ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್‌ನಿಂದ ಜನಪ್ರಿಯಳಾಗಿರುವ ಕಿಪ್ಪಿ ಕೀರ್ತಿ (Kipi Keerthi) ತನ್ನ ಪ್ರಿಯತಮನ ವಿರುದ್ಧ ದೂರು ದಾಖಲಿಸಿದ್ದಾಳೆ.
ಈ ಕುರಿತು ಬ್ಯಾಡರಹಳ್ಳಿ (Byadarahalli) ಪೊಲೀಸ್ ಠಾಣೆಯಲ್ಲಿ ಪ್ರಿಯತಮ ಮುತ್ತು ಹಾಗೂ ಆತನ ಸ್ನೇಹಿತ ದಚ್ಚು ಎಂಬಾತನ ವಿರುದ್ಧ ದೂರು ದಾಖಲಿಸಿದ್ದು, ನನ್ನ ಖಾಸಗಿ ಫೋಟೋಗಳನ್ನು ಇಟ್ಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.ಇದನ್ನೂ ಓದಿ: IAF ಗ್ರೂಪ್ ಕ್ಯಾಪ್ಟನ್ ಕಳಿಸಿದ ಮೇಲ್‌ನಿಂದ ಚೈತನ್ಯಾನಂದನ ಕಾಮಪುರಾಣ ಬಯಲಾಯ್ತು!
ದೂರಿನ ಆಧಾರದ ಮೇಲೆ ಆರೋಪಿಗಳ ವಿಚಾರಣೆ ನಡೆಸಿದಾಗ ಕಿಪ್ಪಿ ಕೀರ್ತಿ ಅವರಿಬ್ಬರ ಲಿಂಗದ ಬಗ್ಗೆ ಮಾತನಾಡಿದ್ದಳಂತೆ. ನೀವಿಬ್ಬರು ಗೇ ಎಂದು ಹೇಳಿದ್ದಳಂತೆ. ಹೀಗಾಗಿ ಇಬ್ಬರು ಆಕೆಯ ಫೋಟೋ, ವಿಡಿಯೋಗಳನ್ನು ಇಟ್ಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಕಿಪ್ಪಿ ಕೀರ್ತಿ ಹಾಗೂ ಸ್ನೇಹಿತರನ್ನು ಠಾಣೆಗೆ ಕರೆಸಿದ ಪೊಲೀಸರು ಮತ್ತೆ ಈ ರೀತಿ ಮಾಡಬೇಡಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.ಇದನ್ನೂ ಓದಿ: ಮತ್ತೆ ಬೆನ್ನು ನೋವಿನ ಕಥೆ ಹೇಳಿದ ದರ್ಶನ್ – ಮಹತ್ವ ಕೊಡದ ಜಡ್ಜ್
ಬೆಂಗಳೂರು: ರೌಡಿಶೀಟರೊಬ್ಬ ಸಿಕ್ಕಸಿಕ್ಕವರ ಮೇಲೆ ಲಾಂಗ್ ಬೀಸಿರುವ ಪ್ರಕರಣ ಬ್ಯಾಡರಹಳ್ಳಿಯಲ್ಲಿ (Byadarahalli) ನಡೆದಿದೆ.
ಭಾನುವಾರ ಮುಂಜಾನೆ ರೌಡಿಶೀಟರ್ ಸನ್ನಿ ಎಂಬಾತ ನಗರದ ರಸ್ತೆಯಲ್ಲಿ ಲಾಂಗ್ ಹಿಡಿದು ತಿರುಗಾಡಿದ್ದಾನೆ. ಈ ವೇಳೆ, ನಮ್ಮ ಹುಡ್ಗಿ ತಂಟೆಗೆ ಬಂದ್ರೆ ಮುಗ್ಸಿ ಬಿಡ್ತೀನಿ ಅಂತ ಕಂಡಕಂಡವರ ಮೇಲೆ ಲಾಂಗ್ ಬೀಸಿದ್ದಾನೆ. ಆತನ ಅಟ್ಟಹಾಸದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ – ಮತ್ತೆ ಮೂವರು ಅರೆಸ್ಟ್
ಬೆಂಗಳೂರು: ಅನಾರೋಗ್ಯಕ್ಕೆ (Illness) ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಾಣಾಗಿರುವ ಘಟನೆ ಬೆಂಗಳೂರಿನ (Bengaluru) ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಪುರುಷೋತ್ತಮ್ (27) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೂಲತಃ ಮಾಗಡಿ (Magadi) ತಾಲೂಕು ರಾಮನಗರ (Ramanagara) ಜಿಲ್ಲೆ ಬಾಳೆನಹಳ್ಳಿಯ ಪುರುಷೋತ್ತಮ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪುರುಷೋತ್ತಮ್ ಕಳೆದ 5 ವರ್ಷದಿಂದ ಹೆಂಡತಿ ಹಾಗೂ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅನಾರೋಗ್ಯದಿಂದ ಬೆಸತ್ತು ಗೊಲ್ಲರಹಟ್ಟಿಯಲ್ಲಿ ರೂಂ ಡೋರ್ ಲಾಕ್ ಮಾಡಿಕೊಂಡು ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ದಳಪತಿಗಳಿಗೆ ಮುಖಭಂಗ – ಮತ್ತೆ ‘ಕೈ’ ವಶವಾಯ್ತು ಮನ್ಮುಲ್ ಗದ್ದುಗೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್ ಪುತ್ರ ಮಧು ಸಾಗರ್, ನಾವು ಸತ್ತ ಮೇಲೂ ನೀನು ನೆಮ್ಮದಿಯಾಗಿರಬಾರದು. ನಮ್ಮ ಸಾವು ನಿನಗೆ ಪಾಠ ಆಗಬೇಕು. ನಮ್ಮ ಸಾವಿಗೆ ನಮ್ಮ ಅಪ್ಪನೇ ಕಾರಣ. ನಮ್ಮ ಅಪ್ಪನ ವಿರುದ್ಧ ನಾನು ಸಾಕ್ಷ್ಯ ಕಲೆ ಹಾಕಿದ್ದೇನೆ. ನಾನು ಸತ್ತ ಮೇಲೆ ಕೂಡ ನನ್ನ ಲ್ಯಾಪ್ ಟಾಪ್ ಅಲ್ಲಿ ಸಾಕ್ಷ್ಯಗಳನ್ನು ಇರುತ್ತದೆ. ನಮ್ಮ ಅಪ್ಪನ ಅಸಲಿ ಮುಖ ಅನಾವರಣ ಆಗುತ್ತದೆ. ಅಲ್ಲದೇ ನನ್ನ ಅಪ್ಪ ಬ್ಲಾಕ್ ಮೇಲ್ ಮಾಡಿ ಯುವತಿಯರನ್ನು ಬಳಸಿಕೊಳ್ಳುತ್ತಿದ್ದ ಎಂದು ಆರೋಪಿಸಿದ್ದಾರೆ.
ಇದೀಗ ಪೊಲೀಸರು ಆ ಲ್ಯಾಪ್ ಟಾಪ್ ಗಳನ್ನು ರಿಟ್ರೀವ್ ಮಾಡಿದ್ದು, 15 ಸ್ಕ್ರೀನ್ ಶಾಟ್ ಗಳು ಸಿಕ್ಕಿದೆ. ಮನೆಯಲ್ಲಿ ಸಿಕ್ಕ ಪೆನ್ ಡ್ರೈವ್ ಮತ್ತು ಒಂದು ಲ್ಯಾಪ್ ಟಾಪ್ ಸಂಪೂರ್ಣ ಖಾಲಿ ಇತ್ತು. ಆದರೆ ಆಪಲ್ ಕಂಪನಿಯ ಲ್ಯಾಪ್ ಟಾಪ್ ಅಲ್ಲಿ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದ್ದು, ಅಪ್ಪನ ರಾಸಲೀಲೆಯ ಸ್ಕ್ರೀನ್ ಶಾಟ್ ಗಳನ್ನು ಆ ಲ್ಯಾಪ್‍ಟಾಪ್ ಅಲ್ಲಿ ಮಧು ಸಾಗರ್ ಇರಿಸಿದ್ದ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ವಾಹನ ಸವಾರರ ಮೇಲೆ ಹಿರೇಹಳ್ಳಿ ಟೋಲ್ ಗೇಟ್ ಸಿಬ್ಬಂದಿ ಗೂಂಡಾಗಿರಿ
ಈ ವೇಳೆ ಶಂಕರ್ ಒಂದೇ ಒಂದು ಹೆಂಗಸಿನ ಜೊತೆಯಲ್ಲಿ ಮಾತ್ರ ಅಲ್ಲ, ನಾಲ್ವರು ಹೆಂಗಸರುಗಳ ಜೊತೆಯಲ್ಲಿ ವಾಟ್ಸಾಪ್ ಚಾಟ್ ಮಾಡಿರುವುದು ಬಹಿರಂಗಗೊಂಡಿದೆ. ಶಂಕರ್ ಮಗ ಮಧು ಸಾಗರ್ ಶಂಕರ್ ಮೊಬೈಲ್ ನಿಂದಲೇ ಈ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಂಡಿದ್ದಾನೆ. ಬಳಿಕ ಮಧು ಸಾಗರ್ ಶಂಕರ್ ಮೊಬೈಲ್ ನಿಂದ ಸ್ಕ್ರೀನ್ ಶಾಟ್ ಗಳನ್ನು ಸೇವ್ ಮಾಡಿದ್ದಾನೆ. ಬಳಿಕ ಆ ಸ್ಕ್ರೀನ್ ಶಾಟ್‍ಗಳೆಲ್ಲವನ್ನೂ ತನ್ನ ಲ್ಯಾಪ್ ಟಾಪ್ ಅಲ್ಲಿ ಸಂಗ್ರಹ ಮಾಡಿದ್ದಾರೆ. ಒಟ್ಟು 15ಕ್ಕೂ ಹೆಚ್ಚು ಸ್ಕ್ರೀನ್ ಶಾಟ್ ಗಳು ಈಗ ಪೊಲೀಸರ ಕೈ ಸೇರಿದೆ. ಅದರಲ್ಲಿ ಶಂಕರ್ ನಾಲ್ವರು ಮಹಿಳೆಯರ ಜೊತೆಯಲ್ಲಿ ಚಾಟ್ ಮಾಡಿ ಮಾತನಾಡಿದ್ದು, ಹಾಯ್, ಏನ್ಮಾಡ್ತಾ ಇದ್ದೀಯಾ? ಎಲ್ಲಿ ಇದ್ದೀಯಾ? ಇವತ್ತು ಏನಾದ್ರೂ ಸಿಕ್ತಿಯಾ? ಡ್ರಿಂಕ್ಸ್ ಮಾಡೋಣ ಇವತ್ತು ಜೊತೆ ಕಂಪನಿ ಕೊಡು ಅಂತ ಕರೆದಿರುವುದು. ಅಲ್ಲದೇ ಆ ನಾಲ್ವರು ಮಹಿಳೆಯರ ಜೊತೆ ಸ್ವಲ್ಪ ಅಸಭ್ಯವಾಗಿ ಚಾಟಿಂಗ್ ಮಾಡಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ. ಸದ್ಯ ಈ ಕುರಿತಂತೆ ಪೊಲೀಸರು ತಾಂತ್ರಿಕ ಅಂಶಗಳನ್ನು ಇಟ್ಟುಕೊಂಡು ತನಿಖೆ ಮುಂದುವರೆಸಿದ್ದಾರೆ.
ಸದ್ಯ ಒಂದೇ ಕುಟುಂಬದ ಐವರ ಸಾವು ಪ್ರಕರಣ ಟ್ವಿಸ್ಟ್ ಸಿಕ್ಕಿದ್ದು, ಈಗಾಗಲೇ ಕಾನೂನು ಸಲಹೆ ಪಡೆದಿರುವ ಬ್ಯಾಡರಹಳ್ಳಿ ಪೊಲೀಸರು ಶಂಕರ್ ವಿರುದ್ಧ ಮಕ್ಕಳು ತಮ್ಮ ಸಾವಿಗೆ ತಂದೆ ಶಂಕರ್ ನ ನೇರವಾಗಿ ಹೊಣೆ ಮಾಡಿರುವುದು ಹಾಗೂ ಆತ್ಮಹತ್ಯೆ ಪ್ರಚೋದನೆ ಹಿನ್ನೆಲೆ ಐಪಿಸಿ 306 ಅಡಿಯಲ್ಲಿ ಶಂಕರ್ ವಿರುದ್ಧ ಕೇಸ್ ದಾಖಲಿಸುವ ಸಾಧ್ಯತೆ ಇದೆ. ಜೊತೆಗೆ ಶಂಕರ್ ಜೊತೆಗೆ 9 ತಿಂಗಳ ಮಗು ಕೊಂದ ಹಿನ್ನಲೆ ಮೃತ ಸಿಂಧೂರಾಣಿ ಮೇಲೆ ಕೊಲೆ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.
ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರೇಪ್ ಆ್ಯಂಡ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ರೆಹಮಾನ್ ಎಂಬಾತನನ್ನು ಬಂಧಿಸಿದ್ದಾರೆ. ಆದ್ರೆ ಆರೋಪಿ ಸೆಕ್ಸ್ ವೇಳೆ ಆಕೆ ಮೂರ್ಛೆ ಹೋದಳು. ನಾನು ಆಕೆಯನ್ನ ಕೊಲೆ ಮಾಡಿಲ್ಲ ಎಂದು ಪೊಲೀಸರ ಮುಂದೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ.
ಅಸ್ಸಾಂ ಮೂಲದ 21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಅಸ್ಸಾಂ ಮೂಲಕ ವಿದ್ಯಾರ್ಥಿನಿಗೂ ಮತ್ತು ಆರೋಪಿ ರೆಹಮಾನ್ ಗೂ ಸ್ನೇಹವಿತ್ತು. ಹಾಗೆ ಎರಡೂ ಕುಟುಂಬಗಳ ಒಡನಾಟವಿತ್ತು. ಕಳೆದ ಒಂದೂವರೆ ವರ್ಷದಿಂದ ರೆಹಮಾನ್ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದನು. ರೆಹಮಾನ್ ಮೂಲಕವೇ ವಿದ್ಯಾರ್ಥಿನಿ ನರ್ಸಿಂಗ್ ವಿದ್ಯಾಭ್ಯಾಸಕ್ಕಾಗಿ ದೂರದ ಅಸ್ಸಾಂನಿಂದ ಬೆಂಗಳೂರಿಗೆ ಬಂದಿದ್ದಳು.
ರೆಹಮಾನ್ ಜೊತೆ ಸೇರಿ ಕಾಲೇಜು ಅಡ್ಮಿಶನ್ ಮಾಡಿ, ಒಂದು ದಿನ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದಳು. ಬುಧವಾರ ಶಾಪಿಂಗ್ ಗಾಗಿ ರೆಹಮಾನ್ ಕರೆದೊಯ್ಯಲು ಆತ ವಾಸವಿದ್ದ ಕೊಠಡಿಗೆ ಬಂದಿದ್ದಳು. ಈ ವೇಳೆ ವಿದ್ಯಾರ್ಥಿನಿಯನ್ನ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.
ಸೆಕ್ಸ್ ವೇಳೆ ಆಕೆ ಪ್ರಜ್ಞಾಹೀನಳಾದಳು. ಇದರಿಂದ ಭಯವಾಗಿ ಮನೆಯ ಮಾಲೀಕರ ಸಹಾಯ ಪಡೆದು ಆಸ್ಪತ್ರೆಗೆ ದಾಖಲಿಸಿದೆ. ಆದ್ರೆ ವೈದ್ಯರು ಗೆಳತಿ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾಳೆ ಎಂದು ದೃಢಪಡಿಸಿದರು. ಆದ್ರೆ ಆಕೆಯನ್ನ ನಾನು ಕೊಂದಿಲ್ಲ ಎಂದು ಆರೋಪಿ ರೆಹಮಾನ್ ಪೊಲೀಸರ ಮುಂದೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ.
ಬೆಂಗಳೂರು: ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ರೇಪ್ ಅಂಡ್ ಮರ್ಡರ್ ನಡೆದಿದೆ. ಕಾಲೇಜ್ ಅಡ್ಮಿಷನ್‍ಗೆ ಹೊರ ರಾಜ್ಯದಿಂದ ಬಂದಿದ್ದ ವಿದ್ಯಾರ್ಥಿನಿ ಮೇಲೆ ಪರಿಚಯಸ್ಥನೇ ರೇಪ್ ಮಾಡಿ ಕೊಲೆ ಮಾಡಿದ್ದಾನೆ.
ಕಾಲೇಜ್ ಶುಲ್ಕದ ಕೊನೇ ಕಂತು ಕಟ್ಟಬೇಕಿದ್ದ ವಿದ್ಯಾರ್ಥಿನಿ, ಸಹಾಯಕ್ಕಾಗಿ ಅಣ್ಣನಿಗೂ ಪರಿಚಯ ಆಗಿದ್ದ ಪರಿಚಯಸ್ಥನ ಮನೆಗೆ ಬಂದಿದ್ದಾಳೆ. ಈ ವೇಳೆ ದೂರ್ತ ರೇಪ್ ಮಾಡಿ ಕೊಲೆ ಮಾಡಿದ್ದಾನೆ. ಉಸಿರು ನಿಂತೋದ ತಕ್ಷಣ ಬೆದರಿದ ಕಿರಾತಕ. ಮೂರ್ಛೇ ಹೋಗಿದ್ದು, ಉಸಿರಾಡ್ತಿಲ್ಲ ಅಂತ ನೆರೆಮನೆಯವರಿಗೆ ಸಹಾಯಕ್ಕೆ ಕೇಳಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.
ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆಗಿರೋದು ಬೆಳಕಿಗೆ ಬಂದಿದೆ. ಮನೆ ಮಾಲೀಕರ ದೂರಿನ ಮೇರೆಗೆ ಕಿರಾತಕನ್ನು ಬ್ಯಾಡರಳ್ಳಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರು: ಸ್ಕೂಟರ್‍ನಲ್ಲಿ ಬಂದ ಯುವಕನೊಬ್ಬ ಗೆಳೆಯನ ಜೊತೆ ಮಾತಾಡ್ಕೊಂಡು ನಿಂತಿರ್ತಾನೆ. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಟೂಲ್ಸ್ ಓಪನ್ ಮಾಡಿ ಏಕಾಏಕಿ ಇವನಿಗೆ ಹೊಡೆಯುತ್ತಾರೆ. ಇದು ಬೆಂಗಳೂರು ನಗರದ ಹೊರವಲಯದ ಬ್ಯಾಡರಹಳ್ಳಿಯಲ್ಲಿ ನಡೆದ ಘಟನೆ.
ವ್ಯಕ್ತಿಯೊಬ್ಬನನ್ನು ಹಲ್ಲೆ ಮಾಡಲು ನಾಲ್ವರು ದುಷ್ಕರ್ಮಿಗಳು ಬಂದಿರ್ತಾರೆ. ಆದರೆ ಆ ವ್ಯಕ್ತಿಯೇ ಅವರ ಕೈಲಿದ್ದ ಮಚ್ಚು ಕಸಿದುಕೊಂಡು ಅವರ ಮೇಲೆಯೇ ಹಲ್ಲೆ ಮಾಡಲು ಮುಂದಾಗ್ತಾನೆ. ವ್ಯಕ್ತಿ ಮಚ್ಚು ಹಿಡಿದು ಆರ್ಭಟಿಸಿದಾಗ ಕೊಲೆ ಮಾಡಲು ಬಂದಿದ್ದವರೆಲ್ಲಾ ಎದ್ನೋ ಬಿದ್ನೊ ಅಂತಾ ದಿಕ್ಕಾಪಾಲಾಗ್ತಾರೆ.
ಇವರನ್ನೆಲ್ಲಾ ಓಡಿಸ್ಕೊಂಡು ಹೋಗಿ ವಾಪಸ್ ಬರ್ತಿದ್ದಾಗ ಮಾರುದ್ದದ ಮರ ಎತ್ಕೊಂಡ್ ಬಂದು ಇವನನ್ನ ಹೊಡೆಯೋದಕ್ಕೆ ಹೋಗ್ತಾರೆ. ಆದ್ರೂ ಬಗ್ಗದ ಈತ ದೊಣ್ಣೆ ಕಸಿದು ಮತ್ತೆ ಮಚ್ಚು ಹಿಡಿದು ಓಡಿಸ್ಕೊಂಡು ಹೋಗ್ತಾನೆ. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆದರೆ ಇದೂವರೆಗೂ ಈ ಸಂಬಂಧ ದೂರು ದಾಖಲಾಗಿಲ್ಲ. ಪೊಲೀಸ್ರು ಈ ವೀಡಿಯೋ ಇಟ್ಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಬೆಂಗಳೂರು: ಹೆತ್ತ ಮಕ್ಕಳು ಪ್ರತಿಷ್ಠಿತ ಸರ್ಕಾರಿ ಹುದ್ದೆಯಲ್ಲಿದ್ದರೂ ಅವರ ನಿರ್ಲಕ್ಷಕ್ಕೊಳಗಾಗಿ ವೃದ್ಧೆಯೊಬ್ಬರು ಬೀದಿಗೆ ಬಿದ್ದಿರೋ ಮನಕಲುಕುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಜಯಮ್ಮ ಎಂಬವರೇ ಬೀದಿಗೆ ಬಿದ್ದಿರುವ ವೃದ್ಧೆ. ಇಂದು ಬೆಳಿಗ್ಗೆ ಜಯಮ್ಮ ನಂದಿನಿಲೇಔಟ್ ನಿಂದ ಬ್ಯಾಡರಹಳ್ಳಿಗೆ ಬಂದು ಅಂಗಡಿಯೊಂದರ ಮುಂದೆ ಬಿಸಿಲಿನಲ್ಲೇ ಕೂತಿದ್ದರು. ಇದನ್ನ ಗಮನಿಸಿದ ಸ್ಥಳೀಯರು ಜಯಮ್ಮರ ಹಿನ್ನೆಲೆ ವಿಚಾರಿಸಿದ್ರು. ಆಗ ಜಯಮ್ಮ ಮೂಲತಃ ಅರಸಿಕೆರೆಯವರಾಗಿದ್ದು, ಇವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಸೇರಿ ಒಟ್ಟು ನಾಲ್ಕು ಜನ ಮಕ್ಕಳಿರೋ ವಿಷಯ ಗೊತ್ತಾಗಿದೆ.
ವೃದ್ಧೆ ಜಯಮ್ಮ ಅವರ ಓರ್ವ ಗಂಡು ಮಗ ಬಿಇಎಲ್‍ನಲ್ಲಿ ಹಾಗೂ ಮತ್ತೊಬ್ಬ ಮಗ ಹೆಚ್‍ಎಎಲ್ ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಕಿರಿಯ ಮಗಳು ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದಾರೆ. ಗಂಡು ಮಕ್ಕಳ ನಿಲಕ್ಷ್ರ್ಯದಿಂದ ಕಂಗಾಲಾಗಿದ್ದ ಜಯಮ್ಮ ತಮ್ಮ ಹಿರಿಯ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದರು. ಇತ್ತೀಚೆಗೆ ಅವರು ತೀರಿಹೋದ ಬಳಿಕ, ಆಶ್ರಯ ನೀಡುವಂತೆ ತಮ್ಮ ಉಳಿದ ಮಕ್ಕಳ ಬಳಿ ಕೇಳಿಕೊಂಡ್ರೂ ಯಾರೊಬ್ಬರು ಜಯಮ್ಮರನ್ನು ಜೋಪಾನ ಮಾಡುವ ಮನಸ್ಸು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಜಯಮ್ಮ ಕಾಲುನಡಿಗೆಯಲ್ಲೇ ಊರುರು ತಿರುಗುತ್ತಾ ಬೀದಿಯಲ್ಲೇ ಕಾಲಕಳೆಯುತ್ತಿದ್ದಾರೆ.
ಇನ್ನಾದ್ರೂ ಅವರ ಮಕ್ಕಳು ಇಳಿವಯಸ್ಸಿನಲ್ಲಿರುವ ಜಯಮ್ಮರ ಆರೈಕೆ ಮಾಡುವ ಮನಸ್ಸು ಮಾಡಬೇಕಿದೆ.