Tag: Byadarahalli Police

  • ಬೆಂಗಳೂರಿನಲ್ಲೊಬ್ಬ ಆಧುನಿಕ ರಾಬಿನ್ ಹುಡ್ – ಕಳ್ಳತನ ಮಾಡಿ 20 ಮಕ್ಕಳ ಶಾಲಾ, ಕಾಲೇಜು ಫೀಸ್ ಕಟ್ಟಿದ ಕಳ್ಳ ಅರೆಸ್ಟ್

    ಬೆಂಗಳೂರಿನಲ್ಲೊಬ್ಬ ಆಧುನಿಕ ರಾಬಿನ್ ಹುಡ್ – ಕಳ್ಳತನ ಮಾಡಿ 20 ಮಕ್ಕಳ ಶಾಲಾ, ಕಾಲೇಜು ಫೀಸ್ ಕಟ್ಟಿದ ಕಳ್ಳ ಅರೆಸ್ಟ್

    – ಬ್ಯಾಡರಹಳ್ಳಿ ಪೊಲೀಸರಿಂದ ಮೂವರು ಮನೆಗಳ್ಳರ ಬಂಧನ
    – 24 ಲಕ್ಷ ರೂ. ಮೌಲ್ಯದ 260 ಗ್ರಾಂ ಚಿನ್ನದ ಗಟ್ಟಿ ಸೀಜ್

    ಬೆಂಗಳೂರು: ಕಳ್ಳತನ (Theft) ಮಾಡಿ 20 ಮಕ್ಕಳ ಶಾಲಾ, ಕಾಲೇಜು ಫೀಸ್ ಕಟ್ಟಿದ್ದ ಖತರ್ನಾಕ್ ಮನೆಗಳ್ಳರನ್ನು ಬ್ಯಾಡರಹಳ್ಳಿ ಪೊಲೀಸರು (Byadarahalli Police) ಬಂಧಿಸಿದ್ದಾರೆ.

    ಬೇಗೂರು ನಿವಾಸಿ ಶಿವು @ ಶಿವರಪ್ಪನ್ ಈ ಕಳ್ಳತನದ ಮಾಸ್ಟರ್ ಮೈಂಡ್. ಹೆಂಡತಿ, ಮಕ್ಕಳಿಲ್ಲದ ಶಿವು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾಗ ಏರಿಯಾದಲ್ಲಿ ಸ್ನೇಹಿತರು ಮಕ್ಕಳ ಸ್ಕೂಲ್ ಫೀಸ್ ಕಟ್ಟಲು ಪರದಾಡುತ್ತಿರುವುದನ್ನು ನೋಡಿದ್ದ. ಬಳಿಕ ಶಿವು ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ಮನೆಗಳಿಗೆ ಕನ್ನ ಹಾಕಿದ್ದು, ಕದ್ದ ಚಿನ್ನಾಭರಣವನ್ನು ಸ್ನೇಹಿತರಾದ ಅನಿಲ್ @ ಜಗ್ಗ ಮತ್ತು ವಿವೇಕ್‌ನ ಸಹಾಯದಿಂದ ಮಾರಾಟ ಮಾಡಿದ್ದಾನೆ. ಇದನ್ನೂ ಓದಿ: ನಿಮ್ಮ ಕೆಟ್ಟ ರಸ್ತೆಗಳಿಂದ ಕುತ್ತಿಗೆ, ಬೆನ್ನು ನೋವು – 50 ಲಕ್ಷ ಪರಿಹಾರ ಕೋರಿ ಬಿಬಿಎಂಪಿಗೆ ಲೀಗಲ್‌ ನೋಟಿಸ್‌

    ತಮಿಳುನಾಡಿನಲ್ಲಿ 22 ಲಕ್ಷಕ್ಕೆ ಚಿನ್ನ ಮಾರಾಟ ಮಾಡಿಸಿದ್ದ ಶಿವು ಬಂದ ಹಣದಲ್ಲಿ ವಿವೇಕ್‌ಗೆ 4 ಲಕ್ಷ, ಅನಿಲ್‌ಗೆ 4 ಲಕ್ಷ ರೂ. ಮೌಲ್ಯದ ಆಟೋ ಕೊಡಿಸಿದ್ದ. ಉಳಿದ 14 ಲಕ್ಷ ರೂ. ಹಣದಲ್ಲಿ ಏರಿಯಾದ 20 ಮಕ್ಕಳಿಗೆ ಶಾಲಾ ಹಾಗೂ ಕಾಲೇಜ್ ಫೀಸ್ ಕಟ್ಟಿದ್ದಾನೆ. ಮನೆಗಳ್ಳರ ಬೆನ್ನತ್ತಿದ್ದ ಬ್ಯಾಡರಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಶಿವು, ಅನಿಲ್ ಹಾಗು ವಿವೇಕ್‌ನನ್ನು ಬಂಧಿಸಿದ ಪೊಲೀಸರು 24 ಲಕ್ಷ ಮೌಲ್ಯದ 260 ಗ್ರಾಂ ಚಿನ್ನದ ಗಟ್ಟಿಯನ್ನು ಸೀಜ್ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ – ವಿಜಯನಗರದಲ್ಲಿ ಇಂದು ಸಾಧನಾ ಸಮಾವೇಶ

