Tag: bycicle

  • ಸೈಕಲ್ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

    ಸೈಕಲ್ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

    ಮುಂಬೈ: ವೇಗವಾಗಿ ಬಂದು ನಿಯಂತ್ರಣ ತಪ್ಪಿ ಸೈಕಲ್ ಗೋಡೆಗೆ ಬಡಿದು ಸೈಕಲ್ ಸವಾರ ಸಾವಾಗಿರುವ ಘಟನೆ ಮುಂಬೈನ (Mumbai) ಘೋಡ್‌ಬಂದರ್ ಫೋರ್ಟ್‌ನಲ್ಲಿ ನಡೆದಿದೆ.

    ನೀರಜ್ ಯಾದವ್ (16) ಮೃತ ಯುವಕ. ನೀರಜ್ ಸೋಮವಾರ ಘೋಡಬಂದರ್ ಕೋಟೆಗೆ ಸೈಕಲ್‌ನಲ್ಲಿ ಹೋಗಿದ್ದ. ಕಡಿದಾದ ಇಳಿಜಾರಿನಲ್ಲಿ ವೇಗವಾಗಿ ಚಲಿಸಿ, ಸೈಕಲ್ ನಿಯಂತ್ರಣ ತಪ್ಪಿ ಮನೆಯೊಂದರ ಗೇಟ್ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಇದನ್ನೂ ಓದಿ: ಬಿಜಿಎಸ್ ಆಸ್ಪತ್ರೆಗೆ ದಾಖಲಾದ ದರ್ಶನ್ – ವೈದ್ಯಕೀಯ ತಪಾಸಣೆ ಬಗ್ಗೆ ವೈದ್ಯರು ಹೇಳಿದ್ದೇನು?

    ಡಿಕ್ಕಿ ಹೊಡೆದ ರಭಸಕ್ಕೆ ಯುವಕ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸ್ಥಳೀಯರು ಆತನನ್ನು ಹತ್ತಿರದ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಯುವಕ ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ. ಇದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗರ್ಲ್‌ಫ್ರೆಂಡ್ಸ್‌ ಜೊತೆ ಸೇರಿ ಪತ್ನಿಗೆ ಅನಸ್ತೇಷಿಯಾ ನೀಡಿ ಹತ್ಯೆ – ಮೂವರು ಅರೆಸ್ಟ್‌

  • ಮಗನ ಸೈಕಲಿನಲ್ಲೇ ಹೊಲ ಉಳುಮೆ ಮಾಡಿದ ರೈತ

    ಮಗನ ಸೈಕಲಿನಲ್ಲೇ ಹೊಲ ಉಳುಮೆ ಮಾಡಿದ ರೈತ

    ಚೆನ್ನೈ: ಕೊರೊನಾ ವೈರಸ್ ನಿಂದ ದೇಶದಲ್ಲಿ ರೈತರು ಕೂಡ ನಷ್ಟ ಅನುಭವಿಸಿದ್ದಾರೆ. ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು ಕೂಡ ತಮ್ಮ ಆದಾಯ ಕಳೆದುಕೊಂಡಿದ್ದಾರೆ. ಇದಕ್ಕೆ ತಮಿಳುನಾಡಿನ ತಿರುಥಾನಿ ಜಿಲ್ಲೆಯ ಅಗೂರ್ ಗ್ರಾಮದ ರೈತ ಸಾಕ್ಷಿ.

    ಹೌದು. ರೈತ ತನ್ನ ಹೊಲದಲ್ಲಿ ಉಳುಮೆ ಮಾಡಲು ಮಗನ ಸೈಕಲನ್ನು ಬಳಸುವ ಮೂಲಕ ಸುದ್ದಿಯಾಗಿದ್ದಾರೆ. ಈ ರೈತ ತನ್ನ ಮಗನ ಸೈಕಲ್ ಅನ್ನು ನೇಗಿಲನ್ನಾಗಿ ಪರಿವರ್ತಿಸಿ ತನ್ನ ಹೊಲವನ್ನು ಉಳುಮೆ ಮಾಡಿದ್ದಾರೆ.

    ನಾಗರಾಜ್ (37) ಮತ್ತು ಅವರ ಸಹೋದರ ತಮ್ಮ ತಂದೆಯ ಹೊಲವನ್ನು ನೋಡಿಕೊಳ್ಳುತ್ತಿದ್ದಾರೆ. ಭತ್ತವನ್ನು ಬೆಳೆಸಿದ ನಂತರ ಅವರು ನಷ್ಟ ಅನುಭವಿಸಿದರು. ಹೀಗಾಗಿ ದೇವಾಲಯಗಳಲ್ಲಿ ಅರ್ಪಣೆಗಾಗಿ ಬಳಸುವ ಸಮ್ಮಂಗಿ ಹೂಗಳನ್ನು ಬೆಳೆಯಲು ನಿರ್ಧರಿಸಿದರು.

    ಕುಟುಂಬವು ಸಾಲವನ್ನು ತೆಗೆದುಕೊಂಡು ಆರು ತಿಂಗಳ ಕಾಲ ಯಾವುದೇ ಇಳುವರಿ ಇಲ್ಲದೆ ಕೆಲಸ ಮಾಡಿತು. ಸಸ್ಯಗಳು ಪಕ್ವವಾಗಲು ಕಾಯುತ್ತಿದ್ದವು. ಈ ಮಧ್ಯೆ ಸುಗ್ಗಿಯ ಸಮಯದಲ್ಲಿ ಕೋವಿಡ್ -19 ಹರಡುವುದನ್ನು ನಿಯಂತ್ರಿಸಲು ರಾಷ್ಟ್ರವ್ಯಾಪಿ ಲಾಕ್‍ಡೌನ್ ವಿಧಿಸಲಾಯಿತು. ಈ ಹಿನ್ನೆಲೆಯಲ್ಲಿ ಮದುವೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಿಂದ ನಾಗರಾಜ್ ಮತ್ತು ಅವರ ಕುಟುಂಬಕ್ಕೆ ನಷ್ಟ ಉಂಟಾಯಿತು.

    ಜೀವನ ನಡೆಸಲು ಕುಟುಂಬವು ಒಂದು ವರ್ಷಕ್ಕೂ ಹೆಚ್ಚು ಕಾಲ ಕಷ್ಟಪಟ್ಟಿತು. ಎಲ್ಲಾ ಉಳಿತಾಯವನ್ನು ಬರಿದಾಗಿತ್ತು. ತನ್ನ ತಂದೆಯ ಜಮೀನನ್ನು ಹೊರತುಪಡಿಸಿ ಜೀವನ ಸಾಗಿಸಲು ಬೇರೇನೂ ಆದಾಯದ ಮೂಲ ಇಲ್ಲ. ಹೀಗಾಗಿ ನಾಗರಾಜ್ ಮತ್ತೆ ಸಮ್ಮಂಗಿಯನ್ನು ಬೆಳೆಸಲು ನಿರ್ಧರಿಸಿದರು. ತಮಿಳುನಾಡು ಸರ್ಕಾರ ನೀಡಿದ ಮಗನ ಸೈಕಲ್ ಅನ್ನು ನೇಗಿಲಿನಂತೆ ಪರಿವರ್ತಿಸಿದರು.

    ನಾನು ನನ್ನ ಮಗನ ಸೈಕಲ್ ಅನ್ನು ಬಳಸುತ್ತಿದ್ದೇನೆ. ನನಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ. ಆದ್ದರಿಂದ ನಾನು ಇದನ್ನು ಮಾಡಬೇಕಾಗಿತ್ತು ಎಂದು ನಾಗರಾಜ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆನ್‍ಲೈನ್ ತರಗತಿಗಳಿಗೆ ಹಾಜರಾಗುತ್ತಿರುವ 11 ವರ್ಷದ ಮಗ ತಮ್ಮ ತಂದೆ ಮತ್ತು ಅಜ್ಜನಂತೆ ಕೃಷಿಯನ್ನು ಇಷ್ಟಪಡುತ್ತಾನೆ. ತಂದೆ ಅಥವಾ ಚಿಕ್ಕಪ್ಪನ ಜೊತೆ ಕೆಲಸದಲ್ಲಿ ಕೈ ಜೋಡಿಸುತ್ತಾನೆ ಎಂದರು. ಇದನ್ನೂ ಓದಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಆಸ್ಪತ್ರೆಗೆ ದಾಖಲು

    ನಾವು ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಈ ವಿಧಾನವನ್ನು ಕಂಡುಹಿಡಿದಿದ್ದೇವೆ. ಲಾಕ್ ಡೌನ್ ಸಮಯದಲ್ಲಿ, ನಾವು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೇವೆ. ಈ ಭೂಮಿ ಈಗ ನಮ್ಮಲ್ಲಿದೆ. ಆದ್ದರಿಂದ ನಾವು ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ನಾಗರಾಜ್ ಸಹೋದರ ಪಾಂಡಿಯಾ ಹೇಳಿದರು.