Tag: by election

  • ಮತ್ತೊಮ್ಮೆ ನಿಜವಾಯ್ತು ಉಪಚುನಾಣೆಯಲ್ಲಿ ಅಂಬಿ ಭವಿಷ್ಯ

    ಮತ್ತೊಮ್ಮೆ ನಿಜವಾಯ್ತು ಉಪಚುನಾಣೆಯಲ್ಲಿ ಅಂಬಿ ಭವಿಷ್ಯ

    ಮಂಡ್ಯ: ಜಿಲ್ಲೆಯ ಲೋಕಸಭಾ ಉಪ-ಚುನಾವಣೆಯ ಫಲಿತಾಂಶದಲ್ಲಿ ಮತ್ತೊಮ್ಮೆ ಮಾಜಿ ಸಂಸದ ಮತ್ತು ಹಿರಿಯ ನಟ ಅಂಬರೀಶ್ ಅವರ ಭವಿಷ್ಯ ನಿಜವಾಗಿದೆ.

    ಜಿಲ್ಲೆಯ ಲೋಕಸಭಾ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಸ್ಪರ್ಧಿಸಿದ್ದರು. ಇಂದಿನ ಫಲಿತಾಂಶದಲ್ಲಿ ಶಿವರಾಮೇಗೌಡ ದಾಖಲೆ ಬರೆಯುತ್ತಾರೆ ಎಂದು ಅಂಬರೀಶ್ ಮತದಾನ ವೇಳೆ ಹೇಳಿದ್ದಾರಂತೆ. ಹೀಗಾಗಿ ಅಂದು ಅಂಬಿ ನುಡಿದಿದ್ದ ಭವಿಷ್ಯ ಇಂದಿನ ಉಪಚುನಾವಣೆಯ ಫಲಿತಾಂಶದ ಮೂಲಕ ನಿಜವಾಗುತ್ತಿದೆ.

    ಅಂಬರೀಶ್ ಮತದಾನದ ವೇಳೆ ಶಿವರಾಮೇಗೌಡ, ರಮ್ಯಾ ಮತ್ತು ನನ್ನ ದಾಖಲೆ ಮುರಿತ್ತಾನೆ. ಮಂಡ್ಯದ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಾನೆ. ಸ್ವತಃ ನನ್ನ ದಾಖಲೆಯನ್ನು ಎಲ್‍ಆರ್‍ಎಸ್ ಮುರಿತ್ತಾನೆ ಎಂದಿದ್ದರು.

    ಈ ಹಿಂದೆಯೂ ಕೂಡ ಅಂಬರೀಶ್ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆಯೂ ಭವಿಷ್ಯ ನುಡಿದಿದ್ದರು. ಅಂದು ನುಡಿದಿದ್ದ ಮಾತು ನಿಜವಾಗಿತ್ತು. ಆದ್ದರಿಂದ ಮತ್ತೆ ಅಂಬರೀಶ್ ನುಡಿದಿದ್ದ ಮಾತುಗಳು ಸಾಭೀತವಾಗಿದೆ ಎಂದು ಮಂಡ್ಯದ ಜನತೆ ಮಾತನಾಡಿಕೊಳ್ಳುತ್ತಾರೆ.

    ಶಿವರಾಮೇಗೌಡ ಒಂಬತ್ತು ಸುತ್ತುಗಳಲ್ಲೇ 1,80,000 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಪಡೆದುಕೊಂಡಿದ್ದು, ಭಾರಿ ಅಂತರದಿಂದ ಗೆಲ್ಲುವ ಸಾಧಿಸುವ ಮುನ್ಸೂಚನೆ ಇದೆ. ಸದ್ಯಕ್ಕೆ ಶಿವರಾಮೇಗೌಡ 3,94,807 ಮತಗಳನ್ನು ಗಳಿಸಿದ್ದು, ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ 1,61,135 ಮತ ಪಡೆದಿದ್ದಾರೆ. ಇದರಿಂದ ಶಿವರಾಮೇಗೌಡ ಸುಮಾರು 2,33,672 ಮತಗಳ ಅಂತರದಲ್ಲಿ ಮೂಂಚೂಣಿಯಲ್ಲಿದ್ದಾರೆ. ಈ ಮೂಲಕ ರೆಬಲ್ ಸ್ಟಾರ್ ಅಂಬರೀಶ್ ದಾಖಲೆ ಹಿಂದಿಕ್ಕಿದ್ದಾರೆ.

    1998ರಲ್ಲಿ ಅಂಬರೀಶ್ ಬಾರಿ ಅಂತರದಿಂದ ಜಿ.ಮಾದೇಗೌಡ ಅವರನ್ನು ಮಣಿಸಿದ್ದರು. ಅಂದು ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಂಬರೀಶ್ 4,31,439 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಮಾದೇಗೌಡ 2,50,916 ಮತ ಗಳಿಸಿದ್ದರು. ಬರೋಬ್ಬರಿ 1,80,523 ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ನಿರ್ಮಾಣ ಮಾಡಿದ್ದರು. ಈಗ ಗೆಲುವಿನ ಅಂತರದಲ್ಲಿ ಅಂಬರೀಶ್ ದಾಖಲೆಯನ್ನು ಎಲ್.ಆರ್. ಶಿವರಾಮೇಗೌಡ ಮುರಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರದಲ್ಲಿ ಗೆದ್ದು ಕರ್ನಾಟಕದಲ್ಲೇ ದಾಖಲೆ ಬರೆದ ಅನಿತಾ ಕುಮಾರಸ್ವಾಮಿ!

    ರಾಮನಗರದಲ್ಲಿ ಗೆದ್ದು ಕರ್ನಾಟಕದಲ್ಲೇ ದಾಖಲೆ ಬರೆದ ಅನಿತಾ ಕುಮಾರಸ್ವಾಮಿ!

    ಬೆಂಗಳೂರು: ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸುವ ಮೂಲಕ ಕರ್ನಾಟಕ ವಿಧಾನಸಭೆ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಬರೆದಿದ್ದಾರೆ.

    ಹೌದು, ಉಪ ಚುನಾವಣೆಯನ್ನು ಗೆಲ್ಲುವ ಮೂಲಕ ಶಾಸಕಿಯಾದ ಅನಿತಾ ಕುಮಾರಸ್ವಾಮಿ ಪತಿ ಸಿಎಂ ಕುಮಾರಸ್ವಾಮಿಯವರ ಜೊತೆ ಒಟ್ಟಿಗೆ ವಿಧಾನಸೌಧ ಪ್ರವೇಶಿಸಿದ್ದಾರೆ. ಪತಿ ಜೊತೆ ವಿಧಾನಸಭೆಗೆ ಪ್ರವೇಶ ಕೊಟ್ಟ ಮೊದಲ ಮಹಿಳೆ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಇದರ ಜೊತೆಯಲ್ಲಿ ಪತಿ ಸಿಎಂ ಆಗಿರುವಾಗಲೇ ಆಯ್ಕೆಯಾದ ಶಾಸಕಿ ಎನ್ನುವ ಮತ್ತೊಂದು ದಾಖಲೆಯನ್ನು ಅನಿತಾ ಕುಮಾರಸ್ವಾಮಿ ಬರೆದಿದ್ದಾರೆ.

    ರಾಮನಗರ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಮಹಿಳೆ ಎನ್ನುವ ಹೆಸರನ್ನು ಸಹ ಪಡೆದುಕೊಂಡಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಮರಳಿ ಕಾಂಗ್ರೆಸ್ ಸೇರಿದ್ದರಿಂದ ಫಲಿತಾಂಶಕ್ಕೂ ಮೊದಲೇ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರ ಗೆಲುವು ನಿಶ್ಚಯವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪಚುನಾವಣೆ ಫಲಿತಾಂಶದ ಬಳಿಕವಾದ್ರೂ ಬಿಜೆಪಿ ಎಚ್ಚೆತ್ತುಕೊಳ್ಳಲಿ – ರೇವಣ್ಣ ಟಾಂಗ್

    ಉಪಚುನಾವಣೆ ಫಲಿತಾಂಶದ ಬಳಿಕವಾದ್ರೂ ಬಿಜೆಪಿ ಎಚ್ಚೆತ್ತುಕೊಳ್ಳಲಿ – ರೇವಣ್ಣ ಟಾಂಗ್

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಆಡಳಿತ ವಹಿಸಿಕೊಂಡ ಬಳಿಕ ಮಾಡಿದ ರೈತ ಸಾಲಮನ್ನಾ ಫಲವಾಗಿ ಜನ ಉಪಚುನಾವಣೆಯಲ್ಲಿ ಆಶೀರ್ವಾದ ಮಾಡಿದ್ದು, ಇದನ್ನ ನೋಡಿಯಾದರೂ ಕೇಂದ್ರದಲ್ಲಿ ಅಧಿಕಾರಲ್ಲಿರುವ ಬಿಜೆಪಿ ಎಚ್ಚೆತ್ತುಕೊಂಡು ಜನರ ಪರವಾಗಿ ಕೆಲಸ ಮಾಡಬೇಕಿದೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಹೇಳಿದ್ದಾರೆ.

