Tag: by election
-

ಮುಂಬೈ ನೋಟು ತಗೊಂಡು ಕಾಂಗ್ರೆಸ್‍ಗೆ ವೋಟ್ ಹಾಕಿ: ಸಿದ್ದರಾಮಯ್ಯ
ಹಾವೇರಿ: ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರು ಮುಂಬೈಗೆ ಹೋಗಿ ತೆಗೆದುಕೊಂಡು ಬಂದಿರುವ ನೋಟು ತಗೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಶಿಷ್ಟವಾಗಿ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ.
ಹಿರೇಕೆರೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ್ ಪರ ಬೃಹತ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಅನರ್ಹ ಶಾಸಕ ಬಿ.ಸಿ.ಪಾಟೀಲ್ ಒಬ್ಬ ನಾಲಾಯಕ್. ಅನರ್ಹರು ಅಂದ್ರೆ ನಾಲಾಯಕ್. ಅದಕ್ಕೆ ಅವರನ್ನು ಸ್ಪೀಕರ್ ಅನರ್ಹರರನ್ನಾಗಿ ಮಾಡಿದ್ದಾರೆ. ಬಿ.ಸಿ.ಪಾಟೀಲ್ ಒಳ್ಳೆಯ ಪೊಲೀಸ್ ಅಧಿಕಾರಿಯಾಗಿರಲಿಲ್ಲ. ಅವರು ಮತ ಪಡೆದ ನಂತರ ಜನರ ಅಭಿಪ್ರಾಯ ಕೇಳದೆ ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕುಮಾರಸ್ವಾಮಿಯಂತಹ ವಿಶ್ವಾಸದ್ರೋಹ ಯಾರೂ ಮಾಡಿಲ್ಲ- ಬಿ.ಸಿ.ಪಾಟೀಲ್

ಬಿ.ಸಿ.ಪಾಟೀಲ್ ಅವರು ಈಗ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಾನು ದುಡ್ಡು ತಗೊಂಡು ಕಾಂಗ್ರೆಸ್‍ಗೆ ಹೋಗಿರಲಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡಿದ ನಂತರ ನಾನು ಅಹಿಂದ ಸಂಘಟನೆ ಕಟ್ಟಿದೆ. ಅದಾದ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಬಿ.ಸಿ.ಪಾಟೀಲ್ ಅವರು ನನ್ನ ವಿರುದ್ಧ ಮಾನನಷ್ಠ ಮೊಕದ್ದಮೆ ಹಾಕುವುದಾದರೆ ಹಾಕಲಿ ನೋಡೋಣ. ಆಮೇಲೆ ಅವರೇ ಸಿಲುಕಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಅವರನ್ನ ಲೇವಡಿ ಮಾಡುವ ಮುನ್ನ ಬಿಜೆಪಿ ಕಾರ್ಯಕರ್ತರಂತೆ ಮೋದಿ ಮೋದಿ ಮೋದಿ ಅಂತ ಕೂಗಿ ವ್ಯಂಗ್ಯವಾಡಿದರು. ಮೋದಿಯವರ ಅಚ್ಛೇ ದಿನ್ 6 ವರ್ಷವಾದರೂ ಬಂದಿಲ್ಲ. ಮುಂದೆನೂ ಬರುವುದಿಲ್ಲ ಎಂದು ಕಟುಕಿದರು.

-

ನಾನೇನು ತಪ್ಪು ಮಾಡಿದೆ, ನನ್ನನ್ನು ಯಾಕೆ ಕೈ ಬಿಟ್ಟಿರಿ – ಮಂಡ್ಯದಲ್ಲಿ ಎಚ್‍ಡಿಕೆ ಮತ್ತೆ ಕಣ್ಣೀರು
ಮಂಡ್ಯ: ನಾನೇನು ತಪ್ಪು ಮಾಡಿದೆ ಎಂದು ಜಿಲ್ಲೆಯ ಜನರಾದ ನೀವು ನನ್ನನ್ನು ಕೈ ಬಿಟ್ಟಿರಿ ಎಂದು ಭಾವುಕರಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ.
ಕಿಕ್ಕೇರಿಯಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡುವಾಗ ಎಚ್‍ಡಿಕೆ ಭಾವುಕರಾಗಿದ್ದಾರೆ. ಸಮಾವೇಶದಲ್ಲಿ ಎಚ್‍ಡಿಕೆ ಸಿಎಂ ಆಗಿದ್ದಾಗ ಅಂದಿನ ಶಾಸಕರಾಗಿದ್ದ ನಾರಾಯಣಗೌಡ ಅವರು ಬರೆದ ಪತ್ರವನ್ನು ವೇದಿಕೆ ಮೇಲೆಯೇ ಓದಿದರು. ನಂತರ ನಾನೇನು ತಪ್ಪು ಮಾಡಿದೆ ಎಂದು ಸಭಿಕರನ್ನು ಪ್ರಶ್ನಿಸಿದರು. ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸಬೇಕೆಂದು ನಾನು ಬಯಸಿರಲಿಲ್ಲ. ನೀವೇ ಒತ್ತಾಯ ಮಾಡಿ ಚುನಾವಣೆಗೆ ನಿಲ್ಲುವಂತೆ ಮಾಡಿದಿರಿ. ಜಿಲ್ಲೆಯ ಜನರನ್ನು ಸ್ಪರ್ಧಿಸಲು ಅನುಮತಿ ನೀಡಿದೆ. ಆದರೆ ನೀವೇ ನನ್ನ ಕೈ ಬಿಟ್ಟಿರಿ ಎಂದು ಭಾವುಕರಾಗಿದ್ದಾರೆ.

