Tag: Byatarayanapura Police Station

  • ಕಂಠಪೂರ್ತಿ ಕುಡಿದು ಮಾರಣಾಂತಿಕ ಹಲ್ಲೆ – ಹಲ್ಲೆಗೊಳಗಾದ ವ್ಯಕ್ತಿ ದೂರು ನೀಡ್ತಿದ್ದಂತೆ ನೇಣಿಗೆ ಶರಣಾದ ಆರೋಪಿ

    ಕಂಠಪೂರ್ತಿ ಕುಡಿದು ಮಾರಣಾಂತಿಕ ಹಲ್ಲೆ – ಹಲ್ಲೆಗೊಳಗಾದ ವ್ಯಕ್ತಿ ದೂರು ನೀಡ್ತಿದ್ದಂತೆ ನೇಣಿಗೆ ಶರಣಾದ ಆರೋಪಿ

    ಬೆಂಗಳೂರು: ಕಂಠಪೂರ್ತಿ ಕುಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದವನ ವಿರುದ್ಧ ಹಲ್ಲೆಗೊಳಗಾದ ವ್ಯಕ್ತಿ ದೂರು ನೀಡುತ್ತಿದ್ದಂತೆ ಆರೋಪಿ ನೇಣಿಗೆ ಶರಣಾಗಿರುವ ಘಟನೆ ನಗರದ ಮೈಸೂರು ರಸ್ತೆಯ (Mysuru Road) ಕಸ್ತೂರಿ ಬಾ ನಗರದಲ್ಲಿ ನಡೆದಿದೆ.

    ಮೃತ ಆರೋಪಿಯನ್ನು ದಿವ್ಯ ತೇಜ್ ಹಾಗೂ ಹಲ್ಲೆಗೊಳಗಾದ ವ್ಯಕ್ತಿಯನ್ನು ರಿಷಿ ತೇಜ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ದಾವಣಗೆರೆ | ವೃದ್ಧ ದಂಪತಿಯ ಕೈಕಾಲು ಕಟ್ಟಿ 8 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಗ್ಯಾಂಗ್

    ಘಟನೆ ನಡೆದ ದಿನ ರಿಷಿ ಕಡೆಯಿಂದ ದಿವ್ಯ ಬಿಯರ್ ಬಾಟಲಿಗಳನ್ನು ತರಿಸಿದ್ದ. ಬಳಿಕ ತಡರಾತ್ರಿವರೆಗೆ ಇಬ್ಬರು ಸೇರಿಕೊಂಡು ಕಂಠಪೂರ್ತಿ ಕುಡಿದಿದ್ದರು. ಈ ವೇಳೆ ಕುಡಿದ ನಶೆಯಲ್ಲಿದ್ದ ದಿವ್ಯ ಏಕಾಏಕಿ ಬಿಯರ್ ಬಾಟಲಿಯಿಂದ ರಿಷಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಿಷಿಗೆ ದಿವ್ಯ ಹೊಸ ಬಟ್ಟೆ ತಂದುಕೊಟ್ಟಿದ್ದ. ಬಳಿಕ ರಿಷಿ ಹೊಸ ಬಟ್ಟೆ ಧರಿಸಿಕೊಂಡು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ.

    ದೂರು ದಾಖಲಾಗುತ್ತಿದ್ದಂತೆ ಹೆದರಿಕೊಂಡ ದಿವ್ಯ ಹಲ್ಲೆ ನಡೆದ ಮನೆಗೆ ಮರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಿಷಿ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಮನೆ ಪರಿಶೀಲನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

    ಸದ್ಯ ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ (Byatarayanapura Police Station) ದೂರು ದಾಖಲಾಗಿದೆ.ಇದನ್ನೂ ಓದಿ: ಚಂದ್ರಗ್ರಹಣ ಕಣ್ತುಂಬ ನೋಡಿ ಸಂಭ್ರಮಿಸಿ: ಭೌತವಿಜ್ಞಾನಿ ಎ.ಪಿ.ಭಟ್‌

  • ವಿವಾಹಿತೆಯೊಂದಿಗೆ ಪ್ರೇಮ; ಮದುವೆ ಬೇಡವೆಂದು ಹಲ್ಲೆ ನಡೆಸಿದ ಪ್ರೇಮಿ ಜೈಲು ಪಾಲು – ಮುಂದೇನಾಯ್ತು?

    ವಿವಾಹಿತೆಯೊಂದಿಗೆ ಪ್ರೇಮ; ಮದುವೆ ಬೇಡವೆಂದು ಹಲ್ಲೆ ನಡೆಸಿದ ಪ್ರೇಮಿ ಜೈಲು ಪಾಲು – ಮುಂದೇನಾಯ್ತು?

    – ಜೈಲಿಂದಲೇ ಮಹಿಳೆಗೆ ಕೊಲೆ ಬೆದರಿಕೆ ಕರೆ

    ಬೆಂಗಳೂರು: ಇದು ಸಿನಿಮಾ ಶೈಲಿಯಂತೆ ಒನ್‌ ವೇ ಲವ್‌ ಸ್ಟೋರಿ (Love Storty). ಆದ್ರೆ ಕಥೆಯಲ್ಲಿ ಪ್ರೇಮಿಯೇ ವಿಲನ್‌ ಆಗಿದ್ದಾನೆ. ಜೈಲಿನಿಂದಲೇ ಪ್ರಿಯತಮೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಇದರಿಂದ ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಮತ್ತೆ ಅಕ್ರಮಗಳ ಅಡ್ಡೆಯಾಯ್ತಾ ಎಂಬ ಮಾತುಗಳು ಕೇಳಿಬರುತ್ತಿವೆ.

