Tag: by yeddyurappa

  • ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿಎಸ್‍ವೈ ಕಣ್ಣೀರು!

    ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿಎಸ್‍ವೈ ಕಣ್ಣೀರು!

    ಧಾರವಾಡ: ಜಿಲ್ಲೆಯ ಉಪ್ಪಿನಬೆಟಗೇರಿ ನಡೆದ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ.

    ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಬಿಎಸ್‍ವೈ ಅವರು ತನ್ನ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. `ಬಹಳ ಚಿಕ್ಕವಯಸ್ಸಿನಲ್ಲಿದ್ದಾಗಲೇ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ತಾಯಿ ಪ್ರೀತಿ-ವಿಶ್ವಾಸ ನನಗೆ ಗೊತ್ತಿಲ್ಲ. ಆದರೆ ತಾಯಿಯ ಹೃದಯ ಏನು ಅಂತಾ ನನಗೆ ಗೊತ್ತಿದೆ. ನಮ್ಮ ಅಜ್ಜ-ಅಜ್ಜಿಯರು ನೆಮ್ಮದಿಯಿಂದ ಇರಬೇಕು ಅನ್ನೊದು ನಮ್ಮ ಆಸೆ. ಅದಕ್ಕಾಗಿ ತಾಯಂದಿರು, ಹೆಣ್ಣುಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದ್ದೇನೆ ಅಂತ ಕಣ್ಣೀರು ಸುರಿಸಿದ್ರು.

    ಬಡವರ ಮನೆಯಲ್ಲಿ ಮದುವೆಯಾದಾಗ 3ಗ್ರಾಂ ತಾಳಿ ಹಾಗೂ ಬಡವರ ಮದುವೆಗೆ 25ಸಾವಿರ ರೂಪಾಯಿ ಸಹಾಯಧನ ಕೊಡುವ ಯೋಜನೆ ಕೂಡ ಹಾಕಿಕೊಂಡಿದ್ದೇವೆ ಅಂತ ಅವರು ಹೇಳಿದ್ರು.