Tag: by election

  • ಚನ್ನಪಟ್ಟಣ ಫಲಿತಾಂಶದ ನಂತರ ಜೆಡಿಎಸ್, ಬಿಜೆಪಿ ಜೊತೆ ಮರ್ಜ್ ಆಗಬಹುದು: ಡಿಕೆಶಿ

    ಚನ್ನಪಟ್ಟಣ ಫಲಿತಾಂಶದ ನಂತರ ಜೆಡಿಎಸ್, ಬಿಜೆಪಿ ಜೊತೆ ಮರ್ಜ್ ಆಗಬಹುದು: ಡಿಕೆಶಿ

    ಬೆಂಗಳೂರು: ಚನ್ನಪಟ್ಟಣ ಫಲಿತಾಂಶದ (Channapatna) ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಬಹುದು. ಜೆಡಿಎಸ್ ಬಿಜೆಪಿ ಜೊತೆ ಮರ್ಜ್ ಆಗಬಹುದು. ನನ್ನ ಪ್ರಕಾರ ಅದೇ ಬದಲಾವಣೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಮ್ಮ ಸರ್ಕಾರ ಪತನ ಅನ್ನೋದು ಭ್ರಮೆ. ಸಾಮ್ರಾಜ್ಯ ಮುಳುಗಿರುವುದು ನನಗೂ ಗೊತ್ತು. ಉದಯಿಸಿದ ಸೂರ್ಯ ಕೆಳಗೆ ಬರಲೇಬೇಕು. ಶ್ರೇಯಸ್ಸಾಗಬೇಕಾದರೆ ಧರ್ಮರಾಯನ ಧರ್ಮತ್ವ ಇರಬೇಕು. ವಿಧುರನ ನೀತಿ, ಕೃಷ್ಣನ ತಂತ್ರ ಇರಬೇಕು. ಕರ್ಣನ ದಾನತ್ವ ಇರಬೇಕು, ಭೀಮನ ಬಲ ಇರಬೇಕು. ಇದು ಯಾವುದು ಕುಮಾರಸ್ವಾಮಿಗೆ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: Bengaluru| ಹಸುಗೂಸನ್ನು ನೀರಿನ ಸಿಂಟೆಕ್ಸ್ ಟ್ಯಾಂಕ್‌ಗೆ ಎಸೆದು ಕೊಲೆ

    ಒಂದು ದೇವಸ್ಥಾನ ಕಟ್ಟಿಲ್ಲ, ಒಂದು ಸೈಟ್ ಕೊಟ್ಟಿಲ್ಲ, ಬಡವರಿಗೆ ಒಂದು ಮನೆ ಕೊಟ್ಟಿಲ್ಲ. ಜನ ಯಾಕೆ ವೋಟ್ ಹಾಕುತ್ತಾರೆ? ಕುಮಾರಸ್ವಾಮಿ ಕಣ್ಣೀರು ಒರೆಸಿದ ಅಂತ ಯಾವ ರೈತ ಹೇಳುತ್ತಾನೆ ತೋರಿಸಿ. ನೀನು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದೆ ದಯವಿಟ್ಟು ತೋರಿಸಪ್ಪ ಎಂದು ಹರಿಹಾಯ್ದರು. ಇದನ್ನೂ ಓದಿ: ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿಗೆ ಪ್ರಧಾನಿ ಮೋದಿ ಖಂಡನೆ

  • ಪ್ರಚಾರದ ವೇಳೆ ಬೈಕ್‌ನಿಂದ ಬಿದ್ದ ನಿಖಿಲ್‌ ಕುಮಾರಸ್ವಾಮಿ

    ಪ್ರಚಾರದ ವೇಳೆ ಬೈಕ್‌ನಿಂದ ಬಿದ್ದ ನಿಖಿಲ್‌ ಕುಮಾರಸ್ವಾಮಿ

    ರಾಮನಗರ: ಚನ್ನಪಟ್ಟಣ ಉಪಚುನಾವಣಾ (Channapatna By Election) ಪ್ರಚಾರದ ವೇಳೆ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಬೈಕ್‌ನಿಂದ ಬಿದ್ದಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿಯಲ್ಲಿ ನಿಖಿಲ್‌ ಕಾರ್ಯಕರ್ತನ ಬೈಕ್‌ ಏರಿ ಪ್ರಚಾರ ನಡೆಸುತ್ತಿದ್ದರು. ಮಳೆ ನೀರಿನಿಂದ ಕೆಸರಾಗಿದ್ದ ರಸ್ತೆಯಲ್ಲಿ ಆಯತಪ್ಪಿ ಬಿದ್ದಿದ್ದಾರೆ. ಇದನ್ನೂ ಓದಿ: ಅರ್ಧದಷ್ಟು ವಿದ್ಯುತ್‌ ಸರಬರಾಜು ಕಡಿತ – ಬಾಂಗ್ಲಾಗೆ ಅದಾನಿ ಪವರ್‌ ಶಾಕ್‌


    ತಕ್ಷಣವೇ ಸ್ಥಳೀಯ ಕಾರ್ಯಕರ್ತರು ನಿಖಿಲ್‌ ನೆರವಿಗೆ ಬಂದಿದ್ದು ಮೇಲಕ್ಕೆತ್ತಿ ಉಪಚರಿಸಿದ್ದಾರೆ. ಸ್ವಲ್ಪಹೊತ್ತು ವಿಶ್ರಾಂತಿ ಪಡೆದು ಮತ್ತೆ ನಿಖಿಲ್‌ ಕುಮಾರಸ್ವಾಮಿ ಪ್ರಚಾರ ಕಾರ್ಯ ಮುಂದುವರಿಸಿದರು.