    ಇದು ಒಂಥರಾ ಒನ್‌ವೇ ಲವ್‌ಸ್ಟೋರಿ ಪತಿಯಿಂದ ದೂರವಾಗಿದ್ದ ಮಹಿಳೆಯ ಹಿಂದೆ ಬಿದ್ದ ಪಾಗಲ್ ಪ್ರೇಮಿ, ಪ್ರೀತಿ ಮಾಡುವಂತೆ ಆಕೆಯನ್ನ ಕಾಡತೊಡಗಿಸಿದ್ದ. ಶ್ರೀನಿವಾಸ ಎಂಬಾತ ಮಹಿಳೆಯ ಹಿಂದೆ ಬಿದ್ದು ಪ್ರೀತಿಸುವಂತೆ ಕಾಡತೊಡಗಿದ್ದ. ಪ್ರೀತಿಸದೇ ಇದ್ರೆ ಆ್ಯಸಿಡ್‌ ಹಾಕ್ತೀನಿ ಅಂತಾನೂ ಬೆದರಿಕೆ ಹಾಕಿದ್ದನಂತೆ. ಈಗಾಗಲೇ ಮದುವೆಯಾಗಿ ಗಂಡನಿಂದ ದೂರವಾಗಿದ್ದ ಮಹಿಳೆ, ಈತನ ಹುಚ್ಚುತನಕ್ಕೆ ಮನಸೋತು ಪ್ರೀತಿಗೆ ಸಮ್ಮತಿಸಿದ್ದಳು. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ – ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಕೆಲಕಾಲ ಇಬ್ಬರು ಪ್ರೀತಿಯ ಗುಂಗಲ್ಲಿ ತೇಲಾಡಿದ್ದಾರೆ. ಆದ್ರೆ ಮಹಿಳೆ ಮದುವೆ (Marriage) ವಿಚಾರ ತೆಗೆದಿದ್ದೇ ತಡ ಶ್ರೀನಿವಾಸ ಉಲ್ಟಾ ಹೊಡೆದಿದ್ದಾನೆ. ನಿನ್ನನ್ನ ಮದುವೆ ಆಗಲ್ಲ ಜೊತೆಯಲ್ಲೇ ಇರು ಸಾಕು ಅಂದಿದ್ದನಂತೆ. ಇದರೊಂದಿಗೆ ಶ್ರೀನಿವಾಸ ಮತ್ತು ಆತನ ತಾಯಿ ಸೇರ್ಕೊಂಡು ಮಹಿಳೆ ಮೇಲೆ ಹಲ್ಲೆ ಸಹ ನಡೆಸಿದ್ದಾರೆ. ಇದರಿಂದ ನೊಂದ ಮಹಿಳೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಶ್ರೀನಿವಾಸನನ್ನ ಜೈಲಿಗೆ ಕಳುಹಿಸಿದ್ದಾಳೆ. ಇದನ್ನೂ ಓದಿ: ಕತ್ತು ಸೀಳಿ ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಇತ್ತ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಶ್ರೀನಿವಾಸ ಜೈಲಿನಲ್ಲಿದ್ದುಕೊಂಡೇ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಅಂತಾ ಮಹಿಳೆ ಮತ್ತೊಂದು ಆರೋಪ ಮಾಡಿದ್ದಾರೆ. ಶ್ರೀನಿವಾಸ ಜೈಲಿನಿಂದಲೇ ವಾಟ್ಸಪ್ ಕರೆ ಮಾಡಿ ತನ್ನನ್ನ ನೋಡಲು ಜೈಲಿಗೆ ಬರಬೇಕು ಅಂತಾ ಧಮ್ಕಿ ಹಾಕಿದ್ದನಂತೆ. ನನ್ನನ್ನ ಜೈಲಿಗೆ ಹಾಕಿಸಿದ್ದೀಯಾ ಅಲ್ವಾ, ನೀನು ಜೈಲಿಗೆ ಬಾ ನನ್ನೊಟ್ಟಿಗೆ ಇರು, ಇಲ್ಲದಿದ್ದರೆ ಹೊರಗೆ ಬಂದು ಕೊಲೆ ಮಾಡ್ತೀನಿ ಅಂತ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರಿದ್ದಾಳೆ.

    ಇದೀಗ ಮತ್ತೆ ಆರೋಪಿ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ಇದರಿಂದ ಜೈಲಿನಲ್ಲಿ ಖೈದಿಗಳಿಗೆ ಮೊಬೈಲ್ ಆರಾಮಾಗಿ ಸಿಗ್ತಿದೆ ಅನ್ನೋದಕ್ಕೆ ಸಾಕ್ಷಿ ಸಿಕ್ಕಿಂತಾಗಿದೆ .

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]