Tag: Businessmen

  • ಪಾಟ್ನಾದಲ್ಲಿ ಭೀಕರ ರಸ್ತೆ ಅಪಘಾತ – ಐವರು ಉದ್ಯಮಿಗಳು ಸ್ಥಳದಲ್ಲೇ ಸಾವು

    ಪಾಟ್ನಾದಲ್ಲಿ ಭೀಕರ ರಸ್ತೆ ಅಪಘಾತ – ಐವರು ಉದ್ಯಮಿಗಳು ಸ್ಥಳದಲ್ಲೇ ಸಾವು

    ಪಾಟ್ನಾ: ಇಲ್ಲಿನ ಪರ್ಸಾ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ (Patna Road Accident) ಐವರು ಉದ್ಯಮಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಪಾಟ್ನಾ-ಗಯಾ-ದೋಭಿ ಚತುಷ್ಪಥ ರಸ್ತೆಯಲ್ಲಿ ಘಟನೆ ನಡೆದಿದೆ. ಮೃತ ಉದ್ಯಮಿಗಳನ್ನು (Businessmen) ರಾಜೇಶ್ ಕುಮಾರ್ (50), ಸಂಜಯ್ ಸಿಂಗ್ (55), ಕಮಲ್ ಕಿಶೋರ್ (38), ಪ್ರಕಾಶ್ ಚೌರಾಸಿಯಾ (35) ಮತ್ತು ಸುನಿಲ್ ಕುಮಾರ್ (38) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಪಾಟ್ನಾದ ಪ್ರತಿಷ್ಠಿತ ಉದ್ಯಮಿಗಳಾಗಿದ್ದು, ಫತುಹಾದಿಂದ ತಡರಾತ್ರಿ ಕೆಲವು ಕೆಲಸ ಮುಗಿಸಿ ಪಾಟ್ನಾಕ್ಕೆ ಹಿಂತಿರುಗುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೊಲೆ, ಸುಲಿಗೆ ಸೇರಿ 18 ಪ್ರಕರಣದಲ್ಲಿ ಬೇಕಾಗಿದ್ದ ಬಿಹಾರದ ಶಂಕಿತ ನಕ್ಸಲ್‌ ರಾಯಚೂರಲ್ಲಿ ಅರೆಸ್ಟ್‌

    ಫತುಹಾದಿಂದ ಪಾಟ್ನಾಗೆ ಹಿಂತಿರುಗುತ್ತಿದ್ದ ವೇಳೆ ಕಾರು ರಸ್ತೆಯಲ್ಲಿ ನಿಂತಿದ್ದ ಟ್ರಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು, ಅರ್ಧ ಕಾರು ಟ್ರಕ್‌ ಕೆಳಗೆ ನುಗ್ಗಿದೆ. ಇದರಿಂದಾಗಿ ಕಾರಿನಲ್ಲಿದ್ದ ಎಲ್ಲಾ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Bengaluru| ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಒಂದೂವರೆ ವರ್ಷದ ಮಗು ದುರ್ಮರಣ

    ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪರ್ಸಾ ಬಜಾರ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಾಕಷ್ಟು ಹರಸಾಹಸದ ಬಳಿಕ ಪೊಲೀಸರು ಕಾರನ್ನು ತುಂಡು ಮಾಡಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.


    ಇನ್ನು ಪ್ರಾಥಮಿಕ ಮೂಲಗಳ ಪ್ರಕಾರ ಅತಿವೇಗದ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಶ್ಲೀಲ ಕಾಮೆಂಟ್ ಕೇಸ್‌ – ಪೊಲೀಸರ ತನಿಖೆಗೆ ವಿಜಯಲಕ್ಷ್ಮಿ ನಿರಾಸಕ್ತಿ 

  • ಮುಡಾ ಹಗರಣ – ಇಡಿಯಿಂದ 300 ಕೋಟಿ ಮೌಲ್ಯದ 142 ಸ್ಥಿರ ಆಸ್ತಿ ಜಪ್ತಿ

    ಮುಡಾ ಹಗರಣ – ಇಡಿಯಿಂದ 300 ಕೋಟಿ ಮೌಲ್ಯದ 142 ಸ್ಥಿರ ಆಸ್ತಿ ಜಪ್ತಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ.

    ಮೈಸೂರಿನ ಸಾಮಾಜಿಕ ಕಾರ್ಯಕರ್ತರಾದ ಗಂಗರಾಜು, ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರಿನ ಕುರಿತು ತನಿಖೆ ನಡೆಸಿದ ಇಡಿ, ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟರ ಹೆಸರಿನಲ್ಲಿದ್ದ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಇದನ್ನೂ ಓದಿ: 189 ಕ್ಷೇತ್ರಗಳ ಶಾಸಕರಿಗೆ ತಲಾ 10 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ

    ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಏಜೆಂಟ್‌ಗಳಾಗಿ ಕೆಲಸ ಮಾಡುವವರ ಹೆಸರಿನಲ್ಲಿ ಸೈಟ್‌ಗಳು ನೋಂದಣಿಯಾಗಿತ್ತು ಎಂದು ಸಹ ಇಡಿ ತನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Delhi Poll | ಗರ್ಭಿಣಿಯರಿಗೆ 21,000 ರೂ., ಪ್ರತಿ ಮಹಿಳೆಗೆ 2,500 ರೂ., 500 ರೂ.ಗೆ ಗ್ಯಾಸ್‌ ಸಿಲಿಂಡರ್‌ – ಬಿಜೆಪಿ ʻಸಂಕಲ್ಪ ಪತ್ರʼ ಬಿಡುಗಡೆ