  • ದೀಪಾವಳಿ ಬಳಿಕ ಜೋರಾಗಲಿದೆ ಶಿಗ್ಗಾಂವಿ ಉಪಸಂಗ್ರಾಮ – ನ.5ಕ್ಕೆ ಭರತ್ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ

    ದೀಪಾವಳಿ ಬಳಿಕ ಜೋರಾಗಲಿದೆ ಶಿಗ್ಗಾಂವಿ ಉಪಸಂಗ್ರಾಮ – ನ.5ಕ್ಕೆ ಭರತ್ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ

    – ನ.6ಕ್ಕೆ `ಕೈ’ ಅಭ್ಯರ್ಥಿ ಪರ ಸಿಎಂ, ಡಿಸಿಎಂ ಮತಯಾಚನೆ
    – ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಹೆಚ್‌ಡಿಕೆ ತಂತ್ರ

    ಹಾವೇರಿ: ದೀಪಾವಳಿ ಬಳಿಕ ಹಾವೇರಿ, ಚನ್ನಪಟ್ಟಣದಲ್ಲಿ ಉಪಚುನಾವಣೆ ಕಾವು ಹೆಚ್ಚಾಗಲಿದೆ. ಹಾವೇರಿಯ‌ (Haveri) ಶಿಗ್ಗಾಂವಿಯಲ್ಲಿ (Shiggaon) ಬಿಜೆಪಿ ಆಭ್ಯರ್ಥಿ ಪರ ವಿಜಯೇಂದ್ರ, ಯಡಿಯೂರಪ್ಪ ಪ್ರಚಾರಕ್ಕೆ ಪ್ಲ್ಯಾನ್ ನಡೆಸಿದ್ದಾರೆ. ಅತ್ತ ಕಾಂಗ್ರೆಸ್ ಅಭ್ಯರ್ಥಿ ಯಾಸಿನ್ ಪರ ಸಿಎಂ, ಡಿಸಿಎಂ ಪ್ರಚಾರ ನಡೆಸಲಿದ್ದಾರೆ.

    ದೀಪಾವಳಿ ಬಳಿಕ ಶಿಗ್ಗಾಂವಿ ಉಪಚುನಾವಣೆಯಲ್ಲಿ (By Election) ಪ್ರಚಾರ ಭರಾಟೆ ಜೋರಾಗಲಿದೆ. ದೊಡ್ಡ ದೊಡ್ಡ ರಾಜಕೀಯ ಘಟಾನುಘಟಿಗಳು ಪ್ರಚಾರದ ಅಖಾಡಕ್ಕೆ ಧುಮುಕಲಿದ್ದಾರೆ. ನವೆಂಬರ್ 5 ರಂದು ಭರತ್ ಬೊಮ್ಮಾಯಿ (Bharath Bommai) ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಚಾರ ನಡೆಸಲಿದ್ದಾರೆ. ಇನ್ನು ನವೆಂಬರ್ 11 ರಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಬಿಎಸ್‌ವೈ ನೇತೃತ್ವದಲ್ಲಿ ಬೃಹತ್ ಸಮಾವೇಶ, ರೋಡ್ ಶೋಗೆ ಸಿದ್ಧತೆ ನಡೆಸಲಾಗಿದೆ. ಇತ್ತ ನವೆಂಬರ್ 6ರಂದು ಕೈ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ (Yasir Khan Patan) ಪರ ಸಿಎಂ ಸಿದ್ದರಾಮಯ್ಯ, ಡಿಕೆಶಿ ಎರಡನೇ ಸುತ್ತಿನ ಅದ್ಧೂರಿ ಪ್ರಚಾರ ನಡೆಸಲಿದ್ದಾರೆ. ಅಲ್ಲದೇ ಶಿಗ್ಗಾಂವಿಯಲ್ಲೇ ಕಾಂಗ್ರೆಸ್ ಸಚಿವರು, ಶಾಸಕರ ದಂಡು ಮೊಕ್ಕಾಂ ಹೂಡಲಿದ್ದಾರೆ. ಇದನ್ನೂ ಓದಿ: ದರ್ಶನ್ ಎಡಗಾಲಿಗೂ ಸಮಸ್ಯೆ – ಫಿಜಿಯೋಥೆರಪಿನಾ? ಆಪರೇಷನ್‌ನಾ?

    ಅತ್ತ ರಾಮನಗರದಲ್ಲೂ (Ramanagara) ಉಪಚುನಾವಣೆ ಪ್ರಚಾರ ಭರಾಟೆ ಜೋರಾಗಿದೆ. ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕುಮಾರಸ್ವಾಮಿ ತಂತ್ರ ರೂಪಿಸಿದ್ದಾರೆ. ಹೇಗಾದರೂ ದಲಿತ ಹಾಗೂ ಹಿಂದಳಿದ ವರ್ಗಗಳ ಮತ ಕ್ರೂಡೀಕರಣಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಮಾಜಿ ಶಾಸಕ ಅನ್ನದಾನಿ ನೇತೃತ್ವದಲ್ಲಿ ದಲಿತ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಲಾಯಿತು. ಈ ವೇಳೆ ಎಸ್ಸಿ-ಎಸ್ಟಿ ಸಮುದಾಯ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಬೆಂಬಲ ನೀಡುವಂತೆ ಕರೆ ಕೊಡಲಾಗಿದ್ದು, ಯೋಗೇಶ್ವರ್ ಪದೇಪದೇ ಪಕ್ಷ ಬದಲಿಸುವ ವ್ಯಕ್ತಿ. ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ ಯೋಗೇಶ್ವರ್ ನಂಬಬೇಡಿ. ಈ ಬಾರಿ ನಿಖಿಲ್ ಕುಮಾರಸ್ವಾಮಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾಳಿ ಪೂಜೆ ವೇಳೆ ಅಗ್ನಿ ಅವಘಡ – ಬೆಂಕಿ ಕೆನ್ನಾಲಿಗೆಗೆ ಮೂವರು ಮಕ್ಕಳು ಬಲಿ

    ಇನ್ನು ನಿಖಿಲ್ ವಿರುದ್ಧ ಕುಟುಂಬ ರಾಜಕಾರಣ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೂ ಮಾಜಿ ಶಾಸಕ ಅನ್ನದಾನಿ ಟಾಂಗ್ ಕೊಟ್ಟಿದ್ದಾರೆ. ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಕೂಡ ಕುಟುಂಬ ರಾಜಕಾರಣದಿಂದ ಬಂದವರು. ಉತ್ತರ ಪ್ರದೇಶದಲ್ಲಿ ಹುಟ್ಟಿದ್ದರೂ ಕೇರಳದ ವಯನಾಡಿನಲ್ಲಿ ಬಂದು ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಅಭಿವೃದ್ಧಿ ಮಾಡಿರೋ ನಾಯಕರ ಮಗ ಇಲ್ಲಿ ಸ್ಪರ್ಧೆ ಮಾಡೋದು ತಪ್ಪಾ ಎಂದು ಪ್ರಶ್ನೆ ಮಾಡಿ ಕಾಂಗ್ರೆಸ್ ವಿರುದ್ಧ ಮಳವಳ್ಳಿ ಮಾಜಿ ಶಾಸಕ ಅನ್ನದಾನಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಯಚೂರು| ಪಟಾಕಿ ಕಿಡಿ ತಗುಲಿ ಅಂಗಡಿಗೆ ಬೆಂಕಿ – ಅಂಗಡಿಯಲ್ಲಿದ್ದ ವಸ್ತುಗಳು ಭಸ್ಮ

