Tag: by election

  • ಉಪಚುನಾವಣೆ: ಉತ್ತರಾಖಂಡ್ ಸಿಎಂಗೆ ಧಾಮಿಗೆ ಭರ್ಜರಿ ಗೆಲುವು

    ಉಪಚುನಾವಣೆ: ಉತ್ತರಾಖಂಡ್ ಸಿಎಂಗೆ ಧಾಮಿಗೆ ಭರ್ಜರಿ ಗೆಲುವು

    ಡೆಹ್ರಾಡೂನ್: ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಬಾರಿ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

    ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಸೋತ ಬಳಿಕ ಚಂಪಾವತ್‍ನಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪುಷ್ಕರ್ ಸಿಂಗ್ ಧಮಿ ಅವರು ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ಗಹ್ತೋಡಿ ಅವರನ್ನು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಧಾಮಿ 54,000 ಮತಗಳನ್ನು ಪಡೆದರೆ, ಗಹತೋಡಿ ಕೇವಲ 3,607 ಮತಗಳನ್ನು ಪಡೆದಿದ್ದಾರೆ.  ಇದನ್ನೂ ಓದಿ:  ಸೋನಿಯಾ ಗಾಂಧಿ ಬಳಿಕ ಪ್ರಿಯಾಂಕಾ ಗಾಂಧಿಗೂ ಕೊರೊನಾ

    ರಾಜ್ಯದ ಕುಮಾನ್ ಪ್ರದೇಶದಲ್ಲಿ ಕಾಂಗ್ರೆಸ್‍ನ ನಿರ್ಮಲಾ ಗೆಹ್ತೋಡಿ ಅವರೊಂದಿಗೆ ಪುಷ್ಕರ್ ಸಿಂಗ್ ಧಮಿ ನೇರವಾಗಿ ಸ್ಪರ್ಧಿಸಿದ್ದರು. ಮತ್ತೊಂದೆಡೆ ಸಮಾಜವಾದಿ ಪಕ್ಷದ ಮನೋಜ್ ಕುಮಾರ್ ಭಟ್ ಮತ್ತು ಸ್ವತಂತ್ರ ಅಭ್ಯರ್ಥಿ ಹಿಮಶು ಗಡ್ಕೋಟಿ ಚುನಾವಣಾ ಕಣದಲ್ಲಿದ್ದರು. ಇದನ್ನೂ ಓದಿ: ಸೋನಿಯಾ ಗಾಂಧಿ ಶೀಘ್ರವೇ ಗುಣಮುಖರಾಗಲಿ – ಮೋದಿ ಶುಭಹಾರೈಕೆ

    ಸದ್ಯ ಗೆಲುವಿನ ಅಲೆಯಲ್ಲಿರುವ ಪುಷ್ಕರ್ ಸಿಂಗ್ ಅವರು, ಈ ಕುರಿತಂತೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಚಂಪಾವತ್ ಜನರೇ, ನನಗೆ ಮಾತುಗಳೇ ಬರದಂತಾಗಿದೆ. ನಿಮ್ಮ ಮತಗಳ ಮೂಲಕ ನನಗೆ ಸಿಕ್ಕಿರುವ ಪ್ರೀತಿ ಆಶೀರ್ವಾದವನ್ನು ನೋಡಿ ನಾನು ಭಾವುಕನಾಗಿದ್ದೇನೆ ಎಂದು ಧನ್ಯವಾದ ತಿಳಿಸಿದ್ದಾರೆ.

  • ಉಪಚುನಾವಣೆ ಗೆದ್ದರೆ ನಾವು ಭಾರೀ ಬೀಗಬಾರದು, ಸೋತರೆ ಧೃತಿಗೆಡಬಾರದು: ಜೋಶಿ

    ಉಪಚುನಾವಣೆ ಗೆದ್ದರೆ ನಾವು ಭಾರೀ ಬೀಗಬಾರದು, ಸೋತರೆ ಧೃತಿಗೆಡಬಾರದು: ಜೋಶಿ

    ಧಾರವಾಡ: ಉಪಚುನಾವಣೆ ಇದ್ದಾಗ ಸರ್ಕಾರ ಹಾಗೂ ಸರ್ಕಾರದ ಮಂತ್ರಿಗಳು ನಿಲ್ಲುವುದು ಸಹಜ, ಹಿಂದೆ ನಂಜನಗೂಡು ಹಾಗೂ ಗುಂಡ್ಲುಪೇಟೆ ಚುನಾವಣೆ ನಡೆದಾಗ ಸಿದ್ದರಾಮಯ್ಯನವರು ಅಲ್ಲೇ ಟೆಂಟ್ ಹೊಡೆಡಿದ್ರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಎಂ ಯಾರು ಇರ್ತಾರೆ ಅವರು ಉಪಚುನಾವಣೆ ಗೆಲ್ಲಿಸಲು ನಿಲ್ಲುವುದು ಸಹಜ ಎಂದರು. ಎರಡು ಕ್ಷೇತ್ರಗಳ ಒಟ್ಟು ಮತಗಳ ಸರಾಸರಿ ನೋಡಿದರೆ 53 ರಷ್ಟು ಮತ ಬಿಜೆಪಿಗೆ ಬಿದ್ದಿವೆ. ಡಿಪಾಸಿಟ್ ಕಳೆದುಕೊಂಡಿದ್ದರೆ ರೂಟ್ ಔಟ್, ನಮಗೂ 76 ಸಾವಿರ ವೋಟು ಹಾಕಿದ್ದಾರೆ ಎಂದರು.

    ಸೋಲು ಅಂದರೆ ವಿರೋಧ ಪಕ್ಷದ ಮಾನ್ಯತೆ ಪಡೆಯಲಿಕ್ಕೂ ವಿಫಲರಾಗಿದ್ದು ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ ಜೋಶಿ, ಹಾನಗಲ್‍ನಲ್ಲಿ ಅವರಿಗೆ 4 ಸಾವಿರ ಹೆಚ್ಚು ಮತ ಬಿದ್ದಿವೆ, ಸಿಂದಗಿಯಲ್ಲಿ ಅವರ ಸ್ಥಿತಿ ಏನಾಗಿದೆ, 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ ಎಂದು ಹೇಳಿದರು.

    ಸಿದ್ದರಾಮಯ್ಯ ಸಿಂದಗಿಯಲ್ಲೇ ಟೆಂಟ್ ಹೊಡೆದಿದ್ರು. ಒಟ್ಟಿನಲ್ಲಿ ಗೆದ್ದ ನಂತರ ನಾವು ಭಾರೀ ಬೀಗಬಾರದು, ಸೋತ ನಂತರ ಧೃತಿಗೆಡಬಾರದು ಎಂದು ಜೋಶಿ ಹೇಳಿದರು.

  • ಹಾವೇರಿ ಜನ ಹಣಕ್ಕಾಗಿ ಮತ ಮಾರಿಕೊಳ್ಳಲಿಲ್ಲ, 2023ರ ಚುನಾವಣೆಗೆ ಇದು ಪ್ರಾರಂಭ: ಡಿಕೆಶಿ

    ಹಾವೇರಿ ಜನ ಹಣಕ್ಕಾಗಿ ಮತ ಮಾರಿಕೊಳ್ಳಲಿಲ್ಲ, 2023ರ ಚುನಾವಣೆಗೆ ಇದು ಪ್ರಾರಂಭ: ಡಿಕೆಶಿ

    – 2023ರ ಚುನಾವಣೆಗೆ ಇದು ಟ್ರೈಯಲ್ ರನ್

    ಹಾವೇರಿ: ಜಿಲ್ಲೆಯ ಜನರು ಹಣಕ್ಕಾಗಿ ಮತ ಮಾರಿಕೊಳ್ಳಲಿಲ್ಲ. ಮಾನೆಯವರನ್ನು ಗೆಲ್ಲಿಸಿದ್ದೀರಿ, ಎಲ್ಲರಿಗೂ ಅಭಿನಂದನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಅವರು, ಇಲ್ಲಿ ನನ್ನ ಕಾರ್ಯಕ್ರಮ ಇರಲಿಲ್ಲ. ಹಾನಗಲ್‍ನಲ್ಲಿ ಗ್ರಾಮದೇವತೆ, ದರ್ಗಾ ಮತ್ತು ಮಠಕ್ಕೆ ಹೋಗುವ ಕಾರ್ಯಕ್ರಮವಿತ್ತು. ನಿಮ್ಮಲ್ಲೂ ಸಂಘಟನೆ ಆಗಬೇಕು, ಬದಲಾವಣೆ ಆಗಬೇಕು. ಮುಂದಿನ ಚುನಾವಣೆಯಲ್ಲಿ ನೀವೆಲ್ಲರೂ ಇಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಗೆಲುವು – ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ

    ದೀಪಾವಳಿ ಹಬ್ಬ ಕತ್ತಲಿನಿಂದ ಬೆಳಕಿಗೆ ಹೋಗಬೇಕು ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. 2023ಕ್ಕೆ ಇದು ಪ್ರಾರಂಭ. ಇದು ಮೊದಲನೇ ಚುನಾವಣೆ. ಇದು ಟ್ರೈಯಲ್ ರನ್. ನೀವೇ ಅಭ್ಯರ್ಥಿ ಅಂತಾ ತಿಳಿದು ಎಲ್ಲರೂ ಹೋರಾಟ ಮಾಡಿ ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದೀರಿ ಧನ್ಯವಾದಗಳು ಎಂದರು. ಇದನ್ನೂ ಓದಿ: ನೈಟ್ ಕರ್ಫ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ

    ಹಾವೇರಿ ಜಿಲ್ಲೆ ಶಿಗ್ಗಾಂವಿಯ ಪಟ್ಟಣದಲ್ಲಿ ಡಿ.ಕೆ.ಶಿವಕುಮಾರ್‍ ರನ್ನು ಬೈಕ್  ರ್‍ಯಾಲಿ ಮೂಲಕ ತೆರೆದ ವಾಹನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು. ಜೆಸಿಬಿ ವಾಹನದ ಮೇಲಿಂದ ಹೂವು ಸುರಿದು ಅದ್ದೂರಿ ಸ್ವಾಗತ ಕೋರಿದರು.

  • ಹಾನಗಲ್ ಸೋಲಿಗೆ ಹೈಕಮಾಂಡ್ ಬೇಸರ – ಕುಮಾರಣ್ಣ ತಪ್ಪು ಮಾಡಿದ್ರು ಅಂದ ರೇವಣ್ಣ

    ಹಾನಗಲ್ ಸೋಲಿಗೆ ಹೈಕಮಾಂಡ್ ಬೇಸರ – ಕುಮಾರಣ್ಣ ತಪ್ಪು ಮಾಡಿದ್ರು ಅಂದ ರೇವಣ್ಣ

    ಬೆಂಗಳೂರು: ಹಾನಗಲ್ ಬೈ ಎಲೆಕ್ಷನ್ ಸೋಲಿನ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಬಿಜೆಪಿ ಹೈಕಮಾಂಡ್ ಬೇಸರ ವ್ಯಕ್ತಪಡಿಸಿದೆ. ಸಿಂದಗಿಯಲ್ಲಿ ಭರ್ಜರಿಯಾಗಿ ಗೆದ್ದರೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆಗಲಿ, ಗೃಹ ಸಚಿವ ಅಮಿತ್ ಶಾ ಆಗಲಿ ಶುಭಕೋರಿಲ್ಲ. ಆದರೆ ಪಕ್ಕದ ತೆಲಂಗಾಣದ ಹುಜಾರಾಬಾದ್, ಬಿಹಾರ, ಮಧ್ಯಪ್ರದೇಶ, ಅಸ್ಸಾಂ ರಾಜ್ಯದ ಉಪಚುನಾವಣೆ ಗೆಲುವಿಗೆ ಅಭಿನಂದಿಸಿ ನಡ್ಡಾ ಟ್ವೀಟ್ ಮಾಡಿದ್ದಾರೆ.

    ನವೆಂಬರ್ 6ರಂದು ದೆಹಲಿಗೆ ತೆರಳಲಿದ್ದು, 7ರಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗಿಯಾಗಲಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತಾಡಿದ ಸಿಎಂ, ಹಾನಗಲ್ ಸೋಲಿನ ಹೊಣೆಯನ್ನು ಸಾಮೂಹಿಕವಾಗಿ ವಹಿಸಿಕೊಳ್ತೇವೆ. ಸೋಲಿನ ಪರಾಮರ್ಶೆ ಮಾಡ್ತೇವೆ ಅಂದಿದ್ದಾರೆ. ಜೊತೆಗೆ ಹಾನಗಲ್‍ನಲ್ಲಿ ಬಿಜೆಪಿ ಸೋಲಿಗೆ ಬಿಜೆಪಿ ದುರಾಡಳಿತವೇ ಕಾರಣ ಅನ್ನೋ ಕಾಂಗ್ರೆಸ್ ಆರೋಪಕ್ಕೆ ಬೊಮ್ಮಾಯಿ ಕೆಂಡಾಮಂಡಲರಾಗಿದ್ದಾರೆ.

    ಸಿಂದಗಿ ಜನರು ಯಾಕೆ ಹೆಚ್ಚಿನ ಮತ ನೀಡಿದ್ರು..? ಅಂತ ಠಕ್ಕರ್ ಕೊಟ್ಟಿದ್ದಾರೆ. ಸಚಿವ ಈಶ್ವರಪ್ಪ ಅವರಂತೂ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿಲ್ವಾ ಅಂತ ಛೇಡಿಸಿದ್ದಾರೆ. ಆದರೆ ಡಿಕೆಶಿ ಮಾತ್ರ ಸಿಂದಗಿಯಲ್ಲಿ ನಮಗೆ ಹೆಚ್ಚಿನ ಮತ ಸಿಕ್ಕಿದೆ. 2023ಕ್ಕೆ ಗುರಿ ಮುಟ್ಟುತ್ತೇವೆ ಅಂದಿದ್ದಾರೆ. ಇದನ್ನೂ ಓದಿ: ದೀಪಾವಳಿಗೆ ಮೋದಿ ಸರ್ಕಾರದಿಂದ ಬಂಪರ್ – ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ

    ಹಾಸನದಲ್ಲಿ ರೇವಣ್ಣ ಮಾತಾಡಿ, ನಮ್ಮ ಕುಮಾರಣ್ಣ ಕೆಲವು ತಪ್ಪು ಮಾಡ್ದಾ. ಪ್ರಾದೇಶಿಕ ಪಕ್ಷ ಮುಗಿಸಲು ಯಾರಿಂದಲೂ ಆಗಲ್ಲ. ಯಾರ್ಯಾರ ಜಾತಕ ಏನಿದೆ..? ನಮಗೆ ಗೊತ್ತಿದೆ ಟೈಂ ಬಂದಾಗ ಹೇಳ್ತಿನಿ ಅಂತ ಗುಡುಗಿದ್ದಾರೆ. ಈ ಮಧ್ಯೆ ನಾಳೆ ಬೊಮ್ಮಾಯಿ ಸರ್ಕಾರಕ್ಕೆ 100 ದಿನ ತುಂಬುತ್ತಿದೆ. ಹೀಗಾಗಿ 11ನೇ ರಂದು ಸಚಿವ ಸಂಪುಟ ಸಭೆ ನಡೆಸಿ, 100 ದಿನದ ಸಾಧನೆ, ಜಾರಿಗೆ ತಂದ ಯೋಜನೆಗಳನ್ನು ಜನತೆ ಮುಂದಿಡಲು ಸಿಎಂ ನಿರ್ಧರಿಸಿದ್ದಾರೆ. ಇದನ್ನೂ ಓದಿ: ನ.16ಕ್ಕೆ ಪ್ಯಾಲೇಸ್ ಗ್ರೌಂಡ್‍ನಲ್ಲಿ ಪವರ್ ಸ್ಟಾರ್‌ಗೆ ನುಡಿ ನಮನ

  • ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸುವ ದೃಷ್ಟಿಕೋನ ನಮ್ಮದು: ಬೊಮ್ಮಾಯಿ

    ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸುವ ದೃಷ್ಟಿಕೋನ ನಮ್ಮದು: ಬೊಮ್ಮಾಯಿ

    ಬೆಂಗಳೂರು: ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸುವ ದೃಷ್ಟಿಕೋನ ನಮ್ಮದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಉಪಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿ ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸಿಂದಗಿಯಲ್ಲಿ ಗೆಲುವಿಗೆ ಶ್ರಮಿಸಿದ ಪಕ್ಷದ ನಾಯಕರಿಗೆ ಹಾಗೂ ಮತಹಾಕಿದ ಮಹಾಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

    ಹಾನಗಲ್ ಸೋಲಿನ ಕುರಿತು ನಾವು ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದೇವೆ. ಈ ಅಂತರವನ್ನು ನಾವು ಸಾಧಿಸಬಹುದಾಗಿತ್ತು. ಕಾರಣಗಳನ್ನು ವಿಶ್ಲೇಷಿಸಿ, ಅವುಗಳನ್ನು ಸರಿಪಡಿಸಿ ಮುಂದೆ ಹೋಗುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

    ಹಾನಗಲ್ ನಲ್ಲಿ ದಿವಂಗತ ಉದಾಸಿ ಅವರಿಗಿದ್ದ ಜನಪ್ರಿಯತೆಯನ್ನು ಸ್ವಲ್ಪಪಟ್ಟಿಗೆ ಮುಂದುವರೆಸಲಾಗಲಿಲ್ಲ. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಜನ ಅವರನ್ನು ಬೆಂಬಲಿಸಿದ್ದಾರೆ ಎಂದರು.

    ಸರ್ಕಾರದ 100ನೇ ದಿನ!

    ಸಿಎಂ ಆಗಿ 100 ದಿನಗಳಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ ಅವರು, ಒಂದು ವರ್ಷದಂತೆ ಪ್ರಮುಖ ಘಟ್ಟವೇನಲ್ಲ. ಆದರೆ, 100 ದಿನದಲ್ಲಿ ಸರ್ಕಾರದ ದಿಕ್ಕು, ಭರವಸೆ, ಸಮಸ್ಯೆಗಳನ್ನು ಎದುರಿಸಿದ ರೀತಿ, ಇವುಗಳ ಸ್ಥೂಲ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬಲಿಪಾಡ್ಯಮಿ ಹಬ್ಬದಂದು ದೇವಾಲಯಗಳಲ್ಲಿ ಗೋಪೂಜೆ

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಗೆ ಉಪಚುನಾವಣೆ ಫಲಿತಾಂಶ ದಿಕ್ಸೂಚಿ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಪಕ್ಷದವರು ಹಾಗೆ ಹೇಳಬೇಕು. ಸಿಂಧಗಿಯಲ್ಲಿ 31 ಸಾವಿರದಷ್ಟು ದೊಡ್ಡ ಅಂತರದಿಂದ ಕಾಂಗ್ರೆಸ್ ಸೋತಿದೆ. ಅದಕ್ಕೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

  • ನಮ್ಮ ಅಭ್ಯರ್ಥಿ ಕೆಲಸ ಮಾಡಿಲ್ಲ, ಶ್ರೀನಿವಾಸ ಮಾನೆ ಉತ್ತಮ ಕೆಲಸ ಮಾಡಿದಕ್ಕೆ ಗೆದ್ದಿದ್ದಾರೆ: ಈಶ್ವರಪ್ಪ

    ನಮ್ಮ ಅಭ್ಯರ್ಥಿ ಕೆಲಸ ಮಾಡಿಲ್ಲ, ಶ್ರೀನಿವಾಸ ಮಾನೆ ಉತ್ತಮ ಕೆಲಸ ಮಾಡಿದಕ್ಕೆ ಗೆದ್ದಿದ್ದಾರೆ: ಈಶ್ವರಪ್ಪ

    ದಾವಣಗೆರೆ: ಶ್ರೀನಿವಾಸ ಮಾನೆ ಉತ್ತಮ ಕೆಲಸ ಮಾಡಿದಕ್ಕೆ ಹಾನಗಲ್‍ನಲ್ಲಿ ಗೆದ್ದಿದ್ದಾರೆ, ನಮ್ಮ ಅಭ್ಯರ್ಥಿ ಕೆಲಸ ಮಾಡಿಲ್ಲ, ಅದಕ್ಕೆ ಸೋತಿದ್ದಾರೆ ಎಂದು ದಾವಣಗೆರೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಹಾನಗಲ್ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಡಿ ಹೊಗಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನೆ ಎರಡ್ಮೂರು ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ, ಸಿದ್ದರಾಮಯ್ಯ, ಇಂದಿರಾಗಾಂಧಿ ಸೋತಿರಲಿಲ್ವಾ, ಹಾನಗಲ್‍ನಲ್ಲಿ ನಾವು ಸೋತಿದ್ದೇವೆ, ಸಿಂದಗಿಯಲ್ಲಿ ದಿಗ್ವಿಜಯ ಸಾಧಿಸಿದ್ದೇವೆ, ಎಲ್ಲ ಚುನಾವಣೆಯಲ್ಲೂ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಹಾನಗಲ್‍ನಲ್ಲಿ 7 ಸಾವಿರ ಮತಗಳಿಂದ ಸೋತಿದ್ದೇವೆ, ಆದರೆ ಸಿಂದಗಿಯಲ್ಲಿ 31 ಸಾವಿರ ಮತಗಳಿಂದ ಐತಿಹಾಸಿಕ ಗೆಲುವು ಸಾಧಿಸಿದ್ದೇವೆ. ಹಾನಗಲ್ ಸೋಲಿನ ಬಗ್ಗೆ ಪರಾಮರ್ಶೆ ನಡೆಸುತ್ತೇವೆ, ಸೋಲನ್ನಾಗಲಿ, ಗೆಲುವನ್ನಾಗಲಿ ಯಾವುದೇ ಒಬ್ಬರ ಮೇಲೆ ಹಾಕುವುದಿಲ್ಲ, ಭವಿಷ್ಯದ ಚುನಾವಣೆಯಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ ಎಂದರು. ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‍ಗೆ ಸದಾ ಸಿಎಂ ಕುರ್ಚಿ ಮೇಲೆ ಕಣ್ಣು. ಇದೇ ಚಿಂತೆಯಲ್ಲಿ ಅವರಿಗೆ ಹಗಲುರಾತ್ರಿ ನಿದ್ರೆ ಇಲ್ಲ, ಕನಸಲ್ಲಿ ಮಾತ್ರ ಸಿಎಂ ಸ್ಥಾನ ಇಟ್ಟುಕೊಳ್ಳಲಿ, ಹೊರಗೆ ಬಂದರೆ ಪರಸ್ಪರ ಕಿತ್ತಾಡುತ್ತಾರೆ. ಭವಿಷ್ಯದಲ್ಲಿ ಅವರ ಗುಂಪುಗಾರಿಕೆ ಯಾವ ಮಟ್ಟಕ್ಕೆ ಹೋಗಿತ್ತೆ ಅಂತ ಕಾದು ನೋಡಿ ಎಂದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ 2023ರ ಚುನಾವಣೆ ನಡೆಯುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ, ಇದನ್ನು ಕೇಂದ್ರದ ನಾಯಕರೇ ಸ್ಪಷ್ಟಪಡಿಸಿದ್ದಾರೆ, ಅವರಿಗಿಂತ ದೊಡ್ಡವನು ನಾನಲ್ಲ ಎಂದರು. ಅಲ್ಲದೆ ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಅಲ್ಲ, ಹಾನಗಲ್ ಫಲಿತಾಂಶವನ್ನು ಕಾಂಗ್ರೆಸ್ ದಿಕ್ಸೂಚಿ ಎಂದು ಪರಿಗಣಿಸಿದ್ರೆ, ಸಿಂದಗಿ ಫಲಿತಾಂಶವನ್ನು ಹೇಗೆ ಪರಿಗಣಿಸಬೇಕು, ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆ ದಿಕ್ಸೂಚಿ ಅಲ್ಲ ಎಂದು ಸಚಿವ ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ಟಾಂಗ್ ನಿಡೀದರು. ಇದನ್ನೂ ಓದಿ:  ಅಪ್ಪು ಕೊನೆ ಕ್ಷಣದ ವಿಡಿಯೋ ಲಭ್ಯ

  • ಹಾನಗಲ್‍ನಲ್ಲಿ ಕಾಂಗ್ರೆಸ್ ಗೆಲುವು, ಬಿಜೆಪಿ ಸೋಲಿಗೆ ಕಾರಣವೇನು..?

    ಹಾನಗಲ್‍ನಲ್ಲಿ ಕಾಂಗ್ರೆಸ್ ಗೆಲುವು, ಬಿಜೆಪಿ ಸೋಲಿಗೆ ಕಾರಣವೇನು..?

    ಹಾವೇರಿ: ಅದು 2011ರ ಸಮಯ. ಬದಲಾದ ರಾಜಕೀಯದಾಟದಲ್ಲಿ ಡಿವಿ ಸದಾನಂದ ಗೌಡರು ಮುಖ್ಯಮಂತ್ರಿ ಗಾದಿಗೇರಿದ್ದರು. ಅಂದು ಡಿವಿಎಸ್ ರಾಜೀನಾಮೆಯಿಂದ ತೆರವಾಗಿದ್ದ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಸುನೀಲ್‍ಕುಮಾರ್ ಸೋತಿದ್ದರು. ತಮ್ಮದೇ ಕ್ಷೇತ್ರದಲ್ಲಿ ಕಮಲ ಅರಳಿಸಲು ಡಿವಿಎಸ್ ವಿಫಲರಾಗಿದ್ದರು. ಈಗ ಬೊಮ್ಮಾಯಿಗೂ ಅಂಥಾದ್ದೇ ಸನ್ನಿವೇಶ ಎದುರಾಗಿದೆ.

    basavaraj bommai

    ಒಂದು ವಾರಕ್ಕೂ ಹೆಚ್ಚು ಕಾಲ ಹಾನಗಲ್‍ನಲ್ಲಿ 8-10 ಸಚಿವರ ಜೊತೆ ಬೀಡುಬಿಟ್ಟಿದ್ದ ಸಿಎಂ, ಗೆಲುವಿಗೆ ಕಾರ್ಯತಂತ್ರ ರೂಪಿಸಿದರು. ಎರಡೆರಡು ಬಾರಿ ಬಿಎಸ್‍ವೈ ಅವರನ್ನು ಕರೆತಂದು ಪ್ರಚಾರ ನಡೆಸಿದ್ರೂ, ಹಾನಗಲ್ ಗೆಲ್ಲಿಸಿಕೊಳ್ಳಲು ಸಿಎಂ ವಿಫಲರಾಗಿದ್ದಾರೆ. ಮೊದಲ ಸುತ್ತಿನಲ್ಲಿಯೇ ಮುನ್ನಡೆ ಸಾಧಿಸಿದ ಶ್ರೀನಿವಾಸ್ ಮಾನೆ ಕೊನೆಯ ಸುತ್ತಿನವರೆಗೂ ಅಧಿಪತ್ಯ ಬಿಟ್ಟುಕೊಡಲಿಲ್ಲ. ಆರಂಭದಲ್ಲಿ ಮಾನೆ-ಸಜ್ಜನರ್ ನಡ್ವೆ ಕೇವಲ 50-100 ಮತಗಳ ಅಂತರ ಇತ್ತು. ನಂತರ ಇದು ಬರಬರುತ್ತಾ ಸಾವಿರಗಳಿಗೆ ಹಿಗ್ಗಿತು. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಕೊನೆಯಲ್ಲಿ 7,373 ಮತಗಳಿಂದ ಮಾನೆ ವಿಜಯದ ನಗಾರಿ ಬಾರಿಸಿದ್ರು. ಈ ಮೂಲಕ ಮೊದಲ ಪರೀಕ್ಷೆಯಲ್ಲಿಯೇ ಸಿಎಂ ಬಸವರಾಜ ಬೊಮ್ಮಾಯಿ ಫೇಲ್ ಆಗಿ ತೀವ್ರ ಮುಖಭಂಗ ಅನುಭವಿಸಿದರು. ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ರೆ, ಬಿಜೆಪಿ ನಿರಾಸೆಯ ಮಡುವಿನಲ್ಲಿ ಮುಳುಗಿದೆ. ವಿಜೇತ ಅಭ್ಯರ್ಥಿ ಶ್ರೀನಿವಾಸ್ ಮಾನೆ, ಮತದಾರರಿಗೆ ಧನ್ಯವಾದ ಹೇಳಿದ್ದಾರೆ. ಇಲ್ಲಿ ಧನಬಲದ ಎದುರು ಜನಬಲ ಗೆದ್ದಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಇದು ನನ್ನ ಸೋಲು, ಪಕ್ಷದ ಸೋಲು ಹೌದು. ನಿಖರ ಕಾರಣ ಗೊತ್ತಾಗ್ತಿಲ್ಲ ಎಂದು ಪರಾಜಿತ ಅಭ್ಯರ್ಥಿ ಶಿವರಾಜ ಸಜ್ಜನರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    ಕಾಂಗ್ರೆಸ್ ಗೆಲುವಿಗೆ ಕಾರಣಗಳೇನು..?
    ಶ್ರೀನಿವಾಸ ಮಾನೆ ‘ಕೈ’ ಹಿಡಿದ ವೈಯಕ್ತಿಕ ಚರಿಷ್ಮಾ. ಕೋವಿಡ್ ಕಾಲದಲ್ಲಿ ಜನರ ಕಷ್ಟಕ್ಕೆ ನೆರವಾಗಿದ್ದರು. ಹೊರಗಿನವರಾದರೂ ಕ್ಷೇತ್ರದಲ್ಲೇ ಮನೆ ಮಾಡಿ ವಾಸ್ತವ್ಯ ಹೂಡಿದ್ದರು. ಕಳೆದ ಬಾರಿ ಮಾನೆ ಸೋತಿದ್ದರು ಎಂಬ ಅನುಕಂಪ ವರ್ಕೌಟ್ ಆಗಿರುವ ಸಾಧ್ಯತೆ. ಹಾಗೂ ‘ಬಂಡಾಯಗಾರ’ ಮನೋಹರ್ ತಹಶಿಲ್ದಾರ್ ಮನವೊಲಿಕೆ ಯಶಸ್ವಿಯಾಗಿದ್ದರಿಂದ ಕಾಂಗ್ರೆಸ್ ಗೆದ್ದಿದೆ ಎನ್ನಲಾಗುತ್ತಿದೆ.

    ಬಿಜೆಪಿ ಸೋಲಿಗೆ ಕಾರಣವೇನು..?
    ಕೋವಿಡ್ ಸಂಕಷ್ಟ ವೇಳೆ ಕ್ಷೇತ್ರಕ್ಕೆ ಉದಾಸಿ ಕುಟುಂಬದ ನೆರವು ಸಿಗದೇ ಇದ್ದಿದ್ದು. ಶಿವರಾಜ್ ಸಜ್ಜನರ್ ಕೈ ಹಿಡಿಯದ ಲಿಂಗಾಯತ ಮತಗಳು. ಉದಾಸಿ ಬೆಂಬಲಿಗರ ತಟಸ್ಥ ಧೋರಣೆ, ಸಚಿವ ನಿರಾಣಿ ಅಸಹಕಾರ. ಕ್ಷೇತ್ರದಲ್ಲಿ ಬಿಜೆಪಿಗೆ ಎರಡನೇ ಹಂತದ ನಾಯಕರ ಕೊರತೆ. ಹಾಗೂ ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಜೆಡಿಎಸ್ ವಿಫಲವಾಗಿರುವುದೇ ಬಿಜೆಪಿ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

  • ಜನಾದೇಶವನ್ನ ಸ್ವಾಗತಿಸುತ್ತೇವೆ, ಇವಿಎಂ ದೂರಲ್ಲ – ಕಾಂಗ್ರೆಸ್ಸಿಗರ ಕಾಲೆಳೆದ ಸಿ.ಟಿ ರವಿ

    ಜನಾದೇಶವನ್ನ ಸ್ವಾಗತಿಸುತ್ತೇವೆ, ಇವಿಎಂ ದೂರಲ್ಲ – ಕಾಂಗ್ರೆಸ್ಸಿಗರ ಕಾಲೆಳೆದ ಸಿ.ಟಿ ರವಿ

    ಚಿಕ್ಕಮಗಳೂರು: ಸಿಂದಗಿ-ಹಾನಗಲ್ ಉಪಚುನಾವಣೆಯಲ್ಲಿ ನಾವು ಜನಾದೇಶವನ್ನ ಸ್ವಾಗತಿಸುತ್ತೇವೆ. ಇವಿಎಂ ಅನ್ನ ದೂರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ.

    ಚಿಕ್ಕಮಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಒಂದು ವೇಳೆ ಬಿಜೆಪಿ ಎರಡೂ ಕ್ಷೇತ್ರದಲ್ಲೂ ಗೆದ್ದಿದ್ದರೆ ವಿಪಕ್ಷ ನಾಯಕರು ಇವಿಎಂ ಮೇಲೆ ದೂರುತ್ತಿದ್ದರು. ಆದರೆ ನಾವು ಖಂಡಿತ ಇವಿಎಂ ಮೇಲೆ ಕಂಪ್ಲೆಂಟ್ ಮಾಡುವುದಿಲ್ಲ. ಜನಾದೇಶವನ್ನ ಸ್ವೀಕಾರ ಮಾಡುತ್ತೇವೆ ಎಂದಿದ್ದಾರೆ.

    ಸಿಂದಗಿಯಲ್ಲಿ 31000ಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದರೆ, ಹಾನಗಲ್‍ನಲ್ಲಿ ವಿರೋಚಿತವಾದ ಹೋರಾಟ ಕೊಟ್ಟಿದ್ದೇವೆ. ನಮಗೆ ಕರ್ನಾಟಕದಲ್ಲಿ ಮಿಶ್ರ ಫಲಿತಾಂಶ. ಒಂದು ಕಡೆ ಭರ್ಜರಿ ಜಯ, ಮತ್ತೊಂದೆಡೆ ನಿರೀಕ್ಷೆಯಂತೆ ಗೆಲ್ಲಲು ಸಾಧ್ಯವಾಗಿಲ್ಲ. ಗೆದ್ದ ಇಬ್ಬರಿಗೂ ಅಭಿನಂದಿಸಿ ಎಲ್ಲಾದರೂ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.

    ಕರೆಕ್ಷನ್ ಎಂಬುದು ನಿರಂತರವಾಗಿರುವ ಪ್ರಕ್ರಿಯೆ. ನಾವು ಇದನ್ನು ಮುಖ್ಯಮಂತ್ರಿ ಅಥವಾ ಆಡಳಿತ ಪಕ್ಷದ ವಿರುದ್ಧದ ಜನಾದೇಶ ಎಂದು ಭಾವಿಸುವುದಿಲ್ಲ. ಮಾನೆ, ವ್ಯಕ್ತಿಗತವಾಗಿ ಸೋತ ದಿನದಿಂದ ಕ್ಷೇತ್ರದಲ್ಲಿ ಸಂಪರ್ಕದಲ್ಲಿದ್ದರು. ನಮ್ಮಲ್ಲಿ ನಾಮಪತ್ರ ಸಲ್ಲಿಸುವ ಹಿಂದಿನ ದಿನದವರೆಗೂ ಅಭ್ಯರ್ಥಿ ಅಂತಿಮವಾಗದೇ ಇರುವುದು ಭಾಗಶಃ ಪರಿಣಾಮ ಬೀರಿದೆ ಎಂದರು. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ತವರಲ್ಲೇ ಶೂನ್ಯ ಸಾಧನೆ ಬೆಲೆ ಏರಿಕೆಯ ಉಡುಗೊರೆ: ಶ್ರೀನಿವಾಸ್ ಬಿ.ವಿ

    ಇದೇ ವೇಳೆ ಜೆಡಿಎಸ್ ಸೋಲಿನ ಬಗ್ಗೆ ಮಾತನಾಡಿದ ಸಿ.ಟಿ.ರವಿ, ಸತ್ಯ ಹೇಳಿದರೆ ಅವರಿಗೆ ಬೇಸರ. ಸತ್ಯ ಯಾವಾಗಲೂ ಕಹಿಯಾಗಿರುತ್ತೆ. ಜೆಡಿಎಸ್‍ಗೆ ಆ ಭಾಗದ ಎರಡೂ ಕ್ಷೇತ್ರದಲ್ಲೂ ಸಂಘಟನೆ ಇರಲಿಲ್ಲ. ಅಲ್ಲಿ ಮಾಜಿ ಶಾಸಕರ ಕಾರಣಕ್ಕೋಸ್ಕರ ಅವರ ನಿಧನದಿಂದ ಸಿಂಪತಿ ಕಾರಣಕ್ಕೆ ಒಂದು ಜಯ ಸಿಕ್ಕಿತ್ತು. ಈ ಬಾರಿ ಅವರ ಮಗನೇ ಕಾಂಗ್ರೆಸ್ ಅಭ್ಯರ್ಥಿಯಾದರೂ ಬಿಜೆಪಿ 31,000 ಲೀಡ್ ನಲ್ಲಿ ಗೆದ್ದಿದೆ ಎಂದು ಹೇಳಿದರು. ಇದನ್ನೂ ಓದಿ: ಸಿಂದಗಿಯಲ್ಲಿ ಲಿಂಗಾಯತರು ಮತ ಹಾಕಿಲ್ಲ, ರಾಷ್ಟ್ರೀಯ ಪಕ್ಷಗಳು ಹಣದ ಹೊಳೆ ಹರಿಸಿ ಗೆದ್ದಿವೆ: ಹೆಚ್‍ಡಿಡಿ ಆರೋಪ

    ಆರ್ಗನೈಸೇಷನ್, ಐಡಿಯಾಲಜಿ ಹಾಗೂ ನೇತೃತ್ವ ಇಲ್ಲದಿದ್ರೆ ಏನಾಗಬೇಕೋ ಅದೇ ಆಗುತ್ತೆ. ಹಾನಗಲ್‍ನಲ್ಲಿ ಸಾವಿರಕ್ಕೂ ಕಡಿಮೆ ಮತ ಬಂದಿದೆ ಅಂದರೆ, ಅವರು ಭವಿಷ್ಯದ ರಾಜಕಾರಣದ ಬಗ್ಗೆ ಯೋಚಿಸಬೇಕು. ಮುಂದೆ ಪ್ರಾದೇಶಿಕ ಪಕ್ಷಕ್ಕೆ ಜನ ಬೆಂಬಲ ನೀಡುತ್ತಾರೆ ಎಂದು ಆಶಾವಾದ ಇಟ್ಟುಕೊಂಡಿರುವವರು ಆಲೋಚಿಸಬೇಕು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.

  • ಜನ ರಾಜ್ಯದಲ್ಲಿ ಬದಲಾವಣೆ ಬಯಸುತ್ತಿದ್ದಾರೆ: ಡಿಕೆ ಶಿವಕುಮಾರ್

    ಜನ ರಾಜ್ಯದಲ್ಲಿ ಬದಲಾವಣೆ ಬಯಸುತ್ತಿದ್ದಾರೆ: ಡಿಕೆ ಶಿವಕುಮಾರ್

    ಬೆಂಗಳೂರು: ಈ ಬಾರಿ ಉಪಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿದ್ದರೂ ಹಾನಗಲ್‍ನಲ್ಲಿ ಪಕ್ಷದ ಸಾಧನೆ ಉತ್ತಮವಾಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆದ್ದಿಲ್ಲ ಗೆಲ್ಲುವ ಹಾದಿಯಲ್ಲಿದೆ. ಈಗಷ್ಟೇ ನಾನು ಶ್ರೀನಿವಾಸ ಮಾನೆ ಅವರ ಹತ್ತಿರ ಮಾತನಾಡಿದೆ. ಈ ಚುನಾವಣೆಯ ಫಲಿತಾಂಶವನ್ನು ನಾನು ವಿಶ್ಲೇಷಣೆ ಮಾಡಬೇಕಿಲ್ಲ. ಮಾನೆಯವರು ಹಿಂದೆ 6 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಸರ್ಕಾರ, ಸಿಎಂ, ಅಭಿವೃದ್ಧಿ ಕಾರ್ಯ ಎಲ್ಲ ಬಿಜೆಪಿ ಅವರ ಪರವಾಗಿತ್ತು. ನಮ್ಮ ಫ್ರೆಂಡ್ಸ್ ಎಲ್ಲಾ ಬ್ಯಾಗ್ ಎಲ್ಲಾ ತೆಗೆದುಕೊಂಡು ಹೋಗಿ ಎಲ್ಲಾ ತರ ಕೆಲಸ ಮಾಡಿದ್ದರು. ಆದರೂ ಮಾನೆ ಇದೀಗ 13 ಸಾವಿರ ವೋಟ್‍ಗಳಿಂದ ಮುಂದಿದ್ದಾರೆ ಎಂದು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಗೆಲುವು – ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ

    ಕಳೆದ ಚುನಾವಣೆಯಲ್ಲಿ ಸಿಂದಗಿಯಲ್ಲಿ ಕಾಂಗ್ರೆಸ್ 3ನೇ ಸ್ಥಾನದಲ್ಲಿತ್ತು. ಅಶೋಕ್ ಮನಗೊಳಿ ಅವರ ಪಕ್ಷದಿಂದ ನಿಲ್ಲುತ್ತೇವೆ ಅಂದಿದ್ದರೆ ನಮ್ಮದೇನು ಇರಲಿಲ್ಲ. ಅವರು ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡುತ್ತೇನೆ ಎಂದರು ನಾವು ಟಿಕೆಟ್ ನೀಡಿದೆವು. ಈ ಬಾರಿ ಸೋತರೂ ಪಕ್ಷದ ಸಾಧನೆ ಉತ್ತಮವಾಗಿದೆ. ಒಳ್ಳೆಯ ಬೆಳವಣಿಗೆ. ಒಟ್ಟಾರೆ ಎರಡೂ ಕ್ಷೇತ್ರದಲ್ಲಿನ ಬದಲಾವಣೆಯನ್ನು ನೋಡಿದರೆ ಜನ ರಾಜ್ಯದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಒಂದು ಬಿಜೆಪಿ ಒಂದು ಜೆಡಿಎಸ್ ಸೀಟ್ ಇತ್ತು ಈಗ ಅದರಲ್ಲಿ ನಮಗೆ ಒಂದು ಸೀಟ್ ಬಂದಿದೆ.

    ಮತದಾರರು ಬಿಜೆಪಿ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಇದು ಕೊರೊನಾ ವಿಚಾರವಾಗಿ ಮಾತ್ರವಲ್ಲ. ಸಂಪೂರ್ಣ ಆಡಳಿತ ವ್ಯವಸ್ಥೆಯಿಂದಾಗಿ ಈ ಪರಿಸ್ಥಿತಿ ಬಂದಿದೆ. ಇದು ಇಡೀ ದೇಶಕ್ಕೆ ಒಂದು ಸಂದೇಶವಾಗಿದೆ ಎಂದು ನುಡಿದರು. ಇದನ್ನೂ ಓದಿ: ಹಾನಗಲ್‌ ಉಪ ಚುನಾವಣೆ: ಕಾಂಗ್ರೆಸ್‌ ಕಾರ್ಯಕರ್ತರಿಂದ ಸಂಭ್ರಮಾಚರಣೆ

  • ಮೊದಲೇ ಪೈಪೋಟಿ ನಿರೀಕ್ಷಿಸಿದ್ದೆವು, ಫಲಿತಾಂಶಕ್ಕೆ ಸಮಯವಿದೆ: ಬೊಮ್ಮಾಯಿ

    ಮೊದಲೇ ಪೈಪೋಟಿ ನಿರೀಕ್ಷಿಸಿದ್ದೆವು, ಫಲಿತಾಂಶಕ್ಕೆ ಸಮಯವಿದೆ: ಬೊಮ್ಮಾಯಿ

    ಮೈಸೂರು: ಹಾವೇರಿಯ ಹಾನಗಲ್‍ನಲ್ಲಿ ಮೊದಲೇ ಪೈಪೋಟಿ ನಿರೀಕ್ಷಿಸಿದ್ದೆವು. ಅಂತಿಮ ಫಲಿತಾಂಶಕ್ಕೆ ಸಮಯವಿದೆ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

    ಹಾನಗಲ್‍ನಲ್ಲಿ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿಗೆ ಹಿನ್ನಡೆಯಾಗಿದ್ದು, ಕಾಂಗ್ರೆಸ್‍ಗೆ ಮುನ್ನಡೆ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು: ಸಿದ್ದರಾಮಯ್ಯ

    ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಲು ಬಂದ ಸಿಎಂ ಮಾಧ್ಯಮಗಳ ಜೊತೆ ಮಾತನಾಡಿ, ಫಲಿತಾಂಶ ಬರಲು ಇನ್ನೂ ಸಮಯವಿದೆ. ಹಾನಗಲ್‍ನಲ್ಲಿ ಈ ರೀತಿಯ ಪೈಪೋಟಿ ನಿರೀಕ್ಷೆಯಲ್ಲಿದ್ದೆವು. ಯಾವಾಗಲೂ ಅಲ್ಲಿ ಪೈಪೋಟಿ ಇರುತ್ತದೆ. ಆದರೆ ಟಿಕೆಟ್ ವ್ಯತ್ಯಾಸದಿಂದ ಪೈಪೈಪೋಟಿಯಲ್ಲ. ಮೊದಲಿನಿಂದಲೂ ಆ ಕ್ಷೇತ್ರ ಪೈಪೋಟಿಯ ಕ್ಷೇತ್ರವಾಗಿದೆ. ಇನ್ನೂ ಬಹಳ ಸುತ್ತುಗಳಿದೆ. ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

    ಉಪಚುನಾವಣೆಗಳು ರಾಜಕೀಯ ಧೃವಿಕರಣವಾಗುವುದಿಲ್ಲ. ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆ ನೋಡಿದ್ದೇವೆ. ಆ ನಿಟ್ಟಿನಲ್ಲಿ ಚರ್ಚೆಯೇ ಸರಿ ಅಲ್ಲ ಎಂದರು. ಇದನ್ನೂ ಓದಿ: ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ – ಕಾಂಗ್ರೆಸ್‌ ಮುನ್ನಡೆ