Tag: by election

  • 2 ಕ್ಷೇತ್ರ ಬಿಟ್ಟು 13 ಕ್ಷೇತ್ರಗಳ ಟಿಕೆಟ್ ಅನರ್ಹರಿಗೆ ಹಂಚಿಕೆ

    2 ಕ್ಷೇತ್ರ ಬಿಟ್ಟು 13 ಕ್ಷೇತ್ರಗಳ ಟಿಕೆಟ್ ಅನರ್ಹರಿಗೆ ಹಂಚಿಕೆ

    ಬೆಂಗಳೂರು: 2 ಕ್ಷೇತ್ರ ಬಿಟ್ಟು ಅನರ್ಹಗೊಂಡ 13 ಕ್ಷೇತ್ರಗಳ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಮೂಲಕ ಸಿಎಂ ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

    ಇಂದು ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ 13 ಕ್ಷೇತ್ರಗಳ ಟಿಕೆಟ್ ಹಂಚಿಕೆಯಾಗಿದೆ. ಶಿವಾಜಿ ನಗರ ಮತ್ತು ಶಂಕರ್ ಪ್ರತಿನಿಧಿಸುತ್ತಿರುವ ರಾಣಿಬೆನ್ನೂರು ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆಯಾಗಿಲ್ಲ. ಶಂಕರ್ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಹೇಳಿದ ಬೆನ್ನಲ್ಲೇ ಬಿಜೆಪಿ ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ.

    ರಮೇಶ್ ಜಾರಕಿಹೊಳಿ(ಗೋಕಾಕ್) ಎಂಟಿಬಿ ನಾಗರಾಜ್(ಹೊಸಕೋಟೆ), ಎಚ್. ವಿಶ್ವನಾಥ್(ಹುಣಸೂರು), ಮಹೇಶ್ ಕುಮಟಳ್ಳಿ(ಅಥಣಿ) ಶ್ರೀಮಂತ ಪಾಟೀಲ್(ಕಾಗವಾಡ) ಶಿವರಾಂ ಹೆಬ್ಬಾರ್(ಯಲ್ಲಾಪುರ) ಬಿಸಿ ಪಾಟೀಲ್(ಹಿರೇಕೆರೂರು) ಆನಂದ್ ಸಿಂಗ್ (ವಿಜಯನಗರ), ಡಾ.ಸುಧಾಕರ್(ಚಿಕ್ಕಬಳ್ಳಾಪುರ) ಬೈರತಿ ಬಸವರಾಜ್(ಕೆಆರ್ ಪುರ) ಎಸ್‍ಟಿ ಸೋಮಶೇಖರ್(ಯಶವಂತಪುರ), ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ನಾರಾಯಣ ಗೌಡ(ಕೆ.ಆರ್.ಪೇಟೆ) ಅವರಿಗೆ ಟಿಕೆಟ್ ನೀಡಲಾಗಿದೆ.

    ಅನರ್ಹ ಶಾಸಕರು ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಯಡಿಯೂರಪ್ಪ, ಇದೊಂದು ಐಹಿಹಾಸಿಕ ದಿನ. ಬಹುಶಃ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಈ 17 ಮಂದಿ ಜೆಡಿಎಸ್, ಕಾಂಗ್ರೆಸ್ ಶಾಸಕರು ಕಾರಣ. ಅವರು ತಮ್ಮ ಸಚಿವ ಸ್ಥಾನ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಮಗಾಗಿ ಎಲ್ಲಾ ರೀತಿಯ ತ್ಯಾಗವನ್ನು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ನಂತರ ಅವರೆಲ್ಲರೂ ನಮ್ಮ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಸದಸ್ಯತ್ವವನ್ನು ಪಡೆದು ಬಿಜೆಪಿ ಸೇರಿದ್ದಾರೆ ಎಂದು ಹೇಳಿದರು.

    ರಾಜೀನಾಮೆ ಕೊಟ್ಟು ನಮ್ಮ ಜೊತೆ ಬಂದಂತಹ ವೇದಿಕೆ ಮೇಲಿರುವ ಶಾಸಕರಿಗೆ, ಬೆಂಬಲಿಗರಿಗೆ ಸಿಎಂ ಆಗಿ ನಳಿನ್ ಕುಮಾರ್ ಅವರ ಪರವಾಗಿ ಭರವಸೆ ಕೊಡುತ್ತಿದ್ದೇನೆ. ನಾವೇನು ನಿಮಗೆ ಭರವಸೆ ಮಾತನ್ನು ಕೊಟ್ಟಿದ್ದೀವೋ ಅದನ್ನು ನಾವು ಅಕ್ಷರಶಃ ಪಾಲಿಸುತ್ತೇವೆ. ನಿಮಗೆ ನಂಬಿಕೆದ್ರೋಹ ಅಥವಾ ವಿಶ್ವಾಸದ್ರೋಹ ಮಾಡುವುದಿಲ್ಲ ಎಂದು ಹೇಳಿದರು.

    ಬಹುಶಃ ದೇಶದ ರಾಜಕಾರಣದಲ್ಲಿ ಈ ರೀತಿ 17 ಮಂದಿ ಶಾಸಕರು, ಮಂತ್ರಿಗಳು ರಾಜೀನಾಮೆ ಕೊಟ್ಟು ಹೊರಬಂದ ಉದಾಹರಣೆ ಇಲ್ಲ. ಇವರು ನಮಗಾಗಿ ಎಲ್ಲಾ ರೀತಿಯ ತ್ಯಾಗ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಕೈ ಜೊಡಿಸಿ ಪ್ರಾರ್ಥಿಸುತ್ತೇನೆ, ಇವರ ಗೆಲುವು ನಮ್ಮ ಜವಾಬ್ದಾರಿ. ಉಪಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡೋಣ ಎಂದು ಕರೆ ನೀಡಿದರು.

  • ಕುಮಾರಣ್ಣನ ಬೆಂಬಲಕ್ಕೆ ಧನ್ಯವಾದ, ದ್ರೋಹಕ್ಕೆ ಜನ ತೀರ್ಪು ಕೊಡ್ತಾರೆ: ಶರತ್ ಬಚ್ಚೇಗೌಡ

    ಕುಮಾರಣ್ಣನ ಬೆಂಬಲಕ್ಕೆ ಧನ್ಯವಾದ, ದ್ರೋಹಕ್ಕೆ ಜನ ತೀರ್ಪು ಕೊಡ್ತಾರೆ: ಶರತ್ ಬಚ್ಚೇಗೌಡ

    ಬೆಂಗಳೂರು: ಪಕ್ಷೇತರ ಅಭ್ಯರ್ಥಿಯಾಗಿ ಇಂದು ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಬೆಂಬಲಕ್ಕೆ ನಿಂತ ಮಾಜಿ ಸಿಎಂ ಕುಮಾರಸ್ವಾಮಿಗೆ ಧನ್ಯವಾದ ತಿಳಿಸಿದ್ದಾರೆ.

    ಹಾಗೆಯೇ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಶರತ್ ಬಚ್ಚೇಗೌಡ ಹಾಗೂ ಅವರ ಕುಟುಂಬಸ್ಥರು ಮನೆ ದೇವರಾದ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಚೆನ್ನಕೇಶವಸ್ಚಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹೊಸಕೋಟೆ, ಕಾಗವಾಡ, ಗೋಕಾಕ್‌ನಲ್ಲಿ ಬಿಜೆಪಿಗೆ ಬಂಡಾಯದ ಬಿಸಿ!

    ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶರತ್ ಬಚ್ಚೇಗೌಡ, ಬಿಜೆಪಿಯ ಯಾವ ನಾಯಕರೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ನನಗೆ ಎಲ್ಲಾ ಪಕ್ಷಗಳ ಬೆಂಬಲ ಬೇಕು. ಹೀಗಾಗಿ ಬೆಂಬಲ ಘೋಷಿಸಿದ ಕುಮಾರಣ್ಣನಿಗೆ ಧನ್ಯವಾದಗಳು ಎಂದು ಹೇಳಿದರು.

    ಹೋಸಕೋಟೆಯಲ್ಲಿ ಸದ್ಯ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ನಡೆಯುವಂತೆ ಕಾಣುತ್ತಿದೆ. ಒಂದೆಡೆ ಬಿಜೆಪಿಯಿಂದ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಲಾಗುತ್ತಿದೆ. ಅವರು ಉಪಚುನಾವಣೆ ಕಣಕ್ಕೆ ಇಳಿಯುತ್ತಾರೆ ಎನ್ನಲಾಗಿದೆ. ಕಾಂಗ್ರೆಸ್‍ನಿಂದ ಸುರೇಶ್ ಅವರ ಪತ್ನಿ ಸ್ಪರ್ಧಿಸುತ್ತಿದ್ದಾರೆ. ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದೇನೆ. ಹೀಗಾಗಿ ನಮ್ಮ ಮೂವರ ಮಧ್ಯೆಯೇ ಸ್ಪರ್ಧೆ ಇರಲಿದೆ ಎಂದರು.

    ತಾಲೂಕಿಗೆ ಆದ ದ್ರೋಹಕ್ಕೆ ಜನರು ತೀರ್ಪು ಕೊಡುತ್ತಾರೆ. ತಾಲೂಕಿನ ಮಗ, ಈ ನೆಲದ ಮಣ್ಣಿನ ಮಗನೆಂದು ನನಗೆ ಜನರು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದರು. ಈ ವೇಳೆ ಎಂಟಿಬಿ ನಾಗರಾಜ್ ಬಿಜೆಪಿ ಸೇರ್ಪಡೆ ಬಗ್ಗೆ ಪ್ರಶ್ನಿಸಿದ್ದಕ್ಕೆ, ಈ ಬಗ್ಗೆ ಬಿಜೆಪಿ ನಾಯಕರನ್ನು ಪ್ರಶ್ನಿಸಿ, ಇದಕ್ಕೆ ನಾನು ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದು ಪ್ರತಿಕ್ರಿಯಿಸಲು

  • ಜಿಟಿಡಿಗೆ ಫ್ಯೂಸ್ ಹೋಗಿದೆ, ಇನ್ನೆಲ್ಲಿ ಶಾಕ್ ಹೊಡೆಯುತ್ತೆ- ಎಚ್‍ಡಿಕೆ ವ್ಯಂಗ್ಯ

    ಜಿಟಿಡಿಗೆ ಫ್ಯೂಸ್ ಹೋಗಿದೆ, ಇನ್ನೆಲ್ಲಿ ಶಾಕ್ ಹೊಡೆಯುತ್ತೆ- ಎಚ್‍ಡಿಕೆ ವ್ಯಂಗ್ಯ

    ಬೆಂಗಳೂರು: ಮಾಜಿ ಸಚಿವ, ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಜೆಡಿಎಸ್ ಪಕ್ಷವನ್ನು ತೊರೆಯಲಿದ್ದಾರೆ ಎಂಬ ಬಗ್ಗೆ ವ್ಯಂಗ್ಯವಾಡಿರುವ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು, ಜಿಟಿಡಿ ಅವರಿಗೆ ಫ್ಯೂಸ್ ಹೋಗಿದೆ, ಇನ್ನೆಲ್ಲಿ ಶಾಕ್ ಹೊಡೆಯುತ್ತದೆ ಎಂದು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಜೆಡಿಎಸ್‍ಗೆ ಮತ್ತೊಂದು ಶಾಕ್. ಜಿಟಿ ದೇವೇಗೌಡರು ಜೆಡಿಎಸ್ ಬಿಡುತ್ತಾರೆ ಎಂದು ವರದಿ ಮಾಡಿದ್ದವು. ಆದರೆ ಅದು ಶಾಕ್ ಹೊಡೆಯುವುದಿಲ್ಲ. ಈಗಾಗಲೇ ಫ್ಯೂಸ್ ಕಿತ್ತು ಹೋಗಿದೆ. ಎಂಎಲ್‍ಸಿ ಪುಟ್ಟಣ್ಣ ಕೂಡ 3 ವರ್ಷದ ಹಿಂದೆ ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗಿ ಟೋಪಿ ಹಾಕಿದ್ದಾರೆ. ಇನ್ನೂ ಆ ಶಾಕ್ ಈಗ ಹೇಗೆ ಹೊಡೆಯುತ್ತೆ. ಅಲ್ಲಿಯೂ ಕರೆಂಟ್ ಇಲ್ಲ. ಇದೆಲ್ಲಾ ಮುಗಿದ ಕಥೆಗಳು ಅಷ್ಟೆ. ಮತ್ತೆ ಶಾಕ್ ಹೊಡೆಯುವ ಪ್ರಶ್ನೆಯೇ ಇಲ್ಲ ಎಂದರು.

    ಪರಿಷತ್ ಸದಸ್ಯರ ಜೊತೆ ಸಭೆ ನಡೆಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹೊರಟ್ಟಿಯವರದ್ದು ನನ್ನ ಸಂಬಂಧವೇ ಬೇರೆ ರೀತಿಯಾಗಿದ್ದು, ಹೊರಟ್ಟಿ ಅವರು ಇವತ್ತಿಗೂ ನನ್ನ ಅಣ್ಣನಂತಿದ್ದಾರೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನನಗೆ ಎಂಎಲ್‍ಸಿ, ಎಂಎಲ್‍ಎ ಗಳಲ್ಲಿ ಯಾವುದೇ ಭೇದವಿಲ್ಲ ಎಂದರು.

    ರಾಜ್ಯದಲ್ಲಿ ಅನೇಕ ದಿನಗಳಿಂದ ರಾಜಕೀಯ ಅಸ್ಥಿರತೆ ಇತ್ತು. ಕೆಲ ಶಾಸಕರನ್ನು ಸ್ಪೀಕರ್ ಅನರ್ಹ ಮಾಡಿದ್ದರು. ಇಂದು ನ್ಯಾಯಾಲಯ ತೀರ್ಪು ನೀಡಿದ್ದು, ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಇಂದಿನ ತೀರ್ಪಿನ ಬಗ್ಗೆ ಅನೇಕ ವಿಚಾರ ಸಾರ್ವಜನಿಕವಾಗಿ ಚರ್ಚೆ ಆಗುತ್ತಿದೆ. ಸ್ಪೀಕರ್ ಅವರ ನಿರ್ಧಾರವನ್ನು ಕೋರ್ಟ್ ಎತ್ತಿಹಿಡಿದೆ. ಸ್ಪೀಕರ್ ಅವರು ಮತ್ತೆ ಸ್ಪರ್ಧೆ ಮಾಡಬಾರದು ಎಂದು ಹೇಳಿದ್ದರು. ಆದರೆ ಅದನ್ನು ನ್ಯಾಯಾಲಯ ಸಡಿಲಗೊಳಿಸಿ, ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಕೊಟ್ಟಿದೆ. ಈ ಪ್ರಕರಣ ನಾನು ಹೊಡೆದ ಹಾಗೆ ಮಾಡಿ ನಾನು ಅಳೋ ಹಾಗೇ ಮಾಡ್ತೀನಿ ಎಂಬಂತಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಸತ್ವ ಇಲ್ಲ ಎಂದರು.

