Tag: by election

  • ಗುಂಡ್ಲುಪೇಟೆ, ನಂಜನಗೂಡಲ್ಲಿ ಬಿಜೆಪಿಗೆ ಹಿನ್ನಡೆ – ಸೋಲಿಗೆ ಕಾರಣ ಕೊಡುವಂತೆ ಉಸ್ತುವಾರಿಗಳಿಗೆ ಸೂಚನೆ

    ಗುಂಡ್ಲುಪೇಟೆ, ನಂಜನಗೂಡಲ್ಲಿ ಬಿಜೆಪಿಗೆ ಹಿನ್ನಡೆ – ಸೋಲಿಗೆ ಕಾರಣ ಕೊಡುವಂತೆ ಉಸ್ತುವಾರಿಗಳಿಗೆ ಸೂಚನೆ

    ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ, ಪ್ರತಿಷ್ಠೆಯ ಪ್ರಶ್ನೆ ಎಂದೇ ಪರಿಗಣಿಸಲಾಗಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಕಮಲ ಪಾಳಯ ಈಗ ಕಾರಣ ಹುಡುಕಲು ಮುಂದಾಗಿದೆ.

    ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಪರಾಭವಕ್ಕೆ ಮೂಲವಾಗಿದ್ದು ಏನು ಎಂಬ ಬಗ್ಗೆ ವಿವರಣೆ ನೀಡುವಂತೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಚುನಾವಣಾ ಉಸ್ತುವಾರಿ ಹೊತ್ತಿದ್ದ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.

    ನಂಜನಗೂಡಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್‍ರನ್ನು ಗೆಲ್ಲಿಸುವ ಹೊಣೆಗಾರಿಕೆ ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ವಿ ಸೋಮಣ್ಣ ಮೇಲಿತ್ತು. ಅದೇ ರೀತಿ ಗುಂಡ್ಲುಪೇಟೆಯ ಜವಾಬ್ದಾರಿಯನ್ನು ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಸಿ.ಟಿ.ರವಿಗೆ ಹಂಚಲಾಗಿತ್ತು. ಈಗ ಈ ನಾಲ್ವರೂ ಪಕ್ಷ ಯಾಕೆ ಮುಗ್ಗುರಿಸಿತು ಎಂಬ ಬಗ್ಗೆ ಕಾರಣಗಳನ್ನು ಪಟ್ಟಿ ಸಲ್ಲಿಸಬೇಕಾಗಿದೆ. ಆ ವರದಿಯನ್ನು ಆಧರಿಸಿ ಯಡಿಯೂರಪ್ಪ ಹೈಕಮಾಂಡ್‍ಗೆ ವಿವರಣೆ ನೀಡಲಿದ್ದಾರೆ.

    ಇತ್ತ ವಿಜಯದ ಖುಷಿಯಲ್ಲಿ ಬೀಗುತ್ತಿರುವ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಇವರಿಗೆ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಮತ್ತು ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಾಥ್ ನೀಡಲಿದ್ದಾರೆ.

  • 2018ರ ಏಪ್ರಿಲ್‍ನಲ್ಲಿ ಫೇಸ್‍ಬುಕ್ ಗೋಡೆ ಅಭಿನಂದನೆಗಳಿಂದ ತುಂಬಿರುತ್ತೆ: ಪ್ರತಾಪ್ ಸಿಂಹ

    2018ರ ಏಪ್ರಿಲ್‍ನಲ್ಲಿ ಫೇಸ್‍ಬುಕ್ ಗೋಡೆ ಅಭಿನಂದನೆಗಳಿಂದ ತುಂಬಿರುತ್ತೆ: ಪ್ರತಾಪ್ ಸಿಂಹ

    ಮೈಸೂರು: ಮುಂದಿನ ವರ್ಷ ಏಪ್ರಿಲ್‍ನಲ್ಲಿ ನಿಮ್ಮ ಫೇಸ್‍ಬುಕ್ ಗೋಡೆಯಲ್ಲಿ ಅಭಿನಂದನೆಗಳಿಂದ ತುಂಬಿರುತ್ತದೆ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

    ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯ ಫಲಿತಾಂಶದ ಬಳಿಕ ಪ್ರತಾಪ್ ಸಿಂಹ ಪೋಸ್ಟ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ. ಇದಕ್ಕೂ ಮುನ್ನಾ, ಕಾಂಗ್ರೆಸ್‍ಗೆ ಅಭಿನಂದನೆಗಳು, ವಿಶೇಷವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

    ಪ್ರತಾಪ್ ಸಿಂಹ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿರುವ ಸಾಲುಗಳು
    “ಒಂದು ಸೋಲಿಗೋಸ್ಕರ ಆಳಿಗೊಂದರಂತೆ ಕಲ್ಲು ಹೊಡೆಯುವ ಪ್ರವೃತ್ತಿ ಒಳ್ಳೆಯದಲ್ಲ. ಸತತ ಸೋಲುಗಳನ್ನು ಹಾಗು ಸ್ವಂತ ಸೋಲನ್ನು ಜೀರ್ಣಿಸಿಕೊಂಡು ಇದೆ ಯಡಿಯೂರಪ್ಪನವರು 2008ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೇಶಾದ್ಯಂತ ನೆಲಕಚ್ಚಿದಾಗಲೂ ಬಿ.ಎಸ್.ವೈ. ಕರ್ನಾಟಕದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 19 ಎಂಪಿ ಸೀಟ್ ಗೆಲ್ಲಿಸಿದ್ದರು ಎಂಬುದನ್ನು ಮರೆತು ಮಾತನಾಡಬೇಡಿ. ಈ ಸೋಲನ್ನು ಪಾಠವಾಗಿ ಖಂಡಿತ ತೆಗೆದುಕೊಳ್ಳುತ್ತೇವೆ. ಮುಂದಿನ ವರ್ಷ ಇದೆ ಏಪ್ರಿಲ್ ನಲ್ಲಿ ನಿಮ್ಮ ಫೇಸ್‍ಬುಕ್ ಗೋಡೆ ಅಭಿನಂದನೆಗಳಿಂದ ತುಂಬಿರುತ್ತದೆ. ನಿಮ್ಮ ಆಶೀರ್ವಾದದೊಂದಿಗೆ ವಿಶ್ವಾಸವಿಡಿ. ಸೋತ ಈ ಕ್ಷಣದಲ್ಲಿ ನಮಗೆ ಆತ್ಮವಿಶ್ವಾಸ ತುಂಬಿ” ಎಂದು ಬರೆದುಕೊಂಡಿದ್ದಾರೆ.

     

     

     

     

  • 13ನೇ ಚುನಾವಣೆ ನನ್ನ ಕೊನೇ ಚುನಾವಣೆ ಹಾಗಂತ ದುಃಖ ಅನ್ನೋದು ನನ್ನ ಡಿಕ್ಷನರಿಯಿಲ್ಲಿಲ್ಲ: ಶ್ರೀನಿವಾಸ್ ಪ್ರಸಾದ್

    13ನೇ ಚುನಾವಣೆ ನನ್ನ ಕೊನೇ ಚುನಾವಣೆ ಹಾಗಂತ ದುಃಖ ಅನ್ನೋದು ನನ್ನ ಡಿಕ್ಷನರಿಯಿಲ್ಲಿಲ್ಲ: ಶ್ರೀನಿವಾಸ್ ಪ್ರಸಾದ್

    ಮೈಸೂರು: 13ನೇ ಚುನಾವಣೆ ನನ್ನ ಕೊನೆಯ ಚುನಾವಣೆ. ಹಾಗಂತ ದುಃಖ ಅನ್ನೋದು ನನ್ನ ಡಿಕ್ಷನರಿಯಿಲ್ಲಿಲ್ಲ ಎಂದು ನಂಜನಗೂಡು ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.

    ಫಲಿತಾಂಶದ ಬಳಿಕ ಮೈಸೂರಿನ ತಮ್ಮ ನಿವಾಸಲ್ಲಿ ಕರೆದ ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಇದು ಅನಿರೀಕ್ಷಿತ ಫಲಿತಾಂಶ. ಮೂರು ದಿನದವರೆಗೂ ಎಲ್ಲ ಸಮೀಕ್ಷೆ ನನಗೆ ಗೆಲುವು ಅಂತಿತ್ತು, ಈಗ ಸೋಲಾಗಿದೆ. ಇದು ಜನರ ತೀರ್ಪು, ಒಪ್ಪಲೇಬೇಕು. ಇದನ್ನ ಕಾಂಗ್ರೆಸ್ ಸಾಧನೆ, ವರ್ಚಸ್ಸು ಅಂತಿದ್ದಾರೆ. ಆದ್ರೆ ಉಪಚುನಾವಣೆ ಯಾಕೆ ಬಂತು ಎಂದು ನೋಡಬೇಕು. ಸಂಪುಟ ಪನಾರಚನೆ ಮಾಡುವಾಗ 14 ಮಂತ್ರಿಗಳನ್ನ ಕೈಬಿಟ್ರು. ಪರಿಣಾಮಕಾರಿ ಸರ್ಕಾರ ಬೇಕು ಎಂದು ಕೈಬಿಟ್ರು. ಆಗ ಅವರನ್ನ ನೀವು ಪರಿಣಾಮಕಾರಿ ಮಂತ್ರಿಮಂಡಲ ಮಾಡಿದ್ದೀರಾ? ಎಂದು ಕೇಳಿದೆ. ಆದ್ರೆ ಉತ್ತರ ಕೊಡಲಿಲ್ಲ. ರಾಜೀನಾಮೆ ಕೊಡೋದು ಬಹಳ ಕಡಿಮೆ, ನಾನು ರಾಜೀನಾಮೆ ನೀಡಿದೆ. ನನ್ನ ರಾಜಕೀಯ ಜೀವನದಲ್ಲಿ ಯಾರಿಗೂ ತಲೆಬಾಗದೆ ಪ್ರಾಮಾಣಿಕವಾಗಿ ನಡೆದುಕೊಂಡು ಬಂದಿದ್ದೇನೆ ಅಂದ್ರು.

