Tag: by election

  • ಅನ್ನಭಾಗ್ಯ ಯೋಜನೆಯಡಿಯಲ್ಲಿ ಇನ್ಮುಂದೆ 5 ಅಲ್ಲ, 7ಕೆ.ಜಿ ಅಕ್ಕಿ: ಖಾದರ್

    ಅನ್ನಭಾಗ್ಯ ಯೋಜನೆಯಡಿಯಲ್ಲಿ ಇನ್ಮುಂದೆ 5 ಅಲ್ಲ, 7ಕೆ.ಜಿ ಅಕ್ಕಿ: ಖಾದರ್

    ಬೆಂಗಳೂರು: ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆ.ಜಿ ವಿತರಣೆ ಮಾಡುತ್ತಿದ್ದ ಅಕ್ಕಿಯನ್ನು 7ಕೆ.ಜಿಗೆ ಹೆಚ್ಚಳ ಮಾಡಿದ್ದೇವೆ. ಈ ವ್ಯವಸ್ಥೆ ಏಪ್ರಿಲ್ 1ರಿಂದ ರಾಜ್ಯಾದ್ಯಂತ ಜಾರಿಯಾಗಲಿದೆ ಅಂತಾ ಆಹಾರ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.

    ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಡಿತರ ವಿತರಣೆ ಪ್ರತಿ ತಿಂಗಳು 1 ರಿಂದ 15ರೊಳಗೆ ಮಾಡಬೇಕು. ಈ ಹಿಂದೆ ಪಡಿತರವನ್ನು ಪಡೆಯಲು 30 ತಾರೀಕಿನವರೆಗೆ ಅವಕಾಶ ನೀಡಲಾಗಿತ್ತು. ಇದ್ರಿಂದ ಅಂಗಡಿಯವರು ಕ್ಲೋಸಿಂಗ್ ಬ್ಯಾಲೆನ್ಸ್ ಕೊಡುತ್ತಿರಲಿಲ್ಲ. ಹೀಗಾಗಿ ಇನ್ಮುಂದೆ ಜನರು ಪ್ರತಿ ತಿಂಗಳು 15ನೇ ತಾರೀಕಿನೊಳಗೆ ಪಡಿತರ ಪಡೆಯಬೇಕು ಅಂತಾ ಖಾದರ್ ಹೇಳಿದ್ದಾರೆ.

    ಇಂದಿರಾ ಕ್ಯಾಂಟಿನ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ಕಾನ್ ಜೊತೆ ಇನ್ನೂ ಒಪ್ಪಂದ ಆಗಿಲ್ಲ. ವಾರ್ಷಿಕವಾಗಿ ಅಂದಾಜು ನೂರು ಕೋಟಿ ಸರ್ಕಾರಕ್ಕೆ ಹೊರೆಯಾಗುತ್ತದೆ. ಪ್ರಥಮ ಹಂತದಲ್ಲಿ ಒಂದು ಕ್ಯಾಂಟೀನ್ ನಲ್ಲಿ 250 ಜನರಿಗೆ ಮಾತ್ರ ಊಟ, ತಿಂಡಿ ಲಭ್ಯವಾಗುವುದು ಅಂತಾ ಅಂದ್ರು.

    ಇಸ್ಕಾನ್ ಜೊತೆ ಒಪ್ಪಂದ ಇಲ್ಲ: ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಇಸ್ಕಾನ್‍ಗೆ ಗುತ್ತಿಗೆ ನೀಡಲು ಶಾಸಕರು ವಿರೋಧಿಸಿದ್ದಾರೆ. ಇಸ್ಕಾನ್ ನವರು ಈರುಳ್ಳಿ, ಬೆಳ್ಳುಳ್ಳಿ ಬಳಸಲ್ಲ. ಆದ್ರೆ ಸರ್ಕಾರ ಮಾತ್ರ ಈರುಳ್ಳಿ, ಬೆಳ್ಳುಳ್ಳಿ ಬಳಸಬೇಕೆಂದು ಪಟ್ಟು ಹಿಡಿದಿದೆ. 3 ಗಂಟೆ ಮೊದಲು ಆಹಾರ ತಯಾರಿಸಲಾಗುತ್ತದೆ ಅಂತಾ ಇಸ್ಕಾನ್ ನವರು ಹೇಳಿದ್ದಾರೆ. ಹೀಗಾಗಿ ಒಂದು ಕೇಂದ್ರೀಕೃತ ಅಡುಗೆ ಮನೆಗೆ ಬದಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಅಡುಗೆ ಮನೆ ನಿರ್ಮಾಣಕ್ಕೆ ಟೆಂಡರ್ ಕರೆಯಲು ಉದ್ದೇಶಿಸಿದ್ದೇವೆ. ಇನ್ನು ಈ ಬಗ್ಗೆ ಹೋಟೆಲ್ ಉದ್ಯಮಿಗಳ ಜತೆ ಮಾತುಕತೆ ನಡೆಸಿದ್ದೇವೆ ಅಂತಾ ನುಡಿದ್ರು.