  • ಕತ್ತು ಹಿಸುಕಿ ಪತ್ನಿಯ ಕೊಲೆ – ಪತಿ ನೇಣಿಗೆ ಶರಣು

    ಕತ್ತು ಹಿಸುಕಿ ಪತ್ನಿಯ ಕೊಲೆ – ಪತಿ ನೇಣಿಗೆ ಶರಣು

    ಬೆಂಗಳೂರು: ಮಹಾಶಿವರಾತ್ರಿ (Maha Shivaratri) ದಿನದಂದೇ ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಕೊಂದು, ಪತಿ ನೇಣಿಗೆ ಶರಣಾಗಿರುವ ಘಟನೆ ತಿಗಳರಪಾಳ್ಯ (Thigalarapalya) ಮುಖ್ಯ ರಸ್ತೆಯ ನ್ಯೂ ಇಂಡಿಯನ್ ಸ್ಕೂಲ್ ಬಳಿ ಘಟನೆ ನಡೆದಿದೆ.

    ಪತಿ ಸುರೇಶ್ (40), ಪತ್ನಿ ಮಮತಾ (33) ಮೃತ ದಂಪತಿ. ಪತ್ನಿಯ ಕುತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಸುರೇಶ್, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ರಜೌರಿಯಲ್ಲಿ ಸೇನಾ ವಾಹನದ ಮೇಲೆ ದಾಳಿ – ಪಠಾಣ್‌ಕೋಟ್‌ನಲ್ಲಿ ಅಕ್ರಮ ನುಸುಳುಕೋರನ ಹತ್ಯೆ

    ಜಗಳ ಹಿನ್ನೆಲೆ ಗಂಡ ಹೆಂಡತಿ ಮಹಿಳಾ ಠಾಣೆ ಮೆಟ್ಟಿಲೇರಿದ್ದರು. ವಾರದ ಹಿಂದೆ ಇಬ್ಬರೂ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೌನ್ಸೆಲಿಂಗ್ ಅಟೆಂಡ್ ಮಾಡಿದ್ದರು.

    ಆಟೋ ಡ್ರೈವರ್‌ ಆಗಿದ್ದ ಸುರೇಶ್ ಸರಿಯಾಗಿ ಕೆಲಸ ಮಾಡದೇ, ಸಂಸಾರ ನೋಡಿಕೊಳ್ಳದ ಹಿನ್ನೆಲೆ ದಂಪತಿ ನಡುವೆ ಪ್ರತಿನಿತ್ಯ ಗಲಾಟೆಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಕಳೆದ 9 ತಿಂಗಳಲ್ಲಿ 30 ಅಪ್ರಾಪ್ತೆಯರು ಗರ್ಭಿಣಿ – 14 ಬಾಲಕಿಯರಿಗೆ ಹೆರಿಗೆ!

    ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

  • ಕಿಲಾಡಿ ಲೇಡಿಯಿಂದ ಕಂಟ್ರಾಕ್ಟರ್‌ ಸುಲಿಗೆ – ಟೀ ಕುಡಿಯಲು ಕರೆದು ದರೋಡೆ ಮಾಡಿಸಿದ ಸುಂದರಿ..!

    ಕಿಲಾಡಿ ಲೇಡಿಯಿಂದ ಕಂಟ್ರಾಕ್ಟರ್‌ ಸುಲಿಗೆ – ಟೀ ಕುಡಿಯಲು ಕರೆದು ದರೋಡೆ ಮಾಡಿಸಿದ ಸುಂದರಿ..!

