Tag: byelection

  • ಮುಡಾ, ವಕ್ಫ್‌ನಂತಹ ಸುಳ್ಳು ಆರೋಪಗಳಿಗೆ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ – ಈಶ್ವರ್ ಖಂಡ್ರೆ

    ಮುಡಾ, ವಕ್ಫ್‌ನಂತಹ ಸುಳ್ಳು ಆರೋಪಗಳಿಗೆ ಜನರು ತಕ್ಕ ಉತ್ತರ ಕೊಟ್ಟಿದ್ದಾರೆ – ಈಶ್ವರ್ ಖಂಡ್ರೆ

    ಬೀದರ್: ಮುಡಾ, ವಕ್ಫ್ ಬಗ್ಗೆ ಪ್ರತಿಪಕ್ಷಗಳು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು, ಆ ಸುಳ್ಳು ಆರೋಪಗಳಿಗೆ ಇಂದು (ನ.23) ಜನರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಜಿಲ್ಲೆಯ ಬಸವಕಲ್ಯಾಣದಲ್ಲಿ ಸಚಿವ ಈಶ್ವರ್ ಖಂಡ್ರೆ  (Eshwar Khandre) ಬಿಜೆಪಿ (BJP) ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

    ಜಿಲ್ಲೆಯಲ್ಲಿ ಮಾತನಾಡಿದ ಅವರು, ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಮತದಾರರು ನಮ್ಮ ಕೈ ಹಿಡಿದಿದ್ದು, ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲವು ತಂದು ಕೊಟ್ಟಿದ್ದಾರೆ. ನಮ್ಮ ಗ್ಯಾರಂಟಿಗಳಿಗೆ ಜಯ ಸಿಕ್ಕಿದೆ. ಜಾತ್ಯತೀತ ವಿಚಾರಗಳಿಗೆ ಜಯ ಸಿಕ್ಕಿರುವುದು ಬಿಜೆಪಿ, ಜೆಡಿಎಸ್ ಅನೈತಿಕ ಸಂಬಂಧಕ್ಕೆ ಇದು ತಕ್ಕ ಉತ್ತರವಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದಿದೆ: ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿಗೆ ಮೋದಿ ಕೃತಜ್ಞತೆ

    ವಿಶೇಷವಾಗಿ ಶಿಗ್ಗಾಂವಿ ಮತದಾರರು ಜಾತ್ಯತೀತವಾಗಿ ಮತ ಹಾಕಿದ್ದು, ಜಾತಿ-ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡಿದರೂ ನಮ್ಮ ಅಭ್ಯರ್ಥಿ ಯಾಸಿರ್ ಖಾನ್ ಗೆದ್ದಿದ್ದು ಸತ್ಯಕ್ಕೆ ಜಯವಾಗಿದೆ. ಈ ಮೂರು ಕ್ಷೇತ್ರದ ಗೆಲುವಿನಿಂದಾಗಿ ಇನ್ನಷ್ಟು ಕೆಲಸ ಮಾಡುವ ಹುಮ್ಮಸ್ಸು ಸಿಕ್ಕಿದೆ. ಸಿದ್ದರಾಮಯ್ಯನವರ ನಾಯಕತ್ವಕ್ಕೆ ಜನ ಬೆಂಬಲಿಸಿದ್ದಾರೆ. ಪ್ರತಿಪಕ್ಷದವರು ಇನ್ನಾದರೂ ಬುದ್ಧಿ ಕಲಿಯಲಿ ಎಂದು ಚಾಟಿ ಬೀಸಿದರು.

    ಮಹಾರಾಷ್ಟ್ರದಲ್ಲಿ (Maharashtra) ಕಾಂಗ್ರೆಸ್‌ಗೆ (Congress) ಹಿನ್ನಡೆಯಾಗಿರುವುದು ಪರಿಶೀಲನೆ ಮಾಡಬೇಕಾಗುತ್ತದೆ. ಎಕ್ಸಿಟ್ ಪೋಲ್‌ನಲ್ಲಿ ಸಮ ಪೈಪೋಟಿ ಎಂದು ಹೇಳಲಾಗಿತ್ತು. ಏನಾಗಿದೆ ಎಂದು ನಮ್ಮ ವರಿಷ್ಠರು ಪರಾಮರ್ಶೆ ಮಾಡುತ್ತಾರೆ ಎಂದು ತಿಳಿಸಿದರು.ಇದನ್ನೂ ಓದಿ: ರಾಹುಲ್ ದಾಖಲೆ ಬ್ರೇಕ್ – ಪ್ರಿಯಾಂಕಾಗೆ 4 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು

  • ರಾಹುಲ್ ದಾಖಲೆ ಬ್ರೇಕ್ – ಪ್ರಿಯಾಂಕಾಗೆ 4 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು

    ರಾಹುಲ್ ದಾಖಲೆ ಬ್ರೇಕ್ – ಪ್ರಿಯಾಂಕಾಗೆ 4 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು

    ತಿರುವನಂತಪುರಂ: ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಕೇರಳ (Kerala) ವಯನಾಡ್ (wayanad) ಲೋಕಸಭಾ ಕ್ಷೇತ್ರದಲ್ಲಿ (Loksabha Constituency) 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ರಾಹುಲ್ ಗಾಂಧಿ (Rahul Gandhi) ಅವರ ರಾಜೀನಾಮೆಯಿಂದ ತೆರವಾದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದು 4,10,931 ಅಧಿಕ ಮತಗಳ ಅಂತರದಿಂದ ಚೊಚ್ಚಲ ಗೆಲುವು ಸಾಧಿಸಿದ್ದಾರೆ.ಇದನ್ನೂ ಓದಿ: 11 ಮುಸ್ಲಿಂ ಸ್ಪರ್ಧಿಗಳನ್ನು ಹಿಂದಿಕ್ಕಿ ಏಕೈಕ ಹಿಂದೂ ಅಭ್ಯರ್ಥಿ ಮುನ್ನಡೆ

    ಪ್ರಿಯಾಂಕಾ ಗಾಂಧಿ ಅವರು ಒಟ್ಟು 6,22,338 ಮತಗಳನ್ನು ಪಡೆದುಕೊಂಡಿದ್ದು, ಸಿಪಿಐನ ಹಿರಿಯ ನಾಯಕ ಸತ್ಯನ್ ಮೊಕೇರಿ 2,11,407 ಲಕ್ಷ ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿಯ ನವ್ಯಾ ಹರಿದಾಸ್ ಸುಮಾರು 1,09,939 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

    2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಭಾರಿ ಮತಗಳ ಅಂತರದಿಂದ ಗೆದ್ದಿದ್ದರು. ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಪ್ರವೇಶಿಸಿದ್ದರಿಂದ ರಾಯ್ ಬರೇಲಿ ಕ್ಷೇತ್ರ ಉಳಿಸಿಕೊಂಡ ರಾಹುಲ್ ಗಾಂಧಿ, ವಯನಾಡ್ ಕ್ಷೇತ್ರವನ್ನು ಸಹೋದರಿಗೆ ಬಿಟ್ಟುಕೊಟ್ಟರು.

    ವಿಶೇಷವೆಂದರೆ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ 3.64 ಲಕ್ಷ ಮತಗಳ ಅಂತರದಿಂದ ಒಟ್ಟು 6.47 ಲಕ್ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಇದೀಗ ಪ್ರಿಯಾಂಕಾ ಗಾಂಧಿ 4.10 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಕಳೆದ ಒಂದು ತಿಂಗಳಿಂದ ಪ್ರಿಯಾಂಕಾ ಪರ ಪ್ರಚಾರ ನಡೆಸಿದ್ದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು 5 ಲಕ್ಷಕ್ಕೂ ಹೆಚ್ಚು ಅಂತರದಿಂದ ಪ್ರಿಯಾಂಕಾ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದರು.ಇದನ್ನೂ ಓದಿ: ಶಿಗ್ಗಾಂವಿ ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ತೇನೆ: ಬೊಮ್ಮಾಯಿ

  • ಉಪಚುನಾವಣಾ ಫಲಿತಾಂಶ ಕಂಡು ಟಿವಿ ಒಡೆದು ಹಾಕಿದ ಬಿಜೆಪಿ ಕಾರ್ಯಕರ್ತ

    ಉಪಚುನಾವಣಾ ಫಲಿತಾಂಶ ಕಂಡು ಟಿವಿ ಒಡೆದು ಹಾಕಿದ ಬಿಜೆಪಿ ಕಾರ್ಯಕರ್ತ

    – ಬಿಜೆಪಿ ನಾಯಕರ ಒಗ್ಗಟ್ಟಿನ ಕೊರತೆಯೇ ಸೋಲಿಗೆ ಕಾರಣ

    ವಿಜಯಪುರ: ಉಪಚುನಾವಣಾ ಫಲಿತಾಂಶ ಕಂಡು ಟಿವಿ ಒಡೆದು ಹಾಕಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಕೋಲ್ಹಾರ (Kolhar) ಪಟ್ಟಣದಲ್ಲಿ ನಡೆದಿದೆ.

    ರಾಜ್ಯದಲ್ಲಿ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ 3 ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಇಂದು (ನ.23) ಹೊರಬಿದ್ದಿದೆ. ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ (Congress) ಭರ್ಜರಿಯಾಗಿ ಗೆಲುವನ್ನು ಸಾಧಿಸಿದೆ.ಇದನ್ನೂ ಓದಿ: ರಾಜ್ಯದ ಜನ ಕಾಂಗ್ರೆಸ್ ಪರವಾಗಿದ್ದಾರೆ, ಗ್ಯಾರಂಟಿಗಳಿಂದ ಆಶೀರ್ವಾದ ಸಿಕ್ಕಿದೆ: ಕೆಹೆಚ್ ಮುನಿಯಪ್ಪ

    ಕೋಲ್ಹಾರ ಪಟ್ಟಣದ ನಿವಾಸಿ ಹಾಗೂ ಬಿಜೆಪಿ (BJP) ಕಾರ್ಯಕರ್ತರಾದ ವೀರಭದ್ರಪ್ಪ ಭಾಗಿ ಚುನಾವಣಾ ಫಲಿತಾಂಶವನ್ನು ಟಿವಿಯಲ್ಲಿ ನೋಡುತ್ತಿದ್ದರು. ಈ ವೇಳೆ ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವನ್ನು ಸಾಧಿಸಿ ಬಿಜೆಪಿ ಸೋತಿರುವುದು ಕಾರ್ಯಕರ್ತನ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಮನೆಯಲ್ಲಿದ್ದ ಟಿವಿಯನ್ನು ಎತ್ತಿಕೊಂಡು ಹೊರಕ್ಕೆ ಬಿಸಾಡಿದ್ದಾರೆ.

    ರಾಜ್ಯದಲ್ಲಿ ಬಿಜೆಪಿ ನಾಯಕರ ನಡುವಿನ ಭಿನ್ನಮತಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಕರ ನಡುವಿನ ಬಿರುಕು, ಕಾರ್ಯಕರ್ತರಲ್ಲಿ ಆಕ್ರೋಶ ಉಂಟಾಗುವಂತೆ ಮಾಡಿದೆ. ಬಿಜೆಪಿ ನಾಯಕರಲ್ಲಿ ಒಗ್ಗಟಿನ ಕೊರತೆಯಿಂದ ಈ ಹೀನಾಯ ಸೋಲಿಗೆ ಕಾರಣವಾಗಿದೆ. ಬಿಜೆಪಿ ವರಿಷ್ಠರು ಮೊದಲು ಬಿಜೆಪಿ ನಾಯಕರು, ಮುಖಂಡರ ಸಭೆ ಕರೆಯಿರಿ. ಇಲ್ಲವಾದರೆ ಬಿಜೆಪಿ ನಾಯಕರ ನಡುವಿನ ಭಿನ್ನಾಭಿಪ್ರಾಯದಿಂದ ಕಾರ್ಯಕರ್ತರು ಹಾಳಾಗುವ ಪರಿಸ್ಥಿತಿ ಬರುತ್ತದೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: NC 24: ಪೌರಾಣಿಕ ಕಥೆ ಹೇಳಲು ಸಜ್ಜಾದ ನಾಗಚೈತನ್ಯ- ಪೋಸ್ಟರ್ ಔಟ್

  • ಬಿಜೆಪಿಯ ಕ್ಷುಲ್ಲಕ ರಾಜಕಾರಣಕ್ಕೆ ಉಪಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ – ದಿನೇಶ್ ಗುಂಡೂರಾವ್

    ಬಿಜೆಪಿಯ ಕ್ಷುಲ್ಲಕ ರಾಜಕಾರಣಕ್ಕೆ ಉಪಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ – ದಿನೇಶ್ ಗುಂಡೂರಾವ್

    ಬೆಂಗಳೂರು: ಬಿಜೆಪಿಯ (BJP) ಕೋಮು ಆಧಾರಿತ ಕ್ಷುಲ್ಲಕ ರಾಜಕಾರಣ ನಡೆಯಲ್ಲ ಎಂಬ ಸಂದೇಶವನ್ನ ಮೂರು ಕ್ಷೇತ್ರಗಳಲ್ಲಿ ಜನರು ತಮ್ಮ ಮತದಾನದ ಮೂಲಕ ತೋರ್ಪಡಿಸಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.ಇದನ್ನೂ ಓದಿ: ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ತಲೆ ಬಾಗುತ್ತೇನೆ – ನಿಖಿಲ್ ಕುಮಾರಸ್ವಾಮಿ

    ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಬಿಜೆಪಿ ಸುಳ್ಳಿನ ಪ್ರಚಾರ ನಡೆಸಿತ್ತು. ಒಂದು ಸಮುದಾಯವನ್ನ ಟಾರ್ಗೆಟ್ ಮಾಡುವ ಬಿಜೆಪಿಯ ಕ್ಷುಲ್ಲಕ ರಾಜಕಾರಣವನ್ನ ನಾವು ಒಪ್ಪುವುದಿಲ್ಲ ಎಂಬ ಸಂದೇಶವನ್ನ ಜನರು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನರು ಸ್ಪಂದಿಸಿದ್ದಾರೆ. ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಸರ್ಕಾರ ಇನ್ನಷ್ಟು ಒಳ್ಳೆಯ ಕೆಲಸಗಳನ್ನ ಮಾಡಲು ಪ್ರೇರಣೆಯಾಗಿದೆ ಎಂದು ಹೇಳಿದರು.

    ಸಂಡೂರು (Sanduru) ಕಾಂಗ್ರೆಸ್ ಗೆದ್ದ ಕ್ಷೇತ್ರವಾಗಿತ್ತು. ಅಲ್ಲಿ ಗೆಲ್ಲುವ ವಿಶ್ವಾಸವಿತ್ತು. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವು ಪಕ್ಷಕ್ಕೆ ಹೆಚ್ಚಿನ ಬಲ ತುಂಬಲಿದೆ. ಅಲ್ಪಸಂಖ್ಯಾತ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿರುವುದು ಬಿಜೆಪಿಯ ಕೋಮು ರಾಜಕಾರಣಕ್ಕೆ ತಕ್ಕ ಪಾಠ ಕಲಿಸಿದಂತಾಗಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ಗೆ ಮೊದಲಿನಿಂದಲೂ ಬೆಂಬಲವಿತ್ತು. ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಿದ್ದರು. ರಾಜಕೀಯಕ್ಕಾಗಿ ದೇವೇಗೌಡರನ್ನು ಈ ಇಳಿವಯಸ್ಸಿನಲ್ಲಿ ಬೀದಿ ಬೀದಿ ಸುತ್ತಾಡಿಸಿದರು. ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿ ರಾಜ್ಯದ ಪರ ಕೆಲಸ ಮಾಡುವ ಬದಲು, ಸುಳ್ಳಿನ ಪ್ರಚಾರ ನಡೆಸಿದರು. ಅದು ಫಲ ನೀಡಲಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯಗಳನ್ನ ತಡೆಯುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ಮುಂದೆ ಕೆಲಸ ಮಾಡಲಿ ಎಂದು ತಿಳಿಸಿದರು.ಇದನ್ನೂ ಓದಿ: ಪತಿಯೊಂದಿಗೆ ಯುಕೆಯಲ್ಲಿ ವಾಸಿಸುತ್ತಿದ್ದ ಭಾರತದ ಮಹಿಳೆ ಕಾರಿನಲ್ಲಿ ಶವವಾಗಿ ಪತ್ತೆ

  • ಅಭಿವೃದ್ಧಿ ಕಾರ್ಯ, ಗ್ಯಾರಂಟಿ ಯೋಜನೆ, ಟೀಂ ವರ್ಕ್ ಗೆಲುವಿಗೆ ಸಹಕಾರಿಯಾಗಿದೆ – ಅನ್ನಪೂರ್ಣ ತುಕಾರಾಂ

    ಅಭಿವೃದ್ಧಿ ಕಾರ್ಯ, ಗ್ಯಾರಂಟಿ ಯೋಜನೆ, ಟೀಂ ವರ್ಕ್ ಗೆಲುವಿಗೆ ಸಹಕಾರಿಯಾಗಿದೆ – ಅನ್ನಪೂರ್ಣ ತುಕಾರಾಂ

    ಬಳ್ಳಾರಿ: ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು, ಗ್ಯಾರಂಟಿ ಯೋಜನೆಗಳು ಹಾಗೂ ನಮ್ಮ ಟೀಂ ವರ್ಕ್ ನಮ್ಮ ಗೆಲುವಿಗೆ ಸಹಕಾರಿಯಾಗಿದೆ ಎಂದು ಕಾಂಗ್ರೆಸ್ (Congress) ವಿಜೇತ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ (Annapurna Tukaram) ಹೇಳಿದರು.ಇದನ್ನೂ ಓದಿ: ಯಡಿಯೂರಪ್ಪ, ಪುತ್ರ ವ್ಯಾಮೋಹದಿಂದ ಬಿಜೆಪಿ ಸೋತಿದೆ: ಯತ್ನಾಳ್‌ ವಾಗ್ದಾಳಿ

    ಬಳ್ಳಾರಿಯಲ್ಲಿ ಮಾತನಾಡಿದ ಅವರು, ಮತದಾರರು ನನ್ನ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸ್ತೇನೆ. ನಮ್ಮ ನಾಯಕರು ನಮಗೆ ಬೆಂಬಲವಾಗಿ ನಿಂತಿದ್ದರು. ಇನ್ನೂ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು, ಗ್ಯಾರಂಟಿ ಯೋಜನೆಗಳು ಹಾಗೂ ನಮ್ಮ ಟೀಂ ವರ್ಕ್ ನಮ್ಮ ಗೆಲುವಿಗೆ ಸಹಕಾರಿಯಾಗಿದೆ. ಈ ಬಾರಿ ಜನರ ಶೇಕಡಾವಾರು ಮತದಾನ ಹೆಚ್ಚಾಗಿದೆ. ಅದನ್ನು ನಾನು ಸೇವೆ ಮೂಲಕ ವಾಪಸ್ ಕೊಡುತ್ತೇನೆ. ನನ್ನ ಪತಿ ಸಂಸದರಾಗಿದ್ದಾರೆ. ನಾನು ಶಾಸಕಿಯಾಗಿದ್ದೇನೆ. ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ದಂಪತಿಯಾಗಿದ್ವಿ, ಇದೀಗ ಸಂಸದ, ಶಾಸಕರಾಗಿ ಜನರ ಸೇವೆ ಮಾಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಂಸದ ತುಕಾರಾಂ ಮಾತನಾಡಿ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಗೆ ನಾನು ಈ ಮೂಲಕ ಧನ್ಯವಾದ ತಿಳಿಸುತ್ತೇನೆ. ಅವರ ಅಭಿಮಾನ, ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುತ್ತೇವೆ. ಈ ಮೂಲಕ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಸೋತ ಮೇಲೆ ಸಹಜವಾಗಿ ಹಣಬಲ ಎಂದು ಆರೋಪ ಮಾಡುತ್ತಾರೆ. ಆರೋಪ ಮಾಡುವವರು ಮಾಡಲಿ, ನಾವು ಗೆಲ್ಲುತ್ತಲೇ ಇರುತ್ತವೆ. ಜನಾರ್ದನರೆಡ್ಡಿ ಗಂಗಾವತಿಯಲ್ಲಿ ಏನು ಅಭಿವೃದ್ದಿ ಮಾಡಿದ್ದಾರೆ ತೋರಿಸಲಿ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಸಿಪಿವೈ ಶಾಸಕರಾಗಿರಬಹುದು, ಬಿಜೆಪಿಯಲ್ಲೇ ಇದ್ದಿದ್ರೆ ಲೀಡರ್ ಆಗಿರುತ್ತಿದ್ರು: ಅಶ್ವಥ್ ನಾರಾಯಣ್

  • ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ, ದೇವೇಗೌಡ್ರ ಹೋರಾಟದಲ್ಲಿ ಸ್ವಾರ್ಥವಿತ್ತು: ಯೋಗೇಶ್ವರ್

    ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ, ದೇವೇಗೌಡ್ರ ಹೋರಾಟದಲ್ಲಿ ಸ್ವಾರ್ಥವಿತ್ತು: ಯೋಗೇಶ್ವರ್

    – ಗೆಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ, ಸಿಎಂ, ಡಿಸಿಎಂ, ನನ್ನ ಆಪ್ತ ಸುರೇಶ್‌ಗೆ ಅರ್ಪಿಸುತ್ತೇನೆ

    ರಾಮನಗರ: ಗೆಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ, ಸಿಎಂ ಸಿದ್ದರಾಮಯ್ಯ(CM Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹಾಗೂ ನನ್ನ ಆಪ್ತ ಸುರೇಶ್‌ಗೆ ಅರ್ಪಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (CP Yogeshwar) ಸಂತಸ ವ್ಯಕ್ತಪಡಿಸಿದ್ದರು.

    ಚನ್ನಪಟ್ಟಣ (Channapatna) ಉಪಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ (Congress) ಪಕ್ಷದಿಂದ ಸ್ಪರ್ಧಿಸಿದ್ದ ಯೋಗೇಶ್ವರ್ 25,515 ಮತಗಳ ಅಂತರದಿಂದ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ (Nikhil Kumarswamy) ವಿರುದ್ಧ ಗೆಲುವು ಸಾಧಿಸಿದ್ದಾರೆ.ಇದನ್ನೂ ಓದಿ: ಅಭಿವೃದ್ಧಿಗೆ ಒಲವು, ಗ್ಯಾರಂಟಿಗೆ ಗೆಲುವು – ಬೈಎಲೆಕ್ಷನ್‌ ಫಲಿತಾಂಶಕ್ಕೆ ಕಾಂಗ್ರೆಸ್‌ ಸಂತಸ

    ಗೆಲುವಿನ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ನಾನು ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ನಿರೀಕ್ಷೆ ಮಾಡಿದ್ದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಮಾಹಿತಿ ಕೊಟ್ಟಿದ್ದೆ. ನನ್ನ ನಿರೀಕ್ಷೆಗೆ ಹತ್ತಿರವಾದ ಗೆಲುವು. ಗೆಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ, ಮುಖ್ಯಮಂತ್ರಿಗೆ, ಉಪಮುಖ್ಯಮಂತ್ರಿಗೆ ಮತ್ತು ನನ್ನ ಜೊತೆ ಇದ್ದ ಸುರೇಶ್‌ಗೆ ಅರ್ಪಿಸುತ್ತೇನೆ ಎಂದು ಹೇಳಿದರು.

    ಜೆಡಿಎಸ್ ಅಂತಿಮ ದಿನಗಳನ್ನ ಎಣಿಸುತ್ತಿದೆ ಎಂದು ಹೇಳಲು ಬಯಸುತ್ತೇನೆ. ದೇವೇಗೌಡರು ಹೋರಾಟದಲ್ಲಿ ಸಾಮಾಜಿಕ ಕಳಕಳಿ ಇರಲಿಲ್ಲ. ಕೇವಲ ಸ್ವಾರ್ಥ ಇತ್ತು. ಕುಟುಂಬದವರನ್ನ ಬೆಳೆಸುವ ಹೋರಾಟ ಇತ್ತು. ಒಕ್ಕಲಿಗರ ನಾಯಕತ್ವವನ್ನ ದೇವೇಗೌಡರ ಕುಟುಂಬದಿಂದ ಜನ ಕಿತ್ತುಕೊಂಡಿದ್ದಾರೆ. ಅವರ ಹಠ, ಛಲ ನೋಡಿ ನಾನು ಆಲೋಚನೆ ಮಾಡಿದ್ದೆ ಆದರೆ ಅದಕ್ಕೆ ಜನ ಸೊಪ್ಪು ಹಾಕಲಿಲ್ಲ. ನಿಖಿಲ್ ಇನ್ನೂ ಯುವಕ. ಆತನಿಗೆ ಒಳ್ಳೆದಾಗಲಿ. ನಿಖಿಲ್ 36 ವರ್ಷದ ಯುವಕ 63 ವರ್ಷದವರ ಥರ ಮಾತನಾಡುತ್ತೇನೆ. ದೇವೇಗೌಡರು ತಮ್ಮ ಸಂಧ್ಯಕಾಲದಲ್ಲಿ ಮೊಮ್ಮಗನ ಪರ ಪ್ರಚಾರ ಮಾಡಿದ್ದರೂ ಕೂಡ ಏನು ಆಗಲಿಲ್ಲ. ಇನ್ನು ಮುಂದೆಯೂ ಆರಾಮಾಗಿ ಇರಲ್ಲ. 100ಕ್ಕೆ 100 ಭಾಗ ಒಕ್ಕಲಿಗರ ಒಲವನ್ನ ದೇವೇಗೌಡರ ಕುಟುಂಬ ಕಳೆದಕೊಳ್ಳುತ್ತಿದೆ ಎಂದು ಹೇಳಿದರು.

    ವಿಜಯೇಂದ್ರ ಅವರು ನನ್ನ ಬ್ಯಾಟರಿ ವೀಕ್ ಆಗಿದೆ ಎಂದು ಹೇಳಿದ್ದರು ಆದರೆ ಅವರ ಬ್ಯಾಟರಿ ವೀಕ್ ಆದಾಗ ನಾನು ಚಾರ್ಜ್ ಮಾಡಿದ್ದೆ. ವಿಜಯೇಂದ್ರ, ಯಡಿಯೂರಪ್ಪ ಷಡ್ಯಂತ್ರದಿಂದ ನಾನು ಎನ್‌ಡಿಎ ಬಿಟ್ಟೆ. ಇವತ್ತು ಹಳೇ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ನಾಯಕತ್ವವನ್ನು ನಮ್ಮ ಜನ ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿಗೆ ಅಧಿಕಾರ ದಾಹವಿದೆ. ಹಾಗಾಗಿ ಯಾರನ್ನು ಸಹಿಸಲ್ಲ, ಅಪ್ಪನ್ನು ಸಹಿಸಲ್ಲ, ಮಗನನ್ನು ಸಹಿಸಲ್ಲ. ಮಂಡ್ಯದಲ್ಲಿ ಕುಮಾರಸ್ವಾಮಿ ನಿಖಿಲ್ ಅವರನ್ನು ನಿಲ್ಲಿಸಿದ್ದರೆ ಈ ಬಾರಿ ಗೆಲ್ಲುತ್ತಿದ್ದರೇನೋ? ರಾಜೀನಾಮೆ ಕೊಟ್ಟು ಮಂಡ್ಯಕ್ಕೆ ಹೋಗುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಸಂಡೂರು ಸೋಲನ್ನ ಒಪ್ಪಿಕೊಳ್ತೇವೆ, 2028ಕ್ಕೆ ಬಂಗಾರು ಗೆಲ್ತಾರೆ: ಜನಾರ್ದನ ರೆಡ್ಡಿ

  • ಹಣಬಲ, ಅಧಿಕಾರ ಬಲದಿಂದ ಕಾಂಗ್ರೆಸ್ ಮುಂದೆ ಇದೆ – ಆರ್.ಅಶೋಕ್

    ಹಣಬಲ, ಅಧಿಕಾರ ಬಲದಿಂದ ಕಾಂಗ್ರೆಸ್ ಮುಂದೆ ಇದೆ – ಆರ್.ಅಶೋಕ್

    ಬೆಂಗಳೂರು: ಉಪುಚುನಾವಣೆಯಲ್ಲಿ (ByElection) ಹಣಬಲ, ಅಧಿಕಾರ ಬಲದಿಂದ ಕಾಂಗ್ರೆಸ್ ಮುಂದೆ ಇದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರದಲ್ಲಿ ಪ್ರಾರಂಭದಲ್ಲಿ ಫೈಟ್ ಇತ್ತು. ಅದರೆ ಈಗಿನ ಟ್ರೆಂಡ್ ಸಮಾಧಾನಕಾರ ಇಲ್ಲ. ಹಣಬಲ, ಅಧಿಕಾರ ಬಲದಿಂದ ಕಾಂಗ್ರೆಸ್ (Congress) ಮುಂದೆ ಇದೆ. ಶಿಗ್ಗಾಂವಿಯಲ್ಲಿ ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಆದರೆ ಹಿನ್ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದನ್ನೂ ಓದಿ: ಸ್ಟೈಲೀಶ್ ಆದ ಸಂಜನಾ ಬುರ್ಲಿ ಲುಕ್‌ಗೆ ಪಡ್ಡೆಹುಡುಗರು ಫಿದಾ

    ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿಗೆ (BJP) ಹಿನ್ನಡೆ ವಿಚಾರವಾಗಿ ಮಾತನಾಡಿ, ಈ ಫಲಿತಾಂಶ ನಮಗೆ ಸಮಾಧಾನ ತಂದಿಲ್ಲ. ಜೆಡಿಎಸ್, ನಮ್ಮ ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್ ಇದ್ದರಿಂದ ಮೇಲುಗೈ ಸಾಧಿಸಿದ್ದಾರೆ. ಈ ಹಿಂದೆ ನಾವು ಉಪಚುನಾವಣೆಯಲ್ಲಿ ಗೆದ್ದಿದ್ದೆವು. ಶಿಗ್ಗಾಂವಿಯಲ್ಲಿ ಮುಸ್ಲಿಂ ವೋಟ್‌ಗಳು ಕಾಂಗ್ರೆಸ್‌ಗೆ ವರದಾನವಾಗಿದೆ. ಬೊಮ್ಮಾಯಿ ಅವರು ಮಗ ಭರತ್‌ನನ್ನು ನಿಲ್ಲಿಸಲ್ಲ ಎಂದು ಹೇಳಿದ್ದರು. ಆದರೆ ಪಕ್ಷದ ಕೇಂದ್ರ ನಾಯಕರ ಒತ್ತಾಯದ ಮೇಲೆ ಮಗನನ್ನ ನಿಲ್ಲಿಸಿದ್ದರು ಎಂದು ತಿಳಿಸಿದರು.