    ಮೈಸೂರು ಮುಡಾ ಕಚೇರಿ ಸೇರಿ ಹಲವಡೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಇದನ್ನೂ ಓದಿ: ಟೆಂಪೊ, ಮಿನಿವ್ಯಾನ್, ಬಸ್ ನಡುವೆ ಭೀಕರ ಅಪಘಾತ – 9 ಮಂದಿ ಕಾರ್ಮಿಕರು ಸಾವು

  • ಹುಮ್ನಾಬಾದ್‍ನಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡಬೇಕಾದ್ರೆ ಎರಡು ಡೋಸ್ ಲಸಿಕೆ ಕಡ್ಡಾಯ

    ಹುಮ್ನಾಬಾದ್‍ನಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡಬೇಕಾದ್ರೆ ಎರಡು ಡೋಸ್ ಲಸಿಕೆ ಕಡ್ಡಾಯ

    ಬೀದರ್: ಗಡಿ ಜಿಲ್ಲೆ ಬೀದರ್‍ನಲ್ಲಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡ್ರಿ ಮಾತ್ರ ವ್ಯಾಪಾರಸ್ಥರು ವಾಪ್ಯಾರ ಮಾಡಬಹುದು ಇಲ್ಲವಾದ್ರೆ ವ್ಯಾಪಾರ ಮಾಡುವಂತ್ತಿಲ್ಲ ಎಂದು ಹುಮ್ನಾಬಾದ್ ತಾಲೂಕು ಆಡಳಿತ ವ್ಯಾಪಾರಸ್ಥರಿಗೆ 2 ಡೋಸ್ ಲಸಿಕೆ ಕಡ್ಡಾಯ ಮಾಡಿದೆ.

    ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ಬೀದಿ ವ್ಯಾಪಾರಸ್ಥರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ವ್ಯಾಪರಸ್ಥರು ಅಂಗಡಿಗಳ ಮುಂದೆ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣದ ನಕಲು ಪತ್ರ ಲಗತ್ತಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಸಚಿವರಿಗೆ ಬಿಜೆಪಿ ಶಾಸಕರಿಂದಲೇ ಶಾಕ್..!

    ಇಂದು ಹುಮ್ನಾಬಾದ್ ಪಟ್ಟಣದಲ್ಲಿ ವಾಹನಗಳ ಮೂಲಕ ಸಂಚಾರ ಮಾಡಿ ವ್ಯಾಪಾರಿಗಳಿಗೆ ಎರಡು ಡೋಸ್ ಲಸಿಕೆ ಪಡೆಯುವಂತೆ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ತಾಲೂಕು ಆಡಳಿತದಿಂದ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಲಾಯಿತು.

    ಕೊರೊನಾ ಮಹಾಮಾರಿಯಿಂದ ಪಾರಾಗಲು ಎಲ್ಲರೂ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಮಾಡಿಸಬೇಕು. ಇಲ್ಲವಾದ್ರೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಲಸಿಕೆ ಪಡೆಯುವಂತೆ ಬೀದಿ ವ್ಯಾಪಾರಿಗಳಲ್ಲಿ ಮನವೊಲಿಸುತ್ತಾ ಎಚ್ಚರಿಕೆ ನೀಡಿದರು.

  • ಹ್ಯಾಮರ್‌, ಮಚ್ಚಿನಿಂದ ಚಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಬರ್ಬರ ಕೊಲೆ

    ಹ್ಯಾಮರ್‌, ಮಚ್ಚಿನಿಂದ ಚಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಬರ್ಬರ ಕೊಲೆ

    ಹಾಸನ: ಬೆಂಗಳೂರಿನಲ್ಲಿ ರಿಯಲ್‌ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿಯ ಕಮರವಳ್ಳಿ‌ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ

    ಲಿಂಗರಾಜು(43) ಕೊಲೆಯಾದ ವ್ಯಕ್ತಿ. ಮೃತ ಲಿಂಗರಾಜು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ‌ ನಡೆಸುತ್ತಿದ್ದರು. ಕೊರೊನಾ ಲಾಕ್‌ಡೌನ್ ನಂತರ ತಮ್ಮ ಸ್ವಗ್ರಾಮ ಕಮರವಳ್ಳಿಗೆ ಬಂದು ತೋಟದ ಮನೆಯಲ್ಲಿ ವಾಸವಾಗಿದ್ದರು.

