Tag: by election

  • ಶ್ರೀರಾಮುಲು ಮತ್ತೆ ಬಿಜೆಪಿಗೆ ಹೋಗ್ತಾರೆ ಅಂದಿದ್ರೆ ಅವ್ರ ಪರ ಪ್ರಚಾರ ಮಾಡ್ತಿರಲಿಲ್ಲ: ಸಚಿವ ಜಮೀರ್ ಅಹ್ಮದ್

    ಶ್ರೀರಾಮುಲು ಮತ್ತೆ ಬಿಜೆಪಿಗೆ ಹೋಗ್ತಾರೆ ಅಂದಿದ್ರೆ ಅವ್ರ ಪರ ಪ್ರಚಾರ ಮಾಡ್ತಿರಲಿಲ್ಲ: ಸಚಿವ ಜಮೀರ್ ಅಹ್ಮದ್

    ಬಳ್ಳಾರಿ: ಶಾಸಕ ಶ್ರೀರಾಮುಲು ಮತ್ತೆ ಬಿಜೆಪಿಗೆ ಹೋಗುತ್ತಾರೆ ಅಂತಾ ಗೊತ್ತಿದ್ದರೆ, ನಮ್ಮ ಅಪ್ಪನಾಣೆ ನಾನು 2011ರ ಉಪಚುನಾವಣೆಯಲ್ಲಿ ಅವರ ಪರ ಪ್ರಚಾರ ಮಾಡುತ್ತಿರಲಿಲ್ಲ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.

    ಜಿಲ್ಲೆಯ ಕೌಲಬಜಾರನಲ್ಲಿ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕೋಮುವಾದಿ ಪಕ್ಷಕ್ಕೆ ಮತ್ತೆಂದು ಹೋಗುವುದಿಲ್ಲ ಅಂತಾ ಶಾಸಕ ಶ್ರೀರಾಮುಲು ಹೇಳಿದ್ದರು. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಲಹೆಯಂತೆ 2011ರ ಉಪಚುನಾವಣೆಯಲ್ಲಿ ಶ್ರೀರಾಮಲು ಪರ ಪ್ರಚಾರ ಮಾಡಿದ್ದೆ. ಆದರೆ ಶ್ರೀರಾಮುಲು ಮಾತಿಗೆ ತಕ್ಕಂತೆ ನಡೆದುಕೊಳ್ಳಲಿಲ್ಲ. ಅವರೊಬ್ಬ ಸುಳ್ಳು ಹೇಳುವ ರಾಜಕಾರಣಿ ಎಂದು ದೂರಿದರು.

    ಒಂದು ವೇಳೆ ಶ್ರೀರಾಮುಲು ಮತ್ತೆ ಬಿಜೆಪಿ ಸೇರುತ್ತಾರೆ ಅಂತಾ ಅವತ್ತೇ ಗೊತ್ತಾಗಿದ್ದರೆ ಪ್ರಚಾರಕ್ಕೆ ಹೋಗುತ್ತಿರಲಿಲ್ಲ. ಅವರ ವಿರುದ್ಧ ಪ್ರಚಾರ ಮಾಡುವುದಕ್ಕೆ ನನಗೆ ಈಗ ಅವಕಾಶ ಕೂಡಿ ಬಂದಿದೆ. ಅವಕಾಶವಾದಿ ರಾಜಕಾರಣ ಮಾಡುವವರನ್ನು ಯಾರೂ ನಂಬುವುದಿಲ್ಲ. ಶ್ರೀರಾಮುಲು ಅವರ ಬಗ್ಗೆ ನಂಬಿಕೆ ಕಳೆದಕೊಂಡಿದ್ದೇವೆ ಅಂತಾ ಜಿಲ್ಲೆಯ ಜನರೇ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಸಚಿವರು, ಶ್ರೀರಾಮುಲು ಅಥವಾ ನಾಯಕ ಸಮುದಾಯವನ್ನು 420 ಅಂತಾ ಮಾಜಿ ಸಿದ್ದರಾಮಯ್ಯ ಅವರು ಹೇಳಿಲ್ಲ. ಶ್ರೀರಾಮುಲು ಅವರಿಗೆ 371 ಜೆ ಬಗ್ಗೆ ಗೊತ್ತಿಲ್ಲವೆಂದು ಲೇವಡಿ ಮಾಡಿದ್ದಾರೆ ಎಂದ ಅವರು, ಕೇವಲ ಒಂದೇ ಜನಾಂಗದ ಮತಗಳಿಂದ ಜಯ ಗಳಿಸಲು ಸಾಧ್ಯವಿಲ್ಲ. ಎಲ್ಲ ಜನಾಂಗದವರು ಬೇಕಾಗುತ್ತಾರೆ ಎಂದು ಟಾಂಗ್ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಮಾರಣ್ಣನಿಗಾಗಿ ಫ್ಲೈಟ್ ಹಿಡಿದುಕೊಂಡು ಶಿವಮೊಗ್ಗಕ್ಕೆ ಬಂದೆ: ಮಧು ಬಂಗಾರಪ್ಪ

    ಕುಮಾರಣ್ಣನಿಗಾಗಿ ಫ್ಲೈಟ್ ಹಿಡಿದುಕೊಂಡು ಶಿವಮೊಗ್ಗಕ್ಕೆ ಬಂದೆ: ಮಧು ಬಂಗಾರಪ್ಪ

    ಶಿವಮೊಗ್ಗ: ನಾಲ್ಕು ತಿಂಗಳಿಗೆ ಉಪಚುನಾವಣೆ ಅವಶ್ಯಕತೆ ಇರಲಿಲ್ಲ. ಸುಮ್ಮನೆ ಹಣ ಪೋಲಾಗುತ್ತದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಫೋನ್ ಕರೆ ಮಾಡಿ, ನೀವೇ ಕಣಕ್ಕೆ ಇಳಿಯಬೇಕು ಅಂತಾ ತಿಳಿಸಿದರು. ಈ ಹಿನ್ನೆಲೆಯಲ್ಲಿ ಕುಮಾರಣ್ಣನಿಗಾಗಿ ಫ್ಲೈಟ್ ಹತ್ತಿಕೊಂಡು ಶಿವಮೊಗ್ಗಕ್ಕೆ ಬಂದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದ್ದಾರೆ.