    ಮಹಾರಾಷ್ಟ್ರ, ಜಾರ್ಖಂಡ್ ಫಲಿತಾಂಶ ವಿಚಾರವಾಗಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಅಲ್ಲಿನ ಜನ ಕಾಂಗ್ರೆಸ್‌ನ್ನು ತಿರಸ್ಕಾರ ಮಾಡಿದ್ದಾರೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಸರ್ಕಾರವಿಲ್ಲ. ಸದ್ಯ ಬಿಜೆಪಿಗೆ ಮೇಲಗೈ ಸಿಗುತ್ತಿಲ್ಲ. ಮೋದಿಯವರ ಹವಾ ಎಲ್ಲ ಕಡೆಯಿದೆ ಎಂದರು.ಇದನ್ನೂ ಓದಿ: 3 ಸೀಟು ಗೆಲ್ಲುವ ಹಗಲುಗನಸು ಕಾಣುತ್ತಿದ್ದ ಬಿಜೆಪಿಗೆ ಜನರು ಇದೀಗ ಉತ್ತರ ಕೊಟ್ಟಿದ್ದಾರೆ – ಎಂ.ಬಿ ಪಾಟೀಲ್

  • 3 ಸೀಟು ಗೆಲ್ಲುವ ಹಗಲುಗನಸು ಕಾಣುತ್ತಿದ್ದ ಬಿಜೆಪಿಗೆ ಜನರು ಇದೀಗ ಉತ್ತರ ಕೊಟ್ಟಿದ್ದಾರೆ – ಎಂ.ಬಿ ಪಾಟೀಲ್

    3 ಸೀಟು ಗೆಲ್ಲುವ ಹಗಲುಗನಸು ಕಾಣುತ್ತಿದ್ದ ಬಿಜೆಪಿಗೆ ಜನರು ಇದೀಗ ಉತ್ತರ ಕೊಟ್ಟಿದ್ದಾರೆ – ಎಂ.ಬಿ ಪಾಟೀಲ್

    ಬೆಂಗಳೂರು: ಬಿಜೆಪಿ (BJP) 3 ಸೀಟು ಗೆಲ್ಲುವ ಹಗಲುಗನಸು ಕಾಣುತ್ತಿದ್ದರು, ಇದೀಗ ಜನರು ಅವರಿಗೆ ಉತ್ತರ ಕೊಟ್ಟಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ (Karnataka) 3 ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ (Congress) ನ್ನಡೆಯಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ 18 ಸಾವಿರ ಲೀಡ್ ಇದೆ. ಶಿಗ್ಗಾಂವಿ, ಸಂಡೂರಿನಲ್ಲಿಯೂ ಲೀಡ್ ಇದೆ. 3 ಕ್ಷೇತ್ರದಲ್ಲಿಯೂ ನಾವು ಗೆಲ್ಲುತ್ತೇವೆ. ಮೂರು ಸೀಟು ಗೆಲ್ಲುವ ಮೂಲಕ ಬಿಜೆಪಿ (BJP) ಹಗಲುಗನಸು ಕಾಣುತ್ತಿದ್ದರು. ಜನರು ಇದೀಗ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ನಾವು ಓಲೈಕೆ ಮಾಡಲ್ಲ, ಮುಸ್ಲಿಮರು ನಮ್ಗೆ ಮತ ಹಾಕಲ್ಲ: ಸಿ.ಟಿ ರವಿ


    ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬೊಮ್ಮಾಯಿ ವಿರುದ್ದ ಅಲ್ಪಸಂಖ್ಯಾತ ಅಭ್ಯರ್ಥಿ ಇದ್ದಾರೆ ಎಂದು ಹೇಳಿದ್ದರು. ಆದರೆ ಅದೇ ಅಲ್ಪಸಂಖ್ಯಾತ ಅಭ್ಯರ್ಥಿಯ ವಿರುದ್ಧ ಅಲ್ಲಾಡುತ್ತಿದ್ದಾರೆ. ನಮ್ಮ ಪಕ್ಷ ಎಲ್ಲಾ ಜಾತಿ ಧರ್ಮಗಳಿಗೆ ಅವಕಾಶ ಕೊಡುತ್ತದೆ. ಚನ್ನಪಟ್ಟಣದಲ್ಲಿ ಅಲ್ಪಸಂಖ್ಯಾತ ವೋಟ್ ನಮಗೆ ಸಹಕಾರ ಆಗಿದೆ. ಮೂರು ಕ್ಷೇತ್ರದಲ್ಲಿ 1 ಕ್ಷೇತ್ರ ಕೊಡುವ ಚರ್ಚೆ ಆಗಿತ್ತು. ಚನ್ನಪಟ್ಟಣ ಯೋಗೇಶ್ವರ್ ಬರುವುದು ಯಾರಿಗೂ ಗೊತ್ತಿಲ್ಲ. ಎಲ್ಲಾ ಲೆಕ್ಕಾಚಾರ ನೋಡಿ ಟಿಕೆಟ್ ಕೊಡಲಾಗಿದೆ ಎಂದು ತಿಳಿಸಿದರು.