    ಪಕ್ಷಾಂತರ ಕಾಯ್ದೆ ರದ್ದು ಮಾಡಿ: ಸುಮ್ಮನೆ ಶಾಸಕರಿಗೆ ಭಯ ಬೀಳಿಸುಲು ಪಕ್ಷಾಂತರ ನಿಷೇಧ ಕಾಯ್ದೆ ಏಕೆ ಬೇಕು? ಸುಮ್ಮನೆ ಎಲ್ಲಿರಿಗೂ ಮುಕ್ತವಾಗಿ ಅವಕಾಶ ನೀಡುವುದು ಒಳ್ಳೆಯದು. ಈ ಕಾಯ್ದೆ ತಂದ ಉದ್ದೇಶ ಸರಿಯಾಗಿಲ್ಲ. ಕೇವಲ ಕಾನೂನು ರಚನೆ ಮಾಡಿ ಅದು ಸರಿಯಾಗಿ ಅನುಷ್ಠಾನ ಆಗಿಲ್ಲ ಎಂದರೆ ಹೇಗೆ? ಸದ್ಯದ ಸ್ಥಿತಿಯಲ್ಲಿ ನಾವು ಅನಿವಾರ್ಯವಾಗಿ ನ್ಯಾಯಾಲಯದ ತೀರ್ಪು ಸ್ವಾಗತ ಮಾಡಲೇಬೇಕು. ಈ ಕಾನೂನು ವ್ಯವಸ್ಥೆಗೆ ಅರ್ಥವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇದೇ ವೇಳೆ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ವಿರುದ್ಧ ಮಾಡಿದ್ದ ಆರೋಪಗಳಿಗೆ ತೀರುಗೇಟು ನೀಡಿ 14 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಈಗಾಗಲೇ ಚರ್ಚೆ ನಡೆದಿದ್ದು, ಅಭ್ಯರ್ಥಿಗಳನ್ನು ಅಂತಿಮ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು. ಅಲ್ಲದೇ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಕಾಂಗ್ರೆಸ್ ಅವರು ರಾಜು ಕಾಗೆ ಅವರನ್ನು ಕರೆದುಕೊಂಡು ಬಂದಿದ್ದಾರೆ. ಆದರೆ ನಾವು ಯಾರೊಂದಿಗೂ ಕೈ ಜೋಡಿಸಿದೇ ಚುನಾವಣೆಯಲ್ಲಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಮತ್ತು ಬಿಜೆಪಿ ನಮಗೆ ಸಮಾನ ಶತ್ರುಗಳು. ಜೆಡಿಎಸ್ ಅನ್ನು ಅಷ್ಟು ಸುಲಭವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಸಿದರು. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ನಮ್ಮ ಅವಶ್ಯಕತೆ ಇದ್ದರೆ ಬೆಂಬಲ ಕೊಡುತ್ತೇವೆ ಸ್ಪಷ್ಟಪಡಿಸಿದರು.

  • ಅಂದು ತಂದೆಯ ವಿರುದ್ಧ ಸ್ಪರ್ಧೆ, ಇಂದು ಮಗನಿಗೆ ಬೆಂಬಲ

    ಅಂದು ತಂದೆಯ ವಿರುದ್ಧ ಸ್ಪರ್ಧೆ, ಇಂದು ಮಗನಿಗೆ ಬೆಂಬಲ

    – ಶರತ್ ಬಚ್ಚೇಗೌಡ ಬೆಂಬಲಿಸಲು ಎಚ್‍ಡಿಕೆ ನಿರ್ಧಾರ
    – ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶರತ್ ಗುರುವಾರ ನಾಮಪತ್ರ ಸಲ್ಲಿಕೆ

    ಬೆಂಗಳೂರು: ಉಪಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಅವರನ್ನು ಸೋಲಿಸಲೇಬೇಕೆಂದು ಜೆಡಿಎಸ್ ತೀರ್ಮಾನಿಸಿದ್ದು ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದೆ.

    ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ವಿರುದ್ಧ ಅಭ್ಯರ್ಥಿಯನ್ನು ಹಾಕದೇ ನಾವು ಬೆಂಬಲಿಸುತ್ತೇವೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, 15 ಕ್ಷೇತ್ರಗಳ ಪೈಕಿ 14ರಲ್ಲಿ ಮಾತ್ರ ನಾವು ಸ್ಪರ್ಧೆ ಮಾಡುತ್ತೇವೆ. ಹೊಸ ಕೋಟೆಯಲ್ಲಿ ಶರತ್ ಬಚ್ಚೇಗೌಡ ಅವರಿಗೆ ನಾವು ಬೆಂಬಲ ನೀಡುತ್ತೇವೆ. ಪಕ್ಷೇತರ ಅಭ್ಯರ್ಥಿಗೆ ನಮ್ಮ ಅವಶ್ಯಕತೆ ಇದ್ದರೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು. ಈ ವೇಳೆ ಜೆಡಿಎಸ್‍ಗೆ ಬಂದರೆ ಸೇರಿಸಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ಅವರು ನಮ್ಮ ಮನೆಯವರೇ ಮುಂದೆ ಏನ್ ಆಗುತ್ತದೋ ನೋಡೋಣ ಎಂದು ಉತ್ತರಿಸಿದರು.

    ಕಾಂಗ್ರೆಸ್, ಬಿಜೆಪಿಯ ಜೊತೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡುವುದರಿಂದ ಹೊಸಕೋಟೆಯಲ್ಲಿ ಚುನಾವಣಾ ಕಾವು ನಿಧಾನವಾಗಿ ಏರತೊಡಗಿದೆ.

    ಸುಪ್ರೀಂ ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ್ದ ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ನನ್ನ ವಿರುದ್ಧ ಶರತ್ ಸ್ಪರ್ಧಿಸಲಿ ನೋಡೋಣ ಎಂದು ಸವಾಲು ಎಸೆದಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಬೆಂಬಲಿಗರ ಜೊತೆ ಸಭೆ ನಡೆಸಿದ ಶರತ್ ಗುರುವಾರ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.

    ಶರತ್ ಬಂಡಾಯವಾಗಿ ಸ್ಪರ್ಧಿಸಲು ಮುಂದಾಗುತ್ತಿದ್ದಂತೆ ಹಿರಿಯ ನಾಯಕ ಅಶೋಕ್ ಅವರು ಪಕ್ಷದ ವಿರುದ್ಧ ಕೆಲಸ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅನರ್ಹರಿಗೆ ಮೋಸವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಶರತ್ ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ. ನಾನೂ ಸಹ ಈ ಕುರಿತು ಅವರ ಬಳಿ ಮಾತನಾಡುತ್ತೇನೆ. ಅಭ್ಯರ್ಥಿ ಘೋಷಣೆಗೂ ಮೊದಲು ಇಂತಹ ಗೊಂದಲಗಳು ಸಹಜ. ಆದರೆ ಪಕ್ಷ ಒಂದು ಬಾರಿ ಅಭ್ಯರ್ಥಿಗಳನ್ನು ಘೋಷಿಸಿದರೆ ಯಾರೂ ಅದರ ವಿರುದ್ಧ ಮಾತನಾಡಬಾರದು. ಈ ರೀತಿಯ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ನಾನು ನಂಬಿದ್ದೇನೆ ಎಂದಿದ್ದರು.