    ರಾಂಗ್ ಹೇಳಿಕೆ: ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆಯಲ್ಲಿ ಒಂದು ಮತಕ್ಕೆ ಕಾಂಗ್ರೆಸ್ ಅವರು ನಾಲ್ಕು ಸಾವಿರ ಕೊಡುತ್ತಿದ್ದಾರಂತೆ. ಅವರ ಹತ್ತಿರ ದುಡ್ಡನ್ನು ಇಸ್ಕೊಳ್ಳಿ. ಆದ್ರೆ ಮತ ಮಾತ್ರ ಬಿಜೆಪಿಗೆ ಹಾಕಿ. ಅವರ ಅಪ್ಪನ ಮನೆಯಿಂದ ಕೂಲಿ ಮಾಡಿ ಹಣ ತಂದಿಲ್ಲ ಅವರು ಅಂತಾ ಈಶ್ವರಪ್ಪ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಖಾದರ್, ಇದೊಂದು ರಾಂಗ್ ಸ್ಟೇಟ್ ಮೆಂಟ್. ಇದಕ್ಕೆ ನಗಬೇಕಾ, ರಿಯಾಕ್ಟ್ ಮಾಡಬೇಕೋ ಗೊತ್ತಾಗ್ತಿಲ್ಲ. ನಮ್ಮಲ್ಲಿ ಆ ರೀತಿ ಏನೂ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಚಾಮರಾಜನಗರ ಜಿಲ್ಲೆಗೆ ಭೇಟಿ ಕೊಟ್ಟಿಲ್ಲ. ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಚಾಮರಾಜನಗರಕ್ಕೆ ತೆರಳಿ ಜನರನ್ನು ಮತ ಹಾಕುವಂತೆ ಬೇಡುತ್ತಿದ್ದಾರೆ ಅಂತಾ ಗರಂ ಆದ್ರು.

  • ಬಿಜೆಪಿ ಎಲೆಕ್ಷನ್‍ಗೆ ಜನಾರ್ದನ ರೆಡ್ಡಿಯಿಂದ 500 ಕೋಟಿ ಹಣ:ಎಚ್‍ಡಿಕೆ ಬಾಂಬ್

    ಬಿಜೆಪಿ ಎಲೆಕ್ಷನ್‍ಗೆ ಜನಾರ್ದನ ರೆಡ್ಡಿಯಿಂದ 500 ಕೋಟಿ ಹಣ:ಎಚ್‍ಡಿಕೆ ಬಾಂಬ್

    – ಹಣ ಬರೋದ್ರಿಂದ ಕೋಟ್ಯಂತರ ರೂ. ಆಸ್ತಿ ಕೇಸ್ ವಾಪಸ್
    – ಮೋದಿ, ಅಮಿತ್ ಶಾ ಅಶ್ವಮೇಧ ಯಾಗದ ಕುದುರೆಯನ್ನು ಜೆಡಿಎಸ್ ಕಟ್ಟಿ ಹಾಕುತ್ತೆ

    ಬೆಂಗಳೂರು: ಬಿಜೆಪಿಯ ಚುನಾವಣೆಗೆ 500 ಕೋಟಿ ರೂ. ನೀಡುವ ಷರತ್ತು ಆಗಿರುವ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯವರ ಕೋಟ್ಯಂತರ ರೂ. ಆಸ್ತಿ ಈಗ ವಾಪಸ್ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸ್ವಾಭಿಮಾನಿ ಸಮಾನತೆ ಸಮಾವೇಶದಲ್ಲಿ ಮಾತನಾಡಿದ ಅವರು, ಅಕ್ರಮ ಗಣಿ ವಿಚಾರದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ್ ಹೆಗಡೆ ಕೊಟ್ಟ ವರದಿಗೆ ರಾಜ್ಯ ಸರ್ಕಾರ ಎಳ್ಳು ನೀರು ಬಿಟ್ಟಿದೆ. ಮುಂದಿನ ವಿಧಾನ ಸಭಾ ಚುನಾವಣೆ ಕಾರಣಕ್ಕಾಗಿಯೇ ಜನಾರ್ದನ ರೆಡ್ಡಿ ಕೇಸ್ ಖುಲಾಸೆ ಆಗುತ್ತಿದೆ. ಬಿಜೆಪಿಗೆ ರೆಡ್ಡಿ 500 ಕೋಟಿ ನೀಡುವ ಕಂಡೀಷನ್ ಆದ ಹಿನ್ನೆಲೆಯಲ್ಲಿ ಅವರ ಕೋಟ್ಯಂತರ ರೂ. ಆಸ್ತಿ ವಾಪಸ್ ಆಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

    ಮೋದಿ ಹಿಂದೆ ಹೋಗ್ಬೇಡಿ: ಪ್ರಧಾನಿ ಮೋದಿಯನ್ನು ಕಿಂದರಿ ಜೋಗಿಗೆ ಹೋಲಿಸಿದ ಕುಮಾರಸ್ವಾಮಿ, ಜನರು ಎಚ್ಚರಿಕೆಯಿಂದ ಇರಬೇಕು. ಎಲ್ಲೋ ಜೋಗಪ್ಪ ನಿನ್ನ ಅರಮನೆ ಎಂಬ ಹಾಡಿನಂತೆ ಮೋದಿ ಕಥೆಯಿದ್ದು ಪ್ರಧಾನಿಯನ್ನು ನಂಬಿ ಹಿಂದೆ ಹೋದರೆ ಎಲ್ಲ ಬಿಟ್ಟು ಹೋಗಬೇಕಾಗುತ್ತದೆ. ಯಾರು ಮೋದಿಯನ್ನ ನಂಬಬೇಡಿ. ‘ಫಸಲ್ ಭೀಮಾ’ ರೈತರಿಗೆ ಟೋಪಿ ಹಾಕುವ ಯೋಜನೆಯಾಗಿದ್ದು ಹಣ ಕಟ್ಟಿದ ರೈತರು ಬೆಳೆ ವಿಮೆ ಕೇಳಿದ್ರೆ ಉತ್ತರವಿಲ್ಲ. ವಿಮಾ ಕಂಪೆನಿಯನ್ನು ಕೇಳಿ ಎನ್ನುತ್ತಿದ್ದಾರೆ. ಕೇಂದ್ರ ನಯಾ ಪೈಸೆ ಕಟ್ಟಿಲ್ಲ. ಮೋದಿ ಕನಸನ್ನ ಕಟ್ಟಿ, ಮಾರಾಟ ಮಾಡಿ ವಿರೋಧಿ ಪಕ್ಷ ಹತ್ತಿಕ್ಕುತ್ತಿದ್ದಾರೆ ಎಂದು ಟೀಕಿಸಿದರು.