ಜಿಲ್ಲೆಯ ಜನರೇ ನನ್ನನ್ನು ಕೈ ಬಿಟ್ಟ ಮೇಲೆ ನಾನು ಅಧಿಕಾರದಲ್ಲಿರಬೇಕೇ? ಜಿಲ್ಲೆಯ ಜನರ ಪ್ರೀತಿಯೇ ಇಲ್ಲದ ಮೇಲೆ ಮುಖ್ಯಮಂತ್ರಿ ಸೇರಿದಂತೆ ಉಳಿದ ಅಧಿಕಾರ ಯಕಶ್ಚಿತ್ ಎಂದು ಕಣ್ಣೀರು ಹಾಕಿದರು. ಅಲ್ಲದೆ ನಾನು ನನ್ನ ಮಗನನ್ನು ಚುನಾವಣೆಗೆ ಸ್ಪರ್ಧಿಸಬೇಕು ಎಂದುಕೊಂಡಿರಲಿಲ್ಲ. ನೀವೇ ಈ ಕುರಿತು ಒತ್ತಾಯ ಮಾಡಿ, ಬಲವಂತವಾಗಿ ನಿಲ್ಲಿಸಿದಿರಿ. ಜಿಲ್ಲೆಯ ಜನರೇ ನನ್ನ ಕೈ ಬಿಟ್ಟ ಮೇಲೆ ಸ್ವಾಭಿಮಾನ ಎಲ್ಲಿಂದ ಬಂತು? ನಾನು ಒಂದೇ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ. ಮೈತ್ರಿ ಸರ್ಕಾರದ ಅವಧಿಯಲ್ಲಿ ನನ್ನನ್ನು ಗುಲಾಮನ ರೀತಿಯಲ್ಲಿ ನಡೆಸಿಕೊಂಡರು ಎಂದು ಬೇಸರ ವ್ಯಕ್ತಪಡಿಸಿದರು.
ಕಣ್ಣೀರು ಹಾಕುತ್ತಲೇ ಮಾತನಾಡಿದ ಎಚ್‍ಡಿಕೆ, ಜಿಲ್ಲೆಯ ಜನರಿಗೆ 26 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದು ನನ್ನ ತಪ್ಪಾ? ಪತ್ರಿಕೆಯವರು, ಟಿವಿಯವರು ಏನಾದರೂ ಬರೆದುಕೊಳ್ಳಲಿ. ಮಹಿಳೆಯರನ್ನು ನೋಡಿ ನನಗೆ ಕಣ್ಣೀರು ತುಂಬಿಕೊಂಡಿದ್ದೆ. ಈಗ ಆ ನೀರು ಹೊರ ಬರುತ್ತಿದೆ ಎಂದು ಭಾವುಕರಾದರು.

ಬಾಂಬೆ ಕಳ್ಳನಿಗೆ ಟಿಕೆಟ್ ನೀಡಿದೆ
ಬಾಂಬೆ ಕಳ್ಳ ಎಂದು ಕರೆಯುವ ಈತನಿಗೆ 2013 ರಲ್ಲಿ ಟಿಕೆಟ್ ನೀಡಿ ಶಾಸಕನನ್ನಾಗಿ ಮಾಡಿದೆ. ಈಗ ನನ್ನ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ನನ್ನ ಕರ್ಮ 2018 ರಲ್ಲಿ ನನ್ನ ತಂದೆಯ ವಿರೋಧದ ನಡುವೆಯೂ ನಾನು ಟಿಕೆಟ್ ನೀಡಿದೆ ಎಂದು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.2019 ರ ಫೆಬ್ರವರಿಯಲ್ಲಿ ನಾನು ಬಜೆಟ್ ಸಿದ್ಧತೆಯಲ್ಲಿದ್ದೆ. ಆಗ ಜಿಲ್ಲೆಗೆ ಏನು ಕೊಡಬೇಕೆಂದು ಚಿಂತನೆ ಮಾಡುತ್ತಿದ್ದೆ. ಆದರೆ ಆಗ ಇವನು ಬಾಂಬೆಯಲ್ಲಿ ನಾಟಕವಾಡಿ ಆಸ್ಪತ್ರೆಯಲ್ಲಿದ್ದ. ಬಿಜೆಪಿಯವರಿಂದ ಹಣ ಪಡೆದು ಆಸ್ಪತ್ರೆಯಲ್ಲಿ ಮಲಗಿದ್ದ ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದನ್ನು ದೇವರು ಮೆಚ್ಚುತ್ತಾನಾ ಎಂದು ಎಚ್‍ಡಿಕೆ ಸಿಎಂ ಆಗಿದ್ದಾಗ ನಾರಾಯಣಗೌಡ ಬರೆದ ಪತ್ರವನ್ನು ಓದಿ ಭಾವುಕರಾದರು.

ಡಿಸೆಂಬರ್ 9ರ ನಂತರ ರಾಜ್ಯದಲ್ಲಿ ರಾಜಕೀಯ ಧೃವೀಕರಣವಾಗಲಿದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ಪತನ ಸುಳಿವನ್ನು ಎಚ್‍ಡಿಕೆ ಬಿಚ್ಚಿಟ್ಟಿದ್ದಾರೆ. ಡಿ.9ರ ನಂತರ ರಾಜಕೀಯ ಶುದ್ಧೀಕರಣ ನಡೆಯುತ್ತದೆ. ಬಿಜೆಪಿ ಸರ್ಕಾರ ಸ್ಥಿರವಾಗಿರುತ್ತದೆ ಎಂದು ನಾವು ಹೇಳಿಲ್ಲ. ಸರ್ಕಾರ ಸ್ಥಿರವಾಗಿರುತ್ತದೆ ಎಂದು ಹೇಳಿದ್ದೇವೆ ಅಷ್ಟೇ. ಅದು ಯಾವ ಸರ್ಕಾರ ಅನ್ನೋದು ಡಿ.9ರ ನಂತರ ತಿಳಿಯಲಿದೆ. ಮೈತ್ರಿ ಸರ್ಕಾರ ತೆಗೆದ ತಪ್ಪಿಗೆ ಮಹಾರಾಷ್ಟ್ರದಲ್ಲಿ ಅವರ ಸರ್ಕಾರ ಹೋಗಿದೆ ಎಂದು ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
-

ಅಣ್ಣನ ಟೀಂಗೆ ಫುಲ್ ಟೈಮ್ ಗೇಟ್ ಪಾಸ್ ಕೊಟ್ಟು ಮನೆಗೆ ಕಳಿಸಬೇಕು: ಸತೀಶ್ ಜಾರಕಿಹೊಳಿ ಕಿಡಿ
ಚಿಕ್ಕೋಡಿ (ಬೆಳಗಾವಿ): ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಆ್ಯಂಡ್ ಟೀಂಗೆ ಫುಲ್ ಟೈಮ್ ಗೇಟ್ ಪಾಸ್ ಕೊಟ್ಟು ಮನೆಯಲ್ಲಿ ಕೂರಿಸಬೇಕು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ಕಾಗವಾಡ ತಾಲೂಕಿನ ಜೂಗುಳ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಅನರ್ಹ ಶಾಸಕರಾದ ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ್ ಪಾಟೀಲ್ ಅವರ ಕ್ಯಾಪ್ಟನ್ ಕೃಪಾಮಯ ಗೋಕಾಕ್‍ನಲ್ಲಿದ್ದಾರೆ. ಉಪ ಚುನಾವಣೆಯಲ್ಲಿ ಈ ಇಬ್ಬರು ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ರಮೇಶ್ ಜಾರಕಿಹೊಳಿ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬೆನ್ನು ಬೀಳುತ್ತಾರೆ. ಇವರೆಲ್ಲರೂ ಸೇರಿ ಸಿಎಂ ಯಡಿಯೂರಪ್ಪನವರ ಬಿಳಿ ಬಟ್ಟೆಗಳನ್ನ ಕರಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತೊಂದರೆ ಕೊಟ್ಟರು. ಸಿಎಂ ಯಡಿಯೂರಪ್ಪ ಅವರಿಗೆ ಕೊಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? 10ರಿಂದ 20 ಸಾವಿರ ಕೋಟಿ ರೂ. ಕೊಡಿ ಇಲ್ಲಾ ಅಂದರೆ ಪಕ್ಷ ಬಿಟ್ಟು ಹೋಗುತ್ತೇವೆ ಎಂದು ಬ್ಲ್ಯಾಕ್‍ಮೇಲ್ ಮಾಡುವ ಶಾಸಕರು ನಮಗೆ ಬೇಡ. ಅನರ್ಹ ಶಾಸಕರದ್ದು ಸೇವಾ ಮನೋಭಾವ ಅಲ್ಲ, ಬ್ಲ್ಯಾಕ್‍ಮೇಲ್ ತಂತ್ರ ಎಂದು ಕುಟುಕಿದರು.
ನಾವು ಸಹ ಗೋಕಾಕ್ ಕ್ಯಾಪ್ಟನ್ ರಮೇಶ್ ಜಾರಕಿಹೊಳಿ ಅವರನ್ನ ಮನೆಗೆ ಕಳುಹಿಸುತ್ತೇವೆ. ಕಾಗವಾಡ ಹಾಗೂ ಅಥಣಿ ಕ್ಷೇತ್ರದ ಮತದಾರರು ಕೂಡ ಶ್ರೀಮಂತ್ ಪಾಟೀಲ್ ಮತ್ತು ಮಹೇಶ್ ಕುಮಟಳ್ಳಿ ಅವರನ್ನು ಮನೆಗೆ ಕಳುಹಿಸಿ. ಇಂತಹ ರಾಜಕಾರಣಿಗಳಿಗೆ ಫುಲ್ ಟೈಮ್ ಗೇಟ್ ಪಾಸ್ ಕೊಟ್ಟು ಮನೆಯಲ್ಲಿ ಕೂರಿಸಬೇಕು ಎಂದು ಗುಡುಗಿದರು.
-

