅಳತೆ ಮಾಡಿ ತೆಗೆದುಕೊಳ್ಳುತ್ತಿದ್ದೇವೆ. ಇದಕ್ಕೆ ಕಾರಣ ಈ ಪಕ್ಷವನ್ನು ಒಂದು ಬುನಾದಿ ಮೇಲೆ ತೆಗೆದುಕೊಂಡು ಹೋಗಬೇಕು. ನಾವು ಕಾರ್ಯಕ್ರಮದ ಮೇಲೆ ಚುನಾವಣೆಗೆ ಹೋಗುತ್ತಿದ್ದೇವೆ ಹೊರತು ರೋಡ್ ಶೋ (Road Show) ಮೇಲಲ್ಲ ಎಂದರು.

    ಬಿಜೆಪಿ ಮೋದಿ ಹೆಸರಿನ ಮೇಲೆ, ಕಾಂಗ್ರೆಸ್ ಸೋನಿಯಾ ಹೆಸರಿನ ಮೇಲೆ ಚುನಾವಣೆಗೆ ಹೋಗುತ್ತಿದೆ. ಆದರೆ ನಾವು ಪಂಚರತ್ನ ಕಾರ್ಯಕ್ರಮದ ಮೇಲೆ ಹೋಗುತ್ತಿದ್ದೇವೆ. ಅವರೆಲ್ಲಾ ಉಚಿತ ಖಚಿತ ಎನ್ನುತ್ತಾರೆ. ಯಾರಿಗೆ ಕೊಡುತ್ತಾರೆ? ಸೊಸೆಗಾ ಅಥವಾ ಅತ್ತೆಗಾ? ಹೀಗಾಗಿ ನಾವು 65 ವರ್ಷ ವಯಸ್ಸಾದವರಿಗೆ ಪೆನ್ಷನ್ ಹಾಗೂ ವಿಧವೆಯರಿಗೆ 500 ರೂ. ನೀಡುತ್ತೇವೆ ಎಂದು ಖಚಿತವಾಗಿ ಹೇಳಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿರುವುದಕ್ಕೂ ಸಿಜೆಐಗೆ ಪತ್ರ ಬರೆದಿದ್ದಕ್ಕೂ ಸಂಬಂಧ ಇಲ್ಲ: ವಿವೇಕ್ ರೆಡ್ಡಿ

    ಸೋಮಣ್ಣ (V.Somanna) ಕಾಂಗ್ರೆಸ್‌ಗೆ ಸೇರ್ಪಡೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸೋಮಣ್ಣ ಕಾಂಗ್ರೆಸ್‌ಗೆ ಹೋಗುವುದಿಲ್ಲ. ನಾನು ಅವರ ಬಳಿ ಮಾತನಾಡಿದ್ದೇನೆ. ಅವರಿಗೂ, ಬಿ.ಎಸ್.ಯಡಿಯೂರಪ್ಪನವರಿಗೂ (B.S.Yediyurappa) ಭಿನ್ನಾಭಿಪ್ರಾಯವಿದೆ ಅಷ್ಟೇ. ಇದು ಆಂತರಿಕ ಸಮಸ್ಯೆಯಾಗಿದ್ದು ಅವರಿಗೂ, ಇವರಿಗೂ, ವಿಜಯೇಂದ್ರಗೂ ಸರಿ ಹೊಂದುತ್ತಿಲ್ಲ ಅಷ್ಟೇ. ಸೋಮಣ್ಣನವರಿಗೆ ಇದ್ದ ವರ್ಚಸ್ಸು ಅವರಿಗೆ ಇದ್ದೇ ಇದೆ. ಸೋಮಣ್ಣನಿಗೆ ಶಕ್ತಿ ದೊರತಿದ್ದೇ ಜನತಾ ದಳದಿಂದ ಎಂದರು.