    ನಿನ್ನೆ ರಾತ್ರಿ ಕಾರ್ ಮತ್ತು ಬೈಕ್‌ನಲ್ಲಿ ಬಂದ ಸುಮಾರು ಎಂಟು ಜನ ದುಷ್ಕರ್ಮಿಗಳು ಹ್ಯಾಮರ್ ಮತ್ತು ಮಚ್ಚಿನಿಂದ ಕೈಕಾಲು, ತಲೆ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಈ ವೇಳೆ ಬಿಡಿಸಲು ಬಂದ ಸಂಬಂಧಿಕರ ಮೇಲೂ ಹಲ್ಲೆ ನಡೆಸಲಾಗಿದೆ. ಅಷ್ಟೇ ಅಲ್ಲದೆ ಸಾಕ್ಷಿ ನಾಶಪಡಿಸಲು ದುಷ್ಕರ್ಮಿಗಳು ಸಿಸಿಟಿವಿಯ ಡಿವಿಆರ್ ಹೊತ್ತೊಯ್ದಿದ್ದಾರೆ. ಘಟನೆ ಸಂಬಂಧ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಸ್ಟ್ರೇಲಿಯಾ ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಚಿತಾ ಸಹೋದರಿ

    ಆಸ್ಟ್ರೇಲಿಯಾ ಉದ್ಯಮಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಚಿತಾ ಸಹೋದರಿ

    ಬೆಂಗಳೂರು: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ನಿತ್ಯ ರಾಮ್ ಅವರು ಆಸ್ಟ್ರೇಲಿಯಾ ಉದ್ಯಮಿ ಗೌತಮ್ ಅವರ ಜೊತೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದಾರೆ. ವಿವಾಹ ಮುಹೂರ್ತಕ್ಕಾಗಿ ವಧು ನಿತ್ಯಾ ರಾಮ್ ಗೋಲ್ಡನ್ ಬಣ್ಣದ ರೇಷ್ಮೆ ಸೀರೆ ಧರಿಸಿ ಮಿಂಚುತ್ತಿದ್ದರು. ವರ ಗೌತಮ್ ಬಿಳಿ ಬಣ್ಣದ ರೇಷ್ಮೆ ಪಂಚೆ-ಶಲ್ಯ ಧರಿಸಿದ್ದರು.

    ಗೌತಮ್ ಹಾಗೂ ನಿತ್ಯಾ ಮದುವೆಗಾಗಿಯೇ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಸ್ಪೆಷಲ್ ಸೆಟ್ ಹಾಕಲಾಗಿತ್ತು. ಇಲ್ಲಿ ಈ ಜೋಡಿ ಗುರು-ಹಿರಿಯರು ನಿಶ್ಚಯಿಸಿದ್ದ ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ. ಮದುವೆಗೆ ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಬಂದು ನವಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಇವರಿಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ನಿತ್ಯ ರಾಮ್ ಹಾಗೂ ಗೌತಮ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿದೆ. ನಿತ್ಯಾ ರಾಮ್ ತಾಯಿಯ ಸ್ನೇಹಿತರ ಮಗನೇ ಗೌತಮ್. ಹೀಗಾಗಿ ಕುಟುಂಬದವರ ಮೂಲಕ ಪರಿಚಯರಾದ ಗೌತಮ್ ಅವರನ್ನೇ ನಿತ್ಯಾ ವರಿಸಿದ್ದಾರೆ. ಗೌತಮ್ ಉದ್ಯಮಿಯಾಗಿದ್ದು, ಆಸ್ಟ್ರೇಲಿಯಾದಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಾಗಿ ಮದುವೆ ನಂತರ ನಟಿ ನಿತ್ಯಾ ಕೂಡ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಲಿದ್ದಾರೆ.

    ನಿತ್ಯಾ ರಾಮ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ನಂದಿನಿ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿದ್ದರು. ಆದರೆ ಈಗ ಸೀರಿಯಲ್‍ನಿಂದ ನಿತ್ಯಾರಾಮ್ ಹೊರಬಂದಿದ್ದಾರೆ. ಪತಿಯ ಜೊತೆಗೆ ಸಮಯ ಕಳೆಯಲು ನಿರ್ಧರಿಸಿರುವ ನಿತ್ಯಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

  • ಸ್ಟೈಲಿಶ್ ಹುಡುಗರನ್ನು ಕಂಡರೆ ಆಂಟಿ ಆಗ್ತಾಳೆ ಬಲು ತುಂಟಿ

    ಸ್ಟೈಲಿಶ್ ಹುಡುಗರನ್ನು ಕಂಡರೆ ಆಂಟಿ ಆಗ್ತಾಳೆ ಬಲು ತುಂಟಿ

    -ಪತಿಯಿಲ್ಲದ ಸಮಯದಲ್ಲಿ ಪ್ರಿಯಕರನ ಜೊತೆ ಲವ್ವಿಡವ್ವಿ
    -ಬೆಡ್‍ರೂಮಿನಲ್ಲಿ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಕ್ಕೆ ಪತಿಯ ಕೊಲೆ

    ತುಮಕೂರು: ಪ್ರಿಯತಮನ ಜೊತೆ ಲವ್ವಿಡವ್ವಿ ಮಾಡುವಾಗ ಮಹಿಳೆಯೊಬ್ಬಳು ತನ್ನ ಪತಿಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಬೆಡ್‍ರೂಮಿನಲ್ಲಿ ಸಿಕ್ಕಿಬಿದ್ದ ಘಟನೆ ತುಮಕೂರಿನ ನಗರದ ಶಿರಾಗೇಟ್‍ನ ಹೊಂಬಯ್ಯನ ಪಾಳ್ಯದಲ್ಲಿ ನಡೆದಿದೆ.

    ವಿದ್ಯಾ ಪತಿಯನ್ನೇ ಕೊಲೆ ಮಾಡಿದ ಪತ್ನಿ. ಮದುವೆಯಾಗಿ ಮಕ್ಕಳಿದ್ದರೂ ವಿದ್ಯಾಗೆ ಪಡ್ಡೆ ಹುಡುಗರ ಹುಚ್ಚು ಜೋರಾಗಿತ್ತು ಎನ್ನಲಾಗಿದೆ. ಪತಿ ಇಲ್ಲದ ಸಮಯ ನೋಡಿ ವಿದ್ಯಾ ಯುವಕ ಸತೀಶ್ ಅಲಿಯಾಸ್ ಜಾಕಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಪತಿ ಕೆಲಸಕ್ಕೆಂದು ಮುಂಬೈಗೆ ಹೋದಾಗ ಇವರಿಬ್ಬರು ಜೊತೆಯಲ್ಲಿ ಇರುತ್ತಿದ್ದರು. ಭಾನುವಾರ ಮಧ್ಯರಾತ್ರಿ ಪತಿ ಏಕಾಏಕಿಯಾಗಿ ಮನೆಗೆ ಹಿಂದಿರುಗಿದ್ದು, ಈ ವೇಳೆ ಇಬ್ಬರು ಪ್ರಣಯಪಕ್ಷಿಗಳು ಬೆಡ್ ರೂಮಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

    ವಿದ್ಯಾ ತುಮಕೂರು ನಗರದ ಶಿರಾಗೇಟ್‍ನ ಹೊಂಬಯ್ಯನ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಇತ್ತ ಸತೀಶ್ ಇದೇ ಶಿರಾ ಗೇಟ್‍ನ ಪಂಚನಾಥ ರಾಯರ ಪಾಳ್ಯದವನು. ಆಟೋ ಓಡಿಸಿಕೊಂಡಿದ್ದ ಸತೀಶ್‍ನಿಗೆ ಬ್ಯೂಟಿಪಾರ್ಲರ್ ನಡೆಸುವ ಆಂಟಿ ವಿದ್ಯಾ ಪರಿಚಯವಾಗುತ್ತಾಳೆ. ಅಲ್ಲಿಂದ ಇಬ್ಬರ ಕಳ್ಳಾಟ ಶುರುವಾಗುತ್ತದೆ.

    ವಿದ್ಯಾಳ ಪತಿ ಹನುಮೇಗೌಡ ಹೋಟೆಲ್ ಉದ್ಯಮ ನಡೆಸುತ್ತಾರೆ. ಮುಂಬೈನಲ್ಲೂ ಉದ್ಯಮ ಇರುವುದರಿಂದ ಅಲ್ಲಿಗೆ ಹೋಗಿ ಭಾನುವಾರ ಹಿಂದಿರುಗಿದ್ದರು. ಈ ವೇಳೆ ವಿದ್ಯಾ ಹಾಗೂ ಸತೀಶ್ ಜೊತೆಯಲ್ಲಿ ಇರೋದನ್ನು ಕಂಡ ಹನುಮೇಗೌಡ ಕೆಂಡಾಮಂಡಲವಾಗಿದ್ದಾನೆ. ತಮಗೆ ಉಳಿಗಾಲ ಇಲ್ಲ ಎಂದು ಭಾವಿಸಿದ ಪ್ರಿಯತಮ ಸತೀಶ್ ಹಾಗೂ ವಿದ್ಯಾ ಸೇರಿ ಚಾಕುವಿನಿಂದ ಚುಚ್ಚಿ ಹನುಮೇಗೌಡನ ಕೊಲೆ ಮಾಡಿ ಪರಾರಿಯಾಗಿದ್ದರು.

    ತುಮಕೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಮಾಡಿದ ಈ ಪ್ರಣಯಪಕ್ಷಿಗಳ ಹೆಡೆಮುರಿಕಟ್ಟಿದ್ದಾರೆ.

  • ಶೀಘ್ರದಲ್ಲೇ ಉದ್ಯಮಿ ಜೊತೆ ನಟಿ ಕಾಜಲ್ ಅಗರ್‌ವಾಲ್‌ ಮದುವೆ?

    ಶೀಘ್ರದಲ್ಲೇ ಉದ್ಯಮಿ ಜೊತೆ ನಟಿ ಕಾಜಲ್ ಅಗರ್‌ವಾಲ್‌ ಮದುವೆ?

    ಹೈದರಾಬಾದ್: ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್‌ ಶೀಘ್ರದಲ್ಲೇ ಉದ್ಯಮಿ ಜೊತೆ ಮದುವೆ ಆಗಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

    ಇತ್ತೀಚೆಗೆ ಕಾಜಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ಲಕ್ಷ್ಮಿ ಮಂಚು, ಕಾಜಲ್ ಅವರಿಗೆ ಮದುವೆಯಾವಾಗ ಎಂದು ಪ್ರಶ್ನಿಸಿದ್ದಾರೆ. ಆಗ ಕಾಜಲ್, ನಾನು ಶೀಘ್ರದಲ್ಲೇ ಮದುವೆಯಾಗಲು ನಿರ್ಧರಿಸಿದ್ದೇನೆ ಎಂದಿದ್ದಾರೆ. ಆದರೆ ಮದುವೆಯಾಗುವ ವ್ಯಕ್ತಿ ಯಾರೆಂಬುದನ್ನು ಕಾಜಲ್ ರಿವೀಲ್ ಮಾಡಲಿಲ್ಲ.

