Tag: businessman

  • ʻನನ್ನ ಸಾವಿಗೆ ಸಚಿವ ಜಮೀರ್ ಕಾರಣʼ – ರಕ್ತದಲ್ಲಿ ಡೆತ್‌ನೋಟ್‌ ಬರೆದು ಹೈಡ್ರಾಮಾ!

    ʻನನ್ನ ಸಾವಿಗೆ ಸಚಿವ ಜಮೀರ್ ಕಾರಣʼ – ರಕ್ತದಲ್ಲಿ ಡೆತ್‌ನೋಟ್‌ ಬರೆದು ಹೈಡ್ರಾಮಾ!

    – ತೆಲಂಗಾಣದ ಮೆಕ್ಕೆಜೋಳ ಉದ್ಯಮಿಗಳ ಪರ ನಿಂತ್ರಾ ಜಮೀರ್‌?

    ಚಿಕ್ಕಬಳ್ಳಾಪುರ: ರಾಜ್ಯದ ಮೆಕ್ಕೆಜೋಳದ (Corn) ವ್ಯಾಪಾರಿ ಹಾಗೂ ರೈತರಿಗೆ ಸಹಕಾರ ನೀಡುವ ಬದಲು ತೆಲಂಗಾಣದ ಮೆಕ್ಕೆಜೋಳದ ಉದ್ಯಮಿಗಳಿಗೆ ಸಪೋರ್ಟ್ ಮಾಡಿದ್ದಾರೆ ಅಂತ ಸಚಿವ ಜಮೀರ್ ಅಹಮದ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಚಿವರ ನಡೆ ಖಂಡಿಸಿ, ವ್ಯಾಪಾರಿ ರಾಮಕೃಷ್ಣ ಆಲಿಯಾಸ್ ಜೊನ್ನಲ ಕಿಟ್ಟಿ ಸಚಿವ ಜಮೀರ್ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದರು. ನನ್ನ ಸಾವಿಗೆ ಸಚಿವ ಜಮೀರ್ ಅಹಮದ್ (Zameer Ahmed Khan) ಕಾರಣ ಅಂತ ರಕ್ತದಲ್ಲಿ ಡೆತ್‍ನೋಟ್ ಬರೆದು ತಂದು ಹೈಡ್ರಾಮಾ ನಡೆಸಿದರು.

    ಏನಿದು ವಿವಾದ?
    ರೈತ (Farmer) ರಾಮಕೃಷ್ಣ ಅಲಿಯಾಸ್ ಜೊನ್ನಲಕಿಟ್ಟಿ, ರಕ್ತದಲ್ಲಿ ಬರೆದ ಡೆತ್ ನೋಟ್ (Deathnote) ತಂದು ಸಚಿವ ಜಮೀರ್ ಸಮ್ಮುಖದಲ್ಲೇ ನನಗೆ ಹಣ ಕೊಡಿಸಿ, ಇಲ್ಲದಿದ್ರೆ ನಾನು ವಿಷ ಕುಡಿದು ಸಾಯ್ತೀನಿ, ನೇಣು ಹಾಕೋತಿನಿ ಅಂತ ಕಣ್ಣೀರು ಹಾಕಿದ್ದಾರೆ. ರಾಮಕೃಷ್ಣ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಬಳಿಯ ದಿಗೂರು ನಿವಾಸಿ. ದಕ್ಷಿಣ ಭಾರತದಲ್ಲೇ (South India) ಅತಿ ಹೆಚ್ಚು ಮೆಕ್ಕೆಜೋಳದ ಬ್ಯುಸಿನೆಸ್ ಮಾಡುವ ಈ ರಾಮಕೃಷ್ಣ ಕಳೆದ 4-5 ತಿಂಗಳ ಹಿಂದೆ ಹೈದರಾಬಾದ್ ನ ಅಕ್ಬರ್, ಸದ್ದಾಂ, ನಾಸೀರ್ ಅನ್ನೋ ಮೂವರು ಅಣ್ಣ ತಮ್ಮಂದಿರಿಗೆ 1 ಕೋಟಿ 89 ಲಕ್ಷ ರೂಪಾಯಿ ಮೆಕ್ಕೆಜೋಳ ಸೇಲ್ ಮಾಡಿದ್ರು. ಆದ್ರೆ ಮೂವರು ಅಣ್ಣ ತಮ್ಮಂದಿರು ರಾಮಕೃಷ್ಣಗೆ ಹಣ ನೀಡದೇ ಸತಾಯಿಸುತ್ತಿದ್ದರು. ಇದ್ರಿಂದ ನೊಂದ ರಾಮಕೃಷ್ಣ ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಅಕ್ಬರ್, ಸದ್ದಾಂ, ನಾಸೀರ್ ವಿರುದ್ಧ ದೂರು ದಾಖಲಿಸಿದ್ರು. ಹೀಗಾಗಿ ಪೇರೇಸಂದ್ರ ಪಿಎಸ್‍ಐ (PSI) ಜಗದೀಶ್ ರೆಡ್ಡಿ ಅಕ್ಬರ್ ಪಾಷಾ ನನ್ನ ಬಂಧಿಸಿ ಕರೆತಂದಿದ್ರು. ಈ ವೇಳೆ ಪಿಎಸ್‌ಐಗೆ ಕರೆ ಮಾಡಿ ಮಾತನಾಡಿದ್ದ ಸಚಿವ ಜಮೀರ್ ಅಹಮದ್, ಅವರು ನಮ್ಮ ರಿಲೇಶನ್ ಇದ್ದಾರೆ ಸ್ವಲ್ಪ ಟೈಂ ಕೊಡಿ ಸೆಟಲ್ ಮಾಡಿಕೊಡ್ತಾರೆ ಅಂತ ಮಾತನಾಡಿದ್ರು. ಈಗ ಇದೇ ಮಾತು ಸಚಿವ ಜಮೀರ್ ಅಹಮದ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ

    ಸಚಿವ ಜಮೀರ್ ಅಹಮದ್ ಹೇಳಿದ್ದೇನು..?
    ಅಂದಹಾಗೆ ಕಳೆದ 1 ವಾರದ ಹಿಂದೆ ಈ ಆಡಿಯೋ ವೈರಲ್ ಆಗಿ ಸಚಿವ ಜಮೀರ್ ಮಾತುಗಳು ಪಿಎಸ್‍ಐ ಮೇಲೆ ಪ್ರಭಾವ ಬೀರಿರೋದು ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಇಂದು ಚಿಕ್ಕಬಳ್ಳಾಪುರ ನಗರದ ಷಾದಿ ಮಹಲ್‌ಗೆ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಸಚಿವ ಜಮೀರ್ ಅಹಮದ್ ಎದುರೇ ಆಗಮಿಸಿದ ದೂರುದಾರ ರೈತ ಹಾಗೂ ವ್ಯಾಪಾರಿ ರಾಮಕೃಷ್ಣ ರಕ್ತದಲ್ಲಿ ಬರೆದ ಡೆತ್ ನೋಟ್ ಹಿಡಿದು ಬಂದು, ಸರ್ ನನಗೆ ಹಣ ಕೊಡಿಸಿ ಇಲ್ಲ ಅಂದ್ರೆ ಡೆತ್ ನೋಟ್ ತಂದಿದ್ದೀನಿ, ನಾನು ವಿಷ ಕುಡಿದು ನೇಣು ಹಾಕ್ಕೊಂಡು ಸಾಯ್ತೀನಿ ಅಂತ ಸಚಿವ ಜಮೀರ್ ಅಹಮದ್ ಎದುರೇ ಕಣ್ಣೀರು ಹಾಕಿದರು. ಈ ವೇಳೆ ರಾಮಕೃಷ್ಣ ವಿರುದ್ದವೇ ಸಚಿವ ಜಮೀರ್ ಸಿಡಿಮಿಡಿಗೊಂಡರು. ನಂತರ ರೈತ-ವ್ಯಾಪಾರಿ ರಾಮಕೃಷ್ಣನನ್ನ ಸಮಾಧಾನ ಮಾಡಿ ಪೊಲೀಸರು ಕಾರ್ಯಕ್ರಮದಿಂದ ಹೊರೆಗೆ ಕರೆತಂದರು. ಕಾರ್ಯಕ್ರಮ ಮುಗಿದ ನಂತರ ಈ ಬಗ್ಗೆ ಮಾತನಾಡಿದ ಜಮೀರ್ ಅಹಮದ್ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿ ನಾನು ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ, ನಾಳೆಯೇ ತೆಲಂಗಾಣದ ಉದ್ಯಮಿ ಅಕ್ಬರ್ ನನ್ನ ಕರೆಸಿ ಅವರಿಗೆ ಹಣ ಸೆಟ್ಲ್‍ಮೆಂಟ್ ಮಾಡಿಕೊಳ್ಳುವಂತೆ ಹೇಳುತ್ತೇನೆ ಅಂತ ಹೇಳಿ ಚಿಕ್ಕಬಳ್ಳಾಪುರದಿಂದ ಹೊರಟರು.

    ಸಚಿವ ಜಮೀರ್ ಅಹಮದ್ ವಿರುದ್ಧ ರೈತರ ಆಕ್ರೋಶ!
    ಇನ್ನೂ ರೈತ ರಾಮಕೃಷ್ಣಗೆ ಮೆಕ್ಕೆಜೋಳ ಮಾರಾಟ ಮಾಡಿರೋ ರೈತರು ಸಹ ಕಾರ್ಯಕ್ರಮಕ್ಕೆ ಆಗಮಿಸಿ ಸಚಿವ ಜಮೀರ್ ಅಹಮದ್ ವಿರುದ್ಧ ಆಕ್ರೋಶ ಹೊರಹಾಕಿದರು. ಸಚಿವರ ಮಧ್ಯ ಪ್ರವೇಶ ಮಾಡಿ ಪಿಎಸ್‍ಐಗೆ ಪೋನ್ ಮಾಡಿದ್ರಿಂದಲೇ ದುಡ್ಡು ಕೊಡ್ತೀವಿ ಅಂತ ಬಂದ ಆರೋಪಿಗಳು ದುಡ್ಡು ಕೊಡದೆ ವಾಪಸ್ ಹೋಗಿದ್ದಾರೆ. ನಮಗೆ ಈಗ ದುಡ್ಡು ಕೋಡೋವರು ಯಾರು? ಜಮೀರ್ ಅಹಮದ್ ಅವರು ಕೊಡ್ತಾರಾ ಅಂತ ಅವರ ವಿರುದ್ದವೇ ಆಕ್ರೋಶ ಹೊರಹಾಕಿದರು. ರಾಜ್ಯದ ಮೆಕ್ಕೆಜೋಳದ ವ್ಯಾಪಾರಿ-ರೈತರ ಪರ ನಿಲ್ಲುವ ಬದಲು ಸಚಿವ ಜಮೀರ್ ಅಹಮದ್ ತೆಲಂಗಾಣ ಮೂಲದ ಮೆಕ್ಕೆಜೋಳದ ಉದ್ಯಮಿಗಳು ವಂಚಕರ ಪರ ನಿಂತು ಈಗ ಇರಲಾರದೆ ಇರುವೆ ಬಿಟ್ಟುಕೊಂಡೇ ಎಂಬಂತಾಗಿದ್ದಾರೆ.

  • ರಾಜ್ಯದಲ್ಲಿ ಉದ್ಯಮ ವಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ಸರ್ಕಾರದ ಗಮನಕ್ಕೆ ತರಲು ಮುಂದಾದ FKCCI

    ರಾಜ್ಯದಲ್ಲಿ ಉದ್ಯಮ ವಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ಸರ್ಕಾರದ ಗಮನಕ್ಕೆ ತರಲು ಮುಂದಾದ FKCCI

    – ಸೂಕ್ಷ್ಮ-ಸಣ್ಣ ಕೈಗಾರಿಕಾ ವಲಯಕ್ಕೆ ಪ್ರತ್ಯೇಕ ನೀತಿ ರೂಪಿಸುವಂತೆ ಮನವಿ ಸಲ್ಲಿಸಲು ನಿರ್ಧಾರ
    – 10 ಲಕ್ಷ ಉದ್ಯಮಿಗಳನ್ನು ರೂಪಿಸುವ ಗುರಿ

    ಮಡಿಕೇರಿ: ಉದ್ಯಮ ವಲಯವನ್ನು (Industry sector) ಕಾಡುತ್ತಿರುವ ಸಮಸ್ಯೆಗಳನ್ನ ರಾಜ್ಯ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಇದರಲ್ಲಿ ಮೂಲಸೌಕರ್ಯಗಳ ಕೊರತೆಯೂ ಸೇರಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (FKCCI)ಯ ಅಧ್ಯಕ್ಷೆ ಉಮಾ ರೆಡ್ಡಿ ತಿಳಿಸಿದರು.

    ತಮ್ಮ ‘ವಿಷನ್ ಸ್ಟೇಟ್‌ಮೆಂಟ್ 2025–26’ನ್ನು ಇಲ್ಲಿನ ಕ್ಲಬ್ ಮಹೀಂದ್ರ ಹೋಟೆಲ್‌ನಲ್ಲಿ ಶನಿವಾರ ಬಿಡುಗಡೆ ಮಾಡಿದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಎಫ್‌ಕೆಸಿಸಿಐ ಸಂಸ್ಥೆಯು ಉದ್ಯಮಿಗಳು ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತದೆ. ಇತ್ತೀಚೆಗೆ ರಸ್ತೆಗುಂಡಿ ಸಮಸ್ಯೆಗಳನ್ನ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ ಅವರು ಉನ್ನತಮಟ್ಟದ ಸಭೆ ನಡೆಸಿದರು. ಹೀಗೆ, ಅನೇಕ ಸಮಸ್ಯೆಗಳನ್ನ ಗಮನಕ್ಕೆ ತರಲಾಗುತ್ತಿದೆ ಎಂದರು.

    ನಾನು ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೊಡಗು, ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡ ವಲಯಕ್ಕೆ ಭೇಟಿ ನೀಡಿದ್ದೇನೆ. ಇಲ್ಲಿನ ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

    10 ಲಕ್ಷ ಉದ್ಯಮಿಗಳನ್ನ ರೂಪಿಸುವ ಗುರಿ
    ರಾಜ್ಯದಲ್ಲಿ 10 ಲಕ್ಷ ಉದ್ಯಮಿಗಳನ್ನು ರೂಪಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಕೊಡಲು ವಿದ್ಯಾರ್ಥಿಗಳಿಂದ ‘ಬಿಸಿನೆಸ್‌ ಪ್ಲ್ಯಾನ್‌’ ಅನ್ನು ಆಹ್ವಾನಿಸಿ, ಅದರಲ್ಲಿ ಉತ್ತಮ ಯೋಜನೆಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನೂ ಮುಂಬರುವ ದಿನಗಳಲ್ಲಿ ಜಾರಿಗೆ ತರಲಾಗುವುದು. ಇದರಿಂದ ಉದ್ಯಮ ವಲಯಕ್ಕೆ ಯುವ ಸಮುದಾಯ ಸೆಳೆಯುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

    ನ.19ರಂದು ಮಹಿಳಾ ಉದ್ಯಮಿಗಳ ದಿನಾಚರಣೆ
    ನ.19ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸರ್‌ಎಂವಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನಾಚರಣೆ ಏರ್ಪಡಿಸಲಾಗಿದೆ. ಯಶಸ್ವಿ ಮಹಿಳಾ ಉದ್ಯಮಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ, ಸಂವಾದಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

    ರಾಜ್ಯದಲ್ಲಿರುವ ಉದ್ಯಮಿಗಳ ಪೈಕಿ ಶೇ.90ರಷ್ಟು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ವಲಯದವರೇ ಇದ್ದಾರೆ. ಇವರಿಗಾಗಿಯೇ ಪ್ರತ್ಯೇಕ ನೀತಿಯನ್ನು ರೂಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಟಿ.ಸಾಯಿರಾಮ್ ಪ್ರಸಾದ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಗಿರೀಶ್ ಗಣಪತಿ ಭಾಗವಹಿಸಿದ್ದರು.

  • ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಯಲ್ಲಿ ಕಳ್ಳತನ – 12 ಲಕ್ಷ ಮೌಲ್ಯದ ಚಿನ್ನ, 29 ಲಕ್ಷ ಕ್ಯಾಶ್ ಕಳವು

    ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಯಲ್ಲಿ ಕಳ್ಳತನ – 12 ಲಕ್ಷ ಮೌಲ್ಯದ ಚಿನ್ನ, 29 ಲಕ್ಷ ಕ್ಯಾಶ್ ಕಳವು

    ಚಾಮರಾಜನಗರ: ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಗೆ ಕನ್ನ ಹಾಕಿರುವ ಘಟನೆ ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಘಟನೆ ನಡೆದಿದೆ. ದಸರಾ ಲೈಟಿಂಗ್ಸ್ ನೋಡಲು ಮೈಸೂರಿಗೆ ಕುಟುಂಬಸ್ ಹೋಗಿದ್ದರು. ಉಮೇಶ್ ಅವರು ಹೆಂಡತಿ ಸವಿತಾ ಮತ್ತು ಇಬ್ಬರು ಮಕ್ಕಳು ಮೈಸೂರು ದಸರಾ ಲೈಟಿಂಗ್ ನೋಡಲು ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು.

    ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಖದೀಮರು ಮನೆ ಬಾಗಿಲು ಮುರಿದು ಬೀರುವಿನಲ್ಲಿದ್ದ ಸುಮಾರು 29 ಲಕ್ಷ ರೂ. ನಗದು ಮತ್ತು ಚಿನ್ನದ ತಾಳಿಸರ, ನೆಕ್ಷೇಸ್, ಬಳೆಗಳು, ಸಣ್ಣ ಚೈನ್ ಗಳು, ಓಲೆಗಳು, ಮುತ್ತಿನ ಸರ ಸೇರಿದಂತೆ ಒಟ್ಟು 300 ಗ್ರಾಂ ಚಿನ್ನಾಭರಣ (12 ಲಕ್ಷ ಮೌಲ್ಯ) ಹಾಗೂ 2 ಕೆ.ಜಿ ಬೆಳ್ಳಿ ನಾಣ್ಯ, 2 ರೇಷ್ಮೆ ಸೀರೆ ಮತ್ತು 2 ದುಬಾರಿ ವಾಚ್ ಸೇರಿದಂತೆ ಒಟ್ಟು 42.70 ಲಕ್ಷ ರೂ. ಮೌಲ್ಯದ ಹಣ ಹಾಗೂ ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಗುಂಡ್ಲುಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಕಿಡ್ನ್ಯಾಪ್ – ನಿರ್ದೇಶಕ ನಂದಕಿಶೋರ್‌ಗೆ ಹಣ ಕೊಡಿಸಿದ್ದ ರೌಡಿಶೀಟರ್‌

    ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಕಿಡ್ನ್ಯಾಪ್ – ನಿರ್ದೇಶಕ ನಂದಕಿಶೋರ್‌ಗೆ ಹಣ ಕೊಡಿಸಿದ್ದ ರೌಡಿಶೀಟರ್‌

    ಬೆಂಗಳೂರು: ನಿದೇರ್ಶಕ ನಂದಕಿಶೋರ್‌ಗೆ (Nanda Kishore) ಕೊಟ್ಟಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯೊಬ್ಬನನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ.

    ಮನೋಜ್ (28) ಕಿಡ್ನ್ಯಾಪ್ ಆದ ಉದ್ಯಮಿ. ಈತನನ್ನು ಕಿಡ್ನ್ಯಾಪ್ ಮಾಡಿ ರೌಡಿಶೀಟರ್‌ಗಳು ಲಕ್ಷಗಟ್ಟಲೆ ಹಣ ಕಿತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಭೋವಿ ನಿಗಮದ ಅಕ್ರಮ; ಕಾಂಗ್ರೆಸ್ ಸರ್ಕಾರದ 60% ಕಮಿಷನ್‌ಗೆ ಸಾಕ್ಷಿ – ಜೆಡಿಎಸ್ ಕಿಡಿ

    ಉದ್ಯಮಿಗೆ ರೌಡಿಶೀಟರ್ ರಾಜೇಶ್ @ ಅಪ್ಪಿ ಪರಿಚಯವಿದ್ದ. ಒಂದು ವರ್ಷದ ಹಿಂದೆ ನಿರ್ದೇಶಕ ನಂದಕಿಶೋರ್‌ಗೆ ರೌಡಿ ರಾಜೇಶ್ ಸಾಲ ಕೊಡಿಸಿದ್ದ. ಮನೋಜ್‌ನಿಂದ ನಂದಕಿಶೋರ್‌ಗೆ 1.20 ಲಕ್ಷ ಸಾಲ ಕೊಡಿಸಿದ್ದ. ನಿರ್ದೇಶಕನಿಂದ ಅಸಲು ಮತ್ತು ಬಡ್ಡಿ ಬರದೇ ಮನೋಜ್ ನೊಂದಿದ್ದ.

    ಹಣ ಕೊಡಿಸಿದ್ದು ನೀನೆ, ಸಾಲ ವಾಪಸ್ ಕೊಡಿಸು ಅಂತಾ ರೌಡಿ ರಾಜೇಶನ ಬೆನ್ನು ಬಿದ್ದಿದ್ದ. ಗೌರಿ ಹಬ್ಬದ ದಿನ ನಂದಕಿಶೋರ್ ಮನೆ ಬಳಿ ಬಾ ಹಣ ಕೊಡಿಸ್ತೀನಿ ಅಂತಾ ಮನೋಜ್‌ನ ರೌಡಿಶೀಟರ್ ಕರೆಸಿದ್ದ. ಹಣ ಕೊಡಿಸೋದಾಗಿ ಕರೆಸಿ ಬಸವೇಶ್ವರನಗರದ ನಂದಕಿಶೋರ್ ಹಳೆಯ ಅಪಾರ್ಟ್ಮೆಂಟ್ ಬಳಿಯಿಂದ ಕಿಡ್ನ್ಯಾಪ್ ಮಾಡಿಸಿದ್ದಾನೆ. ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ಅಪಘಾತ – ಕೋಲಾರ ಮೂಲದ ಬಾಡಿ ಬಿಲ್ಡರ್ ದುರ್ಮರಣ

    ರೌಡಿಗಳಾದ ರಾಜೇಶ್, ಬೇಕರಿ ರಘು, ಅಣ್ಣ ಸೀನ @ ಶ್ರೀನಿವಾಸ್, ಲೋಕಿ, ಸೋಮ, ರಾಜೇಶ್ ಮತ್ತು ನವೀನ್ ಸೇರಿಕೊಂಡು ಕಿಡ್ನ್ಯಾಪ್ ಮಾಡಿದ್ದರು. ಅಪಹರಣ ಮಾಡಿ 3 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಅಲ್ಲದೇ, 10 ಲಕ್ಷ ನೀಡದಿದ್ರೆ ಮನೋಜ್ ಕುಟುಂಬಸ್ಥರ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.

    ಹಣ ಹೊಂದಿಸುವುದಾಗಿ ಹೇಳಿ ಬಿಡಿಸಿಕೊಂಡು ಬಂದು ಮನೋಜ್ ದೂರು ನೀಡಿದ್ದಾರೆ. ಮನೋಜ್ ದೂರಿನ ಆಧಾರದ ಸಿಸಿಬಿಯಿಂದ 6 ರೌಡಿಗಳ ಬಂಧನವಾಗಿದೆ.

  • ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಪತಿ ವಿರುದ್ಧ ಉದ್ಯಮಿಗೆ 60 ಕೋಟಿ ರೂ. ವಂಚನೆ ಆರೋಪ

    ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಪತಿ ವಿರುದ್ಧ ಉದ್ಯಮಿಗೆ 60 ಕೋಟಿ ರೂ. ವಂಚನೆ ಆರೋಪ

    ಮುಂಬೈ: ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 60 ಕೋಟಿ ರೂ. ವಂಚನೆ ಆರೋಪದಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್‌ ಕುಂದ್ರಾ ವಿರುದ್ಧ ಆರೋಪ ಕೇಳಿಬಂದಿದೆ.

    ಸೆಲೆಬ್ರಿಟಿ ದಂಪತಿಯ ಈಗ ನಿಷ್ಕ್ರಿಯವಾಗಿರುವ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ಗಾಗಿ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಉದ್ಯಮಿ ದೀಪಕ್ ಕೊಠಾರಿ ಅವರು 2015-2023 ರ ಸುಮಾರಿಗೆ ವ್ಯವಹಾರ ವಿಸ್ತರಣೆಗಾಗಿ ತಮಗೆ 60.48 ಕೋಟಿ ರೂ.ಗಳನ್ನು ನೀಡಿದ್ದೆ. ಆದರೆ, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿಕೊಂಡಿದ್ದಾರೆ ಎಂದು ನಟಿ ಹಾಗೂ ಪತಿ ವಿರುದ್ಧ ಆರೋಪ ಮಾಡಿದ್ದಾರೆ.

    ಆರ್ಯ ಕಂಪನಿಗೆ ವಾರ್ಷಿಕ ಶೇ.12 ರಷ್ಟು ಬಡ್ಡಿದರದಲ್ಲಿ 75 ಕೋಟಿ ರೂ. ಸಾಲ ಕೇಳಿದ್ದರು. ಆದರೆ, ಹೆಚ್ಚಿನ ತೆರಿಗೆಗಳನ್ನು ತಪ್ಪಿಸಲು ಆ ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸುವಂತೆ ಸೂಚಿಸಿದ್ದರು ಎಂದು ಉದ್ಯಮಿ ಆರೋಪಿಸಿದ್ದಾರೆ. ಸಭೆ ನಡೆಸಿ, ಹಣವನ್ನು ಸಮಯಕ್ಕೆ ಹಿಂದಿರುಗಿಸುವ ಭರವಸೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

    ಕೊಠಾರಿ, 2015 ರ ಏಪ್ರಿಲ್‌ನಲ್ಲಿ ಮೊದಲ ಕಂತಿನ ಸುಮಾರು 31.95 ಕೋಟಿ ರೂ. ಕಳುಹಿಸಿದ್ದೆ. ಆದರೆ ತೆರಿಗೆ ಸಮಸ್ಯೆ ಹಾಗೆಯೇ ಉಳಿದು ಸೆಪ್ಟೆಂಬರ್‌ನಲ್ಲಿ ಎರಡನೇ ಒಪ್ಪಂದಕ್ಕೆ ಸಹಿ ಹಾಕಲಾಯಿತು. 2015 ಮಾರ್ಚ್‌ ಮತ್ತು 2016 ರ ಮಾರ್ಚ್‌ ನಡುವೆ ಅವರು 28.54 ಕೋಟಿ ರೂ. ವರ್ಗಾಯಿಸಿಕೊಂಡಿದ್ದರೆಂದು ಉದ್ಯಮಿ ತಿಳಿಸಿದ್ದಾರೆ.

    60.48 ಕೋಟಿ ರೂ.ಗೂ ಹೆಚ್ಚು ಹಣವನ್ನು ವರ್ಗಾಯಿಸಿದ್ದಾರೆ. ಜೊತೆಗೆ 3.19 ಲಕ್ಷ ರೂ. ಸ್ಟಾಂಪ್ ಡ್ಯೂಟಿಯಾಗಿ ಪಾವತಿಸಿದ್ದಾರೆ. 2016ರ ಏಪ್ರಿಲ್‌ನಲ್ಲಿ ಶೆಟ್ಟಿ ಅವರು ವೈಯಕ್ತಿಕ ಗ್ಯಾರಂಟಿ ಕೂಡ ನೀಡಿದ್ದರು ಎಂದು ಕೊಠಾರಿ ಹೇಳಿದ್ದಾರೆ.