    ಈಶ್ವರ್ ಖಂಡ್ರೆ ಅವರು ಲೋಕಸಭೆ ಚುನಾವಣೆಯಲ್ಲಿ ನಿಂತಿದ್ದರಲ್ಲಾ, ಒಂದು ಲಿಂಗಾಯತರ ಮತ ಬಂತಾ ಅವರಿಗೆ? ಈಶ್ವರ್ ಖಂಡ್ರೆಗೂ ಶಾಮನೂರು ಅವರಿಗೂ ಲಿಂಗಾಯತರಿಂದ ಒಂದು ಮತ ಬರಲಿಲ್ಲ. ಅವರ ಹೆಂಡತಿಯೇ ಒಂದು ಮತ ಹಾಕಲಿಲ್ವೇನೋ ಗೊತ್ತಿಲ್ಲ. ಮತ ಹಾಕುವುದು ಸಾಬರು. ಆದರೆ ವೀರಶೈವ ಎಂದು ಹೇಳಿಕೊಳ್ಳುತ್ತಾರೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ದಶಪಥ ರಸ್ತೆ ಜೆಡಿಎಸ್ ಸರ್ಕಾರದ ಕೊಡುಗೆ – ಶಾಸಕ ಪುಟ್ಟರಾಜು

    ಯಡಿಯೂರಪ್ಪ ರಾಜಕಾರಣದಲ್ಲಿ ಬೆಳೆಯಲು ವೀರೇಂದ್ರ ಪಾಟೀಲ್ ಕಾಂಗ್ರೆಸ್‌ನಿಂದ ಹೊರ ಹೋಗಿದ್ದೇ ಕಾರಣ. ಇದು ಅವರಿಗೆ ವರದಾನವಾಯಿತು. ಇಲ್ಲವೆಂದರೆ ಯಡಿಯೂರಪ್ಪ ರಾಜಕಾರಣದಲ್ಲಿ ಬೆಳೆಯುತ್ತಿರಲಿಲ್ಲ. ಇವರ ಶಕ್ತಿಯೇನು ಎಂದು ನಮಗೆ ಗೊತ್ತಿದೆ ಎಂದು ಹೇಳಿದರು.

    ನಮ್ಮ ಪ್ರತಿನಿಧಿಗಳು ಚುನಾವಣಾ ಆಯೋಗದ ಸಭೆಗೆ ಹೋಗಿದ್ದಾರೆ. ಕುಕ್ಕರ್ ಹಂಚುವಿಕೆ ಹಾಗೂ ಸೀರೆ ಹಂಚುವುದನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಬಹಿರಂಗವಾಗಿ ಮಾಡುತ್ತಿದೆ. ಕುಕ್ಕರ್ ಬ್ಲಾಸ್ಟ್ ಆಗಿ ಇಬ್ಬರು ಗಂಭೀರಗೊಂಡಿದ್ದಾರೆ. ಇದರ ಬಗ್ಗೆ ಪೊಲೀಸರು ಅಥವಾ ಚುನಾವಣಾ ಆಯೋಗ ಇದನ್ನು ಗಮನಕ್ಕೆ ತೆಗೆದುಕೊಂಡಿದೆಯಾ? ಈ ಕುರಿತು ಬೀದರ್ ಡಿಸಿ ಹಾಗೂ ಎಸ್ಪಿ ಕ್ರಮ ಕೈಗೊಳ್ಳದೇ ಇದ್ದರೆ ನಾನು 15ನೇ ತಾರೀಕಿನಂದು ಡಿಸಿ ಕಚೇರಿ (DC Office) ಮುಂದೆ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ಪಕ್ಷ ರಿಲೀಸ್ ಆಗಲಿ ಎಂದು ಹೇಳಿದ್ದೇವೆ. ಚರ್ಚೆ ಇನ್ನೂ ಮುಗಿದಿಲ್ಲ. ಹಾಗಾಗಿ ಪಟ್ಟಿ ರಿಲೀಸ್ ಫೈನಲ್ ಆಗಲಿಲ್ಲ ಎಂದರು. ಅಪ್ಲಿಕೇಷನ್ ಶುಲ್ಕ ಒಂದು ಲಕ್ಷ ರೂ. ಮಾಡಿದ್ದೇವೆ. ದಲಿತ ಅಭ್ಯರ್ಥಿಗಳಿಗೆ 50 ಸಾವಿರ ರೂ. ಮಾಡಿದ್ದೇವೆ. ಕುರುಬ ನಾಯಕರು ಇದ್ದೇ ಇದ್ದಾರೆ. ಜಿಲ್ಲೆಗೊಂದು, ತಾಲೂಕಿಗೊಂದು ಎಂದು ಏನಿಲ್ಲ. ಸಾಮಾಜಿಕ ನ್ಯಾಯ ಮನಸಿನಲ್ಲಿ ಇಟ್ಟುಕೊಂಡು ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಹೆಂಡತಿ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡಲ್ಲ: ಕಟೀಲ್