    ಮೈತ್ರಿ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆಯಲ್ಲಿ ದೇವಾಲಯ ಪೂಜೆ ಮುಗಿಸಿ ರೇವಣ್ಣ ಅವರು ದೇವೇಗೌಡರ ನಿವಾಸಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಕಾರಣರಾದ ಜನತೆಗೆ ಧನ್ಯವಾದ. ಎಲ್ಲಾ ಕ್ಷೇತ್ರದಲ್ಲೂ ಜನರು ಆಶೀರ್ವಾದ ಮಾಡಿದ್ದಾರೆ. ಆದರೆ ಶಿವಮೊಗ್ಗದಲ್ಲಿ ಹಣ ಬಲ ಕೆಲಸ ಮಾಡಿದಂತೆ ಕಂಡಿದೆ. ಬಳ್ಳಾರಿ ಫಲಿತಾಂಶ ಉತ್ತಮ ಎನ್ನಿಸಿದೆ ಎಂದರು.

    ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸಿಎಂ ಕುಮಾರಸ್ವಾಮಿ ಅವರು ಮಾಡಿದ ಒಳ್ಳೆ ಆಡಳಿತವೇ ಕಾರಣ. 2019 ಚುನಾವಣೆ ಉದ್ದೇಶಕ್ಕಾದರೂ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ನೆರವು ನೀಡುವಂತೆ ಮನವೊಲಿಕೆ ಮಾಡಬೇಕು ಎಂದು ಸಲಹೆ ನೀಡಿದರು.

    ಬೆಂಗಳೂರಿನ ಪದ್ಮನಾಭನಗರ ದೇವೇಗೌಡ ನಿವಾಸಕ್ಕೆ ಭೇಟಿ ನೀಡಿದ ಸಚಿವ ರೇವಣ್ಣ ಅವರು ಚುನಾವಣೆ ಫಲಿತಾಂಶದ ಕುರಿತು ಮಹತ್ವದ ಚರ್ಚೆ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಜವಾದ ಆತ್ಮಾವಲೋಕನಕ್ಕೆ ಸರಿಯಾದ ಸಮಯ: ಸುರೇಶ್ ಕುಮಾರ್

    ನಿಜವಾದ ಆತ್ಮಾವಲೋಕನಕ್ಕೆ ಸರಿಯಾದ ಸಮಯ: ಸುರೇಶ್ ಕುಮಾರ್

    ಬೆಂಗಳೂರು: ಇಂದು ಕರ್ನಾಟಕ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿರುವ ಬೆನ್ನಲ್ಲೇ ನಿಜವಾದ ಆತ್ಮಾವಲೋಕನಕ್ಕೆ ಇದು ಸರಿಯಾದ ಸಮಯವಾಗಿದೆ ಎಂದು ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ.

    ನಿಜವಾದ ಆತ್ಮಾವಲೋಕನಕ್ಕಾಗಿ ಇದು ಸರಿಯಾದ ಸಮಯ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಜನ, ಸತ್ಯವಾದ ನ್ಯಾಯೋಚಿತ ಮಾತು, ದಯವಿಟ್ಟು ಎಲೆಕ್ಷನ್ ಟೈಂನಲ್ಲಿ ಬಿಜೆಪಿಗೆ ಸೇರುವ ಅಭ್ಯರ್ಥಿಗೆ ಟಿಕೆಟ್ ಕೊಡಬೇಡಿ. ಸಾಮಾನ್ಯ ಕಾರ್ಯಕರ್ತನಿಗೆ ಕೊಟ್ಟಿದ್ದರು ಓಡಿ ಹೋಗುತ್ತಿರಲಿಲ್ಲ. ಸೋತರು ಪರವಾಗಿಲ್ಲ ಹೆಮ್ಮೆಯಿಂದ ಇರಬಹುದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

    ಮುಂದಿನ ಪರೀಕ್ಷೆಯ ತಯಾರಿಗಾಗಿ ಕೇಡರ್ ಆಧಾರಿತವಾಗಿ ಪಕ್ಷವನ್ನು ಸಂಘಟಿಸುವ ಕಾಲ ಬಂದಿದೆ ಎಂದು ಸುರೇಶ್ ಕುಮಾರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.

