Tag: busstop

  • ಬಾಯ್‌ಫ್ರೆಂಡ್‌ಗಾಗಿ ಬಸ್‌ನಿಲ್ದಾಣದಲ್ಲೇ ಹುಡುಗಿಯರ ಕಿತ್ತಾಟ- ಸ್ಥಳದಿಂದ ಹುಡುಗ ಎಸ್ಕೇಪ್

    ಬಾಯ್‌ಫ್ರೆಂಡ್‌ಗಾಗಿ ಬಸ್‌ನಿಲ್ದಾಣದಲ್ಲೇ ಹುಡುಗಿಯರ ಕಿತ್ತಾಟ- ಸ್ಥಳದಿಂದ ಹುಡುಗ ಎಸ್ಕೇಪ್

    ಮುಂಬೈ: ತನ್ನ ಒಬ್ಬನೇ ಬಾಯ್‌ಫ್ರೆಂಡ್‌ಗಾಗಿ 17 ವರ್ಷದ ಇಬ್ಬರು ಹುಡುಗಿಯರು ಬಸ್ ನಿಲ್ದಾಣದಲ್ಲೇ ಸಾರ್ವಜನಿಕವಾಗಿ ಹೊಡೆದಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯಲ್ಲಿ ನಡೆದಿದೆ.

    ಒಬ್ಬಳು ಹುಡುಗಿ ಬಸ್ ನಿಲ್ದಾಣಕ್ಕೆ ಬಂದಿದ್ದಳು. ಇದೇ ವೇಳೆ ತನ್ನ ಬಾಯ್‌ಫ್ರೆಂಡ್ ಮತ್ತೊಬ್ಬ ಹುಡುಗಿಯೊಂದಿಗೆ ಇರುವ ವಿಷಯ ತಿಳಿದು ಅದೇ ಮತ್ತೊಬ್ಬಳು ಕೂಡ ಸ್ಥಳಕ್ಕೆ ಬಂದಿದ್ದಾಳೆ. ಇಬ್ಬರು ಹುಡುಗಿಯರ ನಡುವೆ ಬಾಯ್‌ಫ್ರೆಂಡ್‌ಗಾಗಿ ಮಾತಿನ ಚಕಮಕಿ ನಡೆಯುತ್ತಾ, ಬಳಿಕ ವಿವಾದಕ್ಕೆ ತಿರುಗಿದೆ. ನಂತರ ಹೊಡೆದಾಡಿಕೊಳ್ಳಲು ಶುರು ಮಾಡಿದ್ದಾರೆ. ಇದನ್ನೂ ಓದಿ: ರೈಲಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಪೊಲೀಸ್ ಠಾಣೆಯ ಸಮೀಪದಲ್ಲೇ ಸಾಮೂಹಿಕ ಅತ್ಯಾಚಾರ

    ಇಬ್ಬರು ಹೊಡೆದಾಡುತ್ತಿರುವುದನ್ನು ಕಂಡು ಹುಡುಗ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಅಂತಿಮವಾಗಿ ಹುಡುಗಿಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕೌನ್ಸೆಲಿಂಗ್ ಮಾಡಿ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಂಚ ಪಡೆಯುತ್ತಿದ್ದ ಗೃಹ ರಕ್ಷಕ ದಳದ ಅಧಿಕಾರಿ ಎಸಿಬಿ ಬಲೆಗೆ

    ಲಂಚ ಪಡೆಯುತ್ತಿದ್ದ ಗೃಹ ರಕ್ಷಕ ದಳದ ಅಧಿಕಾರಿ ಎಸಿಬಿ ಬಲೆಗೆ

    ಮಡಿಕೇರಿ: ಸಿಬ್ಬಂದಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಗೃಹರಕ್ಷಕ ದಳದ ಅಧಿಕಾರಿಯೊಬ್ಬರನ್ನು ಭ್ರಷ್ಟಾಚಾರ ನಿಗ್ರಹದಳದ ಎಸಿಬಿ ಅಧಿಕಾರಿಗಳು ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಬಸ್ಸು ನಿಲ್ದಾಣದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಸುನಿಲ್ ಎಂಬವರಿಂದ ಲಂಚ ಪಡೆಯುತ್ತಿದ್ದ ಆರೋಪದಡಿ ಗೃಹ ರಕ್ಷಕ ದಳದ ಅಧಿಕಾರಿ ರುದ್ರಪ್ಪ ಎಂಬವರನ್ನು ಬಂಧಿಸಲಾಗಿದೆ.

    ಪ್ರತಿ ತಿಂಗಳು ಗೃಹರಕ್ಷಕ ದಳದ ಸಿಬ್ಬಂದಿ ತಲಾ ಒಂದು ಸಾವಿರ ರೂ.ಗಳನ್ನು ನೀಡಬೇಕೆಂಬ ಬೇಡಿಕೆಯನ್ನು ರುದ್ರಪ್ಪ ಬಳಿ ಇಟ್ಟಿದ್ದಾರೆ ಎನ್ನಲಾಗಿದ್ದು, ತಪ್ಪಿದಲ್ಲಿ ಬೇರೆಕಡೆಗೆ ಕಳುಹಿಸುವುದಾಗಿ ಮಾನಸಿಕ ಹಿಂಸೆ ಹಾಗೂ ಕಿರುಕುಳವನ್ನು ಸಿಬ್ಬಂದಿಗೆ  ನೀಡುತ್ತಿದ್ದರು ಎಂಬ ಆರೋಪ ಕೇಳಿ ಬರುತ್ತಿತ್ತು.

    ಅದರಂತೆ ಇಂದು ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಿಬ್ಬಂದಿ ಸುನಿಲ್ ಎಂಬವರಿಂದ ಒಂದು ಸಾವಿರ ರೂ.ಗಳನ್ನು ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಇನ್ಸ್ ಪೆಕ್ಟರ್ ಶ್ರೀಧರ್ ನೇತೃತ್ವದ ತಂಡ ದಾಳಿ ನಡೆಸಿ ರುದ್ರಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ.