Tag: by election

  • ಡಿಕೆಶಿಯವರದ್ದು ಯಾವಾಗಲೂ ಗೂಂಡಾ ರಾಜಕಾರಣ- ಶೋಭಾ ಕರಂದ್ಲಾಜೆ

    ಡಿಕೆಶಿಯವರದ್ದು ಯಾವಾಗಲೂ ಗೂಂಡಾ ರಾಜಕಾರಣ- ಶೋಭಾ ಕರಂದ್ಲಾಜೆ

    ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದ್ದು ಯಾವಾಗಲೂ ಗೂಂಡಾ ರಾಜಕಾರಣ. ಆರ್.ಆರ್ ನಗರ ಚುನಾವಣೆಯಲ್ಲೂ ಗೂಂಡಾಗಿರಿ ಮೂಲಕ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ ಎಂದು ಸಂಸದೆ ಶೋಭ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಆರ್ ನಗರದಲ್ಲಿ ಡಿಕೆಶಿ ಸಹೋದರ ಡಿಕೆ ಸುರೇಶ್ ಅವರೇ ಸಂಸದರು. ಎಲ್ಲ ಗೂಂಡಾಗಳನ್ನು ಬಳಸಿಕೊಂಡು ಕಾನೂನು ಸುವ್ಯವಸ್ಥೆ ಹದಗೆಡಿಸುವ ಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ಯಾವುದೇ ಅಕ್ರಮಕ್ಕೆ ಅವಕಾಶ ಕೊಡಬಾರದು. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್‍ನವರು ಎಲ್ಲ ಸಂದರ್ಭದಲ್ಲೂ ಗುದ್ದಾಟ ಮಾಡುತ್ತಾರೆ. ಈಗ ಪಕ್ಷದ ಅಸ್ತಿತ್ವಕ್ಕಾಗಿ ಗುದ್ದಾಟ ನಡೆಸುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗಲು, ಇಲ್ಲದಿರುವಾಗಲು ಕಾಂಗ್ರೆಸ್‍ನವರು ಗುದ್ದಾಟ ನಡೆಸುತ್ತಾರೆ. ಇದು ಕಾಂಗ್ರೆಸ್ ಉಳಿವಿಗಾಗಿ ನಡೆಯುತ್ತಿರುವ ಚುನಾವಣೆ. ಹೀಗಾಗಿ ಅವರ ಗುದ್ದಾಟ ಬಿಜೆಪಿಗೆ ಏನು ಏಫೆಕ್ಟ್ ಆಗಲ್ಲ ಎಂದು ಹೇಳಿದರು.

    ಕೊರೊನಾ ಲಸಿಕೆ ಉಚಿತ ನೀಡುವ ಚುನಾವಣಾ ಪ್ರಣಾಳಿಕೆ ಕುರಿತು ಮಾತನಾಡಿದ ಅವರು, ನಮ್ಮದೇ ಸರ್ಕಾರ ಇದೆ. ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡುವುದು ನಮ್ಮ ಗುರಿ. ಇದಕ್ಕಾಗಿ ಸರ್ಕಾರ ಹಣ ಖರ್ಚು ಮಾಡುತ್ತಿದೆ. ಹೀಗಾಗಿಯೇ ಉಚಿತವಾಗಿ ಕೊಡುತ್ತೇವೆ ಎನ್ನುವುದರಲ್ಲಿ ತಪ್ಪಿಲ್ಲ. ಆದಷ್ಟು ಬೇಗ ರಾಜ್ಯದ ಜನರಿಗೆ ಕೊರೊನಾ ಲಸಿಕೆ ಸಿಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ವಿಶ್ವಾಸ ಭರವಸೆ ವ್ಯಕ್ತಪಡಿಸಿದ್ದಾರೆ.

  • ನಟ ವಿನೋದ್ ಪ್ರಭಾಕರ್‌‌ರನ್ನು ಭೇಟಿಯಾದ ಡಿಕೆ ಶಿವಕುಮಾರ್

    ನಟ ವಿನೋದ್ ಪ್ರಭಾಕರ್‌‌ರನ್ನು ಭೇಟಿಯಾದ ಡಿಕೆ ಶಿವಕುಮಾರ್

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮರಿ ಟೈಗರ್, ನಟ ವಿನೋದ್ ಪ್ರಭಾಕರ್ ಅವರನ್ನು ಇಂದು ಆರ್.ಆರ್ ನಗರದ ಮನೆಯಲ್ಲಿ ಭೇಟಿ ಮಾಡಿದರು.

    ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ವಿನೋದ್ ಪ್ರಭಾಕರ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು, ಎಲೆಕ್ಷನ್ ಪ್ರಚಾರಕ್ಕೆ ಬರುವಂತೆ ಅವರಿಗೆ ಡಿಕೆಶಿ ಆಹ್ವಾನ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೇ ವೇಳೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲೂ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎನ್ನಲಾಗಿದೆ.

    ಡಿಕೆ ಶಿವಕುಮಾರ್ ಅವರ ಆಹ್ವಾನದ ಮೇರೆಗೆ ವಿನೋದ್ ಪ್ರಭಾಕರ್ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ವಿನೋದ್ ಪ್ರಭಾಕರ್ ಜೊತೆ  ಸುಮಾರು ಒಂದು ಗಂಟೆಗೂ ಅಧಿಕ ಸಮಯ ಮಾತುಕತೆ ನಡೆಸಿದ ಡಿಕೆ ಶಿವಕುಮಾರ್ ಅವರು ಬಳಿಕ ಭೋಜನ ಸವಿದರು.