    ಬಿಜೆಪಿ ಕರ್ನಾಟಕದಲ್ಲಿ ಸಮಗ್ರ ಬದಲಾವಣೆ ಅಗತ್ಯವಿದೆ. 2ನೇ ತಲೆಮಾರಿನ ನಾಯಕರುಗಳು ಮುನ್ನೆಲೆಗೆ ಬರಲು ಇದು ಸಕಾಲ ಸ್ವಾರ್ಥ ರಾಜಕಾರಣ ನಮ್ಮಂತ ಕಾರ್ಯಕರ್ತರನ್ನು ಭ್ರಮನಿರಸನಗೊಳಿಸುತ್ತಿದೆ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ ಉದ್ಧಟತನ ಕಡಿಮೆ ಮಾಡಿದರೆ ಒಳಿತು: ಸಿಎಂ ಎಚ್‍ಡಿಕೆ

    ಬಿಜೆಪಿ ಉದ್ಧಟತನ ಕಡಿಮೆ ಮಾಡಿದರೆ ಒಳಿತು: ಸಿಎಂ ಎಚ್‍ಡಿಕೆ

    ಬೆಂಗಳೂರು: ಉಪಚುನಾವಣೆಯಲ್ಲಿ ಪಡೆಯುವ ಫಲಿತಾಂಶದಿಂದ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಮಾತನಾಡಿರುವ ಬಿಜೆಪಿ ಮುಖಂಡರ ಉದ್ಧಟತನ ಕಡಿಮೆ ಮಾಡಿಕೊಳ್ಳಬೇಕು ಎಂದು ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

    ಫಲಿತಾಂಶ ಪ್ರಕಟವಾಗುತ್ತಿರುವ ಬೆನ್ನಲ್ಲೇ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ರಾಮನಗರ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಉಪಚುನಾವಣೆಯಲ್ಲಿ ನಮಗೆ ಗೆಲುವಿನ ನಿರೀಕ್ಷೆ ಇತ್ತು. ಆದರೆ ಇಂದು ರಾಜ್ಯದ ಜನತೆ ನೀಡಿರುವ ಮತಗಳ ಅಂತರ ನನಗೆ ಹೆಚ್ಚು ಉತ್ಸಾವನ್ನು ನೀಡಿದೆ. ಜನತೆಗೆ ಮೈತ್ರಿ ಸರ್ಕಾರದ ಮೇಲೆ ನಂಬಿಕೆ ಇದೆ ಎಂದು ದೃಢವಾಗಿದೆ. ಬಳ್ಳಾರಿ, ಮಂಡ್ಯ, ಜಮಖಂಡಿಯಲ್ಲಿ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳ ಅಂತರ ನನಗೆ ಹೆಮ್ಮೆ ತಂದಿದೆ ಎಂದರು.

    ಉಪಚುನಾವಣೆಯಲ್ಲಿ ಗೆಲುವಿಗೆ ಬಿಜೆಪಿ ಸರ್ಕಾರ ಉರುಳಿಸಲು ಮಾಡಿದ ಪ್ರಯತ್ನ ಹಾಗೂ ಕಾಂಗ್ರೆಸ್, ಜೆಡಿಎಸ್ ಮೈತ್ರಿಯಲ್ಲಿ ಉಂಟಾಗಿರುವ ಗಟ್ಟಿತನವೇ ಕಾರಣ. ಆದರೆ ಈ ಫಲಿತಾಂಶದಿಂದ ಮುಂದಿನ 2019ರ ಲೋಕಸಭಾ ಚುನಾವಣೆಗೆ ನಮಗೆ ಮತ್ತಷ್ಟು ಎಚ್ಚರವಾಗಿರುವಂತೆ ಮಾಡಿದೆ. ಸರ್ಕಾರ ಮತ್ತಷ್ಟು ಯೋಜನೆಗಳನ್ನು ಜನತೆಯ ಬಳಿ ತೆಗೆದುಕೊಂಡು ಹೋಗಿ ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯನ್ನು ಅಭಿವೃದ್ಧಿ ಕರೆ ಕೊಂಡ್ಯೊಯಲಾಗುತ್ತದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಗೆಲುವಿಗಾಗಿ ದೇವರ ಮೊರೆ ಹೋದ ಅಭ್ಯರ್ಥಿಗಳು

    ಗೆಲುವಿಗಾಗಿ ದೇವರ ಮೊರೆ ಹೋದ ಅಭ್ಯರ್ಥಿಗಳು

    ಬಳ್ಳಾರಿ/ಶಿವಮೊಗ್ಗ: ಬಳ್ಳಾರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭಕ್ಕೂ ಮುನ್ನವೇ ಚುನಾವಣಾ ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ ಶಾಸಕ ಶ್ರೀರಾಮುಲು ಅವರಿಗೆ ಬಳ್ಳಾರಿ ಪ್ರತಿಷ್ಠೆಯ ಕಣವಾಗಿದ್ದು, ಅಭ್ಯರ್ಥಿ ಹಾಗು ಸೋದರಿ ಜೆ.ಶಾಂತಾರ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.

    ಬಳ್ಳಾರಿಯಲ್ಲಿ ಮೊದಲು ಅಂಚೆ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ ಅಭ್ಯರ್ಥಿ ಹಾಗೂ ಸಹೋದರಿ ಶಾಂತಾ ಅವರ ಗೆಲುವಿಗಾಗಿ ಅಹಂಭಾವಿ ನಿವಾಸದಲ್ಲಿ ಶಾಸಕ ಶ್ರೀರಾಮುಲು ಅವರು ಪೂಜೆ ನಡೆಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಶ್ರೀರಾಮಲು ಅವರು ತಮ್ಮ ಗೆಲುವಿಗಾಗಿ ಪೂಜೆಯಲ್ಲಿ ನಿರತರಾಗಿದ್ದರು.

    ಇತ್ತ ಶಿವಮೊಗ್ಗ ಉಪಚುನಾವಣೆ ಸಮರದ ಫಲಿತಾಂಶ ಹಿನ್ನೆಲೆ, ಮತ ಎಣಿಕೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ದಂಪತಿ ಮನೆ ದೇವರಾದ ಶಿಕಾರಿಪುರದ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ದಂಪತಿ ಸಮೇತರಾಗಿ ಪೂಜೆ ಸಲ್ಲಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯದಲ್ಲಿ ಮತದಾರನ ಒಲವು ದೋಸ್ತಿಗೋ, ಬಿಜೆಪಿಗೋ?

    ಮಂಡ್ಯದಲ್ಲಿ ಮತದಾರನ ಒಲವು ದೋಸ್ತಿಗೋ, ಬಿಜೆಪಿಗೋ?

    ಮಂಡ್ಯ: ಇಲ್ಲಿನ ಲೋಕಸಭಾ ಉಪಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಹಾಗೂ ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ನಡುವೆ ಹಣಾಹಣಿ ನಡೆದಿದೆ.

    ಈ ಹಿಂದೆ 2014ರ ಮಹಾ ಚುನಾವಣೆಗೂ ಮೊದಲು ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ರಮ್ಯಾ ಗೆದ್ದಿದ್ರೆ, ಆಮೇಲೆ ಮಹಾ ಚುನಾವಣೆಯಲ್ಲಿ ಅತ್ಯಲ್ಪ ಅಂತರದಲ್ಲಿ ಜಯಿಸಿದ್ದು ಸದ್ಯ ಸಚಿವರಾಗಿರುವ ಜೆಡಿಎಸ್‍ನ ಸಿ.ಎಸ್.ಪುಟ್ಟರಾಜು. ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರ ಮತಗಳ ಕ್ರೂಢೀಕರಣದಿಂದ ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ವಲಸೆ ಹೋದವ್ರೇ ಧೂಳೀಪಟವಾಗಿದ್ರು. ಅಸೆಂಬ್ಲಿ ಹೊತ್ತಿನ ರಾಜಕೀಯ ವೈರತ್ವ ಇನ್ನೂ ತಣ್ಣಗಾಗಿಲ್ಲ ಅನ್ನೋದಕ್ಕೆ ಉಪ ಚುನಾವಣೆ ಸಾಕ್ಷಿ ಆಗಿತ್ತು.

    ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು. ಈಗಾಗಲೇ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನು ರಾಮನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಒಟ್ಟಿನಲ್ಲಿ ರಾಮನಗರ, ಮಂಡ್ಯ ಉಪಚುನಾವಣೆ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದ್ದು ಮತದಾರ ಯಾರಿಗೆ ಜೈ ಅಂದಿದ್ದಾನೋ ಫಲಿತಾಂಶದ ಬಳಿಕ ತಿಳಿಯಲಿದೆ.

    ಮಂಡ್ಯದಲ್ಲಿಯ ಜಾತಿ ಲೆಕ್ಕಾಚಾರ ಹೀಗಿದೆ. ಒಕ್ಕಲಿಗರು 8,10,000, ಪರಿಶಿಷ್ಟ ಜಾತಿ ಮತ್ತು ಪಂಗಡ 3,50,000, ಲಿಂಗಾಯತ 1,00,000, ಕುರುಬರು 1,00,000, ಮುಸ್ಲಿಮರು 80,000, ಬೆಸ್ತರು 40,000, ಬ್ರಾಹ್ಮಣರು 30,000, ಕ್ರೈಸ್ತರು 30,000, ಇತರರು 1,40,000 ಮತದಾರರಿದ್ದರು. ಇವುಗಳಲ್ಲಿ ಒಕ್ಕಲಿಗರು ಮತಗಳು ನಿರ್ಣಾಯಕವಾಗಿತ್ತು.

    ಮಂಡ್ಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಪತಾಕೆಯನ್ನು ಹಾರಿಸಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಸ್.ಪುಟ್ಟರಾಜು 5,24,370 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ದ ರಮ್ಯಾ ಅವರು 5,18,852 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಬಿ.ಶಿವಲಿಂಗಯ್ಯ 86,993 ಮತ ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೇಳೂರು ಗೋಪಾಲಕೃಷ್ಣ ವಿರುದ್ಧ ಎಫ್‍ಐಆರ್

    ಬೇಳೂರು ಗೋಪಾಲಕೃಷ್ಣ ವಿರುದ್ಧ ಎಫ್‍ಐಆರ್

    ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ರಾಮನಗರ ಅಭ್ಯರ್ಥಿಯಂತೆ ಮಂಡ್ಯ ಬಿಜೆಪಿ ಅಭ್ಯರ್ಥಿಯೂ ಕಣದಿಂದ ಹಿಂದೆ ಸರಿಯುತ್ತಾರೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ಸಿನ ಬೇಳೂರು ಗೋಪಾಲಕೃಷ್ಣ ವಿರುದ್ಧ ದೂರು ದಾಖಲಾಗಿದೆ.

    ಗೋಪಾಲಕೃಷ್ಣ ಹೇಳಿಕೆಯ ವಿರುದ್ಧ ಮಂಡ್ಯ ಲೋಕಸಭಾ ಉಪ ಚುನಾವಣಾ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಚುನಾವಣಾಧಿಕಾರಿಗಳಿಗೆ ನವೆಂಬರ್ 2ರಂದು ದೂರನ್ನು ನೀಡಿದ್ದರು. ದೂರಿನಲ್ಲಿ ಗೋಪಾಲಕೃಷ್ಣ ಹೇಳಿಕೆಯಿಂದಾಗಿ ಚುನಾವಣೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಬೇಳೂರು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುವ ರೀತಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮವಹಿಸುವಂತೆ ಉಲ್ಲೇಖಿಸಿದ್ದರು.

    ಈ ಸಂಬಂಧ ಚುನಾವಣಾಧಿಕಾರಿಗಳು ಹೆಚ್ಚಿನ ತನಿಖೆಯನ್ನು ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಚುನಾವಣಾಧಿಕಾರಿಗಳ ಸೂಚನೆ ಮೇರೆಗೆ ಮಂಡ್ಯ ನಗರದ ಪಶ್ಚಿಮ ಠಾಣೆಯಲ್ಲಿ ಐಪಿಸಿ ಸೆಕ್ಷನ್ 171ಜಿ (ಚುನಾವಣಾ ನಿಬಂಧನೆ ಉಲ್ಲಂಘನೆ) ಅಡಿಯಲ್ಲಿ ಬೇಳೂರು ಗೋಪಾಲಕೃಷ್ಣ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಬೇಳೂರು ಗೋಪಾಲಕೃಷ್ಣ ಹೇಳಿದ್ದೇನು?
    ರಾಮನಗರ ವಿಧಾನಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಹಿಂದೆ ಸರಿದಂತೆ, ಮಂಡ್ಯ ಲೋಕಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಕೂಡ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರೆ ಎಂದು ಹೇಳಿಕೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಂದ್ರಶೇಖರ್ ಗೆ ಹಣ ನೀಡಿಲ್ಲವೆಂದು ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ- ಸಿಎಂಗೆ ರುದ್ರೇಶ್ ಸವಾಲ್

    ಚಂದ್ರಶೇಖರ್ ಗೆ ಹಣ ನೀಡಿಲ್ಲವೆಂದು ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ- ಸಿಎಂಗೆ ರುದ್ರೇಶ್ ಸವಾಲ್

    – ಡಿಕೆಶಿ ಮಧ್ಯರಾತ್ರಿ ಬಳ್ಳಾರಿಯಿಂದ ಬೆಂಗ್ಳೂರಿಗೆ ಬಂದಿದ್ದು ಏಕೆ?

    ರಾಮನಗರ: ಸಿಎಂ ಅವರು ದೈವ ಇಚ್ಛೆಯಿಂದ ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿಗೆ ಹಣ ನೀಡಿ ಡೀಲ್ ಮಾಡಿಲ್ಲ ಎಂದು ಸಿಎಂ ಅವರು ತಾಯಿ ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ ಎಂದು ರಾಮನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಂ ರುದ್ರೇಶ್ ಸವಾಲು ಎಸೆದಿದ್ದಾರೆ.

    ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್ ಅವರು ಏಕಾಏಕಿ ಕಾಂಗ್ರೆಸ್ ಸೇರಲು ಡೀಲ್ ನಡೆದಿದೆ ಅಂತ ಆರೋಪಿಸಿದ್ದಾರೆ. ಅಲ್ಲದೇ ಇದೇ ವೇಳೆ ಅಲ್ಲದೇ ಸಚಿವ ಡಿಕೆ ಶಿವಕುಮಾರ್ ಮಧ್ಯರಾತ್ರಿಯಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದು ಏಕೆ ಎಂದು ಪ್ರಶ್ನೆ ಮಾಡಿದರು.

    ಮೈತ್ರಿ ಸರ್ಕಾರ ಹಿಂಬಾಗಿಲಿನ ರಾಜಕೀಯ ಮಾಡಿ ಪಕ್ಷದ ಅಭ್ಯರ್ಥಿಯನ್ನು ಹೈಜಾಕ್ ಮಾಡಿ, ಚುನಾವಣೆಯಲ್ಲಿ ಗೊಂದಲ ಉಂಟಾಗುವಂತೆ ಮಾಡಿದೆ. ಶನಿವಾರ ನಡೆದ ಮತದಾನದ ಕೊನೆ ಕ್ಷಣದಲ್ಲಿ ಮತದಾನ ಏರಿಕೆಯಾಗಿದೆ. ಅವರ ಹಿಂಬಾಲಕರು ಬಲಾತ್ಕಾರವಾಗಿ ಮತದಾನ ಮಾಡಿಸಿದ್ದಾರೆ. ಇದು ಗೂಂಡಾಗಿರಿಯ ಚುನಾವಣೆ. ನ.6 ರಂದು ಲಭಿಸುವ ಫಲಿತಾಂಶ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು.

    ಉಪಚುನಾವಣೆಯ ಬಳಿಕ ರಾಮನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ನಿರ್ಧರಿಸಿದ್ದಾರೆ ಎಂದು ಶನಿವಾರ ಹೇಳಲಾಗಿದ್ದು, ಆದ್ರೆ ಯಾವುದೇ ಕಾರಣಕ್ಕೂ ನಾನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಿಲ್ಲ ಎಂದು ಎಂ. ರುದ್ರೇಶ್ ಸ್ಪಷ್ಟಪಡಿಸಿದ್ದಾರೆ.

    ರಾಜ್ಯ ನಾಯಕರ ತಪ್ಪು ನಿರ್ಧಾರ:
    ಕ್ಷೇತ್ರ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ರಾಜ್ಯ ನಾಯಕರು ತಪ್ಪು ಮಾಡಿದರು. ನಾವು ಮಾಡಿದ್ದು ತಪ್ಪಲ್ಲ, ನಮ್ಮ ತಪ್ಪಿದ್ದರೆ ಮೊದಲಿಗೆ ಅವರಿಗೆ ಟಿಕೆಟ್ ನೀಡಲು ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಕ್ಷೇತ್ರದಲ್ಲಿ ಪ್ರಭಾವಿಗಳ ಚಕ್ರವ್ಯೂಹದಲ್ಲಿ ನಾವು ಬಂದಿಯಾಗದ್ದೆವು. ಚುನಾವಣೆ ವೇಳೆ ನಡೆದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿ ಚರ್ಚೆ ನಡೆಸಿ ಇನ್ನು 2 ದಿನದಲ್ಲಿ ಬೆಂಗಳೂರಿಗೆ ಆಗಮಿಸಲಿರುವ ಬಿಎಸ್ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

    ರುದ್ರೇಶ್ ಕಣ್ಣೀರು:
    ಕಾರ್ಯಕರ್ತರೊಂದಿನ ಸಭೆಯ ವೇಳೆ ಪಕ್ಷದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳನ್ನು ಉಲ್ಲೇಖಿಸಿ ರುದ್ರೇಶ್ ಭಾವುಕರಾದರು. ಈ ವೇಳೆ ನಿಮ್ಮ ಜೊತೆ ನಾವಿದ್ದೇವೆ ಕಣ್ಣೀರಿಡಬೇಡಿ ಎಂದ ಕಾರ್ಯಕರ್ತರು ಬೆಂಬಲ ನೀಡಿದರು. ಬಳಿಕ ಕಾರ್ಯಕರ್ತರ ಒತ್ತಾಯದ ಮೇರೆಗೆ ರಾಜೀನಾಮೆ ನಿಡುವ ಸುದ್ದಿಯನ್ನು ಅಲ್ಲಗೆಳೆದರು. ರಾಜ್ಯ ನಾಯಕರು ಜಿಲ್ಲೆಗೆ ಸಹಕಾರ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆಯುತ್ತೇವೆ. ಈ ಚುನಾವಣೆಯಲ್ಲಿ ನಡೆದ ದುಡುಕಿನ ನಿರ್ಧಾರ ಲೋಕಸಭೆಗೆ ಬೇಡ. ಚುನಾವಣೆ ವೇಳೆ ಕ್ಷೇತ್ರ ಎಲ್ಲಾ ಮುಖಂಡರ ಸಲಹೆ ಪಡೆದು ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಪಕ್ಷದ ನಾಯಕರಿಗೆ ಸಲಹೆ ನೀಡುವುದಾಗಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪಸಮರಕ್ಕೆ ಶಾಂತಿಯುತ ತೆರೆ – ಜಮಖಂಡಿಯಲ್ಲಿ ಅತೀ ಹೆಚ್ಚು, ಮಂಡ್ಯದಲ್ಲಿ ಕಡಿಮೆ ಮತದಾನ

    ಉಪಸಮರಕ್ಕೆ ಶಾಂತಿಯುತ ತೆರೆ – ಜಮಖಂಡಿಯಲ್ಲಿ ಅತೀ ಹೆಚ್ಚು, ಮಂಡ್ಯದಲ್ಲಿ ಕಡಿಮೆ ಮತದಾನ

    ಬೆಂಗಳೂರು: ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆ ಮುಕ್ತಾಯವಾಗಿದ್ದು, ನವೆಂಬರ್ 6 ರಂದು ಪ್ರಕಟವಾಗುವ ಫಲಿತಾಂಶದತ್ತ ಎಲ್ಲರ ದೃಷ್ಟಿ ನೆಟ್ಟಿದೆ.

    ಇತ್ತ ಎಲ್ಲೆಲ್ಲಿ ಎಷ್ಟೆಷ್ಟು ಮತದಾನ ಆಗಿದೆ? ಎಲ್ಲಿ ವೋಟ್ ಹೆಚ್ಚಾಗಿದ್ದರೆ ಲಾಭ? ಕಡಿಮೆಯಾದರೆ ಏನಾಗಬಹುದು ಎನ್ನುವ ಲೆಕ್ಕಾಚಾರದಲ್ಲಿ ರಾಜಕೀಯ ನಾಯಕರು ಮುಳುಗಿದ್ದಾರೆ. ಈ ಕುರಿತು ಮಾಹಿತಿ ನೋಡುವುದಾದರೆ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಮತದಾನ ಆಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಮತದಾನ ಆಗಿದೆ.

    ಯಾವ ಕ್ಷೇತ್ರದಲ್ಲಿ ಎಷ್ಟು?
    ಕಳೆದ ಮೂರು ವಾರಗಳಿಂದ ರಾಜಕೀಯ ರಣರಂಗವಾಗಿದ್ದ ಬಳ್ಳಾರಿಯಲ್ಲಿ ಸುಗಮ ಮತದಾನ ನಡೆದಿದ್ದು, ಆದರೆ ಮತದಾನದ ಪ್ರಮಾಣ ಕಡಿಮೆ ಆಗಿದೆ. ಮತದಾರರು ಮತಗಟ್ಟೆಗೆ ಬರಲು ಹೆಚ್ಚು ಉತ್ಸಾಹ ತೋರದ ಕಾರಣ ಶೇ.63.85 ರಷ್ಟು ಮತದಾನ ನಡೆದಿದೆ. ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಸ್ಪರ್ಧಿಸಿರುವ ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯಲ್ಲಿಯೂ ಮತದಾನ ಪ್ರಮಾಣ ನಿರೀಕ್ಷೆಯಷ್ಟು ನಡೆಯದೇ ಶೇ. 61.05 ದಾಖಲಾಗಿದೆ. ಈ ನಡುವೆ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಕೊನೆಯ ದಿನವೂ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರಲ್ಲಿ ಒಮ್ಮತ ಮೂಡಲೇ ಇಲ್ಲ. ಈ ಗೊಂದಲದ ನಡುವೆ ಶೇ.53.93 ರಷ್ಟು ಮತದಾನ ನಡೆದಿದ್ದು, ಈ ಮೂಲಕ ಅತ್ಯಂತ ಕಡಿಮೆ ಮತದಾನವಾಗಿದೆ.

    ವಿಧಾನಸಭೆ ಉಪಚುನಾವಣೆ ನಡೆದ ಕ್ಷೇತ್ರಗಳತ್ತ ಗಮನ ಹರಿಸಿದರೆ ಸಿಎಂ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ರಾಮನಗರದಲ್ಲಿ ವಿಚಿತ್ರ ಸನ್ನಿವೇಶದಲ್ಲಿ ಮತದಾನ ನಡೆಯಿತು. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ 2 ದಿನಗಳಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ನಡುವೆ ಶೇ.71.88 ರಷ್ಟು ಆಗಿದೆ. ಸಿದ್ದು ನ್ಯಾಮಗೌಡ ಅವರ ಆಕಾಲಿಕ ಮರಣದಿಂದ ತೆರವಾಗಿದ್ದ ಜಮಖಂಡಿ ಕ್ಷೇತ್ರದಲ್ಲಿ ಅತ್ಯಧಿಕ 77.17ರಷ್ಟು ಮತದಾನ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv