Tag: by two love

  • ಜಯತೀರ್ಥ ನಿರ್ದೇಶನದ `ಕೈವ’ದಲ್ಲಿ ಧನ್ವೀರ್ ನಟನೆ

    ಜಯತೀರ್ಥ ನಿರ್ದೇಶನದ `ಕೈವ’ದಲ್ಲಿ ಧನ್ವೀರ್ ನಟನೆ

    ಸ್ಯಾಂಡಲ್‌ವುಡ್‌ನಲ್ಲಿ `ಬಜಾರ್’, `ಬೈ ಟು ಲವ್’ ಸಿನಿಮಾಗಳ ಮೂಲಕ ಮೋಡಿ ಮಾಡಿರೋ ನಟ ಧನ್ವೀರ್ ಗೌಡ, ಜಯತೀರ್ಥ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ `ಕೈವ’ ಅನ್ನೋ ಟೈಟಲ್ ಫಿಕ್ಸ್ ಆಗಿದ್ದು, ಈ ಚಿತ್ರದ ಮೂಲಕ ಪವರ್‌ಫುಲ್ ಪಾತ್ರದಲ್ಲಿ ಧನ್ವೀರ್ ಕಾಣಿಸಿಕೊಳ್ಳಲಿದ್ದಾರೆ.

    `ಒಲವೇ ಮಂದಾರ’, `ಬ್ಯೂಟಿಫುಲ್ ಮನಸುಗಳು’, `ಬೆಲ್‌ಬಾಟಂ’ ಚಿತ್ರದ ಮೂಲಕ ಈಗಾಗಲೇ ಪರಿಚಿತರಾಗಿರೋ ಜಯತೀರ್ಥ `ಕೈವ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. 1980ರ ಕಾಲಘಟ್ಟದ ನೈಜ ಕಥೆಯಲ್ಲಿ ಪ್ರಮುಖ ಪಾತ್ರದಲ್ಲಿ ಧನ್ವೀರ್ ನಟಿಸಲಿದ್ದಾರೆ. ಡಿಫರೆಂಟ್ ಟೈಟಲ್ ಜೊತೆ ಭಿನ್ನ ಕಥೆಯೊಂದಿಗೆ ಬರುತ್ತಿದ್ದಾರೆ.

    1980ರ ಕಾಲಘಟ್ಟದ ಕಥೆಯಾಗಿರುವುದರಿಂದ ಕಥೆಗೆ ತಕ್ಕಂತೆ ಕೆಲವು ಸನ್ನೀವೇಷದಲ್ಲಿ ನಟ ಧನ್ವೀರ್ ರೆಟ್ರೋ ಸ್ಟೈಲಿನಲ್ಲಿ ಕಾಣಿಸಿಕೊಳ್ತಿದ್ದಾರೆ. ಮಾಸ್ ಆಕ್ಷನ್ ಕಥೆಯ ಜೊತೆ ರೊಮ್ಯಾಂಟಿಕ್ ಲವ್ ಸ್ಟೋರಿಯಿದೆ. ಒಂದೊಳ್ಳೆ ಪಾತ್ರ ವಿಭಿನ್ನ ಕಥೆಯ ಕಾರಣದಿಂದಾಗಿ ನಿರ್ದೇಶಕರಿಗೆ ನಟ ಧನ್ವೀರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನು ಓದಿ:ಶಾರೂಖ್ ಜೊತೆಗಿನ ಸಿನಿಮಾಗೆ ನಯನ ಶೆಡ್ಯೂಲ್ ಮುಗಿಸಿಯೋದು ಯಾವಾಗ? – ಇಲ್ಲಿದೆ ಅಪ್ಡೇಟ್

    ಧನ್ವೀರ್ `ವಾಮನ’ ಚಿತ್ರದಲ್ಲಿ ನಟಿಸುತ್ತಿದ್ದು, `ಕೈವ’ ಧನ್ವೀರ್ ನಟನೆಯ ನಾಲ್ಕನೇ ಚಿತ್ರವಾಗಿದೆ. ಇದೇ ಮೊದಲ ಬಾರಿಗೆ ಜಯತೀರ್ಥ ಮತ್ತು ಧನ್ವೀರ್ ಕಾಂಬಿನೇಷನ್‌ನ ಚಿತ್ರ ಸೆಟ್ಟೇರಿದ್ದು, ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ.ಇನ್ನು ಶೋಕ್ದಾರ್ ಧನ್ವೀರ್ ನಟನೆಯ ನಯಾ ಅವತಾರ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

  • ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ: ನಟ ಧನ್ವೀರ್

    ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ: ನಟ ಧನ್ವೀರ್

    ಹುಬ್ಬಳ್ಳಿ: ಕೆಲವು ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಟ ಧನ್ವೀರ್ ಆರೋಪಿಸಿದ್ದಾರೆ.

    ಅಭಿಮಾನಿಯ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕೆಲವು ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯಾರು ಮಾಡುತ್ತಿದ್ದಾರೆ ಅಂತ ನನಗೆ ಗೊತ್ತು. ಘಟನೆ ಬಗ್ಗೆ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೇನೆ. ಎಲ್ಲದಕ್ಕೂ ಬೆಂಗಳೂರಿನಲ್ಲಿ ಉತ್ತರ ನೀಡುತ್ತೇನೆ ಅಂತ ಯುವ ನಟ ಧನ್ವೀರ್ ಹೇಳಿಕೆ ನೀಡಿದ್ದಾರೆ.

    Dhanveer

    ನಾನು ಸದ್ಯ ಬೈಟು ಲವ್ ಚಿತ್ರದ ಪ್ರಚಾರದಲ್ಲಿದ್ದೇನೆ. ಇದರ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಹಲ್ಲೆಯ ಘಟನೆ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಎಲ್ಲಾ ಪ್ರಶ್ನೆಗೆ ಉತ್ತರ ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ

    ಇತ್ತೀಚೆಗಷ್ಟೇ ಧನ್ವೀರ್ ಮತ್ತು ಅವರ ಬೌನ್ಸರ್ ಸೇರಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಭಿಮಾನಿಯೊಬ್ಬರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಸ್ಟಾರ್ ಸುವರ್ಣದಲ್ಲಿ ‘ಜೇನುಗೂಡು’ ಪ್ರೇಮಕಾವ್ಯ ಫೆ.21ರಂದು ತೆರೆಗೆ

    ಗುರುವಾರ (ಫೆ.17) ತಡರಾತ್ರಿ ಬೆಂಗಳೂರಿನ ಎಸ್.ಸಿ ರಸ್ತೆಯ ಅನುಪಮಾ ಚಿತ್ರಮಂದಿರದ ಬಳಿ ಧನ್ವೀರ್ ಮತ್ತು ಅವರ ಅಂಗರಕ್ಷರಿದ್ದರು. ತಡರಾತ್ರಿ ಊಟ ಮುಗಿಸಿಕೊಂಡು ಅದೇ ರಸ್ತೆಯಲ್ಲೇ ಹೊರಟಿದ್ದ ಚಂದ್ರಶೇಖರ್, ನೆಚ್ಚಿನ ನಟನನ್ನು ಕಂಡು ಒಂದು ಫೋಟೋ ಕೇಳಿದ್ದಾರೆ. ಸೆಲ್ಫಿ ಕೊಡಲು ಧನ್ವೀರ್ ನಿರಾಕರಿಸಿದರು ಎನ್ನಲಾಗಿದೆ. ಹಾಗಾಗಿ ಕೋಪಗೊಂಡ ಅಭಿಮಾನಿ ಮತ್ತೆ ಮತ್ತೆ ಫೋಟೋಗಾಗಿ ಪೀಡಿಸಿದ್ದಾನೆ. ಯಾವುದೇ ಕಾರಣಕ್ಕೂ ಅಭಿಮಾನಿಯ ಬೇಡಿಕೆಗೆ ಸ್ಪಂದಿಸದೇ ಇರುವ ಕಾರಣಕ್ಕಾಗಿ ಅಭಿಮಾನಿ ಮತ್ತು ಧನ್ವೀರ್ ಅವರ ಅಂಗರಕ್ಷಕರ ನಡುವೆ ಮಾತಿನ ಸಮರವೇ ನಡೆದು, ಆನಂತರ ಅಭಿಮಾನಿ ಮೇಲೆ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

  • ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ

    ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ

    ಇಂದು ತೆರೆ ಕಂಡ ‘ಬೈ ಟು ಲವ್’ ಚಿತ್ರದ ಹೀರೋ ಧನ್ವೀರ್ ಮತ್ತು ಅವರ ಬೌನ್ಸರ್ ಸೇರಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಭಿಮಾನಿಯೊಬ್ಬ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಇದನ್ನೂ ಓದಿ : ಅಪ್ಪು ಹುಟ್ಟುಹಬ್ಬಕ್ಕೆ ಬಿರಿಯಾನಿ ಊಟ, ಹೆಲಿಕಾಪ್ಟರ್ ನಿಂದ ಹೂಮಳೆ : ಇನ್ನೇನಿದೆ ವಿಶೇಷ?


    ಗುರುವಾರ (ಫೆ.17) ತಡರಾತ್ರಿ ಬೆಂಗಳೂರಿನ ಎಸ್.ಸಿ ರಸ್ತೆಯ ಅನುಪಮಾ ಚಿತ್ರಮಂದಿರದ ಬಳಿ ಧನ್ವೀರ್ ಮತ್ತು ಅವರ ಅಂಗರಕ್ಷರಿದ್ದರು. ತಡರಾತ್ರಿ ಊಟ ಮುಗಿಸಿಕೊಂಡು ಅದೇ ರಸ್ತೆಯಲ್ಲೇ ಹೊರಟಿದ್ದ ಚಂದ್ರಶೇಖರ್, ನೆಚ್ಚಿನ ನಟನನ್ನು ಕಂಡು ಒಂದು ಫೋಟೋ ಕೇಳಿದ್ದಾರೆ. ಸೆಲ್ಫಿ ಕೊಡಲು ಧನ್ವೀರ್ ನಿರಾಕರಿಸಿದರು ಎನ್ನಲಾಗಿದೆ. ಹಾಗಾಗಿ ಕೋಪಗೊಂಡ ಅಭಿಮಾನಿ ಮತ್ತೆ ಮತ್ತೆ ಫೋಟೋಗಾಗಿ ಪೀಡಿಸಿದ್ದಾನೆ. ಯಾವುದೇ ಕಾರಣಕ್ಕೂ ಅಭಿಮಾನಿಯ ಬೇಡಿಕೆಗೆ ಸ್ಪಂದಿಸದೇ ಇರುವ ಕಾರಣಕ್ಕಾಗಿ ಅಭಿಮಾನಿ ಮತ್ತು ಧನ್ವೀರ್ ಅವರ ಅಂಗರಕ್ಷಕರ ನಡುವೆ ಮಾತಿನ ಸಮರವೇ ನಡೆದು, ಆನಂತರ ಅಭಿಮಾನಿ ಮೇಲೆ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ದಾಖಲಾಗಿದೆ. ಇದನ್ನೂ ಓದಿ : ವೈರಲ್ ಆಯ್ತು ಕಿಚ್ಚನ ಮನೆಯ ಸ್ಕೂಟಿ ಟೇಬಲ್


    ಈ ಕುರಿತು ಧನ್ವೀರ್ ಈವರೆಗೂ ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ. ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದ್ದರಿಂದ, ಧನ್ವೀರ್ ಪೊಲೀಸ್ ಠಾಣೆಗೆ ಬರುವ ಅನಿವಾರ್ಯತೆ ಎದುರಾಗಿದೆ.