Tag: Byju’s

  • Byju’sಗೆ ಗುಡ್‌ಬೈ – Dream11 ತೆಕ್ಕೆಗೆ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವ

    Byju’sಗೆ ಗುಡ್‌ಬೈ – Dream11 ತೆಕ್ಕೆಗೆ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವ

    ಮುಂಬೈ: ಕ್ರಿಕೆಟ್‌ ಅಭಿಮಾನಿಗಳ ಜನಪ್ರಿಯ ಗೇಮಿಂಗ್‌ ಪ್ಲಾಟ್‌ಫಾರ್ಮ್ ಡ್ರೀಮ್-11 (Dream11) ಭಾರತ ಕ್ರಿಕೆಟ್ ತಂಡದ ಜೆರ್ಸಿ (Jerseys) ಪ್ರಾಯೋಜಕತ್ವ ಪಡೆದುಕೊಂಡಿದೆ. ಮುಂದಿನ 3 ವರ್ಷಗಳ ಅವಧಿಗೆ ಪ್ರಾಯೋಜಕತ್ವದ ಹಕ್ಕನ್ನು ಪಡೆದುಕೊಂಡಿರುವುದಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಘೋಷಿಸಿದೆ.

    ಬೈಜೂಸ್‌ಗೆ (Byju’s) ಬದಲಾಗಿ ಡ್ರೀಮ್-11 ಜೆರ್ಸಿ ಪ್ರಾಯೋಜಕತ್ವ ತನ್ನದಾಗಿಸಿಕೊಂಡಿದೆ. ಇನ್ಮುಂದೆ ಟೀಂ ಇಂಡಿಯಾ (Team India) ಡ್ರೀಮ್‌-11 ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಇದೇ ತಿಂಗಳಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿ ಮೂಲಕ ಭಾರತ ಡ್ರೀಮ್‌-11 ಜೆರ್ಸಿಯೊಂದಿಗೆ ಕಾಣಿಸಿಕೊಳ್ಳಲಿದೆ.

    ಈವರೆಗೆ ಟೀಂ ಇಂಡಿಯಾ ಜೆರ್ಸಿ (Team India Jerseys) ಪ್ರಾಯೋಜಕತ್ವ ವಹಿಸಿದ್ದ ಬೈಜೂಸ್‌ ಕಳೆದ ಮಾರ್ಚ್‌ ತಿಂಗಳಲ್ಲಿ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿತು. ಅಂದಿನಿಂದ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕರಿಲ್ಲದೇ ಕಣಕ್ಕಿಳಿದಿತ್ತು. ಇತ್ತೀಚೆಗೆ ನಡೆದ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲೂ ಟೀಂ ಇಂಡಿಯಾ ಪ್ರಾಯೋಜಕತ್ವದಿಂದ ವಂಚನೆಯಾಗಿತ್ತು.

    ಬೈಜೂಸ್‌ ಪ್ರಾಯೋಜಕತ್ವದಲ್ಲಿ ಬಿಸಿಸಿಐ ದ್ವಿಪಕ್ಷೀಯ ಸರಣಿಯಲ್ಲಿ ಪ್ರತಿ ಪಂದ್ಯಕ್ಕೆ ಸುಮಾರು 5.50 ಕೋಟಿ ರೂ. ಜೆರ್ಸಿಯಲ್ಲಿ ಲೋಗೋವನ್ನ ಇರಿಸಿದ್ದರೆ, ಐಸಿಸಿ ಟೂರ್ನಿ ಪಂದ್ಯಗಳಲ್ಲಿ ಈ ಮೊತ್ತವು 1.70 ಕೋಟಿ ರೂ.ಗೆ ಇಳಿದಿತ್ತು. ಆದ್ರೆ ಡ್ರೀಮ್‌-11 ಒಪ್ಪಂದಕ್ಕೆ ಹೋಲಿಸಿದರೆ, ಬೈಜೂಸ್‌ಗಿಂತಲೂ ಕಡಿಮೆ ಮೊತ್ತ ಬೀಳುತ್ತದೆ. ಡ್ರೀಮ್‌-11 358 ಕೋಟಿ ರೂ.ಗಳಿಗೆ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವದ ಹಕ್ಕನ್ನು ಖರೀದಿಸಿದೆ. ಇದನ್ನೂ ಓದಿ: ಪಾಕಿಸ್ತಾನ ವಿಶ್ವಕಪ್‌ ಟೂರ್ನಿಗೆ ಬಾರದಿದ್ರೆ ICC ಬಳಿಯಿದೆ ಮಾಸ್ಟರ್‌ ಪ್ಲ್ಯಾನ್‌ – ಇದರಿಂದ ಯಾರಿಗೆ ನಷ್ಟ?

    ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಸಹ-ಸಂಸ್ಥಾಪಕ ಮತ್ತು ಸಿಇಒ ಹರ್ಷ್ ಜೈನ್, ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು, ಅದನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ. ಅಂತಹ ಅವಕಾಶ ಈಗ ನಮಗೆ ಸಿಕ್ಕಿರೋದು ಸಂತಸ ತಂದಿದೆ. ಕೋಟ್ಯಂತರ ಕ್ರೀಡಾಭಿಮಾನಿಗಳಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Asian Games 2023 – ಶಿಖರ್‌ ಧವನ್‌ಗೆ ಟೀಂ ಇಂಡಿಯಾ ನಾಯಕತ್ವ?

    ಬೈಜೂಸ್‌ 2019 ರಿಂದ 2022ರ ವರೆಗೆ ಮೂರು ವರ್ಷಗಳ ಅವಧಿಗೆ ಬಿಸಿಸಿಐ ಜೊತೆಗೆ ಜೆರ್ಸಿ ಪ್ರಾಯೋಕತ್ವ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದನ್ನು 2023ರವರೆಗೂ ವಿಸ್ತರಿಸಿಕೊಂಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೈಜೂಸ್‌ ಸಂಸ್ಥಾಪಕ ರವೀಂದ್ರನ್ ಮೇಲೆ ಇಡಿ ದಾಳಿ

    ಬೈಜೂಸ್‌ ಸಂಸ್ಥಾಪಕ ರವೀಂದ್ರನ್ ಮೇಲೆ ಇಡಿ ದಾಳಿ

    ಬೆಂಗಳೂರು: ಎಜ್ಯುಟೆಕ್‌ ಕಂಪನಿ ಬೈಜೂಸ್‌ (BYJU’s) ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೈಜು ರವೀಂದ್ರನ್ (Raveendran) ಅವರ ಕಚೇರಿ ಮತ್ತು ಮನೆಯ ಮೇಲೆ ಜಾರಿ ನಿರ್ದೇಶಾನಲಯ (Enforcement Directorate) ದಾಳಿ ಮಾಡಿ ದಾಖಲೆ ಪರಿಶೀಲಿಸುತ್ತಿದೆ.

    ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೈಜು ರವೀಂದ್ರನ್‌ ಅವರ ಕಚೇರಿ ಮೇಲೆ ದಾಳಿ ಮಾಡಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ದಾಖಲೆಯಿಲ್ಲದ 5 ಕೋಟಿ ರೂ. ಹಣ ಜಪ್ತಿ

    ಕಂಪನಿಯು 2011 ಮತ್ತು 2023 ರ ನಡುವೆ 28,000 ಕೋಟಿ ರೂ. ಮೌಲ್ಯದ ವಿದೇಶಿ ನೇರ ಹೂಡಿಕೆಯನ್ನು (FDI) ಸ್ವೀಕರಿಸಿದೆ. ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ಅದೇ ಅವಧಿಯಲ್ಲಿ ವಿದೇಶಿ ನ್ಯಾಯವ್ಯಾಪ್ತಿಗೆ ಸರಿಸುಮಾರು 9,754 ಕೋಟಿ ರೂ. ಕಳುಹಿಸಿದೆ.