  • ಉತ್ತರ ಪ್ರದೇಶದ ಸಿಎಂ ಮದುವೆಯಾಗಿದ್ರೆ ಬೆಲೆ ಏರಿಕೆ ಆಗುತ್ತಿರಲಿಲ್ಲ – ಯೋಗಿ ಆದಿತ್ಯನಾಥ್ ವಿರುದ್ಧ ಇಬ್ರಾಹಿಂ ವ್ಯಂಗ್ಯ

    ಉತ್ತರ ಪ್ರದೇಶದ ಸಿಎಂ ಮದುವೆಯಾಗಿದ್ರೆ ಬೆಲೆ ಏರಿಕೆ ಆಗುತ್ತಿರಲಿಲ್ಲ – ಯೋಗಿ ಆದಿತ್ಯನಾಥ್ ವಿರುದ್ಧ ಇಬ್ರಾಹಿಂ ವ್ಯಂಗ್ಯ

    ಮಂಡ್ಯ: ಉತ್ತರ ಪ್ರದೇಶದ ಮುಖ್ಯಮಂತ್ರಿ ಮದುವೆಯಾಗಿದ್ದರೆ ಬೆಲೆ ಏರಿಕೆ ಆಗುತ್ತಿರಲಿಲ್ಲ ಎಂದು ಯೋಗಿ ಆದಿತ್ಯನಾಥ್ (Yogi Adityanath) ವಿರುದ್ಧ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ (C.M.Ibrahim) ವ್ಯಂಗ್ಯವಾಡಿದ್ದಾರೆ.

    ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿ ಸಿಎಂಗೆ ಮದುವೆ ಆಗಿದ್ದರೆ ಬೆಲೆ ಏರಿಕೆ ಆಗ್ತಿರಲಿಲ್ಲ. ಹೆಂಡತಿ, ಮಕ್ಕಳಿಲ್ಲದವರ ಕೈಗೆ ದೇಶ ಕೊಟ್ರೆ ಬೆಲೆ ಏರಿಕೆ ಆಗದೆ ಇನ್ನೇನು? ಲವ್ ಲವ್ ಅಂತಾವೆ, ಲವ್ ಅಂದರೆ ಏನ್ ಗೊತ್ತು ಯೋಗಿಗೆ? ಲವ್ ಮಾಡಿ ಎಲ್ರೂ ಮದುವೆ ಆಗ್ತಾರೆ, ಲವ್ ಅನುಭವ ಅವನಿಗೆ ಇಲ್ಲ. ಸಂಸಾರ ನಡೆಸುವ ಅನುಭವ ಇಲ್ಲ. ಹಾಗಾಗಿ ಇಂತಹವರ ಕೈಗೆ ದೇಶ ಕೊಟ್ರೆ ಆಡಳಿತ ನಡೆಸಲು ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನನಗೀಗ 52 ವಯಸ್ಸು.. ಈಗಲೂ ಸ್ವಂತ ಮನೆಯೇ ಇಲ್ಲ: ರಾಹುಲ್‌ ಗಾಂಧಿ

    ಹಾಸನ (Hassan) ಟಿಕೆಟ್ ಫೈಟ್ ಕುರಿತು ಮಾತನಾಡಿ, ಕ್ಷೇತ್ರದ ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಇನ್ನೂ ಚರ್ಚೆ ಮಾಡಬೇಕಿದೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೇಳುವ ಹಕ್ಕಿದೆ. ದೇವೇಗೌಡರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಮಾಜಿ ಸಚಿವ ರೇವಣ್ಣ ಹೇಳಿದ್ದಾರೆ. ಹಾಸನ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ದೇವೇಗೌಡರ (H.D.Deve Gowda) ಕುಟುಂಬದಲ್ಲಿ ಅಂತಹ ಯಾವುದೇ ಗೊಂದಲ ಮೂಡುವುದಿಲ್ಲ ಎಂದಿದ್ದಾರೆ.