    ಒಟ್ಟಾರೆ ಶಿಗ್ಗಾಂವಿಯಲ್ಲಿ ಘಟಾನುಘಟಿಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡೋದು ಒಂದೆಡೆ ಆದರೆ ಚನ್ನಪಟ್ಟಣದಲ್ಲಿ ನಿಖಿಲ್ ಗೆಲ್ಲಿಸಲು ಜೆಡಿಎಸ್ ಸಭೆ ಮೇಲೆ ಸಭೆ ನಡೆಸುತ್ತಿದೆ. ಗೆಲುವು ಯಾರಿಗೆ ಎಂಬುದು ಚುನಾವಣಾ ಫಲಿತಾಂಶದ ದಿನ ತಿಳಿಯಬೇಕಿದೆ. ಇದನ್ನೂ ಓದಿ: ದಶಕಗಳ ಬಳಿಕ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ಸ್ಪೇನ್‌ ತತ್ತರ – ಸಾವಿನ ಸಂಖ್ಯೆ 205ಕ್ಕೆ ಏರಿಕೆ

  • ರೈತರ ಆಸ್ತಿ ವಕ್ಫ್ ಪಾಲಾಗುತ್ತಿದೆ ಎಂಬುದು ತಪ್ಪು ಕಲ್ಪನೆ: ಹೆಚ್.ಕೆ ಪಾಟೀಲ್

    ರೈತರ ಆಸ್ತಿ ವಕ್ಫ್ ಪಾಲಾಗುತ್ತಿದೆ ಎಂಬುದು ತಪ್ಪು ಕಲ್ಪನೆ: ಹೆಚ್.ಕೆ ಪಾಟೀಲ್

    – ಇದು ಉಪಚುನಾವಣೆಗಾಗಿ ಮಾಡಿರುವ ಗೊಂದಲ ಎಂದ ಸಚಿವ

    ಗದಗ: ರೈತರ ಆಸ್ತಿ ವಕ್ಫ್ (Waqf Land) ಪಾಲಾಗುತ್ತಿದೆ ಎಂಬುದು ತಪ್ಪು ಕಲ್ಪನೆ. ಇದಕ್ಕೆ ಗದಗದಲ್ಲಿ ಆತಂಕ, ಟೀಕೆ ಟಿಪ್ಪಣಿಗೆ ಅವಕಾಶವಿಲ್ಲ. 689 ವಕ್ಫ್ ಆಸ್ತಿಗಳಿವೆ. ಯಾವುದೇ ರೈತರಿಗೆ ನೋಟಿಸ್ ಬಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಉಪಚುನಾವಣೆಗಾಗಿ ಮಾಡಿರುವ ಗೊಂದಲ, ಸೃಷ್ಟಿ ಹೊರತು ಬೇರೇನಲ್ಲ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ (H K Patil) ಹೇಳಿದರು.

    ನಗರದ ಪತ್ರಿಕಾ ಭವನದಲ್ಲಿ ಇಂದು (ಬುಧವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ರೈತರ ಆಸ್ತಿ ಖಾತಾ ಬದಲಾವಣೆ ವಕ್ಫ್ ಆಗಿರುವ ಬಗ್ಗೆ ನಮ್ಮ ರೈತರಿಗೆ ಆತಂಕದ ಪರಿಸ್ಥಿತಿ ಇಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿ, ತಹಶಿಲ್ದಾರ್ ಸುದೀರ್ಘವಾಗಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು 2019 ರಿಂದ 2023ರ ಅವಧಿಯಲ್ಲಿ ವಕ್ಫ್ ಆಸ್ತಿಗಳಿಗೆ ಸಂಭಂದಿಸಿದಂತೆ ರೈತರಿಗೆ ಯಾವುದೇ ನೋಟಿಸ್ ನೀಡಿಲ್ಲ ಎನ್ನುವ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ್ದನ್ನ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ

    ನಂತರ ಕಪ್ಪತ್ತಗುಡ್ಡ ವಿಷಯವಾಗಿ ಮಾತನಾಡಿ, ಅಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲ. ಕಪ್ಪತ್ತಗುಡ್ಡ ಸಂರಕ್ಷಣೆ ನಮ್ಮ ಹೊಣೆ. ಕಪ್ಪತ್ತಗುಡ್ಡ ಉಳಿಸಲು ನಮ್ಮ ಸರ್ಕಾರ ಬದ್ಧವಿದೆ. ಕಪ್ಪತ್ತಗುಡ್ಡ ಕಬ್ಬಿಣದ ಅದಿರು, ಬಂಗಾರ ಗಣಿಗಾರಿಕೆ, ಇತರೆ ಅದಿರು ತೆಗೆಯಲು ಬಳಕೆ ಆಗಬಾರದು ಎನ್ನುವ ಬಗ್ಗೆ ಸರ್ವಾನುಮತದ ನಿರ್ಣಯ ಜನತೆ ತೆಗೆದುಕೊಂಡಿದ್ದಾರೆ. ಈಗ ಹೇಗಿದೆ, ಹಾಗೆ ಉಳಿಸಬೇಕು ಎಂಬ ದೃಢವಾದ ಸಂಕಲ್ಪ ನಮ್ಮದು. ಆ ಸಂಕಲ್ಪ ಮುಂದುವರೆಸುವ ಪ್ರಯತ್ನ ಮಾಡುತ್ತೇವೆ. ಅಲ್ಲಿ ಪರಿಸರ ವೃದ್ಧಿ ಆಗಬೇಕು. ಪ್ರವಾಸಿಗರು ಬರಬೇಕು. ನೀವು ಪ್ರಕೃತಿ ಸೌಂದರ್ಯ ಸವಿಯಲು, ಆನಂದಕ್ಕಾಗಿ ಅಲ್ಲಿಗೆ ಹೋಗಬೇಕು ವಿನಃ ಬೇಟೆಯಾಡಲು ಅಲ್ಲ ಎಂಬ ಖಡಕ್ ಸಂದೇಶ ನೀಡಿದರು. ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ನಾವು ವಿರುದ್ಧವಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಮಾತು ಸತ್ಯಕ್ಕೆ ದೂರ: ಪರಮೇಶ್ವರ್

    ಪ್ರತಿ ವರ್ಷ ರಾಜ್ಯದಲ್ಲಿ 36 ರಿಂದ 40 ಕೋಟಿ ಜನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಈ ಸಂಖ್ಯೆಯನ್ನು 48 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಸುಮಾರು 10 ರಿಂದ 12 ಲಕ್ಷ ಜನ ವಿದೇಶಿಗರು ನಮ್ಮ ರಾಜ್ಯಕ್ಕೆ ಬರುತ್ತಾರೆ. ವಿದೇಶಿಗರ ಪ್ರಮಾಣವನ್ನು 20 ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದ್ದು, ಈ ಮೂಲಕ ರಾಜ್ಯದ ಪ್ರವಾಸೋದ್ಯಮವನ್ನು ಉನ್ನತೀಕರಿಸುವ ಕೆಲಸ ಸರ್ಕಾರ ಮಾಡಲಿದೆ. ನಮ್ಮ ಗುರಿ ಮುಟ್ಟುವಲ್ಲಿ ಜನರ ಸಹಕಾರ, ಸ್ನೇಹ ಮನೋಭಾವದ ಅವಶ್ಯಕತೆ ಇದೆ. ಅತಿಥಿಗಳಿಗೆ ಗೌರವಿಸುವ ಗುಣವನ್ನು ಸ್ಥಳಿಯರು ಬೆಳೆಸಿಕೊಂಡಾಗ ಪ್ರವಾಸೋದ್ಯಮ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ಜೈಲಿಂದ ಹೊರಬಂದ ದರ್ಶನ್; ಬಳ್ಳಾರಿ ಜೈಲಿನ ಹೊರಗೆ ‘ಅಭಿಮಾನದ ಹೊಳೆ’
    ಒಟ್ಟಾರೆಯಾಗಿ ಕರ್ನಾಟಕವನ್ನು ಪ್ರವಾಸಿ ತಾಣವಾಗಿಸಲು ಹೊಸ ನೀತಿ ಜಾರಿಗೆ ತರಲಾಗಿದೆ. ಸಾಂಸ್ಕೃತಿಕ, ಪರಿಸರ, ಶೈಕ್ಷಣಿಕ, ಚಲನಚಿತ್ರ, ಒಳನಾಡಿನ ಜಲ, ವೈದ್ಯಕೀಯ, ಗಣಿಗಾರಿಕೆ, ಗ್ರಾಮೀಣ, ಆಧ್ಯಾತ್ಮಿಕ, ಸ್ವಾಸ್ಥ್ಯ ಪ್ರವಾಸೋದ್ಯಮ ಸೇರಿದಂತೆ ಒಟ್ಟು 25 ವಿಷಯಾಧಾರಿತ ಕ್ಷೇತ್ರಗಳನ್ನು ಯಶಸ್ವಿ ಮಾಡಲು 44 ವಿವಿಧ ರೀತಿಯ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗಿದೆ. ಇದನ್ನೂ ಓದಿ: Madhya Pradesh| ಹುಲಿಸಂರಕ್ಷಿತ ಪ್ರದೇಶದಲ್ಲಿ 7 ಆನೆಗಳ ನಿಗೂಢ ಸಾವು
    1924 ಡಿ.26 ಮತ್ತು 27ರಲ್ಲಿ ಬೆಳಗಾವಿಯಲ್ಲಿ (Belagavi) ನಡೆದ ಎಐಸಿಸಿ ಸಭೆಯಲ್ಲಿ ಮಹಾತ್ಮ ಗಾಂಧಿ ಕಾಂಗ್ರೆಸ್‌ನ (Congress) ಅಧ್ಯಕ್ಷರಾಗಿರುತ್ತಾರೆ. ಅದು 39ನೇ ಅಧಿವೇಶನವಾಗಿತ್ತು. ಮಹಾತ್ಮ ಗಾಂಧಿ ಪಕ್ಷದ ನಾಯಕತ್ವ ವಹಿಸಿದ ಮೇಲೆ ಸ್ವಾತಂತ್ರ‍್ಯ ಸಂಗ್ರಾಮದ ಸ್ವರೂಪ ಬದಲಾವಣೆ ಆಯಿತು. ಈ ಮಹತ್ವದ ಅಧಿವೇಶನ ಮೆಲುಕು ಹಾಕಲು ಶತಮಾನೋತ್ಸವ ನಡೆಸಲು ತಿರ್ಮಾನಿಸಲಾಗಿದೆ. ಅ.2, 2024 ರಿಂದ ಅ.2, 2025ರವರೆಗೆ ಅದ್ಧೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ. ಈ ಕಾರ್ಯಕ್ರಮ ಯಶಸ್ವಿಗೆ 30 ಜನರ ಸಮಿತಿ ರಚಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಅವರನ್ನು ಆಹ್ವಾನಿಸಲು ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ – A8 ಆರೋಪಿ ರವಿಶಂಕರ್ ಬಿಡುಗಡೆ
    ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗುರಣ್ಣ ಬಳಗಾನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಗದಗ-ಬೆಟಗೇರಿ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಬಿ. ಬಿ ಅಸೂಟಿ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ್ ಮಂದಾಲಿ, ಕೆಡಿಪಿ ಸಮಿತಿ ಸದಸ್ಯ ಎಸ್ ಎನ್ ಬಳ್ಳಾರಿ, ಬಸವರಾಜ ಕಡೆಮನಿ ಉಪಸ್ಥಿತರಿದ್ದರು. ಇದನ್ನೂ ಓದಿ: ದರ್ಶನ್ ಬಿಡುಗಡೆ ಹಿನ್ನೆಲೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಫ್ಯಾನ್ಸ್

  • ಉಪಚುನಾವಣೆಗೆ ಸಮಸ್ಯೆ ಮಾಡೋಕೆ ಬಿಜೆಪಿಯಿಂದ ಪ್ರತಿಭಟನೆ: ಸಿಎಂ

    ಉಪಚುನಾವಣೆಗೆ ಸಮಸ್ಯೆ ಮಾಡೋಕೆ ಬಿಜೆಪಿಯಿಂದ ಪ್ರತಿಭಟನೆ: ಸಿಎಂ

    ಬೆಂಗಳೂರು: ಉಪಚುನಾವಣೆಗೆ (By Election) ಸಮಸ್ಯೆ ಮಾಡುವುದಕ್ಕೆ ಬಿಜೆಪಿ ಅವರು ವಕ್ಫ್ ವಿಚಾರದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ (CM Siddaramaiah) ವಾಗ್ದಾಳಿ ನಡೆಸಿದ್ದಾರೆ.