    ವಿದೇಶಿ ನ್ಯಾಯವ್ಯಾಪ್ತಿಗೆ ರವಾನೆಯಾದ ಹಣ ಸೇರಿದಂತೆ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚಗಳ ಹೆಸರಿನಲ್ಲಿ ಸುಮಾರು 944 ಕೋಟಿ ರೂ. ಲೆಕ್ಕ ತೋರಿಸಿದೆ. ಹೀಗಿದ್ದರೂ ಕಂಪನಿಯು 2020-21ರ ಆರ್ಥಿಕ ವರ್ಷದಿಂದ ತನ್ನ ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸಿಲ್ಲ ಮತ್ತು ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಿಲ್ಲ.

    ಖಾಸಗಿ ವ್ಯಕ್ತಿಗಳ ದೂರುಗಳ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿದೆ. ಈ ಹಿಂದೆ ಬೈಜು ರವೀಂದ್ರನ್‌ಗೆ ವಿಚಾರಣೆಗೆ ಹಾಜರಾಗುವಂತೆ ಹಲವಾರು ಸಮನ್ಸ್‌ ಜಾರಿ ಮಾಡಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗಿರಲಿಲ್ಲ.

  • ಮೆಸ್ಸಿ ಈಗ ಬೈಜೂಸ್‌ ಜಾಗತಿಕ ರಾಯಭಾರಿ

    ಮೆಸ್ಸಿ ಈಗ ಬೈಜೂಸ್‌ ಜಾಗತಿಕ ರಾಯಭಾರಿ

    ನವದೆಹಲಿ: ಎಜ್ಯುಟೆಕ್‌ ಪ್ರಮುಖ ಕಂಪನಿ ಬೈಜೂಸ್‌(BYJU’) ತನ್ನ ಜಾಗತಿಕ ರಾಯಭಾರಿಯಾಗಿ ಫುಟ್‌ಬಾಲ್‌(Football) ತಾರೆ ಲಿನೋನೆಲ್‌ ಮೆಸ್ಸಿ(Lionel Messi) ಅವರನ್ನು ನೇಮಕ ಮಾಡಿದೆ.

    ಅರ್ಜೆಂಟೀನಾ ಫುಟ್‌ಬಾಲ್ ತಂಡದ ನಾಯಕರಾಗಿರುವ ಮೆಸ್ಸಿ, ಸಮಾನ ಶಿಕ್ಷಣವನ್ನು ಉತ್ತೇಜಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಬೈಜೂಸ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ನಮ್ಮ ಜಾಗತಿಕ ರಾಯಭಾರಿಯಾಗಿರುವ ಲಿಯೋನೆಲ್ ಮೆಸ್ಸಿ ಅವರೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ. ಅವರು ತಳಮಟ್ಟದಿಂದ ಬೆಳೆದು ಅತ್ಯಂತ ಯಶಸ್ವಿ ಕ್ರೀಡಾ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಈ ರೀತಿಯ ಅವಕಾಶವನ್ನು BYJU’s ಎಜ್ಯುಕೇಶನ್‌ ಫಾರ್‌ ಆಲ್‌(EFA) ಸೃಷ್ಟಿಸಲು ಬಯಸುತ್ತದೆ ಎಂದು ಬೈಜೂಸ್‌ ಸಹ-ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಹೇಳಿದ್ದಾರೆ. ಇದನ್ನೂ ಓದಿ: ಬಾಗ್ಲಾ ಸೋತ ಬಳಿಕ ಕೊಹ್ಲಿ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ

    ಫುಟ್‌ಬಾಲ್ ಪ್ರಪಂಚದಾದ್ಯಂತ ಸುಮಾರು 3.5 ಶತಕೋಟಿ ಅಭಿಮಾನಿಗಳನ್ನು ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಲಿಯೋನೆಲ್ ಮೆಸ್ಸಿ ಸುಮಾರು 45 ಕೋಟಿ ರೂ. ಅಭಿಮಾನಿಗಳನ್ನು ಹೊಂದಿದ್ದಾರೆ. ಬೈಜೂಸ್‌ ಈ ತಿಂಗಳಿನಿಂದ ಕತಾರ್‌ನಲ್ಲಿ ಆರಂಭವಾಗಲಿರುವ ಫಿಫಾ ವಿಶ್ವಕಪ್‌ನ ಅಧಿಕೃತ ಪ್ರಯೋಜಕತ್ವವನ್ನು ಪಡೆದಿದೆ.

    Live Tv
    [brid partner=56869869 player=32851 video=960834 autoplay=true]

  • 2,500 ಉದ್ಯೋಗಿಗಳನ್ನು ತೆಗೆಯಲು ಮುಂದಾದ ಬೈಜೂಸ್‌

    2,500 ಉದ್ಯೋಗಿಗಳನ್ನು ತೆಗೆಯಲು ಮುಂದಾದ ಬೈಜೂಸ್‌

    ಬೆಂಗಳೂರು: ವಿಶ್ವದ ಅತ್ಯಂತ ಮೌಲ್ಯಯುತವಾದ ಎಜ್ಯುಟೆಕ್‌ ಸ್ಟಾರ್ಟ್ಅಪ್ ಕಂಪನಿ ಬೈಜೂಸ್(Byju’s) ಸುಮಾರು 2,500 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ.

    ಮುಂದಿನ 6 ತಿಂಗಳಲ್ಲಿ 2500 ನೌಕರರನ್ನು ವಜಾ ಮಾಡಲಿದೆ ಎಂದು ಕಂಪನಿಯ ಸಹ ಸಂಸ್ಥಾಪಕಿ ದಿವ್ಯಾ ಗೋಕುಲ್‌ನಾಥ್(Divya Gokulnath) ಹೇಳಿದ್ದಾರೆ. ಕಾರ್ಯನಿರ್ವಹಣಾ ವೆಚ್ಚವನ್ನು ತಗ್ಗಿಸಲು ಬೈಜೂಸ್ ಶೇ.5ರಷ್ಟು ನೌಕರರು ಎಂದರೆ 2500 ಜನರನ್ನು ವಜಾ ಮಾಡಲು ನಿರ್ಧರಿಸಿದೆ.

     

    ಕಂಪನಿಯನ್ನು ಲಾಭದಾಯಕ ಮಾಡಿಕೊಳ್ಳಲು 10 ಸಾವಿರ ಶಿಕ್ಷಕಕರನ್ನು(Teachers) ನೇಮಿಸಲಾಗುವುದು. ಈ ಪ್ರಕ್ರಿಯೆ ಮುಂದಿನ 6 ತಿಂಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಜೂನ್‌ನಲ್ಲಿಯೂ ನೂರಾರು ಉದ್ಯೋಗಿಗಳನ್ನು ಬೈಜೂಸ್ ವಜಾಗೊಳಿಸಿತ್ತು. ಇದನ್ನೂ ಓದಿ: ವಿಶ್ವದಲ್ಲೇ ಫಸ್ಟ್‌ – ಹಸುಗಳ ತೇಗು, ಹೂಸಿಗೂ ತೆರಿಗೆ ವಿಧಿಸಿದ ನ್ಯೂಜಿಲೆಂಡ್‌!

    ಕೋವಿಡ್‌ ಬಳಿಕ ಭಾರೀ ನಷ್ಟವನ್ನು ಬೈಜೂಸ್‌ ಅನುಭವಿಸುತ್ತಿದೆ. 2020ರ ಹಣಕಾಸು ವರ್ಷದಲ್ಲಿ 262 ಕೋಟಿ ರೂ. ನಷ್ಟ ಅನುಭವಿಸಿದ್ದರೆ 2021ರ ಆರ್ಥಿಕ ವರ್ಷದಲ್ಲಿ 4,588 ಕೋಟಿ ನಷ್ಟ ಅನುಭವಿಸಿದೆ.

    ಒಟ್ಟು 22 ಶತಕೋಟಿ ಡಾಲರ್‌ ಮೌಲ್ಯ ಹೊಂದಿರುವ ಬೈಜೂಸ್‌ ಭಾರತದ ಅತ್ಯಂತ ಮೌಲ್ಯಯುತ ಸ್ಟಾರ್ಟಪ್‌ ಕಂಪನಿ ಎಂದು ಹೆಸರು ಪಡೆದಿದೆ.

    Live Tv
    [brid partner=56869869 player=32851 video=960834 autoplay=true]

  • 3 ವರ್ಷಗಳ ಕಾಲ ಐಸಿಸಿ ಟೂರ್ನಿಯನ್ನು ಪ್ರಾಯೋಜಿಸಲಿದೆ ಬೈಜೂಸ್‌

    3 ವರ್ಷಗಳ ಕಾಲ ಐಸಿಸಿ ಟೂರ್ನಿಯನ್ನು ಪ್ರಾಯೋಜಿಸಲಿದೆ ಬೈಜೂಸ್‌

    ದುಬೈ: ಭಾರತದ ಅತಿ ದೊಡ್ಡ ಆನ್ ಲೈನ್ ಎಜುಕೇಷನ್ ಸ್ಟಾರ್ಟ್ ಅಪ್ ಬೆಂಗಳೂರು ಮೂಲದ ಬೈಜೂಸ್ 3 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆಯ( ಐಸಿಸಿ)ಟೂರ್ನಿಯನ್ನು ಪ್ರಾಯೋಜಿಸಲಿದೆ.

    2021 ರಿಂದ 2023ರವರೆಗೆ ಬೈಜೂಸ್‌ ನಮ್ಮ ನಮ್ಮ ಜಾಗತಿಕ ಪಾಲುದಾರ ಎಂದು ಐಸಿಸಿ ಸೋಮವಾರ ಪ್ರಕಟಿಸಿದೆ.

    ಈ ಅವಧಿಯಲ್ಲಿ ಮುಂದೆ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌, ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್‌ ಟೂರ್ನಿಯ ಪ್ರಾಯೋಜಕತ್ವವನ್ನು ಬೈಜೂಸ್‌ ಪಡೆದಿದೆ. ಪ್ರಾಯೋಜಕತ್ವದ ಜೊತೆ ಐಸಿಸಿ ಟೂರ್ನಿಯ ಬ್ರಾಡ್‌ಕಾಸ್ಟ್‌ ಮತ್ತು ಡಿಜಿಟಲ್‌ ಹಕ್ಕುಗಳನ್ನು ಪಡೆದಿದೆ.

    ಬೈಜೂಸ್‌ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ಪ್ರತಿಕ್ರಿಯಿಸಿ, ಜಾಗತಿಕ ವೇದಿಕೆಯಲ್ಲಿ ನಮ್ಮ ರಾಷ್ಟ್ರವನ್ನು ಪ್ರತಿನಿಧಿಸುವುದು ಭಾರತೀಯ ಕಂಪನಿಯಾಗಿ ನಮಗೆ ಹೆಮ್ಮೆಯ ವಿಷಯ. ವಿಶ್ವಾದ್ಯಂತ ಕ್ರಿಕೆಟ್ ಶತಕೋಟಿ ಜನರನ್ನು ಪ್ರೇರೇಪಿಸಿದಂತೆಯೇ, ನಾವು ಸಹ ಒಂದು ಕಲಿಕೆಯ ಕಂಪನಿಯಾಗಿ ಪ್ರತಿ ಮಗುವಿನ ಜೀವನದಲ್ಲಿ ಕಲಿಕೆಯನ್ನು ಪ್ರೇರೇಪಿಸುತ್ತಿದ್ದೇವೆ ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ.

    ಭಾರತೀಯ ಕ್ರಿಕೆಟ್‌ ತಂಡದ ಜೆರ್ಸಿ ಹಕ್ಕನ್ನು 2017 ಮಾರ್ಚ್ ತಿಂಗಳಲ್ಲಿ ಐದು ವರ್ಷಗಳ ಅವಧಿಗಾಗಿ ಬರೋಬ್ಬರಿ 1079 ಕೋಟಿ ರೂಪಾಯಿ ನೀಡಿ  ಚೀನಾದ ಸ್ಮಾರ್ಟ್‌ ಫೋನ್‌ ತಯಾರಿಕಾ ಕಂಪನಿ ಒಪ್ಪೋ ಬಿಡ್ ಗೆದ್ದಿತ್ತು. ಆದರೆ ಅನೇಕ ಕಾರಣಗಳಿಂದಾಗಿ ಒಪ್ಪೋ ತನ್ನ ಬಿಡ್ ಹಕ್ಕನ್ನು ಬೈಜೂಸ್‌ಗೆ ನೀಡಿತ್ತು. 2019ರಿಂದ ಬೈಜೂಸ್‌ ಟೀಂ ಇಂಡಿಯಾದ ಜೆರ್ಸಿ ಪಾಲುದಾರವಾಗಿದೆ.

  • ಚೀನಾದ ಪ್ರಾಯೋಜಕತ್ವ ಕೈಬಿಟ್ರೆ ಬಿಸಿಸಿಐಗೆ ಎಷ್ಟು ಕೋಟಿ ಲಾಸ್- ಇಲ್ಲಿದೆ ಲೆಕ್ಕ

    ಚೀನಾದ ಪ್ರಾಯೋಜಕತ್ವ ಕೈಬಿಟ್ರೆ ಬಿಸಿಸಿಐಗೆ ಎಷ್ಟು ಕೋಟಿ ಲಾಸ್- ಇಲ್ಲಿದೆ ಲೆಕ್ಕ

    ಮುಂಬೈ: ಲಡಾಖ್‍ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಜನ ಸೈನಿಕರು ಹುತಾತ್ಮರಾದ ಹಿನ್ನೆಲೆ ಚೀನಾ ವಸ್ತು, ಸೇವೆ ಕೈಬಿಡುವಂತೆ ಒತ್ತಾಯ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಕೂಡ ಮಹತ್ವದ ಹೆಜ್ಜೆ ಇಟ್ಟಿದೆ.

    ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ ಪ್ರಾಯೋಜಕತ್ವವನ್ನು ಪರಿಶೀಲಿಸಲು ನಿರ್ಧರಿಸಿದೆ. ಇಂಡೋ-ಚೀನಾ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್‍ನ ಆಡಳಿತ ಮಂಡಳಿ ಮುಂದಿನ ವಾರ ಸಭೆ ಕರೆದು ಲೀಗ್‍ನ ಪ್ರಾಯೋಜಕತ್ವದ ಒಪ್ಪಂದವನ್ನು ಪರಿಶೀಲಿಸಲಿದೆ. ಈ ವೇಳೆ ಚೀನಾದ ಕಂಪನಿ ವಿವೊ ಜೊತೆಗಿನ ಒಪ್ಪಂದದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಐಪಿಎಲ್‍ನ ಶೀರ್ಷಿಕೆ ಪ್ರಾಯೋಜಕರು ವಿವೋ ವಹಿಸಿದ್ದು, ಅದು ಪ್ರತಿವರ್ಷ 440 ಕೋಟಿ ರೂ.ನಂತೆ ಮಂಡಳಿಗೆ ನೀಡಿ ಐದು ವರ್ಷಗಳ ಕಾಲ ಒಪ್ಪಂದವು ಮಾಡಿಕೊಂಡಿದೆ. ಆದರೆ ಒಪ್ಪಂದವು 2022ರಲ್ಲಿ ಕೊನೆಗೊಳ್ಳುತ್ತದೆ.

    ವಿವೊ ಜೊತೆಗೆ, ಮೊಬೈಲ್ ಪಾವತಿ ಸೇವೆ ಪೇಟಿಎಂ ಸಹ ಐಪಿಎಲ್ ಪ್ರಾಯೋಜಕತ್ವದ ಒಪ್ಪಂದದ ಭಾಗವಾಗಿದೆ. ಚೀನಾದ ಕಂಪನಿ ಅಲಿಬಾಬಾ ಕೂಡ ಈ ಕಂಪನಿಯಲ್ಲಿ ಹೂಡಿಕೆ ಮಾಡಿದೆ. ಪೇಟಿಎಂನಲ್ಲಿ ಅಲಿಬಾಬಾ ಶೇ.37.15ರಷ್ಟು ಪಾಲನ್ನು ಹೊಂದಿದೆ. ಇದಲ್ಲದೆ ಚೀನಾದ ವಿಡಿಯೋ ಗೇಮ್ ಕಂಪನಿ ಟೆನ್ಸೆಂಟ್ ಸ್ವಿಗ್ಗಿ ಮತ್ತು ಡ್ರೀಮ್-11ನಲ್ಲಿ ಶೇ.5.27 ರಷ್ಟು ಪಾಲನ್ನು ಹೊಂದಿದೆ. ಈ ಎಲ್ಲಾ ಚೀನೀ ಕಂಪನಿಗಳು ಬಿಸಿಸಿಐ ಪ್ರಾಯೋಜಕತ್ವ ಹೊಂದಿವೆ.

    ಟೀಂ ಇಂಡಿಯಾದ ಜರ್ಸಿ ಪ್ರಯೋಜಕತ್ವವನ್ನು ಬೈಜೂಸ್ (Byju’s) ಕಂಪನಿ ಪಡೆದುಕೊಂಡಿದೆ. ಬೈಜೂಸ್ ಕಂಪನಿಯಲ್ಲಿ ಚೀನಾ ಟೆನ್ಸೆಂಟ್ ಕಂಪನಿ ಹೂಡಿಕೆ ಮಾಡಿದೆ. ಕಳೆದ ವರ್ಷ ಬಿಸಿಸಿಐ ಜೊತೆ ಐದು ವರ್ಷಗಳ ಒಪ್ಪಂದಕ್ಕೆ ಬೈಜೂಸ್ ಸಹಿ ಹಾಕಿದೆ. ಈ ಮೂಲಕ ಬಿಸಿಸಿಐಗೆ 1,079 ಕೋಟಿ ರೂ. ನೀಡುತ್ತದೆ ಎಂದು ವರದಿಯಾಗಿದೆ. ಆದರೆ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ವಿವೊದೊಂದಿಗಿನ ಒಪ್ಪಂದವನ್ನು 2022ರವರೆಗೆ ಮುಂದುವರಿಸಬೇಕೆ ಅಥವಾ ರದ್ದುಗೊಳಿಸಬೇಕೆ ಎಂದು ನಿರ್ಧರಿಸಲಾಗುತ್ತದೆ.

    ಚೀನಾದ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಬ್ರಾಂಡ್ ಪ್ರಚಾರದ ಹೆಸರಿನಲ್ಲಿ ಮಾರಾಟ ಮಾಡುವ ಮೂಲಕ ಗಳಿಸುವ ಬಹುಪಾಲು ಹಣವನ್ನು ಬಿಸಿಸಿಐ ಪಡೆಯುತ್ತದೆ. ಆ ಗಳಿಕೆಯ ಮೇಲೆ ಬಿಸಿಸಿಐ ಕೇಂದ್ರ ಸರ್ಕಾರಕ್ಕೆ ಶೇ.42ರಷ್ಟು ತೆರಿಗೆಯನ್ನು ಪಾವತಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಒಪ್ಪಂದವು ಚೀನಾಕ್ಕೆ ಅಲ್ಲ ಆದರೆ ಭಾರತದ ಹಿತಕ್ಕಾಗಿ ಅಗತ್ಯವಿದೆ ಎಂಬ ಮಾತುಗಳು ಕೇಳಿ ಬಂದಿವೆ.