    ಇದಾದ ಬಳಿಕ ಲಕ್ಷ್ಮಿ, ನಟಿ ಕಾಜಲ್ ಅವರಿಗೆ ತಮ್ಮ ಪತಿ ಹೇಗಿರಬೇಕೆಂದು ಪ್ರಶ್ನಿಸಿದ್ದಾರೆ. ಆಗ ಅವರು ಸಾಕಷ್ಟು ವಿಷಯಗಳಿದೆ. ಆದರೆ ಮುಖ್ಯವಾಗಿ ಅವರು ತುಂಬಾ ಕಾಳಜಿ ತೋರಿಸಬೇಕು ಹಾಗೂ ಆಧ್ಯಾತ್ಮಿಕನಾಗಿರಬೇಕು ಎಂದು ಕಾಜಲ್ ತಿಳಿಸಿದ್ದಾರೆ.

    ಈ ಮೊದಲು ಬೇರೆ ಸಂದರ್ಶನದಲ್ಲಿ ಕಾಜಲ್, “ನಾನು ಚಿತ್ರರಂಗದವರನ್ನು ಮದುವೆಯಾಗುವುದಿಲ್ಲ. ಚಿತ್ರರಂಗದಲ್ಲಿ ಇರದ ವ್ಯಕ್ತಿ ಜೊತೆ ಡೇಟ್ ಮಾಡುತ್ತೇನೆ” ಎಂದು ಹೇಳಿದ್ದರು. ಸದ್ಯ ಈಗ ಕಾಜಲ್ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ವೆಬ್‌ಸೈಟ್‌ವೊಂದರ ಪ್ರಕಾರ, ಇದು ಅರೆಂಜ್ ಮ್ಯಾರೇಜ್ ಆಗಿದ್ದು, ಕಾಜಲ್ ಪೋಷಕರೇ ಹುಡುಗನನ್ನು ಹುಡುಕಿದ್ದಾರೆ ಎನ್ನಲಾಗಿದೆ. ಆದರೆ ಮದುವೆಗೆ ಸಂಬಂಧಿಸಿದಂತೆ ಕಾಜಲ್ ಅವರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಹೇಳಲಾಗುತ್ತಿದೆ.

    ಸದ್ಯ ನಟ ಕಮಲ್ ಹಾಸನ್ ನಟಿಸುತ್ತಿರುವ ‘ಇಂಡಿಯನ್-2’ ಚಿತ್ರದಲ್ಲಿ ಕಾಜಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿದ್ದಾರೆ.

  • ಉದ್ಯಮಿ ಹತ್ಯೆಗೆ ಮಾಜಿ ಪ್ರೇಯಸಿ ಸ್ಕೆಚ್- ಸೀಟ್ ಬೆಲ್ಟ್‌ನಿಂದ ಕತ್ತು ಬಿಗಿದು ಹತ್ಯೆಗೆ ಯತ್ನ

    ಉದ್ಯಮಿ ಹತ್ಯೆಗೆ ಮಾಜಿ ಪ್ರೇಯಸಿ ಸ್ಕೆಚ್- ಸೀಟ್ ಬೆಲ್ಟ್‌ನಿಂದ ಕತ್ತು ಬಿಗಿದು ಹತ್ಯೆಗೆ ಯತ್ನ

    ಬೆಂಗಳೂರು: ಆಸ್ತಿಗಾಗಿ ಪ್ರೀತಿ ಮಾಡಿದ ವ್ಯಕ್ತಿಯನ್ನೇ ಯುವತಿ ಕೊಲ್ಲಲು ಪ್ರಯತ್ನ ಮಾಡಿರುವ ಘಟನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ.

    ಪವಿತ್ರ ಕೊಲೆ ಮಾಡಲು ಯತ್ನಿಸಿದ ಯುವತಿ. ಪವಿತ್ರ ಆರ್ಕೆಸ್ಟ್ರಾ ಸಿಂಗರ್ ಆಗಿದ್ದು, ಕಳೆದ ಕೆಲ ವರ್ಷಗಳಿಂದ 2015 ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಫರ್ಧಿಸಿದ್ದ ಉದ್ಯಮಿ ಪ್ರಭಾಕರ್ ರೆಡ್ಡಿ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದರು. ಸೆಪ್ಟಂಬರ್ 20ರಂದು ಪವಿತ್ರ ಇದ್ದಕ್ಕಿದ್ದಂತೆ ಪ್ರಭಾಕರ್ ರೆಡ್ಡಿಯನ್ನು ಆರ್ ಆರ್ ನಗರದಲ್ಲಿ ಭೇಟಿ ಮಾಡಿ ಕಾರಲ್ಲಿ ನೈಸ್ ರಸ್ತೆಗೆ ಕರೆದುಕೊಂಡು ಹೋಗಿದ್ದಳು.