    ಒಂದು ಬಾರಿ ಅವಕಾಶ ನೀಡಿ: ತಮಿಳುನಾಡು, ಆಂದ್ರಕ್ಕೆ ಸಿಕ್ಕ ಮನ್ನಣೆ ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಸಿಗುತ್ತಿಲ್ಲ. ಪ್ರಾದೇಶಿಕ ಪಕ್ಷ ನಮಗೆ ಅಧಿಕಾರ ಕೊಡಿ. ನಾವು ಜನರಿಗೆ ಮಾಡಿದ ದ್ರೋಹ ಏನು, ಯಾಕೆ ನಮಗೆ ಶಿಕ್ಷೆ ನೀಡುತ್ತಿದ್ದೀರಿ. ಊರಿಗೊಂದು ಪ್ರಾಧಿಕಾರ ಮಾಡಿ ಯಾರಪ್ಪನ ಮನೆ ದುಡ್ಡೋ ಎಂಬಂತೆ ದುಂದುವೆಚ್ಚ ಮಾಡಲಾಗುತ್ತಿದೆ. ಜಾತಿ ಹೆಸರಿನ ರಾಜಕಾರಣದ ಮೋಹಕ್ಕೆ ಒಳಗಾಗಬೇಡಿ ಒಮ್ಮೆ ಅವಕಾಶ ನೀಡಿ. ಇದು ಅಳಿವು ಉಳುವಿನ ಪ್ರಶ್ನೆಯಾಗಿದ್ದು ಕಾಂಗ್ರೆಸ್ ಬಿಜೆಪಿ ಅವರು ನಾವೇ ಅಧಿಕಾರಕ್ಕೆ ಬರುತ್ತಿದ್ದೇವೆ ಅಂತಿದ್ದಾರೆ. ನೀವು ನಿರ್ಧಾರ ಮಾಡಿ ಕುಮಾರಣ್ಣ ಮುಖ್ಯಮಂತ್ರಿ ಮಾಡಲು ನೀವು ಶ್ರಮ ಹಾಕಿ. ಇನ್ನು 10 ತಿಂಗಳು ಜನರ ಬಳಿ ಹೋಗಿ ನಮ್ಮ ಕಾರ್ಯಕ್ರಮ ಬಗ್ಗೆ ಹೇಳಿ. ಒಂದು ಬಾರಿ ಜೆಡಿಎಸ್ ಗೆ ಅವಕಾಶ ನೀಡಿ ಎಚ್‍ಡಿಕೆ ಮನವಿ ಮಾಡಿದರು.

    ಲೂಟಿ ಹಣ ಬಳಕೆ: ರಾಜ್ಯದಲ್ಲಿ ಜೆಡಿಎಸ್ ಅತಿಹೆಚ್ಚು ಉಪಚುನಾವಣೆ ಗೆದ್ದಿದೆ. ಉಪಚುನಾವಣೆಯಲ್ಲಿ ನಮಗೆ ಯಾವುದೇ ಹೆದರಿಕೆಯಿಂದ ಅಲ್ಲ. ಆದರೆ ರಾಷ್ಟ್ರೀಯ ಪಕ್ಷಗಳು ಲೂಟಿ ಮಾಡಿದ ಪಾಪದ ಹಣವನ್ನು ಉಪಚುನಾವಣೆಯಲ್ಲಿ ಬಳಕೆ ಮಾಡುತ್ತಿದ್ದಾರೆ. ಲೂಟಿ ಮಾಡಿದ ಹಣ ಬಳಕೆಯಾಗುತ್ತಿದೆ ಎಂದು ಅಲ್ಲಿನ ಕಾರ್ಯಕರ್ತರೇ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ನಾವು ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ ಎಂದು ಎಚ್‍ಡಿಕೆ ಹೇಳಿದರು.

    ಉತ್ತರ ಪ್ರದೇಶದ ಬಳಿಕ ಬಿಜೆಪಿ ರಾಷ್ಟ್ರೀಯ ಮುಖಂಡರು ರಾಜ್ಯಕ್ಕೆ ಬರುತ್ತಾರಂತೆ. ಬಿಜೆಪಿಯವರು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂದು ಕನಸು ಕಾಣುತ್ತಿದ್ದಾರೆ. ಜನ ಇದಕ್ಕೆ ಉತ್ತರ ನೀಡ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ದ್ರೋಹ ಮಾಡಿದ್ದು ಕೆಲ ಮಾಧ್ಯಮಗಳು ಕಾಂಗ್ರೆಸ್, ಜೆಡಿಎಸ್ ಘಟಬಂಧನ್ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಆದ್ರೆ ಅಂತಹ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಏಕಾಂಗಿ ಯಾಗಿ ಸ್ಪರ್ಧೆ ಮಾಡಿ ಮೋದಿ, ಅಮಿತ್ ಶಾ ಅವರ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ ಹಾಕುತ್ತೇವೆ ಎಂದು ಮತ್ತೊಮ್ಮೆ ಹೇಳಿದರು.