    ಇತ್ತ ಆರ್.ಆರ್ ನಗರ ಮತ್ತು ಶಿರಾ ಬೈ ಎಲೆಕ್ಷನ್ ರಾಜಕೀಯ ತೀವ್ರ ಸ್ವರೂಪ ಪಡೆದುಕೊಂಡಿದೆ. ಆರ್.ಆರ್ ನಗರದಲ್ಲಿ ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದ್ದು, ಪ್ಯಾರಾ ಮಿಲಿಟರಿ ಪಡೆಯ ಅಗತ್ಯವಿದೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದರು. ಇದರ ಬೆನ್ನಲ್ಲೇ ಇಂದು ಆರ್‍.ಆರ್ ನಗರಕ್ಕೆ ಪ್ಯಾರಾ ಮಿಲಿಟರಿ ತುಕಡಿ ಆಗಮಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರು, ಕ್ಷೇತ್ರದಲ್ಲಿ ಅಂತಹ ಯಾವುದೇ ಘಟನೆ ನಡೆಯಲು ಅವಕಾಶವಿಲ್ಲ. ಶಾಂತಿಯುತವಾಗಿ ಚುನಾವಣೆ ನಡೆಯಲಿದೆ. ಈಗ ಮಿಲಿಟರಿ ಪಡೆಯೂ ಬಂದಿರುವುದರಿಂದ ಮತ್ತಷ್ಟು ಶಾಂತಿಯಿಂದ ಚುನಾವಣೆ ನಡೆಯಲಿದೆ ಎಂದರು.

  • ಏಳೇಳು ಜನ್ಮದಲ್ಲೂ ಡಿಕೆಶಿಗೆ ನಾನು ಸರಿಸಾಟಿ ಆಗಲು ಸಾಧ್ಯವಿಲ್ಲ – ಮುನಿರತ್ನ ತಿರುಗೇಟು

    ಏಳೇಳು ಜನ್ಮದಲ್ಲೂ ಡಿಕೆಶಿಗೆ ನಾನು ಸರಿಸಾಟಿ ಆಗಲು ಸಾಧ್ಯವಿಲ್ಲ – ಮುನಿರತ್ನ ತಿರುಗೇಟು

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸರಿಸಮನಾಗಲು ನನಗೆ ಸಾಧ್ಯವೇ ಇಲ್ಲ. ಇದೊಂದು ಜನ್ಮದಲ್ಲಿ ಮಾತ್ರ ಅಲ್ಲ, ಏಳೇಳು ಜನ್ಮದಲ್ಲೂ ಡಿಕೆಶಿಯವ್ರಿಗೆ ನಾನು ಸರಿಸಾಟಿ ಆಗಲು ಸಾಧ್ಯವಿಲ್ಲ ಎಂದು ಆರ್‍ಆರ್ ನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ತಿರುಗೇಟು ನೀಡಿದ್ದಾರೆ.

    ಇಂದು ಜಾಲಹಳ್ಳಿ ವಾರ್ಡ್ ನಲ್ಲಿ ಸ್ಕೂಟರ್ ನಲ್ಲಿ ಓಡಾಡ್ಕೊಂಡೇ ಮನೆ ಮನೆ ಪ್ರಚಾರ ಮಾಡುತ್ತಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಯುದ್ಧದಲ್ಲಿ ಎದುರಾಳಿ ಸರಿಸಮ ಇದ್ರೆ ಹೊರಾಡಬಹುದೆಂದು ಮುನಿರತ್ನ ಕುರಿತು ಡಿಕೆಶಿ ನಿನ್ನೆ ನೀಡಿದ್ದ ಹೇಳಿಕೆ ಪ್ರತಿಕ್ರಿಯಿಸಿದ ಮುನಿರತ್ನ, ಡಿಕೆಶಿ ಹೇಳಿದ ಮಾತು ಸತ್ಯ. ಡಿಕೆಶಿ ಅವರ ಸರಿಸಮನಾಗಲು ನನಗೆ ಸಾಧ್ಯವೇ ಇಲ್ಲ. ಇದೊಂದು ಜನ್ಮದಲ್ಲಿ ಮಾತ್ರ ಅಲ್ಲ, ಏಳೇಳು ಜನ್ಮದಲ್ಲೂ ಡಿಕೆಶಿಯವ್ರಿಗೆ ನಾನು ಸರಿಸಾಟಿ ಆಗಲು ಸಾಧ್ಯವಿಲ್ಲ. ಡಿಕೆಶಿ ಎಂಥ ದೊಡ್ಡವರು, ಅವರ ಮುಂದೆ ನಾನು ಸಣ್ಣವನು ಎಂದರು.

    ಅವರು ಇವತ್ತು ಯಾವ ಮಟ್ಟದಲ್ಲಿದ್ದಾರೆ, ನಾನು ಆ ಮಟ್ಟಕ್ಕೆ ತಲುಪಲು ಆಗಲ್ಲ. ದೇವರು ನನಗೆ ಏಳು ಜನ್ಮ ಕೊಟ್ರೂ ಅವರ ಸಮನಾಗಿ ಬರಲು ಸಾಧ್ಯವಿಲ್ಲ. ಡಿಕೆಶಿಯವ್ರಿಗೂ ನನಗೂ ಹೋಲಿಕೆ ಮಾಡಿ ಮಾತಾಡೋದೇ ತಪ್ಪು ಎಂದು ಹೇಳುವ ಮೂಲಕ ಡಿಕೆಶಿ ಹೇಳಿಕೆಗೆ ಮುನಿರತ್ನ ವ್ಯಂಗ್ಯವಾಡಿದರು. ಇದನ್ನೂ ಓದಿ: ವೈರಲ್ ಆಯ್ತು ಡಿಕೆಶಿ ಪ್ರಚಾರದ ವೇಳೆ ಹಿಡಿದ ಆರ್‌ಸಿಬಿ ಛತ್ರಿ ಫೋಟೋ

    ಇದೇ ವೇಳೆ ಆರ್ ಆರ್ ನಗರಕ್ಕೆ ಪ್ಯಾರಾ ಮಿಲಿಟರಿ ಪಡೆ ನಿಯೋಜನೆಗೆ ಒತ್ತಾಯ ವಿಚಾರ ಮಾತನಾಡುತ್ತಾ ಪ್ಯಾರಾ ಮಿಲಿಟರಿ ತುಕಡಿ ನಿಯೋಜನೆ ಕ್ಷೇತ್ರಕ್ಕೆ ಅಗತ್ಯ ಎಂದು ಮತ್ತೆ ಒತ್ತಿ ಹೇಳಿದರು. ಪ್ಯಾರಾ ಮಿಲಿಟರಿ ಫೋರ್ಸ್ ಕರೆಸುವ ಬಗ್ಗೆ ಸಿಎಂ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡಿದ್ದೇನೆ. ಹೀಗಾಗಿ ಪ್ಯಾರಾ ಮಿಲಿಟರಿ ಪಡೆ ಕರೆಸುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಮುಂದಿನ ನಿರ್ಧಾರ ತಗೋತಾರೆ. ಪ್ಯಾರಾ ಮಿಲಿಟರಿ ಫೋರ್ಸ್ ಬಂದ್ರೆ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯುತ್ತದೆ. ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವುದು ಮುಖ್ಯ ಎಂದು ಹೇಳಿದರು.

  • ಡಿಕೆಶಿಗೆ ಶುರುವಾಗಿದ್ಯಾ ಫಿಯರ್ ಪಾಲಿಟಿಕ್ಸ್..?

    ಡಿಕೆಶಿಗೆ ಶುರುವಾಗಿದ್ಯಾ ಫಿಯರ್ ಪಾಲಿಟಿಕ್ಸ್..?

    ಬೆಂಗಳೂರು: ಉಪಚುನಾವಣಾ ಕಣ ರಂಗೇರುತ್ತಿದ್ದು, ಈ ಕದನದಲ್ಲಿ ಮಾತಿಗಿಂತ ಮೌನವೇ ಲೇಸಾಯ್ತಾ ಅನ್ನೋ ಪ್ರಶ್ನೆಯೊಂದು ಎದ್ದಿದೆ.

    ಆರ್‍ಆರ್ ನಗರ ಬೈ ಎಲೆಕ್ಷನ್‍ನಲ್ಲಿ ಡಿಕೆಶಿ ಫುಲ್ ಸೈಲೆಂಟ್ ಆಗಿದ್ದಾರೆ. ಯಾರೆಷ್ಟೇ ಕೆಣಕಿದ್ರೂ ನೀವು ಸೈಲೆಂಟ್ ಆಗಿರಿ. ಕೆಲಸ ಮಾತ್ರ ಮಾಡಿ, ಮಾತನಾಡಬೇಡಿ ಅಂತ ಸಹೋದರ ಡಿ.ಕೆ ಸುರೇಶ್‍ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಫರ್ಮಾನ್ ಹೊರಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ನನ್ನ ಬಗ್ಗೆ ಮಾತಾಡಿದ್ರೆ ನಾನೇ ಉತ್ತರ ಕೊಡ್ತೀನಿ. ಆದರೆ ಬೇರೆಯವರು ಯಾರೂ ಮಾತನಾಡಬಾರದು. ಚುನಾವಣಾ ಸಮಯದಲ್ಲಿ ಮಾತಾಡಿ ರಬ್ ಮಾಡಿದ್ರೆ ಸುಮ್ಮನಿರಲ್ಲ. ಹೀಗಾಗಿ ಯಾರೂ ಮಾತನಾಡಬೇಡಿ ಎಂದಿದ್ದಾರೆ. ಆಪ್ತರಿಗೆ ಡಿಕೆಶಿ ಕಟ್ಟಪ್ಪಣೆಯ ಅಸಲಿಯತ್ತಿಗೆ ಕಾರಣ ಫಿಯರ್ ಪಾಲಿಟಿಕ್ಸ್ ಎನ್ನಲಾಗುತ್ತಿದೆ.

    ಮಾತನಾಡಿ ಎಡವಟ್ಟು ಮಾಡಿಕೊಳ್ಳುವ ಬದಲು ಎದುರಾಳಿಗಳಿಗೆ ಮಾತನಾಡೋಕೆ ಬಿಟ್ಟು ಬಿಡೋಣ ಅನ್ನೋದು ಡಿಕೆಶಿ ಸ್ಟ್ರಾಟಜಿ. ಮಾತನಾಡಿ ರಾಜಕೀಯ ಏಟು ತಿನ್ನುವಂತಾಗಬಾರದು. ಹೀಗಾಗಿ ಯಾರು ಎಷ್ಟೇ ಕೆಣಕಿದರೂ ನೋ ರೆಸ್ಪಾನ್ಸ್ ಅನ್ನೋ ಫರ್ಮಾನನ್ನು ಡಿ.ಕೆ ಶಿವಕುಮಾರ್ ಹೊರಡಿಸಿದ್ದಾರೆ.

    ಒಟ್ಟಾರೆ ರಾಜರಾಜೇಶ್ವರಿ ನಗರದಲ್ಲಿ ಕೈಪಾಳಯಕ್ಕೆ ಸೈಲೆಂಟ್ ವಾರ್ ಫರ್ಮಾನು ಹೊರಡಿಸಿದ್ದು ಎಲ್ಲರಿಗೂ ಕೀಪ್ ಸೈಲೆನ್ಸ್ ಅನ್ನೋ ಮೆಸೇಜ್ ಅಂತು ಪಾಸಾಗಿದೆ.

  • ಆರ್‍ಆರ್ ನಗರ, ಶಿರಾ ವಶಕ್ಕೆ ಬಿಜೆಪಿ ರಣತಂತ್ರ – ಗೆಲುವಿಗೆ ಪಂಚ ಪರಮೇಶ್ವರರ ಕಣ್ಗಾವಲು

    ಆರ್‍ಆರ್ ನಗರ, ಶಿರಾ ವಶಕ್ಕೆ ಬಿಜೆಪಿ ರಣತಂತ್ರ – ಗೆಲುವಿಗೆ ಪಂಚ ಪರಮೇಶ್ವರರ ಕಣ್ಗಾವಲು

    ಬೆಂಗಳೂರು: ಆರ್‍ಆರ್‍ನಗರ ಹಾಗೂ ಶಿರಾ ಉಪಚುನಾವಣೆಯ ಫೈಟ್ ‘ಮಹಾ’ ಕುರುಕ್ಷೇತ್ರ ರೂಪ ಪಡೆದಿದೆ. ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ರಣತಂತ್ರ ಹೂಡಿದೆ.