    ನಾನು ಸ್ವಾಭಿಮಾನದ ಕಿಚ್ಚನ್ನ ರಾಜಕೀಯದಲ್ಲಿ ಹಚ್ಚಿದ್ದೇನೆ. 13 ನೇ ಚುನಾವಣೆ ನನ್ನ ಕೊನೆಯ ಚುನಾವಣೆ. ಚುನಾವಣೆಗಳು ನನಗೆ ಸಾಕಾಗಿದೆ. ದುಃಖವೆಂಬುದು ನನ್ನ ಡಿಕ್ಷನರಿಯಲ್ಲಿ ಇಲ್ಲ. ಸ್ವಾಭಿಮಾನದ ಸಂದೇಶವನ್ನ ಇಡೀ ರಾಜ್ಯದ ರಾಜಕೀಯಕ್ಕೆ ನೀಡಿದ್ದೇನೆ ಅಂತ ಹೇಳಿದ್ರು.

    ನನ್ನ ಮನೆ ಬಾಗಿಲಿಗೆ ಬಂದಿದ್ದನ್ನ ಮರೆತುಬಿಟ್ರ: ಸುದ್ಧಿಗೋಷ್ಠಿಯುದ್ದಕ್ಕೂ ಸಿಎಂ ವಿರುದ್ಧ ಟೀಕಾಪ್ರಹಾರ ನಡೆಸಿದ ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯನವರೇ ನಾನು ನಿಮಗೆ ಸಹಾಯ ಮಾಡಲಿಲ್ಲವೇ? ಸೋನಿಯಾಗಾಂಧಿಯವರೇ ಸ್ವತಃ ಹೇಳಿ ಕಳುಹಿಸಿದ್ರು ಸಿದ್ದರಾಮಯ್ಯ ಅವರಿಗೆ ಸಪೋರ್ಟ್ ಮಾಡಿ ಅಂತಾ. ನನ್ನ ಮನೆ ಬಾಗಿಲಿಗೆ ಬಂದಿದ್ದನ್ನ ಮರೆತುಬಿಟ್ರ ಸಿದ್ದರಾಮಯ್ಯ? ನಾನು ನಿರ್ವಹಿಸಿದ ಇಲಾಖೆಯಲ್ಲಿ ಏನು ಆಪಾದನೆ ಇದೆ ಹೇಳಿ. ನನ್ನ ಇಲಾಖೆಯಲ್ಲಿ ಏನು ಮಾಡಿದ್ದೇನೆ ಎಂದು ನಾನು ಚರ್ಚೆಗೆ ಸಿದ್ಧ. ನೀವು ಸಿದ್ಧರಿದ್ದರೆ ಚರ್ಚೆಗೆ ಬನ್ನಿ ಅಂತ ಸವಾಲು ಹಾಕಿದ್ರು. ಸಿದ್ಧರಾಮಯ್ಯ ನನಗೋ ಸ್ವಾರ್ಥವೂ ನಿನಗೋ? ತನ್ನ ಮಗನನ್ನ ಮಂತ್ರಿ ಮಾಡಿದ ಖರ್ಗೆ ಸ್ವಾರ್ಥಿಯೋ, ನಾನು ಸ್ವಾರ್ಥಿಯೋ? ಎಂದು ವಾಗ್ದಾಳಿ ನಡೆಸಿದರು.

    ಭ್ರಷ್ಟಾಚಾರದಲ್ಲಿ ದಾಖಲೆ ಮಾಡಿದ್ರು: ಈ ಉಪ ಚುನಾವಣೆ ಕರ್ನಾಟಕದಲ್ಲಿ ನಡೆದ ಎಲ್ಲ ಉಪಚುನಾವಣೆಗಿಂತ ವಿಶೇಷವಾದದ್ದು. ನನಗೆ ಬಹಳ ಸಂತೋಷ, ನಾನು ಸ್ವಾಭಿಮಾನ ನಿರ್ಧಾರ ತೆಗೆದುಕೊಂಡೆ. ಹೌದು ಸ್ವಾಭಿಮಾನಕ್ಕೆ ಸೋಲಾಗಿದೆ, ಆದ್ರೆ ಜನ ಸ್ವಾಭಿಮಾನ ಮೆಚ್ಚಿದ್ದಾರೆ. ಸರ್ಕಾರ ಮೂರು ದಿನಗಳಿಂದ ಯಾವ ವಾಮಮಾರ್ಗ ಅನಿಸರಿಸಿತು, ಕೆಂಪಯ್ಯ ಯಾವ ರೀತಿ ದುರ್ಬಳಕೆ ಮಾಡಿಕೊಂಡಿದ್ದಾರೆ, ಯಾವ ರೀತಿ ಹಣ ಹಂಚಿಕೆ ಮಾಡಿದ್ದಾರೆ ಎಲ್ಲರಿಗೂ ಗೊತ್ತು. ಆದ್ರೆ ಮತದಾನದ ಪಾವಿತ್ರ್ಯತೆ ಹಾಳು ಮಾಡಿದ್ರು. ಗೆದ್ದಿದ್ದಾರೆ ನಿಜ, ಆದ್ರೆ ಯಾವ ರೀತಿ ಗೆದ್ದರು. ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ದಾಖಲೆ ಮಾಡಿದ್ರು. ಸ್ವಾಭಿಮಾನದ ಸಂದೇಶವನ್ನ ಇಡೀ ರಾಜ್ಯದ ರಾಜಕೀಯಕ್ಕೆ ನೀಡಿದ್ದೇನೆ. ಆಮಿಷಕ್ಕೆ ಒಳಗಾಗದೇ ಮತ ನೀಡಿದವರಿಗೆ ಧನ್ಯವಾದ ಅಂತ ಶ್ರೀನಿವಾಸ್ ಪ್ರಸಾದ್ ಹೇಳಿದ್ರು.

    ನಂಜನಗೂಡು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ 21334 ಮತಗಳಿಂದ ಜಯಗಳಿಸಿದ್ದಾರೆ. ಕಳಲೆ ಕೇಶವಮೂರ್ತಿ ಅವರಿಗೆ 86,212 ಮತಗಳು ಸಿಕ್ಕಿದ್ದರೆ ಬಿಜೆಪಿಯ ವಿ.ಶ್ರೀನಿವಾಸ್ ಪ್ರಸಾದ್‍ಗೆ 64,878 ಮತಗಳು ಲಭಿಸಿವೆ. 1,665 ನೋಟ ಮತಗಳು ಬಿದ್ದಿವೆ.

     

     

     

  • ಪತಿಯ ಅಭಿವೃದ್ಧಿ ಕೆಲ್ಸದಿಂದ ಗೆದ್ದಿದ್ದೇನೆ: ಪ್ರತಾಪ್ ಸಿಂಹಗೆ ಗೀತಾ ಮಹಾದೇವ್‍ಪ್ರಸಾದ್ ಟಾಂಗ್

    ಪತಿಯ ಅಭಿವೃದ್ಧಿ ಕೆಲ್ಸದಿಂದ ಗೆದ್ದಿದ್ದೇನೆ: ಪ್ರತಾಪ್ ಸಿಂಹಗೆ ಗೀತಾ ಮಹಾದೇವ್‍ಪ್ರಸಾದ್ ಟಾಂಗ್

    ಗುಂಡ್ಲುಪೇಟೆ: ಮಹಾದೇವ ಪ್ರಸಾದ್ ಅವರ ಅಭಿವೃದ್ಧಿ ಕೆಲಸಗಳಿಂದಾಗಿ ನಾನು ಜಯಗಳಿಸಿದ್ದೇನೆ ಎಂದು ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್ ಹೇಳಿದ್ದಾರೆ.

    ನಾನು ಗೆಲುವನ್ನು ನಿರೀಕ್ಷೆ ಮಾಡಿದ್ದೆ. ನಿರೀಕ್ಷೆಯಂತೆ ಜಯಗಳಿಸಿದ್ದೇನೆ. ಸಂಸದ ಪ್ರತಾಪ್ ಸಿಂಹ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ನನ್ನ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆಯು ಸಹ ನನ್ನ ಜಯಕ್ಕೆ ಕಾರಣ ಎಂದು ತಿಳಿಸಿದರು.

    ಪ್ರತಾಪ್ ಸಿಂಹ ಅವರು ಒಬ್ಬ ಮಹಿಳೆಯ ಬಗ್ಗೆ ಈ ರೀತಿಯಾಗಿ ಮಾತಾಡಿದರೆ ಯಾರೂ ಕ್ಷಮಿಸುವುದಿಲ್ಲ. ಕೇವಲ ಮಹಿಳೆಯರಷ್ಟೇ ಅಲ್ಲದೇ ಪುರಷರು ಸಹ ಇದನ್ನು ಖಂಡಿಸುತ್ತಾರೆ. ಪ್ರತಾಪ್ ಸಿಂಹ ಅವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳುವ ಮೂಲಕ ಸಂಸದರಿಗೆ ಟಾಂಗ್ ನೀಡಿದರು.

    ಜನರು ನನ್ನ ಮೇಲೆ ನಂಬಿಕೆಯಿಟ್ಟು, ಗಲ್ಲಿಸಿದ್ದಾರೆ. ಮುಂದೆ ನಾನು ಮಹಾದೇವ ಪ್ರಸಾದ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸುತ್ತೇನೆ. ಪ್ರತಾಪ್ ಸಿಂಹ ತಮ್ಮ ಹೇಳಿಕೆಯಿಂದ ಸುಮಾರು 40 ಸಾವಿರ ಮತಗಳನ್ನು ಕಳೆದುಕೊಂಡಿದ್ದಾರೆ. ಜಯದ ಸಮಯದಲ್ಲಿ ಪ್ರತಾಪ್ ಸಿಂಹ ಅವರನ್ನು ಕ್ಷಮಿಸುತ್ತೇನೆ. ತಮ್ಮ ವಿವಾದಾತ್ಮಕ ಹೇಳಿಕೆ ನಂತ್ರ ನನ್ನ ಮಗನಿಗೆ ಫೋನ್ ಮಾಡಿ ಕ್ಷಮೆ ಕೇಳಿದ್ದರು. ಇಂದು ನಿಮ್ಮ ಮಾಧ್ಯಮಗಳ ಮುಖಾಂತರ ಅವರನ್ನು ಕ್ಷಮಿಸಿದ್ದೇನೆ ಎಂದು ತಿಳಿಸುತ್ತೇನೆ ಎಂದು ಹೇಳಿದರು.

    ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು, ಸಚಿವರು, ಶಾಸಕರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕ್ಷೇತ್ರದ ಎಲ್ಲ ಮಹಿಳೆಯರಿಗೆ, ಮತದಾರರಿಗೆ ಮತ್ತು ಕಾರ್ಯಕರ್ತರಿಗೂ ಗೀತಾ ಮಹಾದೇವಪ್ರಸಾದ್ ಧನ್ಯವಾದ ಸಲ್ಲಿಸಿದರು.

     

     

  • ಮಹದೇವ ಪ್ರಸಾದ್ ಅವ್ರ ಕೆಲ್ಸಕ್ಕೆ ಜನ ನೀಡಿದ ಕಾಣಿಕೆಯಿದು: ಖಾದರ್

    ಮಹದೇವ ಪ್ರಸಾದ್ ಅವ್ರ ಕೆಲ್ಸಕ್ಕೆ ಜನ ನೀಡಿದ ಕಾಣಿಕೆಯಿದು: ಖಾದರ್

    ಗುಂಡ್ಲುಪೇಟೆ: ಪಕ್ಷದ ಪ್ರಾಮಾಣಿಕ ಕೆಲಸದಿಂದ ಜನ ಇಂದು ಕಾಂಗ್ರೆಸ್‍ಗೆ ಮತ ಹಾಕಿ ಗೆಲ್ಲಿಸಿದ್ದಾರೆ ಅಂತಾ ಆಹಾರ ಮತ್ತು ನಾಗರಿಕ ಪೊರೈಕೆ ಸರಬರಾಜು ಸಚಿವ ಯು ಟಿ ಖಾದರ್ ಹೇಳಿದ್ದಾರೆ.

    ಎರಡೂ ಕ್ಷೇತ್ರಗಳ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಜನಪರ ಯೋಜನೆಗಳು, ಸಚಿವ, ಅಧ್ಯಕ್ಷರ ವಿಶೇಷವಾದ ಸಹಕಾರ ಹಾಗೂ ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಸಚಿವರು, ಶಾಸಕ ಮಿತ್ರರು, ಜಿಲ್ಲಾ ಪಂಚಾಯತ್ ಸದಸ್ಯರ ಪ್ರಾಮಾಣಿಕ ಕೆಲಸದಿಂದ ಇಂದು ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದರು.

    ಸ್ಥಳೀಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರು, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು, ಗ್ರಾಮ, ನಗರಸಭೆ ಸದಸ್ಯರು ಎಲ್ಲರೂ ಒಗ್ಗಟಾಗಿ ಒಂದೇ ಕುಟುಂಬದಂತೆ ಕೆಲಸ ಮಾಡಿದರ ಫಲಿತಾಂಶ ಇದಾಗಿದೆ. ಡಾ. ಮಹದೇವ ಪ್ರಸಾದ್ ಅವರು ಮಾಡಿದ ಕೆಲಸಕ್ಕೆ ಈ ಕ್ಷೇತ್ರದ ಜನರು ಕೊಟ್ಟಂತಹ ವಿಶೇಷ ಕಾಣಿಕೆ ಇದಾಗಿದೆ ಅಂತಾ ಹೇಳಿದ್ರು.

    ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಡಾ. ಗೀತಾ ಮಹದೇವಪ್ರಸಾದ್ ಈ ಕ್ಷೇತ್ರದ ಗೌರವನ್ನು ಇನ್ನಷ್ಟು ಹೆಚ್ಚು ಮಾಡಲು ಮುಖ್ಯಮಂತ್ರಿಗಳು ಹಾಗೂ ಅಧ್ಯಕ್ಷರು ಎಲ್ಲರೂ ಅವರಿಗೆ ಸಹಕಾರ ಕೊಡ್ತಾರೆ. ಮಾನ್ಯ ಸಿದ್ದರಾಮಯ್ಯ ಅವರು ಯಾವೆಲ್ಲಾ ಯೋಜನೆಗಳನ್ನು ಜಾರಿಗೆ ತಂದದ್ದಾರೋ, ಅವುಗಳ ಅಭಿವೃದ್ಧಿಗೆ ಈ ಜನತೆ ತೀರ್ಮಾನ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಗುಂಡ್ಲುಪೇಟೆಯ ಸರ್ವರಿಗೂ, ಸರ್ವ ಮತದಾರರಿಗೂ ಹಾಗೂ ಕಾರ್ಯಕರ್ತರಿಗೂ ಅಭಿನಂದನೆ ತಿಳಿಸಿದ್ರು.