    ಇಬ್ರಿಗೆ ಕೆಲ್ಸ ಇಲ್ಲ: ರಾಜ್ಯದಲ್ಲಿ ಒಬ್ಬರು ಡೈರಿ ಹೇಳುತ್ತಾರೆ. ಇನ್ನೊಬ್ಬರು ಸಿಡಿ ಬಿಡುಗಡೆ ಮಾಡ್ತಾರೆ. ಇಬ್ಬರಿಗೂ ಬೇರೆ ಕೆಲಸ ಇಲ್ಲ. 10 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ರಸ್ತೆಯಲ್ಲಿ ಮಲಗುವ ಸ್ಥಿತಿ ಬಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕೇಂದ್ರ, ರಾಜ್ಯ ಸರ್ಕಾರದ ಬಗ್ಗೆ ರಾಜಕಾರಣದ ಮಾತುಗಳನ್ನು ಆಡುತ್ತಿವೆ. ಇಂತಹ ಆಡಳಿತ ರಾಜ್ಯಕ್ಕೆ ಬೇಕಾ ಎಂದು ಅವರು ಪ್ರಶ್ನಿಸಿದರು.

    ಸಮಯ ಇಲ್ಲ: 2008ರ ಚುನಾವಣೆಯಲ್ಲಿ, ದೇವರ ಪೂಜೆ ವೇಳೆ ನನ್ನ ಹೆಸರಲ್ಲಿ ದೇವರಿಗೆ ಒಂದು ಹೂ ಹಾಕಿ ಎಂದು ಮಹಿಳೆಯರಲ್ಲಿ ಬಿಎಸ್ ಯಡಿಯೂರಪ್ಪ ಹೇಳಿದ್ದರು. ಈಗ ಯಡಿಯೂರಪ್ಪ ಅವರಿಗೆ ಸಮಯ ಇಲ್ಲ. ಪ್ರತಿಭಟನಾ ನಿರತ ಮಹಿಳೆಯರನ್ನ ಭೇಟಿ ಮಾಡದೇ ಉಪಚುನಾವಣೆಯಲ್ಲಿ ಬ್ಯುಸಿ ಆಗಿದ್ದಾರೆ ಎಂದು ಎಚ್‍ಡಿಕೆ ವಾಗ್ದಾಳಿ ನಡೆಸಿದರು.

    ಬಿಜೆಪಿ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇವೆ ಎಂದು ಬಿಎಸ್‍ವೈ ಹೇಳುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಬೀದರ್ ರೈತನ ಮನೆಯಲ್ಲಿ ಊಟ ಮಾಡಿದಾಗ ರೈತರ ಸಾಲ ಮನ್ನಾ ಮಾಡುವ ತೀರ್ಮಾನ ಮಾಡಿದ್ದೆ. ಆದರೆ ಬಿಎಸ್‍ವೈ ದುಡ್ಡಿಲ್ಲ, ಸಾಲ ಮನ್ನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ರೈತರ ಸಾಲ ಮನ್ನಾ ಬಗ್ಗೆ ಕ್ಯಾಬಿನೆಟ್ ನಲ್ಲಿ ವಿರೋಧಿಸಿದ್ದರು. ಈಗ ಬಿಎಸ್ ವೈ ಯಾವ ನೈತಿಕತೆ ಇಟ್ಟುಕೊಂಡು ಎರಡು ಬಾರಿ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

    ಜೂನ್‍ನಲ್ಲಿ ಪಾದಯಾತ್ರೆ: ಜೂನ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುತ್ತೇನೆ. ರಾಜ್ಯದ ಅನ್ಯಾಯದ ಕೆಲಸದ ಬಗ್ಗೆ ಪಾದಯಾತ್ರೆ ಮೂಲಕ ಜನರಿಗೆ ತಿಳಿಸುತ್ತೇನೆ ಎಂದು ಈ ವೇಳೆ ಹೇಳಿದರು.

  • ಸೋಶಿಯಲ್ ಮೀಡಿಯಾಗೆ ಎಚ್‍ಡಿಕೆ ಎಂಟ್ರಿ: ಏನ್ ಮಾಡ್ತಾರೆ? ಎಷ್ಟು ಜನ ಇದ್ದಾರೆ?

    ಸೋಶಿಯಲ್ ಮೀಡಿಯಾಗೆ ಎಚ್‍ಡಿಕೆ ಎಂಟ್ರಿ: ಏನ್ ಮಾಡ್ತಾರೆ? ಎಷ್ಟು ಜನ ಇದ್ದಾರೆ?

    ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಇಂದು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.