    ರಾಜ್ಯದಲ್ಲಿ ಜೆಡಿಎಸ್ ಪರವಾದ ನಿಲುವಿದೆ. ಹಳೇ ಮೈಸೂರಲ್ಲಿ ಪಕ್ಷ ಬಲಿಷ್ಠವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಯಾಗುತ್ತಿದೆ. ಈ ಎರಡೂ ಕಡೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ಬಿಜೆಪಿಗೆ (BJP) ಅಧಿಕಾರ ಇದೆ ಎಂದು ಜನ ಸೇರುತ್ತಿದ್ದಾರೆ. ಬಿಜೆಪಿಯವರು ಬೇರೆಯವರು ಹುಟ್ಟಿಸಿದವರನ್ನು ತೆಗೆದುಕೊಂಡು ಹೋಗಿ ನಮ್ಮವರು ಎನ್ನುತ್ತಿದ್ದಾರೆ. ಜೆಡಿಎಸ್ ನಾಯಕರನ್ನು ಸೃಷ್ಟಿಸುವ ಪಕ್ಷ, ಪಂಚರತ್ನದ ರೀತಿ ಭಾರತದ ಯಾವುದೇ ರಾಜಕೀಯ ಪಕ್ಷ ಕಾರ್ಯಕ್ರಮವನ್ನು ಕೊಟ್ಟಿಲ್ಲ. ಮಂಡ್ಯದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಉಳಿಸಲು ಮೋದಿ ಪ್ರಯತ್ನ ಪಡುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ಕುಟುಕಿದ್ದಾರೆ.

    ವಯಸ್ಸಿನ ಕಾರಣ ನೀಡಿ ಯಡಿಯೂರಪ್ಪರನ್ನು ಶಾಶ್ವತವಾಗಿ ಕೂರಿಸಿದ್ದಾರೆ. ಲಿಂಗಾಯತ ಮತ ಪಡೆದು ಅಧಿಕಾರ ಪಡೆದ ಬಿಜೆಪಿ ಪಂಚಮಸಾಲಿಗಳನ್ನು ಬೀದಿಗೆ ತಂದಿದೆ. ಬೇಡ ಜಂಗಮ ಸಮುದಾಯವನ್ನು ಕಡೆಗಣಿಸಿದೆ. ವಿದಾಯದ ಬಳಿಕ ಲಿಂಗಾಯತರ ಬೆಂಬಲ ಕೇಳಿದ ಮಾಜಿ ಸಿಎಂ ಯಡಿಯೂರಪ್ಪರ (B.S.Yediyurappa) ನಡಗೆ, 30 ವರ್ಷದಲ್ಲಿ ಗಂಡ ಸತ್ತರೆ ಮದುವೆ ಆಗಬಹುದು. 8ಂನೇ ವಯಸ್ಸಿನಲ್ಲಿ ಗಂಡ ಸತ್ತರೆ ಮದುವೆಯಾಗಿ ಏನು ಮಾಡುತ್ತೀರಿ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಸಿ.ಟಿ.ರವಿಯನ್ನು ಆರ್‍ಎಸ್‍ಎಸ್ ಮೀಟಿಂಗ್‍ಗಳಿಗೆ ಸೇರಿಸುವುದಿಲ್ಲ. ಸ್ಮಾರ್ಟ್ ಬ್ರಾಹ್ಮಣರಿಗೆ ಅವಕಾಶ ನೀಡಿಲ್ಲ. ಇನ್ನೂ ಈ ಮುಂಡೆತ್ತದ್ದು ಗೌಡ್ರಿಗೆ ಬಿಡ್ತಾರಾ? ರೈತರ ಮಕ್ಕಳಿಗೆ ಗೌರವ ಇರುವುದು ಜೆಡಿಎಸ್ ಪಕ್ಷದಲ್ಲಿ ಮಾತ್ರ. ಕಂಡವರ ಮನೆ ಕೆಲಸಕ್ಕೆ ಹೋಗಿದ್ದೀರಿ ಎಂದು ಸಿಟಿ ರವಿ ವಿರುದ್ಧ ಗುಡುಗಿದ್ದಾರೆ. ಇದನ್ನೂ ಓದಿ: ಈ ವರ್ಷದಲ್ಲೇ ಮೋದಿ ಪಾಕಿಸ್ತಾನವನ್ನ ಸಂಕಷ್ಟದಿಂದ ಪಾರು ಮಾಡ್ತಾರೆ – RAW ಮಾಜಿ ನಿರ್ದೇಶಕ

  • ಮಗನ ಗೆಲುವಿಗಾಗಿ ಕಣ್ಣೀರು ಹಾಕಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ‌. ಇಬ್ರಾಹಿಂ

    ಮಗನ ಗೆಲುವಿಗಾಗಿ ಕಣ್ಣೀರು ಹಾಕಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ‌. ಇಬ್ರಾಹಿಂ

    ಬೀದರ್: ಮಗನ ಗೆಲುವಿಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ‌. ಇಬ್ರಾಹಿಂ (C.M.Ibrahim) ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರು ಹಾಕಿದ ಘಟನೆ ಬೀದರ್ (Bidar) ಜಿಲ್ಲೆಯ ಚಿಟ್ಟಗುಪ್ಪ ದರ್ಗಾದಲ್ಲಿ ನಡೆದಿದೆ.

    ಹಜ್ರತ್ ಸಯ್ಯದ್‌ ಮಖ್ಬೂಬ್‌ ಹುಸೇನಿ ದರ್ಗಾಕ್ಕೆ ಪುತ್ರನ ಜೊತೆ ಭೇಟಿ ನೀಡಿದ ವೇಳೆ ಸಿ.ಎಂ ಇಬ್ರಾಹಿಂ ದರ್ಗಾದ ಗೋರಿಯ ಮುಂದೆ ನಿಂತು ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ಟಾಪ್ ಲೀಡರ್‌ಗಳ ಮೇಲೆ ಟಾರ್ಗೆಟ್ ಮಾಡುವುದು ಸಹಜ: ಸತೀಶ್ ಜಾರಕಿಹೊಳಿ

    700 ಕಿಮೀ ದೂರದಿಂದ ಮಗ ಇಲ್ಲಿಗೆ ಬಂದಿದ್ದಾನೆ. ನನ್ನ ಮಗನನ್ನು ನೀನೇ ರಕ್ಷಿಸಬೇಕು. ಅವನಿಗೆ ಜಯವನ್ನು ಕರುಣಿಸಬೇಕು‌. ಅವನನ್ನು ಕಾಪಾಡಬೇಕು. ನನಗೆ ಇರುವುದು ಒಬ್ಬ ಮಗ. ಆ ಮಗನಿಗೆ ಆಶೀರ್ವಾದ ಮಾಡಿ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿಕೊಡು ದೇವ ಎಂದು ಬೇಡಿಕೊಂಡಿದ್ದಾರೆ.

    ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವಾಗ ಭಾವುಕರಾಗಿ ಕಣ್ಣೀರು ಬರುವುದು ನಿಜ. ಆದರೆ ಸಿ.ಎಂ. ಇಬ್ರಾಹಿಂ ಆ ಭಾಗದ ಮುಸ್ಲಿಮರನ್ನು ಓಲೈಸುವುದಕ್ಕಾಗಿ ದರ್ಗಾದಲ್ಲಿ ಕಣ್ಣೀರು ಹಾಕಿದರೆ ಎಂಬ‌ ಮಾತುಗಳು ಕೇಳಿ ಬಂದಿವೆ. ಈಗಾಗಲೇ ಹುಮ್ನಾಬಾದ್ ಕ್ಷೇತ್ರದಿಂದ ಸಿ.ಎಂ‌. ಇಬ್ರಾಹಿಂ ಪುತ್ರ ಫೈಜ್‌ಗೆ ಜೆಡಿಎಸ್ ಟಿಕೆಟ್ ಘೋಷಣೆಯಾಗಿದ್ದು, ಪುತ್ರನ ಜೊತೆ ಸಿ.ಎಂ. ಇಬ್ರಾಹಿಂ ಕಣ್ಣೀರು ಹಾಕುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಜೆಡಿಎಸ್ ಶಾಸಕ ಶಿವಲಿಂಗೇಗೌಡ 100% ಕಾಂಗ್ರೆಸ್ ಸೇರ್ಪಡೆಯಾಗ್ತಾರೆ: ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುಸ್ಲಿಮರನ್ನು ಯಾವ ಪಕ್ಷದಲ್ಲೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ – ಸಿ.ಎಂ ಇಬ್ರಾಹಿಂ

    ಮುಸ್ಲಿಮರನ್ನು ಯಾವ ಪಕ್ಷದಲ್ಲೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ – ಸಿ.ಎಂ ಇಬ್ರಾಹಿಂ

    ದಾವಣಗೆರೆ: ಮುಸ್ಲಿಮರನ್ನು ಯಾವ ಪಕ್ಷದಲ್ಲೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ಕಾಂಗ್ರೆಸ್ (Congress) ಪಕ್ಷದಲ್ಲಿ ಮುಸ್ಲಿಮರಿಗೆ ಊಟದ ಕೊನೆಯಲ್ಲಿ ಅಳಿದುಳಿದ ಎಂಜಲು ರೀತಿಯಲ್ಲಿ ಸ್ಥಾನಮಾನ ನೀಡ್ತಿದ್ರು. ಆದರೆ ಜೆಡಿಎಸ್ (JDS) ರಾಜ್ಯಾಧ್ಯಕ್ಷರ ಸ್ಥಾನ ನೀಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M.Ibrahim) ಹೇಳಿದ್ದಾರೆ.

    ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಮಲೆಬೇನ್ನೂರು ಗ್ರಾಮದಲ್ಲಿ ಸಾರ್ವಜನಿಕ ಸಭೆ ಮಾಡಿ ಹಬೀವುಲ್ಲಾ ಷಾ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿದ‌ ಬಳಿಕ ಮಾತನಾಡಿದ ಅವರು, ನಾವು ಗುರುವಾರದ ಫಕೀರರಿದ್ದಂತೆ. ಜೋಳಿಗೆ ಹಿಡಿದು ಇಡೀ ರಾಜ್ಯದಲ್ಲಿ ಪ್ರವಾಸ ಮಾಡ್ತಿದ್ದೇವೆ. ಅ ದೇವರು ಅಧಿಕಾರ ಕೊಟ್ಟರೆ ಒಳ್ಳೆದಾಗುತ್ತೆ. ಅಧಿಕಾರ ಕೊಡಲಿಲ್ಲ ಅಂದ್ರೂ ಒಳ್ಳೆಯದು ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: 80 ವರ್ಷ ಆದ್ಮೇಲೆ ಖರ್ಗೆ ಅವರನ್ನ ಡ್ರೈವರ್ ಸೀಟಲ್ಲಿ ಕೂರಿಸಿದ್ದಾರೆ: ಅಶೋಕ್ ಲೇವಡಿ

    ಜೆಡಿಎಸ್‌ನ ವರಿಷ್ಠ ಹೆಚ್.ದೇವೆಗೌಡರು ಮೊಟ್ಟ ಮೊದಲ ಬಾರಿಗೆ ಇಪ್ಪತ್ತು ವರ್ಷಗಳ ಬಳಿಕ ಒಬ್ಬ ಮುಸ್ಲಿಂ ವ್ಯಕ್ತಿಗೆ ಜೆಡಿಎಸ್‌ನ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಮುಸ್ಲಿಮರನ್ನು ಜೆಡಿಎಸ್‌ನ ರಾಜ್ಯಾಧ್ಯಕ್ಷರಾಗಿ ಮಾಡಿದ ಏಕೈಕ ಪಕ್ಷ ಅಂದರೆ ಅದು ಜೆಡಿಎಸ್. ಕರ್ನಾಟಕದಲ್ಲಿ ಯಾವುದೇ ಪಕ್ಷಗಳು ಇತಿಹಾಸದಲ್ಲೇ ಮುಸ್ಲಿಮರನ್ನು ತಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಮರಿಗೆ ಅಳಿದುಳಿದ ಸ್ಥಾನಮಾನ ಕೊಡ್ತಿದ್ರು. ಅದು ಮುಸ್ಲಿಂ ಸಮುದಾಯಕ್ಕೆ ನೀಡ್ತಿದ್ದ ಸ್ಥಾನಮಾನ ಕೊನೆಯ ಚಾಕ್ಣಾ ಇದ್ದಂತೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ದಾವಣಗೆರೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತಿಸಿಲ್ಲ. ಹರಿಹರದಲ್ಲಿ ಮಾತ್ರ ಹಳೇ ವರು ಇದ್ದಾರೆ. ಅ ವರ ಮಾಜಿ ಶಾಸಕ ಶಿವಶಂಕರ್ ಮಾತ್ರ ಹರಿಹರಕ್ಕೆ ಫೈನಲ್ ಮಾಡಲಾಗಿದೆ. ಮಲೆಬೆನ್ನೂರಿನ ಹಬೀವುಲ್ಲಾ ಷಾ ಖಾದ್ರಿಯವರು ನೆಲೆಸಿರುವ ಈ ಸ್ಥಳದಲ್ಲಿ ನಿಂತು ಹೇಳುತ್ತಿದ್ದೇನೆ. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸ್ವತಃ ಬಿಜೆಪಿಯವರೇ ಹಲಾಲ್‌ ಕಟ್‌ ಮಾಡಿ ಕಮಿಷನ್‌ ಹೊಡೆಯುತ್ತಿದ್ದಾರೆ – ಓವೈಸಿ ಆರೋಪ

    Live Tv
    [brid partner=56869869 player=32851 video=960834 autoplay=true]