    ಬಿಜೆಪಿ ಹೈಕಮಾಂಡ್ ಎರಡು ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದ್ದು, ಆರ್‍ಆರ್ ನಗರ ಹಾಗೂ ಶಿರಾ ಕ್ಷೇತ್ರಗಳ ಮೇಲೆ ಕಣ್ಗಾವಲಿನ ಮೇಲೆ ಕಣ್ಗಾವಲು ಇಡಲಾಗಿದೆ. ಮತದಾನಕ್ಕೂ ಮುನ್ನ, ಕಡೆಯ 5 ದಿನಗಳ ಕಡೆ ತಂತ್ರಗಾರಿಕೆಯನ್ನೇ ಬದಲಿಸಲು ಪ್ಲಾನ್ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈಗಾಗಲೇ ರಾಜರಾಜೇಶ್ವರಿ ಕ್ಷೇತ್ರಕ್ಕೆ ಹೊರಗಿನವರು ಬಂದು ಚುನಾವಣೆ ನಡೆಸ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿತ್ತು. ಈ ಬೆನ್ನಲ್ಲೇ ರಾಜರಾಜೇಶ್ವರಿನಗರ, ಶಿರಾ ಕ್ಷೇತ್ರಗಳಲ್ಲಿ ಬೂತ್ ಕಾಯಲು ಕಾವಲುಗಾರರನ್ನು ನೇಮಿಸಲಾಗಿದೆ. ಪ್ರತಿ ಬೂತ್ ಗೆ 5 ಜನ ಕಣ್ಗಾವಲು ಸದಸ್ಯರು, ಕಡೆಯ 5 ದಿನ ಕಣ್ಗಾವಲು ಹಾಕಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ.

    ಹೊರಗಿನಿಂದ ಬಂದವರು, ವಿರೋಧಿಗಳ ನಡವಳಿಕೆ ಗಮನಿಸಲು ಪಂಚ ಪರಮೇಶ್ವರರ ತಂತ್ರವನ್ನು ಬಿಜೆಪಿ ಹೂಡಿದೆ. ಹಾಗಾದ್ರೆ ಬೈ ಎಲೆಕ್ಷನ್ ನಲ್ಲಿ ಒಂದು ಬೂತ್, 5 ದಿನ, 5 ಜನ ತಂತ್ರ ಸಕ್ಸಸ್ ಆಗುತ್ತಾ ಎಂಬ ಕುತೂಹಲ ಮೂಡಿಸಿದೆ.

  • ಪೋಕರಿ ಕಟೀಲ್ ಕಾಡು ಮನುಷ್ಯ, ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್: ಸಿದ್ದರಾಮಯ್ಯ

    ಪೋಕರಿ ಕಟೀಲ್ ಕಾಡು ಮನುಷ್ಯ, ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್: ಸಿದ್ದರಾಮಯ್ಯ

    – ನಾಲಿಗೆಗೆ ಮಾತ್ರವಲ್ಲ ಬೆನ್ನಿನಲ್ಲೂ ಎಲುಬಿಲ್ಲ
    – ಮಂಗಳೂರಲ್ಲಿ ಬೀದಿ ಅಲೆಯುತ್ತಿದ್ದವವರನ್ನು ಅಧ್ಯಕ್ಷರನ್ನಾಗಿಸಲಾಗಿದೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಇದೀಗ ಪ್ರತಿಯಾಗಿ ಸಿದ್ದರಾಮಯ್ಯ ಸರಣಿ ಟ್ವೀಟ್‍ಗಳ ಮೂಲಕ ತಿರುಗೇಟು ನೀಡಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಮಾತೆತ್ತಿದರೆ ಸಂಸ್ಕಾರ, ಸಂಸ್ಕೃತಿ ಎಂದು ಬೋಧನೆ ಮಾಡುವ ಸಂಘ ಪರಿವಾರದಲ್ಲಿ ಯಾರಾದರೂ ಹಿರಿಯರು, ಮಾನವಂತರು ಉಳಿದಿದ್ದರೆ ಮೊದಲು ಈ ನಳಿನ್ ಕುಮಾರ್ ಅವರಿಗೆ ಸ್ವಲ್ಪ ಬುದ್ಧಿ ಹೇಳಿ ನಾಲಿಗೆ ಬಿಗಿಹಿಡಿದು ಮಾತನಾಡಲು ಕಲಿಸಿ. ಇಲ್ಲದೆ ಇದ್ದರೆ ಇವರೊಬ್ಬರೇ ಸಾಕು ಎಲ್ಲರ ಮಾನ ಕಳೆಯಲು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಕಾಡು ಮನುಷ್ಯ. ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿಯವರು ತಕ್ಷಣ ಕಾಡಿಗೆ ಕೊಂಡುಹೋಗಿ ಬಿಟ್ಟುಬರಲಿ ಎಂದು ಮೊದಲ ಟ್ವೀಟ್‍ನಲ್ಲಿ ಕಿಡಿಕಾರಿದ್ದಾರೆ.

    ಬಿಜೆಪಿ ಸೇರಬೇಕಾದರೆ ಹತ್ತು ವರ್ಷ ಪಕ್ಷದ ಕಚೇರಿಯ ಕಸಗುಡಿಸಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದರು. ಈ ನಳಿನ್ ಕುಮಾರ್ ಕಟೀಲನ್ನು ಇನ್ನೂ ಒಂದು ಹತ್ತು ವರ್ಷ ಕಚೇರಿಯ ಕಸಗುಡಿಸಲು ಹಚ್ಚಿದರೆ ಏನಾದರೂ ಸ್ವಲ್ಪ ಬುದ್ದಿ ಬರಬಹುದೇನೋ. ನಳಿನ್ ಕುಮಾರ್ ಅವರಿಗೆ ನಾಲಗೆಯಲ್ಲಿ ಮಾತ್ರ ಅಲ್ಲ, ಬೆನ್ನಿನಲ್ಲಿಯೂ ಎಲುಬಿಲ್ಲ. ಈ ಬೆನ್ನೆಲುಬಿಲ್ಲದ ಅಧ್ಯಕ್ಷನಿಗೆ ತಮ್ಮದೇ ಪಕ್ಷದ ಶಾಸಕರು ಪ್ರತಿದಿನ ತಮ್ಮದೇ ಮುಖ್ಯಮಂತ್ರಿ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ ಇಲ್ಲ. ನಮ್ಮ ಪಕ್ಷದ ಬಗ್ಗೆ ಕೂಗಾಡ್ತಾರೆ ಎಂದು ತಿರುಗೇಟು ನೀಡಿದ್ದಾರೆ.

    ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ಈ ನಳಿನ್ ಕುಮಾರ್ ಎಂಬ ಪೋಕರಿಯನ್ನು ಯಾರೋ ತಮ್ಮ `ಸಂತೋಷ’ಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್.ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ ಇದ್ದಾರೆ. ಈಗ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಹೇಗಾದರೂ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಅದರ ಹೊಣೆಯನ್ನು ಯಡಿಯೂರಪ್ಪನವರ ತಲೆಗೆ ಕಟ್ಟಿ, ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಬೇಕು. ಇದು ಕಟೀಲ್ ಅವರಿಗೆ ಪಕ್ಷದೊಳಗಿನ ಕೆಲವು ನಾಯಕರೇ ಕೊಟ್ಟಿರುವ ಟಾಸ್ಕ್ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ ಎಂದು ಹರಿಹಾಯ್ದಿದ್ದಾರೆ.

  • ನನಗೆ ಕುಣಿಯಲು ಬರುತ್ತೆ- ಸಿದ್ದರಾಮಯ್ಯ ಹೇಳಿಕೆಗೆ ಎಚ್‍ಡಿಕೆ ತಿರುಗೇಟು

    ನನಗೆ ಕುಣಿಯಲು ಬರುತ್ತೆ- ಸಿದ್ದರಾಮಯ್ಯ ಹೇಳಿಕೆಗೆ ಎಚ್‍ಡಿಕೆ ತಿರುಗೇಟು

    – 14 ತಿಂಗ್ಳ ಅವಧಿಯಲ್ಲಿ ಚಿತ್ರಹಿಂಸೆ ನಡ್ವೆಯೂ ಹಲವು ಕೊಡುಗೆ

    ಬೆಂಗಳೂರು: ಮೈತ್ರಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ಹಲವು ಚಿತ್ರಹಿಂಸೆಗಳ ನಡುವೆಯೂ ರಾಜ್ಯದ ರೈತರ ಸಾಲಮನ್ನಾ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ.

     

    ಕುಣಿಲಾಗದವರು ನೆಲ ಡೊಂಕು ಅಂತ ಹೇಳ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಎಚ್‍ಡಿಕೆ, 14 ತಿಂಗಳ ಮೈತ್ರಿ ಸರ್ಕಾರದಲ್ಲಿ ಹಲವು ಚಿತ್ರಹಿಂಸೆಗಳ ನಡುವೆಯೂ ರಾಜ್ಯದ ಜನರಿಗೆ ಹಲವು ಕೊಡುಗೆಗಳನ್ನು ನೀಡಿದ್ದೇನೆ. ರಾಜ್ಯ ರೈತರ ಸಾಲಮನ್ನಾದಂತಹ ದಾಖಲೆಯ ಯೋಜನೆಯನ್ನು ಜಾರಿ ಮಾಡಿದ್ದೇನೆ. ಈಗ ಪ್ರಧಾನಿ ಮೋದಿ ಅವರು ಹೇಳುತ್ತೀರುವ ಆತ್ಮ ನಿರ್ಭರ ಭಾರತ ಕಾರ್ಯಕ್ರಮದ ಹಿನ್ನೆಲೆಯ ದೂರ ದೃಷ್ಟಿಯೊಂದಿಗೆ 9 ಕೈಗಾರಿಕಾ ಕ್ಲಸ್ಟರ್ ಪ್ರಾರಂಭ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಆದ್ದರಿಂದ ನನಗೆ ಕುಣಿಯಲು ಬರುತ್ತೆ. ಇವರಿಂದ ಅದನ್ನು ನಾನು ಹೇಳಿಸಿಕೊಳ್ಳ ಬೇಕಿಲ್ಲ. ಜನರೇ ಎಲ್ಲವನ್ನು ತೀರ್ಮಾನ ಮಾಡುತ್ತಾರೆ ಎಂದರು.

    ಕುಮಾರಸ್ವಾಮಿಗೆ ಡಿಕೆಶಿ ಮಿತ್ರ ದ್ರೋಹ ಮಾಡಿದ್ದಾರೆಂಬ ಡಿಸಿಎಂ ಅಶ್ವಥ್ ನಾರಾಯಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಎಚ್‍ಡಿಕೆ, ಈಗ ಒಂದೊಂದೇ ಸತ್ಯ ಹೊರಗೆ ಬರುತ್ತಿದೆ. ಮೈತ್ರಿ ಸರ್ಕಾರ ಅಸ್ಥಿರ ಗೊಳಿಸುವ ಸಂದರ್ಭದಲ್ಲಿ ನಡೆದ ವಾಸ್ತವ ಸ್ಥಿತಿಗಳನ್ನು ಬಿಜೆಪಿ ನಾಯಕರೇ ಈಗ ಜನರಿಗೆ ತಿಳಿಸುತ್ತಿದ್ದಾರೆ. ಈಗ ಕೆಲವು ನಾಟಕಗಳ ಮೂಲಕ ಜನರಿಂದ ನನ್ನನ್ನು ದೂರ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಆದರೆ ಈಗ ಅಂತಹ ನಾಯಕರ ನಡವಳಿಕೆ ಏನೆಂದು ಜನರಿಗೆ ಗೊತ್ತಾಗುತ್ತಿದೆ. ಈಗಲಾದ್ರು ಜನರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

    ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಎಚ್‍ಡಿಕೆ, ಯತ್ನಾಳ್ ಹೇಳಿಕೆಗೂ ನನಗೂ ಸಂಬಂಧವಿಲ್ಲ. ಇದು ಅವರ ಪಕ್ಷದ ಆಂತರಿಕ ಸಮಸ್ಯೆಗಳು. ಅದನ್ನು ಅವರೇ ಸರಿಪಡಿಸಿಕೊಳ್ಳಬೇಕು ಎಂದರು.

    ಆರ್ ಆರ್ ನಗರ ಹಾಗೂ ಶಿರಾ ಕ್ಷೇತ್ರದ ಉಪ ಚುನಾವಣೆಯಗಳನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಎರಡು ಕ್ಷೇತ್ರಗಳಲ್ಲೂ ರಾಷ್ಟ್ರೀಯ ಅಧ್ಯಕ್ಷ ನೇತೃತ್ವದಲ್ಲಿ ಹೋರಾಟ ಮಾಡುತ್ತೇವೆ. ನಾಳೆಯಿಂದ ಮೂರು ದಿನಗಳ ಕಾಲ ಪ್ರಚಾರ ಮಾಡುತ್ತೇವೆ. ಶಿರಾದಲ್ಲೇ ಉಳಿದು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳುತ್ತೇನೆ ಎಂದರು.

  • ಆರ್.ಆರ್.ನಗರದಲ್ಲಿ ಮುಂದುವರಿದ ಪಕ್ಷಾಂತರ ಪರ್ವ- ‘ಕೈ’ ಕಾರ್ಪೋರೇಟ್ ಗಳು ಬಿಜೆಪಿಗೆ ಜಂಪ್

    ಆರ್.ಆರ್.ನಗರದಲ್ಲಿ ಮುಂದುವರಿದ ಪಕ್ಷಾಂತರ ಪರ್ವ- ‘ಕೈ’ ಕಾರ್ಪೋರೇಟ್ ಗಳು ಬಿಜೆಪಿಗೆ ಜಂಪ್

    ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲೀಗ ಪಕ್ಷಾಂತರ ಪರ್ವ ಜೋರಾಗಿಯೆ ಇದೆ. ಕಮಲ ಅಭ್ಯರ್ಥಿ ಮುನಿರತ್ನ ಬೆಂಲಿಸಿ ಕಾಂಗ್ರೆಸ್ ಕಾರ್ಪೋರೇಟರ್ ಗಳು ಬಿಜೆಪಿಗೆ ಅಧಿಕೃತವಾಗಿ ಜಂಪ್ ಆಗಿದ್ದಾರೆ.

    ಖಾಸಗಿ ಹೋಟೆಲ್ ನಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಗಳು ಬಿಜೆಪಿ ಸೇರ್ಪಡೆಯಾದರು. ಜಾಲಹಳ್ಳಿ, ಹೆಚ್ ಎಂಟಿ, ಯಶವಂತಪುರ, ಲಕ್ಷ್ಮೀದೇವಿನಗರ, ಕೊಟ್ಟಿಗೆಪಾಳ್ಯ ವಾರ್ಡ್ ಕಾರ್ಪೋರೇಟ್ ಗಳು ಬಿಜೆಪಿ ಸೇರಿದರು. ಆರ್ ಆರ್ ನಗರ ಬಿಜೆಪಿ ಚುನಾವಣೆ ಉಸ್ತುವಾರಿ ಆರ್.ಅಶೋಕ್, ಅರವಿಂದ್ ಲಿಂಬಾವಳಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ಅಭ್ಯರ್ಥಿ ಮುನಿರತ್ನ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿದ್ದರು.

    ಕನಕಪುರದಿಂದ ಬಂದು ಇಲ್ಲಿ ಗೂಂಡಾಗಿರಿ ರಾಜಕಾರಣ ನಡೆಯಲ್ಲ, ನಿಮ್ಮ ಹತ್ತಿರ ಬಂಡೆ ಇರಬಹುದು. ನಮ್ಮ ಬಳಿ ನಿಮ್ಮಿಂದ ಬಂದಿರುವ ಒಂದೊಂದು ಡೈನಾಮೆಟ್ ಇವೆ. ನಿಮ್ಮನ್ನ ಪುಡಿಪುಡಿ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದರು. ಇನ್ನೊಂದೆಡೆ ಆರ್.ಅಶೋಕ್, ಸಿ.ಟಿ.ರವಿ ಡಿಕೆಶಿ ವಿರುದ್ಧ ಕಿಡಿಕಾರಿದರು. ಜಾತಿ ಹೆಸರಲ್ಲಿ ರಾಜಕೀಯ ಮಾಡಲ್ಲ ನಾವು, ನಾಯಕರನ್ನ ಮುಗಿಸಿ ನಾಯಕರು ಆಗಬೇಕು ಎನ್ನುವ ಮನಸ್ಥಿತಿ ನಮ್ಮಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಈ ನಡುವೆ ಆರ್. ಆರ್.ನಗರ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್ .ಡಿ.ಕುಮಾರಸ್ವಾಮಿ ಪ್ರಚಾರದಲ್ಲಿ ಕೈಗೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಒಟ್ಟಿನಲ್ಲಿ ರಾಜರಾಜೇಶ್ವರಿ ಕ್ಷೇತ್ರದ ಅಖಾಡ ರಂಗೇರುತ್ತಿದ್ದು, ಇವತ್ತು ಕಾಂಗ್ರೆಸ್ ಗೆ ಬಿಜೆಪಿ ಬಿಗ್ ಶಾಕ್ ಕೊಟ್ಟಿರೋದು ಮತ್ತಷ್ಟು ಕುತೂಹಲ ಕೆರಳಿಸಿದೆ.

  • ಮತದಾರರು ಮೋದಿ ಸರ್ಕಾರದ ಅಭಿವೃದ್ಧಿಗೆ ಮೆಚ್ಚಿ ಬಿಜೆಪಿಗೆ ಮತ ಹಾಕುತ್ತಾರೆ: ಬಿಎಸ್‍ವೈ

    ಮತದಾರರು ಮೋದಿ ಸರ್ಕಾರದ ಅಭಿವೃದ್ಧಿಗೆ ಮೆಚ್ಚಿ ಬಿಜೆಪಿಗೆ ಮತ ಹಾಕುತ್ತಾರೆ: ಬಿಎಸ್‍ವೈ

    – ಶಿರಾ, ಆರ್.ಆರ್ ನಗರ ಎರಡರಲ್ಲೂ ನಾವು ಗೆಲ್ಲುತ್ತೇವೆ

    ಶಿವಮೊಗ್ಗ: ಬೆಂಗಳೂರಿನ ಆರ್.ಆರ್ ನಗರ ಮತ್ತು ಶಿರಾ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾದ ಒಲವಿದೆ. ಎರಡು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

    ಶಿಕಾರಿಪುರಕ್ಕೆ ಆಗಮಿಸಿದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಬಿಎಸ್‍ವೈ, ಶಿರಾ ಹಾಗೂ ಆರ್.ಆರ್ ನಗರ ಎರಡೂ ಕ್ಷೇತ್ರಗಳಲ್ಲಿನ ಮತದಾರರು ಕೇಂದ್ರದ ಮೋದಿ ಸರ್ಕಾರದ ಅಭಿವೃದ್ಧಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಲಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಎರಡು ದಿನಗಳಿಂದ ಶಿರಾದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಆದ್ದರಿಂದ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

    ಸಿಗಂದೂರು ದೇವಾಲಯದಲ್ಲಿ ಅರ್ಚಕರು ಹಾಗೂ ಟ್ರಸ್ಟಿ ನಡುವೆ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್‍ವೈ ಈ ಬಗ್ಗೆ ದೇವಾಲಯದ ಪ್ರಮುಖರ ಜೊತೆ ಜಿಲ್ಲಾಧಿಕಾರಿ ಚರ್ಚೆ ನಡೆಸಿದ್ದಾರೆ. ದೇವಾಲಯದಲ್ಲಿ ಗಲಾಟೆ ನಡೆಯಬಾರದು. ಅದು ಶೋಭೆ ತರುವಂತಹದ್ದಲ್ಲ. ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಬಗ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ, ಶಾಸಕರಾದ ಹಾಲಪ್ಪ, ಕುಮಾರ ಬಂಗಾರಪ್ಪನವರ ಜೊತೆ ಚರ್ಚೆ ನಡೆಸುತ್ತೇವೆ. ಜಿಲ್ಲಾಧಿಕಾರಿಯಿಂದ ವರದಿ ತರಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

    ಉತ್ತರ ಕರ್ನಾಟಕ ಪ್ರವಾಹದ ಬಗ್ಗೆ ಮಾತನಾಡಿದ ಸಿಎಂ, ಈ ಬಗ್ಗೆ ಪ್ರಧಾನಿಯವರ ಜೊತೆ ಮಾತನಾಡಿದ್ದೇನೆ. ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ. ಕೇಂದ್ರದಿಂದ ಹೆಚ್ಚಿನ ಪರಿಹಾರ ಕೊಡುವ ನಿರೀಕ್ಷೆ ಇದೆ ಎಂದರು. ಶಿವಮೊಗ್ಗ ಜಿಲ್ಲೆ ಹಾಗೂ ಶಿಕಾರಿಪುರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆಯುತ್ತಿವೆ. ಜಿಲ್ಲೆ ಹಾಗೂ ಕ್ಷೇತ್ರ ರಾಜ್ಯದಲ್ಲಿಯೇ ಮಾದರಿಯಾಗಿದೆ. ಮೂರು ದಿನಗಳ ಕಾಲ ಕ್ಷೇತ್ರದಲ್ಲಿಯೇ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ತಿಳಿಸಿದರು.

  • ನಿಮ್ ಹತ್ರ ಬಂಡೆ ಇರ್ಬೋದು, ನಿಮ್ಮಿಂದ ಬಂದಿರುವ ಒಂದೊಂದು ಡೈನಾಮೈಟ್‍ ಅದನ್ನು ಪುಡಿ ಮಾಡ್ತಾರೆ: ಕಟೀಲ್

    ನಿಮ್ ಹತ್ರ ಬಂಡೆ ಇರ್ಬೋದು, ನಿಮ್ಮಿಂದ ಬಂದಿರುವ ಒಂದೊಂದು ಡೈನಾಮೈಟ್‍ ಅದನ್ನು ಪುಡಿ ಮಾಡ್ತಾರೆ: ಕಟೀಲ್

    – ಲಿಂಬಾವಳಿ, ಅಶೋಕ್ ಜೋಡೆತ್ತುಗಳು

    ಬೆಂಗಳೂರು: ನಿಮ್ಮ ಬಳಿ ಬಂಡೆ ಇರಬಹುದು. ನಮ್ಮ ಬಳಿ ನಿಮ್ಮಿಂದಲೇ ಬಂದ ಡೈನಮೇಟ್‍ಗಳಿವೆ ಒಂದೊಂದು ಡೈನಾಮೈಟ್‍ ನಿಮ್ಮನ್ನು ಪುಡಿ ಪುಡಿ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

    ರಾಜರಾಜೇಶ್ವರಿ ನಗರ ಉಪ ಚುನಾವಣೆ ಹಿನ್ನಲೆ ಬಿಜೆಪಿ ಸೇರ್ಪಡೆ ಕಾರ್ಯಕ್ರಮವನ್ನು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಕನಕಪುರದಿಂದ ಬಂದು ಇಲ್ಲಿ ಗೂಂಡಾಗಿರಿ ರಾಜಕಾರಣ ಮಾಡುತ್ತಿದ್ದೀರಿ, ಇದು ನಡೆಯಲ್ಲ. ನಿಮ್ಮನ್ನ ಬಂಡೆ ಎಂದು ಕರೆಯುತ್ತಾರೆ. ನಿಮ್ಮ ಬಳಿ ಬಂಡೆ ಇರಬಹುದು. ಆದರೆ ನಮ್ಮ ಬಳಿ ನಿಮ್ಮಿಂದ ಬಂದಿರುವ ಡೈನಾಮೈಟ್‍ಗಳಿವೆ. ಒಂದೊಂದು ಡೈನಾಮೈಟ್‍ ಗಳು ನಿಮ್ಮನ್ನು ಪುಡಿಪುಡಿ ಮಾಡುತ್ತಾರೆ ಎಂದರು.

    ತಿಹಾರ್ ಜೈಲಿಗೆ ಹೋದಾಗ ಜನ ನೋಡಿದ್ದಾರೆ. ಜೈಲಿಗೆ ಹೋದಾಗ ಮೆರವಣಿಗೆ, ಜೈಲಿನಿಂದ ಹೊರಬಂದಾಗ ಮೆರವಣಿಗೆ, ಕುಂತಾಗ ಮೆರವಣಿಗೆ, ನಿಂತಾಗ ಮೆರವಣಿಗೆ. ಸಾಕು ನಿಮ್ಮ ಮೆರವಣಿಗೆ, ನೀವು ಮನೆಯಲ್ಲಿ ಕೂರಿ ಎಂದು ಜನ ಕೂರಿಸುತ್ತಾರೆ. ಜಾತಿ ರಾಜಕೀಯ ನಡೆಯಲ್ಲ, ಅಭಿವೃದ್ಧಿ ರಾಜಕೀಯದ ಮೂಲಕ ಮುನಿರತ್ನ ಜನರ ಹೃದಯದಲ್ಲಿ ಇದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಮನೆ, ಮನೆಗೆ ಹೋಗಿ ಜನರ ಕಷ್ಟ ಕೇಳಿದ್ದಾರೆ. ಮುನಿರತ್ನ ಅವರನ್ನು ಪ್ರೀತಿಯಿಂದ ನಮ್ಮ ಪಕ್ಷ ಬರಮಾಡಿಕೊಂಡಿದೆ ಎಂದು ಹೊಗಳಿದರು.

    ಸಚಿವ ಆರ್.ಅಶೋಕ್ ಮತ್ತು ಅರವಿಂದ ಲಿಂಬಾವಳಿ ಜೋಡೆತ್ತುಗಳು. ಈ ಜೋಡೆತ್ತುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಮುನಿರತ್ನ ಗೆಲ್ಲಿಸುತ್ತಾರೆ. ರಾಜರಾಜೇಶ್ವರಿ ನಗರದಲ್ಲಿ ಗೆಲ್ಲುವ ಮೂಲಕ ವಿಶ್ವದಾಖಲೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅಭಿವೃದ್ಧಿಯ ಹರಿಕಾರರು, ಸಾಮಾನ್ಯ ಜನರ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಮಾಜಿ ಶಾಸಕ ಮುನಿರತ್ನ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ, ಪ್ರಧಾನಿ ಮೋದಿ, ಯಡಿಯೂರಪ್ಪ ಸರ್ಕಾರದ ಒಳ್ಳೆಯ ಕಾರ್ಯ ಒಪ್ಪಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರಿದ್ದಾರೆ. ಎಲ್ಲರನ್ನೂ ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ. ನಮ್ಮ ಪಕ್ಷಕ್ಕೆ ಸಕ್ಕರೆ ಸೇರಿದೆ. ಹಾಲಿನ ಜೊತೆ ಸಕ್ಕರೆ ಸೇರಿದಾಗ ಸಿಹಿ ಕೊಡುತ್ತೆ. ರಾಜರಾಜೇಶ್ವರಿನಗರದಲ್ಲಿ ಹಾಲು-ಸಕ್ಕರೆ ಸೇರಿ ಗೆಲುವಿನ ಸಿಹಿ ಕೊಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಾಜರಾಜೇಶ್ವರಿ ನಗರ ಉಪ ಚುನಾವಣೆ ಹಿನ್ನೆಲೆ ಆಪರೇಷನ್ ಕಮಲ ಜೋರಾಗಿದ್ದು, ಆರ್‍ಆರ್ ನಗರದ ಕಾಂಗ್ರೆಸ್ ಕಾರ್ಪೊರೇಟರ್ ಗಳು ಕಮಲ ಪಾಳಯಕ್ಕೆ ಬರುತ್ತಿದ್ದಾರೆ. ಮುನಿರತ್ನ ವಿರುದ್ಧವಿದ್ದ ಕಾಂಗ್ರೆಸ್ ಕಾರ್ಪೋರೇಟರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಎಚ್‍ಎಂಟಿ ವಾರ್ಡ್ ಕಾಂಗ್ರೆಸ್ ಕಾರ್ಪೋರೇಟರ್ ಆಶಾ ಸುರೇಶ್ ಅವರು ಅಧಿಕೃತವಾಗಿ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ ಲಗ್ಗೆರೆ ಮಂಜುಳಾ ನಾರಾಯಣಸ್ವಾಮಿ ಈಗಾಗಲೇ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ.

    ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ ಕಟೀಲ್, ಬಿಜೆಪಿ ಉಪಾಧ್ಯಕ್ಷ ಲಿಂಬಾವಳಿ, ಸಚಿವ ಆರ್. ಅಶೋಕ್ ಹಾಗೂ ಆರ್.ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಸಹ ಭಾಗಿಯಾಗಿದ್ದರು.

    ಐವರು ಕಾರ್ಪೋರೇಟರ್ಸ್ ಬಿಜೆಪಿಗೆ ಸೇರ್ಪಡೆ
    ಕಾಂಗ್ರೆಸ್ ಮುಖಂಡರಾದ ಮಾಜಿ ಮೇಯರ್ ನಾರಾಯಣಸ್ವಾಮಿ, ಕಾಂಗ್ರೆಸ್ ಕಾರ್ಪೋರೇಟರ್ ಗಳಾದ ಜಾಲಹಳ್ಳಿಯ ಶ್ರೀನಿವಾಸ್, ಯಶವಂತಪುರದ ಜಿ.ಕೆ.ವೆಂಕಟೇಶ್, ಹೆಚ್‍ಎಂಟಿ ವಾರ್ಡ್ ನ ಆಶಾ ಸುರೇಶ್, ಲಕ್ಷ್ಮೀದೇವಿನಗರದ ವೇಲು ನಾಯ್ಕರ್, ಕೊಟ್ಟಿಗೆಪಾಳ್ಯ ವಾರ್ಡ್ ಮೋಹನ್ ಕುಮಾರ್, ಲಗ್ಗೆರೆ ವಾರ್ಡ್ ನ ನಾಮನಿರ್ದೇಶಿತ ಬಿಬಿಎಂಪಿ ಸದಸ್ಯ ಸಿದ್ದೇಗೌಡ ಸೇರಿದಂತೆ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.