    `ನಮ್ಮ ಕುಮಾರಣ್ಣ’ ಅನ್ನೋ ಶೀರ್ಷಿಕೆಯಲ್ಲಿ ಅಧಿಕೃತವಾಗಿ 5 ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿರುವ ಅವರು, ಇನ್ಮುಂದೆ ಫೇಸ್ ಬುಕ್, ಟ್ವೀಟರ್, ಗೂಗಲ್ ಪ್ಲಸ್, ಯೂಟ್ಯೂಬ್, ಸೌಂಡ್ ಕ್ಲೌಡ್‍ಗಳಲ್ಲಿ ಸಕ್ರಿಯನಾಗಿರುವುದಾಗಿ ತಿಳಿಸಿದ್ದಾರೆ.

    ಇಂದಿನಿಂದಲೇ ಜನರ ನಡುವೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ, ಸಂವಹನ ಮಾಡುತ್ತೇನೆ. ಈ ಜಾಲತಾಣದಲ್ಲಿ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿ ಮಾಡಿದ ಕೆಲಸ ಸೇರಿದಂತೆ ಅನೇಕ ವಿಚಾರಗಳನ್ನು ಹಂಚಿಕೊಳ್ತೇನೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಗ್ರಾಮವಾಸ್ತವ್ಯಗಳನ್ನು ಮಾಡಿದ್ದೆ. ಈ ಬಗ್ಗೆಯೂ ಜನರ ಜತೆ ಹಂಚಿಕೊಳ್ತೇನೆ ಅಂತಾ ಹೇಳಿದ್ದಾರೆ.

    ಯುಪಿಯಂತೇ ಇಲ್ಲೂ ಪ್ರಚಾರ: ಯುಪಿ ಎಲೆಕ್ಷನ್ ನಲ್ಲಿ ಮೋದಿ ಬೆಂಬಲಿಗರು ವಾಟ್ಸಪ್ ಮೂಲಕ ಪ್ರಚಾರ ನಡೆಸಿದರು. ಅದೇ ರೀತಿ ರಾಜ್ಯದಲ್ಲೂ ನಾವು ಪ್ರಚಾರ ಮಾಡ್ತೇವೆ. ಆದ್ರೆ ಇದು ಮೋದಿ ಅನುಕರಣೆ ಅಲ್ಲ. ತಿಂಗಳಲ್ಲಿ ಒಂದು ದಿನ 3ರಿಂದ 4 ಗಂಟೆ ನಾನು ಫೇಸ್ ಬುಕ್, ಗೂಗಲ್ ಫ್ಲಸ್ ನಲ್ಲಿ ಜನ್ರ ಜೊತೆ ನಾನೇ ನೇರ ಸಂಪರ್ಕದಲ್ಲಿ ಇರುತ್ತೇನೆ. ನಾನು ಜನಪ್ರತಿನಿಧಿ ಆಗಿರೋವರೆಗೋ ನಾನು ಸೋಷಿಯಲ್ ಮೀಡಿಯಾದಲ್ಲಿ ಇರುತ್ತೇನೆ. ಸೋಷಿಯಲ್ ಮೀಡಿಯಾದ ಮಹತ್ವ ನನಗೆ ಅರ್ಥ ಆಗಿದೆ. ಈಗಾಗಲೇ ನನ್ನ ಜತೆ ಸಾಮಾಜಿಕ ಜಾಲತಾಣದ ಕಾರ್ಯನಿರ್ವಹಣೆಗೆ 35 ಮಂದಿ ಟೀಂ ಇದೆ ಅಂತಾ ನುಡಿದ್ರು.

    ಮೊದಲ ಟ್ವೀಟ್: ಎರಡು ದಾರಿಗಳು ಎದುರಾದವು, ಆ ದಟ್ಟನೆಯ ಕಾಡಿನಲ್ಲಿ ನಾನು ಆಯ್ದುಕೊಂಡೆ ಹೆಚ್ಚು ಜನರು ನಡೆಯದ ಹಾದಿಯನ್ನು ಅದೇ ಅದೇ ವ್ಯತ್ಯಾಸ ಎಲ್ಲದಕ್ಕೂ ಅಂತಾ ರಾಬರ್ಟ್ ಫ್ರಾಸ್ಟ್ ಅವರ ಕವಿತೆಯ ಉಲ್ಲೇಖೀಸಿ ಟ್ವೀಟ್‍ಗೆ ಮುಂದಡಿಯಿಟ್ಟರು.

    ಇದನ್ನೂ ಓದಿ: ಮೋದಿ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕೋದೇ ಜೆಡಿಎಸ್: ಎಚ್‍ಡಿಕೆ

  • ರೋಡ್ ಶೋನಲ್ಲಿ ಭಾಗವಹಿಸಲು ಬಂದಿದ್ದ ಕೈ ಕಾರ್ಯಕರ್ತರಿಗೆ ಪೆಟ್ರೋಲ್ ಭಾಗ್ಯ!

    ರೋಡ್ ಶೋನಲ್ಲಿ ಭಾಗವಹಿಸಲು ಬಂದಿದ್ದ ಕೈ ಕಾರ್ಯಕರ್ತರಿಗೆ ಪೆಟ್ರೋಲ್ ಭಾಗ್ಯ!

    ಚಾಮರಾಜನಗರ: ರೋಡ್ ಶೋನಲ್ಲಿ ಭಾಗವಹಿಸಲು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಪೆಟ್ರೋಲ್ ಭಾಗ್ಯ ಸಿಕ್ಕಿದೆ.

    ಹೌದು. ಗುಂಡ್ಲುಪೇಟೆಯ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ರೋಡ್ ಶೋ ಆಯೋಜಿಸಿತ್ತು. ಈ ರೋಡ್ ಶೋದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕಾರ್ಯಕರ್ತರಿಗೆ 1 ಲೀಟರ್ ಉಚಿತ ಪೆಟ್ರೋಲ್ ಸಿಕ್ಕಿದೆ.

    ಉಚಿತ ಪೆಟ್ರೋಲ್ ನೀಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಟೋಕನ್ ಹಂಚಿತ್ತು. ಈ ಕಾರ್ಯಕರ್ತರು ಬಂಕ್‍ನಲ್ಲಿ ಟೋಕನ್ ತೋರಿಸಿ ಪೆಟ್ರೋಲ್ ಹಾಕಿಸುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಹಾಕಿದ ಬಳಿಕ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದರು.

    ರೋಡ್ ಶೋದಲ್ಲಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸಚಿವರಾದ ಯುಟಿ ಖಾದರ್, ಬಸವರಾಜ ರಾಯರೆಡ್ಡಿ, ತನ್ವೀರ್ ಸೇಠ್, ಸಿಎಂ ಇಬ್ರಾಹಿಂ, ಸಂಸದ  ಧ್ರುವನಾರಾಯಣ, ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್ ಪಾಲ್ಗೊಂಡಿದ್ದರು.

    ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಿಗೆ ಏಪ್ರಿಲ್ 9ಕ್ಕೆ ಉಪಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ನಂಜನಗೂಡು ಕ್ಷೇತ್ರ ತೆರವಾಗಿದ್ದರೆ, ಮಹದೇವ್ ಪ್ರಸಾದ್ ನಿಧನದಿಂದ ಗುಂಡ್ಲುಪೇಟೆ ಕ್ಷೇತ್ರ ತೆರವಾಗಿದೆ.

    https://www.youtube.com/watch?v=NdGSmJ5EBIY

     

     

  • ಏಪ್ರಿಲ್ 9ಕ್ಕೆ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ

    ಏಪ್ರಿಲ್ 9ಕ್ಕೆ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ

    ನವದೆಹಲಿ: ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

    ಏಪ್ರಿಲ್ 9ಕ್ಕೆ ಉಪಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ 14ರಿಂದ ಅಧಿಸೂಚನೆ ಜಾರಿಯಾಗಲಿದ್ದು, ನಾಮಪತ್ರ ಸಲ್ಲಿಸಲು ಮಾರ್ಚ್ 21ರಂದು ಕೊನೆ ದಿನಾಂಕವಾಗಿದೆ.

    ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ನಂಜನಗೂಡು ಕ್ಷೇತ್ರ ತೆರವಾಗಿದ್ದರೆ, ಮಹದೇವ್ ಪ್ರಸಾದ್ ನಿಧನದಿಂದ ಗುಂಡ್ಲುಪೇಟೆ ಕ್ಷೇತ್ರ ತೆರವಾಗಿತ್ತು.