Tag: Buzz Aldrin

  • 93ನೇ ವಯಸ್ಸಿಗೆ 4ನೇ ಮದುವೆಯಾದ್ರು ಚಂದ್ರನ ಮೇಲೆ ಕಾಲಿಟ್ಟಿದ್ದ 2ನೇ ಗಗನಯಾತ್ರಿ!

    93ನೇ ವಯಸ್ಸಿಗೆ 4ನೇ ಮದುವೆಯಾದ್ರು ಚಂದ್ರನ ಮೇಲೆ ಕಾಲಿಟ್ಟಿದ್ದ 2ನೇ ಗಗನಯಾತ್ರಿ!

    ಲಾಸ್‌ ಏಂಜಲೀಸ್: ಭೂಮಿಯ ಏಕೈಕ ಸ್ವಾಭಾವಿಕ ಉಪಗ್ರಹ ಚಂದ್ರನ (Moon) ಅಂಗಳದಲ್ಲಿ ಗಗನಯಾನಿ ನೀಲ್‌ ಆರ್ಮ್‌ಸ್ಟ್ರಾಂಗ್‌ (Neil Armstrong) ಜೊತೆ ಕಾಲಿಟ್ಟು ಇತಿಹಾಸ ಬರೆದಿದ್ದ 2ನೇ ಗಗನಯಾನಿ ಬಜ್ ಆಲ್ಡ್ರಿನ್ (Buzz Aldrin) ಈಗ ಮತ್ತೊಂದು ಅಚ್ಚರಿಯ ಸುದ್ದಿ ನೀಡಿದ್ದಾರೆ. ತಮ್ಮ 93ನೇ ವಯಸ್ಸಿಗೆ ಆಂಕಾ ಫೌರ್ (Anca Faur) ಜೊತೆ ವಿವಾಹವಾಗಿದ್ದಾರೆ.

    ವಿವಾಹ ಕುರಿತು ಟ್ವೀಟ್‌ ಮಾಡಿರುವ ಬಜ್‌ ಆಲ್ಡ್ರಿನ್‌, ಪತ್ನಿ ಡಾ. ಅಂಕಾ ಫೌರ್ ಅವರೊಂದಿಗಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಸೀಟ್‌ಬೆಲ್ಟ್ ಹಾಕದ ರಿಷಿ ಸುನಾಕ್‌ಗೆ ದಂಡ

    “ನನ್ನ 93ನೇ ಹುಟ್ಟುಹಬ್ಬದಂದು ಮತ್ತು ಲಿವಿಂಗ್ ಲೆಜೆಂಡ್ಸ್ ಆಫ್ ಏವಿಯೇಷನ್‌ನಿಂದ ನಾನು ಗೌರವಿಸಲ್ಪಟ್ಟ ದಿನದಂದು ಬಹುಕಾಲದ ಪ್ರೀತಿ ಡಾ. ಆಂಕಾ ಫೌರ್ ಜೊತೆ ವಿವಾಹವಾಗಿದ್ದೇನೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಮಾಜಿ ಗಗನಯಾತ್ರಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

    ಆಲ್ಡ್ರಿನ್‌ ಅವರಿಗೆ ನೆಟ್ಟಿಗರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅನೇಕರು ಆಲ್ಡ್ರಿನ್‌ ದಾಂಪತ್ಯ ಜೀವನಕ್ಕೆ ಶುಭಹಾರೈಸಿದರೆ, ಇನ್ನೂ ಕೆಲವರು ಮಾಜಿ ಗಗನಯಾನಿಯ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಎಂದಿಗೂ ಲಾಡೆನ್ ಭೇಟಿಯಾಗಿಲ್ಲ: ಭಾರತದಿಂದ ತಪ್ಪು ಮಾಹಿತಿ ಎಂದ ಜಾಗತಿಕ ಉಗ್ರ

    ಆಲ್ಡ್ರಿನ್ ಅವರಿಗೆ ಇದು ನಾಲ್ಕನೇ ವಿವಾಹ. ಮೂವರು ಪತ್ನಿಯರಿಗೆ ವಿಚ್ಛೇದನ ನೀಡಿದ್ದಾರೆ. ʼಅಪೋಲೊ-11 ಮಿಷನ್‌ʼ (Apollo 11 Mission) ಗಗನಯಾನದಲ್ಲಿ ಜಗತ್ತಿನ ಇತಿಹಾಸದಲ್ಲೇ ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟ ಮೂವರು ಗಗನಯಾನಿಗಳ ಪೈಕಿ ಈಗ ಉಳಿದಿರುವ ಏಕೈಕ ಸದಸ್ಯರಾಗಿದ್ದಾರೆ ಆಲ್ಡ್ರಿನ್.

    ಮಾಜಿ ಗಗನಯಾತ್ರಿ ಆಲ್ಡ್ರಿನ್ 1971 ರಲ್ಲಿ ನಾಸಾದಿಂದ ನಿವೃತ್ತರಾದರು. 1998 ರಲ್ಲಿ ಸಿಬ್ಬಂದಿ ಬಾಹ್ಯಾಕಾಶ ಪರಿಶೋಧನೆಯ ವಿಸ್ತರಣೆಯನ್ನು ಉತ್ತೇಜಿಸಲು ಲಾಭರಹಿತ ಸಂಸ್ಥೆಯಾದ ಶೇರ್‌ಸ್ಪೇಸ್ ಫೌಂಡೇಶನ್ ಸ್ಥಾಪಿಸಿದರು. ಇದನ್ನೂ ಓದಿ: ಕಾರ್ಯನಿರ್ವಹಿಸುವ ಸಾಮರ್ಥ್ಯ ನಾನು ಹೊಂದಿಲ್ಲ – ನ್ಯೂಜಿಲೆಂಡ್ ಪ್ರಧಾನಿ ಹಠಾತ್ ರಾಜೀನಾಮೆ ಘೋಷಣೆ

    1969ರಲ್ಲಿ ಅಪೋಲೊ-11 ಬಾಹ್ಯಾಕಾಶ ನೌಕೆಯು ನೀಲ್‌ ಆರ್ಮ್‌ಸ್ಟ್ರಾಂಗ್‌, ಇಡ್ವಿನ್‌ ಆಲ್ಡ್ರಿನ್‌ (ಬಜ್‌) ಮತ್ತು ಮೈಕೆಲ್‌ ಕಾಲಿನ್ಸ್‌ ಅವರನ್ನು ಚಂದ್ರನತ್ತ ಕರೆದೊಯ್ದಿತ್ತು. ನಾಲ್ಕು ದಿನಗಳ ಅವಧಿಯಲ್ಲಿ 4 ಲಕ್ಷ ಕಿ.ಮೀ.ಗಳನ್ನು ಕ್ರಮಿಸಿ ಚಂದ್ರನಲ್ಲಿ ಇಳಿದಿತ್ತು. 195 ಗಂಟೆಗಳ ಪ್ರಯಾಣದ ನಂತರ ಈ ಮೂವರು ಚಂದ್ರನ ಮೇಲೆ ಕಾಲಿಟ್ಟು ನಡೆದಾಡಿದ್ದು ಜಗತ್ತಿನ ಇತಿಹಾಸದಲ್ಲಿ ಮೈಲುಗಲ್ಲು ಸೃಷ್ಟಿಸಿತ್ತು.

    ನೀಲ್‌ ಆರ್ಮ್‌ಸ್ಟ್ರಾಂಗ್‌ ಚಂದ್ರನ ಮೇಲೆ ಕಾಲಿಟ್ಟ ಮೊದಲ ಗಗನಯಾನಿಯಾಗಿ ಇತಿಹಾಸ ಬರೆದರು. ಅವರ ನಂತರ ಕಾಲಿಟ್ಟ ಗಗನಯಾನಿಯೇ ಬಜ್‌ ಆಲ್ಡ್ರಿನ್‌. ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲ್ಮೈ ಮೇಲೆ ಕಾಲಿಟ್ಟ 19 ನಿಮಿಷಗಳ ನಂತರ ಅವರನ್ನು ಆಲ್ಡ್ರಿನ್ ಹಿಂಬಾಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k