ಸಾಲ ಇಟ್ಟುಕೊಂಡು ರೂಢಿ ಇಲ್ಲ, ನಾಳೆ ಚುಕ್ತಾ ಮಾಡ್ತೀನಿ: ಕುಮಟಳ್ಳಿಗೆ ಹೆಬ್ಬಾಳ್ಕರ್ ಟಾಂಗ್
ಬೆಳಗಾವಿ: ಅನರ್ಹ ಶಾಸಕ, ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ನನ್ನ ಬಗ್ಗೆ ತುಂಬಾನೇ ಮಾತಾಡಿದ್ದಾರಂತೆ. ಅದಕ್ಕೆಲ್ಲಾ ಉತ್ತರ ಕೊಡಬೇಕಿದೆ. ಯಾರ ಸಾಲವನ್ನು ಹೊತ್ತುಕೊಂಡು ಹೋಗುವಳು ನಾನಲ್ಲ. ಸಾಲ ತೀರಿಸುತ್ತೇನೆ ಎಂದು ಕುಮಟಳ್ಳಿಯವರ ವಿರುದ್ಧ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ಕುಮಟಳ್ಳಿಯವರ ಆರೋಪಗಳಿಗೆ ನಾಳೆ ಊರಿನ ಜನರನ್ನು ಸೇರಿಸಿಯೇ ಉತ್ತರ ಕೊಡಬೇಕು. ಏಕೆಂದರೆ ಮಹೇಶ್ ಕುಮಟಳ್ಳಿ ಅವರು ತುಂಬಾ ಮಾತನಾಡಿದ್ದಾರೆ. ಇದಕ್ಕೆ ಉತ್ತರ ಕೊಡಬೇಕಿದೆ. ನನಗೆ ಯಾರ ಸಾಲ ಇಟ್ಟುಕೊಂಡು ರೂಢಿ ಇಲ್ಲ. ಎಲ್ಲ ಸಾಲ ಚುಕ್ತಾ ಮಾಡುತ್ತೇನೆ. ಸಾಲ ಹೊತ್ತುಕೊಂಡು ಹೋಗುವವಳು ನಾನಲ್ಲ ಎಂದು ಹರಿಹಾಯ್ದಿದ್ದಾರೆ.

ನೆರೆ ಸಂಭವಿಸಿದ ಸಂದರ್ಭದಲ್ಲಿ ನಿನ್ನ ಹಾಗೆ ನಾನು ಓಡಿ ಹೋಗಲಿಲ್ಲ, ಜವಾಬ್ದಾರಿಯಿಂದ ನುಣುಚಿಕೊಳ್ಳಲಿಲ್ಲ. ಕಾಂಗ್ರೆಸ್ ಬಿಟ್ಟು ಹೋಗಿದ್ದರೂ ಪರವಾಗಿರಲಿಲ್ಲ. ಜನರ ಕಷ್ಟಗಳೊಂದಿಗೆ ನಿಂತಿದ್ದರೆ ಭಲೇ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೆ. ಕಷ್ಟಕ್ಕೆ ಸ್ಪಂದಿಸಿದ್ದರೆ, ನಿನ್ನ ಸ್ವಾರ್ಥಕ್ಕಾಗಿ ಬಿಟ್ಟು ಹೋದರೂ ಸಹ ಜನ ಏನೂ ಅನ್ನುತ್ತಿರಲಿಲ್ಲ. ಆದರೆ ಜನರ ಕಷ್ಟಗಳಿಗೆ ಸ್ಪಂದಿಸದೆ ಮುಂಬೈ ಹೋಟೆಲ್‍ನಲ್ಲಿ ನೀನು ಕುಳಿತುಕೊಂಡೆ. ದುಡ್ಡು ಬೇಕಾಗಿತ್ತು ಅದಕ್ಕೆ ಹೋದೆ, ಸುಮ್ಮನೆ ಯಾಕೆ ದ್ರೋಹ ಆಗಿತ್ತು ಎಂದು ಹೇಳುವುದು. ಎರಡು ಬಾರಿ ಟಿಕೆಟ್ ನೀಡಲಾಗಿದೆ ಹೀಗಿರುವಾಗ ದ್ರೋಹ ಹೇಗಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆ ಬಂದಾಗ ಹೇಗೆ ಮನೆ ಮನೆಗೆ ಓಡಾಡಿ ಮತಯಾಚನೆ ಮಾಡುತ್ತೇವೋ ಹಾಗೆಯೇ ಪ್ರವಾಹದ ವೇಳೆ ಎಲ್ಲ ಮನೆಗಳಿಗೆ ತೆರಳಿ ನಾನು, ನನ್ನ ಮಗ, ತಮ್ಮ, ತಾಯಿ, ಅಕ್ಕ ತಂಗಿಯರು ಸೇರಿ ಪ್ರತಿಯೊಬ್ಬರೂ ಓಡಾಡಿ 43 ದಿನ ಟೊಂಕ ಕಟ್ಟಿ ಕೆಲಸ ಮಾಡಿದ್ದೇವೆ. ಹೆಣ್ಣು ಮಕ್ಕಳಿಗೆ ತುತ್ತು ಮಾಡಿ ಊಟ ಮಾಡಿಸಿದ್ದೇವೆ. ನಮ್ಮ ಲಕ್ಷ್ಮಿ ತಾಯಿ ಫೌಂಡೇಶನ್ ಮೂಲಕ ಸುಮಾರು 50 ಲಕ್ಷ ರೂ.ಗಳ ಆಹಾರ ಸಾಮಗ್ರಿಗಳನ್ನು ನೀಡಿದ್ದೇನೆ. ಬ್ಲಾಂಕೆಟ್, ಚಾಪೆ ಸೇರಿದಂತೆ ವಿವಿಧ ವಸ್ತುಗಳನ್ನು ಕೊಟ್ಟಿದ್ದೇವೆ. ಇಷ್ಟಾದರೂ ನಾವು ಎಲ್ಲೂ ಹೇಳಿಕೊಂಡಿಲ್ಲ. ಕಷ್ಟದ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಗೆ ಸ್ಪಂದಿಸಿದ್ದಾರೆ ಎಂದು ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ವಿವರಿಸಿದರು.
-

ಬಿಎಸ್‍ವೈಯನ್ನು ಎತ್ತಾಕುವ ವಿದ್ಯೆಯನ್ನು ಅಪ್ಪ, ಮಗ ಕಲಿತಿದ್ದಾರೆ – ಆಯನೂರು ವಾಗ್ದಾಳಿ
ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಎತ್ತಾಕುವ ಹಲಕುತನದ ವಿದ್ಯೆಯನ್ನು ಅಪ್ಪ, ಮಗ ಹೆಣೆದಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ವಿರುದ್ಧ ಬಿಜೆಪಿ ವಿಧಾನಪರಿಷತ್ ಸದಸ್ಯ ಅಯನೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ನಡೆದ ಶಾಸಕ ಎಸ್.ಎ.ರವೀಂದ್ರನಾಥ್ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್‍ನವರು ಒಂದು ಕಡೆ ಯಡಿಯೂರಪ್ಪನವರ ಸರ್ಕಾರ ಬೀಳಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಇನ್ನೊಂದೆಡೆ ಅನರ್ಹ ಶಾಸಕರನ್ನು ಸೋಲಿಸುವುದೇ ನಮ್ಮ ಗುರಿ ಎನ್ನುತ್ತಾರೆ. ಅನರ್ಹ ಶಾಸಕರು ಸೋತರೆ ಸರ್ಕಾರ ಹೇಗೆ ಉಳಿಯುತ್ತದೆ ಎಂದು ಪ್ರಶ್ನಿಸಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತರೆ ಇವರೇ ಬೆನ್ನ ಮೇಲೆ ಯಡಿಯೂರಪ್ಪ ನವರನ್ನು ಕೂರಿಸಿಕೊಳ್ಳಬೇಕು ಎನ್ನುವ ತಂತ್ರ ರೂಪಿಸಿದ್ದಾರೆ. ಹಿಂದಿನ ಬಾರಿ ಎತ್ತಾಕಿದರಲ್ಲ, ಅದೇ ರೀತಿ ಈಗಲೂ ಅದನ್ನೇ ಮಾಡಲು ಹೊರಟಿದ್ದಾರೆ. ಇಂಥ ಎತ್ತಾಕುವಂತಹ ಹಲುಕತನದ ವಿದ್ಯೆಯನ್ನು ಅಪ್ಪ ಮಗ ಹೆಣಿದಿದ್ದಾರೆ ಎಂದು ಕಿಡಿ ಕಾರಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಖಚಿತವಾಗಿ ಗೆಲುವು ಸಾಧಿಸುತ್ತದೆ, ಈ ಕಾರಣಕ್ಕಾಗಿ ಜೆಡಿಎಸ್ ಬಿಜೆಪಿಯನ್ನು ಸಮರ್ಥಸಿಕೊಂಡು ಬರುತ್ತಿದ್ದಾರೆ. ಆದರೆ ಜನರಿಗೆ ಇದೆಲ್ಲ ಗೊತ್ತಿದೆ. ಬಿಜೆಪಿಯನ್ನು ಸೋಲಿಸಲು ಬಿಡುವುದಿಲ್ಲ. ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು, ಸರ್ಕಾರ ಮುಂದುವರಿಯುತ್ತದೆ. ಯಡಿಯೂರಪ್ಪನವರ ನೇತೃತ್ವದಲ್ಲಿ 15ಕ್ಕೆ 15 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
-

ಯಾರ ಬೆಂಬಲಕ್ಕೂ ನಿಂತಿಲ್ಲ, ಸದ್ಯಕ್ಕೆ ತಟಸ್ಥ: ಜಿಟಿಡಿ
ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ನನಗೆ ಮೂರು ಪಕ್ಷದವರು ಬೆಂಬಲ ಕೇಳಿದ್ದಾರೆ. ಆದರೆ ನಾನು ಸದ್ಯಕ್ಕೆ ತಟಸ್ಥವಾಗಿದ್ದೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ನಂತರ ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಅಲ್ಲದೆ ಮೂರು ಪಕ್ಷಗಳ ಅಭ್ಯರ್ಥಿಗಳು ಬೆಂಬಲ ಕೇಳಿದ್ದಾರೆ. ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದ್ದೇನೆ ಅಷ್ಟೆ. ಈ ಹಿಂದೆ ಹೇಳಿದಂತೆ ನಾನು ಸದ್ಯಕ್ಕೆ ತಟಸ್ಥವಾಗಿದ್ದೇನೆ ಎಂದರು.

ನಾನು ಸಾಕಷ್ಟು ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಜಿ.ಟಿ.ದೇವೆಗೌಡರ ಆಸ್ತಿ ಎಷ್ಟು, ಹತ್ತು ವರ್ಷದ ಹಿಂದೆ ರಾಜಕೀಯಕ್ಕೆ ಬಂದವರ ಆಸ್ತಿ ಎಷ್ಟಿದೆ ಎಂಬುದನ್ನು ಯಾರು ನೋಡುವುದಿಲ್ಲ. ಹಾಗೇ ರಾಜಕೀಯದಲ್ಲಿ ಪ್ರಾಮಾಣಿಕತೆ ಎಲ್ಲಿದೆ ಎಂದು ದುಡ್ಡು ಮಾಡುವವರು ಕೇಳುತ್ತಾರೆ. ಈಗಿನ ರಾಜಕೀಯ ಯಾರಿಗೂ ಬೇಡ, ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ನವರು ಯಾವ ರೀತಿ ಕಚ್ಚಾಡಿದರು. ಆದರೆ ಫಲಿತಾಂಶ ಬಂದ ನಂತರ ಲವರ್ ತರಹ ತಬ್ಬಿಕೊಂಡರು ಹೀಗೆ ಎಲ್ಲವೂ ಅನಿರೀಕ್ಷಿತ ಎಂದು ಬೇಸರ ವ್ಯಕ್ತಪಡಿಸಿದರು.
ಇದೀಗ ಮಾಜಿ ಸಿಎಂ ಕುಮಾರಸ್ವಾಮಿಯವರು ಯಡಿಯೂರಪ್ಪನವರ ಸರ್ಕಾರ ಬೀಳಿಸುವುದಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಯಡಿಯೂರಪ್ಪ ಧನ್ಯವಾದ ಅಂತಾರೆ. ಈ ರೀತಿ ಪರಿಸ್ಥಿತಿ ಇರುವಾಗ ಹೋರಾಟ ಮಾಡಿದವರ ಕತೆ ಏನು? ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ತತ್ವ ಸಿದ್ಧಾಂತ ಇಲ್ಲ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
-

ಬಿಜೆಪಿ ಅಭ್ಯರ್ಥಿಯನ್ನು ಒದ್ದು ಪೊದೆಗೆ ತಳ್ಳಿದ ಕಾರ್ಯಕರ್ತರು
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಈ ಮಧ್ಯೆ ಬಿಜೆಪಿ ಅಭ್ಯರ್ಥಿಯ ಮೇಲೆ ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ನಾಡಿಯಾ ಜಿಲ್ಲೆಯ ಘಿಯಾಘಾಟ್ ನ ಇಸ್ಲಾಂಪುರ ಪ್ರಾಥಮಿಕ ಶಾಲಾ ಬೂತ್‍ನಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದ ಅಭ್ಯರ್ಥಿಯನ್ನು ಬಿಜೆಪಿ ಕರಿಂಪೂರಿ ಕ್ಷೇತ್ರದ ಜೆ. ಪ್ರಕಾಶ್ ಮಜುಂದಾರ್ ಎನ್ನಲಾಗಿದೆ. ಜೆ. ಪ್ರಕಾಶ್ ಮೇಲೆ ಕೆಲ ಜನರು ಮಾರಣಾಂತಿಕವಾಗಿ ಹಲ್ಲೆ ಮಾಡಿ, ಕಾಲಿನಿಂದ ಒದ್ದು, ಅವರನ್ನು ರಸ್ತೆಬದಿಯಲ್ಲಿರುವ ಪೊದೆಯೊಳಗೆ ತಳ್ಳಿದ್ದಾರೆ. ಇದನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿದ್ದು, ಈ ಹಲ್ಲೆ ಮಾಡಿದವರು ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರು ಎಂದು ಬಿಜೆಪಿ ಆರೋಪಿಸಿದೆ.
#WATCH West Bengal BJP Vice President and candidate for Karimpur bypoll, Joy Prakash Majumdar manhandled and kicked allegedly by TMC workers as voting is underway in the constituency. #WestBengal pic.twitter.com/Vpb5s14M5A
— ANI (@ANI) November 25, 2019
ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷರು ಆಗಿರುವ ಜೆ. ಪ್ರಕಾಶ್ ಮಜುಂದಾರ್ ಅವರು, ಇಸ್ಲಾಂಪುರ ಪ್ರಾಥಮಿಕ ಶಾಲಾ ಬೂತ್ ನ ಸ್ವಲ್ಪ ದೂರದಲ್ಲೇ ಕೆಲ ಜನರು ಮತದಾನದ ವೇಳೆ ಮತದಾರರಿಗೆ ನೀಡಲು ಅಪಾರ ಪ್ರಮಾಣದ ಆಹಾರ ತಯಾರಿಸುತ್ತಿದ್ದಾರೆ ಎಂದು ತಿಳಿದು ಆ ಸ್ಥಳಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ಅಲ್ಲಿ 10 ರಿಂದ 11 ಜನ ಆಹಾರ ತಯಾರಿಸುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ರೀತಿ ಆಹಾರ ತಯಾರು ಮಾಡುತ್ತಿದ್ದಾರೆ ಎಂದು ಪ್ರಕಾಶ್ ಮಜುಂದಾರ್ ಅವರು ಜಿಲ್ಲಾ ಆಡಳಿತಾಧಿಕಾರಿ ಮತ್ತು ಚುನಾವಣಾ ಅಧಿಕಾರಿಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಕಾರ್ಯಕರ್ತರು ಮುಜುಂದಾರ್ ಅವರ ಸುತ್ತಾ ಸುತ್ತಿಕೊಂಡು ಪ್ರತಿಭಟನೆ ಮಾಡಿದ್ದಾರೆ. ನಂತರ ಅವರ ಮೇಲೆ ಹಲ್ಲೆ ಮಾಡಿ ಅವರನ್ನು ಕಾಲಿನಿಂದ ಒದ್ದು ರಸ್ತೆಪಕ್ಕದ ಪೊದೆಯೊಳಗೆ ತಳ್ಳಿದ್ದಾರೆ. ನಂತರ ಕೇಂದ್ರ ಪಡೆ ಕಾರ್ಯಕರ್ತರ ಮೇಲೆ ಲಾಠಿ ಜಾರ್ಜ್ ಮಾಡಿ ಮುಜುಂದಾರ್ ಅವರನ್ನು ರಕ್ಷಿಸಿದ್ದಾರೆ.
I strongly condemn the attack on BJP Candidate from Karimpur Shri Jay Prakash Majumdar by #TMChhi goons.#ChhiTMChhi #MamataMuktBengal#Shame@AmitShah @JPNadda@KailashOnline @BJPLive @TajinderBagga @amitmalviya @MenonArvindBJP @swapan55 @jay_majumdar @BJP4Bengal pic.twitter.com/JtIcrI4oCW
— Babul Supriyo (@SuPriyoBabul) November 25, 2019
ಈ ವಿಚಾರದ ಬಗ್ಗೆ ಮಾತನಾಡಿರುವ ಜೆ. ಪ್ರಕಾಶ್ ಮಜುಂದಾರ್ ಅವರು, ಬೂತ್ ಅನ್ನು ವಶಪಡಿಸಿಕೊಳ್ಳುವ ಅವರ ಪಿತೂರಿಯನ್ನು ನಾನು ಬಹಿರಂಗಪಡಿಸಿದ ಕಾರಣ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ಬೆನ್ನಿಗೆ ಕೈಗೆ ಗಾಯಗಳಾಗಿವೆ. ಈ ಗಾಯಗಳು ಹೋಗುತ್ತವೆ. ಆದರೆ ನಮ್ಮ ರಾಜ್ಯ ಈ ಗಾಯಗಳಿಂದ ಮುಕ್ತವಾಗುವುದು ಯಾವಾಗ? ಸಿಎಂ ಮಮತಾ ಬ್ಯಾನರ್ಜಿ ಸಹಚರರು ರಾಜ್ಯದ ಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಮಜುಂದಾರ್ ಅವರು ಬೂತ್ ಒಳಗೆ ಹೋಗಲು ಪ್ರಯತ್ನಿಸಿದಾಗ ಕೂಡ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೋ ಬ್ಯಾಕ್ ಎಂಬ ಘೋಷಣೆ ಕೂಗಿದ್ದರು. ಅದೂ ಅಲ್ಲದೇ ಕೆಲ ಸ್ಥಳೀಯ ತೃಣಮೂಲ ಕಾಂಗ್ರೆಸ್ ಮುಖಂಡರು ಜೆ. ಪ್ರಕಾಶ್ ಮಜುಂದಾರ್ ಅವರು ಶಾಂತಿಯುತ ವಾತಾವರಣಕ್ಕೆ ಭಂಗ ತಂದಿದ್ದಾರೆ ಎಂದು ಆರೋಪಿಸಿದ್ದರು.
.@BJP4Bengal Candidate for Karimpur Assembly Bypoll, Joy Prakash Majumdar dragged, pushed & kicked by TMC goons
Democracy is non-existent in Bengal due to TMC's hooliganism & anarchy
Our brave karyakartas will not bow down to their cowardice attacks
— Sunil Deodhar (@Sunil_Deodhar) November 25, 2019
ಮಜುಂದಾರ್ ಅವರ ಈ ದಾಳಿಯ ಬೆನ್ನಲ್ಲೇ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇವರ ಜೊತೆಗೆ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸುನಿಲ್ ದೇವಧರ್ ಅವರು, ಮಜುಂದಾರ್ ಅವರ ಹಲ್ಲೆ ವಿಡಿಯೋ ಟ್ವೀಟ್ ಮಾಡಿ ಪಶ್ಚಿಮ ಬಂಗಳಾದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಇಲ್ಲ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿಯಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
-

ಕುಮಾರಸ್ವಾಮಿ ಕೆಟ್ಟ ಮುಖ್ಯಮಂತ್ರಿಯಾಗಿದ್ದರು, ಬಿಎಸ್‍ವೈ ಸಿಎಂ ಆದ ಮೇಲೆ ಶನಿ ಹರಿದಿದೆ – ಬಿ.ಸಿ.ಪಾಟೀಲ್
ಹಾವೇರಿ: ಕುಮಾರಸ್ವಾಮಿ ಒಬ್ಬ ಕೆಟ್ಟ ಮುಖ್ಯಮಂತ್ರಿ. ಬಿಎಸ್‍ವೈ ಸಿಎಂ ಆದ ನಂತರ ರಾಜ್ಯದ ಶನಿ ಹರಿದುಹೋಗಿದೆ ಎಂದು ಹೇಳುವ ಮೂಲಕ ಎಚ್‍ಡಿಕೆಯವರನ್ನು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಪರೋಕ್ಷವಾಗಿ ಶನಿ ಎಂದು ಕಿಡಿ ಕಾರಿದ್ದಾರೆ.

ಹಿರೇಕೆರೂರಿನ ರಟ್ಟಿಹಳ್ಳಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರ ಬಳಿ ಕ್ಷೇತ್ರದ ನೀರಾವರಿ ಯೋಜನೆಗೆ ಅನುದಾನ ಕೇಳಿದರೆ 14 ತಿಂಗಳಾದರೂ ಹಣ ಕೊಡಲಿಲ್ಲ. ಆದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ 8 ಸಾವಿರ ಕೋಟಿ ರೂ. ಕೊಡುತ್ತೇನೆ ಅಂತ ಹೇಳಿದ್ದರು ಎಂದು ವಾಗ್ದಾಳಿ ನಡೆಸಿದರು.
ಹಾವೇರಿ ಜಿಲ್ಲೆಗೆ 1 ಸಾವಿರ ಕೋಟಿ ರೂ. ಅನುದಾನ ನೀಡಲು ಸಹ ಹಣ ಇಲ್ಲ ಎಂದರು. ಹೀಗಾಗಿ ನಾನು ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ನಾನು ರಾಜೀನಾಮೆ ಕೊಟ್ಟಿದ್ದು ಸರಿಯೇ ಎಂದು ಇದೇ ಸಂದರ್ಭದಲ್ಲಿ ನೆರೆದಿದ್ದ ಜನರನ್ನು ಕೇಳಿದರು.

ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಹಾಡಿ ಹೊಗಳಿದ ಬಿ.ಸಿ.ಪಾಟೀಲ್, ಬಿಎಸ್‍ವೈ ನಮಗೆ ಕಾಮಧೇನು ಆಗಿದ್ದಾರೆ. ಅವರು ಈ ಹಿಂದೆ ಹಿರೇಕೆರೂರಿಗೆ ಬಂದಾಗ ಅಂದು ನಾನು ಬಿಜೆಪಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡೆ. ಕಳೆದ 14ರಂದು ನಾನು ಬಿಜೆಪಿ ಸೇರಿದ್ದೇನೆ. ಇಂದು 10ನೇ ದಿನದ ಸಂಸಾರ ನನ್ನದು. ಯುದ್ಧ ಪ್ರಾರಂಭವಾಗಿದೆ. ಹೀಗಾಗಿ ನಾನು ಎಲ್ಲರನ್ನೂ ಭೇಟಿಯಾಗಲು ಆಗುತ್ತಿಲ್ಲ. ಇದೊಂದು ಮಹಾಪರ್ವ. ನಾನು ಯು.ಬಿ ಬಣಕಾರ ಒಂದೇ ವೇದಿಕೆಯಲ್ಲಿ ಬರುತ್ತೇವೆ ಎಂದುಕೊಂಡಿರಲಿಲ್ಲ. ಕಳೆದ 16 ತಿಂಗಳಿನಲ್ಲಿ ನಮ್ಮ ತಾಲೂಕಿಗೆ ವಿಪರೀತ ತಾರತಮ್ಯ ಆಯಿತು. ಸಮ್ಮಿಶ್ರ ಸರ್ಕಾರ 6-8 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ವಾಗ್ದಾಳಿ ನಡೆಸಿದರು.