    ಬೆಂಗಳೂರು: ಇಲ್ಲೊಬ್ಳು ಸುಂದ್ರಿ ತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡು ಹನಿಟ್ರ್ಯಾಪ್‌ಗಿಳಿದು ಪೋಲೀಸ್ರು ಹುಡುಕುವಂತೆ ಮಾಡಿಕೊಂಡಿದ್ದಾಳೆ. ಕಂಟ್ರಾಕ್ಟರ್‌ಗೆ ಬಲೆ ಬೀಸಿ ಸುಲಿಗೆ ಮಾಡಿದ ಕಿಲಾಡಿ ಲೇಡಿಯ ಸ್ಟೋರಿ ಇಲ್ಲಿದೆ ನೋಡಿ..

    ಮನೆಗೆ ಬನ್ನಿ ಅಂತ ಕರೆದ ಸುಂದರಿ ನಂಬಿ ಹೋದ ಕಂಟ್ರಾಕ್ಟರ್‌ನ ಸುಲಿಗೆ ಮಾಡಲಾಗಿದೆ. ಸುಂದರಿ ಲೇಡಿ ಜೊತೆ ಇದ್ದಾಗ ಅಪರಿಚಿತರು ಎಂಟ್ರಿ ಕೊಟ್ಟು ನಾವು ಪೊಲೀಸರು ಅಂತ ಬೆದರಿಸಿ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಫೋಟೊ ತೆಗೆದು ಚಿನ್ನದ ಸರ, ಹಣ ಸುಲಿಗೆ ಮಾಡಲಾಗಿದ್ದು ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಕಂಟ್ರಾಕ್ಟರ್ ರಂಗನಾಥ್ ದೂರು ನೀಡಿದ್ದಾರೆ.

    ಕ್ರೈಂ ಹಿಸ್ಟರಿ ನೋಡೋದಾದ್ರೆ ಸ್ನೇಹಿತನೊಬ್ಬನ ಮೂಲಕ ಕಂಟ್ರಾಕ್ಟರ್ ರಂಗನಾಥ್‌ಗೆ ನಯನ ಎಂಬ ಮಹಿಳೆಯ ಪರಿಚಯವಾಗಿದ್ಲು. ಆರಂಭದಲ್ಲಿ ಮಗುವಿಗೆ ಹುಷಾರಿಲ್ಲ ಅಂತ 5 ಸಾವಿರ, 10 ಸಾವಿರ ಹಣ ಹಾಕಿಸಿಕೊಂಡಿದ್ದಳಂತೆ. ಬಳಿಕ ನಿತ್ಯ ಕಾಲ್ ಮಾಡಿ ಮನೆಗೆ ಬನ್ನಿ ಅಂತ ಕರೆಯುತ್ತಿದ್ದಳಂತೆ. ಆದರೆ ಬರ್ತಿನಿ ಅಂತ ಹೇಳಿ ಹೋಗದೆ ರಂಗನಾಥ್ ಅವಾಯ್ಡ್ ಮಾಡಿದ್ದಾರೆ.‌ ಇದನ್ನೂ ಓದಿ: ನೆಲಮಂಗಲ | ರೈಲಿಗೆ ಸಿಲುಕಿ 24 ಮೇಕೆಗಳ ದಾರುಣ ಸಾವು, 4 ಲಕ್ಷ ನಷ್ಟ

    ಡಿಸೆಂಬರ್ 9ರಂದು ಬೆಳಗ್ಗೆ ಬೈಕ್ ನಲ್ಲಿ ಮಾಗಡಿ ರಸ್ತೆಯಲ್ಲಿ ಹೋಗ್ತಿದ್ದಾಗ ಹಿಂಬದಿಯಿಂದ ಸ್ಕೂಟರ್ ನಲ್ಲಿ ಬಂದ ನಯನ, ರಂಗನಾಥ್ ಕರೆದು ಮಾತಾಡಿಸಿದ್ದಾಳೆ. ಇಲ್ಲೇ ಮನೆ ಟೀ ಕುಡಿದು ಹೋಗಿ ಅಂತ ಮನೆಗೆ ಕರೆದುಕೊಂಡು ಹೋಗ್ತಾಳೆ. ಆಕೆಯನ್ನ ನಂಬಿ ಮನೆಗೆ ಹೋಗಿ ಆಕೆ ಜೊತೆ ಮಾತನಾಡ್ತಿದ್ದಂತೆ ಏಕಾಏಕಿ ಅಪರಿಚಿತ ವ್ಯಕ್ತಿಗಳ ಎಂಟ್ರಿಯಾಗಿದೆ. ನಾವು ಪೊಲೀಸರು ಎಂದು ಬೆದರಿಸಿ ರಂಗನಾಥ್ ಮೇಲೆ ಹಲ್ಲೆ ನಡೆಸಿ, ಬೆದರಿಸಿ ಚಿನ್ನದ ಸರ, 29,000 ರೂ. ನಗದು ಹಾಗೂ 26,000 ರೂ. ಫೋನ್ ಪೇ ಮಾಡಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ರು. ಇತ್ತ ನಯನಗೆ ದೂರು ಕೊಡೋಣ ಬಾ ಎಂದು ಕರೆದ್ರೂ ಡ್ರಾಮಾ ಶುರು ಮಾಡಿ ಬ್ಲಾಕ್ ಮೇಲ್ ಮಾಡಿದ್ದಳಂತೆ. ವಕೀಲರ ಜೊತೆ ಚರ್ಚಿಸಿ ಬ್ಯಾಡರಹಳ್ಳಿ ಪೊಲೀಸ್ರಿಗೆ ದೂರು ನೀಡಿದ್ದಾರೆ.