    ಕಾರಲ್ಲಿ ಹೋಗುತ್ತಿದ್ದ ವೇಳೆ ಪವಿತ್ರ ಆಸ್ತಿ ಬರೆದುಕೊಡುವಂತೆ ಒತ್ತಾಯಿಸಿ ಗಲಾಟೆ ಮಾಡಿದ್ದಾಳೆ. ಅಲ್ಲದೆ ಕಾರಿನ ಸೀಟ್‍ ಬೆಲ್ಟ್‌ನಿಂದ ಕತ್ತು ಬಿಗಿದು ಪ್ರಭಾಕರ್ ರನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ. ಪ್ರಭಾಕರ್ ರೆಡ್ಡಿ ಈಗಾಗಲೇ ಪವಿತ್ರಗೆ 2 ಕೆಜಿ ಚಿನ್ನ, 5 ಕೋಟಿ ಮೌಲ್ಯದ ಕಟ್ಟಡವನ್ನು ನೀಡಿದ್ದಾರೆ. ಆದರೂ ಎಲ್ಲಾ ಆಸ್ತಿ ಬರೆದುಕೊಡುವಂತೆ ಪವಿತ್ರ, ಪ್ರಭಾಕರ್ ಗೆ ಧಮ್ಕಿ ಹಾಕಿ ಕೊಲೆಗೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಪ್ರಭಾಕರ್ ರೆಡ್ಡಿ ಅವರು, ಕುಟುಂಬದಲ್ಲಿ ಗಲಾಟೆ ಅಷ್ಟೇ. ನೈಸ್ ರೋಡಿನಲ್ಲಿ ಬರುತ್ತಿರುವಾಗ ನಮ್ಮಿಬ್ಬರ ನಡುವೆ ಜಗಳವಾಯಿತು. ಈ ವೇಳೆ ಪವಿತ್ರ ಸೀಟ್ ಬೆಲ್ಟಿನಿಂದ ಕೊಲೆ ಮಾಡಲು ಯತ್ನಿಸಿದ್ದಳು. ಅಲ್ಲದೆ ನೀರಿನ ಬಾಟಲಿಯಿಂದ ನನ್ನನ್ನು ಹಲ್ಲೆ ಮಾಡಿದ್ದಳು. ಹಲ್ಲೆಯಿಂದ ನನ್ನ ಕಿವಿಯಲ್ಲಿ ರಕ್ತ ಬರುತ್ತಿದ್ದ ಕಾರಣ ನಾನು ಆಸ್ಪತ್ರೆಗೆ ಹೋಗಿ ಪೊಲೀಸ್ ಠಾಣೆಗೆ ಹೋದೆ. ಪವಿತ್ರ ನನಗೆ ಒಂದೂವರೆ ವರ್ಷದಿಂದ ಪರಿಚಯ. ನಾವಿಬ್ಬರು ಜೊತೆಯಲ್ಲಿಯೇ ಇದ್ದೆವು. ಈ ನಡುವೆ ಕುಟುಂಬದಲ್ಲಿ ಜಗಳವಾಗಿದೆ. ಪವಿತ್ರ ನನ್ನನ್ನು ಇಷ್ಟಪಡುತ್ತಿದ್ದಳು ಎಂದು ತಿಳಿಯಿತು. ಆಗ ಇಬ್ಬರು ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿ ಇದ್ದೆವು. ಆಕೆಗೆ ನಾನು ಮನೆ ಕೊಡಿಸಿದೆ. ನನಗೆ ಕಮಿಟ್ಸ್ ಮೆಂಟ್ ಇದೆ, ನನಗೆ ಏನಾದರೂ ಮಾಡಿಸು ಎಂದು ಬೇಡಿಕೆಯಿಟ್ಟಿದ್ದಳು ಎಂದು ಹೇಳಿದ್ದಾರೆ.

    ಪವಿತ್ರಗೆ ಈಗಾಗಲೇ ಮದುವೆಯಾಗಿ ಡಿವೋರ್ಸ್ ಆಗಿದ್ದು, ಆಕೆಗೆ 5 ವರ್ಷದ ಮಗು ಕೂಡ ಇದೆ. ಮೂಲತಃ ಚನ್ನಪಟಣ್ಣದವಳಾಗಿರುವ ಪವಿತ್ರ ಈಗ ಬೆಂಗಳೂರಿನ ಆರ್‍ಆರ್ ನಗರದಲ್ಲಿ ಇದ್ದಾರೆ. ನಾನು ಪೊಲೀಸರಿಗೆ ಅರೆಸ್ಟ್ ಮಾಡಿ ಎಂದು ಒತ್ತಡ ಹಾಕಲಿಲ್ಲ. ಇದಾದ ಬಳಿಕ ನಾನು ಮಾತನಾಡಲು ಆಕೆಯನ್ನು ಕರೆದೆ. ಆದರೆ ಅವರು ಒಪ್ಪಲಿಲ್ಲ. ಫೈನಾನ್ಸ್ ನಲ್ಲಿ ತೊಂದರೆ ಆದಾಗ ಪವಿತ್ರ ನನಗೆ ಸಹಾಯ ಮಾಡಿದ್ದಳು. ಕಷ್ಟದ ಸಂದರ್ಭದಲ್ಲಿ ನನ್ನ ಪರವಾಗಿ ಯಾರು ಬರದಿದ್ದಾಗ ಆಕೆ ನನ್ನ ಸಹಾಯಕ್ಕೆ ಬಂದಿದ್ದಳು. ಸಹಾಯ ಮಾಡಿದ್ದಾಳೆ ಎಂದು ಮಾನವೀಯತೆ ದೃಷ್ಟಿಯಿಂದ ನಾನು ಅವರಿಗೆ ತುಂಬಾ ಗೌರವ ನೀಡುತ್ತಿದ್ದೆ. ದೌರ್ಜನ್ಯ ಮಾಡಿದ್ದಕ್ಕೆ ನಾನು ದೂರು ನೀಡಿದೆ ಹೊರತು ಬೇರೆ ವಿಷಯಕ್ಕೆ ಅಲ್ಲ ಎಂದು ಪ್ರಭಾಕರ್ ತಿಳಿಸಿದ್ದಾರೆ.

    ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

  • ಸಿದ್ಧಾರ್ಥ್ ‘ಕಾಫಿರಾಜ’ನಾದ ಕಥೆಯನ್ನು ಓದಿ

    ಸಿದ್ಧಾರ್ಥ್ ‘ಕಾಫಿರಾಜ’ನಾದ ಕಥೆಯನ್ನು ಓದಿ

    ಚಿಕ್ಕಮಗಳೂರು: ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಹುಟ್ಟಿದ್ದರು. ಆ ಬಳಿಕ ಪ್ರಾಥಮಿಕ ಶಿಕ್ಷಣ, ಉದ್ಯಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಕಾಫಿರಾಜನಾದ ಕಥೆಯನ್ನೊಮ್ಮೆ ನೀವು ಓದಲೇ ಬೇಕು.

    ಸಿದ್ಧಾರ್ಥ್ ಹೆಗ್ಡೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚೇತನಹಳ್ಳಿಯ ಗಂಗಯ್ಯ ಹೆಗ್ಡೆ ಹಾಗೂ ವಾಸಂತಿ ದಂಪತಿಯ ಏಕೈಕ ಪುತ್ರ. ಚಿಕ್ಕಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದು, 1993-84ರಲ್ಲಿ ಮುಂಬೈನ ಜೆ.ಎಂ ಫೈನಾನ್ಸಿಯಲ್ ಲಿಮಿಟೆಡ್‍ನಲ್ಲಿ ಕೆಲಸಕ್ಕೆ ಸೇರಿಕೊಂಡರು.

    ಬಳಿಕ ಮಹೇಂದ್ರ ಕಂಪನಿಯ ಮ್ಯಾನೆಜ್ಮೆಂಟ್‍ನ ಸೆಕ್ಯೂರಿಟಿ ವಹಿವಾಟಿನಲ್ಲಿ ತರಬೇತಿದಾರನಾಗಿ ಕೆಲಸ ಮಾಡಿದ್ದರು. 2 ವರ್ಷಗಳ ಬಳಿಕ ಅಲ್ಲಿಂದ ವಾಪಸ್ ಬಂದು ತಂದೆ ಬಳಿ 2 ಲಕ್ಷ ಹಣ ಪಡೆದು ಮುಂಬೈಗೆ ಹೋಗಿದ್ದರು. ಅಲ್ಲಿ ನಷ್ಟವಾದ ಬಳಿಕ ಮತ್ತೆ ಅಪ್ಪನ ಬಳಿ ಬ್ಯುಸಿನೆಸ್‍ಗಾಗಿ 5 ಲಕ್ಷ ಹಣ ಕೇಳಿದ್ದರು. ಆಗ ಅವರ ತಂದೆ 2 ಲಕ್ಷ ಹಾಳು ಮಾಡಿದ್ದೀಯಾ ಎಂದು ಜರಿದಿದ್ದರು. ಬ್ಯಾಂಕಿನಲ್ಲಿ ಸಾಲ ಹಾಗೂ ಕಾಫಿ ತೋಟ ಮಾರಿ 5 ಲಕ್ಷ ಹಣ ಕೊಟ್ಟಿದ್ದರು.

    ಅಪ್ಪ ಕಷ್ಟದ ಮಧ್ಯೆಯೂ ತಂದು ಕೊಟ್ಟ ಆ ಹಣ ಸಿದ್ದಾರ್ಥ್ ಅವರ ಬದುಕಿನ ದಿಕ್ಕನ್ನೇ ಬದಲಿಸಿತ್ತು. 1993ರಲ್ಲಿ ಕಾಫಿ ಉದ್ದಿಮೆಗೆ ಕಾಲಿಟ್ಟ ಸಿದ್ದಾರ್ಥ್, ತಮ್ಮ ಜೀವಮಾನದಲ್ಲಿ ಮತ್ತೆಂದು ತಿರುಗಿಯೂ ನೋಡಲಿಲ್ಲ. 24ನೇ ವಯಸ್ಸಿಗೆ ಸ್ಟಾಕ್ ಮಾರ್ಕೆಟ್‍ನಲ್ಲಿ ಷೇರು ಖರೀದಿಸಿದ್ದರು. ಚಿಕ್ಕಮಗಳೂರು-ಹಾಸನ-ಮಡಿಕೇರಿಯಲ್ಲಿ ನಷ್ಟದಲ್ಲಿದ್ದ ಕಾಫಿ ತೋಟಗಳನ್ನು ಖರೀದಿಸಿ, ಹಂತಹಂತವಾಗಿ ಬೆಳೆಯುತ್ತಾ 13 ಸಾವಿರಕ್ಕೂ ಅಧಿಕ ಹೆಕ್ಟೇರ್ ಕಾಫಿ ತೋಟದ ಮಾಲೀಕರಾದರು.

    1996ರಲ್ಲಿ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಮೊದಲ ಕಾಫಿ ಡೇ ಆರಂಭಿಸಿದ್ದರು. ಒಂದು ನೂರಾಗಿ, ನೂರು ಐನೂರಾಗಿ ವಿಶ್ವಾದ್ಯಂತ 10ಕ್ಕೂ ಹೆಚ್ಚು ದೇಶ ಸೇರಿದಂತೆ 1772 ಕಾಫಿ ಡೇ ಔಟ್‍ಲೇಟ್‍ನ ಒಡೆಯರಾದರು. ವಾರ್ಷಿಕ 28 ಸಾವಿರ ಟನ್ ಕಾಫಿ ರಫ್ತು ಮಾಡುವ ಮೂಲಕ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದರು. ಕಾಫಿ ಡೇಗಳಿಗೆ ಬೇಕಾದ ಬೀಜವನ್ನು ಸ್ವಂತ ತೋಟದಿಂದಲೇ ಬೆಳೆಯುತ್ತಿದ್ದರು. ಕಾಫಿಯ ಜೊತೆ 10ಕ್ಕೂ ಹೆಚ್ಚು ವಿವಿಧ ಕಂಪನಿಗಳನ್ನು ಆರಂಭಿಸಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ ನಡೆದಾಡುವ ದೈವ ಆಗಿದ್ದರು.

    ಸಿದ್ಧಾರ್ಥ್ ಅವರು ಸಭೆ ಆರಂಭಕ್ಕೂ ಮೊದಲೇ ನಮ್ಮನ್ನು ಉಳಿಸೋದೆ ಹಸಿರು, ಹಸಿರನ್ನು ಬೆಳೆಸಿ ಎಂದು ಸಾರಿ-ಸಾರಿ ಹೇಳುತ್ತಿದ್ದರು. ಕಾರ್ಮಿಕರ ಮಕ್ಕಳ ಮದುವೆ, ಮನೆಗಾಗಿ ಬಂದವರಿಗೆಲ್ಲ ಸಹಾಯ ಮಾಡುತ್ತಿದ್ದ ಇವರನ್ನು ಜನ ಪೂಜ್ಯ ಭಾವನೆಯಿಂದಲೇ ನೋಡುತ್ತಿದ್ದರು.

  • ಇದು ಅತ್ಯಂತ ನೋವಿನ ಸಂಗತಿ, ಬಹಳ ಬೇಸರವಾಗ್ತಿದೆ: ಯು.ಟಿ ಖಾದರ್

    ಇದು ಅತ್ಯಂತ ನೋವಿನ ಸಂಗತಿ, ಬಹಳ ಬೇಸರವಾಗ್ತಿದೆ: ಯು.ಟಿ ಖಾದರ್

    ಮಂಗಳೂರು: ಇದು ಅತ್ಯಂತ ನೋವಿನ ಸಂಗತಿ ಹಾಗೂ ಬಹಳ ಬೇಸರವಾಗುತ್ತಿದೆ ಎಂದು ಉಳ್ಳಾಲ ಶಾಸಕ ಯು.ಟಿ ಖಾದರ್ ಅವರು ಹೇಳಿದರು.

    ಸಿದ್ಧಾರ್ಥ್ ಮೃತದೇಹ ಸಿಕ್ಕಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಿದ್ಧಾರ್ಥ್ ಅವರು ಈ ರೀತಿ ನಮಗೆ ಸಿಕ್ಕಿದ್ದು, ಒಂದು ರೀತಿಯಲ್ಲಿ ಬೇಸರ ಆಗುತ್ತಿದೆ. ಮೊದಲು ಸಿದ್ಧಾರ್ಥ್ ಮೃತದೇಹವನ್ನು ಸ್ಥಳೀಯರು ನೋಡಿದ್ದಾರೆ. ಮೃತದೇಹವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂಬುದು ಚರ್ಚೆ ಮಾಡುತ್ತೇವೆ. ಅದಕ್ಕೂ ಮೊದಲು ಕೆಲವು ಪ್ರಕ್ರಿಯೆ ಇದೆ. ಅದನ್ನು ಮುಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

    ಬಳಿಕ ಮೃತದೇಹವನ್ನು ಪತ್ತೆ ಮಾಡಿದ ರಿತೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವು ನದಿಯಲ್ಲಿ ಹೋಗುವಾಗ ಬೆಳಗ್ಗೆ 7 ಗಂಟೆಗೆ ಮೃತದೇಹ ಸಿಕ್ಕಿದೆ. ಅಲ್ಲದೆ ಸಿದ್ಧಾರ್ಥ್ ಅವರನ್ನು ಹುಡುಕಲು ನಮ್ಮ ಸಂಸ್ಥೆಯಿಂದ ಸೂಚನೆ ಸಿಕ್ಕಿತ್ತು. ಮಂಗಳವಾರ ರಾತ್ರಿ ಸಿಗದ ಕಾರಣ ಇಂದು ಬೆಳಗ್ಗೆ ನೋಡಿದ ತಕ್ಷಣ ಸಿದ್ಧಾರ್ಥ್ ಅವರೇ ಎಂದು ಅನುಮಾನ ಬಂತು. ಬಳಿಕ ಅವರ ಮೃತದೇಹವನ್ನು ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಹೇಳಿದ್ದಾರೆ.

    ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡರಾತ್ರಿವರೆಗೆ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಮುಂಜಾನೆ 4 ಗಂಟೆ ಸುಮಾರಿನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿರುವ ಕುರಿತು ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಆ ರಸ್ತೆಯಲ್ಲಿ ಹೊಯಿಗೆ ಬಜಾರ್ ಎಂಬ ಪ್ರದೇಶವಿದೆ. ಇಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.