Tag: bussinessman

  • ಹೆಂಡತಿಯನ್ನು ಕೊಂದು ಚರಂಡಿಗೆಸೆದ ದೆಹಲಿ ಉದ್ಯಮಿ – ಪತ್ನಿಯ ಮೂಗುತಿಯಿಂದ ಗುರುತು ಪತ್ತೆ

    ಹೆಂಡತಿಯನ್ನು ಕೊಂದು ಚರಂಡಿಗೆಸೆದ ದೆಹಲಿ ಉದ್ಯಮಿ – ಪತ್ನಿಯ ಮೂಗುತಿಯಿಂದ ಗುರುತು ಪತ್ತೆ

    ನವದೆಹಲಿ: ದೆಹಲಿ (Delhi) ಉದ್ಯಮಿ ತನ್ನ ಪತ್ನಿಯನ್ನು ಕೊಂದು ಚರಂಡಿಗೆಸೆದ 15 ದಿನಗಳ ಬಳಿಕ ಆಕೆಯ ಮೂಗುತಿಯ ಮೂಲಕ ಪೊಲೀಸರು ಗುರುತನ್ನು ಪತ್ತೆಹಚ್ಚಿದ್ದಾರೆ. ಈ ಘಟನೆ ದ್ವಾರಕಾದ (Dwaraka) ಚಾವ್ಲಾ ಪ್ರದೇಶದಲ್ಲಿ ನಡೆದಿದೆ.

    ಮಾ.15 ರಂದು ಸೀಮಾ ಸಿಂಗ್ (47) ಎಂಬ ಮಹಿಳೆಯ ಮೃತದೇಹ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. ಆದರೆ ಪತ್ತೆಯಾಗಿ 15 ದಿನ ಕಳೆದರೂ ಆಕೆಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ತನಿಖಾಧಿಕಾರಿಗಳು ಆಕೆ ಹಾಕಿಕೊಂಡಿದ್ದ ಮೂಗುತಿಯ ಆಧಾರದ ಮೇಲೆ ತನಿಖೆ ಆರಂಭಿಸಿದ್ದರು.ಇದನ್ನೂ ಓದಿ: ಜಾತಿಗಣತಿ ವರದಿ ಸೀಲ್ ಓಪನ್… ಕ್ಯಾಬಿನೆಟ್‌ನಲ್ಲಿ ಮಂಡನೆ; ಮುಂದಿನ‌ ಕ್ಯಾಬಿನೆಟ್‌ಗೆ ಕ್ಲೈಮ್ಯಾಕ್ಸ್..!

    ಅಧಿಕಾರಿಗಳು ಮೂಗುತಿ ಖರೀದಿಸಿದ್ದ ಅಂಗಡಿಯನ್ನು ಪತ್ತೆ ಹಚ್ಚಿ, ಖರೀದಿದಾರರ ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ಮಾಹಿತಿಯನ್ನು ಪಡೆದುಕೊಂಡರು. ಇದರಿಂದ ಸಂಪರ್ಕಕ್ಕೆ ಸಿಕ್ಕ ದೆಹಲಿ ಉದ್ಯಮಿಯನ್ನು ವಿಚಾರಿಸಿದಾಗ ನನ್ನ ಪತ್ನಿ ವೃಂದಾವನಕ್ಕೆ (Vrindavan) ಹೋಗಿರುವುದಾಗಿ ತಿಳಿಸಿದ್ದಾನೆ.

    ಹೆಚ್ಚಿನ ತನಿಖೆಗಾಗಿ ವಿಚಾರಣೆಗೊಳಪಡಿಸಿದಾಗ ಉದ್ಯಮಿ ತಪ್ಪೊಪ್ಪಿಕೊಂಡಿದ್ದು, ತನ್ನ ಪತ್ನಿಯನ್ನು ಭದ್ರತಾ ಸಿಬ್ಬಂದಿಯ ಸಹಾಯದಿಂದ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಹಾಗೂ ನಮ್ಮಿಬ್ಬರ ಸಂಬಂಧದಲ್ಲಿ ತುಂಬಾ ಭಿನ್ನಾಭಿಪ್ರಾಯಗಳಿದ್ದ ಕಾರಣ ಕೊಲೆ ಮಾಡಿರುವುದಾಗಿ ತಿಳಿಸಿದ್ದು, ಸದ್ಯ ಪೊಲೀಸರು ಪತಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ

  • ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದ ಉದ್ಯಮಿಗೆ ಗುಂಡಿಕ್ಕಿ ಹತ್ಯೆ

    ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದ ಉದ್ಯಮಿಗೆ ಗುಂಡಿಕ್ಕಿ ಹತ್ಯೆ

    ನವದೆಹಲಿ: ಬೆಳಗಿನ ಜಾವ ವಾಕಿಂಗ್ ಮುಗಿಸಿ ಮರಳುತ್ತಿದ್ದಾಗ ಇಬ್ಬರು ಗುಂಡಿನ ದಾಳಿ ನಡೆಸಿದ ಪರಿಣಾಮ ಉದ್ಯಮಿ ಸಾವನ್ನಪ್ಪಿರುವ ಘಟನೆ ದೆಹಲಿಯ (Delhi) ಶಾಹದಾರ (Shahdara) ಜಿಲ್ಲೆಯ ಫರ್ಶ್ ಬಜಾರ್ ಬಳಿ ನಡೆದಿದೆ.

    ಮೃತ ಉದ್ಯಮಿಯನ್ನು ದೆಹಲಿಯ ಕೃಷ್ಣ ನಗರದ ನಿವಾಸಿಯಾಗಿರುವ 32 ವರ್ಷದ ಸುನಿಲ್ ಜೈನ್ ಎಂದು ಗುರುತಿಸಲಾಗಿದ್ದು, ಪಾತ್ರೆ ವ್ಯಾಪಾರವನ್ನು ಮಾಡುತ್ತಿದ್ದರು.ಇದನ್ನೂ ಓದಿ: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

    ಬೆಳಗಿನ ಜಾವ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಿಂದ ವಾಕಿಂಗ್ ಮುಗಿಸಿ, ಸ್ನೇಹಿತನೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಮರಳುತಿದ್ದಾಗ ಈ ಘಟನೆ ನಡೆದಿದೆ. ಒಟ್ಟು 7 ಬಾರಿ ಗುಂಡು ಹಾರಿಸಿರುವುದಾಗಿ ತಿಳಿದುಬಂದಿದೆ. ಮೃತ ಸುನಿಲ್ ಯಾರೊಂದಿಗೂ ಯಾವುದೇ ರೀತಿಯ ವೈರತ್ವವನ್ನು ಹೊಂದಿರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

    ಬೆಳಿಗ್ಗೆ ಸ್ಕೂಟರ್‌ನಲ್ಲಿ ಮರಳುತ್ತಿರುವಾಗ ಇಬ್ಬರು ಆರೋಪಿಗಳ ಪೈಕಿ ಒಬ್ಬ ಆರೋಪಿ ಸುನಿಲ್‌ಗೆ, ‘ನಿಮ್ಮ ಫೋನ್ ಕೆಳಗೆ ಬಿದ್ದಿದೆ’ ಎಂದು ಹೇಳಿದ. ಮತ್ತೆ, ‘ನಿಮ್ಮ ಹೆಸರೇನು’ ಎಂದು ಕೇಳಿದ. ಅಷ್ಟರಲ್ಲಿ ಇನ್ನೊಬ್ಬ ಆರೋಪಿ ಬೈಕ್‌ನಿಂದ ಕೆಳಗಿಳಿದು ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಸುನಿಲ್, ‘ನನ್ನ ಮೇಲೆ ಗುಂಡು ಹಾರಿಸಬೇಡಿ’ ಎಂದು ಕೇಳಿಕೊಂಡರೂ, ಬಿಡದೇ 7 ಸುತ್ತಿನ ಗುಂಡು ಹಾರಿಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ಮುಖವಾಡ ಧರಿಸಿದ್ದರು. ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿ ಸ್ನೇಹಿತ ಮಾಹಿತಿ ನೀಡಿದ್ದಾನೆ.

    ಡಿಸಿಪಿ ಶಾಹದಾರ ಮಾತನಾಡಿ, ಘಟನಾ ಸ್ಥಳಕ್ಕೆ ಕ್ರೈಂ ತಂಡ ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal), ಬಿಜೆಪಿ ಆಡಳಿತದಲ್ಲಿ ಅಪರಾಧಿಗಳು ನಿರ್ಭಯರಾಗಿದ್ದಾರೆ ಎಂದು ತಮ್ಮ ಎಕ್ಸ್ (X) ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಎಎಪಿ ನಾಯಕ ಹಾಗೂ ಸಚಿವ ಸೌರಭ್ ಭಾರದ್ವಾಜ್, ದೆಹಲಿಯು ಭಾರತದ ಅಪರಾಧಗಳ ರಾಜಧಾನಿಯಾಗಿದೆ ಎಂದು ಹರಿಹಾಯ್ದಿದ್ದಾರೆ.ಇದನ್ನೂ ಓದಿ: ಬಾಣಂತಿಯರ ಸರಣಿ ಸಾವು ಕೇಸ್ – ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ‘ಲೋಕಾ’ ದಾಳಿ

  • ಹೆಚ್‌.ಡಿ.ರೇವಣ್ಣ ಆಪ್ತ, ಉದ್ಯಮಿ ಹಾಡಹಗಲೇ ಬರ್ಬರ ಹತ್ಯೆ

    ಹೆಚ್‌.ಡಿ.ರೇವಣ್ಣ ಆಪ್ತ, ಉದ್ಯಮಿ ಹಾಡಹಗಲೇ ಬರ್ಬರ ಹತ್ಯೆ

    ಹಾಸನ: ಹಾಡುಹಗಲೇ ಉದ್ಯಮಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಹೊರವಲಯದ ನಾಗತವಳ್ಳಿ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

    ಕೃಷ್ಣೇಗೌಡ (55) ಕೊಲೆಯಾದ ಉದ್ಯಮಿ. ಹಣಕಾಸಿನ ವ್ಯವಹಾರ ಹಾಗೂ ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೃಷ್ಣೇಗೌಡರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಮೈಸೂರು ವಲಯ ಐಜಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಪ್ತರಾಗಿದ್ದ ಕೃಷ್ಣೇಗೌಡ ಹತ್ಯೆಯಿಂದ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ‌. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಬಾಂಬ್ ಸ್ಫೋಟದ ಬೆದರಿಕೆ, ಪ್ರಧಾನಿ ಕೊಲ್ಲುವುದಾಗಿ ಕಾಮೆಂಟ್: ಆರೋಪಿಗಾಗಿ ತೀವ್ರ ಶೋಧ

    ಹಾಸನ ಮೂಲದವರೇ ಆದ ಕೃಷ್ಣೇಗೌಡ ಕಂಟ್ರಾಕ್ಟರ್ ಆಗಿದ್ದು, ಇದರ ಜೊತೆಗೆ ಗ್ರಾನೈಟ್ ಬ್ಯುಸಿನೆಸ್ ಮಾಡುತ್ತಿದ್ದರು. ಹಾಸನ ನಗರದ ಹೊರವಲಯದ ನಾಗತವಳ್ಳಿ ಬಳಿ ಗ್ರಾನೈಟ್ ಫ್ಯಾಕ್ಟರಿ ಇದ್ದು, ಡೈರಿ ವೃತ್ತದಲ್ಲಿ ಶ್ರೀರಾಮ ಮಾರ್ಬಲ್ಸ್ ಹೆಸರಿನಲ್ಲಿ ಬೃಹತ್ ಶೋ ರೂಂ ಇತ್ತು.‌ ಜೆಡಿಎಸ್ ಮುಖಂಡನಾಗಿದ್ದ ಕೃಷ್ಣೇಗೌಡ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತರಾಗಿದ್ದರು. ಒಂದು ಭಾರಿ ಹಾಸನ ನಗರಸಭೆ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಯಾರೊಂದಿಗೂ ಜಗಳವಾಡದ ಕೃಷ್ಣೇಗೌಡ ಸೌಮ್ಯ ಸ್ವಭಾವದವರಾಗಿದ್ದರು. ಪ್ರತಿನಿತ್ಯ ನಾಗತವಳ್ಳಿ ಬಳಿಯಿರುವ ತಮ್ಮ ಗ್ರಾನೈಟ್ ಫ್ಯಾಕ್ಟರಿಗೆ ಹೋಗಿ ಬರುತ್ತಿದ್ದರು.

    ಇಂದು ಮಧ್ಯಾಹ್ನ ಕೆ‌ಎ-13 ಎನ್-9878 ನಂಬರ್‌ನ ತಮ್ಮ ಇನ್ನೋವಾ ಕಾರಿನಲ್ಲಿ ಗ್ರಾನೈಟ್ ಫ್ಯಾಕ್ಟರಿಗೆ ತೆರಳಿದ್ದರು. ಈ ವೇಳೆ ಕಾರಿನಲ್ಲಿ ಬಂದ ನಾಲ್ಕರಿಂದ ಐವರು ದುಷ್ಕರ್ಮಿಗಳು ಕೃಷ್ಣೇಗೌಡರು ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಎಸ್ಕೇಪ್ ಆಗಿದ್ದಾರೆ. ಜೆಡಿಎಸ್ ಮುಖಂಡನ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ಹೆಚ್.ಪಿ. ಸ್ವರೂಪ್ ಸ್ಥಳಕ್ಕೆ ಭೇಟಿ ನೀಡಿದರು. ಮೃದು ಸ್ವಭಾವದ ಕೃಷ್ಣೇಗೌಡರ ಕೊಲೆ‌ ವಿಷಯ ಕೇಳಿ ಆಶ್ಚರ್ಯವಾಗಿದ್ದು, ಈ ರೀತಿಯ ಘಟನೆಗಳು ಮರುಕಳಿಸಬಾರದು. ಇಂತಹ ಹತ್ಯೆಗಳಿಂದ ಭಯದ ವಾತಾವರಣ ನಿರ್ಮಾಣವಾಗುತ್ತದೆ. ಆದ್ದರಿಂದ ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಹೆಚ್.ಡಿ‌. ರೇವಣ್ಣ ಅವರು ಮಾತನಾಡಿದ್ದಾರೆ ಎಂದರು.‌ ಇದನ್ನೂ ಓದಿ: ಹನಿಮೂನ್‍ಗೆ ಬಂದು ಪತಿಯನ್ನು ಹೋಟೆಲ್‍ನಲ್ಲೇ ಬಿಟ್ಟು ಹೋದ ಪತ್ನಿ!

    ಇನ್ನೂ ಘಟನಾ ಸ್ಥಳಕ್ಕೆ ಮೈಸೂರು ವಲಯ ಐಜಿ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಲ್ಕರಿಂದ ಐದು ಮಂದಿ ವಾಹನದಲ್ಲಿ ಬಂದು ತಲ್ವಾರ್‌ನಿಂದ ಕೃಷ್ಣೇಗೌಡರ ಮೇಲೆ ಅಟ್ಯಾಕ್ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿಗಳ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಹಣದ ವ್ಯವಹಾರ ಹಾಗೂ ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ಪರಿಚಯಸ್ಥರೆ ಕೊಲೆ‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

    ಜು.4 ರಂದು ಹಾಡುಹಗಲೇ ಚನ್ನರಾಯಪಟ್ಟಣದಲ್ಲಿ ರೌಡಿಶೀಟರ್ ಮಾಸ್ತಿಗೌಡ ಎಂಬಾತನನ್ನು ದುಷ್ಕರ್ಮಿಗಳು ರಸ್ತೆಯಲ್ಲಿ ಅಟ್ಟಾಡಿಸಿ ಕೊಲೆ ಮಾಡಿದ್ದರು. ಈ ಘಟನೆ ಮಾಸುವ ಮುನ್ನವೇ ಉದ್ಯಮಿ ಹಾಗೂ ಜೆಡಿಎಸ್ ಮುಖಂಡನನ್ನು ತಲ್ವಾರ್‌ನಿಂದ ಕೊಲೆ ಮಾಡಿರುವುದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.‌ ಕೊಲೆಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಜಿಲ್ಲೆಗೆ ಬರುವ ಹಾಗೂ ಹೊರ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಜ್ಞಾತ ಸ್ಥಳದಲ್ಲಿ ಸಿದ್ಧಾರ್ಥ್ ಕಾರು ಚಾಲಕನ ತೀವ್ರ ವಿಚಾರಣೆ

    ಅಜ್ಞಾತ ಸ್ಥಳದಲ್ಲಿ ಸಿದ್ಧಾರ್ಥ್ ಕಾರು ಚಾಲಕನ ತೀವ್ರ ವಿಚಾರಣೆ

    ಮಂಗಳೂರು: ಉದ್ಯಮಿ ಸಿದ್ಧಾರ್ಥ್ ಹೆಗಡೆ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದಿದ್ದು, ಇದೀಗ ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಯುತ್ತಿದೆ.

    ಸಿದ್ಧಾರ್ಥ್ ಅವರು ನಿನ್ನೆ ಕಾರಿನಲ್ಲಿ ಚಾಲಕ ಬಸವರಾಜ್ ಪಾಟೀಲ್ ಜೊತೆಗೆ ಸಕಲೇಶಪುರಕ್ಕೆ ಹೊರಡಿದ್ದರು. ಆದರೆ ಮಾರ್ಗಮಧ್ಯೆದಲ್ಲಿ ಕಾರನ್ನು ಮಂಗಳೂರು ಕಡೆಗೆ ತಿರುಗಿಸಲು ಸೂಚಿಸಿದ್ದು, ನೇತ್ರಾವತಿ ನದಿಗೆ ನಿರ್ಮಿಸಲಾಗಿದ್ದ ಸೇತವೆಯ ಬಳಿ ಬರುತ್ತಿದ್ದಂತೆಯೇ ಕಾರು ನಿಲ್ಲಿಸಲು  ಚಾಲಕನ ಬಳಿ ಹೇಳಿದ್ದಾರೆ. ಆ ನಂತರ ಸಿದ್ಧಾರ್ಥ್ ಅವರು ನಾಪತ್ತೆಯಾಗಿದ್ದಾರೆ.

    ಈ ಹಿನ್ನೆಲೆಯಲ್ಲಿ ಕಂಕನಾಡಿ ಪೊಲೀಸರು ಕಾರು ಹಾಗೂ ಚಾಲಕ ಬಸವರಾಜ್ ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಹಿರಿಯ ಅಧಿಕಾರಿಗಳು ಕಂಕನಾಡಿ ಠಾಣೆಗೆ ಆಗಮಿಸಿದ್ದಾರೆ. ನಂತರ ಅಲ್ಲಿಂದ ಬೆಳಗ್ಗೆ 8 ಗಂಟೆ ಸುಮಾರಿಗೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಿದ್ಧಾರ್ಥ್ ಅವರು ಯಾರ ಜೊತೆಗೆ ಮಾತನಾಡುತ್ತಿದ್ದರು? ಏನು ಮಾತನಾಡುತ್ತಿದ್ದರು? ಗಾಬರಿ, ಭಯ ಅಥವಾ ಆತಂಕದಿಂದ ಸಂಭಾಷಣೆ ನಡೆಸಿದ್ದರಾ ಎಂದು ಪೊಲೀಸರು ಬಸವರಾಜ್‍ಗೆ ಕೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸದ್ಯ ಸಿದ್ಧಾರ್ಥ್ ಅವರು ಪ್ರಯಾಣಿಸಿದ್ದ ಕೆಎ 03 ಎಸ್‍ಸಿ 2593 ನಂಬರ್ ನ ಇನ್ನೋವಾ ಕಾರನ್ನು ಪೊಲೀಸರ ವಶದಲ್ಲಿದೆ. ಪೊಲೀಸರು ಈಗಾಗಲೇ ಚಾಲಕ ಬಸವರಾಜ್‍ನಿಂದ ಪ್ರಾಥಮಿಕ ಹೇಳಿಕೆ ಪಡೆದುಕೊಂಡಿದ್ದಾರೆ.

    https://www.youtube.com/watch?v=2P3yazqTvMs

  • ಬೆಂಗ್ಳೂರಲ್ಲಿ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಉದ್ಯಮಿ!

    ಬೆಂಗ್ಳೂರಲ್ಲಿ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಉದ್ಯಮಿ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ಈ ಬಾರಿ ಪೊಲೀಸರಿಂದ ಅಲ್ಲ, ರೌಡಿಗಳಿಂದಲೂ ಅಲ್ಲ. ಉದ್ಯಮಿಯೊಬ್ಬ ತನ್ನ ಪತ್ನಿ ಮೆಲೆಯೇ ಫೈರಿಂಗ್ ಮಾಡಿದ್ದಾನೆ.

    ಕಳೆದ ರಾತ್ರಿ ಉದ್ಯಮಿ ಗಣೇಶ್ ಎಂಬಾತ ತನ್ನ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಜಯನಗರದ ನಾಲ್ಕನೆ ಬ್ಲಾಕ್‍ನಲ್ಲಿ ನಡೆದಿದೆ.

    ಹಣಕಾಸು ವಿಚಾರವಾಗಿ ದಂಪತಿ ಮಧ್ಯೆ ಕಲಹ ಏರ್ಪಟ್ಟು, ಕೋಪದ ಭರದಲ್ಲಿ ಪತ್ನಿ ಸಹನಾಳನ್ನು ಗಣೇಶ್ ಗುಂಡಿಟ್ಟು ಹತ್ಯೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಘಟನೆ ನಡೆದ ಬಳಿಕ ಗಣೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ.

    ಜಯನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಎಸ್ಕೇಪ್ ಆಗಿರೋ ಗಣೇಶ್‍ಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

  • ರೇಂಜ್ ರೋವರ್ ಆಟೋಬಯೋಗ್ರಫಿ ಕಾರಿನ ಒಡೆಯನಾದ್ರು ಜೆಡಿಎಸ್ ಮುಖಂಡ!

    ರೇಂಜ್ ರೋವರ್ ಆಟೋಬಯೋಗ್ರಫಿ ಕಾರಿನ ಒಡೆಯನಾದ್ರು ಜೆಡಿಎಸ್ ಮುಖಂಡ!

    ಮಂಗಳೂರು: ಉದ್ಯಮಿ, ವಿಧಾನ ಪರಿಷತ್ ಸದಸ್ಯ ಜೆಡಿಎಸ್ ಮುಖಂಡ ಬಿ.ಎಂ ಫಾರೂಕ್ ರೇಂಜ್ ರೋವರ್ ಆಟೋಬಯೋಗ್ರಫಿ ಕಾರನ್ನು ಖರೀದಿಸಿದ್ದಾರೆ.

    ರೇಂಜ್ ರೋವರ್ ಕಂಪೆನಿಯ ಅತ್ಯಾಧುನಿಕ ಶೈಲಿಯ ಕಾರುಗಳಲ್ಲಿ ಇದು ಒಂದಾಗಿದೆ. ರೇಂಜ್ ರೋವರ್ 4 ಪಾಯಿಂಟ್ 4 ರೇಂಜಲ್ಲಿ 2019 ಮಾಡೆಲ್ ಆಟೋಬಯೋಗ್ರಫಿ ಆಗಿದೆ. ಪ್ರತಿ ವರ್ಷವೂ ಹೊಸ ಕಾರುಗಳನ್ನು ಕೊಳ್ಳುವ ಫಾರೂಕ್ ಸ್ವಂತಕ್ಕೆ ಈಗಾಗಲೇ 15ನೇ ಕಾರುಗಳಿವೆ.

    ಈಗಾಗ್ಲೇ ಮೂರು ರೇಂಜ್ ರೋವರ್‍ಗಳನ್ನು ಹೊಂದಿರುವ ಫಾರೂಕ್, ನಾಲ್ಕು ತಿಂಗಳ ಹಿಂದೆ ನ್ಯೂ ಮಾಡೆಲ್ ಆಟೋಬಯೋಗ್ರಫಿ ಬುಕ್ ಮಾಡಿದ್ದರಂತೆ. ರಂಜಾನ್ ಹಬ್ಬದ ಸಂಭ್ರಮದಲ್ಲಿರುವಾಗಲೇ ಕಾರನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಕಾರಿನ ಇನ್ ಡೋರ್ ಸಿಸ್ಟಮ್ ಸೆಲೆಕ್ಷನ್ ಫಾರೂಕ್ ಮಗಳದ್ದಂತೆ. ಅಂದಹಾಗೆ, ಇದರ ಬೆಲೆ 3.5 ಕೋಟಿ ಆಗಿದೆ.

    ಎರಡು ವರ್ಷಗಳ ಹಿಂದೆ ಉಡುಪಿಯ ಶಾಸಕರಾಗಿದ್ದ ಪ್ರಮೋದ್ ಮಧ್ವರಾಜ್ ರೋಲ್ಸ್ ರಾಯ್ಸ್ ಕಾರು ಖರೀದಿಸಿದಾಗ ಭಾರೀ ಸುದ್ದಿಯಾಗಿದ್ರು.

  • ವಿದ್ವತ್ ಮೇಲೆ ಹಲ್ಲೆ ಪ್ರಕರಣ- ಇಂದು ನಲಪಾಡ್ ಜಾಮೀನು ಅರ್ಜಿಯ ಭವಿಷ್ಯ ನಿರ್ಧಾರ

    ವಿದ್ವತ್ ಮೇಲೆ ಹಲ್ಲೆ ಪ್ರಕರಣ- ಇಂದು ನಲಪಾಡ್ ಜಾಮೀನು ಅರ್ಜಿಯ ಭವಿಷ್ಯ ನಿರ್ಧಾರ

    ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾರೀಸ್ ಪುತ್ರ ನಲಪಾಡ್‍ಗೆ ಜೈಲಾ..? ಬೇಲಾ..? ಎಂಬುದು ಇಂದು ಗೊತ್ತಾಗಲಿದೆ.

    ಹೌದು. ಶಾಸಕ ಹ್ಯಾರಿಸ್ ಮಗ ನಲಪಾಡ್ ಜಾಮೀನು ಅರ್ಜಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸೋಮವಾರ ನಲಪಾಡ್ ಪರ ವಕೀಲ ಉಸ್ಮಾನ್ ವಾದ ಮುಕ್ತಾಯ ಮಾಡಿದ್ದಾರೆ. ಹೀಗಾಗಿ ಇಂದು ಎಸ್ ಪಿಪಿ ಅವರಿಂದ ಪ್ರತಿವಾದ ನಡೆಯಲಿದೆ.

    ಪ್ರತಿವಾದ ಬೇಗ ಮುಗಿದ್ರೆ ಇಂದೇ ತೀರ್ಪು ಸಿಗುವ ಸಾಧ್ಯತೆಗಳಿವೆ. 63 ನೇ ಸಿಸಿಎಚ್ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ವಿದ್ವತ್ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಜಾರ್ಜ್ ಶೀಟ್ ಸಲ್ಲಿಸಲಾಗಿದೆ.

    ಈ ಹಂತದಲ್ಲಿ ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ. ಹಾಗಾಗಿ ಜಾಮೀನು ನೀಡುವಂತೆ ನಲಪಾಡ್ ಪರ ವಕೀಲರಿಂದ ವಾದ ಮಂಡಿಸಲಾಗಿತ್ತು. ಇಂದು ಕೂಡ ಸ್ಪೆಷಲ್ ಪ್ರಾಸಿಕ್ಯೂಟರ್ ಶ್ಯಾಮ್ ಸುಂದರ್ ಅವರಿಂದ ವಾದ ಮಂಡನೆ ನಡೆಯಲಿದೆ.

    ಏನಿದು ಪ್ರಕರಣ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಕಿರಿಕ್ ತೆಗೆದು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದನು. ಫೆಬ್ರವರಿ 17ರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ನಂತರ ಚಿಕಿತ್ಸೆಗೆಂದು ವಿದ್ವತ್ ಮಲ್ಯಾ ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ಹೋಗಿ ನಲಪಾಡ್ ಮತ್ತು ತಂಡ ಹಲ್ಲೆ ಮಾಡಿತ್ತು.

                                                                                      ವಿದ್ವತ್- ಹಲ್ಲೆಗೊಳಗಾದ ಯುವಕ.
  • ಹಾಡಹಗಲೇ ಚೂರಿಯಿಂದ ಇರಿದುಕೊಂಡ ವ್ಯಾಪಾರಿಗಳು- ಮೂವರ ಸ್ಥಿತಿ ಗಂಭೀರ

    ಹಾಡಹಗಲೇ ಚೂರಿಯಿಂದ ಇರಿದುಕೊಂಡ ವ್ಯಾಪಾರಿಗಳು- ಮೂವರ ಸ್ಥಿತಿ ಗಂಭೀರ

    ಬೆಳಗಾವಿ: ಬೀದಿ ಬದಿ ವ್ಯಾಪಾರಿಗಳ ಮಧ್ಯೆ ನಡೆದ ಗಲಾಟೆ ತಾರಕಕ್ಕೇರಿ, ಹಾಡಹಗಲೇ ಚೂರಿಯಿಂದ ಇರಿದುಕೊಂಡು ಮೂವರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಗಣಪತಿ ಗಲ್ಲಿಯಲ್ಲಿ ನಡೆದಿದೆ.

    ಇಂತಿಯಾಜ್ ಪಠಾಣ್, ಅಯಾಜ್ ಪಠಾಣ್, ಸಮೀರ್ ಪಠಾಣ್ ಸೇರಿ 10 ಜನರಿಂದ ಹಲ್ಲೆ ನಡೆದಿದೆ. ಸಲೀಂ, ಶಾಬಾಜ್ ಹಾಗೂ ತೈಬಾಜ್ ಘಟನೆಯಲ್ಲಿ ತೀವ್ರ ಗಾಯಗೊಂಡವರು.

    ಹಣ್ಣಿನ ದರ ನಿಗದಿ ಮತ್ತು ಸ್ಥಳದ ವಿಚಾರವಾಗಿ ವ್ಯಾಪಾರಿಗಳ ಮಧ್ಯೆ ಗಲಾಟೆ ನಡೆದಿದೆ. ಪರಿಣಾಮ ವ್ಯಾಪಾರಿಗಳು ನಡುರಸ್ತೆಯಲ್ಲಿಯೇ ಪರಸ್ಪರ ಚೂರಿಯಿಂದ ಹೊಡೆದಾಡಿಕೊಂಡು ಮೂವರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಡಿಸಿಪಿ ಅಮರನಾಥ ರಡ್ಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಬೆಂಗ್ಳೂರಲ್ಲಿ ಉದ್ಯಮಿ ತಲೆಗೆ ಗನ್ ಇಟ್ಟು ಫೈರ್ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು

    ಬೆಂಗ್ಳೂರಲ್ಲಿ ಉದ್ಯಮಿ ತಲೆಗೆ ಗನ್ ಇಟ್ಟು ಫೈರ್ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿಬಂದಿದೆ. ಉದ್ಯಮಿ ಕಾರ್ತಿಕ್ ರೆಡ್ಡಿ ಎಂಬವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮಾ. 4 ರಂದು ನಗರದ ಹೆಚ್‍ಎಎಲ್ ಬಳಿಯ ಇಸ್ರೋ ಹಿಂದಿನ ಗೇಟ್ ಬಳಿ ಅಮೃತ್ ರೆಡ್ಡಿ, ನಿಶ್ವಂತ್ ರೆಡ್ಡಿ ಸೇರಿ ಮೂವರು ದುಷ್ಕರ್ಮಿಗಳು ಕಾರ್ತಿಕ್ ರೆಡ್ಡಿ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ್ದರು. ತಲೆಗೆ ಗನ್ ಪಾಯಿಂಟ್ ಇಟ್ಟು ಫೈರ್ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಗನ್ ಇಟ್ಟ ವ್ಯಕ್ತಿಯನ್ನು ತಳ್ಳಿ ಕಾರ್ತಿಕ್ ಪಾರಾಗಿದ್ದರು.

    ಬಳಿಕ ಮೂವರು ದುಷ್ಕರ್ಮಿಗಳು ಕಾರ್ತಿಕ್ ರೆಡ್ಡಿಗೆ ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕಾರ್ತಿಕ್ ಹೆಚ್‍ಎಎಲ್ ಠಾಣೆಗೆ ದೂರು ನೀಡಿದ್ದು, ಸದ್ಯ ಮೂವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.