  • Davanagere | ವಾಕಿಂಗ್ ಹೋಗುತ್ತಿರುವಾಗಲೇ ಕುಸಿದು ಬಿದ್ದು ಉದ್ಯಮಿ ಸಾವು

    Davanagere | ವಾಕಿಂಗ್ ಹೋಗುತ್ತಿರುವಾಗಲೇ ಕುಸಿದು ಬಿದ್ದು ಉದ್ಯಮಿ ಸಾವು

    ದಾವಣಗೆರೆ: ವಾಕಿಂಗ್ (Walking) ಹೋಗುತ್ತಿರುವಾಗಲೇ ಕುಸಿದು ಬಿದ್ದು ಉದ್ಯಮಿ (Businessman) ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.

    ಅನಿಲ್ ಕುಮಾರ್ (40) ಮೃತ ಉದ್ಯಮಿ. ದಾವಣಗೆರೆ ನಗರದ ಶಕ್ತಿ ನಗರದ ನಿವಾಸಿಯಾಗಿರುವ ಅನಿಲ್ ಕುಮಾರ್ ಎಸ್‌ಎಸ್‌ರಸ್ತೆ ಪಕ್ಕದ ಡಿಆರ್ ಸರ್ಕಲ್‌ದಾರಿಯಲ್ಲಿ ವಾಕ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೈಸೂರು | ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ನಿಧನ

    ಅನಿಲ್ ಕುಮಾರ್ ಕುಸಿದು ಬೀಳುವ ದೃಶ್ಯ ಪಕ್ಕದ ಶಾಪ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮಂಗಳವಾರ ಬಾಹ್ಯಾಕಾಶದಿಂದ ಭೂಮಿಗೆ ಮರಳಲಿದ್ದಾರೆ ಶುಭಾಂಶು ಶುಕ್ಲಾ

  • ಪಾಕಿಸ್ತಾನದ ಪರ ಬೇಹುಗಾರಿಕೆ – ಉತ್ತರ ಪ್ರದೇಶದ ಉದ್ಯಮಿ ಬಂಧನ

    ಪಾಕಿಸ್ತಾನದ ಪರ ಬೇಹುಗಾರಿಕೆ – ಉತ್ತರ ಪ್ರದೇಶದ ಉದ್ಯಮಿ ಬಂಧನ

    ಲಕ್ನೋ: ಪಾಕಿಸ್ತಾನದ(Pakistan) ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ(Uttara Pradesh) ರಾಂಪುರದ ಉದ್ಯಮಿಯನ್ನು(Businessman) ಬಂಧಿಸಲಾಗಿದೆ.

    ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್‌ಗಾಗಿ ಗಡಿಯಾಚೆಗಿನ ಕಳ್ಳಸಾಗಣೆ ಮತ್ತು ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಆಧಾರದ ಮೇಲೆ ಶಹಜಾದ್‌ನನ್ನು ಉತ್ತರಪ್ರದೇಶದ ಎಸ್‌ಟಿಎಫ್(Special Task Force) ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಿಳೆ ಕೊಲೆ ಮಾಡಿ ಬೈಕ್ ಅಪಘಾತವೆಂದು ಬಿಂಬಿಸಿದ ಪತಿ, ಮಾವ, ಅತ್ತೆ ಅರೆಸ್ಟ್

    ಶಹಜಾದ್, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ. ಅಲ್ಲದೇ ಒಂದು ವರ್ಷದಲ್ಲೇ ಹಲವು ಬಾರಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ. ಗಡಿಯುದ್ದಕ್ಕೂ ಮೇಕಪ್ ವಸ್ತು, ಬಟ್ಟೆ, ಮಸಾಲೆ ಪದಾರ್ಥಗಳು ಮತ್ತು ಇನ್ನಿತರ ವಸ್ತುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದ ಎಂದು ಎಸ್‌ಟಿಎಫ್ ತಿಳಿಸಿದೆ. ಇದನ್ನೂ ಓದಿ: ಏರೋಸ್ಪೇಸ್ ಎಂಜಿನಿಯರ್ ಸಾವು ಕೇಸ್‌ಗೆ ಟ್ವಿಸ್ಟ್ – 2 ಮಕ್ಕಳ ತಂದೆಯೊಂದಿಗೆ ಪ್ರೇಮ ವೈಫಲ್ಯ

    ಶಹಜಾದ್ ಭಾರತದಲ್ಲಿನ ಐಎಸ್‌ಐ ಏಜೆಂಟ್‌ಗಳಿಗೆ ಹಣ ಮತ್ತು ಭಾರತೀಯ ಸಿಮ್ ಕಾರ್ಡ್‌ಗಳನ್ನು ಒದಗಿಸುತ್ತಿದ್ದ. ರಾಮ್‌ಪುರ ಜಿಲ್ಲೆ ಮತ್ತು ಉತ್ತರ ಪ್ರದೇಶದ ಇತರ ಭಾಗಗಳಿಂದ ಜನರನ್ನು ಐಎಸ್‌ಐಗಾಗಿ ಕೆಲಸ ಮಾಡಲು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ. ಅಲ್ಲದೇ ಐಎಸ್‌ಐಗೆ ತೆರಳುತ್ತಿದ್ದ ಜನರ ವೀಸಾದ ವ್ಯವಸ್ಥೆಯನ್ನು ಐಎಸ್‌ಐ ಏಜೆಂಟ್‌ಗಳೇ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಮಾನ್ಯತಾ ಟೆಕ್‌ ಪಾರ್ಕ್‌ ಜಲಾವೃತ – ಪರ್ಯಾಯ ಮಾರ್ಗ ಬಳಸುವಂತೆ ಮನವಿ

    ಕೆಲದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧಿಸಲಾಗಿತ್ತು. `ಟ್ರಾವೆಲ್ ವಿಥ್ ಜೆಒ’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆಸುತ್ತಿದ್ದ ಜ್ಯೋತಿ ಮಲ್ಹೋತ್ರಾ, ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನಿ ಸಿಬ್ಬಂದಿಗೆ ಭದ್ರತೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ನೀಡುತ್ತಿದ್ದಳು ಎಂಬ ಆರೋಪದಡಿ ಬಂಧಿಸಲಾಗಿದೆ.

  • ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

    ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

    – 3 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಉದ್ಯಮಿ

    ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕಾನ್ಪುರ (Kanpur) ಜಿಲ್ಲೆಯ ಉದ್ಯಮಿ (Businessman)  ಉಗ್ರರ ಗುಂಡಿಗೆ ಬಲಿಯಾಯಾಗಿದ್ದಾರೆ.

    ಕಳೆದ ಫೆಬ್ರವರಿಯಲ್ಲಿ ಮದುವೆಯಾಗಿದ್ದವ (Marriage) ಉದ್ಯಮಿ ಶಂಭು ದ್ವಿವೇದಿ (31) ಪತ್ನಿಯೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಇಂದು (ಬುಧವಾರ) ಕಾನ್ಪುರದಲ್ಲಿರುವ ತಮ್ಮ ಮನೆಗೆ ಹಿಂದಿರುಗಬೇಕಿತ್ತು. ದುರದೃಷ್ಟವಶಾತ್‌ ಉಗ್ರರ ಗುಂಡಿಗೆ ಬಲಿಯಾಗಿ ಶಂಭು ದ್ವಿವೇದಿ ಅವರ ಶವ ಮನೆಗೆ ಹಿಂದಿರುಗುತ್ತಿದೆ. ಹೀಗಾಗಿ ಕಾನ್ಪುರ ಜಿಲ್ಲೆಯ ಮಹಾರಾಜಪುರ ಪ್ರದೇಶದಲ್ಲಿರುವ ಹಾಥಿಪುರ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಇದನ್ನೂ ಓದಿ: ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ

    ಕಾನ್ಪುರ ಪೊಲೀಸ್ ಆಯುಕ್ತರಾದ ಜಿತೇಂದ್ರ ಪ್ರತಾಪ್ ಸಿಂಗ್, ಗ್ರಾಮಕ್ಕೆ ತಲುಪಿ, ದ್ವಿವೇದಿ ಅವರ ಕುಟುಂಬವನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲಿದೆ ಎಂದು ಭರವಸೆಯನ್ನೂ ನೀಡಿದ್ದಾರೆ. ಸಿಎಂ ಗ್ರಾಮಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ್ದರು. ಅಲ್ಲದೇ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಬೆಂಬಲ ಸಿಗುವಂತೆ ನೋಡಿಕೊಳ್ಳಲು ನಮಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಘಟನೆ ನೆನೆದು ಸಿಎಂ ಯೋಗಿ ಆದಿತ್ಯನಾಥ್‌ ಸಹ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ಪ್ರಪಂಚಕ್ಕೇ ದೊಡ್ಡ ಆಘಾತ, ಇಂತಹ ಉಗ್ರ ಸಂಘಟನೆಗಳನ್ನು ಸದೆಬಡೆಯಬೇಕು – ಡಿಕೆಶಿ

    ಕಳೆದ ವಾರವಷ್ಟೇ ದ್ವಿವೇದಿ ತಮ್ಮ ಪತ್ನಿ ಹಾಗೂ ಇತರ 9 ಮಂದಿ ಕುಟುಂಬ ಸದಸ್ಯರೊಂದಿಗೆ ಕಾಶ್ಮೀರಕ್ಕೆ ಪ್ರವಾಸ ಹೊರಟಿದ್ದರು. ಬುಧವಾರ (ಇಂದು) ಹಿಂದಿರುಗಬೇಕಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಕುದುರೆ ಸವಾರಿ ಮಾಡಲು ಮುಂದಾಗಿದ್ದರು, ಅಷ್ಟರಲ್ಲೇ ಅಲ್ಲಿಗೆ ಬಂದ ಉಗ್ರರು ಪತ್ನಿಯ ಮುಂದೆಯೇ ದ್ವಿವೇದಿ ತಲೆಗೆ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಶುಭಂ ಚಿಕ್ಕಪ್ಪ ಮನೋಜ್ ದ್ವಿವೇದಿ ತಿಳಿಸಿದ್ದಾರೆ. ಇದನ್ನೂ ಓದಿ: ಗುಡ್ಡಕುಸಿತವಾಗಿದ್ದಕ್ಕೆ ಬಚಾವ್ – ಪಹಲ್ಗಾಮ್‌ಗೆ ಹೋಗಬೇಕಿದ್ದ 13 ಕನ್ನಡಿಗರು ಅದೃಷ್ಟವಶಾತ್ ಪಾರು

  • ಫೈನಾನ್ಶಿಯರ್‌ ಕಿರುಕುಳ – ಬೆಂಗಳೂರಲ್ಲಿ ಉದ್ಯಮಿ ನೇಣಿಗೆ ಶರಣು

    ಫೈನಾನ್ಶಿಯರ್‌ ಕಿರುಕುಳ – ಬೆಂಗಳೂರಲ್ಲಿ ಉದ್ಯಮಿ ನೇಣಿಗೆ ಶರಣು

    ಬೆಂಗಳೂರು: ಫೈನಾನ್ಶಿಯರ್‌ ಕಿರುಕುಳಕ್ಕೆ (Financier Harassment) ನೊಂದು ಉದ್ಯಮಿ (Businessman) ನೇಣಿಗೆ ಶರಣಾದ ಘಟನೆ ರಾಜಾಜಿ ನಗರದ (Rajaji Nagar) ಪ್ರಕಾಶ್ ನಗರದಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ಉದ್ಯಮಿಯನ್ನು ಅರುಣ್ ಎಂದು ಗುರುತಿಸಲಾಗಿದೆ. ಮೃತ ಅರುಣ್ ಸಣ್ಣಪುಟ್ಟ ಉದ್ಯಮ ನಡೆಸಿಕೊಂಡಿದ್ದರು. ಸುಮಾರು 20 ದಿನಗಳ ಹಿಂದೆ ತಮ್ಮ ಬಳಿ ಇದ್ದ ಕಾರನ್ನು ದಿನೇಶ್ ಎಂಬ ಫೈನಾನ್ಸಿಯರ್ ಬಳಿ ಅಡವಿಟ್ಟು 6 ಲಕ್ಷ ರೂ. ಹಣ (Money) ಪಡೆದಿದ್ದರು.

    ದಿನೇಶ್ ಮೃತ ಅರುಣ್‌ಗೆ ಇದೇ ತಿಂಗಳು 22 ರಂದು ಹಣ ಮರುಪಾವತಿಸುವಂತೆ ಹೇಳಿ ಕೊಟ್ಟಿರುತ್ತಾರೆ. ಕೊಟ್ಟ ಡೆಡ್ ಲೈನ್ ಅಷ್ಟರಲ್ಲಿ 6 ಲಕ್ಷ ರೂ. ಹಣ ಹೊಂದಿಸಲು ಆಗಿರಲ್ಲ. 22 ರಂದು 1.5 ಲಕ್ಷ ಹಣ ಹೊಂದಿಸಿಕೊಂಡು ದಿನೇಶ್ ಕೊಡಲು ಹೋಗಿದ್ದಾರೆ. ನಿಗದಿತ ದಿನಾಂಕ ಪೂರ್ತಿ ಹಣ ಕೊಡದೆ ಇದ್ದ ಕಾರಣ ಅರುಣ್‌ಗೆ ನಿಂದಿಸಿ ಹಣ ಕೊಡೋದಕ್ಕೆ ಆಗದೇ ಇದ್ದರೆ ನೇಣು ಹಾಕಿಕೊಂಡು ಸಾಯಿ ಎಂದು ಕಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

    ದಿನೇಶ್ ನಡೆಯಿಂದ ನೊಂದಿದ್ದ ಅರುಣ್ ಮನೆಯಲ್ಲಿದ್ದ ಪತ್ನಿಯನ್ನು ಬೇರೆ ಕಡೆಗೆ ಕಳಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿನೇಶ್ ಕಿರುಕುಳದ ಬಗ್ಗೆ ಪತ್ನಿ ಬಳಿ ಅರುಣ್ ಹೇಳಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

    ಈ ಸಂಬಂಧ ಮೃತರ ಮಗ ದಾಖಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಣ ಕೊಟ್ಟವರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಲು ಮುಂದಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

  • ಬೆಳಗಾವಿ| ಮಧ್ಯರಾತ್ರಿ ಮೈನಿಂಗ್ ಉದ್ಯಮಿ ಮನೆ, ಕಚೇರಿ ಮೇಲೆ ಐಟಿ ದಾಳಿ

    ಬೆಳಗಾವಿ| ಮಧ್ಯರಾತ್ರಿ ಮೈನಿಂಗ್ ಉದ್ಯಮಿ ಮನೆ, ಕಚೇರಿ ಮೇಲೆ ಐಟಿ ದಾಳಿ

    ಬೆಳಗಾವಿ: ಮೈನಿಂಗ್ ಉದ್ಯಮಿ (Mining Entrepreneur) ಮನೆ ಹಾಗೂ ಕಚೇರಿ ಮೇಲೆ ಮಧ್ಯರಾತ್ರಿ ಐಟಿ ಅಧಿಕಾರಿಗಳು (T Raid) ದಾಳಿ ನಡೆಸಿದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

    ವಿನೋದ್ ದೊಡ್ಡಣ್ಣವರ್, ಪುರುಷೋತ್ತಮ ದೊಡ್ಡಣ್ಣವರ್ ಒಡೆತನದ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೊಡ್ಡಣ್ಣವರ್ ಬ್ರದರ್ಸ್ ಮೈನಿಂಗ್ ಮತ್ತು ಸಕ್ಕರೆ ಕಾರ್ಖಾನೆ ಉದ್ಯಮಿಗಳಾಗಿದ್ದಾರೆ. ಒಟ್ಟು ಐದು ತಂಡಗಳಿಂದ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಇಂದು ಸ್ವಗ್ರಾಮಕ್ಕೆ ಬಿಗ್ ಬಾಸ್ ವಿನ್ನರ್ ಹನುಮಂತ – ಅದ್ಧೂರಿ ಸ್ವಾಗತಕ್ಕೆ ಸ್ನೇಹಿತರು, ಗ್ರಾಮಸ್ಥರ ಸಿದ್ಧತೆ

    ಗೋವಾದಿಂದ ಆಗಮಿಸಿರುವ ಐಟಿ ಅಧಿಕಾರಿಗಳ ತಂಡ ಭಾಗ್ಯನಗರದ ನಿವಾಸ, ಉದ್ಯಮಭಾಗದಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ವಿವಾಹೇತರ ಸಂಬಂಧಕ್ಕೆ ಡೇಟಿಂಗ್‌ ಆಪ್‌ ಬಳಕೆ – ದೇಶದಲ್ಲೇ ಬೆಂಗಳೂರು ನಂ.1