Tag: buttermilk idli

  • ಮಜ್ಜಿಗೆಯಿಂದ ತಯಾರಿಸಿ ರುಚಿಯಾದ ಮಜ್ಜಿಗೆ ಇಡ್ಲಿ

    ಮಜ್ಜಿಗೆಯಿಂದ ತಯಾರಿಸಿ ರುಚಿಯಾದ ಮಜ್ಜಿಗೆ ಇಡ್ಲಿ

    ವಿಭಿನ್ನ ರೀತಿಯ ಅಡುಗೆಯನ್ನು ಮನೆಯಲ್ಲಿ ತಯಾರಿಸಬೇಕು ಅಥವಾ ಮನೆ ಮಂದಿಗೆ ಭಿನ್ನ ಬಗೆಯ ಅಡುಗೆಯನ್ನು ಮಾಡಿ ಊಣ ಬಡಿಸುತ್ತೀರ, ಎಂದಾದರೆ ಆರೋಗ್ಯಕರವಾದ ಮಜ್ಜಿಗೆ ಇಡ್ಲಿಯನ್ನು ಮಾಡಿ. ಮನೆಮಂದಿಗೆ ಇಷ್ಟವಾಗುತ್ತದೆ. ಈ ಇಡ್ಲಿಯನ್ನು ಮಾಡುವ ವಿಧಾನ ನಿಮಗಾಗಿ.

    ಬೇಕಾಗುವ ಸಾಮಾಗ್ರಿಗಳು:
    * ಅಕ್ಕಿರವೆ – 1 ಕಪ್
    * ಶುಂಠಿ – 2 ಚಮಚ
    * ಈರುಳ್ಳಿ – 1
    * ಹಸಿಮೆಣಸು – 1
    * ಸ್ವಲ್ಪ ಕರಿಬೇವು
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಸಾಸಿವೆ – 1 ಚಮಚ
    * ಕಡ್ಲೆ ಬೇಳೆ – 1 ಚಮಚ
    * ಉದ್ದಿನ ಬೇಳೆ – 1 ಚಮಚ
    * ಅರಶಿಣ ಪುಡಿ – 1 ಚಮಚ
    * ಇಂಗು- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಮಜ್ಜಿಗೆ – 2 ಕಪ್

    ಮಾಡುವ ವಿಧಾನ:
    * ಬಾಣಲೆಗೆ ಎಣ್ಣೆ, ಸಾಸಿವೆ, ಕಡ್ಲೆಬೇಳೆ, ಉದ್ದಿನ ಬೇಳೆ ಹಾಕಿ ಒಗ್ಗರಣೆಯನ್ನು ತಯಾರಿಸಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ 
    * ನಂತರ ಇದೇ ಪಾತ್ರೆಗೆ ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಶುಂಠಿ, ಅರಶಿಣ ಪುಡಿ ಹಾಕಿ ಫ್ರೈ ಮಾಡಿಕೊಳ್ಳಬೇಕು.


    * ನಂತರ ಅದೇ ಮಿಶ್ರಣಕ್ಕೆ  ಅಕ್ಕಿರವೆ ಹಾಕಿ 2 ನಿಮಿಷ ಹುರಿಟ್ಟುಕೊಳ್ಳಬೇಕು.
    * ಹುರಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ನೀರು, ದಪ್ಪ ಮಜ್ಜಿಗೆಯೊಂದಿಗೆ ಕುದಿಸಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ


    * ನಂತರ ಇಡ್ಲಿ ಪಾತ್ರೆಗೆ ಮಿಶ್ರಣವನ್ನು ಹಾಕಿ ಬೇಯಿಸಿದರೆ ಮಜ್ಜಿಗೆ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.