Tag: Buttermilk

  • ಯುಗಾದಿಗೆ ಮಾಡಿ ದೇಹಕ್ಕೆ ತಂಪೆನಿಸುವ ಪಾನಕ, ಮಜ್ಜಿಗೆ

    ಯುಗಾದಿಗೆ ಮಾಡಿ ದೇಹಕ್ಕೆ ತಂಪೆನಿಸುವ ಪಾನಕ, ಮಜ್ಜಿಗೆ

    ರ್ಷವಿಡೀ ಸಿಹಿ, ಕಹಿಯನ್ನು ಸಮವಾಗಿ ಕಾಣಬೇಕೆಂದು ಪ್ರಾರಂಭ ಮಾಡುವ ಹೊಸ ವರ್ಷವೇ ಯುಗಾದಿ. ಪ್ರಕೃತಿಯಲ್ಲೂ ಹೊಸತನ, ಹೊಸ ಚಿಗುರು ಮೊಳೆಯುವ ಈ ಕಾಲಕ್ಕೆ ದೇಹ, ಮನಸ್ಸನ್ನು ಹಗುರಗೊಳಿಸಬೇಕು. ಚೈತ್ರ ಮಾಸ ಪ್ರಾರಂಭವಾಗುತ್ತಲೇ ದೇಹಕ್ಕೆ ತಂಪು ಮಾಡಲು ವಿವಿಧ ರೀತಿಯ ಪಾನೀಯಗಳನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಪಾನಕ, ಮಜ್ಜಿಗೆಗೆ ಬೇಡಿಕೆ ಹೆಚ್ಚು. ನಾವಿಂದು ಈ ವಿಶೇಷ ದಿನಕ್ಕೆ ತಂಪಾದ ಮಜ್ಜಿಗೆ ಹಾಗೂ ಪಾನಕದ ರೆಸಿಪಿಯನ್ನು ಹೇಳಿಕೊಡುತ್ತೇವೆ. ಈ ಪಾನೀಯಗಳನ್ನು ಸವಿದು, ಯುಗಾದಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಿ.

    ಪಾನಕ ಮಾಡಲು ಬೇಕಾಗುವ ಪದಾರ್ಥಗಳು:
    ಬೆಲ್ಲ – 2 ಕಪ್
    ಏಲಕ್ಕಿ – 3
    ಕಾಳು ಮೆಣಸು – 5
    ಸಕ್ಕರೆ – ಒಂದು ಟೀಸ್ಪೂನ್
    ಉಪ್ಪು – ಚಿಟಿಕೆ
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ನಿಂಬೆಹಣ್ಣು – 1

    ಪಾನಕ ಮಾಡುವ ವಿಧಾನ:
    * ಮೊದಲಿಗೆ ನೀರಿನಲ್ಲಿ ಬೆಲ್ಲವನ್ನು ಹಾಕಿ ಕರಗಿಸಿ.
    * ಏಲಕ್ಕಿ, ಕಾಳು ಮೆಣಸು ಹಾಗೂ ಸಕ್ಕರೆಯನ್ನು ಚೆನ್ನಾಗಿ ಪುಡಿ ಮಾಡಿ ಈ ಪುಡಿಯನ್ನು ಬೆಲ್ಲದ ನೀರಿಗೆ ಹಾಕಿ ಮಿಶ್ರಣ ಮಾಡಿ.
    * ಬಳಿಕ ಉಪ್ಪು, ಜೀರಿಗೆ ಪುಡಿ ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಿ.
    * ಇದೀಗ ಬೆಲ್ಲದ ಪಾನಕ ಸವಿಯಲು ಸಿದ್ಧ. ಇದನ್ನೂ ಓದಿ: ಕಹಿಯಾದ ಹಾಗಲಕಾಯಿಗೆ ರುಚಿಕರ ಟ್ವಿಸ್ಟ್ ನೀಡಿ – ಈ ರೆಸಿಪಿ ಮಾಡ್ನೋಡಿ

    ಮಜ್ಜಿಗೆ ಮಾಡಲು ಬೇಕಾಗುವ ಪದಾರ್ಥಗಳು:
    ಮೊಸರು – ಕಾಲು ಲೀಟರ್
    ಹಸಿಮೆಣಸಿನ ಕಾಯಿ – 2
    ಶುಂಠಿ – 1 ಇಂಚು
    ಕರಿಬೇವು – 1 ಎಸಳು
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ಹಿಂಗ್ – ಚಿಟಿಕೆ

    ಮಜ್ಜಿಗೆ ಮಾಡುವ ವಿಧಾನ:
    * ಮೊದಲಿಗೆ ಮಿಕ್ಸರ್ ಜಾರ್‌ಗೆ ಮೊಸರು ಹಾಗೂ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಅದನ್ನು ಒಂದು ಪಾತ್ರೆಗೆ ಹಾಕಿ, ಅಗತ್ಯವಿದ್ದಷ್ಟು ನೀರು ಹಾಕಿ ಮಿಶ್ರಣ ಮಾಡಿ.
    * ಈಗ ಮಿಕ್ಸರ್ ಜಾರ್‌ಗೆ ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು ಹಾಗೂ ಹಿಂಗ್ ಹಾಕಿ ರುಬ್ಬಿಕೊಳ್ಳಿ.
    * ಈ ಮಿಶ್ರಣವನ್ನು ಮಜ್ಜಿಗೆಗೆ ಹಾಕಿ ಮಿಕ್ಸ್ ಮಾಡಿ.
    * ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ.
    * ಇದೀಗ ರುಚಿಕರ ಮಜ್ಜಿಗೆ ಸವಿಯಲು ಸಿದ್ಧ. ಇದನ್ನೂ ಓದಿ: ಸಬ್ಬಕ್ಕಿ, ಅವಲಕ್ಕಿಯಿಂದ ಮಾಡಿ ಸಖತ್ ಟೇಸ್ಟಿ ವಡೆ

  • ಮದುವೆ ಸಮಾರಂಭದಲ್ಲಿ ಹಲ್ಲಿ ಬಿದ್ದಿದ್ದ ಮಜ್ಜಿಗೆ ಕುಡಿದು 16 ಮಂದಿ ಅಸ್ವಸ್ಥ

    ಮದುವೆ ಸಮಾರಂಭದಲ್ಲಿ ಹಲ್ಲಿ ಬಿದ್ದಿದ್ದ ಮಜ್ಜಿಗೆ ಕುಡಿದು 16 ಮಂದಿ ಅಸ್ವಸ್ಥ

    ಜೈಪುರ: ಮದುವೆ ಸಮಾರಂಭದಲ್ಲಿ ಹಲ್ಲಿ ಬಿದ್ದಿದ್ದ ಮಜ್ಜಿಗೆ ಕುಡಿದು 16 ಮಂದಿ ಅಸ್ವಸ್ಥರಾಗಿರುವ ಘಟನೆ ಪಹಾರಿ   ಪೊಲೀಸ್ ಠಾಣಾ ವ್ಯಾಪ್ತಿಯ ಭರತ್‍ಪುರದ ಅಟಾವಿ ಗ್ರಾಮದಲ್ಲಿ ನಡೆದಿದೆ.

    ಅಸ್ವಸ್ಥಗೊಂಡ 16 ಮಂದಿಯಲ್ಲಿ ವಧು-ವರ ಸೇರಿದಂತೆ ಐವರು ಮಕ್ಕಳೂ ಸೇರಿದ್ದಾರೆ. ವಿವಾಹವಾದ ನಂತರ ವಧುವನ್ನು ಬೀಳ್ಕೊಡುವ ಸಂದರ್ಭದಲ್ಲಿ ಅಂದರೆ ಮೇ 22 ರಂದು ಈ ಘಟನೆ ನಡೆದಿದೆ. ಮದುವೆ ಮಂಟಪದಿಂದ ಹೊರಡುವ ಮುನ್ನ ನವದಂಪತಿಗೆ ಹಾಗೂ ಅವರೊಂದಿಗಿದ್ದ ಸಂಬಂಧಿಕರಿಗೆ ಮಜ್ಜಿಗೆ ಬಡಿಸಲಾಯಿತು. ಈ ವೇಳೆ ಮಜ್ಜಿಗೆ ಕುಡಿದ 16 ಮಂದಿ ವಿಷಯುಕ್ತ ಆಹಾರದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.  ಇದನ್ನೂ ಓದಿ: ಶ್ರೀಲಂಕಾದಲ್ಲಿ ಲೀಟರ್‌ ಪೆಟ್ರೋಲ್‌ಗೆ 420 ರೂ., ಡೀಸೆಲ್‌ಗೆ 400 ರೂ.

    MARRIAGE

    ಇದೀಗ ಎಲ್ಲರೂ ಸಿಕ್ರಿ ಆಸ್ಪತ್ರೆ ಚಿಕಿತ್ಸೆ ಪಡೆದುಕೊಂಡಿದ್ದು, ಎಲ್ಲರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಬ್ಲಾಕ್ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಮಯಾಂಕ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: 75 ಲಕ್ಷ ಲಂಚ ಕೊಟ್ಟಿದ್ದೇನೆ, ಬ್ಲೂಟೂತ್‍ನಲ್ಲಿ ಪರೀಕ್ಷೆ ಬರೆದಿದ್ದೇನೆ – ತನಿಖೆಗೆ ಡಿಜಿಗೆ ಪತ್ರ ಬರೆದ ಅಭ್ಯರ್ಥಿ

  • ಮಜ್ಜಿಗೆಯಲ್ಲಿದೆ ಮದ್ದಿನ ಗುಣ- ಪ್ರತಿನಿತ್ಯ ಒಂದು ಲೋಟ ಮಜ್ಜಿಗೆ ಕುಡಿದು ನೋಡಿ

    ಮಜ್ಜಿಗೆಯಲ್ಲಿದೆ ಮದ್ದಿನ ಗುಣ- ಪ್ರತಿನಿತ್ಯ ಒಂದು ಲೋಟ ಮಜ್ಜಿಗೆ ಕುಡಿದು ನೋಡಿ

    ಹುತೇಕ ಎಲ್ಲರ ಮನೆಯಲ್ಲಿ ಮಧ್ಯಾಹ್ನದ ಸಮಯದ ಊಟದ ನಂತರ ಒಂದು ಲೋಟದಲ್ಲಿ ಮಜ್ಜಿಗೆ ಸೇವನೆ ಮಾಡುವ ಅಭ್ಯಾಸ ಇರುತ್ತದೆ. ಬೇಸಿಗೆ ಮಾತ್ರವಲ್ಲದೆ ವರ್ಷವಿಡೀ ಮಜ್ಜಿಗೆಯನ್ನು ಸೇವಿಸುವವರಿರುತ್ತಾರೆ. ಆದರೆ ಅದರ ಪ್ರಯೋಜನಗಳು ತಿಳಿದಿರುವುದಿಲ್ಲ.ಆದರೆ ಮಜ್ಜಿಗೆ ಸೇವನೆ ಮಾಡುವುದರಿಂದ ಇರುವ ಲಾಭವನ್ನು ಕೇಳಿದರೆ ಖಂಡಿತವಾಗಿಯೂ ನೀವು ಪ್ರತಿನಿತ್ಯ ಮಜ್ಜಿಗೆ ಕುಡಿಯಲು ಶುರು ಮಾಡುತ್ತಿರ.

    * ತಾಜಾ ಮಜ್ಜಿಗೆಗೆ ಶುಂಠಿಯ ರಸವನ್ನು ಸೇರಿಸಿ ಸೇವಿಸುವುದರಿಂದ ಪಿತ್ತರಸ, ತೂಕ ನಷ್ಟಕ್ಕೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

    * ಮಜ್ಜಿಗೆ ಕಡಿಮೆ ಕೊಬ್ಬಿನ ಅಂಶವನ್ನು ಒಳಗೊಂಡಿದೆ. ದೇಹದ ಶುದ್ಧೀಕರಣ ಕೂಡ ಮಜ್ಜಿಗೆಯಿಂದ ಆಗುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    * ದೇಹದ ಕೊಲೆಸ್ಟ್ರಾಲ್ ಅಂಶವನ್ನು ಮಟ್ಟ ಹಾಕಲು ಪ್ರತಿ ದಿನ ಮಜ್ಜಿಗೆ ಕುಡಿಯುವುದು ಕೂಡ ಒಂದು ಒಳ್ಳೆಯದು

    * ಮೊಡವೆ ಗುಳ್ಳೆಗಳು, ಸುಕ್ಕುಗಳು ಮತ್ತು ಗೆರೆಗಳು ಮಾಯವಾಗಬೇಕು ಎಂದರೆ ಪ್ರತಿದಿನ ನಿಯಮಿತವಾಗಿ ಒಂದು ಲೋಟ ಮಜ್ಜಿಗೆಯನ್ನು ಕುಡಿಯುವ ಅಭ್ಯಾಸ ಇಟ್ಟುಕೊಂಡಿರಿ ಇದನ್ನೂ ಓದಿ: ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಮನೆಮದ್ದು

    * ಮಜ್ಜಿಗೆ ಗ್ಯಾಸ್ಟ್ರಿಕ್ ಸಮಸ್ಯೆ ದೂರ ಮಾಡಿ ದೇಹದ ತೂಕವನ್ನು ಕಡಿಮೆ ಮಾಡುಲು ಮಜ್ಜಿಗೆ ಸೇವನೆ ಒಳ್ಳೆಯದಾಗಿದೆ.

    * ನಮ್ಮ ದೇಹದಿಂದ ಕೊಬ್ಬಿನ ಅಂಶವನ್ನು ಹೊರಹಾಕುವಲ್ಲಿ ಮಜ್ಜಿಗೆ ಪ್ರಮುಖ ಪಾತ್ರವಹಿಸುತ್ತದೆ.  ಇದನ್ನೂ ಓದಿ:  ಒಡೆದ ಹಿಮ್ಮಡಿಯ ಆರೈಕೆಗೆ ಏನು ಮಾಡಬೇಕು ಗೊತ್ತಾ?

    * ಮಜ್ಜಿಗೆ ದೇಹದ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ದೇಹವನ್ನು ತಂಪಾಗಿರಿಸಿ ಆರೋಗ್ಯವಾಗಿಡುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    * ಎದೆಯುರಿ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟಿಕ್ ಸಮಸ್ಯೆಗೆ ಕಡಿವಾಣ ಹಾಕುತ್ತದೆ. ಕ್ರಮೇಣವಾಗಿ ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

  • ರೈತನ ಮನೆಯಲ್ಲಿ ಕಡೆಗೋಲು ಹಿಡಿದು ಮಜ್ಜಿಗೆ ತಯಾರಿಸಿದ ಬಿ.ಸಿ ಪಾಟೀಲ್

    ರೈತನ ಮನೆಯಲ್ಲಿ ಕಡೆಗೋಲು ಹಿಡಿದು ಮಜ್ಜಿಗೆ ತಯಾರಿಸಿದ ಬಿ.ಸಿ ಪಾಟೀಲ್

    ಚಿಕ್ಕೋಡಿ: ರೈತನ ಮನೆಯಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ತಾವೇ ಖುದ್ದು ಮಜ್ಜಿಗೆ ತಯಾರಿಸಿದ್ದಾರೆ. ಇದನ್ನೂ ಓದಿ: ತಾಲಿಬಾನ್‍ಗೂ, RSSಗೂ ವ್ಯತ್ಯಾಸ ಇದೆ: ಸಿದ್ದರಾಮಯ್ಯಗೆ ಅರಗ ಜ್ಞಾನೇಂದ್ರ ತಿರುಗೇಟು

    ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತಕ್ಷೇತ್ರದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಪ್ರವೀಣ ಶಾ ಎಂಬ ರೈತನ ಮನೆಯಲ್ಲಿ ಕಡೆಗೋಲು ಹಿಡಿದು ಉತ್ತರ ಕರ್ನಾಟಕದ ಶೈಲಿಯಲ್ಲಿ ಕುಳಿತು ಮೊಸರು ಕಡಿದು ಮಜ್ಜಿಗೆ ತಯಾರಿಸಿದ್ದಾರೆ. ಇದನ್ನೂ ಓದಿ: ಕೆರೆಯ ಬಳಿ ಮದ್ಯಪಾನ ಮಾಡಿ ಗುಂಡಿನ ದಾಳಿ – FSL ತಂಡದಿಂದ ಪರಿಶೀಲನೆ

    ಸಚಿವರ ಬಳಿಕ ಶಶಿಕಲಾ ಜೊಲ್ಲೆ ಹಾಗೂ ಅಣ್ಣಾಸಾಹೇಬ್ ಜೊಲ್ಲೆ ಕೂಡ ಮಜ್ಜಿಗೆ ತಯಾರಿ ಮಾಡಿದ್ದಾರೆ. ಕೊನೆಗೆ ಮಜ್ಜಿಗೆ ಕುಡಿದು ಬಿ.ಸಿ ಪಾಟೀಲ್ ಖುಷಿ ಪಟ್ಟರು. ಬೆಳಿಗ್ಗಿನಿಂದಲೂ ಬಿ.ಸಿ ಪಾಟೀಲ್ ಹಾಗೂ ಶಶಿಕಲಾ ಜೊಲ್ಲೆ ನಿಪ್ಪಾಣಿ ಕ್ಷೇತ್ರದ ರೈತರ ಜಮೀನುಗಳಿಗೆ ತೆರಳಿ ರೈತರು ಅಳವಡಿಸಿಕೊಂಡಿರುವ ವಿಶೇಷ ತಂತ್ರಜ್ಞಾನಗಳನ್ನ ಪರಿಶೀಲಿಸಿ ರೈತರಿಗೆ ಸತ್ಕಾರ ಮಾಡಿದರು. ಈ ಸಂದರ್ಭದಲ್ಲಿ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಹಿರಿಯ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.

  • ಮಜ್ಜಿಗೆ ಕಡೆಯುವಾಗ ವಿದ್ಯುತ್ ಅವಘಡಕ್ಕೆ ಯುವಕ ಬಲಿ

    ಮಜ್ಜಿಗೆ ಕಡೆಯುವಾಗ ವಿದ್ಯುತ್ ಅವಘಡಕ್ಕೆ ಯುವಕ ಬಲಿ

    ಹಾಸನ: ಮಜ್ಜಿಗೆ ಕಡೆಯುವಾಗ ವಿದ್ಯುತ್ ತಗುಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬೇಲೂರು ತಾಲೂಕಿನ ದೊಡ್ಡಸಾಲಾವರ ಗ್ರಾಮದಲ್ಲಿ ನಡೆದಿದೆ.

    ಶರತ್ (25) ಮೃತ ದುರ್ದೈವಿಯಾಗಿದ್ದಾನೆ. ಮಜ್ಜಿಗೆ ಕಡೆಯುವಾಗ ವಿದ್ಯುತ್ ಶಾಕ್ ಹೊಡೆದು ಯುವಕ ಪ್ರಾಣ ಬಿಟ್ಟಿದ್ದಾನೆ. ಶರತ್ ಆಲೂರು ತಾಲೂಕಿನ ಜಿ ಬೆಳ್ಳೂರು ಗ್ರಾಮದ ಉಮೇಶ್ ಎಂಬುವರ ಮಗನಾಗಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಬರೋರಿದ್ರೆ ಅರ್ಜಿ ಹಾಕಲಿ, ಆಮೇಲೆ ಕೂತು ಮಾತನಾಡೋಣ: ಡಿಕೆಶಿ

    ಶರತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಕೊರೊನಾ ಹಿನ್ನೆಲೆಯಲ್ಲಿ ಕೆಲಸ ಇಲ್ಲದ ಕಾರಣ ಅರೇಹಳ್ಳಿ ಬಳಿಯ ದೊಡ್ಡ ಸಾಲಾವರದ ತನ್ನ ದೊಡ್ಡಮ್ಮನವರ ಮನೆಗೆ ಬಂದಿದ್ದ. ಎಂದಿನಂತೆ ಮಜ್ಜಿಗೆ ಕಡಿಯುತ್ತಿದ್ದಂತ ಸಂದರ್ಭದಲ್ಲಿ, ಮಜ್ಜಿಗೆ ಮಿಕ್ಸಿಗೆ ಇರುವ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಮಂಗಳೂರಿನ ವಿನಂತಿ ಹರಿಕಾಂತ