    ಎಂಟಿಬಿ ರಾಜೀನಾಮೆ ನೀಡುವ ಮೊದಲು ಅವರ ಮನೆಗೆ ಡಿಕೆ ಶಿವಕುಮಾರ್ ತೆರಳಿ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲದೇ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯನವರು ತೆರಳಿ ರಾಜೀನಾಮೆ ನೀಡದಂತೆ ಮನವಿ ಮಾಡಿದ್ದರು. ಜೆಡಿಎಸ್, ಕೈ ನಾಯಕರ ಮಾತುಕತೆಯ ಹೊರತಾಗಿಯೂ ಎಂಟಿಬಿ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದರು.

    ಈ ಹಿಂದೆ ಕುಮಾರಸ್ವಾಮಿ ಮುಂದೆಯೇ ಕೈ ಟ್ರಬಲ್ ಶೂಟರ್ ಶಿವಕುಮಾರ್ ಬೆಂಗಳೂರಿನ ಐವರು ಶಾಸಕರನ್ನು ನಾನೇ ಸೋಲಿಸುತ್ತೇನೆ ಎಂದು ಶಪಥ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಹೊಸಕೋಟೆಯ ಎಂಟಿಬಿ ನಾಗರಾಜ್, ಕೆಆರ್ ಪುರಂ ಭೈರತಿ ಬಸವರಾಜು, ಯಶವಂತಪುರದ ಎಸ್.ಟಿ.ಸೋಮಶೇಖರ್, ಮಹಾಲಕ್ಷ್ಮಿ ಲೇಔಟಿನ ಗೋಪಾಲಯ್ಯ ಹಾಗೂ ರಾಜರಾಜೇಶ್ವರಿ ನಗರದ ಮುನಿರತ್ನ ಅವರನ್ನು ಸೋಲಿಸುತ್ತೇನೆ ಡಿಕೆಶಿ ಹೇಳಿದ್ದರು.

    2014ರಲ್ಲಿ ಏನಾಗಿತ್ತು?
    ದೇವೇಗೌಡರ ಬಗ್ಗೆ ಹರಿಹಾಯ್ದ ಪರಿಣಾಮ ಕೊನೆ ಕ್ಷಣದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಚ್‍ಡಿ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದರು. ಹೀಗಾಗಿ ಓಕ್ಕಲಿಗರ ಮತ ವಿಭಜನೆಯಿಂದಾಗಿ ಕೇವಲ 9,520 ಮತಗಳ ಅಂತರದಿಂದ ಬಚ್ಚೇಗೌಡ ಅವರು ಸೋತಿದ್ದರು.

    ಲೋಕಸಭಾ ಚುನಾವಣೆಯಲ್ಲಿ ಬಚ್ಚೇಗೌಡ ಅವರು ಗೆಲ್ಲಲ್ಲಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ಚುನಾವಣಾ ಪ್ರಚಾರದ ಸಮಯದಲ್ಲಿ ಬಚ್ಚೇಗೌಡರು ದೇವೇಗೌಡ ಮತ್ತು ಅವರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಇದರ ಪರಿಣಾಮ ಕೊನೆಯ ಕ್ಷಣದಲ್ಲಿ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಎಚ್‍ಡಿಕೆ ಅಭ್ಯರ್ಥಿಯಾದ ಕೂಡಲೇ ಚುನಾವಣೆಯ ಸಂಪೂರ್ಣ ಚಿತ್ರಣವೇ ಬದಲಾಯಿತು. ಒಕ್ಕಲಿಗರ ಮತ ವಿಭಜನೆಯಾದ ಪರಿಣಮ ಬಚ್ಚೇಗೌಡ ಭಾರೀ ಸ್ಪರ್ಧೆ ನೀಡಿದರೂ ಕೊನೆ ಕ್ಷಣದಲ್ಲಿ ಮೋಯ್ಲಿ ಮುಂದೆ 9,520 ಮತಗಳ ಅಂತರದಿಂದ ಸೋಲನ್ನಪ್ಪಿದರು. ಈ ಕಾರಣಕ್ಕೆ ತಮ್ಮ ಗೆಲುವಿನ ಹಾದಿ ಕಷ್ಟ ಆಗುತ್ತದೆ ಎಂದುಕೊಂಡಿರುವ ಬಚ್ಚೇಗೌಡ ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡ ಅವರು ವಿರುದ್ಧ ತುಟಿ ಬಿಚ್ಚರಲಿಲ್ಲ.

    ಕಳೆದ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಎಂ.ವೀರಪ್ಪ ಮೋಯ್ಲಿ 4,24,800 ವೋಟ್ ಗಳಿಸಿದ್ದರೆ ಬಿ.ಎನ್ ಬಚ್ಚೇಗೌಡ ಅವರಿಗೆ 4,15,280 ಮತಗಳು ಬಿದ್ದಿತ್ತು. ಎಚ್.ಡಿ ಕುಮಾರಸ್ವಾಮಿ ಅವರು 3,46,339 ಲಕ್ಷ ಮತ ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಚ್ಚೇಗೌಡ 7,45,912 ಮತಗಳನ್ನು ಪಡೆದಿದ್ದರೆ ಮೊಯ್ಲಿ 5,63,802 ಮಗಳನ್ನು ಪಡೆದು ಸೋತಿದ್ದರು.

  • ಸುಧಾಕರ್ ತ್ಯಾಗಮೂರ್ತಿ, ಅಭಿವೃದ್ಧಿ ಹರಿಕಾರ – ಉಲ್ಟಾ ಹೊಡೆದ ಶಿವಾನಂದ್

    ಸುಧಾಕರ್ ತ್ಯಾಗಮೂರ್ತಿ, ಅಭಿವೃದ್ಧಿ ಹರಿಕಾರ – ಉಲ್ಟಾ ಹೊಡೆದ ಶಿವಾನಂದ್

    ಚಿಕ್ಕಬಳ್ಳಾಪುರ: ಕೆಲ ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಚಿಕ್ಕಬಳ್ಳಾಪುರ ಅನರ್ಹ ಶಾಸಕ ಸುಧಾಕರ್ ವಿರುದ್ಧ ವಾಚಾಮಗೋಚರ ಬೈದಿದ್ದ ಮಾಜಿ ಶಾಸಕ ಎಂ.ಶಿವಾನಂದ್ ಇಂದು ಇದೇ ಅನರ್ಹ ಶಾಸಕರನ್ನ ತ್ಯಾಗಮೂರ್ತಿ, ಅಭಿವೃದ್ಧಿಯ ಹರಿಕಾರ ಎಂದು ಹಾಡಿ ಹೊಗಳಿದ್ದಾರೆ.

    ಇಂದು ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಿವಾನಂದ್ ಸುಧಾಕರ್ ಅವರನ್ನು ಹಾಡಿ ಹೊಗಳಿದ್ರು. ಅನರ್ಹ ಶಾಸಕ ಸುಧಾಕರ್ ಅವರನ್ನ ತ್ಯಾಗಮೂರ್ತಿ, ಚಿಕ್ಕಬಳ್ಳಾಪುರದ ಅಭಿವೃದ್ಧಿಯ ಹರಿಕಾರ ಎಂದು ಹೊಗಳಿದರು. ಜಿಲ್ಲೆಯ ಅಭಿವೃದ್ಧಿಗೋಸ್ಕರ ರಾಜೀನಾಮೆ ನೀಡಿದ ಏಕೈಕ ವ್ಯಕ್ತಿ ಸುಧಾಕರ್, ವಿಷನ್ 2020-2030 ಅಂತ ಗುರಿ ಹೊಂದಿರುವ ಇಂತಹ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಉಪಚುನಾವಣೆಯಲ್ಲಿ ಗೆಲ್ಲಿಸಲು ನಾವು ಶಸ್ತ್ರಭ್ಯಾಸ ತಯಾರಿ ಮಾಡಿಕೊಂಡು ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿದರು.

    ಈ ಹಿಂದೆ ಆಗಸ್ಟ್ 24 ರಂದು ಚಿಕ್ಕಬಳ್ಳಾಪುರ ಹೊರವಲಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಶಿವಾನಂದ್, ಅನರ್ಹ ಶಾಸಕ ಸುಧಾಕರ್ ಚಿಕ್ಕಬಳ್ಳಾಪುರದ ಮಹಾರಾಜರು, ಜನರಿಗೆ ಚೆನ್ನಾಗಿ ಟೋಪಿ ಹಾಕ್ತಾರೆ. ಬಿಜೆಪಿಗೆ ಸೆಲ್ಫ್ ಸೇಲ್ ಆದರು ಎಂದು ಲೇವಡಿ ಮಾಡಿದ್ದರು. ಅಲ್ಲದೇ ಚಿಕ್ಕಬಳ್ಳಾಪುರ ಕಂಟ್ರಾಕ್ಟರ್ ಗಳನ್ನ ಹಿಂದಿಕ್ಕಿ ಎಲ್ಲಾ ಕಾಂಟ್ರಾಕ್ಟ್ ಕೆಲಸ ತಾನೇ ಮಾಡುತ್ತಿದ್ದ ಸುಧಾಕರ್, ಚಿಕ್ಕಬಳ್ಳಾಪುರದಲ್ಲಿ ಗನ್ ಸಂಸ್ಕೃತಿ ತಂದ ಎಂದು ಕಿಡಿ ಕಾರಿದ್ದರು.

  • ಸುಮಲತಾರನ್ನು ಭೇಟಿಯಾದ ‘ಕೈ’ ಮಾಜಿ ಸಚಿವ

    ಸುಮಲತಾರನ್ನು ಭೇಟಿಯಾದ ‘ಕೈ’ ಮಾಜಿ ಸಚಿವ

    ಬೆಂಗಳೂರು: ಮಂಡ್ಯ ಸಂಸದೆ ಸುಮಲತಾರನ್ನು ಕೆ.ಆರ್.ಪೇಟೆಯ ಮಾಜಿ ಕಾಂಗ್ರೆಸ್ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಭೇಟಿ ಮಾಡಿದ್ದು, ಉಪಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

    ಮಾಜಿ ಸಚಿವ ನರೇಂದ್ರ ಸ್ವಾಮಿ ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರೊಂದಿಗೆ ಕೆ.ಬಿ.ಚಂದ್ರಶೇಖರ್ ಸುಮಲತಾ ನಿವಾಸಕ್ಕೆ ಭೇಟಿ ನೀಡಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

    ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕೆ.ಬಿಚಂದ್ರಶೇಖರ್ ರಾವ್, ಸುಮಲತಾ ಅವರು ಸಂಸದರಾದಾಗ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಬೆಂಬಲ ನೀಡಿದ್ದರು. ಈಗ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಎಂದು ಕೇಳಲು ಬಂದಿದ್ದೇವೆ. ಅವರು ಬೆಂಬಲ ನೀಡುವ ಕುರಿತು 2 ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿ ಸಹಾಯ ಮಾಡಿದ್ದಾರೆ ಎಂದು ಸುಮಲತಾ ಅವರು ಹೇಳಿ ಕಾರ್ಯಕರ್ತರ ಸಹಾಯ ನೆನಪಿಸಿಕೊಂಡರು.

    ಇದೇ ವೇಳೆ ನಾರಾಯಣ ಗೌಡ ಬೆಂಬಲ ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದ ಅವರು, ಸಂಸದರಾಗಿ ಚುನಾವಣೆಗೆ ನಿಂತುಕೊಂಡಾಗ ಸುಮಲತಾರನ್ನು ಟೀಕೆ ಮಾಡಿದ್ದರು. ಚಿತ್ರರಂಗದವರು ಎಂದು ಟೀಕಿಸಿದ್ದರು. ಇದನ್ನೆಲ್ಲಾ ಸಂಸದರು ಗಮನದಲ್ಲಿ ಇಟ್ಟುಕೊಂಡಿದ್ದು, ಅವರು ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ. ಪಕ್ಷದ ಹೈಕಮಾಂಡ್ ಯಾರನ್ನು ಅಭ್ಯರ್ಥಿ ಮಾಡಿದರು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.

  • ಉಪಚುನಾವಣೆ ಅಭ್ಯರ್ಥಿ ಆಯ್ಕೆ- ಕಾಂಗ್ರೆಸ್‍ನಲ್ಲಿ ಬಿಗ್ ಫೈಟ್

    ಉಪಚುನಾವಣೆ ಅಭ್ಯರ್ಥಿ ಆಯ್ಕೆ- ಕಾಂಗ್ರೆಸ್‍ನಲ್ಲಿ ಬಿಗ್ ಫೈಟ್

    ಬೆಂಗಳೂರು: ಮೈತ್ರಿ ಸರ್ಕಾರ ಪತನದ ಬಳಿಕ ನಡೆದ ರಾಜ್ಯ ಕಾಂಗ್ರೆಸ್‍ನಲ್ಲಿ ನಡೆದ ಬೆಳವಣಿಗೆಗಳು ಉಪಚುನಾವಣೆ ಹತ್ತಿರವಾಗುತ್ತಿದಂತೆ ಬೇರೆಯದ್ದೇ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

    ಈಗಾಗಲೇ ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಉಳಿದ 7 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಮೂಲ ಹಾಗೂ ವಲಸಿಗ ನಾಯಕರ ನಡುವೆ ವಾಕ್ಸಮರ ನಡೆದಿದೆ.

    ಸಭೆ ಆರಂಭವಾಗುತ್ತಿದಂತೆ ಸಿದ್ದರಾಮಯ್ಯ ಬಳಗ, ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುತ್ತಿದೆ ಎಂದು ಎಐಸಿಸಿ ಮುಖಂಡ ಬಿಕೆ ಹರಿಪ್ರಸಾದ್ ಸಿಡಿದೆದ್ದರು. ಶಿವಾಜಿನಗರದಿಂದ ರಿಜ್ವಾನ್ ಕಣಕ್ಕೆ ಇಳಿಸುವ ಸಿದ್ದರಾಮಯ್ಯ ಮಾತಿಗೆ ಸಿಡಿಮಿಡಿಗೊಂಡ ಹರಿಪ್ರಸಾದ್ ಅವರು, ನಿನ್ನೆ ಮೊನ್ನೆ ಬಂದವರು ಸಲಹೆ ನೀಡಿದರೆ ನಾವು ಹೇಗೆ ಸ್ವೀಕರಿಸುವುದು. ಪಕ್ಷದಲ್ಲಿ ಇಷ್ಟು ವರ್ಷ ನಾವು ಕೆಲಸ ಮಾಡಿದ್ದು, ಆದರೆ ಈಗ ನಿಮ್ಮ ಸ್ವಹಿತಾಸಕ್ತಿಯ ಐಡಿಯಾಗಳನ್ನು ಮುಂದಿಟ್ಟುಕೊಂಡು ಬರುತ್ತೀರಿ. ಶಿವಾಜಿನಗರ ಉಪಚುನಾವಣೆ ಅಭ್ಯರ್ಥಿ ನೀವೇ ಫೈನಲ್ ಮಾಡಿ. ಆದರೆ ಸಲೀಂ ಅಹ್ಮದ್ ಒಳ್ಳೆಯ ಅಭ್ಯರ್ಥಿ ಎಂಬುವುದು ನನ್ನ ಅಭಿಪ್ರಾಯ ಎಂದು ಹೇಳಿ ಸಭೆಯಿಂದ ಹೊರ ನಡೆದರು ಎಂದು ಮೂಲಗಳಿಂದ ತಿಳಿದು ಬಂದಿದೆ.

    ಇತ್ತ ಎಂದಿನಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಜಿ ಸಂಸದ ಕೆಎಚ್ ಮನಿಯಪ್ಪ ನಡುವೆಯೂ ಮುಸುಕಿನ ಕಿತ್ತಾಟ ನಡೆಯಿತು. ಮುನಿಯಪ್ಪ ಅವರು ರಮೇಶ್ ಕುಮಾರ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರೆ, ರಮೇಶ್ ಕುಮಾರ್ ಮಾತ್ರ ಮೌನ ವಹಿಸಿದರು. ಕೋಲಾರ ನಗರಸಭೆ ಚುನಾವಣೆಯಲ್ಲಿ ನಾನು ಹೇಳಿದವರಿಗೆ ಟಿಕೆಟ್ ಕೊಟ್ಟಿಲ್ಲ. ಎಲ್ಲವನ್ನು ನೀವೇ ಫೈನಲ್ ಮಾಡಿದರೆ ನಾವೇನು ಮಾಡಬೇಕು. ಲೋಕಸಭೆ ಎಲೆಕ್ಷನ್‍ನಲ್ಲಿ ಸೋಲಿಸಿ, ನನ್ನನ್ನು ಜಿಲ್ಲೆಯಿಂದ ಹೊರಹಾಕ್ಬೇಕು ಎಂದು ಪ್ಲಾನ್ ಮಾಡಿದ್ದೀರಾ ಎಂದು ಮುನಿಯಪ್ಪ ಅವರು ಕಿಡಿಕಾರಿದರು.

  • ಬೆಂಗಳೂರಿನ 4 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ – ಇಂದಿನಿಂದ ನೀತಿ ಸಂಹಿತೆ ಜಾರಿ

    ಬೆಂಗಳೂರಿನ 4 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ – ಇಂದಿನಿಂದ ನೀತಿ ಸಂಹಿತೆ ಜಾರಿ

    – ಇವಿಎಂ ಜೊತೆ ವಿವಿ ಪ್ಯಾಟ್ ಇರಲಿದೆ
    – 4 ಕ್ಷೇತ್ರಗಳಲ್ಲಿ 1361 ಮತಗಟ್ಟೆ ಸ್ಥಾಪನೆ

    ಬೆಂಗಳೂರು: ಸಿಲಿಕಾನ್ ಸಿಟಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಬಿ.ಹೆಚ್.ಅನಿಲ್ ಕುಮಾರ್ ಮಾಹಿತಿ ನೀಡಿದರು.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಕೆ.ಆರ್ ಪುರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರಗಳಿಗೆ ಡಿಸೆಂಬರ್ 5 ಮತದಾನ ನಡೆಯಲಿದ್ದು, ಚುನಾವಣಾ ಸಿದ್ಧತೆ ಆರಂಭಗೊಂಡಿದೆ. ನೀತಿ ಸಂಹಿತೆ ಸಹ ಇಂದಿನಿಂದಲೇ ಜಾರಿಯಾಗಲಿದೆ ಎಂದು ತಿಳಿಸಿದರು.

    ಉಪ ಚುನಾವಣೆಯಲ್ಲಿ ಈ ಬಾರಿಯೂ ಇವಿಎಂ ಜೊತೆ ವಿವಿ ಪ್ಯಾಟ್ ಕಡ್ಡಾಯವಾಗಿದ್ದು, ಬೆಂಗಳೂರಿನ ಆಯಾ ವಿಧಾನಸಭಾ ಕ್ಷೇತ್ರಗಳ ಭದ್ರತಾಕೊಠಡಿಯಲ್ಲೇ ಇವಿಎಂ ಶೇಖರಿಸಿಡಲಾಗಿದೆ. ಮಾದರಿ ನೀತಿ ಸಂಹಿತೆ ಇಂದಿನಿಂದ ಡಿ.11ರ ವರೆಗೆ ಜಾರಿಯಲ್ಲಿರಲಿದೆ. ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, ಮೂವರು ಮತಗಟ್ಟೆ ಅಧಿಕಾರಿ ನೇಮಕವಾಗಿದ್ದಾರೆ. 4 ಕ್ಷೇತ್ರಗಳಿಗೆ ಒಟ್ಟು 5,988 ಚುನಾವಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೈಕ್ರೋ ಅಬ್ಸರ್ವರ್ಸ್ ಗಳನ್ನೂ ಮತದಾನ ಪ್ರಕ್ರಿಯೆಗೆ ನಿಯೋಜನೆ ಮಾಡಲಾಗಿದ್ದು, ಚುನಾವಣಾ ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ಸ್ ಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ವಿವರಿಸಿದರು.

    ಉಪಚುನಾವಣೆ ದೂರುಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಲಾಗಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ 080 22975561 ಅಥವಾ 88841 18033 ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿ ಜೊತೆಗೂ ಸಭೆ ನಡೆಸಲಾಗುವುದು ಎಂದರು.

    ಇಂದಿನಿಂದ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ನಾಮಪತ್ರ ಸಲ್ಲಿಸಲು ನ.18 ಕೊನೆಯ ದಿನವಾಗಿದೆ. ನ.19 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನ.21 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.

    ಡಿ.5 ರಂದು ಮತದಾನ ನಡೆಯಲಿದ್ದು, ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಡಿ.9 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಡಿ.11ಕ್ಕೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

    4 ಕ್ಷೇತ್ರಗಳಿಂದ ಈಗಾಗಲೇ 6 ನಾಮಪತ್ರ ಸಲ್ಲಿಕೆಯಾಗಿದ್ದು, ಕೆ.ಆರ್ ಪುರ ಕ್ಷೇತ್ರದಲ್ಲಿ 437 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಯಶವಂತಪುರ ಕ್ಷೇತ್ರದಲ್ಲಿ 461, ಮಹಾಲಕ್ಷ್ಮಿ ಲೇಔಟ್ 270, ಶಿವಾಜಿನಗರ 193 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 4 ಕ್ಷೇತ್ರದಲ್ಲಿ ಒಟ್ಟು 1361 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕೆಆರ್ ಪುರ ಕ್ಷೇತ್ರದಲ್ಲಿ ಒಟ್ಟು 4,81,132, ಯಶವಂತಪುರದಲ್ಲಿ 4,75,759, ಮಹಾಲಕ್ಷ್ಮಿ ಲೇಔಟ್ ನಲ್ಲಿ 2,83,885, ಶಿವಾಜಿನಗರದಲ್ಲಿ 1,91,618 ಮತದಾರರಿದ್ದಾರೆ.

  • ಪಕ್ಷ ಬಿಟ್ಟು ಹೋದವರು ವಾಪಸ್ ಬರ್ತಾರೆ- ಬಿಜೆಪಿ ಬಂಡಾಯ ನಾಯಕರಿಗೆ ಸಿಟಿ ರವಿ ತಿರುಗೇಟು

    ಪಕ್ಷ ಬಿಟ್ಟು ಹೋದವರು ವಾಪಸ್ ಬರ್ತಾರೆ- ಬಿಜೆಪಿ ಬಂಡಾಯ ನಾಯಕರಿಗೆ ಸಿಟಿ ರವಿ ತಿರುಗೇಟು

    ಬೆಂಗಳೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಬಿಟ್ಟು ಹೋಗುವ ನಾಯಕರು ಮತ್ತೆ ವಾಪಸ್ ಬರುತ್ತಾರೆ ಎಂದು ಸಚಿವ ಸಿಟಿ ರವಿ ಅವರು ಹೇಳಿದ್ದು, ಪಕ್ಷ ಬಿಟ್ಟು ಹೋದವರಿಗೆ ಕೆಟ್ಟ ಅನುಭವವಾಗಿ ವಾಪಸ್ ಬಂದಿರುವ ಹಲವು ಉದಾಹರಣೆಗಳು ನಮ್ಮ ಮುಂದಿದೆ ಎಂದು ಹೇಳಿದ್ದಾರೆ.

    ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ನಾಯಕರ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಆ ಪಕ್ಷದ ನಾಯಕರೇ ಬಿಟ್ಟು ಹೊರಬರುತ್ತಿದ್ದಾರೆ. ಆದರೆ ಇಂದು ಕೆಲವರು ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಹೋಗುತ್ತಿದ್ದಾರೆ. ನಮ್ಮ ಪಕ್ಷ ಸಿದ್ಧಾಂತ ಮೇಲೆ ನಿಂತಿದ್ದು, ಎಲ್ಲರಿಗೂ ಸಮಾನ ಅವಕಾಶ ಲಭಿಸುತ್ತದೆ ಎಂದು ಪರೋಕ್ಷವಾಗಿ ರಾಜು ಕಾಗೆ ಅವರಿಗೆ ಟಾಂಗ್ ನೀಡಿದರು.

    ಇದೇ ವೇಳೆ ಹೊಸಕೋಟೆ ಕ್ಷೇತ್ರದಲ್ಲಿ ಶರತ್ ಬಚ್ಚೇಗೌಡ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬುಧವಾರ ಸುಪ್ರೀಂಕೋರ್ಟ್ ತೀರ್ಪು ನೋಡಿಕೊಂಡು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭ ಮಾಡುತ್ತೇವೆ. ಕೋರ್ಟ್ ತೀರ್ಪಿನ ಮೇಲೆ ಚುನಾವಣೆ ನಡೆಯುವುದು ನಿರ್ಧಾರವಾಗುತ್ತೆ. ಶರತ್ ಬಚ್ಚೇಗೌಡ ಮತ್ತು ಅವರ ಕುಟುಂಬಕ್ಕೆ ಪಕ್ಷ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಇದನ್ನು ನನ್ನ ಕಿರಿಯ ಸಹೋದರನಂತಿರುವ ಶರತ್ ಅವರು ಚಿಂತಿಸಬೇಕಿದೆ. ಇಂದು ವೈಯಕ್ತಿಕ ಹಿನ್ನೆಲೆಯಲ್ಲಿ ಮಾಡಿದಂತಹ ತೀರ್ಮಾನ ಇರಬಾರದು. ಮುಂದಿನ 40 ವರ್ಷಗಳ ರಾಜಕೀಯ ಬದುಕಿನ ಬಗ್ಗೆಯೂ ಯೋಚನೆ ಮಾಡಬೇಕು. ಅವರು ಪಕ್ಷದ ನಿರ್ಧಾರ ಒಪ್ಪಬೇಕು ಎಂದು ಹಿರಿಯನಾಗಿ ಸಲಹೆ ನೀಡುತ್ತೇನೆ ಎಂದರು. ಇದನ್ನು ಓದಿ: ಆಪರೇಷನ್ ಸಕ್ಸಸ್ – ‘ಕೈ’ ಹಿಡಿದು ನಾನು ಚಿಕ್ಕಮಗುವಲ್ಲ, ಸ್ಪರ್ಧಿಸುತ್ತೇನೆ ಎಂದ ರಾಜು ಕಾಗೆ

    ನಮ್ಮ ಸರ್ಕಾರ ಬಂದು 100 ದಿನಗಳು ಮಾತ್ರ ಆಗಿದ್ದು, ಪೂರ್ಣ ಬಹುಮತ ಪಡೆದು ನಾವು ಅಧಿಕಾರಕ್ಕೆ ಬಂದಿಲ್ಲ. ಆದ್ದರಿಂದ ಪ್ರಣಾಳಿಕೆಯಲ್ಲಿ ನಾವು ನೀಡಿರುವ ಮಾತನ್ನು ಈಡೇರಿಸಲೇಬೇಕು. ಇದರಲ್ಲಿ ಯಾವುದೇ ಬದಲಾವಣೆ ಆಗಲ್ಲ. ಎಸಿಬಿ ವಿಚಾರವನ್ನೂ ನಾವು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

  • ಖರ್ಗೆಯನ್ನು ಸಿಎಂ ಮಾಡಲು ಒಪ್ಪದ್ದಕ್ಕೆ ಮಗನಿಗೆ ಸಿಎಂ ಪಟ್ಟ ಸಿಕ್ತು – ಎಚ್‍ಡಿಡಿ

    ಖರ್ಗೆಯನ್ನು ಸಿಎಂ ಮಾಡಲು ಒಪ್ಪದ್ದಕ್ಕೆ ಮಗನಿಗೆ ಸಿಎಂ ಪಟ್ಟ ಸಿಕ್ತು – ಎಚ್‍ಡಿಡಿ

    – ಮೈತ್ರಿ ವೇಳೆ ಸಿಎಂ ಹುದ್ದೆಯ ಮಾತುಕತೆ ಈಗ ಬಹಿರಂಗ
    – ಕೈ ನಾಯಕರ ವಿರುದ್ಧವೇ ಎಚ್‍ಡಿಡಿ ಆರೋಪ

    ಕಲಬುರಗಿ: ಮಲ್ಲಿಕಾರ್ಜುನ ಖರ್ಗೆಯವರಿಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರೇ ಸಿಎಂ ಪಟ್ಟ ತಪ್ಪಿಸಿದರು ಎನ್ನುವ ಸ್ಫೋಟಕ ವಿಚಾರವನ್ನು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಬಹಿರಂಗ ಪಡಿಸಿದ್ದಾರೆ.

    ನಾನು ಖರ್ಗೆಯವರನ್ನು ಸಿಎಂ ಮಾಡಲು ಹೇಳಿದೆ. ಆದರೆ ಸೋನಿಯಾ ಗಾಂಧಿ ಖರ್ಗೆ ಬೇಡ ಎಂದು ಹೇಳಿದರು. ಹೀಗಾಗಿ ಕುಮಾರಸ್ವಾಮಿ ಸಿಎಂ ಆಗಿ ಆಯ್ಕೆಯಾದರು ಎಂದು ಸಿಎಂ ಆಯ್ಕೆ ಗುಟ್ಟನ್ನು ಮಾಜಿ ಪ್ರಧಾನಿ ಎಚ್‍ಡಿಡಿ ಬಿಚ್ಚಿಟ್ಟಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ ರಾಹುಲ್ ಗಾಂಧಿಯವರನ್ನು ಕಳುಹಿಸಿ ನಿಮ್ಮ ಮಗ ಮತ ತೆಗೆದುಕೊಳ್ಳಬೇಕು ಎಂದು ನಾವು ಹೇಳಿದ್ದೆವು. ಅಲ್ಲದೆ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಿ ಎಂದು ಸಹ ಹೇಳಿದ್ದೆವು. ಆದರೆ ಕಾಂಗ್ರೆಸ್ ಹೈಕಮಾಂಡ್ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಹೇಳಿತು. ಹೈಕಮಾಂಡ್ ಒಪ್ಪಿದರೆ ಸಿಎಂ ಆಗುತ್ತೇನೆ ಎಂದು ಖರ್ಗೆ ಹೇಳಿದ್ದರು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

    ಟಿಕೆಟ್ ಹಂಚುವ ವಿಚಾರದಲ್ಲಿ ಕಾಂಗ್ರೆಸ್ ಅವರಲ್ಲೇ ಗೊಂದಲ ಇದೆ. ನನಗೆ ಈಗಲೂ ನಂಬಿಕೆ ಇದೆ ಬಿಜೆಪಿ ಸರ್ಕಾರಕ್ಕೆ ಅಪಾಯ ಇಲ್ಲ. ಏಕೆಂದರೆ ಕಾಂಗ್ರೆಸ್ ಜೆಡಿಎಸ್ ಒಂದಾಗುವುದಿಲ್ಲ. ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಅಪಾಯವಿಲ್ಲ ಎಂದರು.

    ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಬೇಕು ಎಂದು ಕಲಬುರಗಿಗೆ ಬಂದಿದ್ದೇನೆ. ಇಲ್ಲಿ ಒಂದು ಕಾಲದಲ್ಲಿ ನಮ್ಮ ಶಕ್ತಿ ಬಹಳ ಇತ್ತು. ದುರಂತ ಅಂದರೆ ಈಗ ನಮ್ಮ ಶಕ್ತಿ ಕುಂದಿದೆ. ಹೀಗಾಗಿ ಜನ ಶಕ್ತಿ ಕೊಟ್ಟರೆ ಮತ್ತೆ ಪಕ್ಷ ಕಟ್ಟುತ್ತೇನೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನಮ್ಮ ಪಕ್ಷ ಅಸ್ತಿತ್ವ ಉಳಿಸಿಕೊಂಡಿದೆ. ನಾನು ಈಗ ಸೋತಿದ್ದೇನೆ, 13ನೇ ಪಾರ್ಲಿಮೆಂಟ್‍ಗೆ ನಿಲುವುದಿಲ್ಲ ಎಂದು ಹೇಳಿ ಹೊರಗಡೆ ಬಂದಿದ್ದೆ. ಆದರೆ ವಿಧಿ ಎಳೆದುಕೊಂಡು ತುಮಕೂರಿಗೆ ಹೋಗಿ ಚುನಾವಣೆಗೆ ಸ್ಪರ್ಧಿಸುವಂತಾಯಿತು. ಈ ಮೂಲಕ ಮೂರನೇ ಸೋಲು ಕಂಡೆ, ಸೋತರೂ ಈ ವಯಸ್ಸಿನಲ್ಲಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿ ಭಾವುಕರಾದರು.

    ಹೋರಾಟದಿಂದ ಈ ಪಕ್ಷ ಉಳಿದಿದೆ ಮತ್ತು ಬೆಳೆದಿದೆ. ಹೀಗಾಗಿ ಹೋರಾಡಲು ಇನ್ನಷ್ಟು ಶಕ್ತಿ ಕೊಡು ಎಂದು ದತ್ತಾತ್ರೆಯನ ಪಾದದ ಮೊರೆ ಹೋಗಿದ್ದೇನೆ. ಉಪಚುನಾವಣೆಯಲ್ಲಿ ಎಲ್ಲ ಸ್ಥಾನಗಳಿಗೂ ಅಭ್ಯರ್ಥಿ ಹಾಕುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಎಲ್ಲ ಕಡೆ ನಮಗೆ ಪ್ರಬಲ ಅಭ್ಯರ್ಥಿಗಳಿಲ್ಲ. ನಾಲ್ಕು-ಐದು ಕಡೆಗಳಲ್ಲಿ ನಮ್ಮ ಪಕ್ಷ ಹೋರಾಟ ಮಾಡಲಿದೆ. ಉಳಿದ ಕ್ಷೇತ್ರಗಳಲ್ಲಿ ಸಹ ನಮ್ಮ ಅಭ್ಯರ್ಥಿಗಳನ್ನು ಹಾಕುತ್ತೆವೆ. ಗೆಲುವು ಸೋಲು ನಮ್ಮ ಕೈಯಲ್ಲಿ ಇಲ್ಲ ಮತದಾರರು ಅದನ್ನು ನಿರ್ಧರಿಸುತ್ತಾರೆ. ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದೆ. ಹೀಗಾಗಿ ಎಲ್ಲ ಕಡೆ ಸಂಚರಿಸಿ ಇಲ್ಲಿಗೆ ಬಂದಿದ್ದೇನೆ. ಕಾಂಗ್ರೆಸ್, ಬಿಜೆಪಿ ಎರಡೂ ಸ್ಥಳೀಯ ಚುನಾವಣೆಯಲ್ಲಿ ನಮಗಿಂತ ಮುಂದಿದ್ದಾರೆ ಎಂದರು.

    ಮೈತ್ರಿ ಸರ್ಕಾರ ಹೋಗಲು ಕಾರಣ ಏನು ಎಂದು ವಿಶ್ಲೇಷಣೆ ಮಾಡುವುದಿಲ್ಲ. ಬಿಜೆಪಿ ಸಹ ಈಗ ವಾಮಮಾರ್ಗದಿಂದ ಅಧಿಕಾರ ಹಿಡಿದಿದೆ. 5-6 ತಿಂಗಳು ಅಧಿಕಾರಕ್ಕಾಗಿ ಇವರು ಬಂದಿದ್ದಾರೆ. ಸದ್ಯ ಬಿಜೆಪಿಯ 106 ಶಾಸಕರಿದ್ದಾರೆ. ನಾನು ಯಡಿಯೂರಪ್ಪ ಮನೆ ಬಾಗಿಲಿಗೂ ಹೋಗುವುದಿಲ್ಲ. ಸಿದ್ದರಾಮಯ್ಯ ಮನೆ ಬಾಗಿಲಿಗೂ ಹೋಗಲ್ಲ. ಈಗಲೇ ಚುನಾವಣೆ ನಡೆದರೆ ನಾವು ಅಧಿಕಾರಕ್ಕೆ ಬರುವುದಿಲ್ಲ. ಚುನಾವಣೆ ನಡೆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯಗೆ ಆ ವರ್ಚಸ್ಸು ಇದೆ ಎಂದು ಹೇಳಿದರು.