ಮತ ಎಣಿಕೆ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದೇವೆ. ಮೊದಲ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದೇನೆ. ಕಳೆದ ಬಾರಿ ನಾನು ಕಳೆದುಕೊಂಡಿದ್ದೆ. ಈ ಬಾರಿ ಪಡೆದುಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಮೊಸಳೆ ಕಣ್ಣೀರು ಸುರಿಸುವ ಕಾಲ ಹೋಯ್ತು. ಜನರಿಗೆ ಕೊಟ್ಟ ಭರವಸೆ ಯಾರು ಈಡೇರಿಸುತ್ತಾರೆ. ನಾವೀಗ ಭರವಸೆ ಕಾಲದಲ್ಲಿದ್ದೇವೆ. ಕಳೆದ ಬಾರಿ ಕಳೆದುಕೊಂಡಿರುವ ಅನುಕಂಪ ನನ್ನ ಮೇಲಿದೆ. ಜನರ ಒಲವು ನನ್ನ ಕಡೆ ಇದೆ. ಕಾಂಗ್ರೆಸ್‍ಗೆ ಅನುಕಂಪ ಇಲ್ಲ. 25 ಸಾವಿರ ಮತಗಳ ಅಂತರದಿಂದ ಗೆಲುವಿನ ವಿಶ್ವಾಸ ನನಗಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿಎಸ್‍ವೈ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಧನೆ ಗೆಲುವಿಗೆ ಕಾರಣ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ ಎಂಬ ಕಾಂಗ್ರೆಸ್ ಆರೋಪ ಮಾಡಿದೆ. ನಾವು ಪ್ರತ್ಯಾರೋಪ ಮಾಡಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ವತಃ ಹಣ ಹಂಚಿದ್ದು ನೀವು ನೋಡಿದ್ದೀರಿ. ನಾನು ಗ್ರಾಮ ಪಂಚಾಯಿತಿಯಿಂದ ವಿಧಾನಸಭೆಯವರೆಗೆ ಹೋಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ – ಕಾಂಗ್ರೆಸ್ ಮುನ್ನಡೆ
ಇದೀಗ ಮತ ಎಣಿಕೆ ಬಳಿ ಬಿಜೆಪಿ ಕಾರ್ಯಕರ್ತರು ಜೈಕಾರ ಹಾಕಿದ್ದರಿಂದ ಪೊಲೀಸರು ಕಾರ್ಯಕರ್ತರನ್ನು ಹೊರ ಕಳುಹಿಸಿ, ಮತ ಎಣಿಕೆ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ವಿಜಯಪುರ: ರಾಜ್ಯದಲ್ಲಿ ನಡೆದ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ವಿಜಯಪುರ ನಗರದ ಸೈನಿಕ ಶಾಲೆ ಯಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಇಂದಿನಿಂದಲೇ ಸಕಲ ವ್ಯವಸ್ಥೆ ಮಾಡಿಕೊಂಡಿದೆ.
ಸೈನಿಕ್ ಶಾಲೆಯ ಒಡೆಯರ ಸದನದಲ್ಲಿ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್, ಎಸ್‍ಪಿ ಆನಂದ್‍ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಎರಡು ಪ್ರತ್ಯೇಕ ಕೋಣೆಗಳಲ್ಲಿ ಮತಎಣಿಕೆ ಕಾರ್ಯ ನಡೆಯಲಿದ್ದು, 16 ಟೇಬಲ್‍ನಲ್ಲಿ 22 ಸುತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಕೇಂದ್ರದ ಸುತ್ತ 100 ಮೀ. ಅಂತರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶಾಂತಿಯುತವಾಗಿ ನಡೆಯಿತು ಉಪಚುನಾವಣೆ – ನ.2ಕ್ಕೆ ಫಲಿತಾಂಶ
ಅಕ್ಟೋಬರ್ 30 ರಂದು ಎರಡು ಕ್ಷೇತ್ರದಲ್ಲಿ ಉಪಚುನಾವಣೆ ಶಾಂತಿಯುತವಾಗಿ ನಡೆದಿತ್ತು. ಹಾನಗಲ್‍ನಲ್ಲಿ ಶೇಕಡಾ 80 ರಷ್ಟು ಮತ್ತು ಸಿಂದಗಿಯಲ್ಲಿ ಶೇಕಡಾ 70 ರಷ್ಟು ಮತದಾನವಾಗಿತ್ತು. ಇದೀಗ ನಾಳೆ ಫಲಿತಾಂಶ ಹೊರಬೀಳಲಿದ್ದು, ಎಲ್ಲರ ಚಿತ್ತ ಉಪಚುನಾವಣೆಯ ಫಲಿತಾಂಶದತ್ತ ನೆಟ್ಟಿದೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು
ಬೆಂಗಳೂರು: ಪ್ರತಿಷ್ಠೆಯ ಕಣವಾಗಿದ್ದ ಹಾನಗಲ್ ಮತ್ತು ಸಿಂದಗಿ ಬೈ ಎಲೆಕ್ಷನ್ ಇಂದು ಯಶಸ್ವಿಯಾಗಿ ಮುಗಿದಿದೆ. ಸಣ್ಣಪುಟ್ಟ ಘಟನೆ ಹೊರತುಪಡಿಸಿ ಉಪಚುನಾವಣೆ ಶಾಂತಿಯುತವಾಗಿ ನಡೆದಿದೆ.
ಹಾನಗಲ್‍ನಲ್ಲಿ ಶೇಕಡಾ 80 ರಷ್ಟು ಮತ್ತು ಸಿಂದಗಿಯಲ್ಲಿ ಶೇಕಡಾ 70 ರಷ್ಟು ಮತದಾನವಾಗಿದೆ. ಹಾನಗಲ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ, ಜೆಡಿಎಸ್ ಅಭ್ಯರ್ಥಿ ರಿಯಾಜ್ ಶೇಖ್ ಮತ್ತು ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಕುಟುಂಬ ಸಮೇತ ತಮ್ಮ ಹಕ್ಕು ಚಲಾಯಿಸಿದರು. ಇದನ್ನೂ ಓದಿ: ಒಟ್ಟು 347 ಕೊರೊನಾ ಪ್ರಕರಣ – 10 ಮಂದಿ ಸಾವು
ದೇವಣಗಾಂವದಲ್ಲಿ ಸಿಂದಗಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ, ಮಲಘಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೊಕ್ ಮನಗೂಳಿ ವೋಟ್ ಹಾಕಿದರು. ಸಿಂದಗಿಯ ಬೊರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೋಟೋ ಚಿನ್ಹೆ ಇರುವ ಮತ ಸಂಖ್ಯೆ ಚೀಟಿ ನೀಡಿದ ಆರೋಪ ಮೇಲೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 2 ಕ್ಷೇತ್ರಗಳ ಉಪಚುನಾವಣೆ ರಾಜ್ಯದಲ್ಲಿ ಪಕ್ಷಗಳ ನಾಯಕರ ವಾಕ್ಸಮರಕ್ಕೆ ವೇದಿಕೆಯಾಗಿತ್ತು. ಇಂದು ಅಂತಿಮವಾಗಿ ಮತದಾನದ ಮೂಲಕ ತೆರೆಬಿದ್ದಿದ್ದು, ನವೆಂಬರ್ 2ಕ್ಕೆ ಫಲಿತಾಂಶ ಬರಲಿದೆ. ಇದನ್ನೂ ಓದಿ: ಪುನೀತ್ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಅಭಿಮಾನಿ ಸಾವು
ಬೆಂಗಳೂರು: ಹಾವೇರಿಯ ಹಾನಗಲ್, ವಿಜಯಪುರದ ಸಿಂದಗಿ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ನಾಳೆವರೆಗೆ ಮನೆ ಮನೆ ಪ್ರಚಾರ ಆಗಲಿದೆ. ಈ ಹೊತ್ತಲ್ಲೇ, ಕುರುಡು ಕಾಂಚಾಣದ ಸದ್ದು ಜೋರಾಗ್ತಿದೆ.
ಸಿಂದಗಿಯ ಡಂಬಳದಲ್ಲಿ 1 ವೋಟಿಗೆ 1,000 ರೂಪಾಯಿ ಹಂಚುತ್ತಿರುವ ದೃಶ್ಯ ವೈರಲ್ ಅಗಿದೆ. ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿಯವರು 30-40 ಲಕ್ಷ ಹಂಚಿಕೆ ಮಾಡ್ತಿದ್ದು, 1 ಬೂತ್‍ಗೆ 5 ಲಕ್ಷ ಕೊಡ್ತಿದ್ದಾರೆ. ಹಳ್ಳಿ-ಹಳ್ಳಿಯಲ್ಲೂ ಹಣ ವಿತರಿಸ್ತಿದ್ದಾರೆ ಅಂತ ದೂರಿದ್ದಾರೆ. ಡಿಕೆ ಶಿವಕುಮಾರ್ ಮಾಧ್ಯಮಗಳ ಮುಂದೆ ಬಿಜೆಪಿ ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿರುವ ವಿಡಿಯೋ ದೃಶ್ಯವನ್ನು ತೋರಿಸಿದ್ದಾರೆ.
ಮತ್ತೊಂದು ಕಡೆ, ಅಬ್ಬರದ ಪ್ರಚಾರ ಮುಗಿಸಿರುವ ಅಗ್ರನಾಯಕರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯ ನಿವಾಸದಲ್ಲಿ ರಿಲ್ಯಾಕ್ಸ್ ಆಗಿದ್ದು, 2 ಕ್ಷೇತ್ರದಲ್ಲೂ ನಾವೇ ಗೆಲ್ಲೋದು ಅಂದಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ, ಧಾರವಾಡದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ ಮಗನ ಮದುವೆಯಲ್ಲಿ ಭಾಗಿಯಾಗಿದ್ದರು. ಬಳಿಕ ಮಾತನಾಡಿ, ಎರಡೂ ಕಡೆ ನಾವು ಗೆಲ್ಲುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು. ಬೊಮ್ಮಾಯಿ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ರಸ್ತೆ ಮಾಡಿದ್ದು ತೋರಿಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಗಾಳಿಯಲ್ಲಿ ಮಾತನಾಡುವುದನ್ನು ನಿಲ್ಲಿಸಿ ರೈತರ ಮಧ್ಯೆ ಬನ್ನಿ ಸುಧಾಕರ್ಗೆ ರಮೇಶ್ ಕುಮಾರ್ ಟಾಂಗ್
ಯಾದಗಿರಿ: ಎಲ್ಲಾ ರಾಜಕೀಯ ನಾಯಕರು ಪ್ರಚಾರದ ಬರದಲ್ಲಿ ಮಾಡುತ್ತಿರುವ ಪದ ಬಳಕೆ ಯಾವುದಕ್ಕೂ ಪ್ರಯೋಜನ ಇಲ್ಲ. ಎಲ್ಲಾ ರಾಜಕೀಯ ಮುಖಂಡರು ವಿಷಯವನ್ನು ಆಧರಿಸಿ ಟೀಕೆ ಟಿಪ್ಪಣಿ ಮಾಡಿದ್ರೆ ಜನರು ಬೆಲೆ ಕೊಡುತ್ತಾರೆ ಎಂದು ಉಪಚುನಾವಣೆ ವೇಳೆ ರಾಜಕೀಯ ನಾಯಕರ ಕೆಸರೆರಚಾಟ ನಡೆಸುತ್ತಿದ್ದಾರೆ ಈ ಮೂಲಕ ಜಯಗಳಿಸುತ್ತೇವೆ ಎಂಬುದು ಭ್ರಮೆ ಎಂದು ರಂಭಾಪುರಿ ಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಅವರು, ಯಾವ ಪ್ರಣಾಳಿಕೆಯು ಇಲ್ಲದೆ, ವಿಷಯವೂ ಇಲ್ಲದೆ ಧರ್ಮದ ಲಾಂಚಣ ಹಿಡಿಯಲಾಗುತ್ತಿದೆ, ಧರ್ಮದ ಆಚರಣೆ ಇಟ್ಟುಕೊಂಡು ಲಂಗು ಲಗಾಮು ಇಲ್ಲದೆ ಮಾತನಾಡುವದು ನೋಡುಗರಿಗೆ ಮುಜುಗರ ಉಂಟು ಮಾಡಿದೆ, ಇಂತಹ ಮಾತುಗಳಿಂದ ಗೆಲ್ಲುತ್ತೇವೆ ಎಂಬುದು ಭ್ರಮೆ ಇದು ಸಂಪೂರ್ಣ ಸುಳ್ಳು ಇದನ್ನು ಮೊದಲು ಅರ್ಥ ಮಾಡಿಕೊಳ್ಳಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಹಿರಂಗ ಪ್ರಚಾರ ಅಂತ್ಯ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಮನೆ-ಮನೆ ಕ್ಯಾಂಪೇನ್
ಯಾವುದೆ ರಾಜಕಾರಣಿ ಇರಲಿ, ಧರ್ಮದ ವ್ಯಕ್ತಿ ಇರಲಿ ಭಾರತೀಯ ಸಂಸ್ಕೃತಿಯನ್ನು ಸಮಾನವಾಗಿ ಕಾಣುವ ಭಾವನೆ ಇರಬೇಕು, ವ್ಯಕ್ತಿಯನ್ನು ಕುರಿತು ಟೀಕೆ ಟಿಪ್ಪಣಿ ಮಾಡಬಾರದು, ಅವರು ಆಡುವಂತಹ ಮಾತಿನಲ್ಲಿ ಸುಧಾರಣೆ ಆದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಅದಕ್ಕೆ ತಕ್ಕ ಪ್ರಾಯಶ್ಚಿತ್ತ ಆಗುತ್ತದೆ ಎಂದರು. ಇದನ್ನೂ ಓದಿ: ಹಾನಗಲ್‍ನಲ್ಲಿ ಹರೀತಿದ್ಯಾ ಹಣದ ಹೊಳೆ..? – ಸಿದ್ದರಾಮಯ್ಯ, ಡಿಕೆಶಿ ಬಳಿಕ ಹೆಚ್‍ಡಿಕೆ ಆರೋಪ
ಹಾವೇರಿ: ರಾಜ್ಯದ ಎರಡು ಕ್ಷೇತ್ರಗಳಾದ ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ನಿನ್ನೆ ಹಾನಗಲ್ ಮತ್ತು ಸಿಂದಗಿ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ಸಂಜೆ ಮುಕ್ತಾಯವಾಗಿದೆ. ಇಂದು ಹಾವೇರಿ ಜಿಲ್ಲೆ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕರ್ಯಕರ್ತರು ಮನೆ ಮನೆ ತೆರಳಿ ಪ್ರಚಾರ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಕ್ಷೇತ್ರ ವ್ಯಾಪ್ತಿಯ ಶೀಗಿಹಳ್ಳಿ, ಸಿಂಗಾಪುರ, ಜಕ್ಕನಾಯಕನಕೊಪ್ಪ ಗ್ರಾಮಗಳಲ್ಲಿ ಮನೆ ಮನೆ ತೆರಳಿ ಪ್ರಚಾರ ನಡೆಸಿದರು. ಮನೆ ಮನೆ ಪ್ರಚಾರದ ಜೊತೆಗೆ ಪಕ್ಷದ ಮುಖಂಡರ ಮನೆ, ಗ್ರಾಮದಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡಿದರು. ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಪ್ರಚಾರ ಮುಂದುವರಿಸಿದರು. ಇದನ್ನೂ ಓದಿ: ಹಾನಗಲ್‍ನಲ್ಲಿ ಹರೀತಿದ್ಯಾ ಹಣದ ಹೊಳೆ..? – ಸಿದ್ದರಾಮಯ್ಯ, ಡಿಕೆಶಿ ಬಳಿಕ ಹೆಚ್‍ಡಿಕೆ ಆರೋಪ
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಕೂಡ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಹಾನಗಲ್ ಕ್ಷೇತ್ರ ವ್ಯಾಪ್ತಿಯ ಆಡೂರು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ನಿನ್ನೆ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದರಿಂದ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಯ ಕಾರ್ಯಕರ್ತರು ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಪ್ರಚಾರದ ಜೊತೆಗೆ ಮುಖಂಡರ ಮನೆಗೆ ಭೇಟಿ ನೀಡಿ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ. ಮತದಾನಕ್ಕೆ ಒಂದು ದಿನ ಬಾಕಿ ಉಳಿದಿದ್ದು, ಮತಗಳ ಲೆಕ್ಕಾಚಾರದ ಮೇಲೆ ರಣತಂತ್ರವನ್ನು ಅಭ್ಯರ್ಥಿಗಳು ರೂಪಿಸುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನಲ್ಲಿ ಯಂಕ, ನಾಣಿ, ಸೀನ ಅನ್ನೋ ಎಂಪಿಗಳಿದ್ದಾರೆ ಅಷ್ಟೇ: ಬಿಎಸ್‍ವೈ
ಹುಬ್ಬಳ್ಳಿ: ಬಿಟ್ ಕಾಯಿನ್ ದಂಧೆಯಲ್ಲಿ ಪ್ರಭಾಗಳು ಇದ್ದಾರೆ. ಅದರ ಬಗ್ಗೆ ನಮಗೆ ಮಾಹಿತಿ ಇದೆ. ಆದರೆ ಕೇಂದ್ರ ತನಿಖಾ ಸಂಸ್ಥೆಯವರು ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಖಾಸಗಿ ಸಮಾರಂಭದಲ್ಲಿ ಭಾಗಿಯಾಗಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಬಿಟ್ ಕಾಯಿನ್ ದಂಧೆಯಲ್ಲಿ ಯಾರಿಗೂ ರಕ್ಷಣೆ ಕೊಡಬಾರದು. ಪ್ರಕರಣವನ್ನು ಮುಚ್ಚಿ ಹಾಕಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅದೂ ಯಾರೇ ಇದ್ದರೂ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ಹಸುಗಳ ಮೇಲೆ ಪ್ರೀತಿ ಇದ್ದರೆ ಗೋಮಾಂಸ ರಫ್ತು ನಿಲ್ಲಿಸಲಿ: ಎಚ್.ಸಿ.ಮಹದೇವಪ್ಪ
ಬಿಟ್ ಕಾಯಿನ್ ದಂಧೆಯ ಬಗ್ಗೆ ಐಟಿ ಹಾಗೂ ಸಿಬಿಐಗೆ ರೆಫರ್ ಮಾಡಿದ್ದೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ, ಇಷ್ಟು ದಿನ ಅವರು ಏನೂ ಮಾಡ್ತಿದ್ರು, ಮತ್ಯಾಕೆ ಮುಚ್ಚಿಟ್ಟರು. ಈಡಿಗೆ ಪ್ರಕರಣ ವರ್ಗಾಯಿಸಿದ್ದಾರೆ ಅಂದರೆ ಎನೂ ಆಗಿರಬೇಕಲ್ವಾ, ಇಲ್ಲಿಯವರೆಗೂ ಯಾಕೆ ರಕ್ಷಣೆ ನೀಡಿದರೂ. ಆ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಉಪಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ನಾವೂ ಗೆಲುವು ಸಾಧಿಸುತ್ತೇವೆ. ಹಾನಗಲ್ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಗೆಲವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ
ಬುಧವಾರ ಹಾನಗಲ್ ಪ್ರಚಾರದ ವೇಳೆ ಬಸವರಾಜ ಬೊಮ್ಮಾಯಿ ಅವರು ಹಾಕಿದ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ಆ ಯಪ್ಪನಿಗೆ ಬಾ ಅಂತ ಹೇಳಿದ್ದೇನೆ. ನಾನು ಹೇಳಿ ಎಷ್ಟು ದಿನಾ ಆಯ್ತು. ಅವರ ಕ್ಷೇತ್ರ ಏನು ನೋಡೋದು. ಇವರು ಅಧಿಕಾರಕ್ಕೆ ಬಂದ ಮೇಲೆ ಒಂದೂ ರಸ್ತೆಯಾದರೂ ಹೊಸದಾಗಿ ಮಾಡಿದ್ದಾರಾ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಬಲಿಪಾಡ್ಯಮಿ ದಿನ ದೇವಾಲಯಗಳಲ್ಲಿ ಗೋಪೂಜೆ ಕಡ್ಡಾಯ: ಧಾರ್ಮಿಕ ದತ್ತಿ ಇಲಾಖೆ
ಧಾರವಾಡದಲ್ಲಿ ಡಿಕೆ ಶಿವಕುಮಾರ ಆಪ್ತ ಯುಬಿ ಶೆಟ್ಟಿ ಸಹೋದರರ ಮೇಲೆ ಐಟಿ ದಾಳಿ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಸಿದ್ದರಾಮಯ್ಯ ಅವರು, ನನಗೆ ಗೊತ್ತಿಲ್ಲಪ್ಪ ಅಂತ ಹೇಳಿ ಪ್ರತಿಕ್ರಿಯೆ ನೀಡದೇ ತೆರಳಿದರು.
ಬೆಂಗಳೂರು: ಇಂದು ಸಂಜೆ ಸಿಂದಗಿ ಹಾಗೂ ಹಾನಗಲ್ ಉಪಚುನಾವಣಾ ಕದನದ ಪ್ರಚಾರಕ್ಕೆ ಅಂತಿಮ ತೆರೆ ಬೀಳಲಿದೆ. ಜೊತೆಗೆ ಸಂಜೆ ರಾಜಕೀಯ ನಾಯಕರ ಮಧ್ಯೆ ಕೊನೆಯ ಮಾತಿನ ಸಮರ ನಡೆಯಲಿದೆ.
ಮಂಗಳವಾರ ಸಿಎಂ ಕಂಬಳಿ ಹಾಕಿದ್ದನ್ನು ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಇಡೀ ಬಿಜೆಪಿ ನಾಯಕರೇ ತಿರುಗಿ ಬಿದ್ದಿದ್ರು. ಅವನು ಕುರುಬರಲ್ಲಿ ಹುಟ್ಟಿದ್ದನಾ ಎಂಬುದನ್ನೇ ಆಯುಧ ಮಾಡಿಕೊಂಡ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೈನಾರಿಟಿ ವೋಟಿಗಾಗಿ ಜೊಲ್ಲು ಸುರಿಸುತ್ತಾರೆ – ಅರಗ ಜ್ಞಾನೇಂದ್ರ
ಸಿ.ಟಿ ರವಿ, ಎಚ್.ವಿಶ್ವನಾಥ್, ಸೋಮಣ್ಣ ತಿರುಗೇಟು ಕೊಟ್ಟಿದ್ದಾರೆ. ಅಲ್ಲದೇ ನನ್ನದು ಒಂದು ಇರಲಿ ಎಂದು ಕುಮಾರಸ್ವಾಮಿಯೂ ಸಿದ್ದುಗೆ ಟಾಂಗ್ ಕೊಟ್ಟಿದ್ದಾರೆ. ಬನ್ನಿ ನಿಮಗೆ ಕಂಬಲಿ ಹೆಣೆಯಲು ಬರುತ್ತಾ ಅಂತ ನೋಡೇ ಬಿಡೋಣ ಎಂದು ಆಹ್ವಾನಿಸಿದ್ದಾರೆ. ಜೊತೆಗೆ ಸಿಂದಗಿಯಲ್ಲಿ ಗೋವಿಂದ ಕಾರಜೋಳ ಕೂಡ ಭಾಗ್ಯಗಳ ಹೆಸರಿನಲ್ಲಿ ಸಿದ್ದರಾಮಯ್ಯಗೆ ತಿವಿದಿದ್ದಾರೆ.
ಬೆಂಗಳೂರು: ಪಕ್ಷದಲ್ಲಿದ್ದುಕೊಂಡೇ ಪಕ್ಷದ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡು ಪಕ್ಷಕ್ಕೆ ಭವಿಷ್ಯದಲ್ಲಿ ಹಾನಿಯಾಗುವಂತಹ ಚಟುವಟಿಕೆಗಳು ತಮ್ಮಿಂದ ನಡೆದರೆ ಅದು ಹೆತ್ತ ತಾಯಿಗೆ ದ್ರೋಹ ಮಾಡಿದಷ್ಟೇ ಸಮ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯರ ಸಭೆ ನಡೆಸಿದರು. ಈ ಹಿಂದೆ ಪಕ್ಷದಿಂದ ಅಧ್ಯಕ್ಷರಾಗಿದ್ದ ಹೆಳವರಹುಂಡಿ ಸೋಮ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಹಾಗೂ ಗುಂಪುಗಾರಿಕೆ ಕಾರಣದಿಂದಾಗಿ ಶ್ರೀ ಸಿದ್ದರಾಮಯ್ಯನವರು ಸೋಮು ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರು. ಇದರಿಂದ ತೆರವಾಗಿರುವ ಅಧ್ಯಕ್ಷರ ಹುದ್ದೆಗೆ ಇದೇ ತಿಂಗಳು 29 ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಟಿ ನರಸೀಪುರ ಕಾಂಗ್ರೆಸ್ ಪುರಸಭಾ ಸದಸ್ಯರ ಹೊಂದಾಣಿಕೆ ಸಮಸ್ಯೆಯ ಕಾರಣದಿಂದಾಗಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಪಕ್ಷದ ಬಿ. ಫಾರಂನಲ್ಲಿ ಗೆದ್ದಿರುವ ತಾವು ಪಕ್ಷದಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರೆ ಈಗಲೇ ಪಕ್ಷದಿಂದ ಹೊರ ಹೋಗಿ ತಮ್ಮ ರಾಜಕೀಯ ಜೀವನವನ್ನು ಕಟ್ಟಿಕೊಳ್ಳಿ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಪಕ್ಷದಲ್ಲಿದ್ದುಕೊಂಡೇ ಪಕ್ಷದ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡು ಪಕ್ಷಕ್ಕೆ ಭವಿಷ್ಯದಲ್ಲಿ ಹಾನಿಯಾಗುವಂತಹ ಚಟುವಟಿಕೆಗಳು ತಮ್ಮಿಂದ ನಡೆದರೆ ಅದು ಹೆತ್ತ ತಾಯಿಗೆ ದ್ರೋಹ ಮಾಡಿದಷ್ಟೇ ಸಮ ಎಂಬುದು ಸಾಬೀತಾಗುತ್ತದೆ ಎಂದು ಆಕ್ರೋಶಭರಿತರಾಗಿ ಮಾತನಾಡಿದ್ದಾರೆ ಎಂಬುದು ತಿಳಿದುಬಂದಿದೆ. ಹಾಗೆಯೇ ಈ ಹಿಂದೆ ಕೆಲವು ಕಾಂಗ್ರೆಸ್ ಪುರಸಭಾ ಸದಸ್ಯರು ನಡೆದುಕೊಂಡ ರೀತಿಯ ಬಗ್ಗೆ ತಿಳುವಳಿಕೆ ನೀಡಿದ್ದಾರೆ. ಹಾಗೆ ಎಲ್ಲರೂ ಒಟ್ಟಿಗೆ ಪಕ್ಷ ಕಟ್ಟುವ ವಿಚಾರದಲ್ಲಿ ಪರಸ್ಪರ ವಿಶ್ವಾಸ ಹಾಗೂ ನಂಬಿಕೆಯಿಂದ ನಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್
ಅಂದು ನಡೆದ ಸಭೆಯಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ ಬಿಜೆ ವಿಜಯ್ ಕುಮಾರ್ ಅವರಿಗೆ ಸ್ಥಳದಲ್ಲಿಯೇ ಪ್ರತಿಯೊಬ್ಬರಿಗೂ ವಿಪ್ ಜಾರಿ ಮಾಡುವಂತೆ ಆದೇಶ ಮಾಡಿ, ಉಲ್ಲಂಘನೆ ಮಾಡಿದವರಿಗೆ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಹಾಗೂ ಪುರಸಭಾ ಸದಸ್ಯತ್ವದ ಅನರ್ಹಗೊಳಿಸಲು ಕೂಡಲೇ ಕಾನೂನು ಹೋರಾಟಕ್ಕೆ ಗಂಭೀರವಾಗಿ ಪರಿಗಣಿಸಲು ಇದರಲ್ಲಿ ಯಾವುದೇ ಮುಲಾಜಿಗೆ ಒಳಗಾಗದಂತೆ ಜಿಲ್ಲಾ ಅಧ್ಯಕ್ಷರಿಗೆ ಖಡಕ್ ಆದೇಶ ನೀಡಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.
ಪುರಸಭಾ ಸದಸ್ಯರ ಪ್ರತಿಯೊಬ್ಬರ ಅಭಿಪ್ರಾಯ ಕೇಳಲಾಗಿದ್ದು. ಅದರಲ್ಲಿ ಪ್ರತಿಯೊಬ್ಬರೂ ಸಿದ್ದರಾಮಯ್ಯನವರ ಅಂತಿಮ ಆದೇಶವನ್ನು ನಾವುಗಳು ಪಾಲಿಸುತ್ತೇವೆ. ಯಾವುದೇ ಬದಲಾವಣೆ ಇರುವುದಿಲ್ಲ ನಮಗೆ ತಾವೇ ನಾಯಕರು ಎಂದು ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ.
ಅಕ್ಟೋಬರ್ 28 ರಂದು ಅಧ್ಯಕ್ಷರ ಹೆಸರನ್ನು ಸೂಚಿಸಲು ಅಲ್ಲಿಯ ತನಕ ಯಾವುದೇ ಭಿನ್ನಮತ ಅಥವಾ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಜೊತೆಗೂಡಿ ಸಭೆ ಮಾಡುವುದನ್ನು ಮಾಡುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತಲಕಾಡು ಮಂಜುನಾಥ್, ರಮೇಶ್ ಮುದ್ದೆಗೌಡ, ಪುರಸಭಾ ಸದಸ್ಯರಾದ ಸೋಮು, ಶ್ರೀಮತಿ ಪ್ರೇಮ ಮರಯ್ಯ, ನಂಜುಂಡಸ್ವಾಮಿ, ಬಾದಾಮಿ ಮಂಜು, ಹೇಮಂತ್, ಶ್ರೀಮತಿ ಬೇಬಿ ಹೇಮಂತ್, ಶ್ರೀಮತಿ ನಾಗರತ್ನ ಮಾದೇಶ್, ಶ್ರೀಮತಿ ರಾಜೇಶ್ವರಿ ರಾಘವೇಂದ್ರ, ಶ್ರೀಮತಿ ಮಹದೇವಮ್ಮ, ನಾಗರಾಜ್, ಮದನ್ ರಾಜ್, ಪಕ್ಷೇತರ ಸದಸ್ಯ ಸಾಹಿದ್ ಸಭೆಯಲ್ಲಿ ಭಾಗವಹಿಸಿದ್ದರು.
– ಕುಮಾರಸ್ವಾಮಿಯವರು ಬಹಳ ಮುಸ್ಲಿಂ ಜನರನ್ನ ಬಲಿ ತೆಗೆದುಕೊಂಡಿದ್ದಾರೆ – ಕುಮಾರಸ್ವಾಮಿ ಟಾರ್ಗೆಟ್ ಅಲ್ಪಸಂಖ್ಯಾತರು
ಹುಬ್ಬಳ್ಳಿ: ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಸಿಎಂ ಉದಾಸಿ ರೈಟ್ ಪರ್ಸನ್, ರಾಂಗ್ ಪಾರ್ಟಿಯಾಗಿದೆ. ಎರಡೂ ಉಪಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಹಾನಗಲ್‍ನಲ್ಲಿ ಶ್ರೀನಿವಾಸ ಮಾನೆ ಒಳ್ಳೆಯ ಕೆಲಸ ಮಾಡಿದ್ದಾರೆ. ಶ್ರೀನಿವಾಸ ಮಾನೆ ಯಾರು ಮಾಡದ ಕೆಲಸ ಮಾಡಿದ್ದಾರೆ, ಅವರು ಜಯ ನಿಶ್ಚಿತವಾಗಿದೆ. ಸಿಎಂ ಉದಾಸಿ ರೈಟ್ ಪರ್ಸನ್, ರಾಂಗ್ ಪಾರ್ಟಿ. ಬಿಜೆಪಿಯಿಂದ ಅವರ ಕುಟುಂಬಕ್ಕೆ ಟಿಕೆಟ್ ಬಿಡಬೇಕಾಗಿತ್ತು. ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡದ ಕಾರಣಕ್ಕೆ ಅವರು ಸೋತು ಬಿಟ್ಟಿದ್ದಾರೆ. ಎರಡೂ ಉಪಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:ರೇವಣ್ಣ DCM ಆಗ್ತಾನೆಂದು ಬಿಎಸ್‍ವೈಗೆ ಅಧಿಕಾರ ಬಿಟ್ಟು ಕೊಡಲಿಲ್ಲ, ನನ್ನ ಬಳಿ ವೀಡಿಯೋ ದಾಖಲೆ ಇದೆ: ಜಮೀರ್
ಬಸವಕಲ್ಯಾಣದಲ್ಲಿ ಜೆಡಿಎಸ್ ನೋಡಿ ಮತ ಹಾಕಿಲ್ಲಾ, ಅಲ್ಲಿನ ವ್ಯಕ್ತಿಯ ನೋಡಿ ಮತ ಹಾಕಿದ್ದಾರೆ. ಇದರಿಂದ ಅಲ್ಲಿ ಬಿಜೆಪಿ ಗೆಲ್ಲಲು ಸಹಾಯವಾಗಿದೆ. ಉಪಚುನಾವಣೆಯಲ್ಲಿ ಸೂಟ್‍ಕೇಸ್ ರಾಜಕಾರಣ ಮಾಡಿ, ಅಲ್ಪಸಂಖ್ಯಾತರನ್ನ ಬಲಿ ತೆಗೆದುಕೊಂಡಿದ್ದಾರೆ. ಹಾನಗಲ್‍ನಲ್ಲಿ ಸೂಟ್‍ಕೇಸ್ ಬರದ ಕಾರಣ ಒಂದೇ ದಿನ ಪ್ರಚಾರ ಮಾಡಿದ್ದಾರೆ. ಸೂಟ್‍ಕೇಸ್ ಪದ್ದತಿಯ ಬಗ್ಗೆ ನಾನು ಹೇಳುತ್ತಿಲ್ಲ. ದೇವೇಗೌಡ್ರ ಮೊಮ್ಮಗ ಸಂಸದ ಪ್ರಜ್ವಲ್ ಹೇಳಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ
ಕುಮಾರಸ್ವಾಮಿಯವರು ಬಹಳ ಮುಸ್ಲಿಂ ಜನರನ್ನ ಬಲಿ ತೆಗೆದುಕೊಂಡಿದ್ದಾರೆ. ತನ್ವೀರ್ ಸೇಠ್‍ರನ್ನ ಸೋಲಿಸಿದ್ದೇ ಕುಮಾರಸ್ವಾಮಿ. ಕುಮಾರಸ್ವಾಮಿ ಟಾರ್ಗೆಟ್ ಅಲ್ಪಸಂಖ್ಯಾತರು. ಅಲ್ಪಸಂಖ್ಯಾತರನ್ನ ಮುಗಿಸಿದ್ದು ಸಿದ್ದರಾಮಯ್ಯ ಅಲ್ಲ, ಕುಮಾರಸ್ವಾಮಿ ಎಂದು ಜಮೀರ್ ಅಹ್ಮದ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿಯನ್ನು ಆನೆಯನ್ನಾಗಿ ಮಾಡಿದ್ದು ನಾವು: ಜಮೀರ್