    ವಕ್ಫ್ ವಿಚಾರವಾಗಿ ಬಿಜೆಪಿ (BJP) ಪ್ರತಿಭಟನೆ ಮಾಡುತ್ತಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ರಾಜಕೀಯ ಮಾಡುವುದಕ್ಕೆ ಹೊರಟಿದ್ದಾರೆ. ಈಗ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಬಿಜೆಪಿ ಅವರು ಸಮಸ್ಯೆ ಮಾಡುವುದಕ್ಕೆ ಹೊರಟಿದ್ದಾರೆ. ಉಪಚುನಾವಣೆ ಇರುವುದಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಜೈಲಿನಿಂದ ರಿಲೀಸ್

    ವಕ್ಫ್ ಬೋರ್ಡ್‌ನಿಂದ ರೈತರಿಗೆ ನೋಟಿಸ್ ನೀಡಿರುವ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯರಿಂದ ಜೆಪಿಸಿಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ನಾನು ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಬಿಜೆಪಿ ಅವರು ಈ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ. ರೈತರ ಜಮೀನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ. ಯಾವುದೇ ರೈತರನ್ನ ಒಕ್ಕಲೆಬ್ಬಿಸೋದಿಲ್ಲ. ಈಗ ಯಾರ ಜಮೀನು ರೈತರ ಬಳಿ ಇದೆಯೋ ಆ ಜಮೀನು ರೈತರ ಬಳಿಯೇ ಉಳಿಯಲಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಒಳಮೀಸಲಾತಿ ಜಾರಿಗೆ ನಾವು ವಿರುದ್ಧವಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಮಾತು ಸತ್ಯಕ್ಕೆ ದೂರ: ಪರಮೇಶ್ವರ್

  • ಚನ್ನಪಟ್ಟಣದಲ್ಲಿಯೂ ಕಾಂಗ್ರೆಸ್ ಗಿಫ್ಟ್ ಕೂಪನ್ ಕುತಂತ್ರ: ಹೆಚ್‌ಡಿಕೆ ಆರೋಪ

    ಚನ್ನಪಟ್ಟಣದಲ್ಲಿಯೂ ಕಾಂಗ್ರೆಸ್ ಗಿಫ್ಟ್ ಕೂಪನ್ ಕುತಂತ್ರ: ಹೆಚ್‌ಡಿಕೆ ಆರೋಪ

    ರಾಮನಗರ: ರಾಮನಗರ (Ramanagara) ಸೇರಿದಂತೆ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷ ಗಿಫ್ಟ್ ಕೂಪನ್‌ಗಳನ್ನು (Gift Coupon) ಹಂಚಿ ವ್ಯಾಪಕ ಅಕ್ರಮ ನಡೆಸಿತ್ತು. ಉಪ ಚುನಾವಣೆಯಲ್ಲಿಯೂ (By Election) ಅದೇ ರೀತಿಯ ಅಕ್ರಮ ನಡೆಸಲು ಹೊರಟಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಆರೋಪಿಸಿದ್ದಾರೆ.

    ಚನ್ನಪಟ್ಟಣದಲ್ಲಿ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ 3 ಸಾವಿರ, 5 ಸಾವಿರ ಮೌಲ್ಯದ ಗಿಫ್ಟ್ ಕೂಪನ್ ಹಂಚಲಾಯಿತು. ಚುನಾವಣೆ ಮುಗಿದ ಮೇಲೆ ಆ ಕೂಪನ್‌ಗಳನ್ನು ಬೆಂಗಳೂರಿನ ಲೂಲೂ ಮಾಲ್‌ಗೆ ಹೋಗಿ ಕೊಡಿ. ನಿಮಗೆ ಬೇಕಾದ ವಸ್ತುವನ್ನು ಖರೀದಿ ಮಾಡಿ ಎಂದು ಆಮಿಷ ಒಡ್ಡಿದ್ದರು. ಇದನ್ನು ನಂಬಿ ಕೂಪನ್ ಹಿಡಿದುಕೊಂಡು ಲೂಲೂ ಮಾಲ್‌ಗೆ ಹೋದರೆ ಅಲ್ಲಿ ಕೂಪನ್ ಇಲ್ಲ, ವಸ್ತುಗಳೂ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ; ಯಾವ ಕ್ಷೇತ್ರದಲ್ಲಿ ಯಾರಿಗೆ ಪ್ರಶಸ್ತಿ – ಇಲ್ಲಿದೆ ಪಟ್ಟಿ

    ಕಾಂಗ್ರೆಸ್ ಪಕ್ಷವು ವಾಮಮಾರ್ಗದಲ್ಲಿ ಚುನಾವಣೆಗಳನ್ನು ಗೆಲ್ಲುವ ಚಾಳಿ ಮಾಡಿಕೊಂಡಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿಯೂ ಕೂಪನ್ ಷಡ್ಯಂತ್ರ ಮಾಡಲು ಕಾಂಗ್ರೆಸ್ ಹೊರಟಿದೆ. ಇಂಥ ವಂಚನೆಯ ಕುತಂತ್ರಕ್ಕೆ ಯಾರೂ ಮರುಳಾಗಾಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅಭಿವೃದ್ಧಿ ಮಾಡಿಲ್ಲ, ಈ ಬಾರಿ ಜನ ಕಾಂಗ್ರೆಸ್ ಕೈ ಹಿಡಿಯುತ್ತಾರೆ: ಡಿಕೆಶಿ

  • ಬುಧವಾರ ಜಮೀರ್ ಜೊತೆ ತೆರಳಿ ನಾಮಪತ್ರ ವಾಪಸ್ ಪಡೆಯುತ್ತೇನೆ: ಅಜ್ಜಂಪೀರ್ ಖಾದ್ರಿ

    ಬುಧವಾರ ಜಮೀರ್ ಜೊತೆ ತೆರಳಿ ನಾಮಪತ್ರ ವಾಪಸ್ ಪಡೆಯುತ್ತೇನೆ: ಅಜ್ಜಂಪೀರ್ ಖಾದ್ರಿ

    – ಶಿಗ್ಗಾಂವಿ ಕಾಂಗ್ರೆಸ್ ಬಂಡಾಯ ಶಮನ

    ಹುಬ್ಬಳ್ಳಿ: ನಾಳೆ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಜೊತೆಗೆ ತೆರಳಿ ನಾಮಪತ್ರ (Nomination Paper) ವಾಪಸು ಪಡೆಯುತ್ತೇನೆ ಎಂದು ಶಿಗ್ಗಾಂವಿ (Shiggaon) ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ (Ajjampir Khadri) ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಯಕರು ನನ್ನ ಜೊತೆಗೆ ಮಾತನಾಡಿದ್ದಾರೆ. ಟಿಕೆಟ್ ಸಿಗದೇ ಇರುವ ಕಾರಣ ಅಸಮಾಧಾನ ಆಗಿದ್ದು ನಿಜ. ನಮ್ಮ ಅಭಿಮಾನಿಗಳು ನಾಮಪತ್ರ ಸಲ್ಲಿಕೆ ಮಾಡು ಅಂತ ಒತ್ತಾಯ ಮಾಡಿದ್ದರು. ಅದಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದೆ. ಆದರೆ ಸಿಎಂ, ಡಿಸಿಎಂ ನಮ್ಮ ಆಪ್ತರ ಜೊತೆಗೆ ಮಾತನಾಡಿದ್ದಾರೆ. ನಾನು ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ಸಲುವಾಗಿ ನಾನು ನಾಮಪತ್ರ ವಾಪಸು ಪಡೆಯುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ – ಯತ್ನಾಳ್, ಪ್ರತಾಪ್ ಸಿಂಹ, ಯದುವೀರ್, ಸುಮಲತಾಗೆ ಕೊಕ್

    ಇನ್ನೂ ಮುಂದೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವೆ. ಬಿಜೆಪಿ ಸೋಲಿಸಲು ಎಲ್ಲಾ ಪ್ರಯತ್ನ ಮಾಡುವೆ. ಈ ಬಾರಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: 500 ವರ್ಷಗಳಲ್ಲಿ ಮೊದಲ ಬಾರಿಗೆ ರಾಮ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾನೆ – ಧನ್‌ತೇರಾಸ್‌ಗೆ ಮೋದಿ ಶುಭಾಶಯ

    ತೀವ್ರ ಪೈಪೋಟಿ ನಡುವೆ ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್ ಯಾಸಿರ್ ಅಹ್ಮದ್ ಖಾನ್ ಪಠಾಣ್ ಪಾಲಾಯಿತು. ಪಠಾಣ್ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತನಗೆ ಟಿಕೆಟ್ ಸಿಗಲಿಲ್ಲ ಎಂದು ಅಜ್ಜಂಪೀರ್ ಮುನಿಸಿಕೊಂಡಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದನ್ನೂ ಓದಿ: ‘ಮೈತ್ರಿ’ ನಾಯಕರಿಗೆ ಡಿಕೆ ಬ್ರದರ್ಸ್ ಶಾಕ್ – ಚನ್ನಪಟ್ಟಣ ನಗರಸಭೆಯ 6 ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ಪಡೆ

    ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪಚುನಾವಣೆ ನಡೆಯಲಿದೆ. ಈಗಾಗಲೇ ಅಭ್ಯರ್ಥಿಗಳು ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಿದ್ದು, ಭರ್ಜರಿ ಮತಯಾಚನೆ ಮಾಡುತ್ತಿದ್ದಾರೆ. ಬುಧವಾರ (ಅ.30) ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಇದನ್ನೂ ಓದಿ:  ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ; ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ನಿರ್ಬಂಧ

  • ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣ ಪರಿಚಯಿಸಿದ್ದೇ ಕಾಂಗ್ರೆಸ್: ಬೊಮ್ಮಾಯಿ

    ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣ ಪರಿಚಯಿಸಿದ್ದೇ ಕಾಂಗ್ರೆಸ್: ಬೊಮ್ಮಾಯಿ

    ಹಾವೇರಿ: ದೇಶಕ್ಕೆ ಕತ್ತಲ ರಾತ್ರಿಯ ರಾಜಕಾರಣವನ್ನು ಪರಿಚಯ ಮಾಡಿಕೊಟ್ಟು ಕರಗತ ಮಾಡಿರುವುದೇ ಕಾಂಗ್ರೆಸ್ (Congress) ಪಕ್ಷ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

    ಶಿಗ್ಗಾಂವಿಯಲ್ಲಿ (Shiggaon) ಮಾಧ್ಯಮಗಳೊಂದಿಗೆ ರಾಜ್ಯ ಸರ್ಕಾರದ ಸಚಿವರು ಉಪಚುನಾವಣೆಯಲ್ಲಿ ಅಕ್ರಮ ತಡೆಯಲು ಬರುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರ ಈ ಹೇಳಿಕೆ ಹಾಸ್ಯಾಸ್ಪದವಾಗಿದೆ. ಚುನಾವಣಾ ಅಕ್ರಮ ತಡೆಯಲು ಎಲೆಕ್ಷನ್ ಕಮಿಷನ್ ಇದೆ. ಅವರು ಅವರ ಕಾರ್ಯವನ್ನು ಮಾಡುತ್ತಿದ್ದಾರೆ. ಆಡಳಿತ ಮಾಡುವ ಸಚಿವರು ಕೆಲಸ ಬಿಟ್ಟು ಅದನ್ನು ಸಚಿವರು ಮಾಡಲು ಬರುತ್ತಿರುವುದು ಹಾಸ್ಯಸ್ಪದ. ಇಡೀ ದೇಶಕ್ಕೆ ಕತ್ತಲ ರಾತ್ರಿ ರಾಜಕಾರಣ ಪರಿಚಯಿಸಿದವರೇ ಕಾಂಗ್ರೆಸ್‌ನವರು ಎಂದು ಹೇಳಿದರು. ಇದನ್ನೂ ಓದಿ: ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ – ಯತ್ನಾಳ್, ಪ್ರತಾಪ್ ಸಿಂಹ, ಯದುವೀರ್, ಸುಮಲತಾಗೆ ಕೊಕ್

    ವಕ್ಫ್ ಆಸ್ತಿ ವಿಚಾರದಲ್ಲಿ ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತದೆ. ಸಾಧನೆ ಸರ್ಕಾರದ್ದು ಇರುತ್ತದೆ, ವಿರೋಧ ಪಕ್ಷ ತನ್ನ ಕೆಲಸ ಮಾಡುತ್ತದೆ. ರೈತರಿಗೆ ಯಾರು ನೋಟಿಸ್ ಕೊಟ್ಟರು. 2024ರಲ್ಲಿ ರೈತರ ಪಹಣಿಯಲ್ಲಿ ದಾಖಲೆ ಕೂತಿದೆ. ಅದನ್ನು ಯಾವ ಸರ್ಕಾರ ಮಾಡಿದೆ ಎನ್ನುವುದು ಗೊತ್ತಾಗಿದೆ. ತಾವು ಮಾಡಿದ ತಪ್ಪು ಅವ್ಯವಹಾರ ತಾವು ಮಾಡುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಹಾಕುವ ಪ್ರವೃತ್ತಿ ಈ ಸರ್ಕಾರ ಮಾಡುತ್ತಿದೆ. ಎಲ್ಲವೂ ಸ್ಪಷ್ಟವಾಗಿದೆ. ತುಷ್ಟೀಕರಣ ರಾಜಕಾರಣ ಜನರಿಗೆ ಗೊತ್ತಿದೆ. ವಕ್ಫ್ ವಿಚಾರ ಉಪಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಜ್ಯದ ಜನರು ಮಾತ್ರ ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರು. ಇದನ್ನೂ ಓದಿ: 500 ವರ್ಷಗಳಲ್ಲಿ ಮೊದಲ ಬಾರಿಗೆ ರಾಮ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾನೆ – ಧನ್‌ತೇರಾಸ್‌ಗೆ ಮೋದಿ ಶುಭಾಶಯ

    ಶಿಗ್ಗಾಂವಿ ಕ್ಷೇತ್ರಕ್ಕೆ ನೂರು ಕೋಟಿ ಅನುದಾನ ಬಿಡುಗಡೆಯ ದಾಖಲೆ ಇದೆ ಎಂದು ಹೇಳಿರುವ ಸಚಿವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಿಗ್ಗಾಂವಿ ಕ್ಷೇತ್ರಕ್ಕೆ ನೂರು ಕೋಟಿ ಕೊಟ್ಟಿರುವ ದಾಖಲೆ ಕೊಡಲಿ. ಯಾವ ಯಾವ ಇಲಾಖೆಯಲ್ಲಿ ಎಷ್ಟು ವಿಶೇಷ ಅನುದಾನ ಕೊಟ್ಟಿದ್ದಾರೆ ದಾಖಲೆ ಕೊಡಲಿ. ಜನರು ಕೇಳುತ್ತಿದ್ದಾರೆ, ಯಾಕೆ ಮುಚ್ಚಿಡುತ್ತಾರೆ? ಬಜೆಟ್‌ನಲ್ಲಿ ಘೋಷಣೆ ಮಾಡಿರುವುದನ್ನು ಹೇಳುವುದಲ್ಲ. ನೂರು ಕೋಟಿ ವಿಶೇಷ ಅನುದಾನ ಕೊಟ್ಟಿರುವ ದಾಖಲೆ ನೀಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ‘ಮೈತ್ರಿ’ ನಾಯಕರಿಗೆ ಡಿಕೆ ಬ್ರದರ್ಸ್ ಶಾಕ್ – ಚನ್ನಪಟ್ಟಣ ನಗರಸಭೆಯ 6 ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ಪಡೆ

    ಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ದಿನ ಜನರ ವಿಶ್ವಾಸ, ಪ್ರೀತಿ ಹೆಚ್ಚಾಗುತ್ತಿದೆ. ಮುಂದೆ ಹೋಗುತ್ತ ಜನಸಾಗರವೇ ಸೇರಿ ಕ್ಷೇತ್ರದಲ್ಲಿ ಗೆಲುವಿನ ಯಾತ್ರೆ ಮುಂದುವರೆಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ; ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ನಿರ್ಬಂಧ

  • ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ – ಯತ್ನಾಳ್, ಪ್ರತಾಪ್ ಸಿಂಹ, ಯದುವೀರ್, ಸುಮಲತಾಗೆ ಕೊಕ್

    ಉಪಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ – ಯತ್ನಾಳ್, ಪ್ರತಾಪ್ ಸಿಂಹ, ಯದುವೀರ್, ಸುಮಲತಾಗೆ ಕೊಕ್

    – 40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರೋ ಪ್ರಮುಖರು ಯರ‍್ಯಾರು?

    ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸ್ಟಾರ್ ಪ್ರಚಾರಕರ (BJP Star Campaigners) ಪಟ್ಟಿ ಪ್ರಕಟವಾಗಿದೆ.

    ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ 40 ಬಿಜೆಪಿ ನಾಯಕರಿಗೆ ಸ್ಥಾನ ನೀಡಲಾಗಿದೆ. ಬಿಜೆಪಿ ಪಟ್ಟಿಯಲ್ಲಿ ಬಿಜೆಪಿ ಭಿನ್ನರ ಹೆಸರು ಇಲ್ಲ. ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿಗೆ ಕೊಕ್ ನೀಡಲಾಗಿದೆ. ಅರವಿಂದ ಲಿಂಬಾವಳಿ, ಸಂಸದ ಜಿ.ಎಂ.ಸಿದ್ದೇಶ್ವರ ಹೆಸರಿಗೂ ಹೈಕಮಾಂಡ್ ಕೊಕ್ ಕೊಟ್ಟಿದೆ. ಇದನ್ನೂ ಓದಿ: 500 ವರ್ಷಗಳಲ್ಲಿ ಮೊದಲ ಬಾರಿಗೆ ರಾಮ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾನೆ – ಧನ್‌ತೇರಾಸ್‌ಗೆ ಮೋದಿ ಶುಭಾಶಯ

    ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರೋ ಪ್ರಮುಖರು ಯಾರು?
    ಬಿ.ಎಸ್.ಯಡಿಯೂರಪ್ಪ, ರಾಧ ಮೋಹನ್ ದಾಸ್, ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಛಲವಾಧಿ ನಾರಾಯಣಸ್ವಾಮಿ, ಡಿ.ವಿ.ಸದಾನಂದಗೌಡ, ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ನಳಿನ್ ಕುಮಾರ್ ಕಟೀಲ್, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಿ.ಎನ್.ಮಂಜುನಾಥ್, ಜಗ್ಗೇಶ್‌ಗೆ ಪಟ್ಟಿಯಲ್ಲಿದ್ದಾರೆ.

    ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮೈಸೂರು ಸಂಸದ ಯದುವೀರ್ ಒಡೆಯರ್ ಹಾಗೂ ಮಾಜಿ ಸಂಸದೆ ಸುಮಲತಾ ಹೆಸರುಗಳನ್ನೂ ಹೈಕಮಾಂಡ್ ಕೈಬಿಟ್ಟಿದೆ. ಯದುವೀರ್ ಹೆಸರು ಕೈಬಿಡುವ ಮೂಲಕ ಅಚ್ಚರಿ ಮೂಡಿಸಿದೆ. ಈಗಾಗಲೇ ಕುಮಾರಸ್ವಾಮಿ ಮನವಿ ಮೇರೆಗೆ ಚನ್ನಪಟ್ಟಣದಲ್ಲಿ ಯದುವೀರ್ ಪ್ರಚಾರ ನಡೆಸಿದ್ದರು. ಸುಮಲತಾ ಅವರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಕಾರಣ ಪಟ್ಟಿಯಲ್ಲಿ ಹೆಸರು ಸೇರಿಸಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ‘ಮೈತ್ರಿ’ ನಾಯಕರಿಗೆ ಡಿಕೆ ಬ್ರದರ್ಸ್ ಶಾಕ್ – ಚನ್ನಪಟ್ಟಣ ನಗರಸಭೆಯ 6 ಬಿಜೆಪಿ ಸದಸ್ಯರು ಕಾಂಗ್ರೆಸ್ ಸೇರ್ಪಡೆ

  • ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ, ನಿಖಿಲ್ ಗೆಲ್ಲಿಸಿ ಬದಲಾವಣೆಗೆ ಮುಂದಾಗಬೇಕು: ಯದುವೀರ್ ಒಡೆಯರ್

    ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ, ನಿಖಿಲ್ ಗೆಲ್ಲಿಸಿ ಬದಲಾವಣೆಗೆ ಮುಂದಾಗಬೇಕು: ಯದುವೀರ್ ಒಡೆಯರ್

    – ನಿಖಿಲ್ ಪರ ಯದುವೀರ್ ಮತಯಾಚನೆ

    ರಾಮನಗರ: ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ. ಯುವನಾಯಕ ನಿಖಿಲ್ (Nikhil Kumaraswamy) ಭವಿಷ್ಯದ ನಾಯಕನಾಗುವ ಎಲ್ಲಾ ಗುಣಗಳು ಇವೆ. ಅದಕ್ಕೆ ಇಲ್ಲಿಂದ ಗೆಲ್ಲಿಸಿ ಶಕ್ತಿ ತುಂಬಬೇಕು ಎಂದು ಸಂಸದ ಯದುವೀರ್  (Yaduveer Wadiyar) ಹೇಳಿದ್ದಾರೆ.

    ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೂಡ್ಲೂರು ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಜಯಚಾಮರಾಜೇಂದ್ರ ಒಡೆಯರ್ ಈ ಗ್ರಾಮಕ್ಕೆ ಬಂದಿದ್ದರು. ನನಗೂ ಕೂಡ ಇಂದು ಆ ಭಾಗ್ಯ ಸಿಕ್ಕಿದೆ. ಇಲ್ಲಿನ ರಾಮಮಂದಿರಕ್ಕೆ ಭೇಟಿ ನೀಡಿದ್ದು ಖುಷಿ ಆಯಿತು. ಕಳೆದ ಹತ್ತು ವರ್ಷಗಳಲ್ಲಿ ಮೋದಿ ಅವರು ಉತ್ತಮ ಆಡಳಿತ ನೋಡುತ್ತಿದ್ದೀರಿ. ಮತ್ತೊಂದೆಡೆ ರಾಜ್ಯದಲ್ಲಿ ಆರ್ಥಿಕತೆ ಅಧೋಗತಿಗೆ ಹೋಗುತ್ತಿರುವುದನ್ನು ಗಮನಿಸಿದ್ದೆ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅನೇಕ ಹಗರಣಗಳ ಕುರಿತು ಹೋರಾಟ ಮಾಡಿ ಯುವ ನಾಯಕನಾಗಿ ನಿಖಿಲ್ ಗುರುತಿಸಿಕೊಂಡಿದ್ದಾರೆ. ಅವರಿಗೆ ಒಂದು ಅವಕಾಶ ನೀಡಿ ಎಂದರು. ಇದನ್ನೂ ಓದಿ: ಸಂಡೂರು| ಅಭ್ಯರ್ಥಿ ಪರ ಪ್ರಚಾರದಿಂದ ಕಾಂಗ್ರೆಸ್‌ ಶಾಸಕರು ದೂರ ದೂರ

    ಅರಸು ಸಮುದಾಯ ಧರ್ಮದ ರಕ್ಷಣೆಗೆ ಇರೋ ಸಮುದಾಯ. ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ. ಧರ್ಮದ ರಕ್ಷಣೆ, ದೇಶದ ಪರಂಪರೆ ಉಳಿಸಲು ಎನ್‌ಡಿಎ ಹೋರಾಟ ಮಾಡುತ್ತಿದೆ. ಮೋದಿ ಹತ್ತು ವರ್ಷಗಳಲ್ಲಿ ವಿಕಸಿತ ಭಾರತ ಮಾಡಿ, ಮುಂದುವರಿದ ರಾಷ್ಟ್ರಗಳ ಮಟ್ಟಕ್ಕೆ ಪ್ರಗತಿ ಕಾಣುತ್ತಿದೆ. ನಮ್ಮ ಭಾರತದ ಪರಂಪರೆ ಉಳಿಸಲು ಎನ್‌ಡಿಎ ಹೋರಾಡುತ್ತಿದೆ. ಹಾಗಾಗಿ ನಿಖಿಲ್ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬದಲಾವಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಅಬ್ಬರದ ಪ್ರಚಾರ – 10,000 ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ ಭರತ್ ಬೊಮ್ಮಾಯಿ