    ಗುಂಡ್ಲುಪೇಟೆಯಲ್ಲಿ ಅಂತಿಮ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಾ. ಗೀತಾ ಮಹದೇವ ಪ್ರಸಾದ್ ಭರ್ಜರಿ ಜಯ ಗಳಿಸಿದ್ದಾರೆ. ಇದೀಗ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ.

  • ಕೊನೆ ಎರಡು ದಿನಗಳಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ: ಶ್ರೀನಿವಾಸ ಪ್ರಸಾದ್

    ಕೊನೆ ಎರಡು ದಿನಗಳಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ: ಶ್ರೀನಿವಾಸ ಪ್ರಸಾದ್

    ನಂಜನಗೂಡು: ಮೊದಲು ಬಹಳ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸವಿತ್ತು. ಆದ್ರೆ ಕೊನೆ ಎರಡು ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಹಣದ ಹೊಳೆ ಹರಿಸಿತು. ಆದ್ದರಿಂದ ಮತದ ಅಂತರ ಕಡಿಮೆಯಾಗುತ್ತೆ. ಆದ್ರೆ ಗೆಲುವು ನನ್ನದೇ ಅಂತಾ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

    ನಂಜನಗೂಡು ಉಪಚುನಾವಣೆಯ ಫಲಿತಾಂಶ ಇಂದು ಹೊರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಸುಮಾರು ಐದು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಸ್ಥಳೀಯ ಪೊಲೀಸ್ ಇಲಾಖೆಯು ಸರ್ಕಾರ ಜೊತೆ ಸೇರಿತು. ಕೇಂದ್ರ ಚುನಾವಣಾ ಆಯೋಗದಿಂದ ಬಂದವರು ಎಲ್ಲೂ ಸುತ್ತಲಿಲ್ಲ. ಎಷ್ಟೇ ಹಣ ಹಂಚಿದ್ರು ಜನರು ನನ್ನ ಪರವಾಗಿದ್ದಾರೆ ಎಂದು ತಿಳಿಸಿದರು.

    ಮುಖ್ಯಮಂತ್ರಿಗೆ ನನ್ನ ವಿರುದ್ಧ ದ್ವೇಷವಿತ್ತು. ಹಾಗಾಗಿ ರಾಜೀನಾಮೆ ನೀಡಿದೆ. ದುರುದ್ದೇಶದಿಂದ ಮುಖ್ಯಮಂತ್ರಿ ಮಾಡಿದ ರೀತಿ ಯಾರೂ ಅವಮಾನ ಮಾಡಲಿಲ್ಲ. ಆದ್ದರಿಂದ ಇದು ಸ್ವಾಭಿಮಾನ, ಆತ್ಮಗೌರವದ ಪ್ರಶ್ನೆಯಾಗಿದೆ. ಅದನ್ನ ಜನರಿಗೆ ಮನದಟ್ಟು ಮಾಡಿದ್ದೇನೆ. ಈ ಚುನಾವಣೆ ನಂತ್ರ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಆದ್ರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಅಂದ್ರು.

    ಇದನ್ನೂ ಓದಿ: ಸರ್ಕಾರದ ಯೋಜನೆಗಳೇ ನನಗೆ ಶ್ರೀರಕ್ಷೆ: ಕಳಲೆ ಕೇಶವಮೂರ್ತಿ

  • ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್, ನಿರಂಜನ್ ನಡುವೆ ಸಮರ – ಮತದಾರನ ಮನ ನಿರ್ಧಾರ

    ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್, ನಿರಂಜನ್ ನಡುವೆ ಸಮರ – ಮತದಾರನ ಮನ ನಿರ್ಧಾರ

    ಚಾಮರಾಜನಗರ: ಕಳೆದ 20 ದಿನಗಳಿಂದ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ನೇರ ಜಿದ್ದಾಜಿದ್ದಿಗೆ, ಪ್ರತಿಷ್ಠೆಗೆ ಸಾಕ್ಷಿಯಾಗಿದ್ದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ.

    ಸಹಕಾರ ಸಚಿವರಾಗಿದ್ದ ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಮಹದೇವಪ್ರಸಾದ್ ಅವರ ಪತ್ನಿ ಗೀತಾ ಮಹದೇವ ಪ್ರಸಾದ್‍ರನ್ನು ಅನುಕಂಪದ ಆಧಾರದ ಮೇಲೆ ಕಣಕ್ಕಿಳಿಸಿದೆ. ಇದೇ ಐದು ಬಾರಿ ಚುನಾವಣೆ ಸೋತಿರುವ ನಿರಂಜನ್ ಕುಮಾರ್‍ರನ್ನು ಬಿಜೆಪಿ ಸ್ಪರ್ಧೆಗೆ ಇಳಿಸಿದೆ.

    ಪಕ್ಷೇತರ ಅಭ್ಯರ್ಥಿಗಳಾದ ಶಿವರಾಮ್, ಕೆ.ಸೋಮಶೇಖರ್, ಮಹಾದೇವ ಪ್ರಸಾದ್ ಬಿ ಮತ್ತು ರಿಪ್ಲಬಿಕ್ ಪಾರ್ಟಿ ಆಪ್ ಇಂಡಿಯಾ ಪಕ್ಷದಿಂದ ಶಿವರಾಜು, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ ಎಂ, ಹೊನ್ನೂರಯ್ಯ ಸೇರಿ ಏಳು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    ಕ್ಷೇತ್ರದಲ್ಲಿ ಒಟ್ಟು 2,00,862 ಮತದಾರರಿದ್ದು, ಈ ಪೈಕಿ 1,00,144 ಪುರುಷ ಮತದಾರರು, 1,00,701 ಮಹಿಳಾ ಮತದಾರರಿದ್ದಾರೆ. ಕ್ಷೇತ್ರದಲ್ಲಿ 250 ಮತಗಟ್ಟೆಗಳಿವೆ.

  • ವಿಡಿಯೋ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ – ನೀತಿ ಸಂಹಿತೆ ಉಲ್ಲಂಘಿಸಿದ ಬಿಎಸ್‍ವೈ

    ವಿಡಿಯೋ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ – ನೀತಿ ಸಂಹಿತೆ ಉಲ್ಲಂಘಿಸಿದ ಬಿಎಸ್‍ವೈ

    ಚಾಮರಾಜನಗರ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಒಂದು ಲಕ್ಷ ರೂ. ನಗದು ಹಣ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಗುಂಡ್ಲುಪೇಟೆಯ ಅಣ್ಣೂರು ಕೇರಿ ಬಳಿಯ ವಡ್ಡರ ಹೊಸಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ನಿರ್ದೇಶನದಂತೆ ಗ್ರಾಮಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಎಲ್ಲರೆದುರೇ ಎರಡು ಸಾವಿರ ರೂ. ಮುಖಬೆಲೆಯ 50 ನೋಟುಗಳನ್ನು ಮೃತ ರೈತನ ಕುಟುಂಬದವರಿಗೆ ನೀಡಿದ್ರು. ಆದ್ರೆ ಹಣ ನೀಡುವಾಗ ಕ್ಯಾಮೆರಾಗಳನ್ನು ಆಫ್ ಮಾಡಿಸಿದ್ರು ಎನ್ನಲಾಗಿದೆ.

    ಇದೀಗ ಬಿಎಸ್ ಯಡಿಯೂರಪ್ಪ ಹಣ ನೀಡುತ್ತಿರುವ ವಿಡಿಯೋ ತುಣುಕು ವಾಟ್ಸಪ್ ನಲ್ಲಿ ಹರದಾಡಿ ವೈರಲ್ ಆಗಿದೆ. ಒಂದು ಲಕ್ಷ ರೂಪಾಯಿ ಪಕ್ಷದಿಂದ ನೆರವು ನೀಡಿದ್ದೇವೆ ಎಂದು ಸ್ವತಃ ಯಡಿಯೂರಪ್ಪನವರೇ ಮಾಧ್ಯಮದವರಿಗೆ ಹೇಳಿದ್ದಾರೆ. ಇದು ಒಂದು ಸಮುದಾಯದವನ್ನು ಓಲೈಕೆ ಮಾಡುವ ತಂತ್ರ ಎನ್ನಲಾಗ್ತಿದೆ.

    https://www.youtube.com/watch?v=3eATukzwo_g

  • ಉಪಚುನಾವಣೆ ಅಖಾಡಕ್ಕೆ ಎಸ್‍ಎಂಕೆ ಎಂಟ್ರಿ – ಕಾಂಗ್ರೆಸ್‍ನಿಂದ್ಲೂ ಭರ್ಜರಿ ಪ್ರಚಾರ

    ಉಪಚುನಾವಣೆ ಅಖಾಡಕ್ಕೆ ಎಸ್‍ಎಂಕೆ ಎಂಟ್ರಿ – ಕಾಂಗ್ರೆಸ್‍ನಿಂದ್ಲೂ ಭರ್ಜರಿ ಪ್ರಚಾರ

    ಮೈಸೂರು/ಚಾಮರಾಜನಗರ: ನಂಜನಗೂಡು ಮತ್ತು ಗುಂಡ್ಲುಪೇಟೆಯ ಉಪಚುನಾವಣೆಗೆ ಇನ್ನು ಆರೇ ದಿನ ಬಾಕಿ. ಹೀಗಾಗಿ, ಕಾಂಗ್ರೆಸ್-ಬಿಜೆಪಿ ನಾಯಕರ ಪ್ರಚಾರ ಜೋರಾಗ್ತಿದೆ. ಅದ್ರಲ್ಲೂ ಗುಂಡ್ಲುಪೇಟೆಯಲ್ಲಿ ಇವತ್ತು ದಿಗ್ಗಜರೇ ಕ್ಯಾಂಪೇನ್ ಮಾಡಲಿದ್ದಾರೆ.

    ಬಿಜೆಪಿ ಸೇರಿರೋ ಮಾಜಿ ಸಿಎಂ ಎಸ್.ಎಂ. ಕೃಷ್ಣ ಇವತ್ತು ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಸಾಥ್ ನೀಡಲಿದ್ದಾರೆ.

    ಇದಕ್ಕೆ ಪ್ರತಿಯಾಗಿ ಮತ್ತೊಂದು ಕಡೆ ಕಾಂಗ್ರೆಸ್ ಕೂಡ ಅಬ್ಬರದ ಪ್ರಚಾರ ನಡೆಸ್ತಿದೆ. 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಿಎಂ ಸಿದ್ದರಾಮಯ್ಯ ಸಹ ರೋಡ್ ಶೋ ನಡೆಸಲಿದ್ದಾರೆ. ಸಿಎಂಗೆ 10ಕ್ಕೂ ಹೆಚ್ಚು ಸಚಿವರು ಸಾಥ್ ನೀಡಲಿದ್ದಾರೆ. ಇನ್ನು, ನಂಜನಗೂಡಿನಲ್ಲೂ ಎಸ್‍ಎಂ ಕೃಷ್ಣ ಮತ ಯಾಚಿಸಲಿದ್ದಾರೆ.

  • ಬೈ ಎಲೆಕ್ಷನ್ ಅಖಾಡಕ್ಕೆ ಸಿಎಂ & ಟೀಂ – ಇಂದಿನಿಂದ 10 ದಿನ 2 ಕ್ಷೇತ್ರಗಳಲ್ಲಿ ಪ್ರಚಾರ

    ಬೈ ಎಲೆಕ್ಷನ್ ಅಖಾಡಕ್ಕೆ ಸಿಎಂ & ಟೀಂ – ಇಂದಿನಿಂದ 10 ದಿನ 2 ಕ್ಷೇತ್ರಗಳಲ್ಲಿ ಪ್ರಚಾರ

    ಮೈಸೂರು: ರಂಗೇರಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಗೆ ಇವತ್ತಿನಿಂದ ಘಟಾನುಘಟಿ ನಾಯಕರ ಎಂಟ್ರಿಯಾಗಲಿದೆ. ಸಿಎಂ ಸಿದ್ದರಾಮಯ್ಯ ತಮ್ಮ ಇಡೀ ಸಂಪುಟದೊಂದಿಗೆ ಮೈಸೂರಿಗೆ ಆಗಮಿಸಿದ್ದು, 10 ದಿನಗಳ ಕಾಲ ವಾಸ್ತವ್ಯ ಹೂಡಿ ಬಹಿರಂಗ ಪ್ರಚಾರ, ರೋಡ್ ಶೋಗಳಲ್ಲಿ ಭಾಗಿಯಾಗಲಿದ್ದಾರೆ.

    ಮೂರು ದಿನ ನಂಜನಗೂಡು ಹಾಗೂ ಮೂರು ದಿನ ಗುಂಡ್ಲುಪೇಟೆಯಲ್ಲಿ ಸಿಎಂ ಹಳ್ಳಿ ಹಳ್ಳಿ ಸುತ್ತಿ ಪ್ರಚಾರ ಮಾಡಲಿದ್ದಾರೆ. ಬಿಜೆಪಿಯಿಂದ ಯಡಿಯೂರಪ್ಪ ಕೂಡ ಇವತ್ತಿನಿಂದ ಇನ್ನಷ್ಟು ಬಿರುಸಿನ ಪ್ರಚಾರ ಕೈಗೊಳ್ಳಲಿದ್ದು, ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

    ಬಿಎಸ್‍ವೈ ಜೊತೆ ಹಾಲಿ ಕೇಂದ್ರ ಸಚಿವರು, ಶಾಸಕರು, ಮಾಜಿ ಸಚಿವರು, ಬಿಜೆಪಿ ಪರ ಕ್ಯಾಂಪೇನ್ ಮಾಡಲಿದ್ದಾರೆ. ಉಪಚುನಾವಣೆಯಲ್ಲಿ ಕೇಂದ್ರಬಿಂದುವಾಗಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣ ಇನ್ನೆರಡು ದಿನದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿದ್ದು ಎರಡು ಪಕ್ಷಗಳ ಮುಖಂಡರು ಇವತ್ತಿನಿಂದ ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ.