Tag: business

  • ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!

    ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!

    ಬೆಂಗಳೂರು: ರೌಡಿ ನಲಪಾಡ್‍ನ ಮತ್ತಷ್ಟು ಕರ್ಮಕಾಂಡ ಬಯಲಾಗುತ್ತಿದ್ದು, ಶಾಂತಿನಗರದಲ್ಲಿ ರೌಡಿ ಮಹಮ್ಮದ್ ನಲಪಾಡ್ ಹೇಳಿದ್ದೇ ಶಾಸನ ಎನ್ನುವ ಮಾತು ಈಗ ಕೇಳಿಬಂದಿದೆ.

    ಈತನ ಮಾತು ಕೇಳಲಿಲ್ಲ ಬಿಸಿನೆಸ್ ನಡೆಸೋದೇ ಕಷ್ಟ ಹೊಸ ಪಬ್, ರೆಸ್ಟೋರೆಂಟ್ ಓಪನ್ ಆಗಬೇಕಾದರೆ ಈತನ ಅನುಮತಿ ಬೇಕು ಎನ್ನುವ ನಿಯಮವನ್ನು ಹೇರಿದ್ದ. ಒಂದು ವೇಳೆ ಯಾರಾದರೂ ಬಾರ್ ಓಪನ್ ಮಾಡಿದ್ದರೆ, ನನಗೆ ಗೊತ್ತಿಲ್ಲದೇ, ನನ್ನ ಅನುಮತಿ ಇಲ್ಲದೆ ಅದು ಹೇಗೆ ರೆಸ್ಟೋರೆಂಟ್ ಓಪನ್ ಮಾಡ್ತೀರಿ ಎಂದು ಧಮ್ಕಿ ಹೊಡೆಯುತ್ತಿದ್ದ ಎಂದು ಜನರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಜನರು ಪ್ರತಿಕ್ರಿಯಿಸಿ ಸಿನಿಮಾದಲ್ಲಿ ನಟರು ಬರುವಾಗ ಹೇಗೆ ಮೂರು ನಾಲ್ಕು ಕಾರುಗಳು ಬರುತ್ತದೋ ಅದೇ ರೀತಿಯಾಗಿ ಬರುತ್ತಿದ್ದ. ಲೈವ್ ಬ್ಯಾಂಡ್ ಮಂದಿಯನ್ನು ಬೆದರಿಸಿ ಹಫ್ತಾ ವಸೂಲಿ ಮಾಡುತ್ತಾನೆ. ಶಾಂತಿನಗರ, ಆಸ್ಟಿನ್ ಟೌನ್, ಬ್ರಿಗೇಡ್ ರೋಡ್, ಅಶೋಕ ನಗರ, ವಿವೇಕ್ ನಗರ, ಆನೆ ಪಾಳ್ಯ ಸುತ್ತಮುತ್ತ ನಲಪಾಡ್ ಗ್ಯಾಂಗ್ ಕಾರುಬಾರು. ಅಪ್ಪ ಹ್ಯಾರೀಸ್ ಹೆಸರಲ್ಲಿ ಮಗ ನಲಪಾಡ್ ಅಂಧಾ ದರ್ಬಾರ್ ನಡೆಸುತ್ತಿದ್ದ ಎಂದು ಹೇಳಿದ್ದಾರೆ.

    ಇಲ್ಲಿಯ ಪಾಲಿಕೆ ಸದಸ್ಯರು ಹೆಸರಿಗೆ ಮಾತ್ರ. ಪಾಲಿಕೆ ಸದಸ್ಯರು ಯಾವುದಾದರೂ ಕಟೌಟ್ ಹಾಕಿದ್ದರೂ ಈತನ ಫೋಟೋ ಇರಲೇಬೇಕು. ಎಲ್ಲರಿಗಿಂತಲೂ ಎತ್ತರದಲ್ಲಿ ದೊಡ್ಡದಾಗಿ ಫೋಟೋ ಕಾಣಬೇಕು ಎಂದು ತಾಕೀತು ಮಾಡುತ್ತಿದ್ದ ಎಂದು ಜನರು ಈತನ ಕೃತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೇ ನಗರದಲ್ಲಿನ ಬ್ರಿಗೇಡ್ ರೋಡ್ ಜಂಕ್ಷನ್, ಎಂಜಿ ರೋಡ್, ರೆಸಿಡೆನ್ಸಿ, ಬ್ರಿಗೇಡ್, ಯುಬಿ ಸಿಟಿಗೆ ಇವನೇ ಪ್ರಿನ್ಸ್ ಆಗಿದ್ದ ಎಂಬ ಆರೋಪ ಸಹ ಕೇಳಿಬಂದಿದೆ.

    ನಲಪಾಡ್ ಗ್ಯಾಂಗ್‍ನ ಆಟಾಟೋಪದಿಂದ ಅಲೆಗ್ಸಾಂಡರ್ ರಸ್ತೆಯಲ್ಲಿ ಅಪಾರ್ಟ್‍ಮೆಂಟ್ ಜನರ ಗೋಳು ಕೇಳುವವರು ಇಲ್ಲದಂತಾಗಿದೆ. ಪಕ್ಕದ ಫ್ಲ್ಯಾಟ್ ನವರು ಎಷ್ಟು ಸಾರಿ ಈ ಕುರಿತು ದೂರು ನೀಡಿದರೂ ಶಾಸಕ ಹ್ಯಾರಿಸ್ ಒತ್ತಡಕ್ಕೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂದು ಜನ ಹೇಳಿದ್ದಾರೆ.

    https://www.youtube.com/watch?v=Tc3R6gdWwHA

    https://www.youtube.com/watch?v=IHwUP3mtZXQ

    https://www.youtube.com/watch?v=IBc7ChOEbxg

     

  • ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿ 100ನೇ ಸ್ಥಾನಕ್ಕೆ ಜಿಗಿದ ಭಾರತ

    ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿ 100ನೇ ಸ್ಥಾನಕ್ಕೆ ಜಿಗಿದ ಭಾರತ

    ನವದೆಹಲಿ: 500, 1 ಸಾವಿರ ರೂ. ನೋಟು ಮತ್ತು ಜಿಎಸ್‍ಟಿಯಿಂದ ದೇಶದ ಅರ್ಥವ್ಯವಸ್ಥೆ ಅಧಃಪತನಗೊಂಡಿದೆ. ಅಭಿವೃದ್ಧಿ ಹಳ್ಳ ಹಿಡಿದಿದೆ ಎಂದು ಮೋದಿ ಸರ್ಕಾರವನ್ನು ಟೀಕಿಸಿದ್ದ ಜನ ಈಗ ಬಾಯಿಮುಚ್ಚಿಕೊಳ್ಳುವ ವರದಿ ಪ್ರಕಟವಾಗಿದೆ.

    ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಉದ್ಯಮ ವಹಿವಾಟುಗಳನ್ನು ಸುಲಭವಾಗಿ ಆರಂಭಿಸಿ ನಿರ್ವಹಿಸಲು ನೆರವಾಗುವ ವಿಷಯದಲ್ಲಿ ಭಾರತ, ಜಾಗತಿಕ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿಕೆಯಾಗಿ 100ನೇ ಸ್ಥಾನಕ್ಕೆ ಜಿಗಿದಿದೆ.

    2015ರಲ್ಲಿ ಭಾರತಕ್ಕೆ 130ನೇ ಸ್ಥಾನ ಸಿಕ್ಕಿತ್ತು. 2016ರಲ್ಲೂ ಭಾರತದ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಏಷ್ಯಾ ರಾಷ್ಟ್ರಗಳ ಪೈಕಿ ಚೀನಾ ಈ ಪಟ್ಟಿಯಲ್ಲಿ 78ನೇ ಸ್ಥಾನ ಸಿಕ್ಕಿದೆ.

    ಉದ್ದಿಮೆ ವಹಿವಾಟು ಆರಂಭಿಸಲು ಅನುಕೂಲತೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಹಲವಾರು ಮಾನದಂಡಗಳನ್ನು ಆಧರಿಸಿ ವಿಶ್ವಬ್ಯಾಂಕ್ 190 ದೇಶಗಳ ಆರ್ಥಿಕತೆಗಳನ್ನು ಲೆಕ್ಕಹಾಕಿ ಪ್ರತಿವರ್ಷ ಶ್ರೇಯಾಂಕ ಪಟ್ಟಿಯನ್ನು ನೀಡುತ್ತದೆ.

    ಯಾವ ವರ್ಷ ಎಷ್ಟನೇ ಶ್ರೇಯಾಂಕ?
    132(2012), 132(2013), 134(2014), 130(2015), 130(2016), 100(2017)

  • ಮಾರುಕಟ್ಟೆಯಲ್ಲಿ ಪ್ರತೀ ವ್ಯಾಪಾರಿಗಳಿಗೆ ಗುಲಾಬಿ ಕೊಟ್ಟ ವರ್ತಕರ ಸಂಘ!

    ಮಾರುಕಟ್ಟೆಯಲ್ಲಿ ಪ್ರತೀ ವ್ಯಾಪಾರಿಗಳಿಗೆ ಗುಲಾಬಿ ಕೊಟ್ಟ ವರ್ತಕರ ಸಂಘ!

    ಧಾರವಾಡ: ನಗರದ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಚೆಲ್ಲುವುದರ ವಿರುದ್ಧ ಅರಿವು ಮೂಡಿಸಿದ ಧಾರವಾಡ ಕಿರಾಣಿ ಮತ್ತು ಕಾಯಿಪಲ್ಲೆ ವರ್ತಕರ ಸಂಘ, ಸಾರ್ವಜನಿಕರಿಗೆ ಗುಲಾಬಿ ಹೂವು ನೀಡಿ ಜಾಗೃತಿ ಮೂಡಿಸಿದೆ.

    ಧಾರವಾಡ ನಗರದ ಸೂಪರ್ ಮಾರುಕಟ್ಟೆ ಯಾವತ್ತೂ ಕಸದಿಂದ ತುಂಬಿರುತ್ತೆ ಇದರ ಅರಿವನ್ನ ಮೂಡಿಸಲು ವರ್ತಕರ ಸಂಘದ ಸದಸ್ಯರು ಮಾರುಕಟ್ಟೆಗೆ ಕಾಯಿಪಲ್ಲೆ ವ್ಯಾಪಾರಿಗಳಿಗೆ ಒಂದೊಂದು ಗುಲಾಬಿ ಹೂವನ್ನ ನೀಡುವ ಮೂಲಕ ವಿನೂತನ ಜಾಗೃತಿ ಮೂಡಿಸಿದ್ದಾರೆ.

    ಬೀದಿ ಬದಿ ವ್ಯಾಪಾರ ಮುಗಿದ ನಂತರ ಉಳಿದ ಕಾಯಿಪಲ್ಲೆ ಜಾಗದಲ್ಲೇ ಬಿಟ್ಟು ಹೋಗುತ್ತಿದ್ದ ವ್ಯಾಪಾರಿಗಳಿಗೆ, ಕಸ ಬುಟ್ಟಿಗೆ ಅದನ್ನ ಹಾಕಬೇಕು ಎಂದು ಅರಿವು ಮೂಡಿಸಲಾಯಿತು. ಅಷ್ಟೇ ಅಲ್ಲದೇ ಸಂಘದಿಂದ ಪ್ರತಿ ದಿನ ಇದರ ಬಗ್ಗೆ ನಿಗಾವಹಿಸಲು ಜನರನ್ನು ಕೂಡಾ ವರ್ತಕರ ಸಂಘದಿಂದಲೇ ನೇಮಿಸಲಾಗುವುದು ಎಂದು ತಿಳಿಸಿದರು.