    ಚನ್ನಪಟ್ಟಣದಲ್ಲಿ (Channapatna) ಯೋಗೇಶ್ವರ್ (CP Yogeshwar) ಅನುಭವ, ಅವರ ವೋಟು ಹಾಗೂ ಕಾಂಗ್ರೆಸ್ ವೋಟ್‌ನಿಂದ ಗೆಲ್ಲುತ್ತಿದ್ದಾರೆ. ಜೆಡಿಎಸ್ ಅವರು ಪದೇ ಪದೇ ಅವರು ಕುಟುಂಬಕ್ಕೆ ಟಿಕಟ್ ಕೊಡುತ್ತಿರುವುದು ವಿರೋಧ ಆಗಿರಬಹುದು. ದೇವೇಗೌಡರು ಸರ್ಕಾರ ಕಿತ್ತು ಒಗೆಯುತ್ತೇನೆ ಎಂದಿದ್ದರು. ಆದರೆ ಸರ್ಕಾರವನ್ನ ಯಾರಿಂದಲೂ ಕಿತ್ತು ಒಗೆಯಲು ಸಾಧ್ಯವಿಲ್ಲ. ಜನರು ಅದನ್ನ ನಿರ್ಧಾರ ಮಾಡುತ್ತಾರೆ. ತಮ್ಮದೇ ಕುಟುಂಬದ ಅಭ್ಯರ್ಥಿ ಹಾಕಿರುವುದರಿಂದ ಜನ ನೋಡಿ ಮತ ಹಾಕಿದ್ದಾರೆ. ನಮ್ಮ ಪಕ್ಷದ ನಾಯಕರು ಒಟ್ಟಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದರು.

    ಮಹಾರಾಷ್ಟ್ರ (Maharashtra) ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಸಂಪೂರ್ಣ ಫಲಿತಾಂಶ ಘೋಷಣೆ ಆದ ಮೇಲೆ ಎಲ್ಲಿ ಏನು ಆಗಿದೆ ಎಂದು ತಿಳಿಯಬೇಕು. ಮಹಾರಾಷ್ಟ್ರದ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಒನ್ ಸೈಡ್ ಆಗುತ್ತಿದೆ. ಫಲಿತಾಂಶ ಬರಲಿ. ಆಮೇಲೆ ನೋಡೋಣ. ನಾವು ಗ್ಯಾರಂಟಿ ಚುನಾವಣೆ ಕಾರ್ಡ್ ತಡವಾಗಿ ಹಂಚಿದ್ದೇವೆ. ಇದು ನಮಗೆ ಹಿನ್ನಡೆ ಆಗಿರಬಹುದು. ಮಹಾರಾಷ್ಟ್ರದ ಎಫೆಕ್ಟ್ ನಮ್ಮ ರಾಜ್ಯದಲ್ಲಿ ಆಗುವುದಿಲ್ಲ. ನಮ್ಮಲ್ಲಿ ಯಾವ ಏಕನಾಥ ಶಿಂಧೆ, ಅಜಿತ್ ಪವರ್ ಇಲ್ಲ. ನಮ್ಮ ಸರ್ಕಾರಕ್ಕೆ ಯಾವುದೇ ಎಫೆಕ್ಟ್ ಇಲ್ಲ. ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಪ್ರಮುಖ ಆಗುತ್ತದೆ ಎಂದು ಹೇಳಿದರು.ಇದನ್ನೂ ಓದಿ: ಕರ್ನಾಟಕದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮುನ್ನಡೆ

  • ಉಪಚುನಾವಣೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ – ಮಧು ಬಂಗಾರಪ್ಪ

    ಉಪಚುನಾವಣೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ – ಮಧು ಬಂಗಾರಪ್ಪ

    ಬೆಂಗಳೂರು: ಉಪಚುನಾವಣೆಯ (ByElection) ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಗೆಲ್ಲಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ, ಶಿಗ್ಗಾಂವಿಯಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಗ್ರೌಂಡ್‌ನಲ್ಲಿ ಕೆಲಸ ಮಾಡಿದ್ದೇವೆ. ಎರಡು ಕ್ಷೇತ್ರದಲ್ಲಿ ವಾತಾವರಣ ಚೆನ್ನಾಗಿದೆ. ಸಮೀಕ್ಷೆಯಲ್ಲಿ ಎಲ್ಲರಿಗೂ ಒಂದೊಂದು ಸ್ಥಾನ ಕೊಟ್ಟಿದ್ದೀರಾ ಎಂದು ನಾಳೆ ಗೊತ್ತಾಗುತ್ತದೆ ಎಂದರು.ಇದನ್ನೂ ಓದಿ: ಬಿಜೆಪಿ ಅವಧಿಯ ಬಾಕಿ ಅನುದಾನವನ್ನು ಸರ್ಕಾರ ಈಗ ಕೊಡುತ್ತಿದೆ: ಮಧು ಬಂಗಾರಪ್ಪ

    ಚನ್ನಪಟ್ಟಣದಲ್ಲಿ (Channapatna) ಯೋಗೇಶ್ವರ್ (CP Yogeshwar) ಲೋಕಲ್‌ನಲ್ಲಿ ಇರುವವರು ಕೆಲಸ ಮಾಡಿದ್ದಾರೆ. ಜನರು ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಯೋಗೇಶ್ವರ್ ಕಾಂಗ್ರೆಸ್‌ಗೆ ಬಂದಿದ್ದಕ್ಕೆ ಯಾರ ವಿರೋಧವೂ ಇಲ್ಲ. ಯೋಗೇಶ್ವರ್ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇದೆ. ಸೋತರೂ ಗೆದ್ದರೂ ಯಾರು ಜನರ ಜೊತೆ ಇರುತ್ತಾರೋ ಅವರನ್ನ ಜನ ಗೆಲ್ಲಿಸುತ್ತಾರೆ ಎನ್ನುವ0 ವಿಶ್ವಾಸವಿದೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ (Congress) ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಜನ ಗ್ಯಾರಂಟಿಯಾಗಿ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸವಿದೆ. ಸಂಡೂರಿನಲ್ಲಿ ತುಕಾರಾಂ ಪತ್ನಿ ಕೂಡಾ ಗೆಲ್ಲುತ್ತಾರೆ ಎಂದರು.

    ಉಪಚುನಾವಣೆ ರಾಜ್ಯ ರಾಜಕೀಯಕ್ಕೆ ದಿಕ್ಸೂಚಿ ಎಂಬ ಬಿಜೆಪಿ (BJP) ನಾಯಕರ ಹೇಳಿಕೆಗೆ ಕಿಡಿಕಾರಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಏನು ಚಾಳಿ ಇದೆ ಗೊತ್ತಿಲ್ಲ. 136 ಜನ ಗೆದ್ದು ಹಳೆ ಚಾಳಿನಾ ಮತ್ತೆ ತರಲು ವ್ಯವಸ್ಥೆ ಮಾಡಿದರೆ ಅವರನ್ನು ಎಷ್ಟು ದಡ್ಡರು ಎಂದು ಹೇಳಬೇಕು ಗೊತ್ತಿಲ್ಲ. 136 ಜನರನ್ನ ಈ ರಾಜ್ಯದ ಜನರು ಮತ ಹಾಕಿ ಗೆಲ್ಲಿಸಿದ್ದಾರೆ. ಬಿಜೆಪಿಯನ್ನ ಹೀನಾಯವಾಗಿ ಸೋಲಿಸಿ ಗೆಲ್ಲಿಸಿದ್ದಾರೆ ಎಂದು ಹೇಳಿದರು.

    ಬಿಜೆಪಿ ಅವರು ವಿಧಾನಸಭೆ ಸೋತರು ಅದಕ್ಕೆ ಏನು ಹೇಳುತ್ತೀರಾ? ನಾವು 1 ರಿಂದ 9 ಎಂಪಿ ಸ್ಥಾನ ಗೆದ್ದಿದ್ದೇವೆ. ಅದಕ್ಕೆ ಏನು ಹೇಳುತ್ತೀರಾ? ಮೂರು ಕ್ಷೇತ್ರವೇ ಸರ್ಕಾರದ ಭವಿಷ್ಯ ನಿರ್ಧಾರ ಮಾಡುವುದಿಲ್ಲ. ವಿರೋಧ ಪಕ್ಷದವರು ಸುಳ್ಳನ್ನೇ ಪದೇ ಪದೇ ಹೇಳುತ್ತಾರೆ. ಅದನ್ನ ನಿಜ ಮಾಡಲು ಪ್ರಯತ್ನ ಮಾಡುತ್ತಾರೆ. ಚುನಾವಣೆ ಬಗ್ಗೆ ಮಾತಾಡುವುದನ್ನು ಬಿಟ್ಟು. ನಾವು ಏನು ಕೆಲಸ ಮಾಡುತ್ತಿದ್ದೀವಾ? ಇಲ್ಲವಾ? ಅದನ್ನು ಚರ್ಚೆ ಮಾಡಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಇದನ್ನೂ ಓದಿ: RC 16: ಮೈಸೂರು ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಸ್ಕ್ರಿಪ್ಟ್‌ ಹಿಡಿದು ನಿಂತ ‘ಉಪ್ಪೇನ’ ಡೈರೆಕ್ಟರ್‌

  • ಉಪಚುನಾವಣೆಯ 3 ಕ್ಷೇತ್ರಗಳ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳು ಗೆಲ್ತಾರೆ – ವಿಜಯೇಂದ್ರ ಭವಿಷ್ಯ

    ಉಪಚುನಾವಣೆಯ 3 ಕ್ಷೇತ್ರಗಳ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳು ಗೆಲ್ತಾರೆ – ವಿಜಯೇಂದ್ರ ಭವಿಷ್ಯ

    ಬೆಂಗಳೂರು: 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ (BJP) ಮತ್ತು ಎನ್‌ಡಿಎ (NDA) ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra)  ಭವಿಷ್ಯ ನುಡಿದಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ವಾತಾವರಣ ಹೇಗಿದೆ ಎಂದು ಎಲ್ಲರಿಗೂ ಗೊತ್ತು. ಕಾಂಗ್ರೆಸ್‌ನವರು ಗೆದ್ದಾಗಿದೆ ಎನ್ನುವ ಭ್ರಮೆಯಲ್ಲಿ ಇದ್ದರು. ಆದರೆ ಈಗ ಎನ್‌ಡಿಎ ಅಭ್ಯರ್ಥಿ ಗೆಲುತ್ತಾರೆ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಅದರ ಫಲಿತಾಂಶ ನ.23ಕ್ಕೆ ಗೊತ್ತಾಗುತ್ತದೆ ಎಂದು ಹೇಳಿದರು.ಇದನ್ನೂ ಓದಿ: 3 ಮಹಿಂದ್ರಾ ಕಾರುಗಳಿಗೆ ಸಿಕ್ತು 5 ಸ್ಟಾರ್ ಸೇಫ್ಟಿ ರೇಟಿಂಗ್

    ಸಂಡೂರು (Sanduru) ನಮ್ಮ ಪರವಾಗಿ ಇದೆ. ಐತಿಹಾಸಿಕ ಗೆಲುವು ಆಗುವ ವಿಶ್ವಾಸ ಇದೆ. ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ (Bharat Bommai) ಅವರು ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. 3 ಕ್ಷೇತ್ರಗಳಲ್ಲಿ ಬಿಜೆಪಿ, ಎನ್‌ಡಿಎ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಯಾಗಲಿದೆ ಎಂದರು.

    ಚನ್ನಪಟ್ಟಣದಲ್ಲಿ (Channapatna) ಯೋಗೇಶ್ವರ್‌ರಿಂದ (CP Yogeshwar) ಹತಾಶೆ ಮಾತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೋಡಪ್ಪ ಯಾರು ಏನು ಹೇಳಿಕೆ ಕೊಡಬೇಕೋ ಅದನ್ನು ಕೊಡುತ್ತಿದ್ದಾರೆ. ಜನರು ತಮ್ಮ ತೀರ್ಪು ನೀಡಿದ್ದಾರೆ 23ಕ್ಕೆ ಫಲಿತಾಂಶ ಬರುತ್ತದೆ ಅಲ್ಲಿಯವರೆಗೂ ಕಾಯೋಣ ಎಂದು ತಿಳಿಸಿದರು.ಇದನ್ನೂ ಓದಿ: ನ.28ಕ್ಕೆ ಚಂದನಾ ಅನಂತಕೃಷ್ಣ ಮದುವೆ- ಭಾವಿ ಪತಿ ಜೊತೆಗಿನ ಫೋಟೋ ರಿವೀಲ್