    ತನಿಖೆ ವೇಳೆ ನಯನಾ, ಮೋಹನ್, ಸಂತೋಷ್ ಹಾಗೂ ಮತ್ತಿಬ್ಬರ ಸೇರಿ ಕೃತ್ಯ ಎಸಗಿರೋದು ಗೊತ್ತಾಗಿದೆ. ಸದ್ಯ ಹನಿಟ್ರ್ಯಾಪ್ ಕೇಸಲ್ಲಿ ಮೂವರು ಅರೆಸ್ಟ್ ಆಗಿದ್ದು, ಸುಂದರಿ ನಯನಾಳಿಗಾಗಿ ಪೊಲೀಸ್ರು ಬಲೆ‌ ಬೀಸಿದ್ದಾರೆ. ಇದನ್ನೂ ಓದಿ:  ಶನಿವಾರ ಬೆಳಗ್ಗೆ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಮನಮೋಹನ್ ಸಿಂಗ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

  • ಶೋಕಿಯಿಂದ ಚಿನ್ನ ಖರೀದಿಸಿ ಫೇಕ್ ಪೇಮೆಂಟ್ – ಖತರ್ನಾಕ್‌ ಜೋಡಿ ಸಿಕ್ಕಿಬಿದ್ದದ್ದೇ ರೋಚಕ

    ಶೋಕಿಯಿಂದ ಚಿನ್ನ ಖರೀದಿಸಿ ಫೇಕ್ ಪೇಮೆಂಟ್ – ಖತರ್ನಾಕ್‌ ಜೋಡಿ ಸಿಕ್ಕಿಬಿದ್ದದ್ದೇ ರೋಚಕ

    ಬೆಂಗಳೂರು: ‌ಶ್ರೀಮಂತರ ರೀತಿಯಲ್ಲೇ ಶೋಕಿಯಿಂದ ಬಂದು, ಚಿನ್ನ ಖರೀದಿಸಿ ವಂಚಿಸುತ್ತಿದ್ದ ಖತರ್ನಾಕ್‌ ಜೋಡಿಯೊಂದನ್ನು ಬ್ಯಾಡರಹಳ್ಳಿ ಪೊಲೀಸರು (Byadarahalli Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹೌದು. ಶ್ರೀಮಂತರಂತೆ ಟಿಪ್‌ಟಾಪ್‌ ಆಗಿ ಚಿನ್ನದ ಅಂಗಡಿಗೆ ಬಂದ ಜೋಡಿ, ಚಿನ್ನ ಖರೀದಿಸೋದ್ರಲ್ಲೇ (Gold Purchase) ಬ್ಯುಸಿಯಾಗಿರುತ್ತಿತ್ತು. ಅಂಗಡಿ ಮಾಲೀಕರು ಈ ಜೋಡಿ ಕೇಳಿದ್ದನ್ನೆಲ್ಲಾ ಕೊಡುತ್ತಿದ್ದರು. ಒಳ್ಳೆಯ ವ್ಯಾಪಾರ ಆಗ್ತಿತ್ತು ಅಂದುಕೊಳ್ಳುತ್ತಿದ್ದ ಚಿನ್ನದಂಗಡಿ ಮಾಲೀಕನ ಖುಷಿ ಇರುತ್ತಿದ್ದದ್ದು ಕೇವಲ ಅರ್ಧಗಂಟೆ ಮಾತ್ರ. ಈ ಜೋಡಿ ಶಾಪಿಂಗ್‌ ಮಾಡ್ತಿದ್ದ ರೀತಿ ನೋಡಿ, ಅಂಗಡಿ ಮಾಲೀಕರೇ ಬೆಚ್ಚಿ ಬೀಳುತ್ತಿದ್ದರು. ಇಂತಹ ಜೋಡಿ ತಗಲಾಕ್ಕೊಂಡಿದ್ದು ಹೇಗೆ ಅನ್ನೋ ಸ್ಟೋರಿ ಇಲ್ಲಿದೆ.

    ಡಿಜಿಟಲ್‌ ಪೇಮೆಂಟ್‌ ಆ್ಯಪ್‌ಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಈ ಜೋಡಿ, ಫೇಕ್‌ ಪೇಮೆಂಟ್‌ ಆ್ಯಪ್‌ ( Fake Payment App) ಮೂಲಕ ಹಣ ಪಾವತಿ ಮಾಡಿರುವುದಾಗಿ ತೋರಿಸಿ, ವಂಚಿಸುತ್ತಿದ್ದರು. ಅದೇ ರೀತಿ ಬ್ಯಾಡರಹಳ್ಳಿ ವ್ಯಾಪ್ತಿಯ ಆಭರಣದ ಅಂಗಡಿಯಲ್ಲೂ ಅದೇ ರೀತಿ ನಾಟಕ ಮಾಡಿ ಎಸ್ಕೇಪ್‌ ಆಗಿದ್ದರು. 15 ದಿನಗಳ ಬಳಿಕ ಬ್ಯಾಡರಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇದನ್ನೂ ಓದಿ: ಗುಜರಾತ್‌ನ ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ

    ಹೇಗಿದೆ ನೋಡಿ ಥ್ರಿಲ್ಲಿಂಗ್‌ ಸ್ಟೋರಿ:
    15 ದಿನದ ಹಿಂದೆ ಗೊಲ್ಲರಹಟ್ಟಿಯಲ್ಲಿರುವ ಪರಮೇಶ್ವರ ಬ್ಯಾಂಕರ್ಸ್ ಅಂಡ್‌ ಜ್ಯೂವೆಲರ್ಸ್‌ ಆಭರಣ ಅಂಗಡಿಗೆ ಈ ಜೋಡಿ ಬಂದಿತ್ತು. 1.65 ಲಕ್ಷ ರೂ. ಮೌಲ್ಯದ 36 ಗ್ರಾಂ ಚಿನ್ನಾಭರಣ ಖರೀದಿ ಮಾಡಿದ್ದಾರೆ. ಬಳಿಕ ಆನ್‌ಲೈನ್‌ ಮೂಲಕ ಹಣ ಪಾವತಿಸಿ ಹೊರಟಿದ್ದಾರೆ. ಹಣ ಪಾವತಿಸಿದ ಸಂದೇಶವನ್ನು ಮಾಲೀಕರಿಗೆ ತೋರಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಅಂಗಡಿ ಮಾಲೀಕ ತಮ್ಮ ಖಾತೆಯನ್ನು ಪರಿಶೀಲಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಸಾವು – ಪಿಎಸ್‌ಐ ಸಸ್ಪೆಂಡ್

    ಘಟನೆ ಸಂಬಂಧ ಅಂಗಡಿ ಮಾಲೀಕ ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರತು ತನಿಖೆ ಆರಂಭಿಸಿದ್ದ ಪೊಲೀಸರು 15 ದಿನಗಳ ಬಳಿಕ ಆರೋಪಿಗಳನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು 1.30 ಲಕ್ಷ ಚಿನ್ನ ಅಡಮಾನ ಇಟ್ಟಿರೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಇದೇ ರೀತಿ ಹಲವು ಚಿನ್ನದ ಅಂಗಡಿಗಳಲ್ಲಿ ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದೆ.

  • ಭೂಕಬಳಿಕೆ ಆರೋಪ ಪ್ರಕರಣ – ಜೇಡ್ರಳ್ಳಿ ಕೃಷ್ಣಪ್ಪಗೆ ಜಾಮೀನು ಮಂಜೂರು!

    ಭೂಕಬಳಿಕೆ ಆರೋಪ ಪ್ರಕರಣ – ಜೇಡ್ರಳ್ಳಿ ಕೃಷ್ಣಪ್ಪಗೆ ಜಾಮೀನು ಮಂಜೂರು!

    ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ (Land Grab) ಮಾಡಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಮಾಜಿ ಡಾನ್ ಜೇಡ್ರಳ್ಳಿ ಕೃಷ್ಣಪ್ಪ (Jedralli Krishnappa) ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

    ಹೌದು. 16 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಡಾನ್ ಜೇಡ್ರಳ್ಳಿ ಕೃಷ್ಣಪ್ಪರನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಹೆಚ್ಚಿನ ತನಿಖೆಗಾಗಿ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಎಸಿಜಿಎಂ ಕೋರ್ಟ್‌ಗೆ ಪೊಲೀಸರು ಮನವಿ ಮಾಡಿದ್ದರು. ಇದನ್ನೂ ಓದಿ: UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    ಕೃಷ್ಣಪ್ಪ ಪರ ಹಿರಿಯ ವಕೀಲ ಶ್ಯಾಮ್‌ ಸುಂದರ್ ಹಾಜರಾಗಿ ಬ್ಯಾಡರಹಳ್ಳಿ ಪೊಲೀಸರ (Byadarahalli Police) ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ಸಿವಿಲ್ ಕೇಸ್‌ನಲ್ಲಿ ಪೊಲೀಸರಿಗೇನು ಕೆಲಸ? ನಮ್ಮ ಕಕ್ಷಿದಾರ ರಿಜಿಸ್ಟರ್ಡ್ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ನರಸಿಂಹಯ್ಯ ಹಾಗೂ ಆತನ ಹೆಣ್ಣು ಮಕ್ಕಳು ರಿಜಿಸ್ಟರ್ ಆಫೀಸ್‌ಗೆ ಬಂದು ಸಹಿ ಮಾಡಿದ್ದಾರೆ. ಜಮೀನು ತಮ್ಮದಲ್ಲ ಅಂದ್ರೆ ಯಾರಾದ್ರೂ ಬರೋದಕ್ಕೆ ಸಾಧ್ಯನಾ? ಎಫ್‌ಐಆರ್‌ನಲ್ಲಿರುವ ಸೆಕ್ಷನ್‌ಗಳನ್ನ ದುರುದ್ದೇಶಪೂರ್ವಕವಾಗಿ ಹಾಕಿದ್ದಾರೆ ಎಂದು ವಾದಿಸಿದರು. ಇದನ್ನೂ ಓದಿ: ಕರ್ನಾಟಕದ GSTಯ ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ – ನಿರ್ಮಲಾ ಸೀತಾರಾಮನ್

    ಅಲ್ಲದೇ 7 ವರ್ಷಗಳ ಶಿಕ್ಷೆ ಒಳಗಿನ ಕೇಸ್‌ಗಳಲ್ಲಿ ಅರೆಸ್ಟ್ ಮಾಡಬಾರದು ಅಂತಿದೆ. ಆದರೂ ಅರೆಸ್ಟ್ ಮಾಡಿ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಬಿಟ್ರೆ ಇವರು ಬ್ಯಾಡರಹಳ್ಳಿ ಸ್ಟೇಷನ್‌ ಅನ್ನೇ ರಿಜಿಸ್ಟರ್ ಆಫೀಸ್ ಮಾಡ್ಕೊತಾರೆ. ಯಾರದ್ದು ಅಸಲಿ ನಕಲಿ ಅಂತ ತೀರ್ಮಾನ ಮಾಡಬೇಕಿರೋದು ತಹಶೀಲ್ದಾರ್. ಸಿವಿಲ್ ವ್ಯಾಜ್ಯದಲ್ಲಿ ಒಬ್ಬ ವ್ಯಕ್ತಿಯ ಪರವಾಗಿ ಪೊಲೀಸರು ಸಹಾಯ ಮಾಡಿದ್ದಾರೆ. ಅರೆಸ್ಟ್ ಮಾಡಿದ ಅಧಿಕಾರಿ ವಿರುದ್ಧ ನಿಂದನೆ ಹಾಕುವಂತೆ ಮನವಿ ಮಾಡಿದರು.

    ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಒಬ್ಬರ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿದ್ದಾರೆ. ಇದನ್ನೂ ಓದಿ: ಚೆನ್ನೈ ತಲುಪಿದ ಚಾಲಕ ರಹಿತ ಹಳದಿ ಮೆಟ್ರೋ- ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಬೆಂಗಳೂರಿಗೆ ರವಾನೆ