    ಜಿಲ್ಲೆಯ ಶಿರಾಳಕೊಪ್ಪದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಗೆ ಬೇರೆ ಯಾರೇ ಸ್ಪರ್ಧಿಸಿದರೂ ಅವರಿಗೆ ಬೆಂಬಲ ನೀಡುತ್ತೇನೆ ಅಂತಾ ವಿದೇಶದಲ್ಲಿದ್ದಾಗ ಕಾಂಗ್ರೆಸ್‍ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೇರಿದಂತೆ ಅನೇಕ ನಾಯಕರು ಒತ್ತಾಯ ಮಾಡಿದರು. ಹೀಗಾಗಿ ನಾನು ಉಪಚುನಾವಣೆ ಎದುರಿಸುತ್ತಿರುವೆ ಎಂದರು.

    ನಾನು ಯಾರ ಬಗ್ಗೆಯೂ ಮಾತನಾಡಲ್ಲ. ಒಂಬತ್ತೂವರೆ ವರ್ಷ ಏನು ಮಾಡಿದರು ಎನ್ನುವುದನ್ನು ಯೋಚನೆ ಮಾಡಿ. ನಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸೋಲಿಗೆ ಕಾರಣರಾಗಿದ್ದು ನ್ಯಾಯಾನಾ? ಈ ಬಾರಿ ಎಸ್.ಬಂಗಾರಪ್ಪ ಅವರ ಪುತ್ರನಾದ ನನ್ನನ್ನು ಗೆಲ್ಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಭಾವನಾತ್ಮಕವಾಗಿ ಮತದಾರರನ್ನು ತಲುಪುವ ಪ್ರಯತ್ನ ಮಧು ಬಂಗಾರಪ್ಪ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • Exclusive: ಬೈ ಎಲೆಕ್ಷನ್ ವೇಳೆಯಲ್ಲೇ ಕಾಂಗ್ರೆಸ್ ಅಧ್ಯಕ್ಷನ ಮನೆ ಮೇಲೆ ಅಟ್ಯಾಕ್

    Exclusive: ಬೈ ಎಲೆಕ್ಷನ್ ವೇಳೆಯಲ್ಲೇ ಕಾಂಗ್ರೆಸ್ ಅಧ್ಯಕ್ಷನ ಮನೆ ಮೇಲೆ ಅಟ್ಯಾಕ್

    ಬಳ್ಳಾರಿ: ಲೋಕಸಭಾ ಉಪಚುನಾವಣೆಯ ವೇಳೆಯಲ್ಲೇ ಬಳ್ಳಾರಿ ಬ್ರೂಸ್ ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಬ್ಬರ ಮನೆ ಮೇಲೆ ದಾಳಿ ಮಾಡಲಾಗಿದೆ.

    ಮಾಜಿ ಶಾಸಕ ಅನಿಲ್ ಲಾಡ್ ಆಪ್ತ ಸಹಾಯಕ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರ್ಷದ್ ಅಹ್ಮದ್ ಅವರ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ನಿರ್ಮಾಣ ಹಂತದ ಮನೆಯ ಬಾಗಿಲು ಕಿಟಕಿಗಳನ್ನು ಧ್ವಂಸಗೊಳಿಸಿದ್ದಾರೆ.

    2 ಬೈಕ್‍ಗಳಲ್ಲಿ ಬಂದಿದ್ದರೆನ್ನಲಾದ ದುಷ್ಕರ್ಮಿಗಳು ಹರ್ಷದ್ ಅಹ್ಮದ್ ಮನೆ ಮೇಲೆ ದಾಳಿ ಮಾಡಿರುವುದು ರಾಜಕೀಯ ವೈಷಮ್ಯಕ್ಕೆ ಮತ್ತಷ್ಟೂ ಕಿಚ್ಚು ಹಚ್ಚಿದಂತಾಗಿದೆ. ಚುನಾವಣಾ ಪ್ರಚಾರ ಮುಗಿಸಿಕೊಂಡು ಮನೆಯಲ್ಲಿದ್ದ ಹರ್ಷದ್ ಅಹ್ಮದ್ ರ ಮನೆಯಿಂದ ಹೊರಬರುವ ಮುನ್ನವೇ ದುಷ್ಕರ್ಮಿಗಳು ಕಾರು ಕಿಟಕಿ ಗಾಜುಗಳನ್ನು ಪುಡಿ ಮಾಡಿ ಪರಾರಿಯಾಗಿದ್ದಾರೆ.

    ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೌಲಬಜಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹರ್ಷದ್ ಅಹ್ಮದ್ ಗೆ ಧೈರ್ಯ ತುಂಬಿದ್ದಾರೆ.

    2008ರಲ್ಲೂ ಸಹ ಇದೇ ರೀತಿಯಾಗಿ ಮಾಜಿ ಶಾಸಕ ಅನಿಲ್ ಲಾಡ್ ಮನೆ ಮುಂದಿದ್ದ ಕಾರುಗಳನ್ನು ಸುಟ್ಟು ಹಾಕಿದ ಪ್ರಕರಣ ಬಳ್ಳಾರಿಯಲ್ಲಿ ನಡೆದಿತ್ತು. ಹೀಗಾಗಿ ಈ ಪ್ರಕರಣ ಇದೀಗ ರಾಜಕೀಯ ಪ್ರಚಾರದಲ್ಲಿ ಮತ್ತಷ್ಟೂ ಕಿಚ್ಚು ಹಚ್ಚಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉತ್ತರ ಕರ್ನಾಟಕ ವಿರೋಧಿ ಸಿಎಂರಿಂದ ಅಭಿವೃದ್ಧಿ ನಿರೀಕ್ಷೆ ಹೇಗೆ ಸಾಧ್ಯ?

    ಉತ್ತರ ಕರ್ನಾಟಕ ವಿರೋಧಿ ಸಿಎಂರಿಂದ ಅಭಿವೃದ್ಧಿ ನಿರೀಕ್ಷೆ ಹೇಗೆ ಸಾಧ್ಯ?

    ಬಳ್ಳಾರಿ: ಉತ್ತರ ಕರ್ನಾಟಕ ಮಂದಿ ನನಗೆ ಮತ ಹಾಕಿಲ್ಲ ಎಂದು ಹೇಳಿದ್ದ ಸಿಎಂ ಅವರನ್ನು ಮುಂದಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.

    ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶಾಂತ ಅವರ ಪರ ಪ್ರಚಾರ ನಡೆಸಲು ಆಗಮಿಸಿದ್ದ ಬಿಎಸ್‍ವೈ ಅವರು ಮಾಧ್ಯಮಗಳನ್ನು ಉದ್ದೇಶಿ ಮಾತನಾಡಿದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಬಗ್ಗೆ ಕಿಡಿಕಾರಿದರು. ಮಾಜಿ ಸಿಎಂ ಸಿದ್ದರಾಮಯ್ಯ ದುರಾಡಳಿತದಿಂದಲೇ ಜನ ಕಾಂಗ್ರೆಸ್ ಪಕ್ಷವನ್ನು ವಿಧಾನಸಭಾ ಚುನಾವಣೆಯಲ್ಲಿ ತಿರಸ್ಕರಿಸಿದ್ದರು. ಆದರೆ ನಾನು ಸಿಎಂ ಆಗಿದ್ದ ವೇಳೆ, ಶ್ರೀರಾಮುಲು ಅವರು ಸಚಿವರಾಗಿದ್ದರು. ಆ ಸಮಯದಲ್ಲಿ ಬಳ್ಳಾರಿಗೆ ಬೇಕಾದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಯಿತು. ಇದನ್ನು ತಿಳಿದಿರುವ ಬಳ್ಳಾರಿ ಜನತೆ ಈ ಚುನಾವಣೆ ಬಿಜೆಪಿಗೆ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಶ್ರೀರಾಮುಲುಗೆ ಭಾಷೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಶ್ರೀರಾಮುಲು ಮತ್ತು ಸಿದ್ದರಾಮಯ್ಯ ಅಕ್ಕ ಪಕ್ಕ ನಿಂತು ಒಂದೇ ವೇದಿಕೆ ಮೇಲೆ ಭಾಷಣ ಮಾಡಲಿ. ಆಗ ಯಾರಿಗೆ ಕನ್ನಡ ಭಾಷೆ ಬರುತ್ತದೆ ಎಂದು ತಿಳಿಯುತ್ತದೆ ಎಂದು ಸವಾಲು ಎಸೆದರು. ಅಲ್ಲದೇ ಬೆಂಗಳೂರಿನಲ್ಲಿ ಸರ್ಕಾರದ ವತಿಯಿಂದ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂ ಬೆಂಗಳೂರಿನಲ್ಲೇ ಇದ್ದರೂ ಕಾರ್ಯಕ್ರಮಕ್ಕೆ ಹೋಗದೆ ಅಪಮಾನ ಮಾಡಿದ್ದರು. ಅಲ್ಲದೇ ದೇವೇಗೌಡರಿಗೆ ಕೂಡಾ ವಾಲ್ಮೀಕಿ ಪ್ರಶಸ್ತಿ ಪಡೆಯದೆ ಪ್ರಶಸ್ತಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

    ಸಮ್ಮಿಶ್ರ ಸರ್ಕಾರ ರಚನೆಯಾದ ಸಮಯದಿಂದ ಸಾಲಮನ್ನಾ ಮಾಡಲು ಪರದಾಟ ನಡೆಸಿದೆ. ಅಲ್ಲದೇ ಸಾಲಮನ್ನಾ ವಿಚಾರದಲ್ಲಿ ಕೈಲಾಗದವನು ಮೈ ಪರಚಿಕೊಂಡ ಎಂಬ ರೀತಿ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಕಡೆ ಬೊಟ್ಟು ಮಾಡುತ್ತಿದ್ದಾರೆ. ಆದರೆ ಅವರಿಗೆ ಸಾಲಮನ್ನಾ ಮಾಡಲು ಸರ್ಕಾರದಲ್ಲಿ ಹಣ ಕೊರತೆ ಇದೆ. ಅದ್ದರಿಂದ ರೈತರಿಗೆ ನೀಡಿದ ಸಾಲಮನ್ನಾ ಆಶ್ವಾಸನೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ವಿಮರ್ಶಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಮೋಷನಲ್ ಬ್ಲಾಕ್‍ಮೇಲ್ ಬಿಡಿ, ಜನರನ್ನ ಎಷ್ಟ ಸಲ ಮೋಸ ಮಾಡ್ತಿರಾ- ಸಿಎಂ ಎಚ್‍ಡಿಕೆಗೆ ಯೋಗೇಶ್ವರ್ ಟಾಂಗ್

    ಎಮೋಷನಲ್ ಬ್ಲಾಕ್‍ಮೇಲ್ ಬಿಡಿ, ಜನರನ್ನ ಎಷ್ಟ ಸಲ ಮೋಸ ಮಾಡ್ತಿರಾ- ಸಿಎಂ ಎಚ್‍ಡಿಕೆಗೆ ಯೋಗೇಶ್ವರ್ ಟಾಂಗ್

    ರಾಮನಗರ: ಕಳೆದ ಬಾರಿ ಅಧಿಕಾರದಲ್ಲಿದ್ದಾಗ ಗ್ರಾಮವಾಸ್ತವ್ಯ ಮಾಡುತ್ತಿದ್ದ ಸಿಎಂ ಎಚ್‍ಡಿಕೆ, ಇವತ್ತು ಗಂಡ ಹೆಂಡತಿ ಇಬ್ಬರು ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಜೀವನ ಮಾಡುತ್ತಿದ್ದಾರೆ. ಚುನಾವಣೆ ಬಂದ ಕೂಡಲೇ ಎಮೋಷನಲ್ ಬ್ಲಾಕ್‍ಮೇಲ್ ಮಾಡಿ ಜನರನ್ನ ಮೋಸ ಮಾಡುತ್ತಾರೆ ಎಂದು ಬಿಜೆಪಿ ಮುಖಂಡ, ಮಾಜಿ ಶಾಸಕ ಸಿಪಿ ಯೋಗೇಶ್ವರ್ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಆರೋಪ ಮಾಡಿದ್ದಾರೆ.

    ಉಪಚುನಾವಣೆ ಮತದಾನದ ದಿನಾಂಕ ಹತ್ತಿರವಾಗುತ್ತಿದಂತೆ ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಪಗಳ ಹೆಚ್ಚಾಗುತ್ತಿದ್ದು, ಇಂದು ಸಿಪಿ ಯೋಗೇಶ್ವರ್ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ರಾಮನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೈಲಾಂಚ ಹೋಬಳಿಯಲ್ಲಿ ಪ್ರಚಾರ ನಡೆಸಿದ ಅವರು ಮಾಧ್ಯಮಗಳೊಂದಿಗೆ ಮಾತುನಾಡಿದರು. ಸಿಎಂ ಕುಮಾರಸ್ವಾಮಿ ಅವರು ತಾಜ್ ವೆಸ್ಟೆಂಡ್ ಹೋಟೆಲ್‍ಗೆ ದಿನಕ್ಕೆ ಲಕ್ಷ ಬಾಡಿಗೆ ಕೊಡುತ್ತಿದ್ದು, ಗಂಡ ಹೆಂಡತಿ ಇಬ್ಬರು ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಜೀವನ ಮಾಡುತ್ತಿದ್ದಾರೆ. ಜಂತಕಲ್ ಮೈನಿಂಗ್ ಹಗರಣದ ಕತ್ತಿ ಅವರ ಮೇಲೆ ತೂಗಾಡುತ್ತಿದೆ. ಕಳೆದ 20 ವರ್ಷಗಳಿಂದ ಕಾಂಗ್ರೆಸ್‍ನವರು, ಜೆಡಿಎಸ್‍ನವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದು, ಅದನ್ನು ಬಿಟ್ಟು ನ್ಯಾಯಾಲಯದಲ್ಲಿ ಚಾಲೆಂಜ್ ಮಾಡಲಿ ಎಂದು ಸವಾಲು ಎಸೆದರು.

    ಇದೇ ವೇಳೆ ಅನಿತಾ ಕುಮಾರಸ್ವಾಮಿಯವರು ಬಹಿರಂಗವಾಗಿ ಈ ತಾಲೂಕಿನ ಅಧಿಕಾರಿಗಳ ಬಳಿ ಹಣ ವಸೂಲಿ ಮಾಡಿದ್ದಾರೆ. ಅದರ ದಾಖಲೆಗಳು ನನ್ನ ಬಳಿ ಇದೆ. ಸಿಎಂ ಎಚ್‍ಡಿಕೆ ನಮ್ಮನ್ನ ಮೋಸಗಾರ ಎಂದು, ಅವರನ್ನ ಸತ್ಯ ಹರಿಶ್ಚಂದ್ರ ಎಂದುಕೊಂಡಿದ್ದಾರೆ. ಕುಮಾರಸ್ವಾಮಿಯವರು ಎಲ್ಲೂ ಹೋಗಿ ಕೆಲಸ ಮಾಡಿದ್ದು, ಉದ್ಯೋಗ ಮಾಡಿದ್ದು ನಾವು ನೋಡಿಲ್ಲ. ಆದರೆ ಅವರ ಆಸ್ತಿಯೆಲ್ಲಾ ನೂರಾರು ಕೋಟಿ, ಸಾವಿರಾರು ಕೋಟಿ ಜಾಸ್ತಿಯಾಗುತ್ತಿದೆ. ಅಲ್ಲದೇ ಅನಿತಾ ಕುಮಾರಸ್ವಾಮಿ ಅವರು ಆಸ್ತಿಯೂ ಹೇಗೆ ಜಾಸ್ತಿಯಾಗುತ್ತದೆ ಎಂದು ಪ್ರಶ್ನಿಸಿದರು.

    ಕುಮಾರಸ್ವಾಮಿಯವರು ಮುಖವಾಡ ಹಾಕಿಕೊಂಡು ರಾಜಕೀಯ ಮಾಡುತ್ತಿದ್ದು, ಚುನಾವಣೆ ಬಂದ ತಕ್ಷಣ ಸಾಯುವ ಮಾತನಾಡುವ ಮೂಲಕ ಡ್ರಾಮಾ ಮಾಡುತ್ತಿದ್ದಾರೆ. ಇಂತಹ ಎಮೋಷನಲ್ ಬ್ಲಾಕ್‍ಮೇಲ್ ಬಿಡಿ, ಜನರನ್ನ ಎಷ್ಟ ಸಲ ಮೋಸ ಮಾಡುತ್ತೀರಿ. ಕರ್ನಾಟಕದ ಕಣ್ಣೊರೆಸ್ತೀನಿ ಎನ್ನುವ ಸಿಎಂ ಕುಮಾರಸ್ವಾಮಿಯವರು ಮೊದಲು ರಾಮನಗರದ ಜನರ ಕಣ್ಣೀರು ಒರೆಸಬೇಕು ಎಂದು ಸಲಹೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಕಾರ್ಯಕ್ರಮದ ಮುಂಭಾಗದ ನಾಲೆಗೆ ಬಿದ್ದ ವ್ಯಕ್ತಿ ಸಾವು

    ಸಿಎಂ ಕಾರ್ಯಕ್ರಮದ ಮುಂಭಾಗದ ನಾಲೆಗೆ ಬಿದ್ದ ವ್ಯಕ್ತಿ ಸಾವು

    ಮಂಡ್ಯ: ಇಂದು ಸಿಎಂ ಕುಮಾರಸ್ವಾಮಿ ಅವರು ಭಾಗವಹಿಸಿದ್ದ ಪ್ರಚಾರ ಸಮಾವೇಶದ ಬಳಿ ಇದ್ದ ನಾಲೆಗೆ ಬಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಪಾಂಡವಪುರ ಬಳಿ ನಡೆದಿದೆ.

    ತಾಲೂಕಿನ ಜಕ್ಕನ ಹಳ್ಳಿ ನಿವಾಸಿ ಕುಮಾರ್ (40) ಮೃತಪಟ್ಟ ವ್ಯಕ್ತಿಯಾಗಿದ್ದು, ಸಿಎಂ ಕಾರ್ಯಕ್ರಮ ಆಯೋಜಿಸಲಾಗಿದ್ದ ಬಳಿಯ ನಾಲೆಯಲ್ಲಿ ತೆರಳಿದ ವೇಳೆ ಘಟನೆ ನಡೆದಿದೆ. ಮೃತ ಕುಮಾರ್ ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಆಕಸ್ಮಿಕವಾಗಿ ಘಟನೆ ನಡೆದಿದೆ ಎನ್ನಲಾಗಿದೆ.

    ಸಿಎಂ ಕಾರ್ಯಕ್ರಮ ನಡೆಯುತ್ತಿರುವ ವೇದಿಕೆ ಸಮೀಪ ವಿಸಿ ನಾಲೆ ಹರಿಯುತ್ತಿತ್ತು. ಈ ವೇಳೆ ನಾಲೆಗೆ ಬಿದ್ದ ಕುಮಾರ್ ಅವರನ್ನು ರಕ್ಷಣೆ ಮಾಡಿ, ಬಳಿಕ ಜನರ ಒತ್ತಾಯದ ಬಳಿಕ ಸಿಎಂ ಕಾರ್ಯಕ್ರಮಕ್ಕೆ ಬಂದಿದ್ದ ಆಂಬುಲೆನ್ಸ್ ನಲ್ಲೇ ಪೊಲೀಸರು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಸಚಿವ ಪುಟ್ಟರಾಜು ಅವರು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದರು. ಆದರೆ ಕುಮಾರ್ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

    ಕಾರ್ಯಕರ್ತ ಮೃತ ಪಟ್ಟ ಸುದ್ದಿ ತಿಳಿದ ಸಿಎಂ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು. ಅಲ್ಲದೇ ನೀತಿ ಸಂಹಿತೆ ಜಾರಿ ಇರುವುದರಿಂದ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡುವುದಿಲ್ಲ. ಆದರೆ ಕುಟುಂಬದ ಬಗ್ಗೆ ಮಾಹಿತಿ ಪಡೆದು ಸಹಾಯ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಬೈಎಲೆಕ್ಷನ್ ಅಖಾಡದಲ್ಲಿ ಅಬ್ಬರದ ಪ್ರಚಾರ- ಕೊನೆ ಕ್ಷಣದಲ್ಲಿ `ಕೈ’ ಕೊಟ್ರು ಸಿಎಂ ಎಚ್‍ಡಿಕೆ..!

    ಬೈಎಲೆಕ್ಷನ್ ಅಖಾಡದಲ್ಲಿ ಅಬ್ಬರದ ಪ್ರಚಾರ- ಕೊನೆ ಕ್ಷಣದಲ್ಲಿ `ಕೈ’ ಕೊಟ್ರು ಸಿಎಂ ಎಚ್‍ಡಿಕೆ..!

    ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದ್ದು, ದಿಗ್ಗಜರೇ ಫೀಲ್ಡ್ ಗಿಳಿದು ಮತಯಾಚನೆ ಮಾಡ್ತಿದ್ದಾರೆ. ಆದ್ರೆ ಭಾನುವಾರದಿಂದ ಪ್ರಚಾರ ಆರಂಭಿಸಲಿರುವ ಸಿಎಂ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳಿರುವ ಕ್ಷೇತ್ರದಲ್ಲಿ ಮಾತ್ರ ಕ್ಯಾಂಪೇನ್ ಮಾಡಲಿದ್ದಾರೆ.

    ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಪ್ರಚಾರ ನಡೆಸಲಿರುವ ಸಿಎಂ, ದೋಸ್ತ್ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿರುವ ಜಮಖಂಡಿ ಮತ್ತು ಬಳ್ಳಾರಿಗೆ ಹೋಗೋದು ಡೌಟ್. ಅಲ್ಲದೆ ಈ ಹಿಂದೆ ಉಗ್ರಪ್ಪ ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಎಚ್‍ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಪ್ರಚಾರದಿಂದ ಹಿಂದೆ ಸರಿಯುತ್ತಾರಾ ಅನ್ನೋ ಚರ್ಚೆಗಳು ಶುರುವಾಗಿವೆ.


    ಈ ಮಧ್ಯೆ ಇಂದು ನಿನ್ನೆಯಿಂದ ಜಮಖಂಡಿಯಲ್ಲಿ ಮತಯಾಚಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕುಂಬಾರಹಳ್ಳ, ತುಂಗಳ, ಲಿಂಗಾನೂರ ಹಾಗೂ ಕೊಣ್ಣೂರು ಗ್ರಾಮಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಜಗದೀಶ್ ಶೆಟ್ಟರ್ ಮತಯಾಚಿಸಲಿದ್ದಾರೆ. ಇನ್ನು ಬಳ್ಳಾರಿ ರಣರಂಗಕ್ಕೆ ಎಂಟ್ರಿ ಕೊಡಲಿರುವ ಬಿಎಸ್‍ವೈ ಸಂಡೂರಿನಲ್ಲಿ ಕ್ಯಾಂಪೇನ್ ಮಾಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪಗೆ ಡಿಕೆ ಶಿವಕುಮಾರ್ ಸಾಥ್ ನೀಡಲಿದ್ದಾರೆ. ಶುಕ್ರವಾರ ಪ್ರಚಾರದ ವೇಳೆ ಕಾಫಿ ಕುಡಿದ ಡಿಕೆ ಶಿವಕುಮಾರ್, ಒಗ್ಗರಣೆ ಹಾಕಿದ ಮಂಡಕ್ಕಿ, ಮಿರ್ಚಿ ಬಜ್ಜಿ ಸವಿದ್ರು. ಜೊತೆಗೆ ದಾರಿಯುದ್ದಕ್ಕೂ ಜನರೊಂದಿಗೆ ಆತ್ಮೀಯತೆಯಿಂದ ಮಾತನಾಡಿದ್ರು.

    ಇತ್ತ ಮಂಡ್ಯದಲ್ಲಿ ದೋಸ್ತಿ ಅಭ್ಯರ್ಥಿ ಎಲ್‍ಆರ್.ಶಿವರಾಮೇಗೌಡ ಪರ 2ನೇ ದಿನವೂ ಸಿಎಂ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಪಾಂಡವಪುರ ಮತ್ತು ಕೆಆರ್ ಪೇಟೆಯಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಅತ್ತ ಶಿವಮೊಗ್ಗದಲ್ಲಿ ಮಧುಬಂಗಾರಪ್ಪ ಪರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಮತಯಾಚಿಸಲಿದ್ದಾರೆ.

    ರಾಮನಗರದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭರ್ಜರಿ ಪ್ರಚಾರ ನಡೆಸಿದ್ದ ಅನಿತಾ ಕುಮಾರಸ್ವಾಮಿ ಇಂದು ಪ್ರಚಾರ ಮಾಡದೇ ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ. ಇನ್ನು ನಾಳೆ ಎಚ್‍ಡಿ ದೇವೇಗೌಡರೇ ರಾಮನಗರದ ರಣರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್‍ಗೆ ಸಿ.ಪಿ ಯೋಗೇಶ್ವರ್ ಸಾಥ್ ನೀಡಲಿದ್ದಾರೆ.

    ನಿನ್ನೆ ಬಾಗಲಕೋಟೆಯಲ್ಲಿ ಮಾತನಾಡಿದ ಸಿ.ಎಂ ಇಬ್ರಾಹಿಂ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕವಾಗಿ ಏಕವಚನದಲ್ಲೇ ಮಾತನಾಡಿದ್ರು. ಅಲ್ಲದೆ ಬಿಎಸ್‍ವೈಗೆ ಶೋಭಕ್ಕಂದೇ ಚಿಂತೆ ಅಂತಾ ಕಿಚಾಯಿಸಿದ್ದಾರೆ.

    ಒಟ್ಟಿನಲ್ಲಿ ಉಪರಣಕಣ ದಿನೇ ದಿನೇ ಕಾವೇರುತ್ತಿದ್ದು, 3 ಪಕ್ಷಗಳ ದಿಗ್ಗಜರು ಮತಯಾಚನೆಗೆ ಬೀದಿಗೆ ಇಳಿದಿದ್ದಾರೆ. ಆದ್ರೆ ಯಾವ ಪಕ್ಷದ ಅಭ್ಯರ್ಥಿಗೆ ಜನರು ಮತ ನೀಡುವುದರ ಮೂಲಕ ಆಶೀರ್ವಾದಿಸಿ ಭವಿಷ್ಯ ಬದಲಾಯಿಸ್ತಾರೆ ಅಂತ ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿ ನೋಟ್ ಬ್ಯಾನ್ ಹೊಡೆತಕ್ಕೆ ಸಿದ್ದರಾಮಯ್ಯ ಆರ್ಥಿಕ ದಿವಾಳಿ: ಪ್ರತಾಪ್ ಸಿಂಹ

    ಮೋದಿ ನೋಟ್ ಬ್ಯಾನ್ ಹೊಡೆತಕ್ಕೆ ಸಿದ್ದರಾಮಯ್ಯ ಆರ್ಥಿಕ ದಿವಾಳಿ: ಪ್ರತಾಪ್ ಸಿಂಹ

    ಬಾಗಲಕೋಟೆ: ಭ್ರಷ್ಟರಾಜಕಾರಣಿಗಳು, ಅಧಿಕಾರಿಗಳು, ರಿಯಲ್ ಎಸ್ಟೇಟ್ ಕುಳಗಳು ಮೋದಿ ಅವರ ನೋಟ್ ಬ್ಯಾನ್ ಹೊಡೆತಕ್ಕೆ ಆರ್ಥಿಕ ದಿವಾಳಿಯಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಪರಿಸ್ಥಿತಿಯೂ ಹಾಗೆಯೇ ಆಗಿದೆ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

    ಜಮಖಂಡಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರಕ್ಕಾಗಿ ಆಗಮಿಸಿದ ಪ್ರತಾಪ್ ಸಿಂಹ, ತಾಲೂಕಿನ ಸಿದ್ದಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಸಿದ್ದರಾಮಯ್ಯ ಅವರು ಮಾಡಿಕೊಂಡಿದ್ದ ಬೇನಾಮಿ ಆಸ್ತಿ, ಅಕ್ರಮ ದುಡ್ಡು ಹಾಗೂ ಬೇನಾಮಿ ಕಂಪನಿಗೆ ಸರ್ಕಾರಿ ಭೂಮಿ ಕೊಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿದ್ದರಿಂದ ಸಿದ್ದರಾಮಯ್ಯ ಆರ್ಥಿಕವಾಗಿ ದಿವಾಳಿ ಆಗಿದ್ದಾರೆ ಎಂದು ಆರೋಪಿಸಿದರು.

    ಏರ್ ಸೆಲ್ ಪ್ರಕರಣದಲ್ಲಿ ಜಾರಿ ನಿರ್ದೇಶನಲಯ(ಇಡಿ) ಸಲ್ಲಿಸಿದ್ದ ಚಾರ್ಜ್ ಶೀಟ್‍ನಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಎ1 ಆರೋಪಿ ಎಂದು ಉಲ್ಲೇಖಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು, ಸಿದ್ದು ಕ್ರಿಕೆಟ್ ಕಾಮೆಂಟ್ರಿ ತರಹ ಒಂದು ಸೈಕಲ್ ಬಿದ್ದರೆ ಎಲ್ಲಾ ಉದುರಿ ಹೋಗುತ್ತವೆ ಎನ್ನುತ್ತಾರೆ ಅಲ್ವಾ, ಅದರಂತೆ ಕಾಂಗ್ರೆಸ್ಸಿನ ಒಂದೊಂದು ಭ್ರಷ್ಟರ ವಿಕೆಟ್ ಗಳು ಉದುರಿ ಹೋಗುತ್ತವೆ. ಪಿ.ಚಿದಂಬರಂ ಅವರು ಮತ್ತೆ ಲೆಟರ್ ಆಪ್ ಅಂಡರ್ ಸ್ಟ್ಯಾಂಡಿಂಗ್ ಕೊಟ್ಟಿದ್ದರೂ ಹೆಚ್ಚಿನ ಸಾಲ ಕೊಡಿ ಎಂದು ಆರ್‍ಬಿಐ ನವರಿಗೆ ಯಾಕೆ ನಿರ್ದೇಶನಕ ಕೊಟ್ಟರು ಎನ್ನುವುದನ್ನು ಮುಂದೆ ಬಯಲು ಮಾಡುತ್ತೇನೆ ಎಂದರು.

    ವೀರಶೈವ-ಲಿಂಗಾಯತ ವಿಚಾರದಲ್ಲಿ ಡಿಕೆಶಿ, ಸಿದ್ದು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರದ್ದು ಪಶ್ಚಾತ್ತಾಪದ ಹೇಳಿಕೆ ಅಲ್ಲ. ಸೋಲಿನ ಭಯದಿಂದ ನಾಟಕ ಆಡುತ್ತಿದ್ದಾರೆ. ಕಾಂಗ್ರೆಸ್ ಧರ್ಮ ಒಡೆಯುವ ಕೆಲಸಕ್ಕೆ ಜನರು ಪಾಠ ಕಲಿಸಿದ್ದಾರೆ. ಈಗ ಉಪ ಚುನಾವಣೆಯಲ್ಲಿ ಸೋಲಿನ ಭಯದಿಂದ ತಪ್ಪು ಮಾಡಿದ್ದೇವು ಎನ್ನುವ ನಾಟಕ ಮಾಡುತ್ತಾರೆ. ಸಿಎಂ ಮಾಡುತ್ತೇನೆ. ಅಂದರೆ ಯಡಿಯೂರಪ್ಪ ದೇವೇಗೌಡರ ಕಾಲು ಹಿಡಿತಾರೆ ಅಂದಿದ್ದ ದಿನೇಶ್ ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, ಅಪ್ಪನಾಣೆಗೂ ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಹೇಳಿದವರು ಅವರಪ್ಪನ ಬಳಿಯೇ ಹೋಗಿ ಮಗನನ್ನ ಸಿಎಂ ಮಾಡುತ್ತೇನೆ ಎಂದು ಮನೆಗೆ ಹೋದವರು ಯಾರು? ಯಡಿಯೂರಪ್ಪನಾ? ಸಿದ್ದರಾಮಯ್ಯನಾ? ಮೊದಲು ಹೇಳಲಿ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ದೇವೇಗೌಡರ ಮನೆ ಹೋಗಿ ಕುಳಿತು ಕೊಂಡಿದ್ದು ಇದೇ ಗುಂಡೂರಾವ್ ಹಾಗೂ ಅವರ ಗುರು ಸಿದ್ದರಾಮಯ್ಯ ಅಲ್ವೇ ಎಂದು ಪ್ರಶ್ನಿಸಿ ಟಾಂಗ್ ನೀಡಿದರು.

    ಇದೇ ವೇಳೆ ನೀರವ್ ಮೋದಿ ಆಸ್ತಿ ಜಪ್ತಿ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಪ್ರತಾಪ್ ಸಿಂಹ, ನಿಮ್ಮ ಮಾಧ್ಯಮಕ್ಕೆ ಬಂದು ಈ ಕುರಿತು ಸವಿಸ್ತಾರವಾಗಿ ಮಾತನಾಡುತ್ತೇನೆ ಎಂದು ಉತ್ತರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಕುಮಾರಸ್ವಾಮಿ ಬಾಯಲ್ಲಿ ‘ಮೃತ್ಯು’ ಮಾತು

    ಸಿಎಂ ಕುಮಾರಸ್ವಾಮಿ ಬಾಯಲ್ಲಿ ‘ಮೃತ್ಯು’ ಮಾತು

    ಮಂಡ್ಯ: ಈ ಹಿಂದೆ ನಾನು ಸಾಂದರ್ಭಿಕ ಶಿಶು ಎಂದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಮೃತ್ಯು ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇಸ್ರೇಲ್‍ಗೆ ಹೋಗಿದ್ದಾಗಲೇ ನಾನು ಸಾಯಬೇಕಿತ್ತು, ದೇವರ ಆಶೀರ್ವಾದದಿಂದ ನಾನು ಬದುಕಿ ಬಂದಿದ್ದೇನೆ. ಆದರೆ ನಾನು ಎಷ್ಟು ದಿನ ಬದುಕಿರುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ ಎನ್ನುವ ಮೂಲಕ ಸಿಎಂ ಕುಮಾರಸ್ವಾಮಿ ಬಹಿರಂಗ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

    ಮಳವಳ್ಳಿ ಪ್ರಚಾರದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಭಾವುಕರಾದ ಅವರು, ನಾನು ಈ ಹಿಂದೆಯೇ ಸಾಯಬೇಕಿತ್ತು. ಆದರೆ ದೇವರ ಆಶೀರ್ವಾದದಿಂದ ಬದುಕಿ ಬಂದಿದ್ದೇನೆ. ನಾನು ಎಷ್ಟು ದಿನ ಬದುಕಿರುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಬದುಕಿರುವವರೆಗೂ ಜನರ ಸೇವೆಯನ್ನು ಮಾಡುತ್ತೇನೆ ಎಂದರು.

    ಕುಮಾರಸ್ವಾಮಿ ತಮ್ಮ ಸಾವಿನ ಬಗ್ಗೆ ಮಾತನಾಡುವುದಕ್ಕೆ ಕಾರಣ ಸಭೆಯಲ್ಲಿ ಆದ ಎರಡು ಘಟನೆಗಳು ಕಾರಣ ಎನ್ನಲಾಗಿದೆ. ಆರಂಭದಲ್ಲಿ ಓರ್ವ ಮಹಿಳೆ ಬಹಿರಂಗ ಸಭೆಯಲ್ಲೇ ಸಿಎಂ ಬಳಿ ತಾನು ಕೈ ಸಾಲ ಮಾಡಿಕೊಂಡಿದ್ದು, ಇದರಿಂದಾಗಿ ನನಗೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡರು. ಇದಾದ ನಂತರ ಮಳವಳ್ಳಿ ತಾಲೂಕಿನ ಕುಲುಮೆದೊಡ್ಡಿ ಗ್ರಾಮದ ಕರಿಯಪ್ಪ ಹಾಗೂ ಚಿಕ್ಕತಾಯಮ್ಮಳ ಮಗಳಾದ ಪವಿತ್ರ ಕಾಲಿನ ಸಮಸ್ಯೆಯನ್ನು ಸಿಎಂ ಬಳಿ ಹೇಳಿಕೊಂಡರು. ಇದರಿಂದ ಬೇಸರಗೊಂಡ ಅವರು ಈ ರೀತಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದೇ ವೇಳೆ ಸಾಲಮನ್ನಾ ಕುರಿತು ಮಾತನಾಡಿದ ಅವರು, ಐದು ತಿಂಗಳಾದರೂ ದುಡ್ಡು ಕೊಟ್ಟಿಲ್ಲ ಅನ್ನುವ ಭಯ ನಿಮಗೇಕೆ? ಇದು ದೇವರ ಕೊಟ್ಟ ಸರ್ಕಾರ. ಮಂಡ್ಯ ಜಿಲ್ಲೆ ಜನರನ್ನು ಕೊನೆಯ ಉಸಿರಿರುವವರೆಗೂ ನಾನು ಮರೆಯಲ್ಲ. ಮಂಡ್ಯ ಹೆಸರನ್ನು ಹೇಳಿದರೆ, ಬಿಜೆಪಿಯವರು ಮಂಡ್ಯ ಬಜೆಟ್, ಮಂಡ್ಯಕ್ಕೆ ಮತ ಕೇಳಲು ಬಂದಿದ್ದಾರೆ ಎಂದು ಆಡಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಏನು ಗೊತ್ತು? ನನ್ನ ಹೃದಯದಲ್ಲಿ ನಾನು ಯಾವ ರೀತಿಯ ನೋವು ಇದೆ ಅನ್ನೋದನ್ನ ಅರ್ಥ ಮಾಡಿಕೊಂಡಿಲ್ಲ. ನನಗೆ ನನ್ನ ಪ್ರಾಣಕ್ಕಿಂತಲೂ ನಾಡಿನ ಜನರ ಹಿತ ಮುಖ್ಯ. ರೈತರ ಸಾಲಮನ್ನಾಗೆ ನಾನು ಅಭಿವೃದ್ಧಿಗೆ ಇಟ್ಟಿರುವ ಹಣವನ್ನು ಬಳಸಿಕೊಳ್ಳುವುದಿಲ್ಲ. ಖಾಸಗಿ ಸಾಲಮನ್ನಾ ಮಾಡಲು ಋಣ ಭಾರ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಮುಂದಿನ 15 ದಿನಗಳಲ್ಲಿ ರಾಷ್ಟ್ರಪತಿಗಳು ಅಂಕಿತ ಹಾಕುವ ವಿಶ್ವಾಸ ಇದೆ ತಿಳಿಸಿದರು.

    ಭಾಷಣದ ವೇಳೆ ಹತ್ತಿರದ ಮಸೀದಿಯಿಂದ ಆಜಾನ್ ಕೇಳುತ್ತಿದ್ದಂತೆ ಮಾತು ನಿಲ್ಲಿಸಿದ ಸಿಎಂ ನಂತರ ಮುಂದುವರಿಸಿ, ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ರಾಜ್ಯವನ್ನು ಕತ್ತಲೆಗೆ ದೂಡುತ್ತಿದ್ದಾರೆ ಎಂದು ಮಾಧ್ಯಮಗಳು ಅಪಪ್ರಚಾರ ಮಾಡುತ್ತಿವೆ. ನನ್ನ ನಾಡಿನ ಜನರನ್ನು ಕತ್ತಲೆಗೆ ದೂಡುವಷ್ಟು ದುಷ್ಟನೇ? ದ್ರೋಹಿನಾ ಎಂದು ಪ್ರಶ್ನಿಸಿ, ನನ್ನ ಜನತೆಗೆ ದ್ರೋಹ ಮಾಡಿದ ದಿನ ನಾನು ಬದುಕಿದ್ದು ಸತ್ತಂತೆ. ನನ್ನನ್ನು ತುಳಿಯುವುದರಿಂದ ನಿಮಗೇನು ಲಾಭವಿದೆ? ಲಾಭವಿದ್ದರೇ ತುಳಿಯಿರಿ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=E06SX7qYKF8

  • ಉಪ ಚುನಾವಣೆ ಎಫೆಕ್ಟ್, ಖಾಲಿ ಹೊಡೆಯುತ್ತಿರುವ ಶಕ್ತಿ ಸೌಧ

    ಉಪ ಚುನಾವಣೆ ಎಫೆಕ್ಟ್, ಖಾಲಿ ಹೊಡೆಯುತ್ತಿರುವ ಶಕ್ತಿ ಸೌಧ

    ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾದ ನಂತರ ಶಕ್ತಿಸೌಧವಾದ ವಿಧಾನಸೌಧದಲ್ಲಿ ಸಚಿವರು ನಾಪತ್ತೆಯಾಗಿದ್ದು, ಅಹವಾಲುಗಳನ್ನು ಸಲ್ಲಿಸಲು ಬರುತ್ತಿರುವ ಸಾರ್ವಜನಿಕರು ಸಚಿವರ ಖಾಲಿ ಕೊಠಡಿಗಳನ್ನು ನೋಡಿ ಪರದಾಟ ನಡೆಸುತ್ತಿದ್ದಾರೆ.

    ಹೌದು, ರಾಜ್ಯದಲ್ಲಿ ವಿಧಾನಸಭಾ ಹಾಗೂ ಲೋಕಸಭಾ ಉಪ ಚುನಾವಣೆಗಳು ಘೋಷಣೆಯಾಗಿದ್ದು, ಪರಿಣಾಮವಾಗಿ ರಾಜ್ಯದ ಶಕ್ತಿಸೌಧದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಯಾವೊಬ್ಬ ಸಚಿವರು ಸಹ ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ.

     

    ಸಮ್ಮಿಶ್ರ ಸರ್ಕಾರ ಸಚಿವರ ಉಪ ಚುನಾವಣೆಯ ನೆಪದಲ್ಲಿ ರಾಜ್ಯದ ಜನರನ್ನೇ ಮರೆತಿದ್ದಾರೆ. ರಾಜ್ಯದ ಶಕ್ತಿಸೌಧ ಸಂಪೂರ್ಣ ಖಾಲಿಯಾಗಿದ್ದು, ಸಚಿವರಿಲ್ಲದೇ ಕೊಠಡಿಗಳು ಬಣಗುಟ್ಟುತ್ತಿವೆ. ವಿಧಾನಸೌಧ ಹಾಗೂ ವಿಕಾಸಸೌಧಗಳಲ್ಲೂ ಸಹ ಯಾವೊಬ್ಬ ಸಚಿವರ ಜನರ ಸಮಸ್ಯೆಗಳನ್ನು ಆಲಿಸಲು ಸಿಗುತ್ತಿಲ್ಲ. ಚುನಾವಣಾ ನೆಪದಲ್ಲಿ ಶಕ್ತಿಸೌಧದಲ್ಲಿ ಯಾವುದೇ ಕೆಲಸಗಳು ಸಹ ಆಗುತ್ತಿಲ್ಲ. ಆದರೆ ಚುನಾವಣಾ ನೆಪ ಹೇಳುತ್ತಿರುವ ಸಚಿವರು ಯಾವುದೇ ಪ್ರಚಾರಕ್ಕೂ ಹೋಗುತ್ತಿಲ್ಲ.

    ಸಚಿವರು ಈಗ ಬರ್ತಾರೆ, ಆಗ ಬರ್ತಾರೆ ಅಂತ ಸಾರ್ವಜನಿಕರು ಕಾದು ಕಾದು, ಸಪ್ಪೆ ಮೋರೆಹಾಕಿಕೊಂಡು ಮರಳುತ್ತಿದ್ದಾರೆ. ಗುರುವಾರ ವಿಧಾನಸೌಧಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರನ್ನು ಬಿಟ್ಟರೇ, ಯಾವೊಬ್ಬ ಸಚಿವರು ವಿಧಾನಸೌಧದಲ್ಲಿ ಜನರಿಗೆ ಸಿಗುತ್ತಿಲ್ಲ. ಉಪ ಚುನಾವಣೆಯ ನೆಪದಿಂದಾಗಿ ಶಕ್ತಿ ಸೌಧದ ಆಡಳಿತ ಯಂತ್ರ ಕುಸಿಯುತ್ತಿದೆ. ಸಚಿವರ ಕೊಠಡಿಗಳು ಕ್ಲೋಸ್ ಆಗಿದ್ದು, ಅವರ ಸಿಬ್ಬಂದಿ ಸಹ ಯಾವೊಬ್ಬ ಸಾರ್ವಜನಿಕರ ಕಣ್ಣಿಗೂ ಸಿಗುತ್ತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv